For Quick Alerts
ALLOW NOTIFICATIONS  
For Daily Alerts

ಕಲ್ಲಂಗಡಿ ಹಣ್ಣಿನಿಂದ ತೂಕ ಇಳಿಸಿಕೊಳ್ಳಲು ಟಿಪ್ಸ್- ಆದರೆ ಹಿತಮಿತವಾಗಿ ಸೇವಿಸಿ

|

ಪ್ರಕೃತಿಯಲ್ಲಿ ಸಿಗುವಂತಹ ಪ್ರತಿಯೊಂದು ಹಣ್ಣುಗಳಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇರುವುದು. ಅದೇ ರೀತಿಯಾಗಿ ಇಂದಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳಲು ಹೆಚ್ಚಿನವರು ಹಣ್ಣುಗಳ ಮೊರೆ ಹೋಗುತ್ತಲಿದ್ದಾರೆ. ಇದರಲ್ಲಿ ಮುಖ್ಯವಾಗಿ ಕಲ್ಲಂಗಡಿ ಹಣ್ಣಿನಿಂದ ತೂಕ ಇಳಿಸಿಕೊಳ್ಳುವವರು ಹೆಚ್ಚಾಗುತ್ತಿದ್ದಾರೆ. ಇತರ ತೂಕ ಇಳಿಸುವಂತಹ ಕ್ರಮದಂತೆ ಕಲ್ಲಂಗಡಿ ಹಣ್ಣು ಕೂಡ ತೂಕ ಇಳಿಸುವಿಕೆಗೆ ನೆರವಾಗುವುದು. ಇದು ಯಾವ ಮಟ್ಟದಲ್ಲಿ ತೂಕ ಇಳಿಕೆಗೆ ನೆರವಾಗುವುದು ಮತ್ತು ಅದರ ವಿವರಣೆಯನ್ನು ನಾವು ಇಲ್ಲಿ ವಿವರಿಸಿದ್ದೇವೆ.

ಕಲ್ಲಂಗಡಿ ಹಣ್ಣಿನ ಆಹಾರ ಪಂಥ್ಯವೆಂದರೆ ಏನು?

ಕಲ್ಲಂಗಡಿ ಹಣ್ಣಿನ ಆಹಾರ ಪಂಥ್ಯವೆಂದರೆ ಏನು?

ಹಠಾತ್ ಆಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಕಲ್ಲಂಗಡಿ ಹಣ್ಣಿನ ಆಹಾರ ಪಥ್ಯವನ್ನು ಸೂಚಿಸಲಾಗುವುದು. ದೇಹದಲ್ಲಿ ಇರುವಂತಹ ಅತಿಯಾದ ವಿಷಕಾರಿ ಅಂಶ ಮತ್ತು ಕಲ್ಮಷವನ್ನು ಹೊರಹಾಕಲು ನೀವು ಈ ಆಹಾರ ಪಥ್ಯವನ್ನು ಪಾಲಿಸಬಹುದು. ಈ ಆಹಾರಪಥ್ಯ ಕ್ರಮದಲ್ಲಿ ನೀವು ಅತಿಯಾಗಿ ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡಬೇಕು. ಆದರೆ ನೀವು ಸೇವಿಸುವ ಪ್ರಮಾಣದ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು.

