For Quick Alerts
ALLOW NOTIFICATIONS  
For Daily Alerts

ಶೀಘ್ರ ಸ್ಖಲನ ಬಗ್ಗೆ ಇರುವಂತಹ ಸತ್ಯ ಹಾಗೂ ಸುಳ್ಳುಗಳು-ಇವೆಲ್ಲಾ ಸಂಗತಿಗಳು ನಿಮಗೆ ತಿಳಿದಿರಲಿ

|

ಲೈಂಗಿಕ ಜೀವನವು ಸುಖಮಯವಾಗಿದ್ದರೆ ಆಗ ಸಂಪೂರ್ಣ ಜೀವನವು ಸುಖಕರವಾಗಿರುವುದು ಎನ್ನುವ ಮಾತಿದೆ. ಲೈಂಗಿಕ ಜೀವನದಲ್ಲೂ ಕೆಲವೊಂದು ಸಮಸ್ಯೆಗಳು ಕಾಡುವುದು ಇದೆ. ಇದರಲ್ಲಿನ ಕೆಲವೊಂದು ಸಮಸ್ಯೆಗಳು ಎಂದರೆ ನಿಮಿರು ದೌರ್ಬಲ್ಯ ಮತ್ತು ಶೀಘ್ರ ಸ್ಖಲನ. ಇವೆರಡು ಸಮಸ್ಯೆಯು ಲೈಂಗಿಕ ಜೀವನವನ್ನು ನರಕ ಮಾಡಿ ಬಿಡುವುದು.

ಆದರೆ ಇವೆರಡು ಸಮಸ್ಯೆಗಳು ಬರಲು ನಮ್ಮ ಇಂದಿನ ಜೀವನ ಶೈಲಿ ಕೂಡ ಕಾರಣವಾಗಿದೆ. ಶೀಘ್ರ ಸ್ಖಲನವು ಆದರೆ ಅದರಿಂದ ದೊಡ್ಡ ಸಮಸ್ಯೆಯು ಆಗುವುದು. ಯಾಕೆಂದರೆ ಇದು ನಿಮ್ಮ ಸಂಪೂರ್ಣ ಸುಖವನ್ನು ನುಂಗಿ ಹಾಕುವುದು. ಶೀಘ್ರ ಸ್ಖಲನವೆಂದರೆ ನುಗ್ಗುವಿಕೆಯ ಒಂದು ನಿಮಿಷದ ಒಳಗಡೆ ಸ್ಖಲನವಾಗುವುದು ಅಥವಾ ಸ್ಖಲನವನ್ನು ನಿಯಂತ್ರಿಸಲು ವಿಫಲವಾಗುವುದು.

ಅಧ್ಯಯನಗಳು ಹೇಳುವಂತೆ

ಅಧ್ಯಯನಗಳು ಹೇಳುವಂತೆ

ಇಂದಿನ ದಿನಗಳಲ್ಲಿ ಸರಿಸುಮಾರು ಮೂವತ್ತರಷ್ಟು ಜನರು ಶೀಘ್ರ ವೀರ್ಯ ಸ್ಖಲವನ್ನು ನಿಯಂತ್ರಣ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಸಾಮಾನ್ಯವಾಗಿ ವಯಸ್ಸಾದ ಪುರುಷರಲ್ಲಿ ನಿಮಿರುವಿಕೆ ಸಮಸ್ಯೆಯು ಸಾಮಾನ್ಯವಾಗಿರುವುದು, ಇಂತಹ ಸಮಯದಲ್ಲಿ ಸ್ಖಲನದ ಸಮಸ್ಯೆಗಳು ಕಾಡುವುದು ಸಹಜ ಪ್ರಕ್ರಿಯೆ! ಆದರೆ ಚಿಂತಿಸಬೇಕಾದ ಸಂಗತಿಗಳೇನೆಂದರೆ, ಇಂದಿನ ದಿನಗಳಲ್ಲಿ ಪ್ರೌಢ ವಯಸ್ಸಿನವರಲ್ಲಿರುವ ಪುರುಷರಿಗೆಯೇ ಹೆಚ್ಚಾಗಿ ಶೀಘ್ರ ಸ್ಖಲನ ಸಮಸ್ಯೆ ಕಾಡುತ್ತಿದೆಯಂತೆ . ಅಧ್ಯಯನಗಳು ಹೇಳುವಂತೆ ಶೀಘ್ರ ಸ್ಖಲನವು ವಯಸ್ಸಿನೊಂದಿಗೆ ನೇರವಾದ ಸಂಬಂಧವನ್ನು ಹೊಂದಿದೆ. ಪುರುಷರಿಗೆ ವಯಸ್ಸಾದಂತೆ ಮತ್ತು ಟೆಸ್ಟೋಸ್ಟಿರಾನ್ ಮಟ್ಟಗಳು ವಯಸ್ಸಿನೊಂದಿಗೆ ಕುಂದಿ, ಶೀಘ್ರ ಸ್ಖಲನವು ಇದಕ್ಕೆ ಹೊಂದಿಕೊಳ್ಳುತ್ತದೆ.

