Latest Updates
-
ಜನ್ಮಾಷ್ಟಮಿ ಉಪವಾಸ: ಹಬ್ಬದ ಸಂಭ್ರಮದ ನಡುವೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಕಜರಿ ತೀಜ್ 2026: ಉಪವಾಸದ ದಿನ ಆರೋಗ್ಯ ಮತ್ತು ಸಂಗಾತಿಯೊಂದಿಗೆ ಸುಗಮ ಸಂವಹನಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಇಂದೇ ಕೊನೆಯ ಅವಕಾಶ: ಎಲ್ಪಿಜಿ ಇ-ಕೆವೈಸಿ ಮಾಡದಿದ್ದರೆ ಸಿಲಿಂಡರ್ ದರ ಏರಿಕೆ ಖಚಿತ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆ ಬಜೆಟ್ ಉಳಿಸಿ, ಈರುಳ್ಳಿ ಇಲ್ಲದೆಯೂ ರುಚಿಕರ ಹೈ-ಪ್ರೋಟೀನ್ ಊಟ ಮಾಡಿ! -
#5DayWeekandFairPLI ಟ್ರೆಂಡ್: ಬ್ಯಾಂಕ್ ಮತ್ತು ಐಟಿ ಉದ್ಯೋಗಿಗಳ ಆಕ್ರೋಶ, 5 ದಿನದ ಕೆಲಸಕ್ಕೆ ಸಿಗುತ್ತಾ ಮನ್ನಣೆ? -
ಮಕ್ಕಳಿಗಾಗಿ ದಾಂಪತ್ಯ ಉಳಿಸಿಕೊಳ್ಳಬೇಕೇ? ಜೀನತ್ ಅಮಾನ್ ಅವರ ವೈರಲ್ ಸಲಹೆ ಮತ್ತು ಪೋಷಕರಿಗೆ ಮಹತ್ವದ ಪಾಠ -
ಇಂದು ಬೆಂಗಳೂರಿನಲ್ಲಿ ಪವರ್ ಕಟ್: ವೈಟ್ಫೀಲ್ಡ್, ಪೀಣ್ಯ, ಮಲ್ಲೇಶ್ವರಂ ಸೇರಿ ಪ್ರಮುಖ ಏರಿಯಾಗಳ ಪಟ್ಟಿ ಇಲ್ಲಿದೆ -
ಇನ್ಮುಂದೆ ಬಿಸ್ಕತ್ತು, ಕೂಲ್ ಡ್ರಿಂಕ್ಸ್ ಮೇಲೆ ಕೆಂಪು ಎಚ್ಚರಿಕೆ ಲೇಬಲ್: FSSAI ಹೊಸ ನಿಯಮವೇನು? -
ಮುಂಬೈ ಲೋಕಲ್ ರೈಲು ಪ್ರಯಾಣಿಕರೇ ಗಮನಿಸಿ: ಇಂದು ಮೆಗಾ ಬ್ಲಾಕ್, ಯಾವ ಮಾರ್ಗದಲ್ಲಿ ಸಂಚಾರ ಸ್ಥಗಿತ? -
ರಾಷ್ಟ್ರೀಯ ಪೋಷಕಾಂಶ ವಾರ: ಕನ್ನಡಿಗರ ಆರೋಗ್ಯಕ್ಕಾಗಿ 7 ದಿನಗಳ ಸಿಂಪಲ್ ಡಯಟ್ ಮತ್ತು ವ್ಯಾಯಾಮ ಪ್ಲಾನ್!
ಉಪ್ಪು ನೀರು ಸ್ನಾನದ 10 ಅದ್ಭುತ ಆರೋಗ್ಯ ಪ್ರಯೋಜನಗಳು
"ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ" ಎಂಬುದು ಎಲ್ಲರಿಗು ಗೊತ್ತಿರುವ ಗಾದೆ. ಉಪ್ಪಿಲ್ಲದೆ ಊಟ ತಯಾರಿಸಲು ಅಸಾಧ್ಯ. ಷಡ್ರಸಗಳಲ್ಲಿ ಲವಣಕ್ಕೆ (ಉಪ್ಪು) ಹೆಚ್ಚಿನ ಮಹತ್ವ. ಉಪ್ಪನ್ನು ಹೀಗೆ ಬರೀ ಊಟಕ್ಕೆ ಮಾತ್ರ ಬಳಸುತ್ತಾರೆ ಎಂದರೆ ತಪ್ಪಾಗುತ್ತದೆ. ಇದರ ಹೊರತಾಗಿ ಇದನ್ನು ಮೂಲಿಕೆಯಾಗಿ ಮತ್ತು ನಂಜು ನಿವಾರಕವನ್ನಾಗಿ ಬಳಸುತ್ತಾರೆ.
ಉಪ್ಪನ್ನು ಸ್ನಾನ ಮಾಡಲು ಸಹ ಬಳಸುತ್ತಾರೆ. ಬಾತ್ ಸಾಲ್ಟ್ ಎಂಬ ಹೆಸರಿನಲ್ಲಿ ಇದು ದೊರೆಯುತ್ತದೆ. ಉಪ್ಪು ನೀರಿನ ಸ್ನಾನದಿಂದ ಹಲವಾರು ಪ್ರಯೋಜನಗಳು ನಮಗೆ ಲಭಿಸುತ್ತವೆ. ಸರಳವಾಗಿ ಹೇಳಬೇಕೆಂದರೆ ಈ ಸ್ನಾನವು ನಿಮ್ಮ ಊಹೆಗು ನಿಲುಕದ ರೀತಿಯಲ್ಲಿ ನಿಮ್ಮ ಜೀವನವನ್ನು ಬದಲಾಯಿಸುತ್ತದೆ. ಮೊಸರೆಂಬ ಅಮೃತದಲ್ಲಿದೆ ಆರೋಗ್ಯಕಾರಿ 11 ಅಂಶಗಳು

