For Quick Alerts
ALLOW NOTIFICATIONS  
For Daily Alerts

ದಿನಕ್ಕೊಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿದರೆ ಮೂತ್ರನಾಳದ ಸೋಂಕು ಕಡಿಮೆಯಾಗುತ್ತದೆ

|

ಮೂತ್ರನಾಳದ ಸೋಂಕು ಅಥವಾ ಯುಟಿಐ (urinary tract infection (UTI)ಎಂದರೆ ಮೂತ್ರನಾಳ ಹಾಗೂ ಮೂತ್ರಕೋಶದಲ್ಲಿ ಎದುರಾಗುವ ಬ್ಯಾಕ್ಟೀರಿಯಾದ ಸೋಂಕು ಆಗಿದೆ. ಸಾಮಾನ್ಯವಾಗಿ ಈ ಬ್ಯಾಕ್ಟೀರಿಯಾಗಳು ಮೂತ್ರನಾಳದ ಮೂಲಕ ಹಿಮ್ಮುಖ ಸಾಗುತ್ತಾ ಮೂತ್ರಕೋಶಕ್ಕೆ ತಲುಪುತ್ತವೆ ಹಾಗೂ ಮೂತ್ರದ ಕ್ಷಾರೀಯ ವಾತಾವರಣದಲ್ಲಿಯೂ ಸೋಂಕು ಹರಡಿ ಅಪಾರ ಉರಿ, ನೋವು, ಜ್ವರ ಹಾಗೂ ಕೆಲವೊಮ್ಮೆ ಮೂತ್ರದೊಡನೆ ರಕ್ತವೂ ಒಸರುವಂತೆ ಮಾಡುತ್ತದೆ.

ಈ ಸೋಂಕು ನಿಧಾನವಾಗಿ ಪ್ರಾರಂಭವಾದರೂ ಉಲ್ಬಣಗೊಳ್ಳಲು ಹೆಚ್ಚಿನ ಸಮಯ ಬೇಕಾಗಿಲ್ಲ. ಹಾಗಾಗಿ ಈ ಸೋಂಕು ತಗಲಿರುವ ಪ್ರಥಮ ಸೂಚನೆಗಳನ್ನು ಪಡೆದ ತಕ್ಷಣವೇ ಸೂಕ್ತ ವೈದ್ಯಕೀಯ ನೆರವನ್ನು ಪಡೆಯುವುದು ಅಗತ್ಯ. ಈ ಬ್ಯಾಕ್ಟೀರಿಯಾಗಳನ್ನು ದೇಹದಿಂದ ಹೊರಹಾಕಲು ಅತ್ಯುತ್ತಮ ಹಾಗೂ ನೈಸರ್ಗಿಕ ವಿಧಾನವೆಂದರೆ ಮೂತ್ರದ ಪ್ರಮಾಣ ಮತ್ತು ಆವರ್ತನಗಳನ್ನು ಹೆಚ್ಚಿಸುವುದು. ನಿಮಗೆ ಚಿಕಿತ್ಸೆ ನೀಡುವ ವೈದ್ಯರೂ ಮೊದಲಾಗಿ ಈ ಸಲಹೆಯನ್ನೇ ನೀಡುತ್ತಾರೆ. ಇದಕ್ಕಾಗಿ ಸಾಕಷ್ಟು ನೀರು ಮತ್ತು ದ್ರವಾಹಾರಗಳನ್ನು ಸತತವಾಗಿ ಸೇವಿಸುತ್ತಾ ಹೋಗಬೇಕು. ಈ ಕಾರ್ಯಕ್ಕೆ ಅತ್ಯುತ್ತಮವಾದ ನೈಸರ್ಗಿಕ ದ್ರವಾಹಾರವೆಂದರೆ ದಾಳಿಂಬೆ ಹಣ್ಣಿನ ರಸ! ಇದರಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿದ್ದು ಮೂತ್ರನಾಳದ ಸೋಂಕನ್ನು ನಿವಾರಿಸಲು ಅತ್ಯುತ್ತಮವಾದ ಪರಿಹಾರವಾಗಿದೆ.

 ಹಾಗಾದರೆ, ದಾಳಿಂಬೆ ರಸವೇ ಏಕೆ?

ಹಾಗಾದರೆ, ದಾಳಿಂಬೆ ರಸವೇ ಏಕೆ?

