For Quick Alerts
ALLOW NOTIFICATIONS  
For Daily Alerts

ಲಾಭಕ್ಕಾಗಿ ಸಿದ್ಧ ಆಹಾರ ಸಂಸ್ಥೆಗಳು ಹೇಳುವ ಅತಿದೊಡ್ಡ ಹನ್ನೊಂದು ಸುಳ್ಳುಗಳು!!

|

ಪ್ರತಿ ಸಂಸ್ಥೆಯೂ ಲಾಭಕ್ಕಾಗಿಯೇ ಕಾರ್ಯನಿರ್ವಹಿಸುತ್ತಿವೆ. ಆದರೆ ಸಿದ್ಧ ಆಹಾರ ತಯಾರಿಕಾ ಸಂಸ್ಥೆಗಳು ತಮ್ಮ ಉತ್ಪನ್ನಗಳು ಬಿಕರಿಯಾಗಬೇಕಾದರೆ ಗ್ರಾಹಕರಿಗೆ ಬಣ್ಣಬಣ್ಣದ ಸುಳ್ಳುಗಳನ್ನು ಹೇಳುತ್ತಿರುವುದು ಮಾತ್ರ ಸುಳ್ಳಲ್ಲ. ಇವರಿಗೆ ಗ್ರಾಹಕರ ಆರೋಗ್ಯಕ್ಕಿಂತ ತಮ್ಮ ಲಾಭವೇ ಮುಖ್ಯವಾಗಿದೆ ಹಾಗೂ ಇದಕ್ಕಾಗಿ ಮಕ್ಕಳು, ಮಹಿಳೆಯರ ಸಹಿತ ಎಲ್ಲಾ ವರ್ಗದ ಜನತೆಗೆ ಸುಳ್ಳುಗಳನ್ನು ಎದೆ ತಟ್ಟಿ ಹೇಳುತ್ತಿದ್ದಾರೆ. ಸಿದ್ಧ ಆಹಾರ ಉದ್ಯಮ ಇಂದು ಬಲು ದೊಡ್ಡ ಹಾಗೂ ಕೋಟ್ಯಂತರ ರೂಪಾಯಿ ವಹಿವಾಟಿನ ಉದ್ಯಮವಾಗಿದ್ದು ಹೆಚ್ಚು ಹೆಚ್ಚು ಗ್ರಾಹಕರನ್ನು ಸೆಳೆಯಲು ಹೇಳುವ ಹನ್ನೊಂದು ಪ್ರಮುಖ ಸುಳ್ಳು ಅಥವಾ ತಪ್ಪು ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ:

ಕೊಬ್ಬೇ ಇಲ್ಲದ ಅಥವಾ ಕಡಿಮೆ ಕೊಬ್ಬಿನ ಆಹಾರ ( or Fat-Free)

ಕೊಬ್ಬೇ ಇಲ್ಲದ ಅಥವಾ ಕಡಿಮೆ ಕೊಬ್ಬಿನ ಆಹಾರ ( or Fat-Free)

ಕೊಬ್ಬು ಅನಾರೋಗ್ಯಕರ ಎಂಬ ಮಾಹಿತಿಯನ್ನು ಈ ಸಂಸ್ಥೆಗಳು ತಮ್ಮ ಲಾಭಕ್ಕೆ ಹೇಗೆ ಬಳಸಿಕೊಳ್ಳುತ್ತಿವೆ ಎಂದರೆ ಈ ಅನಾರೋಗ್ಯಕರ ಕೊಬ್ಬನ್ನು ಇಲ್ಲವಾಗಿಸಿ ಅಥವಾ ಕನಿಷ್ಟವಾಗಿಸಿ ನಿಮ್ಮ ಆರೋಗ್ಯವನ್ನು ಕಾಪಾಡುತ್ತಿದ್ದೇವೆ ಎಂದು ಪರೋಕ್ಷವಾಗಿ ಹೇಳಿಕೊಳ್ಳುತ್ತಿವೆ. ವಾಸ್ತವವಾಗಿ ಈ ಹಣೆಪಟ್ಟಿ ಹೊಂದಿರುವ ಉತ್ಪನ್ನಗಳೇ ಮೊತ್ತ ಮೊದಲಾಗಿ ಆರೋಗ್ಯಕರವಲ್ಲ! ವಾಸ್ತವದಲ್ಲಿ ಹೆಚ್ಚುವರಿ ಕೊಬ್ಬನ್ನು ನಿವಾರಿಸಿದ ಬಳಿಕ ಪೂರ್ಣಕೊಬ್ಬಿನಲ್ಲಿರುವ ನೈಸರ್ಗಿಕ ಕೊಬ್ಬಿನ ರುಚಿ ಈ ಆಹಾರಗಳಿಗೆ ಇರುವುದಿಲ್ಲ, ಬದಲಿಗೆ ರುಚಿಯೇ ಬದಲಾಗಿ ಯಾರಿಗೂ ಇಷ್ಟವಾಗದಂತಿರುತ್ತದೆ. ಹಾಗಾಗಿ ಈ ರು಼ಚಿಯನ್ನು ಪೂರ್ಣಕೊಬ್ಬಿನ ಆಹಾರಕ್ಕಿರುವ ರುಚಿಯನ್ನು ಪಡೆಯಲು ಹೆಚ್ಚುವರಿ ಸಕ್ಕರೆ ಮತ್ತು ಇತರ ಹೆಚ್ಚುವರಿ ಸಾಮಾಗ್ರಿಗಳನ್ನು ಸೇರಿಸಲಾಗುತ್ತದೆ. ಈ ಉತ್ಪನ್ನಗಳ ಪ್ರಚಾರ ಮಾಡುವಾಗ ಅಥವಾ ಇದರ ವಿವರಗಳನ್ನು ಉತ್ಪನ್ನದ ಪಟ್ಟಿಯ ಮೇಲೆ ಮುದ್ರಿಸುವಾಗ 'ಕೊಬ್ಬು' ಇಲ್ಲ ಅಥವಾ 'ಕಡಿಮೆ ಕೊಬ್ಬು' ಎಂಬ ಪದಕ್ಕೇ ಅತಿ ಹೆಚ್ಚಿನ ಮಹತ್ವ ನೀಡಿ ಈ ಪದಗಳನ್ನು ಭರ್ಜರಿಯಾಗಿ ಕಾಣುವಂತೆ ಮುದ್ರಿಸಲಾಗುತ್ತದೆ. ಆದರೆ ಹೆಚ್ಚುವರಿಯಾಗಿ ಸೇರಿಸಿದ ಸಕ್ಕರೆ ಮತ್ತು ಇತರ ಅಪಾಯಕಾರಿ ರಾಸಾಯನಿಕಗಳ ಬಗ್ಗೆ ಚಕಾರವನ್ನೇ ಎತ್ತುವುದಿಲ್ಲ. ಸಕ್ಕರೆ, ನಾವು ಇಂದು ತಿಳಿದಂತೆ ಒಂದು ಬಿಳಿವಿಷವಾಗಿದ್ದು ದಿನದ ಮಿತಿಗೆ ಮೀರಿದರೆ (ಪುರುಷರಿಗೆ 37.5 ಗ್ರಾಂ, ಮಹಿಳೆಯರಿಗೆ 25 ಗ್ರಾಂ) ಅಪಾಯಕಾರಿಯೇ ಆಗಿದೆ. ಹಾಗಾಗಿ ಕಡಿಮೆ ಕೊಬ್ಬು ಎಂದು ನಂಬಿ ಸೇವಿಸುವ ಈ ಉತ್ಪನ್ನಗಳು ವಾಸ್ತವವಾಗಿ ಕೊಬ್ಬುಸಹಿತ ಇರುವ ಉತ್ಪನ್ನಕ್ಕಿಂತಲೂ ಅಪಾಯಕಾರಿಯೇ ಆಗಿವೆ.