ಪುರುಷರಲ್ಲಿ ಅತಿಯಾದ ಆತಂಕದ ಸಮಸ್ಯೆಯು ಕಾಡುತ್ತಿದೆ

ಪುರುಷರಲ್ಲಿ ಅತಿಯಾದ ಆತಂಕದ ಸಮಸ್ಯೆಯು ಕಾಡುತ್ತಿದೆ

ಇಂದಿನ ದಿನಗಳಲ್ಲಿ ಸ್ಖಲನವನ್ನು ನಿಯಂತ್ರಿಸಲು ಆಗದೆ ಇರುವಂತಹ ಪುರುಷರಲ್ಲಿ ಅತಿಯಾದ ಆತಂಕದ ಸಮಸ್ಯೆಯು ಕಾಡುವುದು. ಬೆಲ್ಜಿಯಂನ ಲೀಜ್ ವಿಶ್ವವಿದ್ಯಾನಿಲಯವು ಮಾಡಿರುವಂತಹ ಸಂಶೋಧನೆಯ ಪ್ರಕಾರ ಅದು ಸುಮಾರು 492 ಮಂದಿ ಪುರುಷರನ್ನು ಸಮೀಕ್ಷೆಗೆ ಒಳಪಡಿಸಿದೆ. ಇದರಲ್ಲಿ 18ರಿಂದ 74 ವರ್ಷ ವಯಸ್ಸಿನ ಪುರುಷರು ಇದರಲ್ಲಿ ಇದ್ದರು. ಸುಮಾರು 80 ಮಂದಿ ಮಹಿಳಾ ಸಂಗಾತಿಗಳನ್ನು ಕೂಡ ಈ ಸಮೀಕ್ಷೆ ಒಳ ಪಡಿಸಲಾಗಿದೆ. ಇದರಲ್ಲಿ ಕಂಡುಕೊಂಡಿರುವ ಅಂಶವೆಂದರೆ ಹೆಚ್ಚಾಗಿ ಶೀಘ್ರ ಸ್ಖಲನದ ಬಗ್ಗೆ ತಪ್ಪಾಗಿ ಅರ್ಥೈಸಲಾಗಿದೆ.

Most Read:ಶೀಘ್ರಸ್ಖಲನಕ್ಕೆ ಶಾಶ್ವತ ಪರಿಹಾರ; ಇವನ್ನು ಸೇವಿಸಿ

ಶೀಘ್ರ ಸ್ಖಲನದ ಬಗ್ಗೆ ಇರುವ ಗೊಂದಲಗಳಿವೆ ಇಲ್ಲಿದೆ ನೋಡಿ ಉತ್ತರ

ಶೀಘ್ರ ಸ್ಖಲನದ ಬಗ್ಗೆ ಇರುವ ಗೊಂದಲಗಳಿವೆ ಇಲ್ಲಿದೆ ನೋಡಿ ಉತ್ತರ

ಸುಳ್ಳು: ಆತಂಕದಿಂದಾಗಿ ಶೀಘ್ರ ಸ್ಖಲನವು ಉಂಟಾಗುವುದು.

