For Quick Alerts
ALLOW NOTIFICATIONS  
For Daily Alerts

ಬಿಪಿ, ಹಾಗೂ ಮಧುಮೇಹವನ್ನು ನಿಯಂತ್ರಿಸುವ ಪವರ್ 'ಮೂಲಂಗಿ' ಯಲ್ಲಿದೆ!

|

ಮೂಲಂಗಿ ತಿನ್ನುವುದರಿಂದ ಲಭಿಸುವ ಆರೋಗ್ಯಕರ ಲಾಭಗಳು: ಮೂತ್ರನಾಳದ ತೊಂದರೆ, ಮೂತ್ರಪಿಂಡದ ತೊಂದರೆಗಳು, ಮಧುಮೇಹಿಗಳಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸುವುದು, ಹೃದಯ ಸಂಬಂಧಿ ಕಾಯಿಲೆಗಳನ್ನು ಹದ್ದುಬಸ್ತಿನಲ್ಲಿಡುವುದು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಹಿತ್ತಲ ಗಿಡ ಮದ್ದಲ್ಲ ಎಂಬುದಕ್ಕೆ ಮೂಲಂಗಿ ಜ್ವಲಂತ ಸಾಕ್ಷಿ. ಈ ಅದ್ಭುತ ತರಕಾರಿಯನ್ನು ಅಗ್ಗ ಎಂಬ ಕಾರಣಕ್ಕೇ ಹೆಚ್ಚಿನವರು ಉತ್ಪ್ರೇಕ್ಷಿಸುತ್ತಾರೆ. ಇದೊಂದು ಗಡ್ಡೆಯಾಗಿದ್ದರೂ ಕೋಸಿನ ಗುಂಪಿಗೆ ಸೇರಿದೆ. ಸಾಮಾನ್ಯವಾಗಿ ಈ ಗುಂಪಿಗೆ ಸೇರಿರುವ ಎಲೆಕೋಸು, ಹೂಕೋಸು ಮೊದಲಾದವುಗಳು ಸೇರಿದ್ದು ಇವುಗಳಲ್ಲಿ ವಿಶಿಷ್ಟವಾದ ಎಣ್ಣೆಯ ಅಂಶವಿರುತ್ತದೆ.

Radish Benefits

ಇವುಗಳಲ್ಲಿನ ಕೊಂಚ ಹುಳಿಯಾದ ರುಚಿಗೆ ಈ ಎಣ್ಣೆಯ ಆಮ್ಲೀಯತೆ ಕಾರಣ. ಈ ಗುಂಪಿಗೆ ಸೇರಿದ ಮೂಲಂಗಿಯಲ್ಲಿ ಹಲವಾರು ವಿಧಗಳಿವೆ ಹಾಗೂ ಇವು ಗಾತ್ರ ಮತ್ತು ತೂಕ ಹಾಗೂ ಬಣ್ಣಗಳಲ್ಲಿಯೂ ವೈವಿಧ್ಯತೆ ಪಡೆದಿರುತ್ತವೆ. ಮೂಲಂಗಿಯನ್ನು ಹಸಿಯಾಗಿಯೂ ತಿನ್ನಬಹುದು, ಬೇಯಿಸಿಯೂ ತಿನ್ನಬಹುದು, ಉಪ್ಪಿನಕಾಯಿ ಹಾಕಿಯೂ ತಿನ್ನಬಹುದು. ಯಾವುದೇ ರೂಪದಲ್ಲಿ ಸೇವಿಸಿದರೂ ಇದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇತ್ತೀಚಿನ ಸಂಶೋಧನೆಗಳಿಂದ ಮೂಲಂಗಿ ಸೇವನೆಯಿಂದ ಹೃದಯದ ಪ್ರಮುಖ ನಾಳಗಳು ನಷ್ಟಗೊಳ್ಳುವುದರಿಂದ ರಕ್ಷಣೆ ಪಡೆಯಬಹುದಾಗಿದೆ ಎಂದು ಕಂಡುಕೊಳ್ಳಲಾಗಿದೆ. ಈ ಮೂಲಕ ಹೃದಯಸ್ತಂಭನ ಮತ್ತು ಇತರ ಹೃದಯಸಂಬಂಧಿ ಕಾಯಿಲೆಗಳಿಂದ ರಕ್ಷ್ಣಣೆ ಪಡೆದಂತಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಇದರಲ್ಲಿರುವ ನೈಟ್ರಿಕ್ ಆಕ್ಸೈಡ್. ಅಲ್ಲದೇ ಮೂಲಂಗಿಯ ಸಸ್ಯಜನ್ಯ ರಸದೂತವಾದ ಟ್ರಿಗೋನೆಲ್ಲೈನ್ ಒಂದು ಕ್ರಿಯಾಶೀಲ ಘಟಕವಾಗಿದ್ದು ಪ್ರಮುಖ ರಕ್ತನಾಳಗಳಲ್ಲಿ ಬದಲಾವಣೆ ನೀಡುವ ಮೂಲಕ ಹೆಚ್ಚಿನ ನೈಟ್ರಿಕ್ ಆಕ್ಸೈಡ್ ಉತ್ಪಾದನೆಗೆ ನೆರವಾಗುತ್ತದೆ.

