For Quick Alerts
ALLOW NOTIFICATIONS  
For Daily Alerts

ಪ್ರತಿ ದಿನ ಉಪ್ಪಿನ ನೀರಿನಲ್ಲಿ ಬಾಯಿ ಮುಕ್ಕುಳಿಸುವುದರಿಂದ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತವೆ!

|

ಉಪ್ಪು ಅತ್ಯಂತ ಆರೋಗ್ಯಕರ ಹಾಗೂ ಧನಾತ್ಮಕ ಶಕ್ತಿಯನ್ನು ಹೊಂದಿರುವ ಉತ್ಪನ್ನ. ಉಪ್ಪು ಇಲ್ಲದ ಆಹಾರ ಪದಾರ್ಥ ರುಚಿ ರಹಿತವಾದ ದಪಾರ್ಥವಾಗಿರುತ್ತದೆ. ಕೊಂಚ ಉಪ್ಪನ್ನು ಸೇರಿಸಿ ಸೇವಿಸಿದರೆ ಎಂತಹ ಪದಾರ್ಥಗಳೇ ಆಗಿದ್ದರೂ ರುಚಿಕರವಾಗಿ ಇರುತ್ತದೆ. ಹಾಗಾಗಿ ಉಪ್ಪಿಲ್ಲದ ಊಟ ರುಚಿಕರವಾಗಿರುವುದಿಲ್ಲ ಎನ್ನುವ ಮಾತಿದೆ.

ಅದೇ ಕೇವಲ ಉಪ್ಪು ಮತ್ತು ನೀರನ್ನು ಹೊಂದಿದ್ದರೂ ಸಹ ರುಚಿಯಾದ ಊಟವನ್ನು ಹೊಂದಬಹುದು. ಉಪ್ಪಿನಲ್ಲಿ ಲವಣದ ಗುಣ ಇರುವುದರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳೆನ್ನು ನಿವಾರಿಸುತ್ತದೆ. ಉಪ್ಪಿನಲ್ಲಿ ಇಟ್ಟ ತರಕಾರಿ ಅಥವಾ ಯಾವುದೇ ಉತ್ಪನ್ನಗಳಲ್ಲಿ ಹುಳ ಬೀಳುವುದಿಲ್ಲ. ಉಪ್ಪಿನಲ್ಲಿ ಹುಳ ಬಿದ್ದಿರುವ ದಾಖಲೆಗಳು ಇಲ್ಲ ಎಂತಲೇ ಹೇಳಬಹುದು. ಉಪ್ಪಿನಲ್ಲಿ ಇರುವ ಆರೋಗ್ಯಕರ ಗುಣಗಳು ಅನೇಕ ರೋಗಾಣು ಗಳನ್ನು ದೂರ ಇಡುತ್ತದೆ. ಉಪ್ಪಿನಲ್ಲಿ ಇರುವ ಲವಣವು ಇತರ ವಸ್ತುಗಳೊಂದಿಗೆ ಸೇರಿದಾಗ ಅದರ ರಕ್ಷಣೆಯನ್ನು ಮಾಡುತ್ತದೆ ಎನ್ನಲಾಗುವುದು. ಕೇವಲ ಉಪ್ಪಿನಲ್ಲಿಯೇ ಕೆಲವು ಆಹಾರ ಪದಾರ್ಥಗಳನ್ನು ಶೇಖರಿಸಿ ಇಡುವುದರ ಮೂಲಕ ವರ್ಷಗಳ ಕಾಲ ಸಂರಕ್ಷಿಸಬಹುದು.

