For Quick Alerts
ALLOW NOTIFICATIONS  
For Daily Alerts

ಟೈಫಾಯ್ಡ್ ಡಯಟ್: ಈ ಸಮಯದಲ್ಲಿ ತಿನ್ನಬೇಕಾದ ಹಾಗೂ ತಿನ್ನಬಾರದ ಆಹಾರಗಳು

|

ಸಾಲ್ಮೋನೆಲ್ಲಾ ಟೈಫೀ (salmonella typhi) ಎಂಬ ಹೆಸರಿನ ಬ್ಯಾಕ್ಟೀರಿಯಾದ ಸೋಂಕಿನಿಂದ ಎದುರಾಗುವ ಟೈಫಾಯ್ಡ್ ವಾಸ್ತವದಲ್ಲಿ ಜೀವನದಲ್ಲಿ ಕನಿಷ್ಟ ಒಂದು ಬಾರಿಯಾದರೂ ಬರುವ ಜ್ವರವಾಗಿದ್ದು ಕೆಲವರಲ್ಲಿ ಇದಕ್ಕೂ ಹೆಚ್ಚಿನ ಬಾರಿ ಎದುರಾಗಬಹುದು. ಟೈಫಾಯ್ಡ್ ಎಂದರೆ ವಾಸ್ತವವಾಗಿ ನಮ್ಮ ದೇಹ ನಿರೋಧಕ ವ್ಯವಸ್ಥೆ ಈ ಬ್ಯಾಕ್ಟೀರಿಯಾಕ್ಕೆ ಮುಂದೆಂದೂ ಬಾಧೆಗೊಳಗಾಗದಂತೆ ನಿರ್ಮಿಸಿಕೊಳ್ಳುವ ರಕ್ಷಣಾ ವ್ಯವಸ್ಥೆಯಾಗಿದ್ದು ಈ ಹಂತ ಪೂರ್ಣವಾಗಲು ಒಂದು ವಾರದಿಂದ ಹದಿನೈದು ದಿನಗಳಾದರೂ ಬೇಕಾಗುತ್ತದೆ. ಇದೇ ಕಾರಣಕ್ಕೆ ಈ ಅವಧಿಯಲ್ಲಿ ಭಾರೀ ಜ್ವರ, ಸುಸ್ತು ಮೊದಲಾದವು ಎದುರಾಗುತ್ತವೆ.

ಹಾಗಾಗಿ ಮುಂದಿನ ಬಾರಿ ಇದೇ ಬ್ಯಾಕ್ಟೀರಿಯಾ ನಮ್ಮ ದೇಹಕ್ಕೆ ಆಗಮಿಸಿದರೆ ಜ್ವರ ಬರುವುದಿಲ್ಲ. ಆದರೆ ಇದೇ ಬ್ಯಾಕ್ಟೀರಿಯಾ ಕೊಂಚವೇ ಮಾರ್ಪಾಡು ಹೊಂದಿಕೊಂಡು ಬಂದರೆ ಮತ್ತೊಮ್ಮೆ ಟೈಫಾಯ್ಡ್ ಎದುರಾಗುತ್ತದೆ. ಸೂಕ್ಷ್ಮದರ್ಶಕದಲ್ಲಿ ಗಮನಿಸಿದಾಗ ಈ ಬ್ಯಾಕ್ಟೀರಿಯಾ ಕೊಂಚವೇ ಬಾಗಿದ್ದೋ, ಒಂದು ಕೊಂಬನ್ನು ಹೊಂದಿದ್ದೋ ಮೊದಲಾದ ಬೆಳವಣಿಗೆಯನ್ನು ಪಡೆದು ಹೊಸದಾಗಿ ಆಕ್ರಮಣ ಮಾಡಲು ಬಂದಿರುತ್ತದೆ. ಹಾಗಾಗಿ ಈ ಜ್ವರ ಬಂದ ಬಳಿಕ ನಮ್ಮ ರೋಗ ನಿರೋಧಕ ವ್ಯವಸ್ಥೆ ಸುವ್ಯಸ್ಥಿತವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುವಂತೆ ನಮ್ಮ ಆಹಾರವಿರುವುದು ಅಗತ್ಯ. ಈ ಅವಧಿಯಲ್ಲಿ ಪ್ರೋಟೀನ್ ಭರಿತ ಆಹಾರದ ಹೆಚ್ಚು ಅವಶ್ಯಕತೆ ಇದೆ. ಇಂದಿನ ಲೇಖನದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಲಾಗಿದೆ.

