Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಹಾಲು ಸೇವನೆಯಿಂದ ಕೂಡ ದೇಹದ ತೂಕವನ್ನು ಕಡಿಮೆ ಮಾಡಲು ಸಾಧ್ಯ!
ಅತಿಯಾದ ದೇಹ ತೂಕ ಇಳಿಸಿಕೊಳ್ಳಬೇಕಾದರೆ ಹಾಲು ಹಾಗೂ ಹಾಲಿನ ಉತ್ಪನ್ನಗಳು ಸೇರಿದಂತೆ ಕೊಬ್ಬಿನಂಶ ಇರುವ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕೆಂದು ಎಲ್ಲರೂ ಹೇಳುವುದನ್ನು ಕೇಳಿದ್ದೇವೆ. ಆದರೆ ಪೌಷ್ಟಿಕಾಂಶ ತಜ್ಞರು ಮಾತ್ರ ಈ ಬಗ್ಗೆ ಬೇರೆಯದೇ ಅಭಿಪ್ರಾಯ ಮಂಡಿಸುತ್ತಾರೆ. ರಾಷ್ಟ್ರೀಯ ಪೌಷ್ಟಿಕಾಂಶ ಸಂಶೋಧನಾ ಸಂಸ್ಥೆಯ ವರದಿಯ ಪ್ರಕಾರ, ಹಾಲಿನ ಉತ್ಪನ್ನಗಳ ಸೇವನೆ ನಿಲ್ಲಿಸುವುದು ತೂಕ ಕಡಿಮೆ ಮಾಡುಕೊಳ್ಳುವಲ್ಲಿ ಅಷ್ಟೊಂದು ಪರಿಣಾಮಕಾರಿ ಅಲ್ಲ ಎನ್ನಲಾಗಿದೆ. ವಾಸ್ತವದಲ್ಲಿ ಕಡಿಮೆ ಫ್ಯಾಟ್ ಹಾಗೂ ಫ್ಯಾಟ್ ತೆಗೆದ ಹಾಲಿನ ಉತ್ಪನ್ನಗಳ ಸೇವನೆಯಿಂದ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ, ವಿಟಮಿನ್ ಡಿ ಹಾಗೂ ಪ್ರೋಟೀನ್‌ಗಳು ಸಿಗುತ್ತವೆ ಎನ್ನುತ್ತಾರೆ ತಜ್ಞರು.
ಹಾಲಿನ ಸೇವನೆಯಿಂದ ದೇಹದ ತೂಕವನ್ನು ಕಡಿಮೆ ಮಾಡಲು ಸಾಧ್ಯ!
ಕಡಿಮೆ ಫ್ಯಾಟ್ ಹಾಗೂ ಫ್ಯಾಟ್ ತೆಗೆದ ಹಾಲಿನಿಂದಾಗುವ ಆರೋಗ್ಯಕರ ಪರಿಣಾಮಗಳ ಬಗ್ಗೆ ಹಲವಾರು ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ. ದಿನಕ್ಕೆ ಕನಿಷ್ಠ ಮೂರು ಬಾರಿ ಕಡಿಮೆ ಫ್ಯಾಟ್ ಹಾಲಿನ ಸೇವನೆಯಿಂದ ದೇಹದ ತೂಕವನ್ನು ಸಮತೋಲನದಲ್ಲಿರಿಸಲು ಸಾಧ್ಯ ಎಂಬುದು ತಿಳಿದು ಬಂದಿದೆ.
ಹಾಲಿನಿಂದ ತೃಪ್ತಿ ಹೆಚ್ಚು
ಕೆನೆ ತೆಗೆಯಲಾದ ಹಾಲಿನಲ್ಲಿ ಕಡಿಮೆ ಕ್ಯಾಲೊರಿಗಳಿದ್ದು ಸೋಡಾ, ಚಹಾ ಹಾಗೂ ಇತರ ಎನರ್ಜಿ ಡ್ರಿಂಕ್‌ಗಳಿಗಿಂತಲೂ ಇದರ ಸೇವನೆಯಿಂದ ಹೆಚ್ಚು ತೃಪ್ತಿ ಲಭಿಸುತ್ತದೆ ಎನ್ನುತ್ತಾರೆ ಆಹಾರ ತಜ್ಞರು. ಹಾಲು ಪ್ರೋಟೀನ್‌ನಿಂದ ಸಮೃದ್ಧವಾಗಿರುವುದರಿಂದ ಇದರ ಸೇವನೆಯು ತೃಪ್ತಿಯ ಭಾವನೆಯನ್ನು ಮೂಡಿಸಿ ಪದೆ ಪದೆ ತಿಂಡಿ ಸೇವಿಸುವ ಅಭ್ಯಾಸವನ್ನು ಕಡಿಮೆ ಮಾಡಿಸುತ್ತದೆ.

