For Quick Alerts
ALLOW NOTIFICATIONS  
For Daily Alerts

ಗ್ರೀನ್ ಟೀ ಕುಡಿಯುವ ಕೆಲವು ಆರೋಗ್ಯ ಲಾಭಗಳು, ಅಡ್ಡಪರಿಣಾಮಗಳು

|

ಗ್ರೀನ್ ಟೀ ತುಂಬಾ ಆರೋಗ್ಯಕರ ಪಾನೀಯವೆಂದು ಪರಿಗಣಿಸಲಾಗಿದೆ. ಇಂದಿನ ದಿನಗಳಲ್ಲಿ ಗ್ರೀನ್ ಟೀಯನ್ನು ಆರೋಗ್ಯ ಲಾಭಕ್ಕಾಗಿ ಹೆಚ್ಚಾಗಿ ಉಪಯೋಗಿಸುವರು. ಅದರಲ್ಲೂ ತೂಕ ಇಳಿಸಲು ಬಯಸುತ್ತಿರುವ ಜನರು ಗ್ರೀನ್ ಟೀ ಬಳಕೆ ಮಾಡುವಲ್ಲಿ ಮೊದಲ ಸ್ಥಾನದಲ್ಲಿರುವರು. ಜಪಾನ್ ನಲ್ಲಿ ಗ್ರೀನ್ ಟೀ ಅತೀ ಹೆಚ್ಚಾಗಿ ಸೇವಿಸುವರು. ಯಾಕೆಂದರೆ ಇದರಲ್ಲಿ ವಯಸ್ಸಾಗುವ ಲಕ್ಷಣಗಳನ್ನು ತಡೆಯುವ ಗುಣಗಳು ಇದೆ ಎಂದು ಪರಿಗಣಿಸಲಾಗಿದೆ.

ಇತ್ತೀಚೆಗೆ ನಡೆಸಿರುವಂತಹ ವರದಿಯ ಪ್ರಕಾರ ಗ್ರೀನ್ ಟೀಯಲ್ಲಿ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಇದೆ. ಇದು ಒಣಗಿಸಿದ ಗ್ರೀನ್ ಟೀ ಎಲೆಗಳ ತೂಕದ ಶೇ.30ರಷ್ಟಿದೆ ಎಂದು ಹೇಳಿದೆ. ಗ್ರೀನ್ ಟೀಯಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಮತ್ತು ಶಮನಕಾರಿ ಗುಣ ಹೊಂದಿರುವ ಗುಣಗಳು ನೇರಳೆ, ಡಾರ್ಕ್ ಚಾಕಲೇಟ್ ಮತ್ತು ಕೆಂಪು ವೈನ್ ನಲ್ಲೂ ಉಪಲಬ್ದವಿದೆ.

Green Tea

ಗ್ರೀನ್ ಟೀಯಲ್ಲಿ ಫ್ಲಾವನಾಲ್ ಗಳು ಮತ್ತು ಕ್ಯಾಟೆಚಿನ್(ಎಪಿಕಾಟೆಚಿನ್, ಎಪಿಗಲ್ಲೊಕಾಟೆಚಿನ್, ಗ್ಯಾಲೊಕಾಟೆಚಿನ್ ಮತ್ತು ಗ್ಯಾಲೇಟ್ ಉತ್ಪನ್ನಗಳು). ಗ್ರೀನ್ ಟೀಯಲ್ಲಿ ಇರುವಂತಹ ಅತ್ಯಂತ ಪ್ರಮುಖ ಅಂಶವೆಂದರೆ ಅದು ಇಜಿಸಿಜಿ(ಎಪಿಗಲ್ಲೊಕಾಟೆಚಿನ್ -3-ಗ್ಯಾಲೇಟ್).ಇದರಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ. ಗ್ರೀನ್ ಟೀಯಲ್ಲಿ ಕಂಡುಬರುವಂತಹ ಇತರ ಕೆಲವು ಅಂಶಗಳೆಂದರೆ ಅದು ಕ್ವೆರ್ಸೆಟಿನ್, ಎಪಿಜೆನಿನ್, ಲಿನೋಲಿಕ್ ಆಮ್ಲ, ಕಾರ್ಬೋಹೈಡ್ರೇಟ್ ಗಳು, ಮೀಥೈಲ್ಕ್ಸಾಂಥೈನ್ ಗಳು, ಕ್ಯಾರೊಟಿನಾಯ್ಡ್ ಗಳು ಮತ್ತು ಖನಿಜಗಳಾದ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಸತು ಮತ್ತು ಕ್ರೋಮಿಯಂ. ಗ್ರೀನ್ ಟೀಯಲ್ಲಿ ಇರುವ ಆರೋಗ್ಯ ಲಾಭಗಳು

