For Quick Alerts
ALLOW NOTIFICATIONS  
For Daily Alerts

ಬಂಗಾರ ಧರಿಸುವುದರಿಂದ ಕೂಡ ಆರೋಗ್ಯಕ್ಕೆ ಲಾಭಗಳಿವೆಯಂತೆ!

|

ನಾವು ಸುಂದರವಾಗಿ ಕಾಣಬೇಕು ಎನ್ನುವ ದೃಷ್ಟಿಯಿಂದಲೋ ಅಥವಾ ತಮ್ಮಲ್ಲಿ ಶ್ರೀಮಂತಿಗೆ ಇದೆ ಎಂದು ತೋರಿಸುವ ಸಲುವಾಗಿಯೋ ಬಂಗಾರದ ಆಭರಣಗಳನ್ನು ಧರಿಸುವರು. ಅದರಲ್ಲೂ ಕೆಲವು ಮಹಿಳೆಯರು ಅತಿಯಾಗಿಯೇ ಆಭರಣಗಳನ್ನು ಧರಿಸುವರು. ಕೆಜಿಗಟ್ಟಲೆ ಬಂಗಾರದ ಆಭರಣಗಳನ್ನು ಧರಿಸಿರುವುದನ್ನು ನಾವು ನೋಡಿದ್ದೇವೆ. ಆದರೆ ಮಹಿಳೆಯರು ಈ ರೀತಿಯಾಗಿ ಧರಿಸಲು ಅವರಿಗೆ ಇರುವಂತಹ ಮೋಹವೇ ಕಾರಣವೆಂದು ಹೇಳಬಹುದು. ಇದರಿಂದಾಗಿಯೇ ಬಂಗಾರದ ಬೆಲೆ ಕೂಡ ಸಾಮಾನ್ಯ ವರ್ಗದವರ ಕೈಗೆಟುಕದಷ್ಟು ಎತ್ತರಕ್ಕೆ ಏರಿದೆ. ಪುರುಷರು ಕೂಡ ಬಂಗಾರದ ಆಭರಣಗಳನ್ನು ಧರಿಸುವುದನ್ನು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಹಿಂದಿನ ಕಾಲದಲ್ಲಿ ಕೂಡ ಬಂಗಾರದ ಆಭರಗಳನ್ನು ಧರಿಸುತ್ತಿದ್ದರು.

Wearing Gold

ಆದರೆ ಇದನ್ನು ಸೌಂದರ್ಯ ಅಥವಾ ಫ್ಯಾಷನ್ ಗಾಗಿ ಧರಿಸುತ್ತಾ ಇರಲಿಲ್ಲ. ಇದನ್ನು ಧರಿಸುತ್ತಿದ್ದ ಹಿಂದೆ ಬೇರೆಯೇ ಆಗಿರುವಂತಹ ಕಾರಣಗಳು ಇವೆ. ಸ್ವರ್ಣಪ್ರಾಶನದ ಮೂಲಕ ಕೆಲವೊಂದು ರೋಗಗಳನ್ನು ಕೂಡ ಗುಣಪಡಿಸಬಹುದು ಎಂದು ಆಯುರ್ವೇದದಲ್ಲಿದೆ. ಅದರಲ್ಲೂ ಬಂಗಾರವನ್ನು ಧರಿಸುವುದರಿಂದ ದೇಹದ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತದೆ. ಬಂಗಾರವನ್ನು ಧರಿಸುವ ಕಾರಣದಿಂದಾಗಿ ಅದು ಸಂಧಿವಾತದಂತಹ ಸಮಸ್ಯೆ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ಹೇಳಲಾಗಿದೆ. ದೀರ್ಘಕಾಲದ ತನಕ ಬಂಗಾರ ಧರಿಸುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಂಗಳು ಆಗಿಲ್ಲವೆಂದು ಕೆಲವೊಂದು ಅಧ್ಯಯನಗಳು ಕಂಡುಕೊಂಡಿದೆ. ಈ ಲೇಖನದಲ್ಲಿ ಬಂಗಾರ ಧರಿಸುವುದರಿಂದ ಆಗುವ ಲಾಭಗಳು ಯಾವುದು ಎಂದು ತಿಳಿಯುವ....

