For Quick Alerts
ALLOW NOTIFICATIONS  
For Daily Alerts

ಅಂಡರ್ ಆ್ಯಕ್ಟಿವ್ ಥೈರಾಯ್ಡ್ ಸಮಸ್ಯೆಯಿಂದ ಹೆಚ್ಚಾದ ತೂಕ ಇಳಿಕೆಗೆ ಸಲಹೆಗಳು

|

ಥೈರಾಯ್ಡ್ ಸಮಸ್ಯೆ ಎನ್ನುವುದು ದೇಹದಲ್ಲಿ ಇರುವಂತಹ ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸದಿರುವಾಗ ಬರುವಂತಹ ಸಮಸ್ಯೆಯಾಗಿದೆ. ಇದನ್ನು ಕಾರ್ಯಚಟುವಟಿಕೆ ಇಲ್ಲದೆ ಇರುವ ಥೈರಾಯ್ಡ್(ಅಂಡರ್ ಆ್ಯಕ್ಟಿವ್) ಅಥವಾ ಹೈಪೋಥೈರಾಯ್ಡಿಸಮ್ ಎಂದು ಕೂಡ ಕರೆಯಲಾಗುತ್ತದೆ. ಈ ವೇಳೆ ಥೈರಾಯ್ಡ್ ಗ್ರಂತಿಗಳು ಸರಿಯಾಗಿ ಥೈರಾಯ್ಡ್ ಹಾರ್ಮೋನುಗಳನ್ನು ಬಿಡುಗಡೆ ಮಾಡುವುದಿಲ್ಲ. ದೇಹದೊಳಗಡೆ ವಿವಿಧ ರೀತಿಯ ಕಾರ್ಯಚಟುವಟಿಕೆಗಳು ಸರಿಯಾದ ರೀತಿಯಲ್ಲಿ ಆಗಲು ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡುವುದು ಅತೀ ಅಗತ್ಯ ಆಗಿರುವುದು. ನಾವು ಸೇವಿಸಿದಂತಹ ಆಹಾರದಲ್ಲಿರುವಂತಹ ಶಕ್ತಿಯನ್ನು ದೇಹವು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಎನ್ನುವುದನ್ನು ಇದು ನಿಯಂತ್ರಿಸುವುದು.

Thyroid

ಅಂಡರ್ ಆ್ಯಕ್ಟಿವ್ ಥೈರಾಯ್ಡ್ ಸಮಸ್ಯೆ ಇರುವಂತಹ ವ್ಯಕ್ತಿಗೆ ದೇಹದ ತೂಕವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ತುಂಬಾ ಕಠಿಣವಾಗಲಿದೆ. ಅಂಡರ್ ಆ್ಯಕ್ಟಿವ್ ಥೈರಾಯ್ಡ್ ಚಯಾಪಚಯ ಕ್ರಿಯೆಯನ್ನು ತುಂಬಾ ನಿಧಾನಗೊಳಿಸುವುದು, ಇದರಿಂದಾಗಿ ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು ಕಠಿಣವಾಗುವುದು. ಅಂಡರ್ ಆ್ಯಕ್ಟಿವ್ ಥೈರಾಯ್ಡ್ ಸಮಸ್ಯೆಯು ಇರುವಂತಹ ವ್ಯಕ್ತಿಗೆ ವ್ಯಾಯಾಮ ಮಾಡಲು ಕಷ್ಟವಾಗುವುದು ಮತ್ತು ಆತನಲ್ಲಿ ವ್ಯಾಯಾಮಕ್ಕೆ ಬೇಕಿರುವಂತಹ ಶಕ್ತಿಯು ಇರುವುದಿಲ್ಲ. ಇಂತಹ ಸಮಯದಲ್ಲಿ ನಿಮಗೆ ನಿಶ್ಯಕ್ತಿಯು ಕಾಡುವುದು ಮತ್ತು ದಿನನಿತ್ಯದ ಕೆಲಸ ಕಾರ್ಯಗಳನ್ನು ಮಾಡಲು ತುಂಬಾ ಕಷ್ಟವಾಗುವುದು. ನೀವು ಹೈಪೋಥೈರಾಯ್ಡಿಸಮ್ ನಿಂದ ಬಳಲುತ್ತಿದ್ದರೆ ಮತ್ತು ಅತಿಯಾದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸಿದ್ದರೆ ಆಗ ನೀವು ಕೆಲವೊಂದು ವಿಧಾನಗಳನ್ನು ಪಾಲಿಸಿಕೊಂಡು ಹೋಗಬೇಕು. ಇದರಿಂದ ನಿಮಗೆ ತೂಕ ಇಳಿಸಿಕೊಳ್ಳಬಹುದು.

