For Quick Alerts
ALLOW NOTIFICATIONS  
For Daily Alerts

ಉಗುರಿನಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳು-ಇದನ್ನೆಲ್ಲಾ ನಿರ್ಲಕ್ಷ್ಯ ಮಾಡದಿರಿ!

|

ಹೆಚ್ಚಿನ ಜನರು ತಮ್ಮ ದೇಹದ ಕೆಲವೊಂದು ಅಂಗಗಳ ಬಗ್ಗೆ ತೀವ್ರ ಕಾಳಜಿ ವಹಿಸುವರು. ಅದರಲ್ಲೂ ಮಹಿಳೆಯರು ತಮ್ಮ ದೇಹ ಸೌಂದರ್ಯದ ಬಗ್ಗೆ ಪ್ರತಿಕ್ಷಣವೂ ತುಂಬಾ ಗಮನಹರಿಸುವರು. ಆದರೆ ಹೆಚ್ಚಾಗಿ ಉಗುರುಗಳ ಆರೋಗ್ಯದ ಬಗ್ಗೆ ನಾವು ಯಾವತ್ತಾದರೂ ಗಮನಹರಿಸಿದ್ದೇವೆಯಾ? ಮಹಿಳೆಯರು ತಮ್ಮ ಉಗುರುಗಳ ಅಂದಚಂದದ ಬಗ್ಗೆ ಗಮನಹರಿಸುವರು. ಆದರೆ ಅದರ ಆರೋಗ್ಯ ಹೇಗಿದೆ ಎಂದು ತಿಳಿದಿರಲಿಕ್ಕಿಲ್ಲ. ಯಾಕೆಂದರೆ ಎಲ್ಲರು ಉಗುರು ಎನ್ನುವುದನ್ನು ಕಡೆಗಣಿಸಿರುವುದು. ಚರ್ಮತಜ್ಞರು ಹೇಳುವ ಪ್ರಕಾರ, ಉಗುರು ನಿಮ್ಮ ದೇಹದ ಬಗ್ಗೆ ಹಲವಾರು ವಿಚಾರಗಳನ್ನು ಹೇಳುತ್ತದೆ.

Nail

ಉಗುರುಗಳ ಮೇಲೆ ಇರುವಂತಹ ಬಿಳಿ ಕಲೆಗಳು ಕ್ಯಾಲ್ಸಿಯಂ ಕಡಿಮೆ ಆಗಿರುವುದು ಅಥವಾ ಯಾವುದೇ ರೀತಿಯ ಸೋಂಕಿನ ಸಮಸ್ಯೆಯಾಗಿರಬಹುದು. ಅದೇ ರೀತಿಯಾಗಿ ನಿಧಾನವಾಗಿ ಬೆಳೆಯುತ್ತಿರುವ ಉಗುರು ಕೆಲವೊಂದು ರೀತಿಯ ವಿಟಮಿನ್ ಮತ್ತು ಪ್ರೋಟೀನ್ ಕೊರತೆಯಿಂದಾಗಿ ಬರಬಹುದು ಎಂದು ಅವರು ತಿಳಿಸುತ್ತಾಋಎ. ಇಲ್ಲಿ ಕೆಲವೊಂದು ಉಗುರಿನ ರೋಗಗಳ ಬಗ್ಗೆ ಹೇಳಲಾಗಿದೆ. ಇದೆಲ್ಲವೂ ಉಗುರನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರುವುದು ಮತ್ತು ಒದ್ದೆ ಉಗುರಿನಿಂದಾಗಿ ಕಾಣಿಸಿಕೊಳ್ಳುವುದು.

ಒಳಗಿನಿಂದ ಬೆಳೆಯುವ ಉಗುರು
ಒನಿಕೊಗ್ರಿಫೊಸಿಸ್ ಎನ್ನುವುದು ಒಂದು ಉಗುರಿನ ಸಮಸ್ಯೆ ಆಗಿದೆ ಮತ್ತು ಇದು ಉಗುರು ಒಳಗಿನಿಂದ ಬೆಳೆಯುವುದು. ಚರ್ಮತಜ್ಞರಾಗಿರುವಂತಹ ಡಾ. ರಂಜನ್ ಉಪಾಧ್ಯಾಯ ಅವರು ಹೇಳುವ ಪ್ರಕಾರ, ಉಗುರು ಇಲ್ಲಿ ಪಾರ್ನೋನಿಯಂ ಒಳಗಡೆ ಬೆಳೆಯುವುದು. ಇದರಿಂದಾಗಿ ಇಂತಹ ಸಮಸ್ಯೆ ಕಾಣಿಸಿಕೊಳ್ಳುವುದು. ಕೆಲವೊಂದು ಸಂದರ್ಭದಲ್ಲಿ ಒಳಗಿನಿಂದ ಬೆಳೆದಿರುವಂತಹ ಬೆರಳಿನ ಚರ್ಮವನ್ನು ಕೂಡ ಈ ಸಮಸ್ಯೆ ಎಂದು ತಪ್ಪಾಗಿ ಪರಿಗಣಿಸಲಾಗುತ್ತದೆ.

