For Quick Alerts
ALLOW NOTIFICATIONS  
For Daily Alerts

ದೇಹದ ಎರಡೂ ಕಿಡ್ನಿಗಳನ್ನು ಸ್ವಚ್ಛಗೊಳಿಸುವ ನೈಸರ್ಗಿಕ ಜ್ಯೂಸ್‌ಗಳು

|

ದೇಹದಲ್ಲಿನ ವಿಷಕಾರಿ ಅಂಶಗಳು ಹಾಗೂ ಇತರ ವಸ್ತುಗಳನ್ನು ರಕ್ತಪರಿಚಲನಾ ವ್ಯವಸ್ಥೆಯಿಂದ ಹೊರಹಾಕುವಲ್ಲಿ ಕಿಡ್ನಿ ಗಳು (ಮೂತ್ರಪಿಂಡಗಳು) ಬಹು ಮುಖ್ಯ ಪಾತ್ರ ವಹಿಸುತ್ತವೆ. ದೇಹದಲ್ಲಿ ಸಂಗ್ರಹವಾಗುವ ತ್ಯಾಜ್ಯ ವಸ್ತುಗಳು ಬೇಗನೆ ದೇಹದಿಂದ ಹೊರಹಾಕಲ್ಪಡದಿದ್ದಲ್ಲಿ ಗಂಭೀರ ಅನಾರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಹೀಗಾಗಿ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವ ಕಿಡ್ನಿಗಳ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ. ಸಮತೋಲಿತ ಆಹಾರ, ಶುದ್ಧ ನೀರಿನ ಸೇವನೆ ಮಾಡದಿದ್ದಲ್ಲಿ ದೇಹದಲ್ಲಿ ವಿಷಕಾರಿ ಅಂಶಗಳು ಹೆಚ್ಚಾಗಿ ಕಿಡ್ನಿ, ಲಿವರ್ ಹಾಗೂ ಇತರ ಅಂಗಗಳ ಮೇಲೆ ದುಷ್ಪರಿಣಾಮ ಉಂಟಾಗಬಹುದು.

ಮೂತ್ರಪಿಂಡಗಳ ಆರೋಗ್ಯಕ್ಕೆ ಈ ಜ್ಯೂಸ್‌ಗಳನ್ನು ಸೇವಿಸಿ

ಮೂತ್ರಪಿಂಡಗಳ ಆರೋಗ್ಯಕ್ಕೆ ಈ ಜ್ಯೂಸ್‌ಗಳನ್ನು ಸೇವಿಸಿ

ಮೂತ್ರಪಿಂಡಗಳನ್ನು ಆಗಾಗ ಸ್ವಚ್ಛಗೊಳಿಸಿ ಅವು ಆರೋಗ್ಯವಂತವಾಗಿರಲು ಅತಿ ವಿಶಿಷ್ಟವಾದ ಏನನ್ನೋ ಮಾಡಬೇಕಿಲ್ಲ. ಆಗಾಗ ಹೆಚ್ಚು ಪ್ರಮಾಣದ ನೀರು ಕುಡಿಯುತ್ತಿದ್ದರೂ ಸಾಕು. ಆದಾಗ್ಯೂ ನೀರಿನಿಂದ ಕಿಡ್ನಿಗಳಿಗೆ ಬೇಕಾದ ತೇವಾಂಶ ದೊರಕುವುದಾದರೂ ಅವುಗಳಲ್ಲಿನ ವಿಷಕಾರಿ ತ್ಯಾಜ್ಯ ಅಂಶಗಳು ಕೇವಲ ನೀರಿನಿಂದಲೇ ಹೊರಹೋಗಲಾರವು. ಆದರೆ ಕೆಲ ನೈಸರ್ಗಿಕ ಹಣ್ಣುಗಳ ಜ್ಯೂಸ್ ಸೇವನೆಯಿಂದ ಕಿಡ್ನಿಗಳನ್ನು ಸಂಪೂರ್ಣ ಆರೋಗ್ಯಕರವಾಗಿರಿಸಬಹುದು ಎಂಬುದು ಸಮಾಧಾನದ ವಿಷಯವಾಗಿದೆ. ಯಾವೆಲ್ಲ ಹಣ್ಣುಗಳ ಜ್ಯೂಸ್ ಸೇವನೆ ಕಿಡ್ನಿಗಳ ಆರೋಗ್ಯಕ್ಕೆ ಉತ್ತಮ ಎಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ. ಕಿಡ್ನಿಗಳ ಉತ್ತಮ ಆರೋಗ್ಯಕ್ಕೆ ಸಹಕಾರಿ ಈ ಜ್ಯೂಸ್‌ಗಳು

