For Quick Alerts
ALLOW NOTIFICATIONS  
For Daily Alerts

ಪುರುಷರ ಭಾವನೆಗಳ ಏರಿಳಿತ-ನೀವು ತಿಳಿಯಲೇಬೇಕಾದ ಸಂಗತಿಗಳು

|

ಮಹಿಳೆಯರು ಮಾತ್ರ ಭಾವನೆಗಳನ್ನು ವ್ಯಕ್ತಪಡಿಸುವರು ಮತ್ತು ನಮ್ಮ ಮನಸ್ಸಿಗೆ ತುಂಬಾ ನೋವಾದಾಗ ಅಳುವರು ಎನ್ನುವ ನಂಬಿಕೆ ಇದೆ. ಆದರೆ ಪುರುಷರು ಕೆಲವೊಂದು ಸಂದರ್ಭದಲ್ಲಿ ಭಾವನಾತ್ಮಕವಾಗಿ ತುಂಬಾ ದುರ್ಬಲರಾಗುವರು ಮತ್ತು ತಮ್ಮ ಮನಸ್ಸಿನ ನೋವನ್ನು ಹೊರಗೆ ಹಾಕಲು ಅವರು ಕೂಡ ದುಃಖಿಸುವರು. ನಿಮಗೆ ಜೀವನದಲ್ಲಿ ಇಂತಹ ಯಾವುದೇ ಅನುಭವ ಆಗಿದೆಯಾ? ಭಾವನೆಗಳು ಅತಿಯಾಗಿ ಕಣ್ಣೀರು ಹಾಕಿದ್ದೀರಾ? ಮನಸ್ಥಿತಿಯಲ್ಲಿ ಯಾವುದೇ ರೀತಿಯ ಅಸಮತೋಲನವನ್ನು ನೀವು ಗಮನಿಸಿದ್ದೀರಾ? ನೀವು ಪ್ರಾಮಾಣಿಕವಾಗಿ ಈ ಎರಡು ಪ್ರಶ್ನೆಗಳಿಗೆ ಹೌದು ಎಂದು ಉತ್ತರಿಸಿದರೆ ಆಗ ನೀವು ತುಂಬಾ ಮನಸ್ಥಿತಿ ಬದಲಾವಣೆ ಎದುರಿಸಿದ್ದೀರಿ ಎಂದು ಹೇಳಬಹುದು. ನಿಮ್ಮ ತಲೆಯಲ್ಲಿ ಹಲವಾರು ರೀತಿಯ ಭಾವನೆಗಳು ತುಂಬಿಕೊಂಡ ವೇಳೆ ಸಂತೋಷ ಹಾಗೂ ಕೋಪವು ಒಂದು ಲೋಲಕದಂತೆ ತೂಗುತ್ತಾ ಇರುವುದು.

ಸುಳ್ಳನ್ನು ಬಹಿರಂಗ ಪಡಿಸಲಾಗಿದೆ

ಸುಳ್ಳನ್ನು ಬಹಿರಂಗ ಪಡಿಸಲಾಗಿದೆ

ಸುಳ್ಳನ್ನು ಬಹಿರಂಗ ಪಡಿಸಿರುವುದು ಅಥವಾ ಇದನ್ನು ನೀವು ಬೇರೆ ಏನಾದರೂ ಕರೆಯಬಹುದು. ಆದರೆ ಮನಸ್ಥಿತಿ ಬದಲಾವಣೆ ಎನ್ನುವುದು ಕೇವಲ ಮಹಿಳೆಯರಲ್ಲಿ ಮಾತ್ರ ಇರುವುದಲ್ಲ. ವೈದ್ಯರು, ಸಮಾಜಶಾಸ್ತ್ರಜ್ಞರು ಮತ್ತು ವಿಜ್ಞಾನಗಳಿಗೆ ಇದಕ್ಕೆ ವಿರುದ್ಧವಾಗಿ ಆಲೋಚನೆ ಮಾಡಿದ್ದಾರೆ. ಕೇವಲ ಮಹಿಳೆಯರು ಮಾತ್ರವಲ್ಲದೆ, ಪುರುಷರು ಕೂಡ ತಮ್ಮ ಭಾವನೆಗಳ ಏಳುಬೀಳುಗಳನ್ನು ಅನುಭವಿಸುವರು ಎಂದು ಹೇಳಲಾಗುತ್ತದೆ. ಪುರುಷರ ದೇಹದಲ್ಲಿ ಹಾರ್ಮೋನು ಬದಲಾವಣೆಗಳು ಆದಾಗ ಅದು ಮಾನಸಿಕ ಬದಲಾವಣೆಗಳಿಗೂ ಕಾರಣವಾಗುವುದು. ಇದರ ಪರಿಣಾಮವಾಗಿ ಮನಸ್ಥಿತಿ ಬದಲಾವಣೆಗಳು ಆಗುವುದು.