ನಿಂತಿರುವ ನೀರು, ಕೊಳಕು, ಕೊಳಚೆ ಇರುವ ಸ್ಥಳಗಳಲ್ಲಿ

ನಿಂತಿರುವ ನೀರು, ಕೊಳಕು, ಕೊಳಚೆ ಇರುವ ಸ್ಥಳಗಳಲ್ಲಿ

ಈ ಬ್ಯಾಕ್ಟೀರಿಯಾ ಸಾಮಾನ್ಯವಾಗಿ ಹರಿಯದೇ ನಿಂತಿರುವ ನೀರು, ಕೊಳಕು, ಕೊಳಚೆ ಇರುವ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಬರುತ್ತದೆ ಹಾಗೂ ಈ ಬ್ಯಾಕ್ಟೀರಿಯಾ ಸೋಂಕಿರುವ ಆಹಾರ ಮತ್ತು ದ್ರವಗಳನ್ನು ಸೇವಿಸುವ ಮೂಲಕ ವ್ಯಕ್ತಿಯ ದೇಹಕ್ಕೆ ಪ್ರವೇಶ ಪಡೆಯುತ್ತದೆ. ಈ ಬ್ಯಾಕ್ಟೀರಿಯಾ ಆಕ್ರಮಣ ಮಾಡುವ ಮೊದಲು ತನ್ನ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತದೆ. ಇದಕ್ಕಾಗಿ ಇದು ನಮ್ಮ ದೇಹದ ತೇವವಿರುವ ಭಾಗದಲ್ಲಿ ಆಶ್ರಯ ಪಡೆದುಕೊಂಡು ತನ್ನ ಇರುವನ್ನು ಪ್ರಕಟಿಸದೇ ಇರುತ್ತದೆ. ಸೂಕ್ತ ಕಾಲ ಬಂದ ಬಳಿಕವೇ ಆಕ್ರಮಣ ಎಸಗುತ್ತದೆ. ಇದೇ ಕಾರಣಕ್ಕೆ ಕೊಳಚೆ ನೀರನ್ನು ಕುಡಿದು ಬಂದ ಹಲವಾರು ದಿನಗಳ ಬಳಿಕವೇ ಈ ಜ್ವರ ಕಾಣಿಸಿಕೊಳ್ಳುತ್ತದೆ. ಮೊದಲಾಗಿ ತಲೆನೋವು ಮತ್ತು ಜ್ವರ ಒಟ್ಟೊಟ್ಟಿಗೇ ಕಾಣಿಸಿಕೊಂಡು ಇದರ ಜೊತೆಗೇ ಅತಿಸಾರ, ಭಾರೀ ಸುಸ್ತು, ಮಲಬದ್ದತೆ, ಚಳಿಜ್ವರ, ನಡುಕ, ಎದೆಯಲ್ಲಿ ಕಫ ಕಟ್ಟಿರುವುದು ಸಾಮಾನ್ಯವಾಗಿ ಗಮನಕ್ಕೆ ಬಂದರೆ ವೈದ್ಯರ ಪರೀಕ್ಷೆಯಲ್ಲಿ ಯಕೃತ್ ಮತ್ತು ಗುಲ್ಮ ಎಂಬ ಪ್ರಮುಖ ಅಂಗಗಳು ಊದಿಕೊಂಡಿರುವುದು ಕಂಡುಬರುತ್ತದೆ. ಜೊತೆಗೇ ಜೀರ್ಣಾಂಗಗಳ ತೊಂದರೆ ಸಾಮಾನ್ಯವಾಗಿರುತ್ತದೆ. ಕೆಲವರಿಗೆ ಹಸಿವಿಲ್ಲದಿರುವುದು ಮತ್ತು ವಿಪರೀತ ವಾಕರಿಕೆಯೂ ಕಾಣಿಸಿಕೊಳ್ಳಬಹುದು.