ಶಮನಕಾರಿ ಗುಣ ಹೊಂದಿದೆ

ಶಮನಕಾರಿ ಗುಣ ಹೊಂದಿದೆ

ಯಾವುದೇ ವ್ಯಕ್ತಿಯು 24 ಕ್ಯಾರೆಟ್ ನ ಚಿನ್ನವನ್ನು ತೆಗೆದುಕೊಂಡು ಸೋಂಕು ತಗುಲಿರುವ ಅಥವಾ ಊತವಾಗಿರುವ ಜಾಗಕ್ಕೆ ಇಟ್ಟರೆ, ಆಗ ಅದು ಗಾಯವನ್ನು ಗುಣಪಡಿಸುವುದು ಮತ್ತು ಸೋಂಕನ್ನು ನಿವಾರಣೆ ಮಾಡುವುದು ಎಂದು ಹೇಳಲಾಗುತ್ತದೆ. ಚಿನ್ನದಲ್ಲಿರುವಂತಹ ಶಕ್ತಿಯು ಉಷ್ಣತೆ ಹಾಗೂ ದೇಹದಲ್ಲಿ ಶಮನಗೊಳಿಸುವ ಮತ್ತು ದೇಹದ ರಕ್ತನಾಳಗಳಲ್ಲಿ ಅದು ಆರಾಮವನ್ನು ಉಂಟು ಮಾಡುತ್ತದೆ. ರಕ್ತನಾಳಗಳಲ್ಲಿ ರಕ್ತವು ಸರಿಯಾಗಿ ಸಂಚಾರವಾಗುವಂತೆ ಮಾಡುವುದು. ಸತ್ತ ಕೋಶಗಳನ್ನು ಸ್ಥಳಾಂತರಿಸಿ ಹೊಸ ಕೋಶಗಳ ಬೆಳವಣಿಗೆಗೆ ಇದು ನೆರವಾಗುವುದು. ಇದರಿಂದಾಗಿ ದೇಹವು ತುಂಬಾ ಉತ್ತಮ ಹಾಗೂ ವೇಗವಾಗಿ ಗುಣಮುಖವಾಗುವುದು. ಧಾನ್ಯವನ್ನು ಕಲಿತಿರುವಂತಹ ವ್ಯಕ್ತಿಗಳು ಬೇರೆ ರೀತಿಯ ಕಲೆಗಳನ್ನು ಪ್ರಯೋಗ ಮಾಡಿಕೊಂಡು ಆರಾಮ ಮಾಡಬಹುದು.

ಆರಾಮ ನೀಡುವುದು

ಆರಾಮ ನೀಡುವುದು

ಸ್ವರ್ಣದಲ್ಲಿ ಆರಾಮ ನೀಡುವಂತಹ ಗುಣವಿದೆ ಎಂದು ಹೇಳಲಾಗುತ್ತದೆ. 24 ಕ್ಯಾರೆಟ್ ಚಿನ್ನದಿಂದ ಮಾಡಿರುವಂತಹ ಆಭರಣವು ತುಂಬಾ ನಯ ಹಾಗೂ ಮೃಧುವಾಗಿರುವುದು. ಪರಿಶುದ್ಧ ಚಿನ್ನಕ್ಕೆ ಯಾವುದೇ ಪರ್ಯಾಯವಿಲ್ಲ. ಆದರೆ ಇದನ್ನು ಬೇರೆ ಲೋಹಗಳೊಂದಿಗೆ ಸೇರಿಸಿದಾಗ ಇದು ತನ್ನ ಶಕ್ತಿಯನ್ನು ಕಳೆದುಕೊಳ್ಳುವುದು. ಚಿನ್ನವು ಒತ್ತಡ ನಿವಾರಣೆ ಮಾಡುವುದು ಎಂದು ಹಿಂದಿನಿಂದಲೂ ಕಂಡುಕೊಳ್ಳಲಾಗಿದೆ. ಇದು ನಿಮ್ಮ ಮಾನಸಿಕ ಸ್ಥಿತಿ ಮತ್ತು ಭಾವನಾತ್ಮಕ ಸ್ಥಿತಿಯನ್ನು ಉನ್ನತಿಗೇರಿಸುವುದು ಎಂದು ಹಿಂದಿನಿಂದಲೂ ಕಂಡುಕೊಳ್ಳಲಾಗಿದೆ.

ದೇಹಕ್ಕೆ ಯಾವುದೇ ಹಾನಿ ಉಂಟು ಮಾಡದು

ದೇಹಕ್ಕೆ ಯಾವುದೇ ಹಾನಿ ಉಂಟು ಮಾಡದು

ಚಿನ್ನವು ನೈಸರ್ಗಿಕ ಖನಿಜವಾಗಿದ್ದು, ಇದರಲ್ಲಿ ಯಾವುದೇ ರೀತಿಯ ವಿಷಕಾರಿ ಅಂಶಗಳು ಇಲ್ಲ ಮತ್ತು ಇತರ ಯಾವುದೇ ಔಷಧಗಳೊಂದಿಗೆ ಇದು ಬೆರೆತುಕೊಳ್ಳುವುದಿಲ್ಲ ಮತ್ತು ದೇಹವು ತುಂಬಾ ಸುಲಭವಾಗಿ ಇದನ್ನು ಸಹಿಸಿಕೊಳ್ಳುವುದು. ಬಂಗಾರ ಧರಿಸುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲ.