ಪುರುಷರಲ್ಲಿ ಮನಸ್ಥಿತಿ

ಪುರುಷರಲ್ಲಿ ಮನಸ್ಥಿತಿ

ದೇಹದಲ್ಲಿ ಕೆಲವೊಂದು ರೀತಿಯ ರಾಸಾಯನಿಕಗಳು ತುಂಬಾ ಕುಗ್ಗುವುದು ಅಥವಾ ಹಿಗ್ಗುವುದರಿಂದಾಗಿ ಪುರುಷರ ಭಾವನೆಗಳಲ್ಲಿ ಕೂಡ ಗಣನೀಯವಾಗಿ ಬಲಲಾವಣೆಗಳು ಆಗುವುದು. ಅದಾಗ್ಯೂ, ಮಹಿಳೆಯರಲ್ಲಿ ಋತುಚಕ್ರದ ವೇಳೆ ಹಾರ್ಮೋನು ಬದಲಾವಣೆಗಳು ಆಗುವ ಕಾರಣದಿಂದಾಗಿ ಅವರಲ್ಲಿ ಮನಸ್ಥಿತಿ ಬದಲಾವಣೆಯು ಹೆಚ್ಚಾಗಿ ಇರುವುದು. ಮಹಿಳೆಯರಲ್ಲಿ ಮನಸ್ಥಿತಿ ಬದಲಾವಣೆಯು ತುಂಬಾ ದೀರ್ಘಕಾಲದ ತನಕ ಇರಬಹುದು. ಅದೇ ರೀತಿಯಾಗಿ ಪುರುಷರಲ್ಲಿ ಮನಸ್ಥಿತಿ ಬದಲಾವಣೇಯು ತುಂಬಾ ಕಡಿಮೆ ಹಾಗೂ ನಾಟಕೀಯವಾಗಿ ಕಡಿಮೆ ಇರುವುದು. ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು ಎಷ್ಟು ಕುಗ್ಗಿದೆ ಎನ್ನುವುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ.

ಖಿನ್ನತೆ ಮತ್ತು ಮನಸ್ಥಿತಿ ಬದಲಾವಣೆ ಮಧ್ಯೆ ಇರುವ ವ್ಯತ್ಯಾಸ

ಖಿನ್ನತೆ ಮತ್ತು ಮನಸ್ಥಿತಿ ಬದಲಾವಣೆ ಮಧ್ಯೆ ಇರುವ ವ್ಯತ್ಯಾಸ

ದೀರ್ಘಕಾಲದ ಖಿನ್ನತೆ ಮತ್ತು ಮನಸ್ಥಿತಿ ಬದಲಾವಣೆ ಎನ್ನುವುದು ತುಂಬಾ ಭಿನ್ನ ವಿಚಾರಗಳು ಆಗಿವೆ. ಖಿನ್ನತೆ ಅನ್ನುವುದು ಸಾಮಾನ್ಯವಾಗಿ ಕೆಲವೊಂದು ರೀತಿಯ ಬಾಹ್ಯ ಪರಿಣಾಮಗಳಾಗಿರುವ ನೋವು, ಪ್ರೀತಿಪಾತ್ರರ ಸಾವು ಅಥವಾ ಉದ್ಯೋಗ ಕಳೆದುಕೊಳ್ಳುವುದರಿಂದಲೂ ಸಂಭವಿಸುವುದು. ಅದೇ ಮನಸ್ಥಿತಿ ಬದಲಾವಣೆ ಎನ್ನುವುದು ಹಾರ್ಮೋನು ಬದಲಾವಣೆಯಿಂದಾಗಿ ಸಂಭವಿಸುವುದು. ಇದು ಮೆದುಳಿನ ಒಳಗಡೆ ನಡೆಯುವುದು.