ದೈಹಿಕ ಕಾರ್ಯಕ್ಷಮತೆ ಹೆಚ್ಚಿಸುವ ಹಾಲು
ತೂಕ ಇಳಿಸಿಕೊಳ್ಳಲು ಜಿಮ್‌ನಲ್ಲಿ ವರ್ಕ ಔಟ್ ಮಾಡುವ ಸಂದರ್ಭದಲ್ಲಿ ಹಾಲಿನ ಸೇವನೆ ಅತ್ಯಂತ ಉಪಯುಕ್ತವಾಗಿದೆ. ವ್ಯಾಯಾಮ ಮುಗಿದ ತಕ್ಷಣ ಯಾವುದೋ ಎನರ್ಜಿ ಡ್ರಿಂಕ್ಸ್ ಮೊರೆ ಹೋಗುವುದಕ್ಕಿಂತ ಹಾಲಿನ ಸೇವನೆ ಶ್ರೇಷ್ಠವಾಗಿದೆ. ಇದರಿಂದ ಫ್ಯಾಟ್ ಅಂಶ ಕಡಿಮೆಯಾಗಿ ದೇಹದ ಸ್ನಾಯುಗಳ ಬಲವರ್ಧನೆಗೆ ಅವಶ್ಯಕವಾದ ಪೌಷ್ಟಿಕಾಂಶಗಳು ದೊರಕಿ ಒಟ್ಟಾರೆ ದೈಹಿಕ ಕಾರ್ಯಕ್ಷಮತೆ ಹೆಚ್ಚಾಗುತ್ತದೆ.

ಅತ್ಯಂತ ಆರೋಗ್ಯಕರ ಪೇಯ ಹಾಲು
ದೇಹದ ತೂಕ ಇಳಿಸಿಕೊಳ್ಳುವ ಸಂದರ್ಭದಲ್ಲಿ ಸಾಕಷ್ಟು ವ್ಯಾಯಾಮ ಮಾಡಿ ದೇಹದ ಕ್ಯಾಲೊರಿಗಳನ್ನು ಕಡಿಮೆಗೊಳಿಸಬೇಕಾಗುತ್ತದೆ. ಅಂದರೆ ದೇಹದ ಒಳಗೆ ಸೇರುವ ಕ್ಯಾಲೊರಿಗಳಿಗಿಂತ ಹೊರಹೋಗುವ ಕ್ಯಾಲೊರಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ನಿರ್ದಿಷ್ಟ ಬಗೆಯ ಕಡಿಮೆ ಫ್ಯಾಟ್ ಇರುವ ಹಾಲು ಸೇವಿಸಿದಲ್ಲಿ ದೈಹಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು ಹಾಗೂ ಅದೇ ಸಮಯಕ್ಕೆ ಕ್ಯಾಲೊರಿಗಳ ಸೇವನೆಯಲ್ಲಿ ಇಳಿಕೆ ತರಬಹುದಾಗಿದೆ. ನೀವು ಒಂದು ವೇಳೆ ಡೇರಿ ಹಾಲನ್ನು ಕುಡಿಯುತ್ತೀರಾದರೆ ಫ್ಯಾಟ್ ಇಲ್ಲದ ಹಾಲು ಬಳಸಿ. ಒಂದು ಕಪ್ ಫ್ಯಾಟ್ ಹಾಲಿನಲ್ಲಿ 150 ಕ್ಯಾಲೊರಿ ಇದ್ದರೆ ಫ್ಯಾಟ್ ಇಲ್ಲದ ಕಪ್ ಹಾಲಿನಲ್ಲಿ ಕೇವಲ 83 ಕ್ಯಾಲೊರಿಗಳಿರುತ್ತವೆ. ಇನ್ನು ಸೋಯಾ ಹಾಲು ಕುಡಿಯುವಿರಾದರೆ ಅದರಲ್ಲಿ ಸಿಹಿ ಬೆರೆಸುವುದು ಬೇಡ. ಸೋಯಾ ಹಾಲು ಸಹ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕವಾಗಿದೆ. ಹಾಗೆಯೇ ಬಾದಾಮಿ ಹಾಲು ಸಹ ಆರೋಗ್ಯಕ್ಕೆ ಉತ್ತಮವಾಗಿದೆಯಾದರೂ ಇದರ ಸೇವನೆಯ ನಂತರ ಹಸಿವು ಹೆಚ್ಚಾಗುತ್ತದೆ.

ನಿರ್ಜಲೀಕರಣವಾಗದಂತೆ ಎಚ್ಚರಿಕೆ ವಹಿಸಿ
ದೇಹದ ತೂಕ ಇಳಿಸಿಕೊಳ್ಳಲು ಯಾವುದೇ ಬಗೆಯ ಹಾಲು ಸೇವಿಸಿದರೂ ಅದನ್ನು ಸಮತೋಲಿತ ಪ್ರಮಾಣದಲ್ಲಿ ಸೇವಿಸುವುದು ಸೂಕ್ತ. ಯಾವುದೇ ಕಾರಣಕ್ಕೂ ಅತಿಯಾದ ಹಾಲು ಸೇವನೆ ಒಳ್ಳೆಯದಲ್ಲ. ಆದರೆ ಹಾಲು ಕುಡಿಯುತ್ತಿದ್ದೇನೆ ಎಂದು ನೀರು ಸೇವನೆಯನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಕೂಡದು. ತೂಕ ಇಳಿಕೆಗೆ ನೀರು ಕುಡಿಯುವುದು ಅತಿ ಅವಶ್ಯವಾಗಿದ್ದು ಇದರಿಂದ ದೇಹ ನಿರ್ಜಲೀಕರಣವಾಗದಂತೆ ತಡೆಗಟ್ಟಲು ಸಹ ಸಹಾಯವಾಗುತ್ತದೆ.



Click it and Unblock the Notifications
