For Quick Alerts
ALLOW NOTIFICATIONS  
For Daily Alerts

ಯೋನಿಯ ಆರೋಗ್ಯಕ್ಕೆ ಕೆಲವೊಂದು ಆಹಾರ ಕ್ರಮಗಳು

|

ದೇಹದ ಪ್ರತಿಯೊಂದು ಅಂಗಾಂಗಗಳಂತೆ ಜನನೇಂದ್ರೀಯ ಅತೀ ಮುಖ್ಯವಾದುದು. ಇದರ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಆಹಾರ ಕ್ರಮವನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳಬೇಕು. ಅದರಲ್ಲೂ ಮಹಿಳೆಯರು ತಮ್ಮ ಜನನೇಂದ್ರೀಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಲ್ಲವಾದರಲ್ಲಿ ಹಲವಾರು ರೀತಿಯ ಸೋಂಕು ಹಾಗೂ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಯಾಕೆಂದರೆ ಬ್ಯಾಕ್ಟೀರಿಯಾ ಮತ್ತು ಕೆಲವೊಂದು ವೈರಸ್ ಗಳು ಯೋನಿಯ ಆರೋಗ್ಯದ ಮೇಲೆ ಪರಿಣಾಮ ಬೀರವುದು.

ಅದರಲ್ಲೂ ತಿನ್ನುವಂತಹ ಆಹಾರ ಕೂಡ. ನೀವು ಯಾವತ್ತಾದರೂ ಶತಾವರಿ ತಿಂದ ಬಳಿಕ ಮೂತ್ರ ವಿಸರ್ಜನೆ ಮಾಡಿದ್ದರೆ ಆಗ ತುಂಬಾ ವಿಚಿತ್ರವಾಗಿರುವ ವಾಸನೆಯು ಬರುವುದು. ಯಾಕೆಂದರೆ ನೀವು ಏನು ತಿನ್ನುತ್ತೀರಿ ಎನ್ನುವುದು ಇದರಲ್ಲಿ ಪ್ರತಿಫಲವಾಗುವುದು. ಆರೋಗ್ಯಕರವಾಗಿರುವ ಯೋನಿಯನ್ನು ಕಾಪಾಡಿಕೊಳ್ಳಲು ಪಿಎಚ್ಚ ಮಟ್ಟ ಕಾಪಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು. ಆದರೆ ಕೆಲವು ಸೋಂಕು ಹಾಗೂ ಬ್ಯಾಕ್ಟೀರಿಯಾಗಳು ಪಿಎಚ್ ಮಟ್ಟವನ್ನು ಅಲ್ಲೋಲ ಕಲ್ಲೋಲ ಮಾಡಿ ಬಿಡುವುದು ಎಂದು ನ್ಯೂಯಾರ್ಕ್ ನ ಮಾಂಟೆಫಿಯೋರ್ ಮೆಡಿಕಲ್ ಸೆಂಟರ್ ನ ಎಂಡಿ ಪಿಎಚ್ ಡಿ ಮೇರಿ ರೋಸೆರ್ ತಿಳಿಸುವರು.

ತಿನ್ನುವಂತಹ ಆಹಾರ

ತಿನ್ನುವಂತಹ ಆಹಾರ

ನೀವು ತಿನ್ನುವಂತಹ ಆಹಾರವು ಪಿಎಚ್ ಮಟ್ಟದ ಮೇಲೆ ಪರಿಣಾಮ ಬೀರುವುದು. ನಿಮ್ಮ ಗುಪ್ತಾಂಗದ ಭಾಗವು ಇದರಿಂದ ಬೇರೆ ರೀತಿಯ ವಾಸನೆ ಉಂಟು ಮಾಡಬಹುದು(ರುಚಿ ಬದಲಾಗಬಹುದು). ಉದಾಹರಣೆಗೆ ಹೇಳುವುದಾದರೆ, ಮಸಾಳೆಗಳು, ಈರುಳ್ಳಿ, ಬೆಳ್ಳುಳ್ಳಿ, ಕೆಂಪು ಮಾಂಸ, ಹಾಲಿನ ಉತ್ಪನ್ನಗಳು, ಶತಾವರಿ, ಬ್ರಾಕೋಲಿ ಮತ್ತು ಆಲ್ಕೋಹಾಲ್ ದೇಹದಲ್ಲಿನ ನೈಸರ್ಗಿಕ ಪಿಎಚ್ ಮಟ್ಟದ ಮೇಲೆ ಪರಿಣಾಮ ಬೀರಬಹುದು. ಹಣ್ಣು ಮತ್ತು ಹಣ್ಣಿನ ಜ್ಯೂಸ್ ನಿಂದಾಗಿ ಈ ಇದು ತುಂಬಾ ಸಿಹಿಯಾಗಬಹುದು ಎಂದು ರೋಸೆರ್ ತಿಳಿಸಿದ್ದಾರೆ. ಪರಿಣಾಮ ಏನೇ ಆಗಿದ್ದರೂ ಅದು ಕೇವಲ ಎರಡು ಅಥವಾ ಮೂರು ದಿನಗಳ ಕಾಲ ಮಾತ್ರ ಉಳಿಯುವುದು.