ನಿಮ್ಮ ತ್ವಚೆಗೆ ನಿಜವಾಗಿಯೂ ಉತ್ತಮ
ಉಪ್ಪನ್ನು ನೈಜ ಮತ್ತು ಸ್ವಾಭಾವಿಕ ರೂಪದಲ್ಲಿ ಬಳಸಿದಲ್ಲಿ, ಉಪ್ಪು ನೀರಿನ ಸ್ನಾನಗಳು ನಿಜಕ್ಕು ನಿಮ್ಮ ತ್ವಚೆಗೆ ಅಗತ್ಯವಾಗಿರುವ ಖನಿಜಗಳನ್ನು ಮತ್ತು ಪೋಷಕಾಂಶಗಳನ್ನು ನೀಡಿ, ತ್ವಚೆಗೆ ಆಹ್ಲಾದಕತೆಯನ್ನು ಒದಗಿಸುತ್ತದೆ. ಮ್ಯೆಗ್ನಿಶಿಯಂ, ಕ್ಯಾಲ್ಶಿಯಂ, ಬ್ರೋಮೈಡ್, ಸೋಡಿಯಂ ಮತ್ತು ಪೊಟಾಶಿಯಂನಂತಹ ಖನಿಜಗಳನ್ನು ಈ ಸ್ನಾನದ ಮೂಲಕ ತ್ವಚೆಯ ರಂಧ್ರಗಳು ಹೀರಿಕೊಳ್ಳಲು ನೆರವಾಗುತ್ತದೆ. ಇವುಗಳು ತ್ವಚೆಯ ಹೊರಪದರವನ್ನು ಸ್ವಚ್ಛಗೊಳಿಸುತ್ತವೆ, ಹಾಗು ತ್ವಚೆಗೆ ಹೊಳಪು ಮತ್ತು ಆರೋಗ್ಯವನ್ನು ನೀಡುತ್ತವೆ.