ಸತ್ಯ: ಶೀಘ್ರ ಸ್ಖಲನಕ್ಕೆ ಒಳಗಾಗುವಂತಹ ಪುರುಷರಲ್ಲಿ ಆತಂಕದ ಮಟ್ಟವು ಸಾಮಾನ್ಯವಾಗಿತ್ತು.

ಸುಳ್ಳು: ನಿಮಗೆ ಶೀಘ್ರ ಸ್ಖಲನವಿದ್ದರೆ ಅದು ಯಾವಾಗಲೂ ಇರುವುದು.

ಸತ್ಯ: ಇದು ಪರಿಸ್ಥಿತಿಗೆ ಅನುಗುಣವಾಗಿ ಇರುವುದು. ಇದು ಒಬ್ಬ ಸಂಗಾತಿ ಜತೆಗೆ ಇದ್ದರೆ, ಇನ್ನೊಬ್ಬರ ಜತೆಗೆ ಇರದೇ ಇರಬಹುದು. ಪರಿಸ್ಥಿತಿಗೆ ಅನುಗುಣವಾಗಿ ಇದು ಒಂದೇ ಸಂಗಾತಿಯ ಜತೆಗೆ ಕೂಡ ಕೆಲವೊಂದು ಸಲ ಇರದೇ ಇರಬಹುದು.

ಸುಳ್ಳು: ಶೀಘ್ರ ಸ್ಖಲನವು ವಯಸ್ಸಾದಂತೆ ಕಡಿಮೆಯಾಗುವುದು.

ಸತ್ಯ: ಶೀಘ್ರ ಸ್ಖಲನವೆನ್ನುವುದು ಹದಿಹರೆಯದಿಂದ 50ರ ಹರೆಯದ ತನಕ ಸ್ಥಿರವಾಗಿ ಇರುವುದು ಮತ್ತು ಇದು ಸ್ಥಿರವಾಗುವ ಮೊದಲು ಅತಿಯಾಗುವುದು.

ಶೀಘ್ರ ಸ್ಖಲನದ ಬಗ್ಗೆ ಇರುವ ಗೊಂದಲಗಳಿವೆ ಇಲ್ಲಿದೆ ನೋಡಿ ಉತ್ತರ

ಶೀಘ್ರ ಸ್ಖಲನದ ಬಗ್ಗೆ ಇರುವ ಗೊಂದಲಗಳಿವೆ ಇಲ್ಲಿದೆ ನೋಡಿ ಉತ್ತರ

ಸುಳ್ಳು: ಶೀಘ್ರ ಸ್ಖಲನ ಹೊಂದಿರುವಂತಹ ಪುರುಷರು ಇದು ತಮ್ಮ ಸಂಗಾತಿಗೆ ತುಂಬಾ ಬೇಸರ ಮೂಡಿಸುವುದು ಎಂದು ನಂಬಿರುವರು.

ಸತ್ಯ: ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ತಮ್ಮ ಸಂಗಾತಿಯ ಶೀಘ್ರ ಸ್ಖಲನದಿಂದಾಗಿ ಹೆಚ್ಚಿನ ಒತ್ತಡವು ಉಂಟಾಗುವುದಿಲ್ಲ ಮತ್ತು ಮಹಿಳೆಯರು ತಮ್ಮ ಬೇಸರ ವ್ಯಕ್ತಪಡಿಸುವುದು ಪುರುಷರಲ್ಲಿ ಉಂಟಾಗುವಂತಹ ಶೀಘ್ರ ಸ್ಖಲನದಿಂದಾಗಿ ಅಲ್ಲ. ಸೆಕ್ಸ್ ಎನ್ನುವುದು ಎಷ್ಟು ದೀರ್ಘ ಕಾಲ ನಡೆಯುವುದು ಎನ್ನುವುದರ ಮೇಲೆ ಇದು ನಿರ್ಧಾರವಾಗುವುದು.