ಸಾರಾಂಶ

ಒಂದು ವೇಳೆ ಉತ್ಪನ್ನದ ಮೇಲೆ "low-fat" ಅಥವಾ ಇದಕ್ಕೆ ತತ್ಸಮಾನ ಹೋಲಿಕೆ ಇರುವ ಪದವನ್ನು ಹೊಂದಿದ್ದರೆ ಇದರಲ್ಲಿ ಕೃತಕ ರುಚಿಕಾರಕಗಳಿರಬಹುದು. ಹಾಗಾಗಿ, ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಬಗೆಯ ಉತ್ಪನ್ನಗಳು ಸೂಕ್ತ ಆಯ್ಕೆಯಲ್ಲ!

ಟ್ರಾನ್ಸ್ ಫ್ಯಾಟ್ ರಹಿತ (Trans Fat-Free)

ಟ್ರಾನ್ಸ್ ಫ್ಯಾಟ್ ರಹಿತ (Trans Fat-Free)

trans-unsaturated fatty acids ಎಂಬ ದೊಡ್ಡ ಹೆಸರನ್ನು ಹೃಸ್ವವಾಗಿಸಿ ಈ ಹೆಸರಿನಿಂದ ಕರೆಯಲಾಗುವ ಕೊಬ್ಬು ಅಥವಾ ಕನ್ನಡದಲ್ಲಿ ವಿಮುಖ-ಏಕ ಅಸಂತೃಪ್ತ ಕೊಬ್ಬಿನ ಆಮ್ಲ ಎಂದು ಕರೆಯಬಹುದು. ಸಾಮಾನ್ಯವಾಗಿ ಸಿದ್ಧ ಆಹಾರಗಳ ಉತ್ಪನ್ನಗಳ ಪೊಟ್ಟಣಗಳ ಮೇಲೆ "trans fat-free" ಎಂದು ದೊಡ್ಡದಾಗಿ, ಸ್ಪಷ್ಟವಾಗಿ ಕಾಣುವಂತೆ ಮುದ್ರಿಸಲಾಗಿರುತ್ತದೆ. ಆದರೆ ಇದು ನಿಜವಾಗಿರಬೇಕಾಗಿಲ್ಲ. ಸಿದ್ಧ ಆಹಾರಗಳ ನಿಯಮದ ಪ್ರಕಾರ ಒಂದು ಪ್ರಮಾಣದಲ್ಲಿ ಅರ್ಧ ಗ್ರಾಂ ಗಿಂತಲೂ ಕಡಿಮೆ ಟ್ರಾನ್ಸ್ ಕೊಬ್ಬು ಇದ್ದರೆ ಈ ಮಾಹಿತಿಯನ್ನು ಢಾಳಾಗಿ ಮುದ್ರಿಸಬಹುದು. ಅಂದರೆ, ಸುಲಭ ಪದಗಳಲ್ಲಿ 'ನಾವು ಸೂಜಿಯಿಂದ ಚುಚ್ಚುತ್ತೇವೆ, ಆದರೆ ಚಿಕ್ಕ ಸೂಜಿಯಿಂದ ಚುಚ್ಚಿದರೆ ಇದನ್ನು ಹೇಳಬೇಕಾಗಿಲ್ಲ' ಎಂಬ ಅರ್ಥ ಬರುತ್ತದೆ. ಈ ಪದ ಮುದ್ರಿಸಿದ್ದರೂ ಈ ಉತ್ಪನ್ನದ ಇತರ ಯಾವುದೇ ಭಾಗದಲ್ಲಿ "hydrogenated" ಎಂಬ ಪದವೇನಾದರೂ ಕಾಣುತ್ತದೆಯೇ ಎಂದು ಗಮನಿಸಿ, ಒಂದು ವೇಳೆ ಹೌದು ಎಂದಾದರೆ ಇದರಲ್ಲಿ ಟ್ರಾನ್ಸ್ ಫ್ಯಾಟ್ ಇದೆ ಎಂದೇ ತಿಳಿದುಕೊಳ್ಳಬಹುದು.

ಸಾರಾಂಶ

ಟ್ರಾನ್ಸ್ ಫ್ಯಾಟ್ ಎಂದು ಬರೆದಿದ್ದರೂ, ಬರೆದಿರದಿದ್ದರೂ "hydrogenated" ಎಂಬ ಪದ ಇರುವ ಯಾವುದೇ ಉತ್ಪನ್ನಗಳನ್ನು ಕೊಳ್ಳದಿರಿ. Trans Fat-Free ಎಂದು ಬರೆದಿದ್ದರೂ ಪ್ರತಿ ಪ್ರಮಾಣದಲ್ಲಿ ಅರ್ಧ ಗ್ರಾಂ ನಷ್ಟು ಟ್ರಾನ್ಸ್ ಕೊಬ್ಬು ಇರಬಹುದು ಎಂದು ಈ ಸಂಸ್ಥೆಗಳು ಕಾನೂನಿನ ಚೌಕಟ್ಟನ್ನು ನಿರ್ಮಿಸಿವೆ.