ಉಪ್ಪು ಅನೇಕ ರೋಗಗಳನ್ನು ಸಹ ತಡೆಯುತ್ತದೆ

ಉಪ್ಪು ಅನೇಕ ರೋಗಗಳನ್ನು ಸಹ ತಡೆಯುತ್ತದೆ

ಉಪ್ಪು ಕೇವಲ ಆಹಾರ ಪದಾರ್ಥಗಳನ್ನು ಮಾತ್ರ ಸಂರಕ್ಷಿಸು ವುದಿಲ್ಲ. ಬದಲಿಗೆ ಅನೇಕ ರೋಗಗಳನ್ನು ಸಹ ತಡೆಯುತ್ತದೆ. ವೈದ್ಯಕೀಯ ಸಲಹೆಯ ಪ್ರಕಾರ ನಿತ್ಯವೂ ಉಪ್ಪು ಉಪ್ಪು ಮತ್ತು ನೀರನ್ನು ಮಿಶ್ರಗೊಳಿಸಿ ಬಾಯನ್ನು ಮುಕ್ಕಳಿಸ ಬೇಕು. ಇದರಿಂದ ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಬಲು ಸುಲಭವಾಗಿ ನಿವಾರಿಸಬಹುದು. ಅದಕ್ಕಾಗಿ ಯಾವುದೇ ದುಂದುವೆಚ್ಚವನ್ನು ಮಾಡುವ ಅಗತ್ಯ ಇರುವುದಿಲ್ಲ. ನಿತ್ಯವೂ ಉಪ್ಪು ನೀರಿನಲ್ಲಿ ಬಾಯಿಮುಕ್ಕಳಿಸುವುದರಿಂದ ಬಾಯಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಬಹುದು.

ಉಪ್ಪು ಅನೇಕ ರೋಗಗಳನ್ನು ಸಹ ತಡೆಯುತ್ತದೆ

ಉಪ್ಪು ಅನೇಕ ರೋಗಗಳನ್ನು ಸಹ ತಡೆಯುತ್ತದೆ

ಬಾಯಿ ಪ್ರತಿಯೊಬ್ಬ ವ್ಯಕ್ತಿಗೂ ಆಹಾರವನ್ನು ಸೇವಿಸುವ ಅಂಗ. ಅಲ್ಲದೆ ಸಂವಹನ ಕ್ರಿಯೆಯನ್ನು ನಡೆಸುವುದರಿಂದ ಬಾಯಿಯ ಸ್ವಚ್ಛತೆಯು ಅತ್ಯಂತ ಪ್ರಮುಖವಾದ ಸಂಗತಿಯಾಗಿರುತ್ತದೆ. ಸಂವಹನ ನಡೆಸುವಾಗ ಅಥವಾ ಮೌನವಾಗಿ ಇರುವಾಗಲೂ ಬಾಯಿಯಿಂದ ದುರ್ಗಂಧ ಸೂಸುವುದು. ಅದು ಎದುರಿಗಿದ್ದ ವ್ಯಕ್ತಿಗಳಿಗೂ ಅಸಹ್ಯ ಉಂಟುಮಾಡುವುದು. ಅಲ್ಲದೆ ಬಾಯಲ್ಲಿ ಕಿರಿಕಿರಿ ಉಂಟುಮಾಡುವುದು. ಕೆಲವು ಆರೋಗ್ಯ ಸಮಸ್ಯೆಗಳು ಬಾಯಲ್ಲಿ ಗಂಭೀರ ಸಮಸ್ಯೆಗಳನ್ನು ಉಂಟುಮಾಡುವುದು. ಹಾಗಾಗಿ ನಿತ್ಯವೂ ಕೆಲವು ಆರೋಗ್ಯಕರ ಹವ್ಯಾಸ ಹಾಗೂ ಕ್ರಮಗಳನ್ನು ಅನುಸರಿಸುವುದರಿಂದ ಅನೇಕ ತೊಂದರೆಗಳಿಂದ ಮುಕ್ತಿ ಪಡೆಯಬಹುದು.

Most Read:ಉಪ್ಪು ಬೆರೆಸಿದ ಉಗುರು ಬೆಚ್ಚಗಿನ ನೀರು, ಆಯಸ್ಸು ನೂರು!

ನಿತ್ಯವೂ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ

ನಿತ್ಯವೂ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ

ಗಂಟಲುನೋವು, ವಸಡಿನಲ್ಲಿ ರಕ್ತ ಸ್ರಾವ, ಬಾಯಿ ಹುಣ್ಣು, ಹಲ್ಲು ಹುಳುಕು, ಬಾಯಿ ವಾಸನೆ ಅಥವಾ ದುರ್ಗಂಧ ಹಾಗೂ ಇನ್ನಿತರ ಯಾವುದೇ ಸಮಸ್ಯೆಗಳಿದ್ದರೂ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿದರೆ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ. ಸುಲಭ ಹಾಗೂ ಸರಳವಾದ ಈ ವಿಧಾನವು ಅತ್ಯಂತ ಪುರಾತನ ಕಾಲ ದಿಂದಲೂ ರೂಢಿಯಲ್ಲಿರುವ ಪದ್ಧತಿ ಅಥವಾ ಕ್ರಮ ಎಂದು ಹೇಳಬಹುದು. ಈ ವಿಧಾನವನ್ನು ಅನುಸರಿಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಸಹ ಉಂಟಾಗುವುದಿಲ್ಲ ಎಂದು ಹೇಳಲಾಗುವುದು. ಸೌಮ್ಯ ರೀತಿಯಲ್ಲಿ ಸಮಸ್ಯೆಳನ್ನು ದೂರ ತಳ್ಳುವುದು.