ಸುಳ್ಳು: ಒಳನುಗ್ಗುವಿಕೆಯ ಎರಡು ನಿಮಿಷಗಳ ಒಳಗಡೆ ಸ್ಖಲನವಾದರೆ ಇದನ್ನು ಶೀಘ್ರ ಸ್ಖಲನವೆಂದು ಹೇಳಬಹುದು.

ಶೀಘ್ರ ಸ್ಖಲನದ ಬಗ್ಗೆ ಇರುವ ಗೊಂದಲಗಳಿವೆ ಇಲ್ಲಿದೆ ನೋಡಿ ಉತ್ತರ

ಶೀಘ್ರ ಸ್ಖಲನದ ಬಗ್ಗೆ ಇರುವ ಗೊಂದಲಗಳಿವೆ ಇಲ್ಲಿದೆ ನೋಡಿ ಉತ್ತರ

ಸತ್ಯ: ಕೆಲವು ಅಧ್ಯಯನಗಳ ಪ್ರಕಾರ ಇದು ಎರಡು ನಿಮಿಷಗಳಿಗಿಂತಲೂ ಹೆಚ್ಚು ಇರಬಹುದು. ಆದರೆ ಇವರಲ್ಲಿ ಶೀಘ್ರ ಸ್ಖಲನವು ಇತ್ತು. ಒಳನುಗ್ಗುವಿಕೆಯು ಸರಿಯಾದ ರೀತಿಯಲ್ಲಿ ಆಗದೆ ಇರುವುದು ಮತ್ತು ಗುರಿಯನ್ನು ಮುಟ್ಟದೆ ಇರುವುದು ಇದಕ್ಕೆ ಕಾರಣವಾಗಿರಬಹುದು. ಸಮಸ್ಯೆಯು ಸಮಯದ ಮಿತಿಯ ಬಗ್ಗೆ ಅಲ್ಲ, ಇದು ಸ್ಖಲನವನ್ನು ನಿಯಂತ್ರಿಸುವುದರ ಮೇಲೆ ನಿರ್ಧಾರವಾಗುವುದು. ಎಷ್ಟು ಸಮಯ ತನಕ ಇದು ಇರುವುದು ಎನ್ನುವುದು ಯಾವುದೇ ಮಹತ್ವ ಪಡೆಯುವುದಿಲ್ಲ.

ಸುಳ್ಳು: ಶೀಘ್ರ ಸ್ಖಲನದ ಚಿಕಿತ್ಸೆಯು ವೈದ್ಯಕೀಯಗೊಳಿಸಲಾಗಿದೆ ಮತ್ತು ಇದಕ್ಕೆ ಇರುವಂತಹ ಚಿಕಿತ್ಸೆ ಎಂದರೆ ಖಿನ್ನತೆ ತಡೆಯುವ ಮಾತ್ರೆಗಳ ಸೇವನೆ.

ಸತ್ಯ: ಶೇ.12ರಷ್ಟು ಜನರು ಮಾತ್ರ ಈ ಸಮಸ್ಯೆಗೆ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡಿದ್ದಾರೆ.

Most Read:ನೀವು ಸೆಕ್ಸ್ ವೇಳೆ ಮಾಡಲೇಬಾರದ 9 ತಪ್ಪುಗಳು...