Most Read: ಥೈರಾಯ್ಡ್ ಸಮಸ್ಯೆ ನಿವಾರಣೆಗೆ ಅದ್ಭುತ ಸಾರಭೂತ ತೈಲಗಳು

ಇಡಿಯ ಧಾನ್ಯಗಳಿವೆ (Includes Whole Grains)

ಇಡಿಯ ಧಾನ್ಯಗಳಿವೆ (Includes Whole Grains)

ಕಳೆದ ಒಂದೆರಡು ದಶಕಗಳ ಹಿಂದೆ ಇರದಿದ್ದ ಈ ಪದವನ್ನು ಇಂದು ದೊಡ್ಡದಾಗಿ ಕಾಣುವಂತೆ ಉತ್ಪನ್ನಗಳ ಮೇಲೆ ಮುದ್ರಿಸಿರಲಾಗಿರುತ್ತದೆ. ಈ ಮೂಲಕ ಇಡಿಯ ಧಾನ್ಯಗಳೇ ಈ ಜಗತ್ತಿನಲ್ಲಿ ಲಭ್ಯವಿರುವ ಅತ್ಯುತ್ತಮ ಆಹಾರ ಎಂದು ಗ್ರಾಹಕ ನಂಬುವಂತೆ ಮಾಡಲಾಗುತ್ತದೆ. ಸಂಸ್ಕರಿತ ಧಾನ್ಯಗಳಿಗಿಂತಲೂ ಇಡಿಯ ಧಾನ್ಯಗಳು ಆರೋಗ್ಯಕರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಧಾನ್ಯಗಳನ್ನೇ ತಿನ್ನದಿರುವ ಬದಲು ಕೇವಲ ಇಡಿಯ ಧಾನ್ಯಗಳನ್ನು ಮಾತ್ರವೇ ತಿನ್ನುವುದರಿಂದ ಆರೋಗ್ಯ ವೃದ್ದಿಸುತ್ತದೆ ಎಂಬ ವಾದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಈ ಉತ್ಪನ್ನಗಳಲ್ಲಿ ಇಡಿಯ ಧಾನ್ಯಗಳು ಇವೆ ಎಂದಿದ್ದರೂ ಇದು 'ಇಡಿಯ' ಗಾತ್ರದಲ್ಲಿಯೇ ಇರಬೇಕಾಗಿಲ್ಲ. ಬದಲಿಗೆ, ಇವುಗಳನ್ನು ಪುಡಿಗಟ್ಟಿ ಅಥವಾ ಹಿಟ್ಟಿನ ರೂಪದಲ್ಲಿ ಬೆರೆಸಿರಬಹುದು. ಈ ಮೂಲಕ ಈ ಧಾನ್ಯಗಳ ನಿಜವಾದ ಗುಣವನ್ನೇ ನಾಶಪಡಿಸಲಾಗುತ್ತದೆ. ಏಕೆಂದರೆ ಇಡಿಯ ಧಾನ್ಯಗಳು ನಿಧಾನವಾಗಿ ಜೀರ್ಣಗೊಳ್ಳುವ ಆಹಾರಗಳಾಗಿದ್ದು ಇವುಗಳನ್ನು ಪುಡಿಗಟ್ಟಿ ಸೇವಿಸುವ ಮೂಲಕ ಇವುಗಳು ತಕ್ಷಣವೇ ಜೀರ್ಣವಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಥಟ್ಟನೇ ಏರಿಸುತ್ತವೆ. ಹಾಗಾಗಿ ಈ ಉತ್ಪನ್ನಕ್ಕೆ 'ಇಡಿಯ ಧಾನ್ಯ' ದ ಯಾವುದೇ ಗುಣ ಉಳಿದಿರುವುದಿಲ್ಲ.

ಒಂದು ವೇಳೆ ಗ್ರಾಹಕರ ಕಣ್ಣಿಗೆ ಮಣ್ಣೆರೆಚಲು ಕೆಲವು ಧಾನ್ಯಗಳನ್ನು ಕಣ್ಣಿಗೆ ಕಾಣುವಂತೆ ಬೆರೆಸಿದ್ದರೂ ಇವುಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಸಕ್ಕರೆ ಅಥವಾ ಅಥಿಕ ಫ್ರುಕ್ಟೋಸ್ ಹೊಂದಿರುವ ಮೆಕ್ಕೆಜೋಳದ ಸಿರಪ್ ಬೆರೆಸಿರಬಹುದು.

ಸಾರಾಂಶ

"whole" ಎಂಬ ಪದವನ್ನು ಹೊಂದಿದ್ದರೂ ಈ ಉತ್ಪನ್ನಗಳಲ್ಲಿ ಇಡಿಯ ಧಾನ್ಯಗಳು ನೈಜರೂಪದಲ್ಲಿರದೇ ಪುಡಿಯ ರೂಪದಲ್ಲಿರಬಹುದು ಹಾಗೂ ಇವುಗಳ ಸೇವನೆಯಿಂದ ಇವು ಇತರ ಸಂಸ್ಕರಿತ ಆಹಾರಗಳಂತೆಯೇ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಮಟ್ಟ ಏರುಪ ಅಪಾಯವಿದೆ.

ಗ್ಲುಟೆನ್ ರಹಿತ (Gluten-Free)

ಗ್ಲುಟೆನ್ ರಹಿತ (Gluten-Free)

ಇತ್ತೀಚೆಗೆ ಗ್ಲುಟೆನ್ ರಹಿತ ಆಹಾರ ಒಂದು ವ್ಯಸನವಾಗಿಬಿಟ್ಟಿದೆ. ಒಂದು ಸಮೀಕ್ಷೆಯ ಪ್ರಕಾರ ಸುಮಾರು 1.5% ಅಮೇರಿಕನ್ನರು ಗ್ಲುಟೆನ್ ರಹಿತ ಆಹಾರ ಸೇವಿಸುವ ಅಥವಾ ಇದರ ಪ್ರಮಾಣವನ್ನು ಕನಿಷ್ಟವಾಗಿಸುವತ್ತ ಗಮನ ಹರಿಸುತ್ತಾರೆ. ಆದರೆ ಗ್ಲುಟೆನ್ ಸಹಿಸಲು ಸಾಧ್ಯವಿರದ celiac disease ಎಂಬ ಕಾಯಿಲೆ ಈ ವ್ಯಕ್ತಿಗಳಲ್ಲಿ ಪ್ರತಿ ಮೂವರಲ್ಲಿ ಇಬ್ಬರಿಗೆ ಮಾತ್ರ ಇರುತ್ತದೆ. ಅಂದರೆ, ಮೂವರಲ್ಲೊಬ್ಬರು ಅಗತ್ಯವಿಲ್ಲದಿದ್ದರೂ ಗ್ಲುಟೆಲ್ ರಹಿತ ಆಹಾರವನ್ನು ಬಯಸುತ್ತಿದ್ದಾರೆ! ನಮ್ಮ ಆಹಾರದಲಿ ಗ್ಲುಟೆನ ಇರಬಾರದು ಸರಿ, ಏಕೆಂದರೆ celiac disease ಇರುವ ವ್ಯಕ್ತಿಗಳ ಸಹಿತ ಇನ್ನೂ ಕೆಲವು ವ್ಯಕ್ತಿಗಳಿಗೆ ಗ್ಲುಟೆನ್ ಜೀರ್ಣಿಸಿಕೊಳ್ಳುವ ಶಕ್ತಿ ಇರದೇ ಇರಬಹುದು.