ಔಷಧಿ ಸರಿಯಾದ ಸಮಯದಲ್ಲಿ ಸೇವಿಸಿ

ಔಷಧಿ ಸರಿಯಾದ ಸಮಯದಲ್ಲಿ ಸೇವಿಸಿ

ದೇಹದಲ್ಲಿ ಥೈರಾಯ್ಡ್ ಮಟ್ಟವನ್ನು ಸರಿಯಾದ ಕ್ರಮದಲ್ಲಿ ಇಟ್ಟುಕೊಳ್ಳಲು ನಿಮಗೆ ವೈದ್ಯರು ಮಾತ್ರೆಗಳನ್ನು ನೀಡಿರಬಹುದು. ನೀವು ಈ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ವೈದ್ಯರು ಸೂಚಿಸಿರುವಂತಹ ಎಲ್ಲಾ ರೀತಿಯ ಔಷಧಿಯನ್ನು ಸರಿಯಾದ ಕ್ರಮದಲ್ಲಿ ತೆಗೆದುಕೊಳ್ಳಬೇಕು. ಥೈರಾಯ್ಡ್ ಹಾರ್ಮೋನ್ ನ್ನು ಸಾಮಾನ್ಯ ಮಟ್ಟಕ್ಕೆ ತಲುಪಿಸಲು ಔಷಧಿಯನ್ನು ಸೂಕ್ತ ವೇಳೆಯಲ್ಲಿ ತೆಗೆದುಕೊಳ್ಳುವುದು ಅತೀ ಅಗತ್ಯವಾಗಿರುವುದು. ಸರಿಯಾದ ರೀತಿಯ ಔಷಧದ ಕ್ರಮ, ಆಹಾರ ವಿಧಾನ ಮತ್ತು ಇತರ ಕೆಲವೊಂದು ಕ್ರಮಗಳಿಂದಾಗಿ ಈ ಪರಿಸ್ಥಿತಿಯನ್ನು ನಿಯಂತ್ರಿಸಬಹುದು. ನಿಮ್ಮದೇ ಆಗಿರುವಂತಹ ಯಾವುದೆ ಔಷಧಿ ಸೇವನೆ ಮಾಡಬೇಡಿ. ಬೇರೆ ಯಾವುದೇ ಔಷಧಿ ತೆಗೆದುಕೊಳ್ಳುವುದಿದ್ದರೂ ನೀವು ಮೊದಲು ವೈದ್ಯರನ್ನು ಸಂಪರ್ಕಿಸಿ.

Most Read: ಥೈರಾಯ್ಡ್ ಗ್ರಂಥಿಯ ಅಪಾಯದ ಲಕ್ಷಣಗಳು, ಎಚ್ಚರವಾಗಿರಿ!

ಗ್ಲುಟೆನ್ ಮುಕ್ತ

ಗ್ಲುಟೆನ್ ಮುಕ್ತ

ಗ್ಲುಟೆನ್ ನಿಂದಾಗಿ ಥೈರಾಯ್ಡ್ ನ ಕಾರ್ಯದ ವೇಳೆ ಪರಿಣಾವಾಗುವುದು ಎಂದು ಹಲವಾರು ಅಧ್ಯಯನಗಳು ಕಂಡುಕೊಂಡಿವೆ. ಹೈಪೋಥೈರಾಯ್ಡಿಸಮ್ ನಿಂದ ಬಳಲುತ್ತಾ ಇದ್ದರೂ ನೀವು ಗ್ಲುಟೆನ್ ಸೇವನೆ ಕಡಿಮೆ ಮಾಡಿದರೆ ಆಗ ತೂಕ ಕಳೆದುಕೊಳ್ಳಲು ನಿಮಗೆ ಸಹಕಾರಿಯಾಗಲಿದೆ. ಗ್ಲುಟೆನ್ ಮುಕ್ತವಾಗಿರುವ ಹಲವಾರು ಆಯ್ಕೆಗಳು ನಿಮಗೆ ಇವೆ ಮತ್ತು ಅದರಿಂದಲೂ ನೀವು ಪೋಷಕಾಂಶಗಳನ್ನು ಪಡೆದುಕೊಳ್ಳಬಹುದು.

ಹೆಚ್ಚು ನೀರು ಕುಡಿಯಿರಿ

ಹೆಚ್ಚು ನೀರು ಕುಡಿಯಿರಿ

ಆರೋಗ್ಯವಾಗಿ ಇರಲು ಹೆಚ್ಚೆಚ್ಚು ನೀರು ಕುಡಿಯುವುದು ಸುಲಭದ ದಾರಿಯಾಗಿದೆ. ಇದು ಅಂಡರ್ ಆ್ಯಕ್ಟಿವ್ ಥೈರಾಯ್ಡ್ ಸಮಸ್ಯೆಯಿಂದ ತೂಕ ಕಳೆದುಕೊಳ್ಳಲು ನೆರವಾಗುವುದು. ಹೆಚ್ಚು ನೀರು ಸೇವನೆ ಮಾಡಿದರೆ ಆಗ ಚಯಾಪಚಯ ಕ್ರಿಯೆಯು ಸುಧಾರಣೆ ಆಗುವುದು. ಚಯಾಪಚಯ ಕ್ರಿಯೆಯು ಸುಧಾರಣೆ ಆದರೆ ಆಗ ತೂಕ ಕಳೆದುಕೊಳ್ಳಲು ಸಹಕಾರಿ. ಇದು ಹಸಿವು ಕಡಿಮೆ ಮಾಡುವುದು ಮತ್ತು ಜೀರ್ಣಕ್ರಿಯೆ ಸುಧಾರಣೆ ಮಾಡುವುದು. ತೇವಾಂಶದಿಂದ ಇರುವುದರಿಂದ ನಮ್ಮ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇದು ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು ಮತ್ತು ಚರ್ಮವು ಆರೋಗ್ಯವಾಗಿರಲು ಪ್ರೇರೇಪಿಸುವುದು.