ಟಾಕ್ಸಿನ್ ಮುಕ್ತವಾಗಲು ನೆರವಾಗುತ್ತದೆ
ಬಾತ್ ಸಾಲ್ಟ್ ಬಳಸುವುದರಿಂದ ತ್ವಚೆಯು ಟಾಕ್ಸಿನ್ ಮುಕ್ತವಾಗುತ್ತದೆ. ಬಿಸಿ ನೀರು ತ್ವಚೆಯಲ್ಲಿರುವ ರಂಧ್ರಗಳನ್ನು ತೆರೆಯುತ್ತದೆ. ಆ ಮೂಲಕ ಉಪ್ಪು ನೀರಿನಲ್ಲಿರುವ ಖನಿಜಗಳು ತ್ವಚೆಯ ಒಳಗೆ ಪ್ರವೇಶಿಸಿ, ಅದರ ಒಳಗೆ ಸ್ವಚ್ಛಗೊಳಿಸಲು ನೆರವು ನೀಡುತ್ತದೆ. ಇದರ ಜೊತೆಗೆ ಉಪ್ಪು ನೀರಿನ ಸ್ನಾನವು ತ್ವಚೆಯು ಹೀರಿಕೊಂಡಿರುವ ಟಾಕ್ಸಿನ್‌ಗಳನ್ನು ಮತ್ತು ಬ್ಯಾಕ್ಟೀರಿಯಾಗಳನ್ನು ಹೊರ ಹಾಕುತ್ತದೆ ಮತ್ತು ತ್ವಚೆಯನ್ನು ಯೌವನಭರಿತವಾಗಿ ಕಾಪಾಡುತ್ತದೆ.

ನಿಮ್ಮನ್ನು ಯೌವನಭರಿತವಾಗಿ ಕಾಣುವಂತೆ ಮಾಡುತ್ತದೆ
ಬಾತ್ ಸಾಲ್ಟ್ ಅನ್ನು ನಿಯಮಿತವಾಗಿ ಬಳಸುವುದರಿಂದ ತ್ವಚೆಯ ಮೇಲೆ ಸುಕ್ಕುಗಳು ಮತ್ತು ಸೂಕ್ಷ್ಮವಾದ ಗೆರೆಗಳು ಬರದಂತೆ ಕಾಪಾಡಿಕೊಳ್ಳಬಹುದು. ಇದು ತ್ವಚೆಯ ಮೃದುತ್ವವನ್ನು ಮತ್ತು ನಮ್ಯತೆಯನ್ನು ಕಾಪಾಡುತ್ತದೆ. ಬಾತ್ ಸಾಲ್ಟ್ ತ್ವಚೆಯನ್ನು ಒತ್ತುವ ಮೂಲಕ ಇದನ್ನು ಸಾಧಿಸುತವೆ, ಜೊತೆಗೆ ಇದು ತ್ವಚೆಯ ತೇವಾಂಶವನ್ನು ಕಾಪಾಡುತ್ತದೆ.ದೈನಂದಿನ ಜೀವನದ ಏಕಾತಾನತೆಯನ್ನು ನಿವಾರಿಸಿ, ತ್ವಚೆಗೆ ಸ್ವಾಭಾವಿಕವಾದ ಹೊಳಪನ್ನು ನೀಡಲು ಬಾತ್ ಸಾಲ್ಟ್ ನೆರವಾಗುತ್ತದೆ.

ಹಲವಾರು ಸಮಸ್ಯೆಗಳಿಗೆ ಚಿಕಿತ್ಸೆಯನ್ನು ನೀಡುತ್ತದೆ
ಬಾತ್ ಸಾಲ್ಟ್ ಕೇವಲ ತ್ವಚ್ಚೆಯ ಸಮಸ್ಯೆಗಳಿಗಷ್ಟೇ ಅಲ್ಲದೆ ಅದಕ್ಕೂ ಮಿಗಿಲಾದ ಪ್ರಯೋಜನಗಳನ್ನು ನೀಡುತ್ತದೆ. ಇದು ಗಂಭೀರವಾದ ಕಾಯಿಲೆಗಳಾದ ಸಂಧಿವಾತ ಮತ್ತು ಉರಿಯೂತಗಳಿಗು ಸಹ ಪರಿಹಾರವನ್ನು ನೀಡುತ್ತದೆ. ಸಂಧಿವಾತವು ಮೂಳೆಗಳಲ್ಲಿನ ಮೃದ್ವಸ್ಥಿಗಳನ್ನು ಹಾಳು ಮಾಡುತ್ತದೆ ಮತ್ತು ದೇಹದ ಕೆಳಭಾಗದಲ್ಲಿರುವ ಮೂಳೆಗಳನ್ನು ಸವೆಸುತ್ತದೆ. ಉರಿಯೂತವು ಕೀಲುಗಳಲ್ಲಿ ಊತವನ್ನು ನೀಡುತ್ತದೆ. ಇದರ ಜೊತೆಗೆ ಬಾತ್ ಸಾಲ್ಟ್ ತುರಿಕೆ ಮತ್ತು ಇನ್ಸೋಮ್ನಿಯಾವನ್ನು ಸಹ ಪರಿಹರಿಸುತ್ತದೆ.

ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ
ದೈಹಿಕ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ಉಪ್ಪು ನೀರಿನ ಸ್ನಾನವು ಮಾನಸಿಕ ಆರೋಗ್ಯವನ್ನು ಸಹ ಸುಧಾರಿಸುತ್ತದೆ. ಉಪ್ಪು ನೀರಿನ ಸ್ನಾನವನ್ನು ಮಾಡಿದ ಮೇಲೆ ನಿಮ್ಮ ಮನಸ್ಸು ಆದಷ್ಟು ಶಾಂತವಾಗಿ, ಸಂತೋಷವಾಗಿ ಮತ್ತು ವಿಶ್ರಾಂತಿಯಿಂದ ಕೂಡಿರುತ್ತದೆ. ನಾವೆಲ್ಲರು ಒತ್ತಡದಲ್ಲಿ ನಲುಗುತ್ತಿರುತ್ತೇವೆ. ಬಾತ್ ಸಾಲ್ಟ್ ಈ ನಿಟ್ಟಿನಲ್ಲಿ ಒಳ್ಳೆಯ ಒತ್ತಡ ನಿವಾರಕವಾಗಿ ಕೆಲಸ ಮಾಡುತ್ತದೆ. ಇದು ನಿಮ್ಮ ಮನಃಶಾಂತಿಯನ್ನು ಸಹ ಹೆಚ್ಚಿಸುತ್ತದೆ.

ಎಕ್ಸ್‌ಫೋಲಿಯೇಶನ್ ಅನ್ನು ಹೆಚ್ಚಿಸುತ್ತದೆ
ಎಕ್ಸ್‌ಫೋಲಿಯೇಶನ್ ಎಂಬ ಚರ್ಮ ಸುಲಿಯುವಿಕೆಯ ಪ್ರಕ್ರಿಯೆಯು ತ್ವಚೆಯನ್ನು ಒಂದು ಮಟ್ಟಕ್ಕೆ ಆರೋಗ್ಯಕರವಾಗಿಡುವ ಪ್ರಕ್ರಿಯೆಯಾಗಿದೆ. ಬಾತ್ ಸಾಲ್ಟ್ ಈ ಪ್ರಕ್ರಿಯೆಗೆ ತನ್ನದೆ ಆದ ಕೊಡುಗೆಯನ್ನು ನೀಡುತ್ತದೆ. ಕೆಲವೊಂದು ಬಾತ್ ಸಾಲ್ಟ್‌ಗಳು ಡಿಟರ್ಜೆಂಟ್‌ನಂತಹ ಪ್ರತಿಕ್ರಿಯೆಗಳನ್ನು ಒದಗಿಸುತ್ತದೆ. ಇದು ಗಡುಸಾಗಿರುವ ತ್ವಚೆಯನ್ನು ಮೃದು ಮಾಡಿ, ತ್ವಚೆಯ ಹೊರಪದರ ಎಕ್ಸ್‌ಫೋಲಿಯೇಟ್ ಆಗಲು ಸಹಾಯ ಮಾಡುತ್ತದೆ.

ಆಸಿಡಿಟಿಯನ್ನು ನಿವಾರಿಸುತ್ತದೆ
ಇಂದು ಜನರು ಎದುರಿಸುತ್ತಿರುವ ಆರೋಗ್ಯದ ಸಮಸ್ಯೆಗಳಲ್ಲಿ ಆಸಿಡಿಟಿಯು ಸಹ ಪ್ರಮುಖವಾಗಿದೆ. ದುಬಾರಿ ವೆಚ್ಚದ ಔಷಧಿಗಳಿಗೆ ಮೊರೆ ಹೋಗಿ, ಅವುಗಳ ಅಡ್ಡ ಪರಿಣಾಮಗಳಿಗೆ ಗುರಿಯಾಗುವ ಬದಲು, ನೀವು ಸಾಲ್ಟ್ ವಾಟರ್ ಬಾತ್ ಪ್ರಯತ್ನಿಸಿ ನೋಡಬಹುದು. ಬಾತ್ ಸಾಲ್ಟ್‌ನಲ್ಲಿರುವ ಅಲ್ಕಾಲೈನ್ ಗುಣವು ನಿಮ್ಮ ದೇಹದಲ್ಲಿರುವ ಆಸಿಡಿಟಿಯನ್ನು ಕಡಿಮೆ ಮಾಡುತ್ತದೆ.