ಆಹಾರ ಪಥ್ಯ ಯೋಜನೆ

ಆಹಾರ ಪಥ್ಯ ಯೋಜನೆ

ಇಲ್ಲಿ ಎರಡು ವಿಧದ ಯೋಜನೆಗಳು ಇವೆ. ಇದರಲ್ಲಿ ಒಂದು ದೀರ್ಘಾವಧಿ ಮತ್ತು ಇನ್ನೊಂದು ಅಲ್ಪಾವಧಿ ಯೋಜನೆಗಳು ಆಗಿವೆ. ದೀರ್ಘಾವಧಿ ಯೋಜನೆಯಲ್ಲಿ ಕೂಡ ಎರಡು ವಿಧಗಳು ಇವೆ. ಇದರಲ್ಲಿ ಮುಖ್ಯವಾಗಿ ದೇಹದಲ್ಲಿರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು. ಹೀಗೆ ಮಾಡುವ ವೇಳೆ ಕ್ಯಾಲರಿ ಕಡಿಮೆ ಸೇವಿಸುವ ಕಾರಣದಿಂದಾಗಿ ತೂಕ ಕಳೆದುಕೊಳ್ಳಲು ಇದು ಸಹಕಾರಿ. ಮೊದಲ ಹಂತದಲ್ಲಿ ಕಲ್ಲಂಗಡಿ ಹಣ್ಣನ್ನು ಕೇವಲ ಮೂರು ದಿನಗಳ ಕಾಲ ಮಾತ್ರ ಸೇವನೆ ಮಾಡಬೇಕು. ನೀವು ಆರೋಗ್ಯವಂತ ವ್ಯಕ್ತಿಯಾಗಿದ್ದರೆ ಆಗ ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯು ಇದರಿಂದ ಕಾಣಿಸಿಕೊಳ್ಳುವುದಿಲ್ಲ. ಆದರೆ ಇತರರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮಗೆ ಯಾವುದೇ ಅಸ್ವಸ್ಥತೆ ಕಂಡು ಬಂದರೆ ಆಗ ನೀವು ಈ ಆಹಾರ ಪಥ್ಯ ನಿಲ್ಲಿಸಿ ಬಿಡಿ ಮತ್ತು ವೈದ್ಯರನ್ನು ಭೇಟಿಯಾಗಿ. ಎರಡನೇ ಹಂತವು 6-10 ದಿನಗಳ ಕಾಲ ನಡೆಯುವುದು ಮತ್ತು ಇದರಲ್ಲಿ ಕೆಲವೊಂದು ಬೇರೆ ಆಹಾರಗಳು ಕೂಡ ಸೇರಿಕೊಂಡಿವೆ. ಆದರೆ ರಾತ್ರಿ ಊಟಕ್ಕೆ ನೀವು ಹೆಚ್ಚಿನ ಕಲ್ಲಂಗಡಿ ಹಣ್ಣು ಸೇವನೆ ಮಾಡಬೇಕು.

ಇದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಿರಿ

ಇದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಿರಿ

1-3 ದಿನಗಳ ಕಾಲ ಕೇವಲ ಕಲ್ಲಂಗಡಿ ಹಣ್ಣು ಸೇವನೆ ಮಾಡಿ 6-10 ದಿನಗಳ ಕಾಳ ನೀವು ಒಂದು ಪಿಂಗಾಣಿ ಓಟ್ ಮೀಲ್ ಅಥವಾ ಟೋಸ್ಟ್ ಜತೆಗೆ ಚೀಸ್ ಹಾಕಿ ತಿನ್ನಬಹುದು. ಮಧ್ಯದಲ್ಲಿ ನೀವು ಎರಡು ತುಂಬಾ ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡಬೇಕು. ಮಧ್ಯಾಹ್ನದ ಊಟಕ್ಕೆ ನೀವು ಸಲಾಡ್, ಬೇಯಿಸಿದ ಕೋಳಿ ಅಥವಾ ಮೀನು. ರಾತ್ರಿ ಊಟಕ್ಕೆ ಮತ್ತೆ ಕಲ್ಲಂಗಡಿ ಸೇವನೆ ಮಾಡಿ.

ಅಲ್ಪಾವಧಿಯ ಯೋಜನೆಗಾಗಿ

ಅಲ್ಪಾವಧಿಯ ಯೋಜನೆಗಾಗಿ

ನೀವು ಅಲ್ಪಾವಧಿಯ ಯೋಜನೆಯನ್ನು ಪಾಲಿಸಿಕೊಂಡು ಹೋಗುತ್ತಲಿದ್ದರೆ ಆಗ ನೀವು ಐದು ದಿನ ಇದನ್ನು ಮಾಡಬೇಕು. ನೀವು ಬೆಳಗ್ಗಿನ ಉಪಾಹಾರಕ್ಕೆ ಒಂದು ತುಂಡು ಟೋಸ್ಟ್ ಮತ್ತು ಕಲ್ಲಂಗಡಿ ಸೇವನೆ ಮಾಡಬಹುದು. ಸ್ವಲ್ಪ ಸಮಯ ಬಿಟ್ಟ ಬಳಿಕ ನೀವು ಗ್ರೀನ್ ಟೀ ಅಥವಾ ಬ್ಲ್ಯಾಕ್ ಕಾಫಿ ಸೇವನೆ ಮಾಡಬಹುದು. ಮಧ್ಯಾಹ್ನದ ಊಟಕ್ಕೆ ನೀವು ಬೇಯಿಸಿದ ಕೋಳಿ ತಿನ್ನಿ. ಇದರೊಂದಿಗೆ ಒಂದು ತುಂಡು ಇಡೀ ಧಾನ್ಯದ ಬ್ರೆಡ್ ಮತ್ತು ಕಲ್ಲಂಗಡಿ ಸೇವಿಸಿ. ರಾತ್ರಿ ಊಟಕ್ಕೆ ನೀವು ಎರಡು ತುಂಡು ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡಿ. 100 ಗ್ರಾಂನಷ್ಟು ಅನ್ನ, ಬೇಯಿಸಿದ ತರಕಾರಿ ಅಥವಾ 100 ಗ್ರಾಂ ಮೀನು ಸೇವಿಸಿ.