ಟೈಫಾಯ್ಡ್ ಜ್ವರ ಬಂದ ಬಳಿಕ

ಟೈಫಾಯ್ಡ್ ಜ್ವರ ಬಂದ ಬಳಿಕ

ಜ್ವರ ಬಂದ ಬಳಿಕ ರೋಗಿ ಸೇವಿಸುವ ಆಹಾರ ಚಿಕಿತ್ಸೆಯ ಮೇಲೆ ನೇರವಾದ ಪ್ರಭಾವ ಬೀರುವ ಕಾರಣ ಆಹಾರವನ್ನು ಗಮನಿಸಿ ಕಟ್ಟುನಿಟ್ಟು ಪಾಲಿಸುವುದು ಅನಿವಾರ್ಯ. ಟೈಫಾಯ್ಡ್ ಜ್ವರ ಬಂದ ಬಳಿಕ ಇತರ ಸಮಯದಂತೆ ನಿಗದಿತ ಮೂರು ಹೊತ್ತಿನ ಊಟಗಳ ಬದಲಿಗೆ ಚಿಕ್ಕ ಚಿಕ್ಕ ಪ್ರಮಾಣದಲ್ಲಿ ದಿನದಲ್ಲಿ ಹಲವಾರು ಬಾರಿ ಆಹಾರ ಸೇವಿಸುವಂತೆ ವೈದ್ಯರು ಸಲಹೆ ಮಾಡುತ್ತಾರೆ. ಸಾಮಾನ್ಯವಾಗಿ ಸುಲಭವಾಗಿ ಜೀರ್ಣವಾಗುವ ಗಂಜಿ ಮೊದಲಾದವನ್ನು ಸೇವಿಸುವಂತೆ ಹಿರಿಯರು ಸಲಹೆ ಮಾಡಿದರೂ ಈ ಆಹಾರದ ಪೌಷ್ಟಿಕಾಂಶಗಳು ಸಾಕಾಗುವುದಿಲ್ಲ. ಈ ಸಮಯದಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟುಗಳು ಮತ್ತು ಕೊಬ್ಬು ಹೆಚ್ಚು ಪ್ರಮಾಣದಲ್ಲಿ ಅವಶ್ಯವಾಗಿವೆ. ಹಾಗಾಗಿ ಪ್ರೋಟೀನ್ ಯುಕ್ತ ಆಹಾರಗಳ ಸೇವನೆ ಈ ಅವಧಿಯಲ್ಲಿ ರೋಗಿ ಸೇವಿಸಬೇಕಾಗಿದೆ. ಟೈಫಾಯ್ಡ್ ರೋಗ ಎಂದು ಖಚಿತವಾದ ಬಳಿಕ ರೋಗಿಯ ಆಹಾರಸೇವನೆಯ ಕ್ರಮ ಕಡ್ಡಾಯವಾಗಿ ಬದಲಾಗಬೇಕು ಹಾಗೂ ಈ ಆಹಾರಗಳು ಪ್ರಮುಖ ಆಹಾರವಾಗಬೇಕು:

ಹೆಚ್ಚಿನ ಕ್ಯಾಲೋರಿಗಳಿರುವ ಆಹಾರ ಅಗತ್ಯ

ಹೆಚ್ಚಿನ ಕ್ಯಾಲೋರಿಗಳಿರುವ ಆಹಾರ ಅಗತ್ಯ

ಟೈಫಾಯ್ಡ್ ರೋಗ ಆವರಿಸುವ ಯಾವುದೇ ವಯಸ್ಸಿನ ವ್ಯಕ್ತಿಗೆ ಈ ಅವಧಿಯಲ್ಲಿ ಹೆಚ್ಚಿನ ಕ್ಯಾಲೋರಿಗಳಿರುವ ಆಹಾರ ಅಗತ್ಯ. ಈ ಮೂಲಕ ತೂಕದಲ್ಲಿ ಇಳಿಕೆಯಾಗದಂತೆ ತಡೆಗಟ್ಟಬಹುದು. ಏಕೆಂದರೆ ಈ ಅವಧಿಯಲ್ಲಿ ತೂಕ ಅತಿ ಶೀಘ್ರವಾಗಿ ಇಳಿಯುತ್ತದೆ ಹಾಗೂ ಸೂಕ್ತ ಆಹಾರವಿಲ್ಲದಿದ್ದರೆ ಎದ್ದು ಕುಳಿತುಕೊಳ್ಳಲೂ ಆಗದಷ್ಟು ನಿತ್ರಾಣತೆ ಆವರಿಸುತ್ತದೆ. ಹೆಚ್ಚಿನ ಕ್ಯಾಲೋರಿಗಳಿರುವ ಪಾಸ್ತಾ, ಬೇಯಿಸಿದ ಆಲೂಗಡ್ಡೆ, ಬಾಳೆಹಣ್ಣುಗಳು ನಿತ್ಯದ ಆಹಾರದಲ್ಲಿ ಒಳಗೊಂಡಿರಬೇಕು. ವಿಶೇಷವಾಗಿ ಬಾಳೆಹಣ್ಣಿನಲ್ಲಿರುವ ಹೆಚ್ಚಿನ ಶಕ್ತಿ ರೋಗಿ ನಿಶಃಕ್ತನಾಗದಂತೆ ತಡೆಯುತ್ತದೆ.

ಸಾಕಷ್ಟು ದ್ರವಾಹಾರವನ್ನು ಸೇವಿಸಬೇಕು

ಸಾಕಷ್ಟು ದ್ರವಾಹಾರವನ್ನು ಸೇವಿಸಬೇಕು

ರೋಗ ಪೂರ್ಣವಾಗಿ ಗುಣವಾಗುವವರೆಗೂ ದಿನದ ಎಚ್ಚರವಾಗಿದ್ದಷ್ಟೂ ಕಾಲ ಸಾಕಷ್ಟು ದ್ರವಾಹಾರವನ್ನು ಸೇವಿಸಬೇಕು. ಏಕೆಂದರೆ ಟೈಫಾಯ್ಡ್ ಜ್ವರ ಅತಿಯಾದ ಪ್ರಮಾಣದಲ್ಲಿ ರೋಗಿ ಅತಿಸಾರದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ದೇಹದಿಂದ ನಷ್ಟವಾದ ದ್ರವವನ್ನು ಮರುತುಂಬಿಸದೇ ಇದ್ದರೆ ತೀವ್ರ ನಿರ್ಜಲೀಕರಣಕ್ಕೆ ಒಳಗಾಗಬಹುದು. ಒಂದು ವೇಳೆ ಈ ಜ್ವರದ ಸಮಯದಲ್ಲಿಯೇ ನಿರ್ಜಲೀಕರಣವೂ ಎದುರಾದರೆ ಪರಿಣಾಮ ಭೀಕರ ಸ್ವರೂಪಕ್ಕೆ ತಿರುಗುತ್ತದೆ. ರೋಗಿ ಪ್ರಜ್ಞಾಶೂನ್ಯನೂ ಆಗಬಹುದು. ಹಾಗಾಗಿ ದಿನದಲ್ಲಿ ಹಲವಾರು ಬಾರಿ ನೀರಿನಂಶ ಹೆಚ್ಚಿರುವ ಆಹಾರಗಳು, ತಾಜಾ ಹಣ್ಣಿನ ರಸ ಮೊದಲಾದವುಗಳನ್ನು ಸೇವಿಸುತ್ತಿರಬೇಕು.

Most Read: ಮಾತ್ರೆಗಳ ಪಟ್ಟಿಯಲ್ಲಿ ಖಾಲಿ ಜಾಗಕ್ಕೇ ಆದ್ಯತೆ! ಏನಿದರ ರಹಸ್ಯ?

ಕಾರ್ಬೋಹೈಡ್ರೇಟುಗಳು ಹೆಚ್ಚಿರುವ ಆಹಾರ ಸೇವಿಸಿ

ಕಾರ್ಬೋಹೈಡ್ರೇಟುಗಳು ಹೆಚ್ಚಿರುವ ಆಹಾರ ಸೇವಿಸಿ

ಈ ಅವಧಿಯಲ್ಲಿ ದ್ರವಾಹಾರದ ಜೊತೆಗೇ ಮೆದುವಾಗಿರುವ ಘನ ಆಹಾರಗಳನ್ನೂ ಸೇವಿಸುವುದು ಅಗತ್ಯ. ಪಾಲಿಶ್ ಮಾಡದ ಅಕ್ಕಿಯನ್ನು ಚೆನ್ನಾಗಿ ಬೇಯಿಸಿ ಗಂಜಿಯಾಗಿಸಿದ ಅನ್ನ, ಬೇಯಿಸಿದ ಆಲೂಗಡ್ಡೆ, ಬೇಯಿಸಿದ ಮೊಟ್ಟೆಗಳು ಮೊದಲಾದವು ಉತ್ತಮ ಆಹಾರಗಳಾಗಿವೆ.