Most Read: ಉಗುರಿನಲ್ಲಾಗುವ ಬಿಳಿ ಚುಕ್ಕಿಯನ್ನು ನಿವಾರಿಸಿಕೊಳ್ಳುವುದು ಹೇಗೆ?

ಇದರಿಂದಾಗಿ ಉಗುರು ಕೆಂಪಾಗುವುದು, ಊತ ಮತ್ತು ನೋವು ಕಾಣಿಸಿಕೊಳ್ಳುವುದು. ಇದರಿಂದಾಗಿ ನೀವು ಸೋಂಕು ಕಾಣಿಸಿಕೊಂಡರೆ ಆಗ ತಕ್ಷಣವೇ ಹೋಗಿ ವೈದ್ಯರನ್ನು ಭೇಟಿಯಾಗಬೇಕು. ದೀರ್ಘಕಾಲ ತನಕ ಬಿಗಿಯಾಗಿರುವ ಶೂ ಧರಿಸುವ ಕಾರಣದಿಂದಾಗಿ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದು.

ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಸೋಂಕು
ಉಗುರುಗಳಲ್ಲಿ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುವುದು ಸಾಮಾನ್ಯ ಆಗಿದೆ. ಯಾಕೆಂದರೆ ಈ ಸಮಸ್ಯೆಯು ಒದ್ದೆ ಸಾಕ್ಸ್ ಅಥವಾ ಒದ್ದೆ ಶೂ ಧರಿಸುವುದರಿಂದ ಬರುವುದು. ಉಗುರು ಸ್ವಚ್ಚವಾಗಿ ಇಟ್ಟುಕೊಳ್ಳದೆ ಇದ್ದರೆ ಇಂತಹ ಸಮಸ್ಯೆ ಕಾಣಿಸಿಕೊಳ್ಳುವುದು. ಈ ಸಮಸ್ಯೆ ಬಂದರೆ ಆಗ ಉಗುರುಗಳು ಕೆಂಪಾಗುವುದು. ಈ ರೀತಿಯ ಸೋಂಕು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರದಿಂದ ಬರುವುದು. ಉಗುರಿನ ಸುತ್ತಲಿನ ಚರ್ಮ ಮತ್ತು ಇದರ ಅಂಗಾಂಶಗಳಿಗೆ ಹಾನಿ ಆಗುವುದು. ಇದರಿಂದಾಗಿ ಉಗುರು ಕೆಂಪಾಗುವುದು, ಊತ ಕಾಣಿಸುವುದು ಮತ್ತು ಅದರಿಂದ ಅತಿಯಾಗಿ ನೋವು ಬರಬಹುದು.

ಉಗುರುಗಳಲ್ಲಿ ಬಿರುಕು
ಬೆಳೆಯುತ್ತಿರುವಂತಹ ಉಗುರುಗಳಲ್ಲಿ ಈ ರೀತಿಯ ಸಮಸ್ಯೆಯು ಕಾಣಿಸುವುದು. ಉಗುರು ಎದ್ದು ಬರಬಹುದು, ಬಿರುಕು ಬಿಡಬಹುದು ಅಥವಾ ಒಡೆದು ಹೋಗಬಹುದು. ಉಗುರಿನಲ್ಲಿ ತುಂಬಾ ಕಡಿಮೆ ಎಣ್ಣೆ ಅಥವಾ ಮೊಶ್ಚಿರೈಸರ್ ಇದೆ ಎಂದು ನಾವು ತಿಳಿಯಬೇಕು.