ಮಲಬದ್ಧತೆಯ ಸಮಸ್ಯೆಯನ್ನು ನಿಯಂತ್ರಿಸುತ್ತದೆ

ಮಲಬದ್ಧತೆಯ ಸಮಸ್ಯೆಯನ್ನು ನಿಯಂತ್ರಿಸುತ್ತದೆ

ಮೂಲಂಗಿಯ ಸೇವನೆಯ ಇತರ ಪ್ರಯೋಜನಗಳೆಂದರೆ ಮೂಲವ್ಯಾಧಿಯ ಲಕ್ಷಣಗಳನ್ನು ಗುಣಪಡಿಸುವುದು ಹಾಗೂ ಮಲಬದ್ಧತೆಯನ್ನು ನಿವಾರಿಸುವುದೂ ಆಗಿದೆ. ಇದುವರೆಗೆ ನಮಗೆ ತಿಳಿದಿರದೇ ಇದ್ದ ಇನ್ನೊಂದು ಪ್ರಯೋಜನವೆಂದರೆ ತ್ವಚೆ ಪಡೆಯುವ ನವಚೈತನ್ಯ ಮತ್ತು ಪೋಷಣೆ. ಅಲ್ಲದೇ ಮೂಲಂಗಿ ತಿನ್ನುವುದರಿಂದ ಲಭಿಸುವ ಆರೋಗ್ಯಕರ ಲಾಭಗಳು: ಮೂತ್ರನಾಳದ ತೊಂದರೆ, ಮೂತ್ರಪಿಂಡದ ತೊಂದರೆಗಳು, ಮಧುಮೇಹಿಗಳಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸುವುದು, ಹೃದಯ ಸಂಬಂಧಿ ಕಾಯಿಲೆಗಳನ್ನು ಹದ್ದುಬಸ್ತಿನಲ್ಲಿಡುವುದು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಪ್ರಮುಖವಾಗಿವೆ. ಅಲ್ಲದೇ ನೋವು ಕಡಿಮೆ ಮಾಡಲು, ಉರಿಯೂತ ತಗ್ಗಿಸಲು, ಹಲವಾರು ಬಗೆಯ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸಲು ಸಹಾ ನೆರವಾಗುತ್ತದೆ. ಬನ್ನಿ, ಮೂಲಂಗಿಯ ಸೇವನೆಯಿಂದ ಪಡೆಯುವ ಇತರ ಪ್ರಯೋಜನಗಳ ಬಗ್ಗೆ ಅರಿಯೋಣ..

Most Read : ಕೇಳಿ ಇಲ್ಲಿ, ಮೂಲಂಗಿ ಎಂದಾಕ್ಷಣ ಮುಖ ಸಿಂಡರಿಸಬೇಡಿ!

ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ತಗ್ಗಿಸುವುದು

ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ತಗ್ಗಿಸುವುದು

ಮೂಲಂಗಿ ಸೇವನೆಯ ಇತರ ಪ್ರಯೋಜನಗಳಲ್ಲಿ ಪ್ರಮುಖವಾದುದೆಂದರೆ ವಿವಿಧ ಕ್ಯಾನ್ಸರ್ ಆವರಿಸುವ ಸಾದ್ಯತೆ ತಗ್ಗಿಸುವುದು. ವಿಶೇಷವಾಗಿ, ಸಣ್ಣಕರುಳು, ದೊಡ್ಡಕರುಳು, ಜಠರ, ಬಾಯಿ ಮತ್ತು ಮೂತ್ರಪಿಂಡದ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತದೆ. ಇದಕ್ಕೆ ಪ್ರಮುಖ ಕಾರಣ ಮೂಲಂಗಿಯಲ್ಲಿರುವ ವಿಟಮಿನ್ ಸಿ, ಫೋಲಿಕ್ ಆಮ್ಲ ಮತ್ತು ಆಂಥೋಸೈಯಾನಿನ್ ಎಂಬ ಪ್ರಬಲ ಆಂಟಿ ಆಕ್ಸಿಡೆಂಟುಗಳು. ಇವು ಕ್ಯಾನ್ಸರ್ ಪೀಡಿತ ಜೀವಕೋಶಗಳ ಬೆಳವಣಿಗೆಯನ್ನು ನಿಗ್ರಹಿಸಿ ಇವುಗಳು ಸಾಯುವಂತೆ ಮಾಡುತ್ತವೆ ಹಾಗೂ ಈ ಮೂಲಕ ಕ್ಯಾನ್ಸರ್ ಪೀಡಿತ ಜೀವಕೋಶಗಳು ಇನ್ನಷ್ಟು ಬೆಳೆಯದಂತೆ ತಡೆಯುತ್ತವೆ.

ಉಸಿರಾಟದ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ

ಉಸಿರಾಟದ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ

ಜಡ್ಡುಗಟ್ಟಿರುವುದನ್ನು ಸಡಿಲಿಸಿ ನಿರಾಳಗೊಳಿಸುವ ಗುಣ ಮೂಲಂಗಿಯಲ್ಲಿದೆ. ಈ ಗುಣದಿಂದಾಗಿ ಕಟ್ಟಿಕೊಂಡಿರುವ ಮೂಗು, ಗಂಟಲು, ಶ್ವಾಸನಾಳ ಮತ್ತು ಶ್ವಾಸಕೋಶಗಳು ಸಡಿಲಗೊಳ್ಳುತ್ತವೆ. ಸಾಮಾನ್ಯ ಶೀತ, ಸೋಂಕುಗಳು, ಅಲರ್ಜಿಗಳಿಗಿಲ್ಲಾ ಈ ಜಡ್ಡುತನವೇ ಕಾರಣ. ಮೂಲಂಗಿಯಲ್ಲಿರುವ ಹಲವಾರು ವಿಟಮಿನ್ನುಗಳು ಕಫನಿವಾರಕವಾಗಿ ಕೆಲಸ ಮಾಡುತ್ತವೆ ಹಾಗೂ ನಮ್ಮ ಉಸಿರಾಟದ ವ್ಯವಸ್ಥೆಯನ್ನು ಉತ್ತಮಪಡಿಸಿ ಸೋಂಕುಗಳಿಂದ ರಕ್ಷಿಸುತ್ತದೆ.

ಜೀರ್ಣವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

ಜೀರ್ಣವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

ಮೂಲಂಗಿಯಲ್ಲಿರುವ ಕರಗದ ನಾರು ಮಲಬದ್ದತೆಯಾಗುವುದನ್ನು ತಪ್ಪಿಸುತ್ತದೆ ಹಾಗೂ ಕರುಳುಗಳಿಂದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಈ ನಾರು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು, ತೂಕವನ್ನು ಇಳಿಸಲು ಹಾಗೂ ಕೊಲೆಸ್ಟ್ರಾಲ್ ಮಟ್ಟಗಳನ್ನು ಆರೋಗ್ಯಕರ ಮಟ್ಟಕ್ಕಿಳಿಸಲು ನೆರವಾಗುತ್ತದೆ. ಅಲ್ಲದೇ ಮೂಲಂಗಿಯ ರಸವನ್ನು ಕುಡಿಯುವುದರಿಂದ ಕರುಳಿನ ಹುಣ್ಣುಗಳಾಗುವುದು ಮತ್ತು ಉರಿಯೂತವಾಗುವುದನ್ನು ತಪ್ಪಿಸಬಹುದು.