ಡೈರಿ ಉತ್ಪನ್ನಗಳ ಪ್ರಮಾಣ ಹೆಚ್ಚಿಸಿ

ಡೈರಿ ಉತ್ಪನ್ನಗಳ ಪ್ರಮಾಣ ಹೆಚ್ಚಿಸಿ

ಸಾಮಾನ್ಯವಾಗಿ ಡೈರಿ ಉತ್ಪನ್ನಗಳು ಹೆಚ್ಚಿನ ಕೊಬ್ಬು ಹೊಂದಿದ್ದು ಹೆಚ್ಚಿನ ಪ್ರಮಾಣದ ಸೇವನೆ ತೂಕದ ಹೆಚ್ಚಳಕ್ಕೆ ಕಾರಣವಾಗಿರುತ್ತದೆ. ಆದರೆ ಟೈಫಾಯ್ಡ್ ಜ್ವರ ಪೀಡಿದ ರೋಗಿಗಳಿಗೆ ಈ ಆಹಾರಗಳು ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿದ್ದು ತೂಕ ಇಳಿಯದೇ ಇರಲು ನೆರವಾಗುತ್ತವೆ. ಹಾಗಾಗಿ ದಿನದಲ್ಲಿ ಹಲವಾರು ಬಾರಿ ಭಿನ್ನ ಬಗೆಯ ಡೈರಿ ಉತ್ಪನ್ನಗಳಾದ ಹಾಲು, ಮೊಸರು, ಚೀಸ್, ಕ್ರೀಂ ಮೊದಲಾದವುಗಳನ್ನು ಸೇವಿಸುತ್ತಿರುವುದು ಅಗತ್ಯ. ಇದರಲ್ಲಿ ಮೊಸರು ಹೆಚ್ಚು ಅವಶ್ಯವಾದ ಆಹಾರವಾಗಿದೆ.

ಜೇನು ತುಪ್ಪವೂ ಇರಲಿ.

ಜೇನು ತುಪ್ಪವೂ ಇರಲಿ.

ಜೇನಿನಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿದ್ದರೂ, ಟೈಫಾಯ್ಡ್ ಜ್ವರವನ್ನು ಇಳಿಸಲು ನೆರವಾಗುವ ಹಲವಾರು ಪೋಷಕಾಂಶಗಳಿರುವ ಕಾರಣ ನಿತ್ಯದ ಆಹಾರದಲ್ಲಿ ಕೊಂಚ ಪ್ರಮಾಣದಲ್ಲಿ ಬೆರೆಸಿಕೊಳ್ಳುವುದು ಅಗತ್ಯ. ಜೇನು ಲಭ್ಯವಿಲ್ಲದಿದ್ದರೆ ಪರ್ಯಾಯವಾದ ಸಿಹಿಪದಾರ್ಥಗಳನ್ನು ಸೇರಿಸಬಹುದು.

ಟೈಫಾಯ್ಡ್ ಜ್ವರ ಇರುವ ವ್ಯಕ್ತಿಗಳಿಗೆ ಮೊಸರು ಮತ್ತು ಮೊಟ್ಟೆ ಹೆಚ್ಚು ಅವಶ್ಯ:

ಟೈಫಾಯ್ಡ್ ಜ್ವರ ಇರುವ ವ್ಯಕ್ತಿಗಳಿಗೆ ಮೊಸರು ಮತ್ತು ಮೊಟ್ಟೆ ಹೆಚ್ಚು ಅವಶ್ಯ:

ಇವೆರಡೂ ಆಹಾರಗಳು ಸುಲಭವಾಗಿ ಜೀರ್ಣವಾಗುವ ಆಹಾರಗಳಾಗಿದ್ದು ಹೆಚ್ಚಿನ ಪ್ರೋಟೀನ್ ಹೊಂದಿವೆ. ಹಾಗಾಗಿ ರೋಗಿಗಳಿಗೆ ಮಾಂಸಾಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವಂತೆ ಮಾಡಿ ಮೊಟ್ಟೆ ಮತ್ತು ಮೊಸರನ್ನು ಹೆಚ್ಚಿಸಬೇಕು. ಸಸ್ಯಾಹಾರಿಗಳು ಮೊಸರು, ನೆನೆಸಿಟ್ಟು ಮೊಳಕೆ ಬರಿಸಿದ ದ್ವಿದಳ ಧಾನ್ಯಗಳು ಮತ್ತು ಕಾಟೇಜ್ ಚೀಸ್ ಮೊದಲಾದವು ಉತ್ತಮ ಆಹಾರಗಳಾಗಿವೆ.

ಒಮೆಗಾ 3 ಕೊಬ್ಬಿನ ಆಮ್ಲ ಹೆಚ್ಚಿರುವ ಆಹಾರಗಳೂ ಅಗತ್ಯ

ಒಮೆಗಾ 3 ಕೊಬ್ಬಿನ ಆಮ್ಲ ಹೆಚ್ಚಿರುವ ಆಹಾರಗಳೂ ಅಗತ್ಯ

ಈ ಪೋಷಕಾಂಶ ದೇಹದಲ್ಲಿ ಉರಿಯೂತ ಎದುರಾಗುವುದನ್ನು ತಡೆಯುವ ಶಕ್ತಿ ಪಡೆದಿರುವ ಕಾರಣ ಟೈಫಾಯ್ಡ್ ಜ್ವರ ಇರುವ ರೋಗಿಗಳಿಗೆ ಹೆಚ್ಚು ಅವಶ್ಯವಾಗಿದೆ. ಹಾಗಾಗಿ ಈ ಅಂಶ ಹೆಚ್ಚಿರುವ ಆಹಾರಗಳನ್ನೂ ಜ್ವರ ಬಿಡುವವರೆಗೂ ನಿತ್ಯವೂ ಸೇವಿಸುವುದು ಅಗತ್ಯವಾಗಿದೆ.

Most Read: ನೋಡಿ ಇದೆಲ್ಲಾ ಕಾರಣದಿಂದಲೂ ಎದೆಯ ಎಡಭಾಗದಲ್ಲಿ ನೋವು ಬರಬಹುದು!!

ಟೈಫಾಯ್ಡ್ ಜ್ವರ ಪೂರ್ಣವಾಗಿ ಗುಣವಾಗುವವರೆಗೂ ಸೇವಿಸಬಾರದ ಆಹಾರಗಳು:

ಟೈಫಾಯ್ಡ್ ಜ್ವರ ಪೂರ್ಣವಾಗಿ ಗುಣವಾಗುವವರೆಗೂ ಸೇವಿಸಬಾರದ ಆಹಾರಗಳು:

*ಹೆಚ್ಚಿನ ನಾರಿನಂಶ ಹೊಂದಿರುವ ಆಹಾರಗಳು ಬೇಡ. ಏಕೆಂದರೆ ಹೆಚ್ಚಿನ ನಾರಿನಂಶ ಜೀರ್ಣಗೊಳ್ಳಲು ಜೀರ್ಣಾಂಗಗಳ ಮೇಲೆ ಒತ್ತಡ ಹೇರುತ್ತವೆ.

*ಕೋಸು, ಹೂಕೋಸು, ದೊಣ್ಣೆ ಮೆಣಸು, ಬದನೆ, ಮೂಲಂಗಿ, ಕಡ್ಲೆಬೇಳೆ, ಕಡ್ಲೆಕಾಳು, ಗೆಣಸು, ಹಲಸಿನ ಬೀಜ ಮೊದಲಾದ ವಾಯುಪ್ರಕೋಪವುಂಟುಮಾಡುವ ಯಾವುದೇ ಆಹಾರ ಬೇಡ. ಇದರಿಂದ ಹೊಟ್ಟೆಯುಬ್ಬರಿಕೆಯುಂಟಾಗಿ ರೋಗಿ ಇನ್ನಷ್ಟು ತೊಂದರೆ ಅನುಭವಿಸಬಹುದು.

