For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಕ್ಯಾನ್ಸರ್‌ಗೆ ಕಾರಣವಾಗುವ ಕೆಲವು ಕೆಟ್ಟ ಅಭ್ಯಾಸಗಳು

|

ಮನುಷ್ಯ ಆಧುನಿಕ ಜಗತ್ತಿಗೆ ಹೊಂದಿಕೊಳ್ಳುತ್ತಾ ಹೋಗುತ್ತಿರುವಂತಹ ಕಾಯಿಲೆಗಳು ಹಾಗೂ ಮಾರಕ ಕಾಯಿಲೆಗಳ ಪ್ರಮಾಣವು ವೃದ್ಧಿಸುತ್ತಲೇ ಇದೆ. ಮುಖ್ಯವಾಗಿ ಇಂದು ನಮಗೆ ಕಂಡುಬರುವುದು ಕ್ಯಾನ್ಸರ್ ಎನ್ನುವ ಮಾರಕ ಕಾಯಿಲೆ. ಕ್ಯಾನ್ಸರ್ ನಲ್ಲಿ ಹಲವಾರು ವಿಧಗಳು ಇವೆ. ಪ್ರತಿಯೊಂದಕ್ಕೂ ತನ್ನದೇ ಆಗಿರುವ ತೀವ್ರತೆ ಹಾಗೂ ಗುಣಲಕ್ಷಣಗಳು ಇರುವುದು. ಕ್ಯಾನ್ಸರ್ ನಿಂದಾಗಿ ಬಡಜನರು ಚಿಕಿತ್ಸೆ ಮಾಡಲು ಸಾಧ್ಯವಾಗದೆ ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿಯು ಭಾರತ ಸಹಿತ ಹಲವಾರು ರಾಷ್ಟ್ರಗಳಲ್ಲಿ ಇದೆ. ನಮ್ಮ ಜೀವನಶೈಲಿ ಹಾಗೂ ಸೇವಿಸುವಂತಹ ಆಹಾರವು ಇದರಲ್ಲಿ ಪ್ರಮುಖ ಪಾತ್ರ ವಹಿಸುವುದು.

ಸೇವಿಸುವಂತಹ ಆಹಾರವು ಆರೋಗ್ಯಕಾರಿಯಾಗಿದ್ದರೆ ಆಗ ಯಾವುದೇ ರೀತಿಯ ಕಾಯಿಲೆಯನ್ನು ತಡೆಯುವಂತಹ ಶಕ್ತಿಯು ದೇಹಕ್ಕೆ ಸಿಗುವುದು. ಹೊಟ್ಟೆಯ ಕ್ಯಾನ್ಸರ್ ಎನ್ನುವುದು ಕ್ಯಾನ್ಸರ್ ನಲ್ಲಿ ಒಂದಾಗಿದ್ದು, ವಿಶ್ವದಲ್ಲಿ ಇಂದು ಅತಿಯಾಗಿ ಕಂಡುಬರುತ್ತಿದೆ. 2018ರಲ್ಲಿ ಹೊಟ್ಟೆಯ ಕ್ಯಾನ್ಸರ್ ನ ಒಂದು ಮಿಲಿಯನ್ ಪ್ರಕರಣಗಳು ಕಂಡುಬಂದಿದೆ. ಹೊಟ್ಟೆಯ ಒಳಪದರದಲ್ಲಿ ಇದರ ಕೋಶಗಳು ಆರಂಭವಾಗಿ ನಿಧಾನವಾಗಿ ಅದು ಹೊಟ್ಟೆಯ ಹೊರಭಾಗದ ಗೋಡೆಯಲ್ಲಿ ಕಂಡುಬರುವುದು. ಹೊಟ್ಟೆಯ ಕ್ಯಾನ್ಸರ್ ನ ಕೆಲವೊಂದು ಲಕ್ಷಣಗಳು ಈ ರೀತಿಯಾಗಿ ಇದೆ. ವಾಕರಿಕೆ, ಭೇದಿ, ನಿಶ್ಯಕ್ತಿ, ಮಲಬದ್ಧತೆ, ಹಸಿವಾಗದೆ ಇರುವುದು, ಊಟದ ಬಳಿಕ ಹೊಟ್ಟೆ ಉಬ್ಬರ, ಹಠಾತ್ ತೂಕ ಇಳಿಕೆ, ಮಲದಲ್ಲಿ ರಕ್ತ ಹೋಗುವುದು.

