For Quick Alerts
ALLOW NOTIFICATIONS  
For Daily Alerts

ಎಲ್ಲಾ ಆರೋಗ್ಯ ಸಂಬಂಧಿ ತೊಂದರೆಗಳಿಗೆ ಒಂದೇ ಚಿಕಿತ್ಸೆ-'ತಲೆ ಮಸಾಜ್'!

|

ದೇಹಕ್ಕೆ ಮಾಡುವ ಮಸಾಜ್ ಬಗ್ಗೆ ನಮಗೆ ತಿಳಿದಿದೆ, ಆದರೆ ತಲೆ ಮಸಾಜ್? ವಾಸ್ತವವಾಗಿ ಇದೊಂದು ಬಹಳ ಪುರಾತನ ವೈದ್ಯಪದ್ದತಿಯೇ ಆಗಿದೆ. ಆಯುರ್ವೇದದಲ್ಲಿಯೂ ಶಿರೋಧಾರಾ ಎಂಬ ಚಿಕಿತ್ಸೆಯಲ್ಲಿ ತಲೆಗೆ ಎಣ್ಣೆಯ ಮೂಲಕ ಮಸಾಜ್ ನೀಡಲಾಗುತ್ತದೆ. University of California San Francisco Medical Center ಎಂಬ ಸಂಸ್ಥೆಯಲ್ಲಿ ನಡೆಸಿದ ಸಂಶೋಧನೆಯಲ್ಲಿ ವಿವರಿಸಿರುವ ಪ್ರಕಾರ ಸೂಕ್ತ ವಿಧಾನದಲ್ಲಿ ತಲೆಗೆ ಮಾಡುವ ಮಸಾಜ್ ನಿಂದ ಹೃದಯದ ಬಡಿತ ಹೆಚ್ಚುತ್ತದೆ, ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ ಹಾಗೂ ರಕ್ತಪರಿಚಲನೆಯೂ ಉತ್ತಮಗೊಳ್ಳುತ್ತದೆ. ನಿಮಗೆ ಯಾವುದೇ ಅನಾರೋಗ್ಯವಿರಲಿ, ಈ ಮಸಾಜ್ ನಿಂದ ಖಂಡಿತವಾಗಿಯೂ ಪ್ರಯೋಜನವಿದೆ. ಬನ್ನಿ, ಸರಿಯಾದ ವಿಧಾನದ ಮಸಾಜ್ ನಿಂದ ಯಾವ ಪ್ರಯೋಜನಗಳಿವೆ ಎಂದು ನೋಡೋಣ:

ಅಧಿಕ ರಕ್ತದೊತ್ತಡ ಇಳಿಯುತ್ತದೆ

ಅಧಿಕ ರಕ್ತದೊತ್ತಡ ಇಳಿಯುತ್ತದೆ

ಈ ವಿಶ್ವದ ಯಾವುದೇ ದೇಶದಲ್ಲಿ ಅಧಿಕ ರಕ್ತದೊತ್ತಡದಿಂದ ಬಳಲದಿರುವ ವ್ಯಕ್ತಿಗಳೇ ಇರಲಾರದು. ಅಲ್ಲದೇ ಇದೊಂದು ನಿಶಃಬ್ಧ ಕೊಲೆಗಾರನೂ ಹೌದು. ಪುರುಷರಿಗಿಂತಲೂ ಮಹಿಳೆಯರೇ ಅಧಿಕ ರಕ್ತದೊತ್ತಡಕ್ಕೆ ಹೆಚ್ಚು ಒಳಗಾಗುತ್ತಾರೆ. ಅಧಿಕ ರಕ್ತದೊತ್ತಡ ಹೃದಯ ಸ್ತಂಭನಕ್ಕೂ ಕಾರಣವಾಗಬಲ್ಲುದು ಅಥವಾ ಮೂತ್ರಪಿಂಡವನ್ನು ವಿಫಲಗೊಳಿಸಬಹುದು. ಆದರೆ, ಒಂದು ಅಧ್ಯಯನದ ಪ್ರಕಾರ ನಿಯಮಿತವಾಗಿ ತಲೆ ಮಸಾಜ್ ಮಾಡಿಕೊಳ್ಳುತ್ತಾ ಬಂದರೆ ಈ ಅಧಿಕ ರಕ್ತದೊತ್ತಡ ಕಡಿಮೆಯಾಗಿ ಆರೋಗ್ಯಕರ ಮಟ್ಟಕ್ಕಿಳಿಯುತ್ತದೆ ಹಾಗೂ ತನ್ಮೂಲಕ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

