For Quick Alerts
ALLOW NOTIFICATIONS  
For Daily Alerts

ಗಂಡನಿಗೆ ಶೀತ-ನಗಡಿ ಇರುವಾಗ ಸೆಕ್ಸ್ ನಡೆಸುವುದು ಎಷ್ಟು ಸೂಕ್ತ?

By S.kalagi
|

ಚಳಿಗಾಲ ಹಾಗೂ ಮಳೆಗಾಲದ ಆರಂಭದಲ್ಲಿ ಶೀತ ನೆಗಡಿಯ (ಫ್ಲೂ) ಬಾಧೆ ಸಾಮಾನ್ಯ. ಈ ಅವಧಿಯಲ್ಲಿ ಬಹುತೇಕ ಎಲ್ಲರಿಗೂ ಒಂದಿಲ್ಲೊಂದು ಬಾರಿ ನೆಗಡಿ ಕಾಡಿಸಿ ಮಾಯವಾಗಿರುತ್ತದೆ. ಆದರೆ ಈ ಶೀತ ನೆಗಡಿ ಎಂಬುದು ತಾನಾಗಿಯೇ ಬರುವಂಥದ್ದಲ್ಲ. ಇದೇನಿದ್ದರೂ ಈಗಾಗಲೇ ಶೀತ ನೆಗಡಿಯಿಂದ ಬಳಲುತ್ತಿರುವ ವರಿಂದಲೇ ಇನ್ನೊಬ್ಬರಿಗೆ ವರ್ಗಾವಣೆಯಾಗುವಂಥದು. ನೀವು ಕೆಲಸ ಮಾಡುವ ಆಫೀಸಿನಲ್ಲಿ ಅಥವಾ ಪ್ರಯಾಣಿಸುವ ಬಸ್, ಕ್ಯಾಬ್ ಹೀಗೆ ಎಲ್ಲಿಯಾದರೂ ಇದರ ವೈರಸ್‌ಗಳು ನಿಮಗೆ ಅಂಟಿಕೊಳ್ಳಬಲ್ಲವು.

ಸಂಗಾತಿಗೆ ಶೀತ ನೆಗಡಿ ಬಂದರೆ ಏನು ಮಾಡುವುದು?

ಸಂಗಾತಿಗೆ ಶೀತ ನೆಗಡಿ ಬಂದರೆ ಏನು ಮಾಡುವುದು?

ಶೀತ ನೆಗಡಿ ಬಾಧೆ ಶುರುವಾಯಿತೆಂದರೆ ಅದೊಂದು ರೀತಿಯ ಯಾತನೆ ಯಾಗಿರುತ್ತದೆ. ಕೆಲಸ ಮಾಡಲು ಮೂಡ್ ಹಾಳಾಗಿ ಬರೀ ರೆಸ್ಟ್ ಮಾಡಬೇಕೆನಿಸಲಾರಂಭಿಸುತ್ತದೆ. ಹೀಗಾಗಿ ಈ ನೆಗಡಿ ಬಾರದಂತೆ ದೂರವಿರುವುದೇ ಲೇಸು. ಆದರೆ ಸದಾ ಜೊತೆಯಲ್ಲಿರುವ ಸಂಗಾತಿಗೇ ಶೀತ ನೆಗಡಿ ಬಂದಾಗ ಏನು ಮಾಡುವುದು? ರಾತ್ರಿ ಆತ/ ಅವಳ ಜೊತೆ ಮಿಲನವಾಗುವುದು ಸೂಕ್ತವೆ? ಇದರಿಂದ ನೆಗಡಿ ಇನ್ನೊಬ್ಬ ಸಂಗಾತಿಗೂ ಹರಡುವುದಾ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದ್ದು ನೀವೂ ತಿಳಿದುಕೊಳ್ಳಿ.