ಕೊಲೆಸ್ಟ್ರಾಲ್ ತಗ್ಗಿಸುವುದು

ಗ್ರೀನ್ ಟೀಯು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುವುದು. ಇದು ಹೃದಯವನ್ನು ಆಘಾತ ಮತ್ತು ಹೃದಯದ ಕಾಯಿಲೆಗಳಿಂದ ರಕ್ಷಣೆ ಮಾಡುವುದು. ಅಧ್ಯಯನಗಳ ಪ್ರಕಾರ ಗ್ರೀನ್ ಟೀ ಸೇವನೆ ಮಾಡುವುದರಿಂದ ಹೃದಯದ ಕಾಯಿಲೆಯನ್ನು ಶೇ.31ರಷ್ಟು ಕಡಿಮೆ ಮಾಡಬಹುದು.

ಕ್ಯಾನ್ಸರ್ ಅಪಾಯ ತಗ್ಗಿಸುವುದು

ಗ್ರೀನ್ ಟೀಯಲ್ಲಿ ಆಂಟಿಆಕ್ಸಿಡೆಂಟ್ ಗಳಾಗಿರುವಂತಹ ಪಾಲಿಫೆನಾಲ್ ಗಳು ಇವೆ. ಇದರಿಂದ ಪ್ರಾಸ್ಟೇಟ್, ಕರುಳು ಮತ್ತು ಸ್ತನದ ಕ್ಯಾನ್ಸರ್ ಅಪಾಯು ಕಡಿಮೆ ಆಗುವುದು.

ತೂಕ ಇಳಿಸಲು ಸಹಕಾರಿ

ಗ್ರೀನ್ ಟೀ ಚಯಾಪಚಯ ಕ್ರಿಯೆ ಹೆಚ್ಚಿಸುವುದನ್ನು ಕಾಣಬಹುದು. ಇದರಿಂದ ಕೊಬ್ಬು ಕರಗುವುದು ಮತ್ತು ಶಕ್ತಿಯ ವ್ಯಯವು ಶೇ.4ರಷ್ಟು ಹೆಚ್ಚಾಗುವುದು ಎಂದು ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ನಲ್ಲಿ ಪ್ರಕಟಗೊಂಡಿರುವಂತಹ ಅಧ್ಯಯನ ವರದಿಯು ತಿಳಿಸಿವೆ. ಇನ್ನೊಂದು ಅಧ್ಯಯನದ ಪ್ರಕಾರ ಗ್ರೀನ್ ಟೀಯಲ್ಲಿ ಇರುವಂತಹ ಕೆಫಿನ್ ಅಂಶವು ದೈಹಿಕ ಪ್ರದರ್ಶನವನ್ನು ಶೇ.11ರಿಂದ 12ರಷ್ಟು ಹೆಚ್ಚಿಸುವುದು.

ಮೆದುಳಿನ ಕ್ರಿಯೆ ಸುಧಾರಿಸುವುದು

ಗ್ರೀನ್ ಟೀಯು ಮೆದುಳಿನ ಕ್ರಿಯೆ ಸುಧಾರಣೆ ಮಾಡುವುದು ಮತ್ತು ನ್ಯೂರೋನ್ ಗಳ ಬಿಡುಗಡೆ ಹೆಚ್ಚಿಸಿ ನಿಮ್ಮನ್ನು ತುಂಬಾ ಬುದ್ಧಿವಂತರನ್ನಾಗಿ ಮಾಡುವುದು ಮತ್ತು ಡೊಪಮೈನ್ ಮತ್ತು ನೊರ್ಪೈನ್ಫ್ರಿನ್ನಂತಹ ನ್ಯೂರೋಟ್ರಾನ್ಸ್ ಮಿಟ್ಟರ್ ಗಳನ್ನು ಹೆಚ್ಚಿಸಿ ಏಕಾಗ್ರತೆ ವೃದ್ಧಿಸುವುದು. ಗ್ರೀನ್ ಟೀ ಸೇವಿಸಿದರೆ ಅದರಿಂದ ಮನಸ್ಥಿತಿ ಸುಧಾರಣೆ ಆಗುವುದು, ಜಾಗೃತಿ ಮತ್ತು ನೆನಪಿನ ಶಕ್ತಿ ಹೆಚ್ಚಾಗುವುದು. ಅಲ್ಝೈಮರ್ ಮತ್ತು ಪರ್ಕಿಸನ್ ನಂತಹ ಕಾಯಿಲೆಯು ಕಡಿಮೆ ಆಗುವುದು.