Most Read: ಹೊಟ್ಟೆಯ ಕ್ಯಾನ್ಸರ್‌ಗೆ ಕಾರಣವಾಗುವ ಕೆಲವು ಕೆಟ್ಟ ಅಭ್ಯಾಸಗಳು

ಪುರುಷರು ಕೂಡ ಭಾವನಾತ್ಮಕವಾಗಿರುವರು

ಪುರುಷರು ಕೂಡ ಭಾವನಾತ್ಮಕವಾಗಿರುವರು

ಹಿಂದಿನಿಂದಲೂ ಈ ಸುಳ್ಳನ್ನು ಹೆಚ್ಚಿನವರು ನಂಬಿಕೊಂಡು ಬಂದಿದ್ದಾರೆ. ಅದೇನೆಂದರೆ ಪುರುಷರು ಯಾವತ್ತೂ ಭಾವನಾತ್ಮಕವಾಗಬಾರದು ಮತ್ತು ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ ಎಂದು ನಂಬಿಕೊಂಡು ಬರಲಾಗಿದೆ. ಮಹಿಳೆಯರು ಯಾವಾಗಲೂ ಪುರುಷರಿಗಿಂತ ತುಂಬಾ ಭಾವನಾತ್ಮಕವಾಗಿ ಇರುವರು. ಆದರೆ ಪುರುಷರು ಭಾವನಾತ್ಮಕವಾಗಿ ಇರುವುದಿಲ್ಲ ಎಂದು ಹೇಳುವುದು ಒಂದು ರೀತಿಯ ಸುಳ್ಳು. ಕೆಲವೊಂದು ಸಾಮಾಜಿಕ ಕಟ್ಟುಪಾಡುಗಳಿಂದಾಗಿ ಪುರುಷರು ತಮ್ಮ ಭಾವನೆಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವರು. ಆದರೆ ಪುರುಷರು ಕೂಡ ಮಹಿಳೆಯರಷ್ಟೇ ಬಲಿಷ್ಠವಾಗಿ ಭಾವನೆಗಳ ಏರಿಳಿತವನ್ನು ಕಾಣುವರು ಎನ್ನುವುದು ಮಾತ್ರ ವಾಸ್ತವ. ಅದಾಗ್ಯೂ ಮಿಶ್ರ ಭಾವನೆಗಳು ಅತಿಯಾಗಿ ಹರಿಯಲು ಆರಂಭಿಸಿದ ವೇಳೆ ಮನಸ್ಥಿತಿಯು ಲಗಾಮು ಇಲ್ಲದ ಕುದುರೆಯಂತೆ ಆಗುವುದು. ಈ ವೇಳೆ ನೀವು ಇದರ ತೀವ್ರತೆ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಬೇಕು. ವಿಚಾರಗಳನ್ನು ನೀವು ಹದ್ದುಬಸ್ತಿನಲ್ಲಿ ಇಡುವುದು ಹೇಗೆ ಎಂದು ನೀವು ಗುರುತಿಸಿಕೊಳ್ಳುವುದು ಹೇಗೆ? ನೀವು ಈ ರೀತಿಯ ಭಾವನೆಗಳನ್ನು ಎದುರಿಸುತ್ತಾ ಇದ್ದರೆ ಆಗ ನೀವು ಇದನ್ನು ಮಾಡಿಕೊಳ್ಳಿ.

ಈ ರೀತಿಯ ಭಾವನೆಗಳನ್ನು ಎದುರಿಸುತ್ತಾ ಇದ್ದರೆ

ಈ ರೀತಿಯ ಭಾವನೆಗಳನ್ನು ಎದುರಿಸುತ್ತಾ ಇದ್ದರೆ

*ಯಾರ ಬಗ್ಗೆಯಾದರೂ ನಿಮಗೆ ನಿರಂತರ ಅಸೂಯೆಯಾಗುತ್ತಿದ್ದರೆ...

*ನಿಮಗೆ ತೀವ್ರ ಕೋಪ ಹಾಗೂ ಸಿಡುಕಿನ ಭಾವನೆ ಉಂಟಾಗುತ್ತಲಿದ್ದರೆ...