ಪಿಎಚ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವುದು

ಪಿಎಚ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವುದು

ಬಾಯಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತಲೇ ಇರುತ್ತವೆ. ಲವಣದಿಂದ ಕೂಡಿರುವ ನೀರಿನ ಮಿಶ್ರಣದಿಂದ ಬಾಯಿ ಮುಕ್ಕಳಿಸಬೇಕು. ಆಗ ಗಂಟಲಲ್ಲಿ ಉತ್ಪತ್ತಿಯಾಗುವ ಆಮ್ಲಗಳನ್ನು ತಡೆಯುತ್ತದೆ. ಇದು ಅನಾರೋಗ್ಯದ ಬ್ಯಾಕ್ಟೀರಿಯಾವನ್ನು ನಿಯಂತ್ರಿಸುತ್ತದೆ. ಇದು ಬಾಯಲ್ಲಿ ಪಿಎಚ್ ಮಟ್ಟವನ್ನು ಸಮತೋಲನದಲ್ಲಿ ಇರುವಂತೆ ಮಾಡುವುದು. ಅಲ್ಲದೆ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯ ಮಾಡುವುದು.

ಗಂಟಲ ನಾಳವನ್ನು ಆರೋಗ್ಯವಾಗಿ ಇರಿಸುತ್ತದೆ

ಗಂಟಲ ನಾಳವನ್ನು ಆರೋಗ್ಯವಾಗಿ ಇರಿಸುತ್ತದೆ

ಉಪ್ಪಿನ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಉಸಿರಾಟದ ನಾಳದಲ್ಲಿ ಮತ್ತು ಮೂಗಿನ ಕುಳಿಯಲ್ಲಿ ಲೋಳೆಯ ರಚನೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಉಪ್ಪಿನ ನೀರಿನಲ್ಲಿ ಬಾಯಿ ಮುಕ್ಕಳಿಸುವ ಕ್ರಿಯೆಯನ್ನು ಗಣನೀಯವಾಗಿ ಅನುಸರಿಸುವು ದರಿಂದ ಗಂಟಲು ನೋವು ನಿವಾರಣೆ ಹೊಂದುವುದು. ಚಿಕ್ಕ ಮಕ್ಕಳಿಗೆ ಕೆಮ್ಮು ಕಾಣಿಸಿಕೊಂಡ ಕೂಡಲೆ ಈ ಕ್ರಮ ಅನುಸರಿಸಿದರೆ ಬಹು ಬೇಗ ನಿವಾರಣೆ ಹೊಂದುವುದು. ಅಲ್ಲದೆ ಬಾಯಲ್ಲಿ ಉತ್ಪತ್ತಿಯಾಗುವುದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳನ್ನು ದೂರ ಇರಿಸುತ್ತದೆ.

ಶ್ವಾಸಕೋಶದ ಸೋಂಕು ನಿವಾರಣೆ

ಶ್ವಾಸಕೋಶದ ಸೋಂಕು ನಿವಾರಣೆ

ಜಪಾನ್ ದೇಶದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ದಿನಕ್ಕೆ ಮೂರು ಬಾರಿ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಶ್ವಾಸ ಕೋಶದ ಸೋಂಕು ಉಂಟಾದರೆ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿತ್ಯವೂ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಶ್ವಾಸೇಂದ್ರೀಯ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಸೋಂಕು ಪ್ರತಿ ಶತ 40ರಷ್ಟು ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.