ಹೊಟ್ಟೆಯ ಕ್ಯಾನ್ಸರ್ ನ ವಿಧಗಳು

ಹೊಟ್ಟೆಯ ಕ್ಯಾನ್ಸರ್ ನ ವಿಧಗಳು

ಹೊಟ್ಟೆಯ ಕ್ಯಾನ್ಸರ್ ನ್ನು ಅದು ಯಾವ ಅಂಗಾಂಶಗಳಿಂದ ಬಂದಿದೆ ಎನ್ನುವುದನ್ನು ತಿಳಿದುಕೊಂಡು ವಿಂಗಡಿಸಲಾಗುತ್ತದೆ. ತುಂಬಾ ಸಾಮಾನ್ಯವಾಗಿ ಕಂಡುಬರುವಂತಹ ಹೊಟ್ಟೆಯ ಕ್ಯಾನ್ಸರ್ ನಲ್ಲಿ ಅಡಿನೋಕಾರ್ಸಿನೋಮ ಒಂದು. ಹೊಟ್ಟೆಯ ಕ್ಯಾನ್ಸರ್ ನ ಶೇ.90ರಿಂದ 95ರಷ್ಟು ಜನರಲ್ಲಿ ಇದು ಕಂಡು ಬಂದಿದೆ. ಹೊಟ್ಟೆಯ ಗ್ರಂಥಿಗಳ ಅಂಗಾಂಶದಲ್ಲಿ ಇದು ಆರಂಭವಾಗುವುದು. ಲಿಂಫೋಮಾಸ್(ಲಿಂಫೋಮಸ್ ವ್ಯವಸ್ಥೆಯಲ್ಲಿ ಕಂಡುಬರುವುದು) ಎನ್ನುವುದು ಇನ್ನೊಂದು ರೀತಿಯ ಹೊಟ್ಟೆಯ ಕ್ಯಾನ್ಸರ್ ನ ವಿಧವಾಗಿದೆ. ಸರ್ಕೋಮಾಸ್ (ಸ್ನಾಯು, ಕೊಬ್ಬು ಅಥವಾ ರಕ್ತನಾಳಗಳ ಸಂಪರ್ಕ ಕಲ್ಪಿಸುವ ಅಂಗಾಂಶದಲ್ಲಿ ಕಂಡುಬರುವುದು.)

ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗುವಂತಹ ಕೆಲವು ಅಭ್ಯಾಸಗಳು

ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗುವಂತಹ ಕೆಲವು ಅಭ್ಯಾಸಗಳು

ದಿನನಿತ್ಯದ ಕೆಲವೊಂದು ಅಭ್ಯಾಸಗಳಿಂದಾಗಿ ಹೊಟ್ಟೆಯ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಇದರಲ್ಲಿ ಐದು ಅಭ್ಯಾಸಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

Most Read:ಲಾಭಕ್ಕಾಗಿ ಸಿದ್ಧ ಆಹಾರ ಸಂಸ್ಥೆಗಳು ಹೇಳುವ ಅತಿದೊಡ್ಡ ಹನ್ನೊಂದು ಸುಳ್ಳುಗಳು!!