ನಿದ್ರಾರಾಹಿತ್ಯವನ್ನು ಕೊನೆಗಾಣಿಸುತ್ತದೆ

ನಿದ್ರಾರಾಹಿತ್ಯವನ್ನು ಕೊನೆಗಾಣಿಸುತ್ತದೆ

ಸತತ ಚಟುವಟಿಕೆಯಿಂದಿರುವ ಮತ್ತು ಗಡಿಬಿಡಿಯ ಜೀವನದಲ್ಲಿಯೂ ಕೆಲವರು ಅಡ್ಡಪರಿಣಾಮಗಳಿವೆ. ಕೆಲವು ಪ್ರಮುಖ ಅನಾರೋಗ್ಯಗಳೂ ಆಗಿವೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನ ಸಾಧಿಸದೇ ಒಂದು ಇನ್ನೊಂದರ ಮೇಲೆ ತನ್ನ ಪ್ರಭಾವ ಬೀರುತ್ತಿದ್ದಂತೆಯೇ ಆರೋಗ್ಯ ಕೆಡತೊಡಗುತ್ತದೆ. ನಿಮಗೆ ಗೊತ್ತಿಲ್ಲದಂತೆಯೇ ಕೆಲವಾರು ಅನಾರೋಗ್ಯಗಳು ಆವರಿಸತೊಡಗುತ್ತವೆ. ಇದರಲ್ಲಿ ಪ್ರಮುಖವಾದುದೆಂದರೆ ನಿದ್ರಾರಾಹಿತ್ಯ ಸ್ಥಿತಿ ಅಥವಾ ಇನ್ಸೋಮ್ನಿಯಾ. ಈ ಸ್ಥಿತಿ ಬಂದರೆ ಯಾವಾಗ ನಿದ್ದೆ ಬರಬೇಕೋ ಆಗ ಬರದೇ ಯಾವಾಗ ಬರಬಾರದೋ ಆಗ ಒತ್ತರಿಸಿಕೊಂಡು ಬರುತ್ತದೆ. ಅಥವಾ ಕೆಲವಾರು ದಿನಗಳವರೆಗೆ ನಿದ್ದೆಯೇ ಬಾರದೇ ಹೋಗಬಹುದು. ನಿಯಮಿತವಾಗಿ ತಲೆ ಮಸಾಜ್ ಮಾಡಿಕೊಳ್ಳುತ್ತಿದ್ದರೆ ಇದು ತಲೆಯಭಾಗಕ್ಕೆ ಉತ್ತಮ ರಕ್ತಪರಿಚಲನೆಯುಂಟಾಗುವಂತೆ ಮಾಡುತ್ತದೆ ಹಾಗೂ ತಕ್ಷಣವೇ ಮಾನಸಿಕ ನಿರಾಳತೆ ಮತ್ತು ದೇಹಕ್ಕೆ ಆರಾಮ ನೀಡುವ ಮೂಲಕ ಸೂಕ್ತ ವಿಶ್ರಾಂತಿ ಮತ್ತು ಸಹಜನಿದ್ದೆ ಪಡೆಯಲು ನೆರವಾಗುತ್ತದೆ.

