Latest Updates
-
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ -
ಮಳೆಗಾಲದಲ್ಲೂ ಬಾಡದ ಹೂವುಗಳು: ಶ್ರಾವಣ ಸೋಮವಾರದ ಪೂಜೆಗೆ ಸುಲಭ ಮತ್ತು ಪರಿಸರ ಸ್ನೇಹಿ ಅಲಂಕಾರ ಐಡಿಯಾಗಳು -
ಕಾಮಿಕಾ ಏಕಾದಶಿ 2026: ಉಪವಾಸದ ವೇಳೆ ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ, ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ -
ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಹೆಗಲು-ಮಣಿಕಟ್ಟು ನೋವು ಮರೆಸುವ 12 ನಿಮಿಷದ ಸರಳ ಮಂತ್ರ!
ನಿಮಗೆ ತಿಳಿಯದೇ ಇರುವ ಕೆಚಪ್‌ನಲ್ಲಿರುವ ಆರೋಗ್ಯ ಲಾಭಗಳು
ಫಿಜ್ಜಾ, ಫ್ರೆಂಚ್ ಫ್ರೈ, ಬರ್ಗರ್ ಇತ್ಯಾದಿಗಳು ಟೊಮೆಟೊ ಕೆಚಪ್ ಇಲ್ಲದೆ ಇದ್ದರೆ ಆಗ ಅದು ಪರಿಪೂರ್ಣ ಎಂದು ಅನಿಸುವುದಿಲ್ಲ. ಹೀಗಾಗಿ ಪ್ರತಿಯೊಂದು ಫಾಸ್ಟ್ ಫುಡ್ ನ ಜತೆಗೆ ಕೆಚಪ್ ನೀಡಲಾಗುತ್ತದೆ. ಕೆಚಪ್ ನಿಂದಾಗಿ ಅದರ ರುಚಿಯು ಹೆಚ್ಚಾಗುವುದು. ಇದರಿಂದಾಗಿ ಇಂದಿನ ದಿನಗಳಲ್ಲಿ ಕೆಚಪ್ ನ್ನು ಬಳಸುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ರುಚಿಯನ್ನು ಹೆಚ್ಚಿಸುವಂತಹ ಕೆಚಪ್ ನಿಮ್ಮಆರೋಗ್ಯಕ್ಕೆ ತುಂಬಾ ಲಾಭಕಾರಿ ಎನ್ನುವುದು ನಿಮಗೆ ತಿಳಿದಿದೆಯಾ? ಟೊಮೆಟೊದಿಂದ ತಯಾರಿಸಲ್ಪಡುವಂತಹ ಕೆಚಪ್ ನಲ್ಲಿ ಹಲವಾರು ರೀತಿಯ ಪೋಷಕಾಂಶ ಮೌಲ್ಯಗಳು ಇವೆ. ಇದರಲ್ಲಿ ಇರುವಂತಹ ಕೆಲವೊಂದು ಆರೋಗ್ಯಕಾರಿ ಲಾಭಗಳ ಬಗ್ಗೆ ನೀವು ತಿಳಿಯುತ್ತಾ ಸಾಗಿ…

ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ತಗ್ಗಿಸುವುದು
ಪುರುಷರು ವಾರದಲ್ಲಿ ಒಂದು ಅಥವಾ ಎರಡಕ್ಕಿಂತ ಹೆಚ್ಚು ಸಲ ಕೆಚಪ್ ಸೇವಿಸಿದರೆ ಆಗ ಇದು ಶೇ.20ರಷ್ಟು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು. ಟೊಮೆಟೊದಲ್ಲಿ ಇರುವ ಲೈಕೊಪೆನೆ ಎನ್ನುವ ಆಂಟಿಆಕ್ಸಿಡೆಂಟ್ ನಿಂದ ಇದು ಸಾಧ್ಯ ವಾಗುವುದು. ಈ ಅಂಶವು ಕ್ಯಾನ್ಸರ್ ಅಪಾಯ ತಗ್ಗಿಸುವುದು.

ವೀರ್ಯ ಗಣತಿ ಹೆಚ್ಚಾಗುವುದು
ಲೈಕೊಪೆನೆ ಎನ್ನುವ ಆಂಟಿಆಕ್ಸಿಡೆಂಟ್ ಟೊಮೆಟೊಗೆ ಕೆಂಪು ಬಣ್ಣವನ್ನು ನೀಡುವುದು. ಅದೇ ರೀತಿಯಾಗಿ ಇದು ಫಲವತ್ತತೆ ಹೆಚ್ಚಿಸುವುದು ಎಂದು ಕಳೆದ ವರ್ಷ ಪ್ರಕಟಗೊಂಡಿರುವ ಅಧ್ಯಯನ ವರದಿಯು ಹೇಳಿದೆ. ವೀರ್ಯಗಣತಿಯು ಶೇ.70ರಷ್ಟು ಹೆಚ್ಚು ಮಾಡುವುದು ಎಂದು ಈ ಅಧ್ಯಯನವು ಹೇಳಿದೆ. ವೀರ್ಯದ ಚಲನಶೀಲತೆಯನ್ನು ಇದು ವೃದ್ಧಿಸುವುದು ಮತ್ತು ಅಸಾಮಾನ್ಯ ವೀರ್ಯದ ಸಂಖ್ಯೆಯನ್ನು ಇದು ಕಡಿಮೆ ಮಾಡುವುದು.
Most Read: ಮಕ್ಕಳ ಆರೋಗ್ಯಕ್ಕೆ ಕೆಚಪ್ ಒಳ್ಳೆಯದಲ್ಲ, ಇಂದೇ ನಿಲ್ಲಿಸಿ!