ಟೈಪ್ 2 ಮಧುಮೇಹದ ಅಪಾಯ ತಗ್ಗಿಸುವುದು

ಗ್ರೀನ್ ಟೀಯು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಣೆ ಮಾಡುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು ಎಂದು ಅಧ್ಯಯನಗಳು ಹೇಳಿವೆ. ಇನ್ನೊಂದು ಅಧ್ಯಯನದ ಪ್ರಕಾರ ಗ್ರೀನ್ ಟೀ ಸೇವಿಸುವಂತಹ ಶೇ. 18ರಷ್ಟು ಜನರಲ್ಲಿ ಮಧುಮೇಹದ ಅಪಾಯವು ಕಡಿಮೆ ಆಗಿದೆ.

ಚರ್ಮದ ಉರಿಯೂತ ಕಾಯಿಲೆ ತಗ್ಗಿಸುವುದು

ಗ್ರೀನ್ ಟೀಯನ್ನು ಚರ್ಮದ ಸಮಸ್ಯೆಯಾಗಿರುವಂತಹ ಹೊಟ್ಟು ಮತ್ತು ಸೋರಿಯಾಸಿಸ್ ನ ನಿವಾರನೆ ಬಳಸಬಹುದು. ಗ್ರೀನ್ ಟೀ ಸೇವನೆ ಮಾಡಿದರೆ ಅದರಿಂದ ಚರ್ಮವು ಒಡೆದಿರುವುದು, ಒಣ ಮತ್ತು ಎದ್ದು ಬಂದಿರುವ ಚರ್ಮದ ಸಮಸ್ಯೆಯು ನಿವಾರಣೆ ಆಗುವುದು.

ಸಂಧಿವಾತ ಸಮಸ್ಯೆಯಿಂದ ನಿವಾರಣೆ ನೀಡುವುದು

ಗ್ರೀನ್ ಟೀಯಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಪರಿಣಾಮವಾಗಿರುವಂತಹ ಇಜಿಸಿಜಿಯು ದೇಹದಲ್ಲಿ ಕೆಲವೊಂದು ರೀತಿಯ ಅಣುಗಳಿಂದಾಗಿ ಉಂಟಾಗುವಂತಹ ಉರಿಯೂತ ಮತ್ತು ಸಂಧಿವಾತದ ನೋವನ್ನು ಕಡಿಮೆ ಮಾಡುವುದು. ಅಧ್ಯಯನ ವರದಿಗಳ ಪ್ರಕಾರ ಗ್ರೀನ್ ಟೀಯಲ್ಲಿ ಇರುವಂತಹ ಇಜಿಸಿಜಿಯು ವಿಟಮಿನ್ ಇ ಮತ್ತು ವಿಟಮಿನ್ ಸಿಯಿಂದ ಶೇ.100ರಷ್ಟು ಹೆಚ್ಚು ಪರಿಣಾಮಕಾರಿ ಆಗಿದೆ.

ಬಾಯಿಯ ಆರೋಗ್ಯ ಸುಧಾರಿಸುವುದು

ಗ್ರೀನ್ ಟೀಯಲ್ಲಿ ಇರುವಂತಹ ಕ್ಯಾಟಿಚಿನ್ ಎನ್ನುವ ಅಂಶವು ಬ್ಯಾಕ್ಟೀರಿಯಾ ಮತ್ತು ವೈರಸ್ ನ್ನು ಕೊಲ್ಲುವುದು ಮತ್ತು ಇದರಿಂದಾಗಿ ಸೋಂಕಿನ ಅಪಾಯ ಕಡಿಮೆ ಮಾಡುವುದು. ಇದು ಹಲ್ಲಿನಲ್ಲಿ ಪದರ ನಿರ್ಮಾಣ, ದಂತಕುಳಿ ಮತ್ತು ಒಸಡಿನ ಸಮಸ್ಯೆ ಉಂಟು ಮಾಡುವಂತಹ ಸ್ಟ್ರೆಪ್ಟೋಕೊಕಸ್ ಮ್ಯುಟಾನ್ಸ್ ಎನ್ನುವ ಬ್ಯಾಕ್ಟೀರಿಯಾದ ಬೆಳವಣಿಗೆ ತಡೆಯುವುದು.