ಆಹಾರ ಪಥ್ಯವು ಏನು ಹೇಳುತ್ತದೆ?

ಆಹಾರ ಪಥ್ಯವು ಏನು ಹೇಳುತ್ತದೆ?

ಈ ಆಹಾರ ಪಥ್ಯವು ಐದು ದಿನಕ್ಕಾಗಿ ಸಲಹೆ ಮಾಡಲಾಗುತ್ತದೆ. ಇದು ಅಲ್ಪಾವಧಿಯ ಆಹಾರ ಪಥ್ಯ ಕ್ರಮವಾಗಿದೆ. ಈ ಆಹಾರ ಪಥ್ಯ ಕ್ರಮವು ಪ್ರಮುಖ ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುವ ಜತೆಗೆ ಶೀಘ್ರ ಮತ್ತು ಅಲ್ಪಾವಧಿಯಲ್ಲಿ ತೂಕ ಕಳೆದುಕೊಳ್ಳಲು ನೆರವಾಗುವುದು. ಕಲ್ಲಂಗಡಿ ಹಣ್ಣಿನಲ್ಲಿ ಶೇ. 92ರಷ್ಟು ನೀರು, ಶೇ.6ರಷ್ಟು ಸಕ್ಕರೆ ಮತ್ತು 2 ಗ್ರಾಂ ನಾರಿನಾಂಶ ಇದೆ. ನೀವು ಇದನ್ನು ಸೇವನೆ ಮಾಡಿದಾಗ ಹಸಿವು ನೀಗಿದಂತೆ ಆಗುವುದು ಮತ್ತು ದೇಹದಲ್ಲಿನ ವಿಷಕಾರಿ ಅಂಶವನ್ನು ಇದು ಹೊರಗೆ ಹಾಕುವುದು. ನೀವು ಇದನ್ನು ಜಗಿಯುವ ಮತ್ತು ನುಂಗುವ ಕಾರ್ಯದಿಂದಾಗಿ ಹೊಟ್ಟೆ ತುಂಬಿದ ಭಾವನೆ ನಿಮ್ಮಲ್ಲಿ ಬರುವುದು. ನೀವು ಕಲ್ಲಂಗಡಿ ಹಣ್ಣಿನ ಸೇವನೆ ಮಾಡಿದಾಗ ಅದರಲ್ಲಿ ಇರುವ ನಾರಿನಾಂಶವು ದೀರ್ಘ ಕಾಲದ ತನಕ ಹೊಟ್ಟೆಯು ತುಂಬಿದಂತೆ ಮಾಡುವುದು.

Most Read: ನಿಮ್ಮ ಡಯಟ್‌ನಲ್ಲಿ ಕಲ್ಲಂಗಡಿ ಹಣ್ಣನ್ನು ಸೇರಿಸಲು ಸೂಕ್ತವಾದ ಕಾರಣಗಳು

ಈ ಆಹಾರ ಕ್ರಮದಲ್ಲಿ ನೀವು ಏನನ್ನು ಕಡೆಗಣಿಸಬೇಕು?

ಈ ಆಹಾರ ಕ್ರಮದಲ್ಲಿ ನೀವು ಏನನ್ನು ಕಡೆಗಣಿಸಬೇಕು?