Most Read: ಸೈಲೆಂಟ್ ಕಿಲ್ಲರ್ 'ಶ್ವಾಸಕೋಶದ ಕ್ಯಾನ್ಸರ್‌'ನ ಲಕ್ಷಣಗಳು

ಟಾನ್ಸಿಲ್ ಗ್ರಂಥಿಯ ನೋವನ್ನು ನಿವಾರಿಸುತ್ತದೆ

ಟಾನ್ಸಿಲ್ ಗ್ರಂಥಿಯ ನೋವನ್ನು ನಿವಾರಿಸುತ್ತದೆ

ಟಾನ್ಸಿಲ್ ಗ್ರಂಥಿಯು ವ್ಯಕ್ತಿಯ ಅಂಗಾಂಗದಲ್ಲಿ ಅತ್ಯಂತ ಪ್ರಮುಖ ಅಂಗವಾಗಿದೆ. ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಗ್ರಂಥಿ. ಇದು ಬಹು ಬೇಗ ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕಿಗೆ ತುತ್ತಾಗುವುದು. ಸೋಂಕಿಗೆ ಒಳಗಾದ ಈ ಗ್ರಂಥಿಯು ಅತ್ಯಂತ ನೋವು ಹಾಗೂ ತೊಂದರೆಯನ್ನು ಉಂಟುಮಾಡುವುದು. ಅಲ್ಲದೆ ಆಹಾರವನ್ನು ಸೇವಿಸುವುದು ಅಥವಾ ನುಂಗುವ ಪ್ರಕ್ರಿಯೆಗೆ ಅಡ್ಡಿ ಉಂಟುಮಾಡುವುದು. ಜೊತೆಗೆ ಉರಿಯೂತವನ್ನು ಉಂಟು ಮಾಡುವುದರ ಮೂಲಕ ನೋವನ್ನು ಕೆರಳಿಸುವುದು. ನಿತ್ಯವೂ ಉಪ್ಪಿ ನೀರಿನಿಂದ ಬಾಯಿ ಮುಕ್ಕುಳಿಸುವುದು ಅಥವಾ ಗಾರ್ಗಲಿಂಗ್ ಮಾಡುವುದರ ಮೂಲಕ ಟಾನ್ಸಿಲ್ ಗ್ರಂಥಿ ಅನ್ನು ಆರೋಗ್ಯದಿಂದ ಇಡಬಹುದು. ಜೊತೆಗೆ ನೋವಿಗೆ ಉತ್ತಮ ಪರಿಹಾರವಾಗಿರುತ್ತದೆ.

ಕೆಟ್ಟ ಉಸಿರಾಟವನ್ನು ತಡೆಯುತ್ತದೆ

ಕೆಟ್ಟ ಉಸಿರಾಟವನ್ನು ತಡೆಯುತ್ತದೆ

ಬಾಯಿ ಸ್ವಚ್ಛತೆ ಇಂದ ಇರದೆ ಹೋದಾಗ, ಹಲ್ಲುಜ್ಜದೆ ಇರುವುದು, ಹುಳುಕು ಹಲ್ಲು, ಬ್ಯಾಕ್ಟೀರಿಯಾ ಸಮಸ್ಯೆಯಿಂದ ಕೆಟ್ಟ ಉಸಿರಾಟ ಅಥವಾ ದುರ್ಗಂಧದ ಉಸಿರಾಟವು ಅನೇಕ ಸಮಸ್ಯೆ ಉಂಟು ಮಾಡುವುದು. ಜೊತೆಗೆ ಇತರಿಗೂ ನಮ್ಮ ಸಂವಹನ ಅಥವಾ ಮಾತನ್ನು ಕೇಳಲು ಕಷ್ಟವಾಗುವುದು. ನಿತ್ಯವೂ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಲ್ಲಿ ಬ್ಯಾಕ್ಟೀರಿಯಾಗಳ ಚದುರುವಿಕೆಯನ್ನು ತಡೆಯಬಹುದು. ಆಗ ಕೆಟ್ಟ ಉಸಿರಾಟದಿಂದ ಮುಕ್ತಿ ಪಡೆಯ ಬಹುದು.

Most Read:ಉಪ್ಪು ನೀರು ಸ್ನಾನದ 10 ಅದ್ಭುತ ಆರೋಗ್ಯ ಪ್ರಯೋಜನಗಳು

ವಸಡುಗಳ ರಕ್ತ ಸ್ರಾವ ಮತ್ತು ಹಲ್ಲು ನೋವು ನಿಯಂತ್ರಣ

ವಸಡುಗಳ ರಕ್ತ ಸ್ರಾವ ಮತ್ತು ಹಲ್ಲು ನೋವು ನಿಯಂತ್ರಣ

ಬ್ಯಾಕ್ಟೀರಿಯಾಗಳ ಪ್ರಭಾವದಿಂದ ವಸಡುಗಳು ಊದಿಕೊಳ್ಳುವುದು. ಆಹಾರ ಸೇವಿಸುವಾಗ ಅದರಿಂದ ರಕ್ತ ಸ್ರಾವ ಉಂಟಾಗುವುದು. ಜೊತೆಗೆ ಕೀವು, ಕೀಟ ಮತ್ತು ಬ್ಯಾಕ್ಟೀರಿಯಾಗಳಿಂದ ಹಲ್ಲು ನೋವು ಉಂಟಾಗುವುದು. ಅದಕ್ಕಾಗಿ ನಿತ್ಯವೂ ಉಪ್ಪು ನೀರಿನಲ್ಲಿ ಬಾಯನ್ನು ಮುಕ್ಕುಳಿಸಿದರೆ ವಸಡುಗಳ ಸಮಸ್ಯೆ ಹಾಗೂ ಹಲ್ಲು ನೋವು ಬಹು ಬೇಗ ಶಮನ ಆಗುವುದು.