ನೆಗಡಿಯ ಸೋಂಕು ಇನ್ನೊಬ್ಬರಿಗೆ ವರ್ಗಾವಣೆಯಾಗುತ್ತದೆಯಾ?

ನೆಗಡಿಯ ಸೋಂಕು ಇನ್ನೊಬ್ಬರಿಗೆ ವರ್ಗಾವಣೆಯಾಗುತ್ತದೆಯಾ?

ಒಬ್ಬರಿಗೆ ಬಂದಿರುವ ನೆಗಡಿಯ ಸೋಂಕು ಇನ್ನೊಬ್ಬರಿಗೆ ವರ್ಗಾವಣೆ ಯಾಗುತ್ತದೆಯಾ ಎಂಬುದು ಅವರಿಗೆ ಅಂಟಿರುವ ವೈರಸ್ ಮೇಲೆ ಆಧರಿತವಾಗಿರುತ್ತದೆ. ಫ್ಲೂ ವೈರಸ್‌ಗಳು ಸಾಮಾನ್ಯವಾಗಿ ಉಸಿರಾಟದ ಮೂಲಕ ಗಾಳಿಯಲ್ಲಿ ಹರಡುತ್ತವೆ. ಅಲ್ಲದೆ ಕೆಮ್ಮುವಿಕೆ, ಸೀನುವಿಕೆ, ಚುಂಬನ ಹಾಗೂ ಕೈಕುಲುಕುವುದರಿಂದಲೂ ಇವು ಒಬ್ಬರಿಂದೊಬ್ಬರಿಗೆ ವರ್ಗಾಯಿಸಲ್ಪಡುತ್ತವೆ.

ಫ್ಲೂ ವೈರಸ್‌ಗಳ ಜೀವಿತಾವಧಿ ಎಷ್ಟು?

ಫ್ಲೂ ವೈರಸ್‌ಗಳ ಜೀವಿತಾವಧಿ ಎಷ್ಟು?

ಯಾವುದಾದರೂ ವಸ್ತುವಿನ ಮೇಲೆ ಹರಡಿದ ಫ್ಲೂ ವೈರಸ್‌ಗಳು ೨೪ ಗಂಟೆಗಳವರೆಗೆ, ಕೈಗಳ ಮೇಲೆ 15 ರಿಂದ 30 ನಿಮಿಷಗಳವರೆಗೆ, ಬೆಡ್ ಶೀಟಗಳ ಮೇಲೆ 1 ರಿಂದ 2 ಗಂಟೆಗಳವರೆಗೆ ಬದುಕಿರುತ್ತವೆ ಎನ್ನುತ್ತಾರೆ ಫ್ಲೊರಿಡಾದ ಲೈಂಗಿಕ ಆರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಾರೆ

ಆಗ ಮಿಲನ ಕ್ರಿಯೆ ಮಾಡುವುದು ಎಷ್ಟು ಸೂಕ್ತ?

ಆಗ ಮಿಲನ ಕ್ರಿಯೆ ಮಾಡುವುದು ಎಷ್ಟು ಸೂಕ್ತ?

ಯಾರಿಗಾದರೂ ಫ್ಲೂ ಇದ್ದಲ್ಲಿ ಅಂಥವರಿಂದ ಕನಿಷ್ಠ 6 ಮೀಟರ್ ಅಂತರ ಕಾಯ್ದುಕೊಳ್ಳುವುದು ಸುರಕ್ಷಿತವಾಗಿದೆ. 6 ಮೀಟರ್ ಅಂತರದಲ್ಲಿದ್ದು ಸೆಕ್ಸ್ ನಡೆಸುವುದು ಸಾಧ್ಯವಿಲ್ಲ ಎಂದು ಬೇರೆ ಹೇಳಬೇಕಿಲ್ಲ ತಾನೆ? ಅಂದರೆ ಫ್ಲೂ ಇರುವಾಗ ಸಂಗಾತಿಯೊಡನೆ ಸೆಕ್ಸ್‌ಗೆ ಮುಂದಾಗದಿರುವುದೇ ಲೇಸು.