ದಾಳಿಂಬೆಯಲ್ಲಿ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟುಗಳು ಮೂತ್ರನಾಳದ ಮೂಲಕ ಹಾದು ಬಂದಿರುವ ಬ್ಯಾಕ್ಟೀರಿಯಾ ಗಳನ್ನು ಮೂತ್ರನಾಳ ಮತ್ತು ಮೂತ್ರಕೋಶದ ಒಳಗೋಡೆಗಳಿಗೆ ಅಂಟಿಕೊಳ್ಳುವುದನ್ನು ತಡೆಯುತ್ತದೆ. ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಗತ್ಯವಾದ ಪೋಷಕಾಂಶ ವಾಗಿದೆ. ಹಾಗಾಗಿ ಈ ರಸದ ಸೇವನೆಯಿಂದ ರೊಗ ನಿರೋಧಕ ಶಕ್ತಿ ಇನ್ನಷ್ಟು ಬಲಯುತವಾಗುತ್ತದೆ ಹಾಗೂ ಇದು ದೇಹದಿಂದ ಬ್ಯಾಕ್ಟೀರಿಯಾಗಳ ಸೋಂಕನ್ನು ನಿವಾರಿಸಲೂ ನೆರವಾಗುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿ ಬಲಯುತವಾಗಿರುವ ಮೂಲಕ ಮೂತ್ರನಾಳದ ಸೋಂಕು ಶೀಘ್ರವೇ ಗುಣವಾಗುತ್ತದೆ.

ಇದರ ಬಳಕೆ ಹೇಗೆ?

ಇದರ ಬಳಕೆ ಹೇಗೆ?

ಮೂತ್ರನಾಳದ ಸೋಂಕಿನಿಂದ ರಕ್ಷಣೆ ಪಡೆಯಲು ಉತ್ತಮ ವಿಧಾನವೆಂದರೆ ನಿಮ್ಮ ನಿತ್ಯದ ಆಹಾರದಲ್ಲಿ, ರಾತ್ರಿಯ ಊಟವನ್ನೂ ಸೇರಿಸಿ, ಒಂದು ಕಪ್ ನಷ್ಟು ತಾಜಾ ದಾಳಿಂಬೆ ಬೀಜಗಳನ್ನು ಸೇವಿಸುವ ಮೂಲಕ ಈ ಸೊಂಕು ಎದುರಾಗದಂತೆ ತಡೆಯಬಹುದು. ಒಂದು ವೇಳೆ ಈ ಸೋಂಕು ಈಗಾಗಲೇ ಎದುರಾಗಿದ್ದರೆ ದಾಳಿಂಬೆ ರಸವನ್ನು ನಿತ್ಯವೂ ಕೊಂಚ ಪ್ರಮಾಣದಲ್ಲಿ ಸೇವಿಸಬೇಕು. ಈ ಸೋಂಕು ಅತಿ ಶೀಘ್ರವೇ ಗುಣವಾಗುತ್ತದೆ.

Most Read:ದೇಹದ ಲಿವರ್‌ನ್ನು ಆಯುರ್ವೇದ ವಿಧಾನದ ಮೂಲಕ ಆರೋಗ್ಯವಾಗಿಡಲು 11 ಟಿಪ್ಸ್

ಮೂತ್ರನಾಳದ ಸೋಂಕು ತಡೆಗಟ್ಟಲು ಇತರ ವಿಧಾನಗಳು

ಮೂತ್ರನಾಳದ ಸೋಂಕು ತಡೆಗಟ್ಟಲು ಇತರ ವಿಧಾನಗಳು

ದಾಳಿಂಬೆಯ ಹೊರತಾಗಿ ಈ ಸೋಂಕನ್ನು ತಡೆಗಟ್ಟುವ ಸಾಮರ್ಥ್ಯವಿರುವ ಇತರ ನೈಸರ್ಗಿಕ ಸಾಮಾಗ್ರಿಗಳೂ ಇವೆ. ಈ ಸೋಂಕನ್ನು ಉಲ್ಬಣಗೊಳಿಸದಂತೆ ತಡೆಯಲು ಪ್ರತಿಜೀವಕ ಅಥವಾ ಆಂಟಿಬಯಾಟಿಕ್ ಗುಳಿಗೆಗಳೂ ಲಭ್ಯವಿವೆ. ಆದರೆ, ಈ ಸೋಂಕಿನಿಂದ ರಕ್ಷಿಸಿಕೊಳ್ಳಲು ನೈಸರ್ಗಿಕ ಸಾಮಾಗ್ರಿಗಳೇ ಸುರಕ್ಷಿತ

ಹಾಗೂ ಅಡ್ಡಪರಿಣಾಮಗಳಿಂದ ಮುಕ್ತವಾಗಿವೆ. ಬನ್ನಿ, ಈ ನೈಸರ್ಗಿಕ ವಿಧಾನಗಳ ಬಗ್ಗೆ ಅರಿಯೋಣ.

