For Quick Alerts
ALLOW NOTIFICATIONS  
For Daily Alerts

ಪ್ರತಿ ದಿನ ಬೆಳಿಗ್ಗೆ ಎರಡು ಬೇಯಿಸಿದ ಮೊಟ್ಟೆ ತಿಂದರೆ ತೂಕ ಇಳಿಸಬಹುದಂತೆ !

|

ತೂಕ ಇಳಿಸುವ ಯತ್ನದಲ್ಲಿರುವವರಿಗೆ ಇಲ್ಲೊಂದು ಸಂತೋಷದ ಸುದ್ದಿ ಇದೆ: ಏನೆಂದರೆ ಈಗ ತೂಕ ಇಳಿಸಿಕೊಳ್ಳುವುದು ಉಪಾಹಾರಕ್ಕೆ ಆಯ್ಕೆಯನ್ನು ಬದಲಿಸಿಕೊಂಡಷ್ಟೇ ಸುಲಭವಾಗಲಿದೆ. ಒಂದು ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ಉಪಾಹಾರದಲ್ಲಿ ಮೊಟ್ಟೆಯನ್ನು ಸೇವಿಸುವ ಮೂಲಕ ದಿನವಿಡೀ ಚಟುವಟಿಕೆಯಿಂದಿರಲು ಹಾಗೂ ತೂಕ ಹೆಚ್ಚದೇ ಇರಲು ನೆರವಾಗುತ್ತದೆ ಎಂದು ಸ್ಥೂಲಕಾಯಕ್ಕೇ ಮುಡಿಪಾದ ಮಾಧ್ಯಮವಾದ International Journal of Obesityಎಂಬ ಪತ್ರಿಕೆಯಲ್ಲಿ ವರದಿಯಾಗಿದೆ. ಸತತವಾಗಿ ಐದು ದಿನಗಳ ಕಾಲ ದಿನವೂ ಉಪಾಹಾರದಲ್ಲಿ ಎರಡು ಮೊಟ್ಟೆಗಳನ್ನು ಸೇವಿಸಿದವರಲ್ಲಿ ತೂಕ ಇಳಿಕೆಯ ಪ್ರಮಾಣ ಬೆಣ್ಣೆ ಹಚ್ಚಿದ ಬನ್ ತಿನ್ನುವವರಿಗಿಂತ 65% ನಷ್ಟಿದೆ ಎಂದು ಈ ಸಂಶೋಧನೆಯಲ್ಲಿ ತಿಳಿಸಲಾಗಿದೆ.

Two boiled Eggs

National Center for Biotechnology Information (NCBI)ಎಂಬ ಸಂಸ್ಥೆಯಲ್ಲಿ ಪರ್ಯಾಯವಾಗಿ ನಡೆದ ಇನ್ನೊಂದು ಸಂಶೋಧನೆಯಲ್ಲಿ ಹೆಚ್ಚೂ ಕಡಿಮೆ ಇದೇ ಬಗೆಯ ಫಲಿತಾಂಶವನ್ನು ಪಡೆದುಕೊಳ್ಳಲಾಗಿದೆ.ಈ ಸಂಶೋಧನೆಯಲ್ಲಿ ಪಾಲ್ಗೊಂಡವರಲ್ಲಿ ಮುಂಜಾನೆ ಮೊಟ್ಟೆ ತಿಂದವರು ಮಧ್ಯಾಹ್ನ ಮತ್ತು ರಾತ್ರಿಯೂಟದಲ್ಲಿ ಹೆಚ್ಚಿನ ಕ್ಯಾಲೋರಿಗಳಿರುವ ಆಹಾರವನ್ನು ಸೇವಿಸುವುದನ್ನು ಕಡಿಮೆ ಮಾಡುತ್ತಾರೆ ಎಂದು ಕಂಡುಕೊಳ್ಳಲಾಗಿದೆ. ಆಹಾರದಲ್ಲಿ ಕ್ಯಾಲೋರಿಗಳು ಕಡಿಮೆ ಇದ್ದಷ್ಟೂ ತೂಕ ಇಳಿಕೆಯ ಪ್ರಮಾಣ ಹೆಚ್ಚುತ್ತದೆ. ವಾಸ್ತವವಾಗಿ ಮೊಟ್ಟೆ ಉಪಾಹಾರವಾಗಿ ತಿಂದವರು ಮುಂದಿನ ಮೂವತ್ತಾರು ಘಂಟೆಗಳವರೆಗೆ ಹೆಚ್ಚಿನ ಕ್ಯಾಲೋರಿಗಳಿರುವ ಆಹಾರ ಸೇವನೆಯನ್ನೇ ಕಡಿಮೆ ಮಾಡಿರುವುದು ಗಮನಕ್ಕೆ ಬಂದಿದೆ.