ಕ್ರಾನಬೆರ್ರಿ ಜ್ಯೂಸ್

ಕ್ರಾನಬೆರ್ರಿ ಜ್ಯೂಸ್

ಮೂತ್ರನಾಳದ ಆರೋಗ್ಯಕ್ಕೆ ಕ್ರಾನಬೆರ್ರಿ ಜ್ಯೂಸ್ ಸೇವನೆ ಅತ್ಯುತ್ತಮವಾಗಿದೆ ಎಂಬುದು ಸಾಬೀತಾಗಿದೆ. ಮೂತ್ರನಾಳದ ಮಾರ್ಗದಲ್ಲಿ ಬ್ಯಾಕೀರಿಯಾಗಳು ಅಂಟಿಕೊಳ್ಳದಂತೆ ನೋಡಿ ಕೊಂಡು ಮೂತ್ರಕೋಶಕ್ಕೆ ಯಾವುದೇ ಸೋಂಕು ಬರದಂತೆ ಕ್ರಾನಬೆರ್ರಿ ಜ್ಯೂಸ್ ತಡೆಗಟ್ಟುತ್ತದೆ. ಕಿಡ್ನಿ ಸ್ಟೋನ್‌ಗಳಿಗೆ ಕಾರಣವಾಗುವ ಹೆಚ್ಚುವರಿ ಕ್ಯಾಲ್ಸಿಯಂ ಆಕ್ಸಾಲೇಟ್ ಅಂಶವನ್ನು ಸ್ವಚ್ಛಗೊಳಿಸಿ ಕಿಡ್ನಿ ಸ್ಟೋನ್‌ಗಳಾಗದಂತೆ ಸಹ ಇದು ನೋಡಿಕೊಳ್ಳುತ್ತದೆ. ಆದರೆ ಕ್ರಾನಬೆರ್ರಿ ಜ್ಯೂಸ್ ಕೊಳ್ಳುವಾಗ ಯಾವಾಗಲೂ ಆರ್ಗ್ಯಾನಿಕ್ ಜ್ಯೂಸ್ ಅನ್ನೇ ಕೊಳ್ಳಿ. ಅಲ್ಲದೆ ಅದಕ್ಕೆ ಮೇಲಿನಿಂದ ಯಾವುದೇ ಸಕ್ಕರೆ, ಕೃತಕ ಸುವಾಸನೆ, ರುಚಿ ಮುಂತಾದ ರಾಸಾಯನಿಕಗಳನ್ನು ಸೇರಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲವಾದರೆ ನೀವೇ ಮನೆಯಲ್ಲಿ ಶುದ್ಧವಾದ ಜ್ಯೂಸ್ ತಯಾರಿಸಿಕೊಳ್ಳಿ.

Most Read:ಮನೆ ಔಷಧ: ಕಿಡ್ನಿ ಸ್ಟೋನ್‌ಗೆ ಶಾಶ್ವತ ಪರಿಹಾರ

ಬೀಟ್ ರೂಟ್ ಜ್ಯೂಸ್

ಬೀಟ್ ರೂಟ್ ಜ್ಯೂಸ್

ಬೀಟರೂಟ್ ಅಥವಾ ಬೀಟರೂಟ್ ಜ್ಯೂಸ್‌ನಲ್ಲಿರುವ ಬೀಟೈನ್ ಎಂಬ ಫೈಟೊಕೆಮಿಕಲ್ ಆರೋಗ್ಯಕ್ಕೆ ಅತ್ಯಂತ ಉತ್ತಮವಾಗಿದೆ. ಬೀಟರೂಟ್ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೊಂದಿದ್ದು ಮೂತ್ರದ ಆಸಿಡಿಕ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಮೂತ್ರನಾಳದಲ್ಲಿ ಶೇಖರವಾಗುವ ಹೆಚ್ಚುವರಿ ಕ್ಯಾಲ್ಸಿಯಂ ಅಂಶ ನಿವಾರಣೆಯಾಗಿ ಹರಳುಗಳಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಒಟ್ಟಾರೆಯಾಗಿ ಬೀಟರೂಟ್ ಜ್ಯೂಸ್ ಕಿಡ್ನಿ ಆರೋಗ್ಯಕ್ಕೆ ಅತ್ಯಂತ ಶ್ರೇಷ್ಠವಾಗಿದೆ.