ಪಾದದಲ್ಲಿರುವ ಸ್ನಾಯುಗಳಿಗೆ ಪ್ರಯೋಜನಕಾರಿ
ನಿಮ್ಮ ದೇಹದಲ್ಲಿಯೇ ಅತಿ ಹೆಚ್ಚು ಒತ್ತಡಕ್ಕೆ ಒಳಗಾಗುವ ಅಂಗವೆಂದರೆ ಅದು ಪಾದ. ಇದು ಯಾವಾಗಲು ಓಡಾಡುತ್ತಿರುತ್ತದೆ ಮತ್ತು ನಿಮ್ಮ ಇಡೀ ದೇಹದ ಭಾರವನ್ನು ಹೊರುತ್ತದೆ. ಇವುಗಳು ಸ್ನಾಯುಗಳ ಮೃದುತ್ವ ಮತ್ತು ಪಾದರಕ್ಷೆಗಳಿಂದ ಉಂಟಾಗುವ ಗುಳ್ಳೆಗಳಿಂದ ಬಳಲುತ್ತಿರುತ್ತವೆ. ಬಾತ್ ಸಾಲ್ಟ್‌ಗಳು ಈ ಸ್ನಾಯುಗಳ ನೋವನ್ನು ಕಡಿಮೆ ಮಾಡುತ್ತದೆ ಮತ್ತು ಪರಿಹರಿಸುತ್ತದೆ. ಜೊತೆಗೆ ಇವುಗ್ ಪಾದಗಳಿಂದ ಹೊರಡುವ ದುರ್ಗಂಧವನ್ನು ನಿವಾರಿಸುತ್ತದೆ.

ನಿಮ್ಮ ತ್ವಚೆಯನ್ನು ಮೊಯಿಶ್ಚರೈಸ್ ಮಾಡುತ್ತದೆ
ನಿಮ್ಮ ತ್ವಚೆಗೆ ನೀವು ಮಾಡಬಹುದಾದ ಒಂದು ಒಳ್ಳೆಯ ಕೆಲಸವೆಂದರೆ ಅದು ಮೊಯಿಶ್ಚರೈಸಿಂಗ್. ಬಾತ್ ಸಾಲ್ಟ್‌ನಲ್ಲಿರುವ ಮ್ಯೆಗ್ನಿಶಿಯಂ ನಿಮ್ಮ ತ್ವಚೆಗೆ ನೀರಿನ ಮೂಲಕ ಅಂಟಿಕೊಳ್ಳುತ್ತದೆ. ಇದು ನಿಮ್ಮ ತ್ವಚೆಯನ್ನು ಮೊಯಿಶ್ಚರೈಸ್ ಮಾಡುತ್ತದೆ ಮತ್ತು ತ್ವಚೆಯ ಕೋಶಗಳನ್ನು ಅಭಿವೃದ್ಧಿಪಡಿಸುತ್ತದೆ.

ಸ್ನಾಯುಗಳ ನೋವನ್ನು ಮತ್ತು ಉಳುಕುಗಳಿಗೆ ಪರಿಹಾರವನ್ನೊದಗಿಸುತ್ತದೆ
ಉಪ್ಪು ನೀರಿನ ಸ್ನಾನದಿಂದ ಸ್ನಾಯು ನೋವು ಮತ್ತು ಉಳುಕುಗಳನ್ನು ನಿವಾರಿಸಿಕೊಳ್ಳಬಹುದು. ಅರ್ಥರಿಟಿಸ್, ಮಧುಮೇಹ ಅಥವಾ ಇನ್ನಿತರ ಕ್ರೀಡಾ ಸಂಬಂಧಿ ಗಾಯಗಳಿಗು ಸಹ ಇದು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.



Click it and Unblock the Notifications