ನೀವು ಇದನ್ನು ಅತಿಯಾಗಿ ಮಾಡುವುದನ್ನು ಕಡೆಗಣಿಸಬೇಕು. ಯಾಕೆಂದರೆ ಇದರಿಂದ ಅದರ ಪರಿಣಾಮವು ವ್ಯತಿರಿಕ್ತವಾಗಬಹುದು. ಈ ಆಹಾರ ಕ್ರಮವನ್ನು ಗರ್ಭಿಣಿ ಮಹಿಳೆಯರು ಪಾಲಿಸಲೇಬಾರದು. ಯಕೃತ್ ನ ಸಮಸ್ಯೆ, ಪ್ರತಿರೋಧಕ ಶಕ್ತಿ ಕಡಿಮೆ ಇರುವವರು ಮತ್ತು ಮಕ್ಕಳೂ ಈ ಆಹಾರ ಕ್ರಮವನ್ನು ಕಡೆಗಣಿಸಬೇಕು. ನೀವು ನೆನಪಿನಲ್ಲಿ ಇಡಬೇಕಾಗಿರುವ ಅಂಶವೆಂದರೆ ನೀವು ಈ ಆಹಾರ ಪಥ್ಯವನ್ನು ಬಿಟ್ಟ ಬಳಿಕ ಮೊದಲಿನಂತೆ ಆಹಾರ ಸೇವನೆ ಮಾಡಲು ಆರಂಭಿಸುವ ಕಾರಣದಿಂದಾಗಿ ಮತ್ತೆ ನಿಮ್ಮ ತೂಕವು ಹೆಚ್ಚಾಗುವುದು.

ಮುನ್ನೆಚ್ಚರಿಕೆ

ಮುನ್ನೆಚ್ಚರಿಕೆ

ಈ ಆಹಾರ ಪಥ್ಯ ಕ್ರಮವು ಕಲ್ಲಂಗಡಿ ಹಣ್ಣನ್ನು ಸೂಚಿಸಿರುವ ಕಾರಣದಿಂದ ನೀವು ಕೇವಲ ಕಲ್ಲಂಗಡಿ ಹಣ್ಣನ್ನು ಮಾತ್ರ ಸೇವನೆ ಮಾಡಬೇಕೆಂದಲ್ಲ. ನೀವು ಈ ಆಹಾರ ಪಥ್ಯದ ವೇಳೆ ಕೆಲವೊಂದು ಸಮತೋಲಿತವಾಗಿರುವ ಆಹಾರವಾಗಿರುವ ಪ್ರೋಟೀನ್, ಒಳ್ಳೆಯ ಕೊಬ್ಬು ಮತ್ತು ಕಾರ್ಬ್ರೋಹೈಡ್ರೇಟ್ಸ್ ನ್ನು ಸೇವನೆ ಮಾಡಬೇಕು. ನೀವು ಆಯ್ಕೆ ಮಾಡುವಂತಹ ಆಹಾರವು ಒಳ್ಳೆಯ ಪೋಷಕಾಂಶಗಳನ್ನು ಹೊಂದಿರಬೇಕು ಮತ್ತು ಇದರಲ್ಲಿ ಕಾರ್ಬ್ಸ್ ಕಡಿಮೆ ಇರಬೇಕು ಎಂದು ನೀವು ತಿಳಿದಿರಬೇಕು.**

ಕೆಲವು ತಜ್ಞರ ಪ್ರಕಾರ

ಕೆಲವು ತಜ್ಞರ ಪ್ರಕಾರ

ಕಲ್ಲಂಗಡಿ ಹಣ್ಣು ಅಧಿಕ ಫೋಷಕಾಂಶಗಳ ಗುಣವನ್ನು ಹೊಂದಿದೆ. ಇದನ್ನು ಸೂಕ್ತ ರೀತಿಯಲ್ಲಿ ಸೇವಿಸುವುದರ ಮೂಲಕ ಬಹುಬೇಗ ತೂಕವನ್ನು ಇಳಿಸಬಹುದು. ಹೆಚ್ಚು ನೀರಿನಂಶದೊಂದಿಗೆ ಕೂಡಿರುವ ಇದು ಕಡಿಮೆ ಮಟ್ಟದ ಕ್ಯಾಲೋರಿಯನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ. ಇದರಲ್ಲಿ ಜೀವಸತ್ವಗಳು, ಖನಿಜಗಳು ಅತ್ಯುತ್ತಮವಾಗಿರುತ್ತವೆ. ನಿಯಮಿತವಾಗಿ ಸೂಕ್ತ ಕ್ರಮದಲ್ಲಿ ನಿತ್ಯ ಸೇವಿಸಿದರೆ ಬೊಜ್ಜು ಕರಗುವುದು. ಅಲ್ಲದೆ ಹೃದಯ ಸಂಬಂಧಿ ಕಾಯಿಲೆ ಹಾಗೂ ಮಧುಮೇಹವನ್ನು ಕಡಿಮೆ ಮಾಡುವುದು.