ಆದರೆ, ಗ್ಲುಟೆನ್ ಇರುವ ಅಹಾರಗಳಲ್ಲಿ ಇವುಗಳ ಬದಲಾಗಿ ಬೇರೊಂದು ಸಾಮಾಗ್ರಿಯನ್ನು ಬಳಸಿ (ಇದೇ ಕಾರಣಕ್ಕೆ "gluten-free" ಎಂಬ ಪದ ಬಳಸಲಾಗುತ್ತದೆ) ಈ ಖಾದ್ಯದ ಮೂಲ ರುಚಿಯನ್ನು ಉಳಿಸಿಕೊಳ್ಳುವಂತೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಇವು ದುಬಾರಿಯೂ ಅನಾರೋಗ್ಯಕರವೂ ಆಗಿರುತ್ತವೆ.

ಈ ಬದಲಿ ಸಾಮಾಗ್ರಿಗಳನ್ನು ಅತಿ ಹೆಚ್ಚು ಸಂಸ್ಕರಿಸಿದ, ಅತಿ ಹೆಚ್ಚಿನ ಗ್ಲೈಸೆಮಿಕ್ ಗುಣಾಂಕವಿರುವ ಪಿಷ್ಟಗಳಿಂದ ತಯಾರಿಸಲಾಗುತ್ತದೆ. ಉದಾಹರಣೆಗೆ ಮೆಕ್ಕೆಜೋಳದ ಪಿಷ್ಟ, ಆಲುಗಡ್ಡೆ ಅಥವಾ ಮರಗೆಣಸಿನ ಪಿಷ್ಟವನ್ನು ಬಳಸಿರಬಹುದು ಹಾಗೂ ರುಚಿಗಾಗಿ ಹೆಚ್ಚುವರಿ ಸಕ್ಕರೆಯನ್ನೂ ಬೆರೆಸಿರಬಹುದು.

ಹಾಗಾಗಿ ಗ್ಲುಟೆನ್ ಫ್ರೀ ಎಂದು ಬರೆದಿರುವ ಉತ್ಪನ್ನಗಳಲ್ಲಿ ಆರೋಗ್ಯಕ್ಕೆ ಪೂರಕವಾದ ಸಂಸ್ಕರಿತ ಧಾನ್ಯಗಳ ಬದಲಿಗೆ ನಿಜವಾದ ಧಾನ್ಯಗಳೇ ಇದ್ದರೆ ಒಳ್ಳೆಯದಿತ್ತು.

ಸಾರಾಂಶ:

"gluten-free" ಎಂದು ಬರೆದಿರುವ ಈ ಆಹಾರದಲ್ಲಿ ಅನಾರೋಗ್ಯಕರ ಸಾಮಗ್ರಿಗಳಿರಬಹುದು. ಹಾಗಾಗಿ ಇವುಗಳನ್ನು ಸೇವಿಸುವುದನ್ನು ಆದಷ್ಟೂ ತ್ಯಜಿಸಿ ನೈಜ ಧಾನ್ಯಗಳನ್ನೇ ಸೇವಿಸಿ.

ಅಡಗಿರುವ ಸಕ್ಕರೆ (Hidden Sugar)

ಅಡಗಿರುವ ಸಕ್ಕರೆ (Hidden Sugar)

ನಿರಾಶಾದಾಯಕವೆಂದರೆ, ಹೆಚ್ಚಿನ ಗ್ರಾಹಕರು ಉತ್ಪನ್ನಗಳ ಮೇಲೆ ಬರೆದಿರುವ ವಿವರಗಳನ್ನು ಓದಲೇ ಹೋಗುವುದಿಲ್ಲ. ಆದರೆ ಇದನ್ನು ಓದುವ ಕೆಲವು ಗ್ರಾಹಕರಿಗೂ ಈ ಸಂಸ್ಥೆಗಳು ನಿಜವಾದ ಮಾಹಿತಿಯನ್ನು ಸ್ಪಷ್ಟವಾಗಿ ನೀಡುವುದಿಲ್ಲ. ಈ ಉತ್ಪನ್ನದಲ್ಲಿ ಬಳಸಲಾಗಿರುವ ಸಾಮಾಗ್ರಿಗಳ ಪಟ್ಟಿಯನ್ನು ಒದಗಿಸಬೇಕಾಗಿರುವುದು ಕಾನೂನಿನ ಅಗತ್ಯತೆಯಾಗಿದೆ. ಅಲ್ಲದೇ ಗರಿಷ್ಟ ಪ್ರಮಾಣದಿಂದ ಕನಿಷ್ಟ ಪ್ರಮಾಣದವರೆಗೆ ಇವನ್ನು ಪಟ್ಟಿಮಾಡಬೇಕಾಗುತ್ತದೆ. ಹಾಗಾಗಿ ಈ ಪಟ್ಟಿಯಲ್ಲಿ ಸಕ್ಕರೆ ಪಟ್ಟಿಯ ಮೇಲಿನ ಯಾವುದೇ ಸ್ಥಾನದಲ್ಲಿದ್ದರೆ ಈ ಉತ್ಪನ್ನದಲ್ಲಿ ಭಾರೀ ಪ್ರಮಾಣದ ಸಕ್ಕರೆ ಇದೆ ಎಂದೇ ತಿಳಿದುಕೊಳ್ಳಬೇಕು. ಈ ವಿವರವಿದ್ದರೆ ಬುದ್ದಿವಂತ ಗ್ರಾಹಕರು ಇದನ್ನು ಥಟ್ಟನೇ ಗ್ರಹಿಸಿಬಿಡುತ್ತಾರೆ ಎಂಬ ಭಯ ಈ ಸಂಸ್ಥೆಗಳಿಗಿದೆ. ಹಾಗಾಗಿ ಗ್ರಾಹಕ ಚಾಪೆ ಕೆಳಗೆ ತೂರಿದರೆ ಈ ಸಂಸ್ಥೆಗಳು ರಂಗೋಲಿ ಕೆಳಗೆ ತೂರುವ ಕೆಲಸವನ್ನು ಮಾಡುತ್ತವೆ. ಅಂದರೆ ಈ ಸಕ್ಕರೆಯನ್ನು ಬೇರೆ ಬೇರೆಯಾಗಿ ವಿಂಗಡಿಸಿ ಪಟ್ಟಿಯ ಕೆಳಭಾಗದಲ್ಲಿ ಬರುವಂತೆ ಮಾಡುತ್ತವೆ. ಉದಾಹರಣೆಗೆ ಒಂದು ಉತ್ಪನ್ನದಲ್ಲಿ high-fructose corn syrup, evaporated cane juice, ಮತ್ತು ಸಕ್ಕರೆ ಎಂದು ಬರೆದು ಪ್ರಕಟಿಸಿದ್ದರೂ ಇವೆಲ್ಲವೂ ಸಕ್ಕರೆಯ ಬೇರೆ ಬೇರೆ ಮೂಲಗಳೇ ಆಗಿದ್ದು ಮೂಲತಃ ಸಕ್ಕರೆಯೇ ಆಗಿದೆ.