Most Read: ಆಯುರ್ವೇದದ ಪ್ರಕಾರ ಖಾಲಿ ಹೊಟ್ಟೆಯಲ್ಲಿ ಕೇವಲ ಹಾಲನ್ನು ಕುಡಿಯುವುದು ಅಷ್ಟು ಒಳ್ಳೆಯದಲ್ಲವಂತೆ

ಅಷ್ಟಕ್ಕೂ ಉಪಾಹಾರದಲ್ಲಿ ಮೊಟ್ಟೆಯೇ ಏಕೆ? ಇದಕ್ಕೆ ಕೆಲವು ಕಾರಣಗಳಿವೆ

ತೃಪ್ತಿ ನೀಡುವ ಆಹಾರಗಳ ಪಟ್ಟಿಯಲ್ಲಿ ಮೊಟ್ಟೆ ಪ್ರಮುಖ ಸ್ಥಾನದಲ್ಲಿದೆ. ಅಂದರೆ ಈ ಆಹಾರಗಳ ಸೇವನೆಯ ಬಳಿಕ ಇಡಿಯ ದಿನ ಹೊಟ್ಟೆ ತುಂಬಿರುವ ಭಾವನೆ ಇರುತ್ತದೆ. ಮೊಟ್ಟೆಗಳಲ್ಲಿ ಕಡಿಮೆ ಕ್ಯಾಲೋರಿಗಳು ಮತ್ತು ಕಡಿಮೆ ಕೊಬ್ಬು ಹಾಗೂ ಹೆಚ್ಚಿನ ಪ್ರಮಾಣದ ಪ್ರೋಟೀನ್ ಅಂದರೆ ಒಂದು ಮೊಟ್ಟೆಯಲ್ಲಿ ಸುಮಾರು ಆರು ಗ್ರಾಂ ಪ್ರೋಟೀನ್ ಇದೆ. ಜೊತೆಗೇ ಸುಮಾರು ಒಂಭತ್ತು ವಿಧದ ಅಮೈನೋ ಆಮ್ಲಗಳು, ಕಬ್ಬಿಣ, ಗಂಧಕ, ಸೆಲೆನಿಯಂ, ವಿಟಮಿನ್ ಎ, ಸಿ ಮತ್ತು ಬಿ12 ಮೊದಲಾದ ಅವಶ್ಯಕ ಪೋಷಕಾಂಶಗಳೂ ಉತ್ತಮ ಪ್ರಮಾಣದಲ್ಲಿವೆ.

ಇದೊಂದು ಅತ್ಯಂತ ಆರೋಗ್ಯಕರ ಆಹಾರವಾಗಿದ್ದು ವಿಶ್ವದ ಎಲ್ಲೆಡೆ ಹೆಚ್ಚಿನ ಸಂಖ್ಯೆಯಲ್ಲಿ, ವಿಪುಲವಾಗಿ ಮತ್ತು ಅತ್ಯಂತ ಅಗ್ಗವಾಗಿ ದೊರಕುವ ಆಹಾರವಾಗಿದ್ದು ಅತ್ಯಂತ ಸುಲಭವಾಗಿ ತಯಾರಿಸಬಹುದಾದ ಆಹಾರವೂ ಆಗಿದೆ. ಉಪಾಹಾರಕ್ಕೆ ಮೊಟ್ಟೆಯನ್ನು ಸುಮ್ಮನೇ ಆಮ್ಲೆಟ್ ರೂಪದಲ್ಲಿ ಸೇವಿಸಬಹುದಾದರೂ ಇದಕ್ಕೂ ರುಚಿಕರವಾದ ಇತರ ವಿಧಾನಗಳ ಮೂಲಕವೂ ಸೇವಿಸಬಹುದು.