ರಕ್ತ ಸಂಚಲನ

ರಕ್ತ ಸಂಚಲನ

ದೇಹದಲ್ಲಿ ರಕ್ತ ಸಂಚಾರವು ಸುಗಮವಾಗಿ ಆಗಲು ನೀವು ಬಂಗಾರವನ್ನು ಬಳಸಿಕೊಳ್ಳಬೇಕು. ಇದರಿಂದ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವು ಸರಿಯಾಗಿ ಪೂರೈಕೆಯಾಗುವುದು. ಇದರಿಂದ ನೀವು ತುಂಬಾ ಫಿಟ್ ಹಾಗೂ ಅನಾರೋಗ್ಯದಿಂದ ದೂರವಿರಬಹುದು.

ದೇಹದ ಉಷ್ಣತೆ ನಿಯಂತ್ರಿಸುವುದು

ದೇಹದ ಉಷ್ಣತೆ ನಿಯಂತ್ರಿಸುವುದು

ದೇಹದಲ್ಲಿನ ಉಷ್ಣತೆಯನ್ನು ಸರಿಯಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಂಗಾರವನ್ನು ಬಳಸಿಕೊಳ್ಳಲಾಗುತ್ತದೆ. ಇದು ಹೊರಗಿನ ವಾತಾವರಣ ವೈಪರಿತ್ಯದಿಂದ ದೇಹವನ್ನು ಕಾಪಾಡುವುದು ಮತ್ತು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸವುದು.

ಸಂಧಿವಾತ ಲಕ್ಷಣಗಳು

ಸಂಧಿವಾತ ಲಕ್ಷಣಗಳು

ಬಂಗಾರವನ್ನು ದೇಹದಲ್ಲಿ ಧರಿಸಿಕೊಳ್ಳುವುದರಿಂದ ಕೆಲವೊಂದು ವ್ಯಕ್ತಿಗಳಲ್ಲಿ ಇರುವಂತಹ ಸಂಧಿವಾತದ ಲಕ್ಷಣಗಳು ನಿವಾರಣೆ ಆಗುವುದು ಎಂದು ವೈದ್ಯರು ಕಂಡುಕೊಂಡಿದ್ದಾರೆ ಮತ್ತು ಅಧ್ಯಯನಗಳು ಕೂಡ ಇದನ್ನು ದೃಢಪಡಿಸಿವೆ.

ಬಂಗಾರವೆಂದರೆ ಅದು ಪ್ರತಿಯೊಬ್ಬರನ್ನು ತುಂಬಾ ಸಂತೋಷವಾಗಿಡುವುದು. ಅದಾಗ್ಯೂ, ಇದು ಧರಿಸುವವರ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುವ ಕಾರಣದಿಂದಾಗಿ ಕೇವಲ ಸೌಂದರ್ಯಕ್ಕಾಗಿ ಇದನ್ನು ಬಳಸದೆ ನಿತ್ಯವು ಬಳಸಬೇಕು. ನೀವು ಬಂಗಾರದ ಆಭರಣ ಕೊಂಡುಕೊಳ್ಳಲು, ಸ್ವೀಕರಿಸಲು ಮತ್ತು ಧರಿಸಲು ತುಂಬಾ ಸಂತೋಷಪಡುವಿರಿ. ಆದರೆ ಈ ದುಬಾರಿ ಲೋಹವನ್ನು ನಿಮ್ಮ ಒತ್ತಡ ನಿವಾರಣೆ ಮಾಡಲು ಕೂಡ ಬಳಸಬಹುದು ಎಂದು ತಿಳಿಯಿರಿ. ಈ ಬಗ್ಗೆಯೂ ನೀವು ಹೆಚ್ಚು ಗಮನಹರಿಸಬೇಕು. ಬಂಗಾರವನ್ನು ಧರಿಸಿಕೊಂಡು ನೀವು ಹೆಚ್ಚು ಧನಾತ್ಮಕ ಮತ್ತು ಜೀವನದಲ್ಲಿ ಹೆಚ್ಚು ಪ್ರೇರಣೆ ಪಡೆಯಿರಿ.

English summary

Health Benefits Of Wearing Gold!

From the ancient times, benefits of gold like healing and curing properties are used, and you’d be surprised to know how gold can actually improve your overall well-being. Moreover, one of the researches confirmed that wearing gold on skin can improve and alleviate rheumatoid arthritis symptoms in a significant proportion of sufferers. Long experience has also shown that there are very few adverse side effects experienced by gold jewelry wearers, even over long periods of time.
Story first published: Wednesday, January 2, 2019, 12:36 [IST]
X
Desktop Bottom Promotion