ಹಸಿರು ಬಣ್ಣ ಬರುವುದು
ಸ್ಯೂಡೋಮೊನಸ್ ಎನ್ನುವ ಬ್ಯಾಕ್ಟೀರಿಯಾವು ಉಗುರು ಮತ್ತು ಉಗುರಿನ ತಳದ ಮಧ್ಯೆ ಕಾಣಿಸಿಕೊಳ್ಳುವುದು. ಇದರಿಂದಾಗಿ ಉಗುರು ಹಸಿರು ಬಣ್ಣಕ್ಕೆ ತಿರುಗುವುದು. ಉಗುರು ಕತ್ತರಿಸಿಕೊಂಡರೆ ಆಗ ಸಮಸ್ಯೆ ನಿವಾರಣೆ ಆಗುವುದು ಎಂದು ಹೆಚ್ಚಿನವರು ಭಾವಿಸುವರು. ಆದರೆ ಉಗುರುಗಳು ಮತ್ತೆ ಇದೇ ಬಣ್ಣದಲ್ಲಿ ಬೆಳೆಯಲು ಆರಂಭವಾಗುವುದು.

ದಪ್ಪಗಿನ ಉಗುರು
ಓನಿಕಾಕ್ಸಿಸ್ ಎನ್ನುವುದು ಮತ್ತೊಂದು ಉಗುರಿನ ಸಮಸ್ಯೆಯಾಗಿದೆ. ಇಲ್ಲಿ ಉಗುರು ತುಂಬಾ ದಪ್ಪಗೆ ಬೆಳೆಯುತ್ತದೆ. ಇದು ಚರ್ಮಕ್ಕಿಂತಲೂ ಮೇಲೆ ಬೆಳೆಯುವುದು ಮತ್ತು ಬಣ್ಣ ಕುಂದುವುದು. ಇದು ಒಳಗಿನ ಸಮಸ್ಯೆಯಾಗಿದೆ ಮತ್ತು ಯಾವುದೇ ಔಷಧಿಯ ಅಡ್ಡಪರಿಣಾಮ ಇದಾಗಿರಬಹುದು.

ಬ್ಯೂನ್ ಲೈನ್
ಪೋಷಕಾಂಶಗಳ ಕೊರತೆಯಿಂದಾಗಿ ದಪ್ಪಗಿನ ಗೆರೆಗಳು ಉಗುರುಗಳಲ್ಲಿ ಕಾಣಿಸಿಕೊಳ್ಳುವುದು. ಇದು ಯಾವುದೇ ಅನಾರೋಗ್ಯದ ಸೂಚನೆಯು ಆಗಿರಬಹುದು. ಇದನ್ನು ನೀವು ತಕ್ಷಣವೇ ಪತ್ತೆ ಹಚ್ಚಿಕೊಂಡು ಅದಕ್ಕೆ ಸರಿಯಾಗಿ ಚಿಕಿತ್ಸೆ ನೀಡಬೇಕು. ಉಗುರುಗಳನ್ನು ಯಾವಾಗಲೂ ತುಂಬಾ ಒಣ ಹಾಗೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಯಾಕೆಂದರೆ ಈ ಭಾಗಕ್ಕೆ ಸೋಂಕು ಬೇಗನೆ ಹರಡುವುದು ಮತ್ತು ಇದರ ಬಗ್ಗೆ ಯಾರಿಗೂ ತಿಳಿಯದು. ಇದಕ್ಕೆ ಹಾನಿಯಾದ ವೇಳೆ ಮಾತ್ರ ಇದು ತಿಳಿದುಬರುವುದು. ಬಯೋಟಿನ್ ಇರುವಂತಹ ವಿಟಮಿನ್ ಸೇವನೆ ಮಾಡಿದರೆ ಅದರಿಂದ ಉಗುರಿನ ಸಮಸ್ಯೆಗಳು ನಿವಾರಣೆ ಆಗುವುದು ಎಂದು ಡಾ. ರಂಜನ್ ಉಪಾಧ್ಯಾಯ ಹೇಳುತ್ತಾರೆ.