Most Read: ಈ ಆಶ್ಚರ್ಯಕರ ಕಾಯಿಲೆಗಳನ್ನು ನಿಮ್ಮ ಕೈಗಳು ಊಹಿಸುತ್ತವೆ ಎಂದರೆ ನಂಬುತ್ತೀರಾ ?

ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಎಂಬ ಮಿಥ್ಯಾಭಾವನೆಯನ್ನು ಬಹುಕಾಲದಿಂದ ಕೇಳುತ್ತಾ ಬರುತ್ತಿದ್ದೇವೆ. ಆದರೆ ವಾಸ್ತವವಾಗಿ ಆಹಾರದ ಮೂಲಕ ಪಡೆದುಕೊಳ್ಳುವ ಕೊಲೆಸ್ಟ್ರಾಲ್ ಗೂ ದೇಹ ತಾನೇ ಉತ್ಪಾದಿಸಿಕೊಳ್ಳುವ ಕೊಲೆಸ್ಟ್ರಾಲ್‌ಗೂ ಸಂಬಂಧವಿಲ್ಲ. ಹಾಗಾಗಿ ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಇದ್ದರೂ ಇದೇನೂ ನಮ್ಮ ದೇಹ ತಾನಾಗಿ ಉತ್ಪಾದಿಸುವ ಕೊಲೆಸ್ಟಾಲ್ ಮಟ್ಟವನ್ನು ಹೆಚ್ಚಿಸದು. ಒಂದು ವೇಳೆ ಈಗಾಗಲೇ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಈಗಾಗಲೇ ಹೆಚ್ಚಿದ್ದರೆ ಹೆಚ್ಚಿನ ಪ್ರಮಾಣದ ಮೊಟ್ಟೆಯನ್ನು ತಿನ್ನಲೂಬಾರದು. ಕ್ವೀವ್ಲ್ಯಾಂಡ್ ಕ್ಲಿನಿಕ್ ಒದಗಿಸಿರುವ ಮಾಹಿತಿಯ ಪ್ರಕಾರ ಯಾವುದೇ ಆಹಾರ ಮಿತಿಯಲ್ಲಿದ್ದರೆ ಮಾತ್ರವೇ ಆರೋಗ್ಯಕರವೇ ಹೊರತು ಮಿತಿಮೀರಿದಾಗ ವಿಷವೇ ಸರಿ. ಮೊಟ್ಟೆಯ ವಿಷಯದಲ್ಲಿಯೂ ಅಷ್ಟೇ, ದಿನಕ್ಕೆರಡು ಮೊಟ್ಟೆಗಳನ್ನು ಉಪಾಹಾರದಲ್ಲಿ ಸೇವಿಸುವುದು ಆರೋಗ್ಯಕರ. ಆದರೆ ಇದಕ್ಕೂ ಹೆಚ್ಚಿನದು ಬೇಡ. ಒಂದು ವೇಳೆ ನಿಮಗೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದ್ದರೆ ನಿಮ್ಮ ವೈದ್ಯರ ಸಲಹೆ ಪಡೆದೇ ನಿಮ್ಮ ಉಪಾಹಾರದಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಿ.

English summary

Two boiled Eggs in the Morning Can Help You Lose Weight

Research has shown that eating eggs for breakfast can help fight weight gain all day long. In a study published by the International Journal of Obesity, researchers found that dieters who consumed two eggs for breakfast five days out of the week lost 65 percent more weight than dieters who consumed a bagel in the morning.
Story first published: Thursday, February 14, 2019, 12:21 [IST]
X
Desktop Bottom Promotion