ನಿಂಬೆ ರಸ

ನಿಂಬೆ ರಸ

ನೈಸರ್ಗಿಕವಾಗಿ ಆಸಿಡಿಕ್ ಗುಣ ಹೊಂದಿರುವ ನಿಂಬೆ ರಸ ಮೂತ್ರದಲ್ಲಿ ಸಿಟ್ರೇಟ್ ಮಟ್ಟವನ್ನು ಹೆಚ್ಚಿಸುತ್ತದೆ. ಸಿಟ್ರೇಟ್ ಮಟ್ಟದ ಹೆಚ್ಚಲಳದಿಂದ ಕಿಡ್ನಿ ಸ್ಟೋನ್‌ಗಳಾಗುವ ಅಪಾಯ ಕಡಿಮೆಯಾಗುತ್ತದೆ. ನಾಲ್ಕೈದು ನಿಂಬೆಯ ರಸ ಹಿಂಡಿ ಕಾಲು ಲೀಟರ್ ನೀರಿಗೆ ಬೆರೆಸಿ ಕುಡಿದಲ್ಲಿ ತಕ್ಷಣ ಕಿಡ್ನಿಗಳಿಗೆ ಆರಾಮ ದೊರಕುವುದು. ಅಥವಾ ೮ ಔನ್ಸ್ ನೀರಿಗೆ ಒಂದು ನಿಂಬೆ ಹಣ್ಣು ಹಿಂಡಿ ಪ್ರತಿದಿನ ಕುಡಿಯುವುದು ಆರೋಗ್ಯಕ್ಕೆ ಉತ್ತಮವಾಗಿದೆ.

ಆರೋಗ್ಯಕರ ಜ್ಯೂಸ್ ಮಿಶ್ರಣ

ಆರೋಗ್ಯಕರ ಜ್ಯೂಸ್ ಮಿಶ್ರಣ

ಹಲವಾರು ಆರೋಗ್ಯಕಾರಿ ವಸ್ತುಗಳಿಂದ ತಯಾರಿಸಲಾದ ಮಿಕ್ಸ್ ಜ್ಯೂಸ್‌ಗಳು ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿವೆ. ಹಣ್ಣು ಹಾಗೂ ತರಕಾರಿಗಳಲ್ಲಿನ ನೈಸರ್ಗಿಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ರೀತಿಯ ಮಿಕ್ಸ್ ಜ್ಯೂಸ್ ಸೇವಿಸಲು ಸುಲಭವಾಗಿದ್ದು ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನು ಒಟ್ಟಿಗೆ ಒದಗಿಸುತ್ತವೆ. ಇಂಥ ಜ್ಯೂಸ್‌ನಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಹಾಗೂ ಪೋಷಕಾಂಶಗಳಿಂದ ದೇಹದಲ್ಲಿನ ಕಲ್ಮಶಗಳು ಬೇಗನೆ ಹೊರಹಾಕಲ್ಪಡುತ್ತವೆ. ಇದರಿಂದ ಲಿವರ್ ಹಾಗೂ ಮೂತ್ರಕೋಶಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಸೌತೆಕಾಯಿ, ಕ್ಯಾರೆಟ್, ಪಾಲಕ, ಸೆಲೆರಿ ಮುಂತಾದ ತರಕಾರಿಗಳ ತರಕಾರಿ ಜ್ಯೂಸ್ ಹಾಗೂ ಸೇಬು, ಕಿತ್ತಳೆ, ಪೇರಲ, ಅನಾನಸ್, ಪೀಚ್ ಹಣ್ಣುಗಳನ್ನು ಉಪಯೋಗಿಸಿ ಹಣ್ಣಿನ ಜ್ಯೂಸ್ ತಯಾರಿಸಿ ಸೇವಿಸುವುದು ಕಿಡ್ನಿಗಳ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.