ಮೈಗ್ರೇನ್ ತಲೆನೋವು

ಮೈಗ್ರೇನ್ ತಲೆನೋವು

ಕೆಲವಾರು ಅಧ್ಯಯನಗಳಲ್ಲಿ ಕಂಡುಕೊಂಡಂತೆ ತಲೆಗೆ ಮಸಾಜ್ ಮಾಡಿಸಿಕೊಳ್ಳುವ ಮೂಲಕ ಮೈಗ್ರೇನ್ ಸಹಿತ ಇತರ ಬಗೆಯ ತಲೆನೋವುಗಳಿಗೆ ಶಮನ ದೊರಕುತ್ತದೆ. ಸಾಮಾನ್ಯವಾಗಿ ತಲೆನೋವುಗಳು ಮಾನಸಿಕ ಒತ್ತಡ ಮತ್ತು ದೇಹದ ಇತರ ಭಾಗದಲ್ಲಿ ಎದುರಾಗಿರುವ ನೋವಿನಿಂದ ಎದುರಾಗುತ್ತದೆ. ತಲೆ ಮಸಾಜ್ ನಿಂದ ಈ ತೊಂದರೆಗಳು ಇಲ್ಲವಾಗುವ ಪರಿಣಾಮವಾಗಿ ತಲೆನೋವೂ ಇಲ್ಲವಾಗುತ್ತದೆ. ಅಲ್ಲದೇ ನಿದ್ದೆಯನ್ನು ಇನ್ನಷ್ಟು ಉತ್ತಮಗೊಳಿಸಲು ಹಾಗೂ ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸಲೂ ಆಗಾಗ ತಲೆ ಮಸಾಜ್ ಪಡೆಯುತ್ತಿರುವುದು ಉತ್ತಮ.

Most Read: ಮೈಗ್ರೇನ್ ತಲೆನೋವಿಗೆ ಅಡುಗೆ ಮನೆಯಲ್ಲಿಯೇ ಇದೆ ಔಷಧಿ!

ದೇಹದಿಂದ ಕಲ್ಮಶಗಳನ್ನು ನಿವಾರಿಸುತ್ತದೆ

ದೇಹದಿಂದ ಕಲ್ಮಶಗಳನ್ನು ನಿವಾರಿಸುತ್ತದೆ

ನಮ್ಮ ದೇಹದಲ್ಲಿ ಕಲ್ಮಶಗಳು ದುಗ್ಧರಸದ ರೂಪದಲ್ಲಿ ಸಂಗ್ರಹವಾಗುತ್ತವೆ ಹಾಗೂ ಇವುಗಳನ್ನು ದುಗ್ಧಗ್ರಂಥಿಗಳು ಒಂದೆಡೆ ಶೇಖರಿಸಿ ಬಳಿಕ ದೇಹದಿಂದ ವಿಸರ್ಜಿಸುವಂತೆ ಮಾಡುತ್ತವೆ. ತಲೆ ಮಸಾಜ್ ನಿಂದ ಕುತ್ತಿಗೆಗೆ ಹರಿಯುವ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ಈ ಕಲ್ಮಶಗಳನ್ನು ಪೂರ್ಣವಾಗಿ ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಈ ಮೂಲಕ ರೋಗ ನಿರೋಧಕ ಶಕ್ತಿ ಇನ್ನಷ್ಟು ಬಲಗೊಳ್ಳುತ್ತದೆ.