ಸೋಂಕು ತಗಲುವ ಸಾಧ್ಯತೆಗಳೆಷ್ಟು?

ಸೋಂಕು ತಗಲುವ ಸಾಧ್ಯತೆಗಳೆಷ್ಟು?

ಶೀತ ಬಾಧೆಯಿಂದ ಬಳಲುತ್ತಿರುವ ಸಂಗಾತಿಯೊಂದಿಗೆ ಮಿಲನವಾದಲ್ಲಿ ನಿಮಗೂ ಶೀತದ ವೈರಸ್ ಸೋಂಕು ತಗಲುವ ಸಾಧ್ಯತೆಗಳು ತೀರಾ ಹೆಚ್ಚು. ಯಾವುದೋ ಕ್ವಚಿತ್ತಾದ ಸಂದರ್ಭದಲ್ಲಿ ಮಾತ್ರ ಶೀತ ಬಾರದೆ ನೀವು ಪಾರಾಗಬಹುದು. ಹೀಗಾಗಿ ಸಂಗಾತಿಗೆ ಶೀತ ಬಾಧೆ ಇರುವಾಗ ಸೆಕ್ಸ್‌ಗೆ ನೋ ಅನ್ನುವುದೇ ಸೂಕ್ತ.

ನಿಮ್ಮ ಬಳಿ ಫ್ಲೂ ನಿವಾರಕ ಲಸಿಕೆ ಇದೆಯಾ?

ನಿಮ್ಮ ಬಳಿ ಫ್ಲೂ ನಿವಾರಕ ಲಸಿಕೆ ಇದೆಯಾ?

ನನ್ನ ಬಳಿ ಫ್ಲೂ ನಿವಾರಕ ಲಸಿಕೆ ಇದೆಯಲ್ಲ. ಮಿಲನದ ಬಳಿಕ ಅದನ್ನು ತೆಗೆದುಕೊಂಡರಾಯಿತು. ಸಂಗಾತಿಯ ನೆಗಡಿಯ ವೈರಸ್‌ಗಳು ನನಗೆ ಬರಲಾರವು ಎಂದು ನೀವು ತಿಳಿದುಕೊಂಡಿದ್ದಲ್ಲಿ ನಿಮ್ಮ ತಿಳುವಳಿಕೆ ಭಾಗಶಃ ಮಾತ್ರ ಸತ್ಯವಾಗಿದೆ. ಏಕೆಂದರೆ ಫ್ಲೂ ಔಷಧಿಗಳು ಸೋಂಕು ತಗಲುವ ಸಾಧ್ಯತೆಗಳನ್ನು ಕಡಿಮೆ ಮಾಡಬಲ್ಲವೆ ಹೊರತು ಸೋಂಕು ತಗುಲದಂತೆ ಸಂಪೂರ್ಣ ರಕ್ಷಣೆ ನೀಡಲಾರವು ಎಂಬುದು ಗೊತ್ತಿರಲಿ.

ಫ್ಲೂ ಬಂದಾಗ ಆಗುವ ತೊಂದರೆಗಳಿಂದ ಪಾರಾಗುವುದು ಹೇಗೆ?

ಫ್ಲೂ ಬಂದಾಗ ಆಗುವ ತೊಂದರೆಗಳಿಂದ ಪಾರಾಗುವುದು ಹೇಗೆ?