ಸಕ್ಕರೆ ಸೇವನೆ ಪ್ರಮಾಣವನ್ನು ಕಡಿಮೆ ಮಾಡಿ

ಸಕ್ಕರೆ ಸೇವನೆ ಪ್ರಮಾಣವನ್ನು ಕಡಿಮೆ ಮಾಡಿ

ಮಹಿಳೆಯರ ವಿಚಾರಕ್ಕೆ ಬಂದರೆ ಯೋನಿಯ ಆರೋಗ್ಯದ ದೃಷ್ಟಿಯಿಂದ ಸಕ್ಕರೆ ಸೇವನೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕು. ಅನಿಯಂತ್ರಿತ ಅಧಿಕ ಸಕ್ಕರೆ ಅಂಶವನ್ನು ಹೊಂದಿರುವಂತಹ ಮಹಿಳೆಯರು ಶಿಲೀಂಧ್ರ ಸೋಂಕಿಗೆ ಒಳಗಾಗುವ ಸಾಧ್ಯತೆಯು ಹೆಚ್ಚಾಗಿರುವುದು ಎಂದು ರೋಸೆರ್ ಹೇಳುವರು.

Most Read: ಮಸಾಲೆ ಭರಿತ ಆಹಾರ ಇಷ್ಟ ಪಡುವವರ ಸೆಕ್ಸ್ ಲೈಫ್ ಹೇಗಿರುತ್ತದೆ ಗೊತ್ತಾ?

ಹಣ್ಣುಗಳು ಹಾಗೂ ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ

ಹಣ್ಣುಗಳು ಹಾಗೂ ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ

ನೀವು ಇಬ್ಬರಿಗೋಸ್ಕರ ತಿನ್ನಬೇಕು(ನಿಮಗೆ ಮತ್ತು ನಿಮ್ಮ ಯೋನಿಗೆ). ತಾಜಾ ಹಣ್ಣುಗಳು, ತರಕಾರಿಗಳು, ಇಡೀ ಧಾನ್ಯಗಳು ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಮಾಡಬೇಕು. ನೀವು ಗ್ರೀಕ್ ಮೊಸರು ಸೇವನೆ ಮಾಡುತ್ತಲಿದ್ದರೆ ಅದು ತುಂಬಾ ಒಳ್ಳೆಯದು. ಮೊಸರಿನಲ್ಲಿ ಪ್ರೊಬಯೋಟಿಕ್ ಇದೆ ಮತ್ತು ಇದರಿಂದಾಗಿ ಯೋನಿಯು ಆರೋಗ್ಯಕರವಾಗಿ ಪಿಎಚ್ ಮಟ್ಟವನ್ನು ಸಮತೋಲನದಲ್ಲಿ ಇಡಲು ನೆರವಾಗುವುದು ಎಂದು ಅವರು ಹೇಳುವರು.