ರಸದೂತಗಳ ಸಮತೋಲನ ಸಾಧಿಸಲು ನೆರವಾಗುತ್ತದೆ

ರಸದೂತಗಳ ಸಮತೋಲನ ಸಾಧಿಸಲು ನೆರವಾಗುತ್ತದೆ

ಯಾವಾಗ ನಮ್ಮ ದೇಹ ತನ್ನ ಸಾಮರ್ಥ್ಯಕ್ಕೂ ಮೀರಿ ಶ್ರಮಿಸಿತೋ ಆಗ ನಮ್ಮ ದೇಹದಲ್ಲಿ ಹಲವಾರು ಒತ್ತಡಕಾರಕ ರಸದೂತಗಳು ಬಿಡುಗಡೆಯಾಗುತ್ತವೆ. ಅತಿಯಾಗಿ ಬಳಲಿದ್ದಾಗ ಯಾರಾದರೂ ಏನಾದರೂ ಕೇಳಿದರೆ ಥಟ್ಟನೇ ನಮಗೆ ಸಿಡುಕುತನ ಎದುರಾಗುವುದು ಇದೇ ಕಾರಣಕ್ಕೆ. ಈ ಹೆಚ್ಚಿನ ರಸದೂತಗಳ ಪ್ರಮಾಣ ದೇಹದ ಇತರ ರಸದೂತಗಳ ಮಟ್ಟವನ್ನು ಏರುಪೇರಾಗಿಸುತ್ತದೆ. ವಿಶೇಷವಾಗಿ ನಿದ್ದೆಗೆ ಅವಶ್ಯವಿರುವ ರಸದೂತ ಏರುಪೇರಾದರೆ ನಿದ್ದೆ ಬಾರದೇ ಹೋಗುವುದು ಮತ್ತು ಚಡಪಡಿಕೆ ಎದುರಾಗುತ್ತದೆ. ತಲೆಯ ಮಸಾಜ್ ನಿಂದ ಈ ಏರುಪೇರು ಕನಿಷ್ಟವಾಗಿದ್ದು ಆರೋಗ್ಯಕರ ಸಮತೋಲನ ಸಾಧಿಸಲು ಸಾಧ್ಯವಾಗುತ್ತದೆ. ಅಲ್ಲದೇ ಸರಿಯಾದ ಮಸಾಜ್ ದೇಹದ ಶಕ್ತಿಯ ಮಟ್ಟಗಳನ್ನೂ ಹೆಚ್ಚಿಸುವ ಮೂಲಕ ನೋವು ಕಡಿಮೆಯಾಗಲು ಹಾಗೂ ಒಟ್ಟಾರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮಗೊಳ್ಳಲು ನೆರವಾಗುತ್ತದೆ.

Most Read: ವಾರಕ್ಕೊಮ್ಮೆ ತಲೆ ಮಸಾಜ್-ಇದರ ಅನುಭವವೇ ಬೇರೆ!

ಉಸಿರಾಟದ ತೊಂದರೆಗಳನ್ನು ಸರಿಪಡಿಸುತ್ತದೆ.

ಉಸಿರಾಟದ ತೊಂದರೆಗಳನ್ನು ಸರಿಪಡಿಸುತ್ತದೆ.

ತಲೆಯ ಮಸಾಜ್ ನಿಂದ ಉಸಿರಾಟದ ತೊಂದರೆಗಳಾದ ಅಸ್ತಮಾ, ಬ್ರಾಂಖೈಟಿಸ್, ಕುಹರದ ಸೋಂಕು ಮತ್ತು ಇತರ ಅಲರ್ಜಿಗಳನ್ನು ನಿವಾರಿಸಲು ಸಾಧ್ಯ. ನಮ್ಮ ಉಸಿರಾಟಕ್ಕೆ ಪ್ರಮುಖವಾಗಿರುವ ಶ್ವಾಸಕೋಶ ತಾನಾಗಿಯೇ ಉಬ್ಬಲು ಶಕ್ತವಿಲ್ಲ. ನಮ್ಮ ಎದೆಗೂಡಿನ ಸ್ನಾಯುಗಳು ಸಂಕುಚಿಸಿ ಮತ್ತು ವಿಕಸಿಸಿ ಶ್ವಾಸಕೋಶಕ್ಕೆ ಗಾಳಿ ಎಳೆದುಕೊಳ್ಳುವಂತೆ ಮತ್ತು ಹೊರದೂಡುವಂತೆ ಮಾಡುತ್ತವೆ. ಈ ಸ್ನಾಯುಗಳೇನಾದರೂ ಪೆಡಸುಗೊಂಡರೆ ಇವು ಪೂರ್ಣವಾಗಿ ಸಂಕುಚಿತಗೊಳ್ಳಲು ಸಾಧ್ಯವಾಗದೇ ಉಸಿರಾಟದ ತೊಂದರೆ ಎದುರಾಗುತ್ತದೆ. ತಲೆಯ ಮಸಾಜ್ ನಿಂದ ಈ ಸ್ನಾಯುಗಳೂ ನಿರಾಳಗೊಳ್ಳುತ್ತವೆ ಹಾಗೂ ಉಸಿರಾಟದ ಕ್ಷಮತೆಯೂ ಹೆಚ್ಚುತ್ತದೆ ಹಾಗೂ ತನ್ಮೂಲಕ ಉತ್ತಮ ಪ್ರಮಾಣದ ಆಮ್ಲಜನಕ ಪಡೆಯಲು ಸಾಧ್ಯವಾಗುತ್ತದೆ.