ಶೀಘ್ರ ಸ್ಖಲನಕ್ಕೆ ಒಳಗಾಗುವವರು ಆತಂಕಕ್ಕೀಡಾದವರಲ್ಲ

ಶೀಘ್ರ ಸ್ಖಲನಕ್ಕೆ ಒಳಗಾಗುವವರು ಆತಂಕಕ್ಕೀಡಾದವರಲ್ಲ

ಆತಂಕದಿಂದಾಗಿ ನರಗಳು ತುಂಬಾ ಕೆರಳುವಂತೆ ಆಗುವುದು. ಲೈಂಗಿಕವಾಗಿ ಉದ್ರೇಕಗೊಂಡಿರುವ ವ್ಯಕ್ತಿಯ ನರ ವ್ಯವಸ್ಥೆಯು ಅತಿಯಾಗಿ ಕೆರಳಿದರೆ ಆಗ ಅದು ಅವರು ಬಯಸುವುದಕ್ಕಿಂತ ಮೊದಲೇ ಸ್ಖಲನವಾಗುವುದು. ಮೊದಲ ಬಾರಿಗೆ ನಾವು ಶೀಘ್ರ ಸ್ಖಲನಕ್ಕೆ ಆತಂಕವು ಕಾರಣ ಎಂದು ಹೇಳುವುದು ಸುಲಭ ವಾಗಿರುವುದು. ಆತಂಕದಿಂದಾಗಿ ಈ ಪರಿಸ್ಥಿತಿಯು ಬಂದಿದೆ ಎಂದು ಹೇಳಬಹುದು. ಆದರೆ ಬೆಲ್ಜಿಯಂನ ಸಮೀಕ್ಷೆಯ ಪ್ರಕಾರ ಶೀಘ್ರ ಸ್ಖಲನವು ಆತಂಕದಿಂದಾಗಿ ಬರುವುದಲ್ಲ.

ಶೀಘ್ರ ಸ್ಖಲನಕ್ಕೆ ಒಳಗಾಗುವವರು ಆತಂಕಕ್ಕೀಡಾದವರಲ್ಲ

ಶೀಘ್ರ ಸ್ಖಲನಕ್ಕೆ ಒಳಗಾಗುವವರು ಆತಂಕಕ್ಕೀಡಾದವರಲ್ಲ

ಆತಂಕ ಕೂಡ ಶೀಘ್ರ ಸ್ಖಲನದಲ್ಲಿ ಪಾತ್ರ ವಹಿಸುವುದು. ಆದರೆ ಶೀಘ್ರ ಸ್ಖಲನಕ್ಕೆ ಇದೇ ಕಾರಣವೆಂದು ಹೇಳಲು ಆಗದು. ಇವರಿಗೆ ಕೆಲವೊಂದು ಸೆಕ್ಸ್ ಸಂಬಂಧಿತ ಒತ್ತಡವು ಇರಬಹುದು. ಪ್ರದರ್ಶನದ ಬಗ್ಗೆ ಆತಂಕಕ್ಕೆ ಒಳಗಾಗಿರುವ ಯುವ ಮತ್ತು ಲೈಂಗಿಕವಾಗಿ ತುಂಬಾ ಅನನುಭವಿ ಆಗಿರುವಂತವರಲ್ಲಿ ಇದು ಕಾಡುವುದು. ಇವರು ಮೊದಲ ಸಲ ಒಳನುಗ್ಗುವಿಕೆ ವೇಳೆ ಅದು ತುಂಬಾ ಶೀಘ್ರವಾಗಿ ಬಂದರೆ ಆಗ ಅವರಿಗೆ ಅದು ಒಂದು ರೀತಿಯಲ್ಲಿ ಅಭ್ಯಾಸವಾಗಿ ಹೋಗುವುದು. ಬಯಸದೆ ಇರುವಂತಹ ಸ್ಖಲನವು ಉಂಟಾಗುವುದು. ಶೀಘ್ರ ಸ್ಖಲನದಿಂದ ಪಾರಾಗಲು ನೀವು ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಬೇಕೆಮದಿಲ್ಲ.