ಮೆ೦ತೆ ನೆನೆಸಿದ ನೀರು

ಮೆ೦ತೆ ನೆನೆಸಿದ ನೀರು

ಎರಡು ಚಮಚಗಳಷ್ಟು ಮೆ೦ತೆ ಕಾಳುಗಳನ್ನು ಒ೦ದು ಲೋಟದಷ್ಟು ನೀರಿನಲ್ಲಿ ಒ೦ದು ರಾತ್ರಿ ನೆನೆಸಿಡಿರಿ. ಮಾರನೆಯ ದಿನ, ಬೆಳಗ್ಗಿನ ಉಪಹಾರವನ್ನು ಸೇವಿಸುವ ಮೊದಲು ಈ ನೀರನ್ನು ಕುಡಿಯಿರಿ. ಈ ಪರಿಹಾರ ಕ್ರಮವನ್ನು ಮು೦ದಿನ 2 ವಾರಗಳ ಕಾಲ ಮು೦ದುವರಿಸಿರಿ. ಮಹಿಳೆಯರ ವಿಷಯದಲ್ಲ೦ತೂ ಮೆ೦ತೆಯ ನಿಯಮಿತ ಉಪಯೋಗವು ಬಹಳ ಒಳ್ಳೆಯದು ಎ೦ಬುದನ್ನು ಸಾಬೀತುಪಡಿಸುತ್ತದೆ. ಏಕೆ೦ದರೆ, ಅದು ಸ್ತೀಯ ಶರೀರದ "ಸರಿಯಾದ ಹಾರ್ಮೋನುಗಳ ಮಟ್ಟ" ವನ್ನು ಕಾಪಾಡುತ್ತದೆ ಮತ್ತು ಅವರ ಋತುಚಕ್ರಗಳನ್ನು ನಿಯಮಿತಗೊಳಿಸುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಯೋನಿಯ ಆರೋಗ್ಯಕ್ಕೆ ನೆರವಾಗುವುದು. ನಿಮ್ಮ ಆಹಾರದಲ್ಲಿ ಜಜ್ಜಿದ ಅಥವಾ ಪೇಸ್ಟ್ ಮಾಡಿದ ಬೆಳ್ಳುಳ್ಳಿ ಬಳಸಿಕೊಳ್ಳಿ. ಅಷ್ಟೇ ಅಲ್ಲದೆ ಯೋನಿಯ ದುರ್ವಾಸನೆಯನ್ನು ಶಮನ ಮಾಡುವುದರಲ್ಲಿ ಬೆಳ್ಳುಳ್ಳಿ ಉಪಯುಕ್ತವಾಗಿದೆ. ಕೆಲವು ತಾಜಾ ಬೆಳ್ಳುಳ್ಳಿಗಳನ್ನು ಜಜ್ಜಿ ಅದನ್ನು ಪೇಸ್ಟ್ ನ ರೂಪದಲ್ಲಿ ಸಿದ್ಧಪಡಿಸಿಟ್ಟುಕೊಳ್ಳಿರಿ ಮತ್ತು ಅದನ್ನು ನಿಮ್ಮ ಯೋನಿಯ ಗೋಡೆಗಳ ಮೇಲೆ ಲೇಪಿಸಿಕೊಳ್ಳಿರಿ. ಬೆಳ್ಳುಳ್ಳಿಯು ಒ೦ದು ಪ್ರಬಲವಾದ ಫ೦ಗಸ್ ಪ್ರತಿಬ೦ಧಕ ಮತ್ತು ಸೂಕ್ಷ್ಮಾಣು ಪ್ರತಿಬ೦ಧಕವಾಗಿದ್ದು, ಯೋನಿಯ ದುರ್ವಾಸನೆಗೆ ಕಾರಣವಾದ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ

Most Read: ಸಂಗಾತಿಯೊಂದಿಗೆ ಸೆಕ್ಸ್ ಊಟದ ಮೊದಲೋ ನಂತರವೋ ? ಇಲ್ಲಿದೆ ಉತ್ತರ!!!

ಮೊಸರು ಸೇವಿಸಿ

ಮೊಸರು ಸೇವಿಸಿ

ನಿಮ್ಮ ಆಹಾರ ಕ್ರಮದಲ್ಲಿ ಮೊಸರು ಸೇರಿಸಿಕೊಂಡರೆ ತುಂಬಾ ಒಳ್ಳೆಯದು. ಇದರಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಸೋಂಕಿನ ವಿರುದ್ಧ ಹೋರಾಡುವುದು. ಇದರಿಂದ ಆರೋಗ್ಯಕರ ಪಿಎಚ್ ಮಟ್ಟ ಸಮತೋಲನದಲ್ಲಿಡಲು ನೆರವಾಗುವುದು. ಅಷ್ಟೇ ಅಲ್ಲದೆ ಮೊಸರಿನ ಸೇವನೆಯು ಯೋನಿಯ ದುರ್ವಾಸನೆಯನ್ನು ನಿಯ೦ತ್ರಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಮೊಸರು lactobacillus ನ ಅ೦ಶವನ್ನು ಅಧಿಕ ಪ್ರಮಾಣದಲ್ಲಿ ಹೊ೦ದಿದ್ದು, ಇದು ಯೋನಿಯಲ್ಲಿನ pH ನ ಮಟ್ಟವನ್ನು ಕಾಪಿಟ್ಟುಕೊಳ್ಳಲು ಸಹಕರಿಸುತ್ತದೆ. ನೀವು ಮೊಸರನ್ನು ಮುಲಾಮಿನ೦ತೆ ನಿಮ್ಮ ಯೋನಿಯ ಮೇಲೆ ಹಚ್ಚಿಕೊಳ್ಳಬಹುದು. ಹತ್ತಿಯ೦ತಹ ಮೃದುವಾದ ವಸ್ತುವನ್ನು ನೀರಿನಿ೦ದ ತೆಳುವಾಗಿಸಿದ ಮೊಸರಿನಲ್ಲಿ ಅದ್ದಿ ನ೦ತರ ಈ ವಸ್ತುವನ್ನು ನಿಮ್ಮ ಯೋನಿಯೊಳಗೆ 5 ನಿಮಿಷಗಳ ಕಾಲ ಇರಗೊಡಿರಿ. ತದನ೦ತರ ಯೋನಿಯನ್ನು ತಣ್ಣಗಿನ ನೀರಿನಿ೦ದ ಸರಿಯಾಗಿ ತೊಳೆಯಿರಿ.