*ಈರುಳ್ಳಿ ಮತ್ತು ಬೆಳ್ಳುಳ್ಳಿಯ ಘಾಟು ಹೆಚ್ಚಿರುವ ಆಹಾರಗಳು ಹೆಚ್ಚಿನ ಪ್ರಮಾಣದಲ್ಲಿ ಬೇಡ. ಅಲ್ಪ ಪ್ರಮಾಣದಲ್ಲಿದ್ದು ವಾಕರಿಕೆಯುಂಟಾಗದಿರುವಷ್ಟು ಪ್ರಮಾಣದಲ್ಲಿದ್ದರೆ ಸೇವಿಸಬಹುದು. ವಿಶೇಷವಾಗಿ ಬೆಳ್ಳುಳ್ಳಿ ಉರಿಯೂತವುಂಟುಮಾಡಬಹುದು.

*ಖಾರವಾದ ಮತ್ತು ಆಮ್ಲೀಯ ಅಹಾರಗಳು ಬೇಡ. ಹಸಿಮೆಣಸು, ಒಣಮೆಣಸು, ಶಿರ್ಕಾ, ಲಿಂಬೆರಸ ಮೊದಲಾದವು ಜೀರ್ಣವ್ಯವಸ್ಥೆಯನ್ನು ಕದಡಬಹುದು. ಒಣಮೆಣಸು ಟೈಫಾಯ್ಡ್ ರೋಗಿಗಳ ಚೇತರಿಸುವಿಕೆಯ ಮೇಲೆ ಅಪಾರ ಪ್ರಭಾವವುಂಟುಮಾಡುತ್ತದೆ.

*ತುಪ್ಪ, ಬೆಣ್ಣೆ, ಐಸ್ ಕ್ರೀಂ, ಹುರಿದ ಆಹಾರಗಳೂ ಬೇಡ. ಬೆಣ್ಣೆ, ಮೊದಲಾದ ಆಹಾರಗಳು ಪೂರ್ಣ ಚೇತರಿಕೆಯವರೆಗೂ ಬೇಡ.

ಮುನ್ನೆಚ್ಚರಿಕಾ ಕ್ರಮವಾಗಿ ಕೆಳಕಂಡ ಸೂಚನೆಗಳನ್ನು ಪಾಲಿಸಿ

ಮುನ್ನೆಚ್ಚರಿಕಾ ಕ್ರಮವಾಗಿ ಕೆಳಕಂಡ ಸೂಚನೆಗಳನ್ನು ಪಾಲಿಸಿ

*ಸದಾ ತಾಜಾ ತರಕಾರಿಗಳನ್ನೇ ಕೊಂಡು ತನ್ನಿ, ಪ್ರತಿ ಬಾರಿಯೂ ಚೆನ್ನಾಗಿ ತೊಳೆದೇ ಅಡುಗೆಗೆ ಬಳಸಿ.

*ಸ್ವಚ್ಛತೆಯನ್ನು ಕಾಪಾಡಿಕೊಳ್ಳದ ಸ್ಥಳಗಳಿಂದ ಆಹಾರವಸ್ತುಗಳನ್ನು ಕೊಳ್ಳದಿರಿ.

*ಊಟಕ್ಕೂ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.

*ರಸ್ತೆಬದಿಯ ವ್ಯಾಪಾರಿಗಳಿಂದ ಹಣ್ಣು ತರಕಾರಿಗಳನ್ನು ಕೊಳ್ಳದಿರಿ.

*ಬಾಟಲಿಯ ಸ್ವಚ್ಛ ನೀರನ್ನು ಮಾತ್ರವೇ ಕುಡಿಯಿರಿ.

*ಟೈಫಾಯ್ಡ್ ಜ್ವರದ ಅಥವಾ ಬೇರೆ ಯಾವುದೇ ಕಾಯಿಲೆಯ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯಕೀಯ ನೆರವನ್ನು ಪಡೆಯಿರಿ.

English summary

Typhoid Diet: Here's What You Should Eat And Avoid

The typhoid diet should make up for carbs and fat content in the body. Protein-based foods are an extremely important part of the typhoid diet.Here's what you should eat and avoid when suffering from typhoid.
Story first published: Wednesday, February 13, 2019, 13:19 [IST]
X
Desktop Bottom Promotion