ಫ್ಲೂ ವೈರಸ್‌ಗಳು ಕೆಲ ಬಾರಿ ದೇಹದೊಳಗೆ ಪ್ರವೇಶಿಸಿದ್ದರೂ ಸುಮಾರು ಒಂದು ವಾರದವರೆಗೆ ಅದರ ಯಾವುದೇ ಲಕ್ಷಣ ಕಾಣದಿರಬಹುದು. ಅಂದರೆ ನಿಮ್ಮ ಸಂಗಾತಿಗೆ ಫ್ಲೂ ಇರುವುದು ಗೊತ್ತಾಗದಿರಬಹುದು. ಸಂಪೂರ್ಣ ಆರೋಗ್ಯವಾಗಿ ಕಂಡರೂ ನಿಮಗೆ ನಿಮ್ಮ ಸಂಗಾತಿಯಿಂದ ಫ್ಲೂ ವೈರಸ್‌ಗಳು ಬರುವ ಸಾಧ್ಯತೆಗಳು ಇದ್ದೇ ಇವೆ. ಹಾಗೆಯೇ ಫ್ಲೂ ವಾಸಿಯಾಗದ ಸುಮಾರು ಒಂದು ವಾರದವರೆಗೂ ಅದರ ವೈರಸ್‌ಗಳು ದೇಹದಲ್ಲಿ ಉಳಿದಿರಬಹುದು. ಈ ವೈರಸ್‌ಗಳ ನಿವಾರಣೆಗೆ ಏನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಂಗಾತಿಯ ಫ್ಲೂ ವಾಸಿಯಾದ ಒಂದು ವಾರದವರೆಗೆ ಸೆಕ್ಸ್ ಮಾಡದಿದ್ದರೆ ಕ್ಷೇಮ.

ಕಿಸ್ ಮಾಡದಿದ್ದರೆ ಸಾಕು.. ಫ್ಲೂ ಬರಲ್ಲ ಅಂತೀರಾ?

ಕಿಸ್ ಮಾಡದಿದ್ದರೆ ಸಾಕು.. ಫ್ಲೂ ಬರಲ್ಲ ಅಂತೀರಾ?

ಮಿಲನ ಕ್ರಿಯೆ ಮಾಡಿದರೆ ಏನೂ ಆಗಲ್ಲ. ಆದರೆ ಆಗ ಕಿಸ್ ಮಾಡದಿದ್ದರೆ ಆಯಿತು.. ಫ್ಲೂ ಬರಲ್ಲ ಎಂಬುದು ನಿಮ್ಮ ತಿಳುವಳಿಕೆಯಾಗಿದ್ದರೆ ಅದು ತಪ್ಪು. ಭಾವಾತಿರೇಕದಲ್ಲಿ ಇರುವಾಗ ಫ್ಲೂ ಸೋಂಕು ಹರಡುವುದು ಅತಿ ಸುಲಭ. ಹೀಗಾಗಿ ಕಿಸ್ ಮಾಡದೆ ಸೆಕ್ಸ್ ಮಾಡುವ ಐಡಿಯಾ ಬೇಡ.

ಫೇಸ್ ಮಾಸ್ಕ ಧರಿಸಿದರೆ ಹೇಗೆ?

ಫೇಸ್ ಮಾಸ್ಕ ಧರಿಸಿದರೆ ಹೇಗೆ?

ಶೀತ ನೆಗಡಿ ಅಥವಾ ಫ್ಲೂ ಹರಡುತ್ತಿರುವ ಕಾಲಾವಧಿಯಲ್ಲಿ ಹೊರಗಡೆ ಪ್ರಯಾಣ ಮಾಡುವಾಗ ಅಥವಾ ಆಫೀಸಿನಲ್ಲಿರುವಾಗ ಫೇಸ್ ಮಾಸ್ಕ್ ಧರಿಸುವುದು ಸೂಕ್ತ. ಸಂಗಾತಿಗೆ ಫ್ಲೂ ಇದ್ದರೆ ಮನೆಯಲ್ಲಿರುವಾಗಲೂ ಮಾಸ್ಕ್ ಧರಿಸಿದರೆ ಅನುಕೂಲ. ಮಾಸ್ಕ್‌ನಿಂದ ವೈರಸ್‌ಗಳು ಅಟ್ಯಾಕ್ ಮಾಡುವುದರಿಂದ ಪಾರಾಗಬಹುದು. ಇದರಿಂದ ನೀವೂ ನೆಗಡಿಗೆ ತುತ್ತಾಗಿ ಡಾಕ್ಟರ್ ಬಳಿಗೆ ಹೋಗುವುದರಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಫ್ಲೂ ಇರುವಾಗ ಸುರಕ್ಷಿತ ಮಿಲನ ಕ್ರಿಯೆ ಮಾಡುವುದು ಹೇಗೆ?