ಪುರುಷರು ತಮ್ಮ ಪ್ರೀತಿ ವ್ಯಕ್ತಪಡಿಸುವಂತಹ ವೇಗವನ್ನು ಕಡಿಮೆ ಮಾಡಿಕೊಳ್ಳಬೇಕು

ಪುರುಷರು ತಮ್ಮ ಪ್ರೀತಿ ವ್ಯಕ್ತಪಡಿಸುವಂತಹ ವೇಗವನ್ನು ಕಡಿಮೆ ಮಾಡಿಕೊಳ್ಳಬೇಕು

ಹೆಚ್ಚಾಗಿ ಪುರುಷರು ತಮ್ಮ ಪ್ರೀತಿ ವ್ಯಕ್ತಪಡಿಸುವಂತಹ ವೇಗವನ್ನು ಕಡಿಮೆ ಮಾಡಿಕೊಳ್ಳಬೇಕು. ದೀರ್ಘವಾಗಿ ಉಸಿರಾಡಬೇಕು, ಆಟವಾಡಬೇಕು, ನಗಬೇಕು ಇತ್ಯಾದಿಗಳನ್ನು ಮಾಡಬೇಕು. ಪರಸ್ಪರ ನೀವಿಬ್ಬರು ದೇಹಕ್ಕೆ, ಜನನೇಂದ್ರಿಯಕ್ಕೆ ಮಸಾಜ್ ಮಾಡಿಕೊಂಡರೆ ಅದರಿಂದ ತುಂಬಾ ಒಳ್ಳೆಯದು.

Most Read:ದಿನಕ್ಕೆ ಒಂದು ಎಳನೀರು ಕುಡಿದರೂ ಸಾಕು-ಪುರುಷರ ನಿಮಿರು ದೌರ್ಬಲ್ಯ ನಿಯಂತ್ರಿಸಬಹುದು

ಜನನೇಂದ್ರಿಯದ ಭಾಗದಲ್ಲೇ ಮಸಾಜ್

ಜನನೇಂದ್ರಿಯದ ಭಾಗದಲ್ಲೇ ಮಸಾಜ್

ಜನನೇಂದ್ರಿಯದ ಭಾಗದಲ್ಲೇ ಮಸಾಜ್ ಹೆಚ್ಚಿಗೆ ಮಾಡಿದರೆ ಆಗ ಸುತ್ತಲಿನ ಚರ್ಮವು ಉದ್ರೇಕಕ್ಕೆ ಒಳಗಾಗುವುದು ಮತ್ತು ಶಿಶ್ನದಿಂದ ಉದ್ರೇಕವನ್ನು ತೆಗೆಯುವುದು. ಮಹಿಳೆಯರು ಪುರುಷರ ಮೇಲಿನ ಭಾಗದಲ್ಲಿದ್ದರೂ ಇದು ನೆರವಾಗುವುದು. ಸಾಂಪ್ರದಾಯಿಕ ಭಂಗಿಯಿಂದ ಮಹಿಳೆಯರು ಮೇಲಿನ ಭಾಗದಲ್ಲಿ ಇದ್ದರೆ ಆಗ ಪುರುಷರಿಗೆ ಹೆಚ್ಚಿನ ಆರಾಮ ಮತ್ತು ದೀರ್ಘಕಾಲ ನಿಮಿರುವಿಕೆಯು ನಿಲ್ಲುವಂತೆ ಆಗುವುದು.

ಆಹಾರಕ್ರಮ

ಆಹಾರಕ್ರಮ

ನಿತ್ಯದ ಆಹಾರದಲ್ಲಿ ಸಾಕಷ್ಟು ಧಾನ್ಯಗಳು, ಬಾಳೆಹಣ್ಣು, ಒಣಫಲಗಳು, ಹಸಿಯಾಗಿ ಸೇವಿಸಬಹುದಾದ ಸೊಪ್ಪುಗಳು, ಮೃದ್ವಂಗಿ, ಮೆಂತೆಸೊಪ್ಪು, ಹಸಿಈರುಳ್ಳಿ ಹಾಗೂ ಸೆಲೆರಿ ಎಲೆಗಳು ಮೊದಲಾವುಗಳನ್ನು ಸೇವಿಸಬೇಕು. ಜೇನು ಅಗತ್ಯವಾಗಿದ್ದು ನಿತ್ಯವೂ ಕೊಂಚ ಪ್ರಮಾಣದಲ್ಲಿ ಸೇವಿಸಬೇಕು. ಆದರೆ ಕೆಲವು ಆಹಾರಗಳನ್ನು ಅನಿವಾರ್ಯವಾಗಿಯಾದರೂ ಸರಿ, ವರ್ಜಿಸಬೇಕು. ಕಾಫಿ, ಟೀ, ಮದ್ಯ, ಸಂಸ್ಕರಿಸಿದ ಆಹಾರ, ಅತಿ ಹೆಚ್ಚಿನ ಪ್ರಮಾಣದ ಬಿಳಿ ಸಕ್ಕರೆ ಇರುವ ಆಹಾರಗಳು, ಮೈದಾ ಮತ್ತು ಪೋಷಕಾಂಶಗಳನ್ನು ನಿವಾರಿಸಿ ತಯಾರಿಸಿದ ಸಿದ್ದ ಆಹಾರಗಳನ್ನು ವರ್ಜಿಸಬೇಕು