ದೀರ್ಘಕಾಲ ಬಾಳುವುದು

ಅಧ್ಯಯನಗಳ ಪ್ರಕಾರ ಗ್ರೀನ್ ಟೀ ಸೇವಿಸುವವರು ದೀರ್ಘಕಾಲ ಬಾಳುತ್ತಾರೆ. ಎಲ್ಲಾ ಕಾರಣಗಳಿಂದ ಉಂಟಾಗುವಂತಹ ಸಾವಿನ ಪ್ರಮಾಣವು ಮಹಿಳೆಯರಲ್ಲಿ ಶೇ.23 ಮತ್ತು ಪುರುಷರಲ್ಲಿ ಶೇ.12,ಹೃದಯದ ಕಾಯಿಲೆಗಳಿಂದ ಆಗುವಂತಹ ಸಾವು ಮಹಿಳೆಯರಲ್ಲಿ ಶೇ.31 ಮತ್ತು ಪುರುಷರಲ್ಲಿ ಶೇ.22, ಪಾರ್ಶ್ವವಾಯುವಿನಿಂದ ಉಂಟಾಗುವ ಸಾವು ಮಹಿಳೆಯರಲ್ಲಿ ಶೇ.42 ಮತ್ತು ಪುರುಷರಲ್ಲಿ ಶೇ.35ರಷ್ಟು ಗ್ರೀನ್ ಟೀ ಸೇವನೆಯಿಂದ ಕಡಿಮೆ ಆಗಿದೆ ಎಂದು ವರದಿಗಳು ತಿಳಿಸಿವೆ.

ಚರ್ಮದ ಆರೋಗ್ಯಕ್ಕೆ ಸಹಕಾರಿ

ಗ್ರೀನ್ ಟೀಯಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು ಮತ್ತು ಚರ್ಮವು ತುಂಬಾ ಆರೋಗ್ಯಕಾರಿ ಹಾಗೂ ಕಾಂತಿಯುತವಾಗಿ ಇರುವಂತೆ ಮಾಡುವುದು.

ಗ್ರೀನ್ ಟೀಯ ಅಡ್ಡಪರಿಣಾಮಗಳು

ಕೆಫಿನ್ ಗೆ ಸೂಕ್ಷ್ಮತೆ ಹೊಂದಿರುವವರು, ರಕ್ತ ತೆಳುವಾಗುವ ಔಷಧಿ ತೆಗೆದುಕೊಳ್ಳುವವರು ಮತ್ತು ಇತರ ಉತ್ತೇಜನ ಔಷಧಿಗಳನ್ನು ತೆಗೆದುಕೊಳ್ಳುವಂತಹ ಜನರು ಗ್ರೀನ್ ಟೀ ಸೇವಿಸುವುದನ್ನು ಬಿಡಬೇಕು.
ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಗ್ರೀನ್ ಟೀ ಕುಡಿಯಬೇಕು
ಹೆಚ್ಚಿನ ಲಾಭ ಪಡೆಯಲು ದಿನಕ್ಕೆ 3-5 ಕಪ್ ಗ್ರೀನ್ ಟೀ ಕುಡಿಯಬೇಕು.

ಗ್ರೀನ್ ಟೀ ತಯಾರಿಸುವುದು ಹೇಗೆ

•ಒಂದು ಚಮಚ ಗ್ರೀನ್ ಟೀ ಎಲೆಗಳನ್ನು ತೆಗೆದುಕೊಳ್ಳಿ ಮತ್ತು ಒಂದು ಕಪ್ ನೀರಿನಲ್ಲಿ ಇದನ್ನು ಕುದಿಸಿ.
•5 ನಿಮಿಷ ಕಾಲ ಹಾಗೆ ಇದನ್ನು ಕುದಿಸಿ.
•ಇದನ್ನು ಸೋಸಿಕೊಂಡು ಸ್ವಲ್ಪ ಜೇನುತುಪ್ಪ ಹಾಕಿ.
•ಈಗ ಚಾವನ್ನು ಕುಡಿದು ಆನಂದಿಸಿ.

English summary

Green Tea: Health Benefits, Side Effects

Green tea is touted as one of the healthiest beverages. It is one of the most consumed beverages in Japan because green tea is considered to be anti-ageing. According to a study, green tea contains the highest number of antioxidants which accounts for about 30% of the weight of dry green tea leaves. The antioxidant and healing compounds in green tea are also found in other foods like blueberries, dark chocolate and red wine.
X
Desktop Bottom Promotion