Most Read: ನಿಮಗೆ ಥೈರಾಯ್ಡ್ ಸಮಸ್ಯೆ ಇದ್ದರೆ ಇಲ್ಲಿದೆ ನೋಡಿ ಸುಲಭ ಪರಿಹಾರ

ನಿಯಮಿತವಾಗಿ ವ್ಯಾಯಾಮ ಮಾಡಿ

ನಿಯಮಿತವಾಗಿ ವ್ಯಾಯಾಮ ಮಾಡಿ

ಕೇವಲ ಆಹಾರದಲ್ಲಿ ಪಥ್ಯ ಮಾಡಿದರೆ ಅದರಿಂದ ತೂಕ ಕಳೆದುಕೊಳ್ಳಲು ಸಹಕಾರಿಯಾಗದು. ನಿಮಗೆ ಬದಲಾವಣೆ ಬೇಕಾದರೆ ಆಗ ನೀವು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಮೂಲಕವಾಗಿ ನೀವು ಅಂಡರ್ ಆ್ಯಕ್ಟಿವ್ ಸಮಸ್ಯೆ ಇರುವಾಗಲೂ ತೂಕ ಕಡಿಮೆ ಮಾಡಬಹುದು. ಚಯಾಪಚಯ ವ್ಯವಸ್ಥೆಯು ಸರಿಯಾಗಿದ್ದರೆ ಆಗ ನೀವು ಕೊಬ್ಬನ್ನು ಪರಿಣಾಮಕಾರಿ ಹಾಗೂ ವೇಗವಾಗಿ ಕರಗಿಸುವಿರಿ. ನಿಯಮಿತ ವ್ಯಾಯಾಮ ಚಯಾಪಚಯ ಸುಧಾರಣೆ ಮಾಡಲು ನೆರವಾಗುವುದು. ಇದು ರಕ್ತದಲ್ಲಿರುವಂತಹ ಸಕ್ಕರೆ ಮಟ್ಟವನ್ನು ತಗ್ಗಿಸುವುದು ಮತ್ತು ತೂಕ ಕಳೆದುಕೊಳ್ಳಲು ಬೇಕಾಗಿರುವಂತಹ ಹಾರ್ಮೋನ್ ನ್ನು ಬೆಂಬಲಿಸುವುದು. ನೀವು ದಿನವಿಡಿ ಏನಾದರೂ ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳಿ ಮತ್ತು ಆದಷ್ಟು ಮಟ್ಟಿಗೆ ದೈಹಿಕವಾಗಿ ಚಟುವಟಿಕೆಯಿಂದ ಇರಿ.

ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸಿ

ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸಿ

ನೀವು ಸಣ್ಣ ಪ್ರಮಾಣದಲ್ಲಿ ಮತ್ತು ನಿರಂತರವಾಗಿ ಆಹಾರ ಸೇವನೆ ಮಾಡಿ. ಒಮ್ಮೆಲೇ ನೀವು ಅತಿಯಾಗಿ ಆಹಾರ ಸೇವಿಸಬೇಡಿ. ನೀವು ನಿರಂತರವಾಗಿ ಆಹಾರ ಸೇವಿಸಬಹುದು. ಆದರೆ ಸಣ್ಣ ಸಣ್ಣ ಪ್ರಮಾಣದಲ್ಲಿ ಇದನ್ನು ಸೇವಿಸಬೇಕು. ಎಲ್ಲಾ ರೀತಿಯ ಪೋಷಕಾಂಶಗಳು ಇರುವಂತಹ ಆಹಾರ ಸೇವನೆ ಮಾಡಿ. ಅತಿಯಾಗಿ ಸಕ್ಕರೆ ಸೇವನೆ ಮಾಡಬೇಡಿ. ಸಂಸ್ಕರಿತ ಆಹಾರ ಸೇವನೆ ಕಡಿಮೆ ಮಾಡಿ. ಆರೋಗ್ಯಕಾರಿ ಕೊಬ್ಬು ತಿನ್ನಿ ಮತ್ತು ಕಾರ್ಬೊಹೈಡ್ರೇಟ್ಸ್ ಕಡಿಮೆ ಸೇವಿಸಿ.

English summary

Tips to Lose Weight With an Underactive Thyroid

Underactive thyroid or hypothyroidism is a condition in which the thyroid gland does not produce enough thyroid hormone. The thyroid gland is very essential to perform various essential functions inside the human body. Mainly, it controls how the body uses the energy produced by the food consumed. It becomes very difficult for a person with an underactive thyroid to maintain a healthy weight. An underactive thyroid slows down the metabolism, which makes it very difficult to lose weight.
X
Desktop Bottom Promotion