Most Read: ಬೆರಳುಗಳ ಉಗುರುಗಳಿಗೆ ಕಾಡುವ 'ಶಿಲೀಂಧ್ರದ ಸೋಂಕು'-ನೀವು ತಿಳಿದಿರಬೇಕಾದ ಸಂಗತಿಗಳು

ಉಗುರು ಅನ್ನುವುದು ಒಂದು ನಿರ್ಜೀವ ವಿನ್ಯಾಸ. ಆದರೆ ಇದು ಬೆಳೆಯುತ್ತದೆ. ಉಗುರು ತಿಂಗಳಿಗೆ ಸುಮಾರು ಮೂರು ಮಿ.ಮೀನಷ್ಟು ಬೆಳೆಯುತ್ತದೆ. ಆರೋಗ್ಯಕಾರಿ ಉಗುರುಗಳು ತುಂಬಾ ಗುಲಾಬಿ, ಮೃಧು, ಒಡೆಯದೆ ಇರುವುದು ಮತ್ತು ಒಣಗಿರುವುದು. ಇದು ನಿಯಮಿತವಾಗಿ ಬೆಳೆಯುತ್ತಾ ಇರುವುದು. ಉಗುರುಗಳು ಸರಿಯಾಗಿ ಬೆಳೆಯದೆ ಇದ್ದರೆ ಅಥವಾ ಬಿರುಕು ಬಿಟ್ಟಿದ್ದರೆ, ಎದ್ದು ಬರುತ್ತಿದ್ದರೆ, ಬಣ್ಣ ಬದಲಾಗಿದ್ದರೆ, ಗೆರೆಗಳು ಕಂಡುಬರುತ್ತಲಿದ್ದರೆ ಆಗ ನೀವು ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳಿ. ಇದು ಯಾವುದೇ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು. ವಿಟಮಿನ್ ಎ, ವಿಟಮಿನ್ ಬಿ, ಕ್ಯಾಲ್ಸಿಯಂ, ಕಬ್ಬಿನಾಂಶ ಮತ್ತು ಪ್ರೋಟೀನ್ ಕೊರತೆಯಿಂದಾಗಿ ಉಗುರುಗಳಲ್ಲಿ ಸಾಮಾನ್ಯವಾಗಿ ಬದಲಾವಣೆಗಳು ಕಾಣಿಸಿಕೊಳ್ಳುವುದು.

ವಿಟಮಿನ್ ಎ ಮತ್ತು ಕ್ಯಾಲ್ಸಿಯಂ ಕೊರತೆಯಿಂದಾಗಿ ಉಗುರುಗಳು ಬಿರುಕು ಬಿಡುವುದು. ವಿಟಮಿನ್ ಡಿ ಕೊರತೆಯಿಂದಾಗಿ ಉಗುರುಗಳು ಒಣಗುವುದು, ಕಪ್ಪಾಗುವುದು, ಒರೆಕೋರೆಯಾಗುವುದು. ಕಬ್ಬಿನಾಂಶದ ಕೊರತೆಯಿಂದಾಗಿ ಉಗುರುಗಳು ತುಂಬಾ ನಿಸ್ತೇಜವಾಗುವುದು ಮತ್ತು ತೀವ್ರವಾದ ಸಂದರ್ಭದಲ್ಲಿ ಇದು ಚಮಚದ ಆಕಾರಕ್ಕೆ ಬರುವುದು. ಉಗುರಿನ ಬಣ್ಣ ಕೆಡುವುದು ಕೆಲವೊಂದು ಸಲ ಯಕೃತ್, ಹೃದಯದ ಸಮಸ್ಯೆ, ಶ್ವಾಸಕೋಶದ ಸಮಸ್ಯೆಯ ಕಾರಣದಿಂದ ಆಗಿರಬಹುದು. ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್, ಅಲೋಪೆಸಿಯಾ, ಎರೀಟ್ಯಾ ನಂತಹ ಸ್ವರಕ್ಷಿತ ಅಸ್ವಸ್ಥತೆಯಿಂದಲೂ ಇದು ಕಾಣಿಸಬಹುದು. ಉಗುರುಗಳು ನಮ್ಮ ದೇಹದೊಳಗಿನ ಆರೋಗ್ಯಕ್ಕೆ ಕೈಗನ್ನಡಿಯಾಗಿದೆ. ನೀವು ತಕ್ಷಣವೇ ಚರ್ಮ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

English summary

Keep a Tab on Your Nail Health

One has to take proper precautions and medications to get rid of nail diseases. “Your nails tell a lot about your body. Infections like white spots on the nails can result from trauma and calcium deficiency and slow growing nails can result from vitamin and protein deficiency post viral infection.” The following are some of the nail diseases. Most of the nail diseases are an outcome of poor nail hygiene and always wet nails.
X
Desktop Bottom Promotion