ಫ್ಲೂ ಇರುವಾಗ ಸುರಕ್ಷಿತ ಮಿಲನ ಕ್ರಿಯೆ ಮಾಡುವುದು ಹೇಗೆ?

ಫ್ಲೂ ಇರುವಾಗ ಮುಖ ರತಿ ವಿಧಾನವು ಕೆಲ ಮಟ್ಟಿಗೆ ಸುರಕ್ಷಿತವಾಗಿದೆ. ಬಾಯಿ ಹಾಗೂ ಜನನಾಂಗದ ಸಂಪರ್ಕದಿಂದ ಫ್ಲೂ ಹರಡುವ ಸಾಧ್ಯತೆಗಳು ಕಡಿಮೆ. ಬಾಯಿಯಿಂದ ಬಾಯಿಗೆ ಸಂಪರ್ಕ ಆಗದಿದ್ದರೆ ಫ್ಲೂ ಹರಡುವಿಕೆಯನ್ನು ತಡೆಯಬಹುದು. ಫ್ಲೂ ವೈರಸ್‌ಗಳು ಶಿಶ್ನ ಹಾಗೂ ಯೋನಿಯ ಮೂಲಕ ವರ್ಗಾವಣೆಯಾಗಲಾರವು ಎಂಬುದು ತಿಳಿದಿರಲಿ. ಆದರೂ ಶೀತ ನೆಗಡಿ ಬಾಧೆಯಿಂದ ಮೂಗಿನಲ್ಲಿ ನೀರು ಸುರಿಯುವಾಗ ಮುಖರತಿ ಮಾಡುವುದಾಗಲಿ ಅಥವಾ ಇನ್ನಾವುದೋ ರೀತಿ ಸೆಕ್ಸ್ ಮಾಡುವುದು ಅಷ್ಟೊಂದು ಸುಖಮಯವಾಗಿರದು ಅಲ್ಲವೆ? ಮೂಗಿನಿಂದ ಸಿಂಬಳ ಸುರಿಸುತ್ತ ಅದನ್ನು ಬೇರೆ ಬಾಯಲ್ಲಿ ಇಟ್ಟುಕೊಳ್ಳುವುದು ಯಾರಿಗಿಷ್ಟ? ಒಂದು ವಾರ ಅದನ್ನು ಮಾಡದಿದ್ದರೆ ಜಗತ್ತೇನೂ ಮುಳುಗಿ ಹೋಗಲಾರದು.. ಹೀಗಾಗಿ ಫ್ಲೂ ವೈರಸ್ ಅಟ್ಯಾಕ್ ಆಗಿದ್ದಲ್ಲಿ ಅದು ವಾಸಿಯಾಗುವವರೆಗೆ ಒಂದು ವಾರ ಸೆಕ್ಸ್‌ನಿಂದ ದೂರವಿರಲು ಯತ್ನಿಸುವುದು ಸರಿಯಾದ ಕ್ರಮವಾಗಿದೆ.

English summary

Should You Have Sex When You're husband had cold?

With the changing season, we are sure all of you must have caught flu at least once till now. Though the season is now settling down but still the flu cases aren't easy to beat down. Be it in public transport or at the office, you can catch it anywhere. But have you ever thought what if you or your partner get down with cold and still wish to have some action? Sounds normal? But maybe it is not. Read on to know if it is safe to have sex while you are down with flu.
X
Desktop Bottom Promotion