Most Read: ಮೂಲವ್ಯಾಧಿ ಸಮಸ್ಯೆಯೇ..? ಮೂಲಂಗಿಯೇ ಸಮರ್ಥ ಮದ್ದು

ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ನಿಯಂತ್ರಿಸಲು ನೆರವಾಗುತ್ತದೆ

ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ನಿಯಂತ್ರಿಸಲು ನೆರವಾಗುತ್ತದೆ

ರಕ್ತನಾಳಗಳ ಆರೋಗ್ಯವನ್ನು ಉತ್ತಮವಾಗಿರಿಸುವ ಮೂಲಕ ರಕ್ತಪರಿಚನೆಯನ್ನು ಉತ್ತಮಗೊಳಿಸಲು ಪೊಟ್ಯಾಶಿಯಂ ಪ್ರಮುಖ ಪಾತ್ರ ವಹಿಸುತ್ತದೆ. ಮೂಲಂಗಿಯಲ್ಲಿ ಪೊಟ್ಯಾಶಿಯಂ ಹೇರಳವಾಗಿದೆ. ಇವು ರಕ್ತದ ಒತ್ತಡವನ್ನು ಆರೋಗ್ಯಕರ ಮಟ್ಟದಲ್ಲಿರಿಸಿ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಮೂಲಂಗಿಯಲ್ಲಿ ಕಡಿಮೆ ಗ್ಲೈಸೆಮಿಕ್ ಗುಣಾಂಕವಿರುವ ಕಾರಣ ಇದು ನಿಧಾನವಾಗಿ ಜೀರ್ಣಗೊಳ್ಳುತ್ತದೆ ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಏರಿಸುವುದಿಲ್ಲ. ವಿಶೇಷವಾಗಿ ಮೂಲಂಗಿಯ ಸೇವನೆಯ ಮೂಲಕ ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನೂ ನಿಯಂತ್ರಿಸಲು ಸಾಧ್ಯವಾಗುವ ಕಾರಣ ಮಧುಮೇಹಿಗಳಿಗೆ ಮೂಲಂಗಿ ಅತಿ ಸೂಕ್ತವಾದ ಆಹಾರವಾಗಿದೆ.

Most Read: ನಿತ್ಯ ಮೂಲಂಗಿ ಜ್ಯೂಸ್ ಕುಡಿದರೆ, ಯಾವ ಕಾಯಿಲೆಯೂ ಬರುವುದಿಲ್ಲ...

ವಿಟಮಿನ್ ಸಿ ಸಮೃದ್ಧವಾಗಿದೆ

ವಿಟಮಿನ್ ಸಿ ಸಮೃದ್ಧವಾಗಿದೆ

ನಮ್ಮ ಆರೋಗ್ಯ ಉತ್ತಮವಾಗಿರಬೇಕೆಂದರೆ ನಮ್ಮ ರೋಗ ನಿರೋಧಕ ವ್ಯವಸ್ಥೆಯೂ ಉತ್ತಮವಾಗಿರಬೇಕು. ರೋಗ ನಿರೋಧಕ ಶಕ್ತಿಯನ್ನು ಉತ್ತಮವಾಗಿರಿಸುವಲ್ಲಿ ವಿಟಮಿನ್ ಸಿ ಪಾತ್ರ ಪ್ರಮುಖವಾಗಿದೆ. ಮೂಲಂಗಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ. ಆದ್ದರಿಂದ ಮೂಲಂಗಿಯ ಸೇವನೆಯಿಂದ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಕೊಲ್ಯಾಜೆನ್ ಉತ್ಪಾದನೆಗೆ ನೆರವಾಗುತ್ತದೆ. ನಮ್ಮ ರಕ್ತನಾಳಗಳ ಗೋಡೆಗಳು ಗಟ್ಟಿಯಾಗಿರಲು ಈ ಕೊಲ್ಯಾಜೆನ್ ಅಗತ್ಯವಾಗಿದ್ದು ಈ ಮೂಲಕ ಹಲವಾರು ಹೃದಯಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ. ಅಲ್ಲದೇ ವಿಟಮಿನ್ ಸಿ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುವ ಮೂಲಕ ವಿಶೇಷವಾಗಿ ಅಸ್ಥಿಮಜ್ಜೆಗಳಿಗೆ ಹಾನಿಯಾಗದಂತೆ ತಡೆಯುತ್ತದೆ.

English summary

Radish Benefits: Control Blood Pressure And Diabetes

Radish is a vegetable which is often overlooked. Radish is a root vegetable which belongs to the family of cruciferous vegetables. Like broccoli, cabbage, kale, cauliflowers and other members of the family, radish comprises characteristic oil which is the sole source of its acidic flavor. There are a number of distinct categories of radishes that differ in size and weight.Radishes are eaten raw, cooked and pickled, and have several beneficial effects on health.Recent researches have shown that radish helps to protect coronary blood vessels, potentially prevents heart disease and stroke.
X
Desktop Bottom Promotion