ಅನಿಯಮಿತ ಆಹಾರ ಸೇವನೆ ಸಮಯ

ಅನಿಯಮಿತ ಆಹಾರ ಸೇವನೆ ಸಮಯ

ನಿಯಮಿತವಾಗಿ ಆಹಾರ ಸೇವನೆ ಮಾಡುವಂತಹ ಜನರಲ್ಲಿ ಹೊಟ್ಟೆಯ ಕ್ಯಾನ್ಸರ್ ನ ಸಮಸ್ಯೆಯು ಬೇರೆ ಜನರಿಗಿಂತ ಕಡಿಮೆ ಕಾಣಿಸಿಕೊಳ್ಳುವುದು. ನಾವು ಸರಿಯಾದ ಆಹಾರ ಸಮಯವನ್ನು ಪಾಲಿಸಿಕೊಂಡು ಹೋದರೆ ಆಗ ಹೊಟ್ಟೆಯು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವುದು. ಸರಿಯಾದ ಸಮಯದಲ್ಲಿ ಆಹಾರ ಸೇವನೆ ಮಾಡಿದರೆ ಆ ವೇಳೆ ಹೊಟ್ಟೆಯು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳುವುದು ಮತ್ತು ಹೊಟ್ಟೆಗೆ ಯಾವುದೇ ರೀತಿಯ ಹಾನಿ ಉಂಟು ಮಾಡುವುದಿಲ್ಲ. ಹೊಟ್ಟೆಯ ಆರೋಗ್ಯಕ್ಕಾಗಿ ನೀವು ಒಂದು ನಿಗದಿತ ಸಮಯದಲ್ಲಿ ಆಹಾರ ಸೇವನೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.ನೀವು ನಿಗದಿತ ಸಮಯದಲ್ಲಿ ಆಹಾರ ಸೇವನೆ ಮಾಡದೆ ಇದ್ದರೆ ಆಗ ನೀವು ಬೇರೆ ತಿಂಡಿ ತಿನ್ನುವಿರಿ. ಇದರಿಂದ ಹೊಟ್ಟೆಯ ಆರೋಗ್ಯವು ಕೆಡುವುದು.

ಬಿಸಿಯಾದ ಆಹಾರ

ಬಿಸಿಯಾದ ಆಹಾರ

ಬಿಸಿ ಬಿಸಿಯಾಗಿರುವಂತಹ ಆಹಾರವು ಜೀರ್ಣಕ್ರಿಯೆ ವ್ಯವಸ್ಥೆಗೆ ತುಂಬಾ ಮಾರಕವಾಗಿರುವುದು. ಯಾಕೆಂದರೆ ಜೀರ್ಣಕ್ರಿಯೆ ವ್ಯವಸ್ಥೆಯು ಸುಮಾರು 50-60 ಡಿಗ್ರಿ ಬಿಸಿಯಾಗಿರುವಂತಹ ಆಹಾರವನ್ನು ಮಾತ್ರ ನಿಭಾಯಿಸಬಲ್ಲದು. ಇದರಿಂದಾಗಿ ಹೊಟ್ಟೆಯಲ್ಲಿ ಸುಟ್ಟ ಗಾಯವಾಗಬಹುದು ಮತ್ತು ಕೆಲವೊಂದು

ಬದಲಾವಣೆಗಳು ಆಗಬಹುದು. ಇದು ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗಬಹುದು. ಇದರಿಂದ ನೀವು ಅತಿಯಾಗಿ ಬಿಸಿಯಾಗಿ ರುವಂತಹ ಆಹಾರ ಸೇವನೆ ಮಾಡುವುದನ್ನು ಕಡೆಗಣಿಸಿ, ಯಾಕೆಂದರೆ ಇದು ಆರೋಗ್ಯ ಸಮಸ್ಯೆ ಉಂಟು ಮಾಡಬಹುದು.

ಆಮ್ಲೀಯ ಹಣ್ಣುಗಳು

ಆಮ್ಲೀಯ ಹಣ್ಣುಗಳು

ಯಾರಿಗಾದರೂ ಹಸಿವಿನ ಬಯಕೆ ಆದರೆ ಆಗ ಅವರು ನೇರವಾಗಿ ಹೋಗಿ ಆಮ್ಲೀಯ ಹಣ್ಣುಗಳ ಸೇವನೆ ಮಾಡುವರು. ಆದರೆ ಇದು ಹೊಟ್ಟೆಗೆ ತೊಂದರೆ ನೀಡುವುದು. ಖಾಲಿ ಹೊಟ್ಟೆಯಲ್ಲಿ ಲಿಂಬೆರಸ ಅಥವಾ ಬೆರ್ರಿ ಹಣ್ಣುಗಳ ಜ್ಯೂಸ್ ಸೇನೆ ಮಾಡುವ ಕಾರಣ ದಿಂದಾಗಿ ಅದು ಹೊಟ್ಟೆಯಲ್ಲಿ ಬೇರೆ ರೀತಿಯ ಸಮಸ್ಯೆಗೆ ಕಾರಣವಾಗುವುದು. ಇದು ದೇಹದಲ್ಲಿ ದೊಡ್ಡ ಮಟ್ಟದ ಬೊಕ್ಕೆ ಉಂಟು ಮಾಡುವುದು. ಇದರಿಂದ ಹೊಟ್ಟೆಯಲ್ಲಿ ವಾಯುವಿನ ಒತ್ತಡವು ಹೆಚ್ಚಾಗುವುದು ಮತ್ತು ಇತರ ಕೆಲವೊಂದು ಲಕ್ಷಣಗಳು ಕೂಡ ಕಾಣಿಸಿಕೊಳ್ಳುವುದು.