ಈ ಮೂಲಕ ಕಾನೂನನ್ನು ಪಾಲಿಸಿಯೂ ಸಂಸ್ಥೆಗಳು ಗ್ರಾಹಕರನ್ನು ವಂಚಿಸಿ ಆರೋಗ್ಯಕರ ಎಂದು ಗ್ರಾಹಕ ಭಾವಿಸುವ ಸಾಮಾಗ್ರಿಯನ್ನೇ ಪಟ್ಟಿಯ ಮೇಲ್ಭಾಗದಲ್ಲಿರಿಸುತ್ತವೆ. ಗ್ರಾಹಕರಿಗೆ ಈ ಮೂರೂ ಸಾಮಾಗ್ರಿಗಳು ಒಂದೇ, ಇವನ್ನು ಕೂಡಿಸಿದರೆ ಸಕ್ಕರೆಯನ್ನು ಪಟ್ಟಿಯ ಮೇಲ್ಭಾಗಕ್ಕೇರಿಸಬೇಕಾಗುತ್ತದೆ ಎಂದು ಆಲೋಚಿಸುವಷ್ಟು ವ್ಯವಧಾನ ನೀಡದಂತೆ ಈ ಸಂಸ್ಥೆಗಳು ಮೋಸ ಮಾಡುತ್ತವೆ.

ಸಾರಾಂಶ:

ನೀವು ಕೊಳ್ಳಬಯಸುವ ಉತ್ಪನ್ನದ ಸಾಮಾಗ್ರಿಗಳ ಪಟ್ಟಿಯಲ್ಲಿ ಸಕ್ಕರೆಯ ಸಮಾನಾಂತರ ಹೆಸರುಗಳಿರುವ ಸಾಮಾಗ್ರಿಗಳಿವೆಯೇ ಎಂದು ಗಮನಿಸಿ. ಹೌದು ಎಂದಾದರೆ ಇವು ನಿಮ್ಮನ್ನು ದಾರಿ ತಪ್ಪಿಸಲು ಒಂದೇ ಸಾಮಗ್ರಿಯನ್ನು ಮೂರು ಅಥವಾ ಹೆಚ್ಚಿನ ಉಪ ಸಾಮಾಗ್ರಿಗಳ ಹೆಸರಿನಲ್ಲಿ ಮುದ್ರಿಸಿರಬಹುದು.

Most Read: ನಿಮಗೆ ಮಹಿಳೆಯರ ದೇಹದ ಬಗ್ಗೆ ತಿಳಿಯದೇ ಇರುವ ಕೆಲವೊಂದು ಸಂಗತಿಗಳು

ಒಂದು ಪ್ರಮಾಣದಲ್ಲಿರುವ ಕ್ಯಾಲೋರಿಗಳು (Calories per Serving)

ಒಂದು ಪ್ರಮಾಣದಲ್ಲಿರುವ ಕ್ಯಾಲೋರಿಗಳು (Calories per Serving)

ಉತ್ಪನ್ನದ ಒಂದು ಪ್ರಮಾಣದಲ್ಲಿರುವ ಕ್ಯಾಲೋರಿಗಳೌ ಮತ್ತು ಸಕ್ಕರೆಯ ಅಂಶವನ್ನು ಸಾಮಾನ್ಯವಾಗಿ ಮರೆಮಾಚಲಾಗುತ್ತದೆ, ಹೇಗೆಂದರೆ ಈ ಪೊಟ್ಟಣದಲ್ಲಿರುವ ಒಟ್ಟು ಪ್ರಮಾಣ ಒಂದು ಪ್ರಮಾಣಕ್ಕಿಂತಲೂ ಹೆಚ್ಚು ಎಂದು ಪ್ರಕಟಿಸಲಾಗುತ್ತದೆ.

ಉದಾಹರಣೆಗೆ, ಉತ್ಪನ್ನವೊಂದರ ನಿರ್ಮಾಣಸಂಸ್ಥೆ ಒಂದು ಪೊಟ್ಟಣದಲ್ಲಿ ಎರಡು ಪ್ರಮಾಣದಷ್ಟು ಉತ್ಪನ್ನವಿದೆ ಎಂದು ಚಿಕ್ಕದಾಗಿ ಮುದ್ರಿಸಿ ಪ್ರತಿ ಪ್ರಮಾಣದಲ್ಲಿ ಇಷ್ಟು ಕ್ಯಾಲೋರಿ ಇದೆ ಎಂದು ಪ್ರಕಟಿಸುತ್ತದೆ. ಆದರೆ ಈ ಚಿಕ್ಕ ಮುದ್ರಣವನ್ನು ಓದದೇ, ಇಡಿಯ ಪೊಟ್ಟಣವನ್ನು ಸೇವಿಸಿದಾಗ ಈ ಕ್ಯಾಲೋರಿಗಳು ಲಭಿಸುತ್ತವೆ ಎಂಬ ತಪ್ಪು ಮಾಹಿತಿ ಪಡೆಯುತ್ತಾರೆ. ಹಾಗಾಗಿ ಇವರು ಅರಿವಿಲ್ಲದೇ ಎರಡು ಪ್ರಮಾಣವನ್ನು ಒಂದು ಪ್ರಮಾಣ ಎಂದು ಭಾವಿಸಿ ಸೇವಿಸುತ್ತಾರೆ, ಸಂಸ್ಥೆಗೆ ಬೇಕಾಗಿರುವುದೂ ಇದೇ!

ಹಾಗಾಗಿ ಉತ್ಪನ್ನದ ವಿವರಗಳನ್ನು ಓದುವಾಗ, ಇದರಲ್ಲಿ ಎಷ್ಟು ಪ್ರಮಾಣವಿದೆ ಎಂಬುದನ್ನು ಗಮನಿಸಿ. ಒಂದು ವೇಳೆ ಇದರಲ್ಲಿ ಎರಡು ಪ್ರಮಾಣವಿದ್ದು ಪ್ರತಿ ಪ್ರಮಾಣದಲ್ಲಿ ಇನ್ನೂರು ಕ್ಯಾಲೋರಿಗಳಿದ್ದರೆ ಈ ಪೊಟ್ಟಣವನ್ನು ಸೇವಿಸಿದಾಗ ನಾನೂರು ಕ್ಯಾಲೋರಿಗಳು ಲಭಿಸುತ್ತವೆ.

ಉದಾಹರಣೆಗೆ 24-ounce (.7-liter) ಕೋಲಾ ಬಾಟಲಿಯಲ್ಲಿ ಒಂದು ಪ್ರಮಾಣದಲ್ಲಿ ನೂರು ಕ್ಯಾಲೋರಿಗಳು ಮತ್ತು 27ಗ್ರಾಂ ಸಕ್ಕರೆ ಇದ್ದರೆ ಒಟ್ಟು ಮೂರು ಪ್ರಮಾಣ ಇರುವ ಈ ಬಾಟಲಿ ಕೋಲಾ ಕುಡಿಯುವ ಮೂಲಕ ಮುನ್ನೂರು ಕ್ಯಾಲೋರಿಗಳು ಮತ್ತು 81ಗ್ರಾಂ ಸಕ್ಕರೆ ದೊರಕುತ್ತದೆ.