ಕಿಡ್ನಿಗಳ ಆರೋಗ್ಯಕ್ಕೆ ಮನೆಯಲ್ಲೇ ತಯಾರಿಸಬಹುದಾದ ಜ್ಯೂಸ್

ಕಿಡ್ನಿಗಳ ಆರೋಗ್ಯಕ್ಕೆ ಮನೆಯಲ್ಲೇ ತಯಾರಿಸಬಹುದಾದ ಜ್ಯೂಸ್

ಮನೆಯಲ್ಲೇ ಸಿಗಬಹುದಾದ ಕೆಲ ನೈಸರ್ಗಿಕ ವಸ್ತುಗಳನ್ನು ಬಳಸಿ ಒಂದು ಉತ್ತಮ ಪೇಯವನ್ನು ಮನೆಯಲ್ಲಿಯೇ ತಯಾರಿಸಿ ಬಳಸಬಹುದು. ತಾಜಾ ನಿಂಬೆ ಹಣ್ಣು, ಆಪಲ್ ಸೈಡರ್ ವಿನೆಗರ್, ಶುದ್ಧ ನೀರು ಮತ್ತು ರೆನಾಲ್ಟ್ರೆಕ್ಸ್ ಎಂಬ ಕಿಡ್ನಿ ಆರೋಗ್ಯದ ಹರ್ಬಲ್ ಪೋಷಕಾಂಶದ ಔಷಧಿ ಇದಕ್ಕೆ ಬೇಕಾಗುತ್ತದೆ. ಇವನ್ನೆಲ್ಲ ಮಿಕ್ಸ್ ಮಾಡಿ ತಯಾರಿಸಿದ ಪೇಯವನ್ನು ನಾಲ್ಕಾರು ದಿನ ನಿಯಮಿತವಾಗಿ ಸೇವಿಸಿದಲ್ಲಿ ಕಿಡ್ನಿಗಳ ಆರೋಗ್ಯ ಸುಧಾರಿಸಲು ಸಹಕಾರಿಯಾಗುವುದು. ಕಿಡ್ನಿಗಳ ಆರೋಗ್ಯಕ್ಕೆ ಬೇಕಾದ ಎಲ್ಲ ಪೋಷಕಾಂಶಗಳು ನಿಯಮಿತ ಆಹಾರದಲ್ಲಿ ಸಿಗಲಾರವು. ಹೀಗಾಗಿ ರೆನಾಲ್ಟ್ರೆಕ್ಸ್ ಉಪಪೋಷಕಾಂಶವನ್ನು ಬಳಸಿ ಪೇಯ ತಯಾರಿಸಿ ಸೇವಿಸಿದಲ್ಲಿ ಅದರಿಂದ ಉತ್ತಮ ಪರಿಣಾಮಗಳನ್ನು ಕಾಣಬಹುದಾಗಿದೆ. ಹಲವಾರು ಗಿಡಮೂಲಿಕೆಯ ಪೋಷಕಾಂಶಗಳನ್ನು ಸಂಶೋಧಿಸಿ ತಯಾರಿಸಲಾದ ರೆನಾಲ್ಟ್ರೆಕ್ಸ್ ಕಿಡ್ನಿಗಳ ಆರೋಗ್ಯಕ್ಕೆ ಬೇಕಾದ ಅಂಶಗಳನ್ನು ಒಳಗೊಂಡಿರುತ್ತದೆ.

ಕೊನೆ ಮಾತು

ಕೊನೆ ಮಾತು

ಆಗಾಗ ನೀರು ಕುಡಿಯುವುದು ಮೂತ್ರಪಿಂಡಗಳ ಆರೋಗ್ಯ ಕಾಪಾಡಲು ಉತ್ತಮ ಉಪಾಯವಾಗಿದೆ. ಆದರೂ ಅದನ್ನು ಹೊರತುಪಡಿಸಿ ಇತರ ಪೋಷಕಾಂಶಗಳು ಸಹ ಕಿಡ್ನಿಗಳ ಆರೋಗ್ಯಕ್ಕೆ ಅವಶ್ಯ. ಅಂಥ ಪೋಷಕಾಂಶಗಳನ್ನು ನೀಡಬಲ್ಲ ಕೆಲ ಸುಲಭ ವಿಧಾನಗಳನ್ನೇ ಈ ಅಂಕಣದಲ್ಲಿ ತಿಳಿಸಲಾಗಿದೆ. ಇದನ್ನು ಹೊರತುಪಡಿಸಿ ಮತ್ತಾವುದೇ ಉತ್ತಮ ಉಪಾಯಗಳು ನಿಮ್ಮ ಬಳಿ ಇದ್ದಲ್ಲಿ ಕಮೆಂಟ್ ಮಾಡಿ ನಮಗೆ ತಿಳಿಸಲು ಮರೆಯಬೇಡಿ.

English summary

Kidney Cleansing natural juices

The kidneys are our organs that filter out toxins and waste from the bloodstream. Because toxins can affect your entire body, there is no question that supporting your kidneys is crucial for keeping your overall health in check. Without a balanced diet, purified drinking water, and body cleansing, toxins can build up and affect the function of the kidneys, liver, and neighboring organs. They may even lead to kidney stonesand other concerns.
X
Desktop Bottom Promotion