Most Read:ಬಾಯಿಯ ಹುಣ್ಣೇ? ತುಳಸಿ ಎಲೆಗಳನ್ನು ಜಗಿಯಿರಿ-ಕೂಡಲೇ ಕಡಿಮೆ ಆಗುತ್ತದೆ

ತಂಬಾಕು ಬಳಕೆ

ತಂಬಾಕು ಬಳಕೆ

ನಿಯಮಿತವಾಗಿ ತಂಬಾಕು ಸೇವನೆ ಮಾಡುವ ಪರಿಣಾಮವಾಗಿ ಹೊಟ್ಟೆಯ ಕ್ಯಾನ್ಸರ್ ನ ಸಾಧ್ಯತೆಯು ಹೆಚ್ಚಾಗಿ ಇರುವುದು. ಹೊಟ್ಟೆಯ ಸಮೀಪಕ್ಕೆ ಇರುವ ಭಾಗದಲ್ಲಿ. ಹೊಟ್ಟೆಯ ಒಂದು ಭಾಗವು ಅನ್ನನಾಳಕ್ಕೆ ತುಂಬಾ ಸಮೀಪ ವಾಗಿರುವುದು. ದೀರ್ಘಕಾಲದಿಂದ ತಂಬಾಕು ಸೇವನೆ ಮಾಡುತ್ತಲಿದ್ದರೆ ಆಗ ತಕ್ಷಣವೇ ನೀವು ಇದನ್ನು ಬಿಟ್ಟುಬಿಡಬೇಕು. ಈ ಅಭ್ಯಾಸವು ನಿಮಗೆ ಯಾವುದೇ ರೀತಿಯಿಂದಲೂ ಒಳ್ಳೆಯದು ಮಾಡದು. ಆದರೆ ಆರೋಗ್ಯದ ಅಪಾಯವನ್ನು ಮತ್ತಷ್ಟು ಹೆಚ್ಚು ಮಾಡುವುದು. ಇದರಿಂದ ಪ್ರಾಣಹಾನಿಯು ಸಂಭವಿಸಬಹುದು.

ಇತರ ಕೆಲವೊಂದು ಅಪಾಯಗಳು

ಇತರ ಕೆಲವೊಂದು ಅಪಾಯಗಳು

*ಆಲ್ಕೋಹಾಲ್ ಬಳಕೆ

*ಗ್ಯಾಸ್ಟ್ರಿಕ್ ಸಮಸ್ಯೆ

*ಹೊಟ್ಟೆಯ ಸಮಸ್ಯೆಯ ಇತಿಹಾಸ

ಹೆಲಿಕೋಬ್ಯಾಕ್ಟರ್ ಪೈಲೋರಿ ಸೋಂಕು- ಎಚ್. ಪೈಲೋರಿ ಬ್ಯಾಕ್ಟೀರಿಯಾದಿಂದ ಬರುವುದು. ಇದು ಹೊಟ್ಟೆಯ ಕ್ಯಾನ್ಸರ್ ನ ಅಪಾಯವನ್ನು ಅತಿಯಾಗಿ ಹೆಚ್ಚಿಸುವುದು.

English summary

These bad Habits That May Trigger Stomach Cancer!

Stomach cancer is categorized on the basis of the type of tissue where they originate from. The most common stomach cancer is adenocarcinoma, accounting for 90% to 95% of all stomach cancers, starts in the glandular tissue of the stomach. Among other forms of stomach cancer include lymphomas (originate in the lymphatic system) and sarcomas (involve the connective tissue such as muscle, fat, or blood vessels).
X
Desktop Bottom Promotion