ಸಾರಾಂಶ: ಯಾವುದೇ ಉತ್ಪನ್ನ ಕೊಳ್ಳುವ ಮುನ್ನ ಇದರಲ್ಲಿ ಎಷ್ಟು ಪ್ರಮಾಣ ಇದೆ ಎಂದು ಗಮನಿಸಿ, ಪ್ರತಿ ಪ್ರಮಾಣದಿಂದ ದೊರಕುವ ಕ್ಯಾಲೋರಿಯಿಂದ ಗುಣಿಸಿದಾಗಲೇ ಈ ಉತ್ಪನ್ನದ ಪೂರ್ಣ ಸೇವನೆಯಿಂದ ಎಷ್ಟು ಕ್ಯಾಲೊರಿಗಳು ದೊರಕುತ್ತವೆ ಎಂದು ಲೆಕ್ಕ ಹಾಕಿದ ಬಳಿಕವೇ ಸೂಕ್ತ ಪ್ರಮಾಣವನ್ನು ಮಾತ್ರವೇ ಸೇವಿಸಿ.

ಹಣ್ಣಿನ ಸ್ವಾದವುಳ್ಳ (Fruit-Flavored)

ಹಣ್ಣಿನ ಸ್ವಾದವುಳ್ಳ (Fruit-Flavored)

ಹೆಚ್ಚಿನ ಸಂಸ್ಕರಿತ ಉತ್ಪನ್ನಗಳಿಗೆ ಈ ರುಚಿಯಾದ ಹೆಸರಿರುತ್ತದೆ. ಏಕೆಂದರೆ ಈ ಹೆಸರುಗಳು ಜನರಿಗೆ ಹೆಚ್ಚು ಪರಿಚಿತ ರುಚಿಗಳ ಹೆಸರನ್ನೇ ಹೊಂದಿರುತ್ತವೆ. ಉದಾಹರಣೆಗೆ ಕಿತ್ತಳೆ ರುಚಿಯುಳ್ಳ ವಿಟಮಿನ್ ನೀರು. ವಾಸ್ತವವಾಗಿ ಈ ಉತ್ಪನ್ನದಲ್ಲಿ ಕಿತ್ತಳೆ ಇರುವುದೇ ಇಲ್ಲ! ಬದಲಿಗೆ, ಈ ರುಚಿಯನ್ನು ಕೃತಕವಾಗಿ ತಯಾರಿಸಲಾಗಿದ್ದು ರಾಸಾಯನಿಕಗಳಿಂದ ತುಂಬಿದೆ.

ಹಾಗಾಗಿ, ಈ ರುಚಿಯ ಹೆಸರಿನ ಸ್ವಾದ ಇದೆ ಎಂದ ಮಾತ್ರಕ್ಕೇ ಇದರಲ್ಲಿ ಆ ಹಣ್ಣು ಇರಬೇಕಾಗಿಲ್ಲ. ಆದರೆ ಗ್ರಾಹಕರಿಗೆ ಇಷ್ಟವಾಗುವ ಮತ್ತು ಚಿರಪರಿಚಿತ ಹೆಸರುಗಳನ್ನೇ ಉಪಯೋಗಿಸಲಾಗುತ್ತದೆ. ಉದಾಹರಣೆಗೆ ಬ್ಲೂಬೆರಿ, ಸ್ಟ್ರಾಬೆರಿ, ಆರೆಂಜ್ ಇತ್ಯಾದಿ.

ಸಾರಾಂಶ: ಉತ್ಪನ್ನದ ಮೇಲೆ ಚಿರಪರಿಚಿತ ಹಣ್ಣಿನ ಚಿತ್ರವಿದ್ದು ಇದರ ರುಚಿಯನ್ನು ಹೊಂದಿದೆ ಎಂದ ಮಾತ್ರಕ್ಕೇ ಇದರಲ್ಲಿ ಆ ಹಣ್ಣಿನ ಅಂಶ ಲವಲೇಶವೂ ಇರಬೇಕಾಗಿಲ್ಲ. ವಾಸ್ತವವಾಗಿ ಇವು ಆ ರುಚಿ ಹೊಂದಿರುವ ಅಪಾಯಕಾರಿ ರಾಸಾಯನಿಕಗಳಾಗಿವೆ.

Most Read: ಸಾಮರ್ಥ್ಯವನ್ನು ಹೆಚ್ಚಿಸುವ 20 ಸಸ್ಯಾಹಾರಿ ಆಹಾರಗಳು

ಆರೋಗ್ಯಕರ ಸಾಮಾಗ್ರಿಗಳ ಅಲ್ಪ ಪ್ರಮಾಣ (Small Amounts of Healthy Ingredients)

ಆರೋಗ್ಯಕರ ಸಾಮಾಗ್ರಿಗಳ ಅಲ್ಪ ಪ್ರಮಾಣ (Small Amounts of Healthy Ingredients)

ಸಂಸ್ಕರಿತ ಆಹಾರಗಳಲ್ಲಿ ಅಲ್ಪ ಮಟ್ಟಿಗೆ ಆರೋಗ್ಯಕರ ಆಹಾರಸಾಮಾಗ್ರಿಗಳಿವೆ ಎಂದು ಮುದ್ರಿಸಲಾಗಿರುತ್ತದೆ. ಇದೊಂದು ಅಪ್ಪಟ ಮಾರುಕಟ್ಟೆಯ ತಂತ್ರವಾಗಿದೆ. ಅಮಿತಾಭ್ ಬಚ್ಚನ್ ತಲೆಗೆ ಹಾಕುವ ತೈಲದ ಜಾಹೀರಾತಿನಲ್ಲಿ ಕಾಣಿಸಿಕೊಂಡ ಮಾತ್ರಕ್ಕೆ ಅವರು ಸ್ವತಃ ಆ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುತ್ತಾರೆ ಎಂದು ಅರ್ಥವಲ್ಲ. ಹಾಗೆಯೇ ಈ ಉತ್ಪನ್ನಗಳಲ್ಲಿ ಇವರು ವಿವರಿಸಿರುವ ಆರೋಗ್ಯಕರ ಆಹಾರಸಾಮಾಗ್ರಿಗಳಿವೆ ಎಂದ ಮಾತ್ರಕ್ಕೇ ಇವು ಈ ಉತ್ಪನ್ನದಲ್ಲಿರುವ ಇತರ ಹಾನಿಕರ ಸಾಮಗ್ರಿಗಳ ಪ್ರಾಬಲ್ಯವನ್ನು ಕುಂದಿಸಿಬಿಡುತ್ತವೆ ಎಂದು ಭಾವಿಸಲಾಗದು. ಇವು ಕೇವಲ ಗ್ರಾಹಕರ ಕಣ್ಣಿಗೆ ಮಣ್ಣೆರೆಚಲು ಮಾತ್ರವೇ 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಎಂಬಂತೆ ಇರುತ್ತವೆ ಅಷ್ಟೇ. ಸಾಮಾನ್ಯವಾಗಿ ಈ ಆಹಾರಸಾಮಾಗ್ರಿಗಳಲ್ಲಿ 'ಒಮೆಗಾ -3', ಆಂಟಿ ಆಕ್ಸಿಡೆಂಟುಗಳು, ಇಡಿಯ ಧಾನ್ಯಗಳು ಎಂದೆಲ್ಲಾ ಇರುತ್ತವೆ.