ಆಯುರ್ವೇದದ ಚಿಕಿತ್ಸೆ

ಆಯುರ್ವೇದದ ಚಿಕಿತ್ಸೆ

ಶೀಘ್ರಸ್ಖಲನದ ತೊಂದರೆಯನ್ನು ನಿವಾರಿಸಲು ಆಯುರ್ವೇದದ ಚಿಕಿತ್ಸೆಯೊಂದು ಲಭ್ಯವಿದೆ. ಎಲಾಕಿಳಿ (Elakizhi)ಎಂಬ ಹೆಸರಿನ ಈ ಚಿಕಿತ್ಸೆಯಲ್ಲಿ ವಿಶೇಷ ಎಲೆಗಳನ್ನು ಬಟ್ಟೆಯಲ್ಲಿ ಕಟ್ಟಿ ಬಿಸಿ ಎಣ್ಣೆಯಲ್ಲಿ ಮುಳುಗಿಸಿ ಮಸಾಜ್ ಮಾಡಲಾಗುತ್ತದೆ. ಈ ಚಿಕಿತ್ಸೆ ಯನ್ನು ಕೇವಲ ಆಯುರ್ವೇದ ತಜ್ಞ ಚಿಕಿತ್ಸಕರಲ್ಲಿ ಮಾತ್ರವೇ ಪಡೆದುಕೊಳ್ಳಬೇಕು.

ಯೋಗಾಭ್ಯಾಸದ ಮೊರೆ ಹೋಗಿ

ಯೋಗಾಭ್ಯಾಸದ ಮೊರೆ ಹೋಗಿ

ನಿತ್ಯವೂ ಯೋಗಾಭ್ಯಾಸದ ಮೂಲಕ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳುವ ಮೂಲಕವೂ ಶೀಘ್ರಸ್ಖಲನದ ತೊಂದರೆಯನ್ನು ನಿವಾರಿಸಬಹುದು. ಸರ್ವಾಂಗಾಸನ, ಮತ್ಸ್ಯಾಸನ, ಹಾಲಾಸನ ಮೊದಲಾದ ಯೋಗಾಸನಗಳನ್ನು ನಿತ್ಯವೂ ಅನುಸರಿಸುವ ಮೂಲಕ ಒಟ್ಟಾರೆ ಆರೋಗ್ಯವನ್ನು ವೃದ್ದಿಸುವ ಜೊತೆಗೇ ಶೀಘ್ರಸ್ಖಲನದ ತೊಂದರೆಯೂ ದೂರವಾಗುತ್ತದೆ ಹಾಗೂ ಆರೋಗ್ಯಕರ ಲೈಂಗಿಕ ಜೀವನ ನಡೆಸಲು ಸಾಧ್ಯವಾಗುತ್ತದೆ.

English summary

Premature Ejaculation: Myths and Truths

Across the lifespan, premature ejaculation (PE, coming too soon) is men’s number one sex problem. In every adult age group, about 30 percent of men complain of poor ejaculatory control. Among older men, erectile dysfunction becomes more common—and gets all the headlines—but across the lifespan, from 18 on, PE affects more men. As a result, PE has spawned a conventional wisdom, for example, that the men who lack ejaculatorty control suffer serious anxiety problems.
X
Desktop Bottom Promotion