ದೃಷ್ಟಿಯು ಸುಧಾರಣೆಯಾಗುವುದು
ಕೆಚಪ್ ನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ ಮತ್ತು ಇದು ದೇಹದಲ್ಲಿ ಆರೋಗ್ಯಕಾರಿ ಪ್ರತಿರೋಧಕ ವ್ಯವಸ್ಥೆಯು ರೂಪಿಸುವುದು. ವಿಟಮಿನ್ ಎ ಕಣ್ಣಿನ ದೃಷ್ಟಿ ಸುಧಾರಣೆ ಮಾಡುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು.

ಕಾರ್ಬೋಹೈಡ್ರೇಟ್ಸ್ ತಗ್ಗಿಸುವುದು
ಕೆಚಪ್ ನಲ್ಲಿ ತುಂಬಾ ಕಾರ್ಬೋಹೈಡ್ರೇಟ್ಸ್ ಇದ್ದು, ಇದು ಬೇರೆದೆಲ್ಲಕ್ಕಿಂತ 4 ಗ್ರಾಂನಷ್ಟು ಕಡಿಮೆ ಆಗಿರುವುದು. ಇದು ಬೇರೆ ಬಾರ್ಬೆಕ್ಯೂ ಸಾಸ್ ಗಿಂತ ಹೆಚ್ಚು ಆರೋಗ್ಯಕಾರಿ ಆಗಿರುವುದು. ಬಾರ್ಬೆಕ್ಯೂ ಸಾಸ್ ನಲ್ಲಿ 9 ಗ್ರಾಂನಷ್ಟು ಕಾರ್ಬೋಹೈಡ್ರೇಟ್ಸ್ ಇದೆ.

ಕೊಬ್ಬು ಕಡಿಮೆ ಇದೆ
ಒಂದು ಚಮಚ ಕೆಚಪ್ ನಲ್ಲಿ ಅತೀ ಕಡಿಮೆ ಮಟ್ಟದ ಕೊಬ್ಬು ಇದೆ. ಅಂದರೆ ಇದರಲ್ಲಿ 0.1 ಗ್ರಾಂನಷ್ಟು ಮಾತ್ರ ಕೊಬ್ಬು ಇದೆ. ಕೆಚಪ್ ನಲ್ಲಿ ಸ್ಯಾಚುರೇಟೆಡ್ ಕೊಬ್ಬು ಇಲ್ಲ. ಈ ಕೊಬ್ಬು ಅಪಧಮನಿ ಕಾಯಿಲೆಗೆ ಕಾರಣವಾಗುವುದು.
Most Read: ಅಚ್ಚರಿ ಜಗತ್ತು: 'ಕೆಚಪ್' ಪ್ರಿಯರು ಓದಲೇಬೇಕಾದ ಲೇಖನವಿದು...

ಆರೋಗ್ಯಕಾರಿ ಆಹಾರಕ್ಕೆ ರುಚಿ ನೀಡುವುದು
ಆರೋಗ್ಯಕಾರಿ ಆಹಾರದ ಬಗ್ಗೆ ಹೆಚ್ಚಿನವರಿಗೆ ತಿಳಿದಿದ್ದರೆ ಅದನ್ನು ಎಲ್ಲರೂ ಕಡೆಗಣಿಸುವರು. ಯಾಕೆಂದರೆ ಇಂತಹ ಆಹಾರಗಳು ನಾಲಗೆಗೆ ರುಚಿ ನೀಡುವುದಿಲ್ಲ. ಆದರೆ ಒಂದು ಚಮಚ ಸಾಸ್ ಸಲಾಡ್ ನ್ನು ತುಂಬಾ ರುಚಿಕರವಾಗಿಸುವುದು.

ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುವುದು
ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕೆಚಪ್ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. 2007ರಲ್ಲಿ ಪ್ರಕಟಗೊಂಡಿರುವ ಅಧ್ಯಯನವೊಂದರ ಪ್ರಕಾರ ಪ್ರತಿನಿತ್ಯ ತಮ್ಮಆಹಾರ ಕ್ರಮದಲ್ಲಿ ಕೆಚಪ್ ಸೇವಿಸುವಂತಹ ಜನರಲ್ಲಿ ಕೊಲೆಸ್ಟ್ರಾಲ್ ಮಟ್ಟವು ಆರು ವಾರಗಳಲ್ಲಿ ಸೇ.6ರಷ್ಟು ಕಡಿಮೆ ಆಗಿದೆ.



Click it and Unblock the Notifications