ಸಾರಾಂಶ: ಈ ಉತ್ಪನ್ನಗಳಲ್ಲಿ ಅಲ್ಪ ಪ್ರಮಾಣದ ಆರೋಗ್ಯರಕ ಆಹಾರಸಾಮಾಗ್ರಿಗಳನ್ನು ಬೆರೆಸಲಾಗಿದೆ ಎಂದು ಉತ್ಪಾದಕರು ಭಾರೀ ಪ್ರಚಾರ ನೀಡುತ್ತಾರೆ. ಈ ಪ್ರಚಾರದಿಂದ ಗ್ರಾಹಕರು ಈ ಉತ್ಪನ್ನಗಳು ನಿಜವಾಗಿಯೂ ಆರೋಗ್ಯಕರ ಎಂದು ನಂಬುತ್ತಾರೆ.

ವಿವಾದಾತ್ಮಕ ಆಹಾರಸಾಮಾಗ್ರಿಗಳನ್ನು ಮರೆಮಾಚುವುದು

ವಿವಾದಾತ್ಮಕ ಆಹಾರಸಾಮಾಗ್ರಿಗಳನ್ನು ಮರೆಮಾಚುವುದು

ಕೆಲವು ಆಹಾರ ಸಾಮಾಗ್ರಿಗಳು ಹೆಚ್ಚಿನವರಲ್ಲಿ ಅನಾರೋಗ್ಯವನ್ನುಂಟು ಮಾಡಬಹುದು ಹಾಗೂ ಇವುಗಳ ಇರುವಿಕೆ ಗೊತ್ತಾದರೆ ಈ ವ್ಯಕ್ತಿಗಳು ಈ ಉತ್ಪನ್ನಗಳನ್ನು ಕೊಳ್ಳಲು ಹಿಂಜರಿಯುತ್ತಾರೆ. ಹಾದರೆ ಈ ವ್ಯಕ್ತಿಗಳ ಕಣ್ಣಿಗೆ ಪಟ್ಟಿ ಕಟ್ಟಲೂ ಈ ಸಂಸ್ಥೆಗಳು ಹಿಂದೆ ಮುಂದೆ ನೋಡುವುದಿಲ್ಲ. ವಿವಾದಾತ್ಮಕ ಆಹಾರಸಾಮಾಗ್ರಿಗಳ ಮಾರುಕಟ್ಟೆಯ ಬಳಕೆಯ ಹೆಸರನ್ನು ಬಳಸದೇ ಇವುಗಳ ರಾಸಾಯನಿಕ ಅಥವಾ ತಾಂತ್ರಿಕ ಹೆಸರನ್ನು ಬಳಸಲಾಗುತ್ತದೆ. ಈ ಹೆಸರುಗಳು ಜನಸಾಮಾನ್ಯರಿಗೆ ಗೊತ್ತಿರುವುದು ಸಾಧ್ಯವಿಲ್ಲ. ಅಲ್ಲದೇ ಕೆಲವು ಧರ್ಮಗಳಿಗೆ ನಿಷಿದ್ಧವಾದ ಅಂಶಗಳನ್ನು ಇವುಗಳ ಹೆಸರಿನಿಂದ ಮರೆಮಾಚಲು ಐರೋಪ್ಯ ಸಂಸ್ಥೆಗಳು ಈ ಕೋಡ್ ಎಂಬ ಹೆಸರಿನಿಂದ ಈ ಉತ್ಪನ್ನಗಳನ್ನು ಪ್ರಕಟಿಸುತ್ತವೆ. ಉದಾಹರಣೆಗೆ MSG (monosodium glutamate) ಎಂಬ (ಕರ್ನಾಟಕದಲ್ಲಿ ಟೇಸ್ಟಿಂಗ್ ಪೌಡರ್ ಎಂದು ಜನಪ್ರಿಯವಾಗಿದೆ) ಅಪಾಯಕಾರಿ ಪುಡಿಯನ್ನು E621 ಎಂದೂ carrageenan ಎಂಬ ಆಹಾರಸಾಮಾಗ್ರಿಯನ್ನು E407ಎಂದೂ ಕರೆಯಲಾಗುತ್ತದೆ. ಕೆಲವೊಮ್ಮೆ ಸುಲಭ ಹೆಸರನ್ನು ಕ್ಲಿಷ್ಟವಾಗಿಸಿ ಕರೆಯುವುದೂ ಇದೆ. ಸಂಸ್ಕರಿತ ಸಕ್ಕರೆಯನ್ನು ಹಾಗೇ ಕರೆಯುವ ಬದಲು "evaporated cane juice" ಎಂದು ಕರೆದಾಗ ಜನರಿಗೆ ಅನುಮಾನ ಬರುವುದಿಲ್ಲ.

ಸಾರಾಂಶ:ವಿವಾದಾತ್ಮಕ ಅಥವಾ ಧರ್ಮಸಮ್ಮತವಲ್ಲದ ಉತ್ಪನ್ನಗಳನ್ನು ಹೇಗಾದರೂ ಗ್ರಾಹಕರಿಗೆ ದಾಟಿಸಲು ಈ ಕೋಡ್ ಎಂಬ ಹೆಸರನ್ನು ಈ ಸಂಸ್ಥೆಗಳು ಬಳಸುತ್ತವೆ.