ಸ್ನಾಯುಗಳ ವಿಪರೀತ ಬಳಕೆಯ ಬಳಲಿಕೆಯನ್ನು ತಗ್ಗಿಸುತ್ತದೆ

ಸ್ನಾಯುಗಳ ವಿಪರೀತ ಬಳಕೆಯ ಬಳಲಿಕೆಯನ್ನು ತಗ್ಗಿಸುತ್ತದೆ

ನಮ್ಮ ಸ್ನಾಯುಗಳನ್ನು ದೈಹಿಕ ಕಾರ್ಯಗಳಿಗೆ ವಿಪರೀತವಾಗೆ ಬಳಸಿದ ಬಳಿಕ ಅಥವಾ ಸ್ನಾಯುಗಳಿಗೆ ಸೆಳೆತ ನೀಡುವ ಭಂಗಿಯಲ್ಲಿ ದೀರ್ಘಕಾಲದವರೆಗೆ ಇದ್ದಾಗ ಅಥವಾ ಭಾರದ ವಸ್ತುಗಳನ್ನು ಎತ್ತುವಾಗ ಸ್ನಾಯುಗಳು ತುಂಡಾಗುತ್ತವೆ ಹಾಗೂ ಈ ಭಾಗದಲ್ಲಿ ನೋವು ಆವರಿಸುತ್ತದೆ. ಸಂಶೋಧನೆಗಳಲ್ಲಿ ಕಂಡುಕೊಂಡ ಪ್ರಕಾರ ತಲೆಯ ಮಸಾಜ್ ನಿಂದ ಸ್ನಾಯುಗಳಿಗೂ ಉತ್ತಮ ರಕ್ತಪರಿಚಲನೆ ದೊರೆತು ಶೀಘ್ರವೇ ಬಳಲಿಕೆಯಿಂದ ಹೊರಬರುತ್ತವೆ ಹಾಗೂ ಈ ಸ್ನಾಯುಗಳ ಹಿಡಿತವೂ ಉತ್ತಮಗೊಳ್ಳುತ್ತದೆ. ಹಾಗಾಗಿ, ಒಂದು ವೇಳೆ ನಿಮ್ಮ ಕೆಲಸ ಅಥವಾ ವ್ಯಾಯಾಮದ ಕಾರಣದಿಂದ ಕೆಲವು ಸ್ನಾಯುಗಳಿಗೆ ಸತತವಾಗಿ ಒತ್ತಡ ಬೀಳುತ್ತಲೇ ಇದ್ದಲ್ಲಿ ತಲೆಯ ಮಸಾಜ್ ನಿಂದ ಈ ಭಾಗದಲ್ಲಿ ನೋವುಂಟಾಗದೇ ಇರುವಂತೆ ನೋಡಿಕೊಳ್ಳಬಹುದು..

English summary

Head Massage Techniques to Resolve All your Health Issues

Head massage therapy offers relief from various mental and physical health issues. Research conducted by the University of California San Francisco Medical Center stated that “a good head massage can alleviate heart rate, lower blood pressure and increase blood circulation.”It doesn’t matter what medical condition you suffer from, massage can help. Here are some ailments for which massage can be effective.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more