ಬಾಯಿ ಹುಣ್ಣಿನ ನಿವಾರಣೆ

ಬಾಯಿ ಹುಣ್ಣಿನ ನಿವಾರಣೆ

ವಿಟಮಿನ್ ಕೊರತೆ ಹಾಗೂ ಕೆಲವು ಆಂತರಿಕ ಸಮಸ್ಯೆಯ ಕಾರಣದಿಂದ ಕೆಲವರಿಗೆ ಪದೇ ಪದೇ ಬಾಯಿ ಹುಣ್ಣು ಕಾಣಿಸಿಕೊಳ್ಳುತ್ತದೆ. ಅತಿಯಾದ ನೋವು ಹಾಗೂ ಉರಿಯೂತ ದಿಂದ ಕೂಡಿರುತ್ತದೆ. ಅಂತಹ ಸಂದರ್ಭದಲ್ಲಿ ಮಾತನಾಡುವುದು, ಆಹಾರ ಸೇವಿಸುವುದು, ಎಂಜಲನ್ನು ನುಂಗಲು ಕಷ್ಟವಾಗುತ್ತದೆ. ಆ ಸಮಯದಲ್ಲಿ ಉಪ್ಪು ನೀರಿನಿಂದ ಬಾಯಿ ಮುಕ್ಕುಳಿಸಿದರೆ ಹುಣ್ಣು ಬಹು ಬೇಗ ಗುಣಮುಖವಾಗುವುದು.

ಉಪ್ಪು ನೀರನ್ನು ತಯಾರಿಸುವುದು ಹೇಗೆ?

ಉಪ್ಪು ನೀರನ್ನು ತಯಾರಿಸುವುದು ಹೇಗೆ?

*ಒಂದು ಗ್ಲಾಸ್ ನೀರಿಗೆ ಅರ್ಥ ಟೇಬಲ್ ಚಮಚ ಉಪ್ಪನ್ನು ಸೇರಿಸಿ, ಮಿಶ್ರಗೊಳಿಸಿ.

*ಉಪ್ಪು ಸಂಪೂರ್ಣವಾಗಿ ಕರಗಿದ ಮೇಲೆ, ಒಮ್ಮೆ ಬಾಯಲ್ಲಿ ಹಿಡಿಯುವಷ್ಟು ಉಪ್ಪು ನೀರನ್ನು ಹಾಕಿಕೊಳ್ಳಿ.

*ನಂತರ ತಲೆಯನ್ನು ಮೇಲೆ ಮುಖವನ್ನಾಗಿ ಮಾಡಿ, ಗಂಟಲಲ್ಲಿ 30 ಸೆಕೆಂಡ್‍ಗಳ ಕಾಲ ಇರಿಸಿ.

*ಚನ್ನಾಗಿ ಬಾಯಿ ಮುಕ್ಕಳಿಸಿದ ಬಳಿಕ ಅದನ್ನು ಉಳುಗಿ.

*ದಿನಕ್ಕೆ ಒಮ್ಮೆ, ಎರಡು ಬಾರಿ ಮತ್ತು ಮೂರು ಬಾರಿಯ ವರೆಗೂ ಈ ಕ್ರಮವನ್ನು ಅನುಸರಿಸಬಹುದು.

*ಈ ಕ್ರಮವನ್ನು ನಿತ್ಯ ಅನುಸರಿಸುವುದರಿಂದ ನಿಮ್ಮ ಅನೇಕ ಸಮಸ್ಯೆಯನ್ನು ದೂರ ಇಡಬಹುದು.

English summary

Health benefits of gargle with salt water every day

When suffering from a sore throat or bleeding gums, you are often advised to gargle with salt water. It is easy, inexpensive and an age-old home remedy. Most importantly it does not have any side-effects. There are certain researches that suggest salt water gargles can help you treat mild health issues. So, here are some amazing benefits of doing salt water gargles every day.
X
Desktop Bottom Promotion