ಕಡಿಮೆ ಕಾರ್ಬೋಹೈಡ್ರೇಟ್ ಉಳ್ಳ ಅನಾರೋಗ್ಯಕರ ಆಹಾರಗಳು

ಕಡಿಮೆ ಕಾರ್ಬೋಹೈಡ್ರೇಟ್ ಉಳ್ಳ ಅನಾರೋಗ್ಯಕರ ಆಹಾರಗಳು

ಕಳೆದ ಒಂದೆರಡು ದಶಕಗಳಿಂದ ಈ ಬಗೆಯ ಆಹಾರಗಳು ಜನಪ್ರಿಯವಾಗಿವೆ. ಈ ಜನಪ್ರಿಯತೆಯನ್ನು ಗಮನಿಸಿದ ಸಂಸ್ಥೆಗಳು ಲಾಭ ಮಾಡಿಕೊಳ್ಳಲು ಭಾರೀ ಮಟ್ಟದ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಆದರೆ ಇದರಲ್ಲಿರುವ ತೊಂದರೆ ಎಂದರೆ low-carb ಈ ಪದವೂ ಆರೋಗ್ಯಕರ ಎಂಬ ಅರ್ಥಕ್ಕೆ ಸಮನಲ್ಲ! ಈ ಆಹಾರಗಳನ್ನು ಅನಾರೋಗ್ಯಕರ ಆಹಾರಸಾಮಾಗ್ರಿಗಳಿಂದಲೇ ತಯಾರಿಸಲಾಗಿರುತ್ತದೆ. ಉದಾಹರಣೆಗೆ Atkins low-carb bar ಎಂಬ ಉತ್ಪನ್ನವನ್ನು ಗಮನಿಸಿ, ಇದು ವಾಸ್ತವದಲ್ಲಿ ಆಹಾರವೇ ಅಲ್ಲ! ಅಲ್ಲದೇ ಕಾರ್ಬೋಹೈಡ್ರೇಟುಗಳ ಬದಲಿಗೆ ಬೆರೆಸಿರುವ ಇತರ ಸಮಾನಾಂತರ ಆಹಾರಸಾಮಾಗ್ರಿಗಳು ಸಹಾ ಕೃತಕವಾಗಿದ್ದು ಇವು ಅನಾರೊಗ್ಯಕರವೇ ಆಗಿರಬಹುದು.

ಸಾರಾಂಶ:"Low-carb" ಉತ್ಪನ್ನಗಳನ್ನು ಅತಿಯಾದ ಸಂಸ್ಕರಿತ ಅಹಾರಗಳಿಂದ ತಯಾರಿಸಲಾಗಿದ್ದು ಅತಿ ಅನಾರೋಗ್ಯಕರವಾಗಿವೆ.

Most Read: 40ರ ಹರೆಯದ ಬಳಿಕ ಸೇವಿಸಬೇಕಾದ ಆಹಾರಗಳು

“Organic” ಹೆಸರಿನ ಅನಾರೋಗ್ಯಕರ ಆಹಾರಸಾಮಾಗ್ರಿಗಳು

“Organic” ಹೆಸರಿನ ಅನಾರೋಗ್ಯಕರ ಆಹಾರಸಾಮಾಗ್ರಿಗಳು

ಸಾವಯವ ವಿಧಾನದಲ್ಲಿ ಬೆಳೆದ ಅಂಬ ಮಾಹಿತಿಯನ್ನು ಇಂದು 'ಆರ್ಗ್ಯಾನಿಕ್' ಎಂಬ ಹೆಸರಿನ ಹಣೆಪಟ್ಟಿಯ ಮೂಲಕ ಮಾರಾಟ ಮಾಡಲಾಗುತ್ತಿದೆ. ಹಣ ಮಾಡಲಿಕ್ಕೆ ಇದಕ್ಕಿಂತ ದೊಡ್ಡ ಅವಕಾಶ ಬೇಕೇ? ಈ ಉತ್ಪನ್ನ ನಿಜವಾಗಿಯೂ ಸಾವಯವ ವಿಧಾನದಲ್ಲಿಯೇ ಬೆಳೆದದ್ದು ಎಂದು ಖಚಿತಪಡಿಸಲು ಹೋಗುವವರಾದರೂ ಯಾರು? ಹೇಗೆ? ಕೇವಲ ಇದರ ಪೊಟ್ಟಣವನ್ನು ಆಕರ್ಷಕವಾಗಿಸಿ ಆರ್ಗ್ಯಾನಿಕ್ ಎಂಬ ಹಣೆಪಟ್ಟಿ ನೀಡಿದರೆ ಸಾಕು. ಉದಾಹರಣೆಗೆ "raw organic cane sugar" ಎಂಬ ಪೊಟ್ಟಣದಲ್ಲಿರುವ ಸಕ್ಕರೆ ಸಾಮಾನ್ಯ ಸಕ್ಕರೆಯೇ ಆಗಿರಬಹುದು.

ಆರ್ಗ್ಯಾನಿಕ್ ಆದ ಮಾತ್ರಕ್ಕೇ ಇದು ಆರೋಗ್ಯಕರ ಎಂದು ಸರ್ವಥಾ ಅರ್ಥವಲ್ಲ!

ಸಾರಾಂಶ:

ಇಂದು ಆರೋಗ್ಯಕರ ಆಹಾರವೇ ಎಂದು ಸಾರಿ ಹೇಳಲು ಆರ್ಗ್ಯಾನಿಕ್ ಎಂಬ ಪದವನ್ನು ಬಳಸಿ ಉತ್ಪನ್ನವನ್ನು ಅತಿ ದುಬಾರಿ ಬೆಲೆಗೆ ಮಾರಲಾಗುತ್ತದೆ. ವಾಸ್ತವದಲ್ಲಿ ಈ ಉತ್ಪನಗಳು ಇತರ ವಿಧಾನದಲ್ಲಿ ಬೆಳೆದ ಆಹಾರಗಳಿಗಿಂತ ಆರೋಗ್ಯಕರ ಎಂದು ಸರ್ವಥಾ ಅರ್ಥವಲ್ಲ.

ಒಟ್ಟಾರೆಯಾಗಿ ಹೇಳಬೇಕೆಂದರೆ, ನಮಗೆ ಸಂಸ್ಕರಿತ ಆಹಾರಗಳಿಗಿಂತ ನಿಜವಾದ ಆಹಾರಗಳೇ ಹೆಚ್ಚು ಅಗತ್ಯವಾಗಿವೆ. ಸಂಸ್ಕರಿತ ಆಹಾರಗಳನ್ನೇ ಅವಲಂಬಿಸದಿದ್ದರೆ ಇವುಗಳಲ್ಲಿರುವ ಸಾಮಾಗ್ರಿಗಳ ಬಗ್ಗೆ ತಲೆಬಿಸಿ ಮಾಡಿಕೊಳ್ಳಬೇಕಾದ ಅಗತ್ಯತೆಯೇ ಇರುವುದಿಲ್ಲ. ತಾಜಾ ಉತ್ಪನ್ನಗಳಿಗೆ ಸಾಮಾಗ್ರಿಗಳ ಪಟ್ಟಿಯ ಅವಶ್ಯಕತೆಯೇ ಇರುವುದಿಲ್ಲ!

English summary

Top Biggest Lies of the Junk Food Industry

There is no decency in the way junk food companies do their marketing. All they care about is profit and they seem willing to sacrifice even children’s health for their own monetary gain.Here are the top biggest lies of the junk food industry...have a look
X
Desktop Bottom Promotion