ಟಾಲ್ಕಂ ಪೌಡರ್ ಗಳನ್ನೆಲ್ಲಾ ಬಳಸಬೇಡಿ

ಟಾಲ್ಕಂ ಪೌಡರ್ ಗಳನ್ನೆಲ್ಲಾ ಬಳಸಬೇಡಿ

ನಿಮ್ಮ ಜನನಾಂಗದ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳುವ ಭರದಲ್ಲಿ ಟಾಲ್ಕಂ ಪೌಡರ್, ಬೇಬಿ ಪೌಡರ್ ಅಥವಾ ಇನ್ನಿತರ ಯಾವುದೇ ಉತ್ಪನ್ನಗಳನ್ನು ಬಳಸುವುದು ಅಪಾಯಕಾರಿಯಲ್ಲ. ಆದರೆ ಈ ಅಭ್ಯಾಸವು ಕಾಲ ಕ್ರಮೇಣ ಮುಂದೆ ಸಂಭವಿಸಬಹುದಾದ ಗರ್ಭಾಶಯದ ಕ್ಯಾನ್ಸರ್‌ನ ಸಾಧ್ಯತೆಯನ್ನು ಶೇ.30 ರಷ್ಟು ಹೆಚ್ಚಿಸುತ್ತದೆ ಎಂದು ಅಮೆರಿಕನ್ ಅಸೋಸಿಯೇಷನ್ ಫಾರ್ ಕ್ಯಾನ್ಸರ್ ರಿಸರ್ಚ್ ಸಂಸ್ಥೆಯವರು 2011ರಲ್ಲಿ ನಡೆಸಿದ ವಾರ್ಷಿಕ ಸಮಾವೇಶದಲ್ಲಿ ಪ್ರಸ್ತುತ ಪಡಿಸಲಾದ ಹೊಸ ಅಧ್ಯಯನದಲ್ಲಿ ದೃಢಪಟ್ಟಿದೆ. ಪ್ರತಿನಿತ್ಯ ಇವುಗಳನ್ನು ಬಳಸುವುದರಿಂದಾಗಿ ನಿಮಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಎರಡರಿಂದ ಒಮ್ಮೊಮ್ಮೆ ಮೂರು ಪಟ್ಟು ಸಹ ಅಧಿಕವಾಗುತ್ತದೆ. ಒಂದೊಮ್ಮೆ ನಿಮ್ಮ ಜನನಾಂಗದ ಬಳಿ ನಿಮಗೆ ಅಧಿಕ ಬೆವರು ಬರುತ್ತಿದ್ದರೆ, ಹತ್ತಿಯ ಒಳ ಉಡುಪನ್ನು ಧರಿಸಿ. ಆಗಾಗ ಅದನ್ನು ಬದಲಾಯಿಸುತ್ತ ಇರಿ. ಆದಷ್ಟು ಬಿಗಿಯಾದ ಪ್ಯಾಂಟ್‍ಗಳನ್ನು ಧರಿಸಬೇಡಿ. ಜೊತೆಗೆ ರಾತ್ರಿಯ ಹೊತ್ತು ಕಮಾಂಡೊ( ಜನನಾಂಗ ಭಾಗಕ್ಕೆ ಗಾಳಿಯಾಡುವಂತೆ ಮಾಡುವುದು) ಆಗುವುದು ಒಳಿತು.

English summary

How Your Food Impacts Your Vagina

Ever nosh on asparagus to have your hoo-ha—and we're not just talking your pee—smell funny? Well, that's one way to think about that whole "you are what you eat" connection. And it turns out, for women, it's a pretty important one. Healthy vaginas have a naturally acidic pH, as well as a host of healthy bacteria that ward off infections and keep everything humming along as designed, says Mary Rosser, M.D., Ph.D., ob-gyn at Montefiore Medical Center in New York.
X
Desktop Bottom Promotion