*ಆತಂಕದಿಂದಾಗಿ ನಿದ್ರಾಹೀನತೆ

*ತೀವ್ರ ಭೀತಿ

*ಯಾರ ಅಥವಾ ಯಾವುದರ ಬಗ್ಗೆಯಾದರೂ ಗೀಳು

*ತಾರ್ಕಿಕ ರೀತಿಯ ಚಿಂತನೆ ಕೊರತೆ

Most Read: ಈ ರಾಶಿಯಲ್ಲಿ ಜನಿಸಿದವರು 30 ವರ್ಷದೊಳಗೆ ಶ್ರೀಮಂತರಾಗುವುದು ಪಕ್ಕ...

ನಿಯಂತ್ರಣ ಮಾಡಿಕೊಳ್ಳುವುದು

ನಿಯಂತ್ರಣ ಮಾಡಿಕೊಳ್ಳುವುದು

ಯಾವುದೇ ರೀತಿಯ ವ್ಯಾಯಾಮವನ್ನು ನಿಯಮಿತ ಅಥವಾ ವಾರದಲ್ಲಿ ಮೂರ್ನಾಲ್ಕು ದಿನ ಮಾಡುವುದರಿಂದ ಟೆಸ್ಟೋಸ್ಟೆರಾನ್ ಮಟ್ಟವು ಸಮತೋಲನದಲ್ಲಿ ಇರುವುದು. ಮನಸ್ಥಿತಿ ಬದಲಾವಣೆ ವೇಳೆ ನೀವು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಆಗ ಇದು ನಿಯಂತ್ರಣಕ್ಕೆ ಬರುವುದು. ನಿಮ್ಮನ್ನು ಕೇಳಿ ಎನ್ನುವ ವಿಧಾನ ಮೂಲಕ ನೀವು ಮನಸ್ಥಿತಿ ಬದಲಾವಣೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಈ ರೀತಿಯಾಗಿ ವರ್ತಿಸಲು ಏನು ಕಾರಣ ಎಂದು ನೀವು ಮೊದಲಿಗೆ ಪ್ರಶ್ನೆ ಮಾಡಿಕೊಳ್ಳಿ. ಈ ರೀತಿಯ ವಿಧಾನದಿಂದಾಗಿ ಮೆದುಳು ತುಂಬಾ ತಾರ್ಕಿಕ ರೀತಿಯಲ್ಲಿ ಚಿಂತಿಸಲು ಆರಂಭ ಮಾಡುವುದು. ಇದು ಆರಂಭದಲ್ಲಿ ತುಂಬಾ ಕಷ್ಟವಾಗಬಹುದು. ಆದರೆ ನಿರಂತರ ಪ್ರಯತ್ನ ಮಾಡುವ ಕಾರಣದಿಂದ ಮತ್ತು ತಾಳ್ಮೆಯಿದ್ದರೆ ಆಗ ನಿಮಗೆ ಇದನ್ನು ನಿಯಂತ್ರಣ ಮಾಡಿಕೊಳ್ಳುವ ಕಲೆಯು ಕರಗತವಾಗುವುದು. ಈಗ ನೀವು ಮನಸ್ಥಿತಿ ಬದಲಾವಣೆ ಬಗ್ಗೆ ಸರಿಯಾಗಿ ತಿಳಿದುಕೊಂಡಿರುವಿರಿ. ಪುರುಷರಲ್ಲಿ ಕೂಡ ಮನಸ್ಥಿತಿ ಬದಲಾವಣೆ ಆಗುವುದು. ಇದರ ಬಗ್ಗೆ ನೀವು ತುಂಬಾ ಮುಜುಗರ ಪಟ್ಟುಕೊಳ್ಳಬೇಕಾಗಿಲ್ಲ. ಈಗ ನೀವು ಕೋಪವನ್ನು ನಿಯಂತ್ರಣ ಮಾಡಿಕೊಳ್ಳಲು ತಯಾರಿ ನಡೆಸಿಕೊಳ್ಳಿ.

English summary

Mood Swings in Men: Everything you Need to Know about it

Have you at any point in your life felt countless emotions at the same time? Did you ever experience an uncertainty about your state of mind? If your answer to these questions is in affirmative then honestly, you have been going through a lot of mood swings. When there is cloud of numerous emotions building inside your head, you end up swinging like a pendulum between feelings like happiness, anger and anger.
Story first published: Monday, March 4, 2019, 17:33 [IST]
X
Desktop Bottom Promotion