Most Read: ಗರ್ಭಿಣಿ ಸ್ತ್ರೀಯರು ಕಲ್ಲಂಗಡಿ ಹಣ್ಣು ತಿನ್ನಬಹುದಾ?

ಸಮತೋಲಿತ ಮತ್ತು ಆರೋಗ್ಯಕರ ಜೀವನ ಶೈಲಿಗಾಗಿ

ಸಮತೋಲಿತ ಮತ್ತು ಆರೋಗ್ಯಕರ ಜೀವನ ಶೈಲಿಗಾಗಿ

ಸಮತೋಲಿತ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಪುನಃಸ್ಥಾಪಿಸಲು ಬಯಸುವವರಿಗೆ ಕಲ್ಲಂಗಡಿ ಹಣ್ಣು ಅತ್ಯುತ್ತಮವಾದ ಆಹಾರ. ತೂಕ ಇಳಿಸಲು ಅದ್ಭುತ ರೀತಿಯಲ್ಲಿ ಸಹಾಯ ಮಾಡುವುದು. ತೂಕ ಇಳಿಸಲು ಸಹಾಯ ಮಾಡುವ ಹಣ್ಣುಗಳಲ್ಲಿ ಇದೂ ಇಂದು. ಬಹಬೇಗ ತೂಕ ಇಳಿಸಲು ಬಯಸುವವರು ತಾವು ಆಹಾರ ಸೇವಿಸುವ ಅವಧಿಯಲ್ಲಿ ಅಂದರೆ ಉಪಹಾರ ಮತ್ತು ಊಟದ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸಬೇಕು. ಆಗ ದೇಹದಲ್ಲಿರುವ ಕಲ್ಮಶ, ಲವಣಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಇದರ ಸೇವನೆಯ ಪ್ರಮಾಣದ ವಿಚಾರದಲ್ಲಿ ಕೊಂಚ ಕಾಳಜಿಯನ್ನು ವಹಿಸಬೇಕಾಗುವುದು.

ನಿಗದಿತ ಪ್ರಮಾಣದಲ್ಲಿ ಈ ಹಣ್ಣು ಸೇವಿಸಬೇಕು

ನಿಗದಿತ ಪ್ರಮಾಣದಲ್ಲಿ ಈ ಹಣ್ಣು ಸೇವಿಸಬೇಕು

ಕಲ್ಲಂಗಡಿ ಹಣ್ಣಿನಿಂದ ತೂಕ ಇಳಿಸುವಾಗ ನಿಗದಿತ ಪ್ರಮಾಣದಲ್ಲಿ ಹಣ್ಣನ್ನು ಸೇವಿಸುವುದನ್ನು ಮರೆಯಬಾರದು. ಒಂದು ಪ್ರಮಾಣದ ಪ್ರಕಾರ ಹೇಳುವುದಾದರೆ 1:10 ಅನುಪಾತ ಎನ್ನಬಹುದು. ಅಂದರೆ 60 ಕೆ.ಜಿ ತೂಕ ಇರುವವರು 6 ಕೆ.ಜಿ ಕಲ್ಲಂಗಡಿ ಹಣ್ಣನ್ನು ಸೇವಿಸಬಹುದು. ಒಂದು ಪ್ರಮಾಣದಲ್ಲಿ ಅಂದರೆ 150 ಕ್ಯಾಲೋರಿ ಇರುವಷ್ಟು ಕಲ್ಲಂಗಡಿ ಹಣ್ಣನ್ನು ದಿನದಲ್ಲಿ 8 ಬಾರಿ ಸೇವಿಸಬೇಕು. ಈ ಹಣ್ಣುಗಳು ಶೇ.97ರಷ್ಟು ನೀರಿನಂಶದಿಂದ ಕೂಡಿರುತ್ತದೆ. ಇದನ್ನು ಸೇವಿಸಿದಾಗ ಹೆಚ್ಚು ನೀರನ್ನು ಕುಡಿಯುವ ಅವಶ್ಯಕತೆ ಇರುವುದಿಲ್ಲ.