ಲಿಂಬೆ ರಸ

ಲಿಂಬೆ ರಸ

ದಾಳಿಂಬೆಯಂತೆಯೇ, ಲಿಂಬೆರಸವೂ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳೊಂದಿಗೆ ಸಮೃದ್ದವಾಗಿದ್ದು ದೇಹವನ್ನು ಕ್ಷಾರೀಯಗೊಳಿಸುತ್ತದೆ. ಅಲ್ಲದೇ ಲಿಂಬೆರಸ ಅತ್ಯುತ್ತಮ ಮೂತ್ರವರ್ಧಕವೂ ಆಗಿದೆ ಹಾಗೂ ಮೂತ್ರನಾಳದಲ್ಲಿ ಬ್ಯಾಕ್ಟೀರಿಯಾಗಳ ಸೋಂಕು ಹೆಚ್ಚುವುದನ್ನು ತಡೆಗಟ್ಟುತ್ತದೆ. ಅಲ್ಲದೇ ದೇಹದಿಂದ ಕಲ್ಮಶಗಳನ್ನು ನಿವಾರಿಸುವ ಜೊತೆಗೇ ಮೂತ್ರನಾಳದಲ್ಲಿರುವ ಕಲ್ಮಶಗಳನ್ನೂ ನಿವಾರಿಸುತ್ತದೆ.

ಕ್ರ್ಯಾನ್ಬೆರಿ ಜ್ಯೂಸ್

ಕ್ರ್ಯಾನ್ಬೆರಿ ಜ್ಯೂಸ್

ಈ ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಇತರ ಪೋಷಕಾಂಶಗಳು ಮೂತ್ರನಾಳದಲ್ಲಿ ಬ್ಯಾಕ್ಟೀರಿಯಾಗಳು ಆಗಮಿಸುವುದನ್ನು ತಡೆಗಟ್ಟುತ್ತದೆ ಹಾಗೂ ಈಗಾಗಲೇ ಮೂತ್ರನಾಳದ ಒಳಗೋಡೆಗಳಲ್ಲಿ ಅಂಟಿಕೊಂಡಿದ್ದ ಬ್ಯಾಕ್ಟೀರಿಯಾಗಳನ್ನು ಸಡಿಲಿಸಿ ನಿವಾರಿಸುವ ಮೂಲಕ ಸೋಂಕನ್ನು ಗುಣಪಡಿಸಲು ನೆರವಾಗುತ್ತದೆ. ಅಲ್ಲದೇ ಈ ರಸ ದೇಹದಿಂದ ಕಲ್ಮಶಗಳನ್ನು ಹೊರಹಾಕಲೂ ನೆರವಾಗುವ ಮೂಲಕ ಈ ಸೋಂಕು ಮತ್ತೆ ಮರುಕಳಿಸದಂತೆ ತಡೆಯುತ್ತದೆ.

Most Read:ಮೂತ್ರ ನಾಳದ ಸೋಂಕಿನ ಸಮಸ್ಯೆ ನಿವಾರಣೆಗೆ 'ಕೊತ್ತಂಬರಿ ಬೀಜಗಳು'

ಮೊಸರು

ಮೊಸರು

ಮೊಸರಿನಲ್ಲಿಯೂ ನೈಸರ್ಗಿಕ ಪ್ರತಿಜೀವಕ ಪೋಷಕಾಂಶಗಳಿವೆ ಹಾಗೂ ಇವು ದೇಹದಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೆರವಾಗುತ್ತದೆ. ಈ ಮೂಲಕ ಮೂತ್ರನಾಳದ ಸೋಂಕು ಗುಣವಾಗಲು ಮತ್ತು ಮರುಕಳಿಸದಂತೆ ತಡೆಯಲು ನೆರವಾಗುತ್ತದೆ. ಹಾಗಾಗಿ, ಮೊಸರನ್ನು ನಿತ್ಯವೂ ಸೇವಿಸುವಂತೆ ತಜ್ಞರು ಸಲಹೆ ಮಾಡುತ್ತಾರೆ. ಅಲ್ಲದೇ ಮೊಸರಿನಲ್ಲಿ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳು ಸಮೃದ್ದವಾಗಿದ್ದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಜೊತೆಗೇ ಒಟ್ಟಾರೆ ಆರೋಗ್ಯವನ್ನು ಸಹಾ ಉತ್ತಮಗೊಳಿಸುತ್ತದೆ. ಮೂತ್ರನಾಳದ ಸೋಂಕಿನಿಂದ ರಕ್ಷಣೆ ಪಡೆಯಲು ಪ್ರತಿಜೀವಕ ಔಷಧಿಗಳು ಉತ್ತಮ ಆಯ್ಕೆಯಾದರೂ ನೈಸರ್ಗಿಕ ವಿಧಾನಗಳು ಹೆಚ್ಚು ಸುರಕ್ಷಿತವಾಗಿದ್ದು ಈ ಔಷಧಿಗಳಷ್ಟೇ ಉತ್ತಮ ಪರಿಣಾಮವನ್ನು ಒದಗಿಸುತ್ತವೆ.

English summary

Pomegranate juice a Day Keeps Urinary Tract Infections at Bay

A bacterial infection that affects urethra or the tube that transports urine from the bladder is called urinary tract infection (UTI). As the infection worsens it soon reaches the bladder causing pain, burning sensation, fever and sometimes, discharge of blood with urine.
X
Desktop Bottom Promotion