ತಜ್ಞರ ಪ್ರಕಾರ

ತಜ್ಞರ ಪ್ರಕಾರ

ಪೌಷ್ಟಿಕಾಂಶದ ಪ್ರಕಾರ ಈ ವಿಧದ ಆಹಾರವನ್ನೇ ಸೇವಿಸಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಇವು ಬಹಳಷ್ಟು ರಚನೆಯನ್ನು ಹೊಂದಿರುತ್ತವೆ. ಕಲ್ಲಂಗಡಿ ಹಣ್ಣಿನ ನಿಯಮಿತ ಸೇವನೆಯು ನೈಜತೆಯನ್ನು ಸಾಧಿಸಲು ಸಹಾಯಮಾಡುವುದು. ಇದು ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುವುದು. ಸಮೃದ್ಧವಾದ ನೀರಿನಂಶ ಹಾಗೂ ಕಡಿಮೆ ಕ್ಯಾಲರಿ ಹೊಂದಿರುವುದರಿಂದ ತೂಕ ಇಳಿಸುವವರಿಗಷ್ಟೇ ಅಲ್ಲದೆ ಸಾಮಾನ್ಯ ವ್ಯಕ್ತಿಗಳಿಗೂ ಇದು ಬೇಸಿಗೆಯಲ್ಲಿ ಅತ್ಯುತ್ತಮವಾದ ಆಹಾರ ಎಂದು ಹೇಳಲಾಗುವತ್ತದೆ.

Most Read: ಆರೋಗ್ಯ ಸಲಹೆ : ಇನ್ನು ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಬಿಸಾಡಬೇಡಿ!

ಆರೋಗ್ಯದ ವಿಚಾರದಲ್ಲಿ ಕಲ್ಲಂಗಡಿ ಹಣ್ಣು

ಆರೋಗ್ಯದ ವಿಚಾರದಲ್ಲಿ ಕಲ್ಲಂಗಡಿ ಹಣ್ಣು

ದೇಹದಲ್ಲಿನ ಅಮೈನೋ ಆಮ್ಲದ ಒಂದು ರೀತಿಯ ಅರ್ಜಿನೈನ್ ಪ್ರಮಾಣವನ್ನು ಹೆಚ್ಚಿಸಲು ಕಲ್ಲಂಗಡಿ ಹಣ್ಣು ಸಹಾಯ ಮಾಡುತ್ತದೆ. ಉತ್ತಮ ರಕ್ತ ಸಂಚಾರಕ್ಕೆ ಅನುಕೂಲವನ್ನು ಕಲ್ಪಿಸಿ ಕೊಡುತ್ತದೆ. ಹೃದಯಘಾತದಂತಹ ಸಮಸ್ಯೆಗಳನ್ನು ಇದು ತಡೆಗಟ್ಟುವುದು. - ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ದೇಹದಲ್ಲಿ ವೀರ್ಯಾಣು ಪ್ರಮಾಣ ಹೆಚ್ಚುವುದು. ಪುರುಷರಲ್ಲಿ ಫಲವತ್ತತೆಯು ಹೆಚ್ಚುವುದು. ಮೂತ್ರವರ್ಧಕ ಮತ್ತು ದ್ರವವನ್ನು ಸರಾಗಗೊಳಿಸುವಲ್ಲಿ ಸಹಾಯ ಮಾಡುವುದು. ದೇಹದಲ್ಲಿನ ತ್ಯಾಜ್ಯವನ್ನು ಸುಲಭವಾಗಿ ಹೊರ ಹಾಕಲು ಸಹಾಯ ಮಾಡುವುದು. - 100 ಗ್ರಾಂ. ಅಷ್ಟು ಕಲ್ಲಂಗಡಿ ಹಣ್ಣು 7 ಗ್ರಾಂ. ಸಕ್ಕರೆ ಮತ್ತು 32 ಗ್ರಾಂ. ಕ್ಯಾಲೋರಿಯನ್ನು ಹೊಂದಿರುತ್ತದೆ. - ನಾರಿನಂಶ ಅಧಿಕ ಪ್ರಮಾಣದಲ್ಲಿ ಇರುವುದರಿಂದ ಜೀರ್ಣಕ್ರಿಯೆಯೂ ಸುಲಭವಾಗಿ ನಡೆಯುವುದು. ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಪ್ರಮಾಣ ಕಡಿಮೆ ಇರುವುದರಿಂದ ಮಧುಮೇಹಿಗಳಿಗೆ ಇದು ಉತ್ತಮವಾದ ಹಣ್ಣು.

English summary

Weight loss tips for Watermelon lovers! But you should take extra care!

A lot of people are opting for watermelon diet to lose weight. Like any other diet, watermelon diet also makes a lot of promises. But how true are its promises and how healthy is this diet, we have explained here in detail.
X
Desktop Bottom Promotion