For Quick Alerts
ALLOW NOTIFICATIONS  
For Daily Alerts

ಕಡಲೆಹಿಟ್ಟು: ಇದರಲ್ಲಿರುವ ನ್ಯೂಟ್ರಿಷಿಯನ್ ಹಾಗೂ ಆರೋಗ್ಯಕಾರಿ ಪ್ರಯೋಜನಗಳು

|

ಕಡಲೆಹಿಟ್ಟು ಪ್ರತಿಯೊಂದು ಭಾರತೀಯ ಅಡುಗೆ ಮನೆಯಲ್ಲಿ ಕಂಡುಬರುವುದು. ಕಡಲೆಹಿಟ್ಟನ್ನು ಕೇವಲ ಅಡುಗೆ ಮಾತ್ರವಲ್ಲದೆ, ಸೌಂದರ್ಯದ ಆರೈಕೆಗೂ ಬಲಸಲಾಗುತ್ತದೆ. ಕಡಲೆಹಿಟ್ಟನ್ನು ಸಾಮಾನ್ಯವಾಗಿ ಭಾರತದಲ್ಲಿ ಬೇಸನ್ ಎಂದು ಕರೆಯಲಾಗುತ್ತದೆ. ಇದನ್ನು ಕಡಲೆಯಿಂದ ತಯಾರಿಸಲಾಗುತ್ತದೆ. ಕಡಲೆ ಹಿಟ್ಟಿನಲ್ಲಿ ಇರುವಂತಹ ಕೆಲವೊಂದು ಆರೋಗ್ಯ ಗುಣಗಳ ಬಗ್ಗೆ ನೀವು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಕಡಲೆಹಿಟ್ಟು ನಿಮಗೆ ಒಳ್ಳೆಯದೇ?

ಕಡಲೆಹಿಟ್ಟಿನಲ್ಲಿ ಒಲೀಕ್ ಆಮ್ಲ, ಲಿನೋಲಿಕ್ ಆಮ್ಲ, ಅಪರ್ಯಾಪ್ತ ಕೊಬ್ಬಿನಾಮ್ಲಗಳು, ವಿಟಮಿನ್ ಹಾಗೂ ಖನಿಜಾಂಶಗಳು ಇವೆ. ಇದು ಗ್ಲುಟೇನ್ ನಿಂದ ಮುಕ್ತವಾಗಿದ್ದು, ಉನ್ನತ ಮಟ್ಟದ ನಾರಿನಾಂಶ ಮತ್ತು ಪ್ರೋಟೀನ್ ನ್ನು ಒಳಗೊಂಡಿದೆ. ಕಡಲೆ ಹಿಟ್ಟು ಉನ್ನತ ಮಟ್ಟ ಫಾಲಟೆ ಅಂಶವನ್ನು ಹೊಂದಿದೆ. ಇದು ಗರ್ಭಧಾರಣೆ ವೇಳೆ ಬೆನ್ನುಮೂಳೆ ಹಾನಿಯಾಗುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

Gram Flour

ಕಡಲೆಹಿಟ್ಟಿನ ಪೋಷಕಾಂಶ ಮೌಲ್ಯಗಳು

100ಗ್ರಾಂ ಕಡಲೆಹಿಟ್ಟಿನಲ್ಲಿ 10.28 ಗ್ರಾಂ ನೀರು, 387 ಕೆಸಿಎಎಲ್ ಶಕ್ತಿ ಮತ್ತು ಇನ್ನಿತರ ಅಂಶಗಳು ಇವೆ.
•22.39 ಗ್ರಾಂ ಪ್ರೋಟೀನ್
•6.69 ಗ್ರಾಂ ಕೊಬ್ಬು
•57.82 ಗ್ರಾಂ ಕಾರ್ಬೋಹೈಡ್ರೇಟ್ಸ್
•10.8 ಗ್ರಾಂ ನಾರಿನಾಂಶ
•10.85 ಗ್ರಾಂ ಸಕ್ಕರೆ
•45 ಮಿ.ಗ್ರಾಂ.ಕ್ಯಾಲ್ಸಿಯಂ
•4.86 ಮಿ.ಗ್ರಾಂ. ಕಬ್ಬಿನಾಂಶ
•166 ಮಿ.ಗ್ರಾಂ ಫೋಸ್ಪರಸ್
•846 ಮಿಗ್ರಾಂ ಪೊಟಾಶಿಯಂ
•64 ಮಿಗ್ರಾಂ ಸೋಡಿಯಂ
•2.81 ಮಿಗ್ರಾಂ ಸತು
•0.486 ಮಿಗ್ರಾಂ ಥೈಮೆನ್
•0.106 ಮಿಗ್ರಾಂ ರಿಬೊಫ್ಲಾವಿನ್
•1.762 ಮಿಗ್ರಾಂ ನಿಯಾಸಿನ್
•0.492 ಮಿಗ್ರಾಂ ವಿಟಮಿನ್ ಬಿ6
•437 ಎಂಸಿಜಿ ಫಾಲಟೆ
•41 ಐಯು ವಿಟಮಿನ್ ಎ
•0.83 ಮಿಗ್ರಾಂ ವಿಟಮಿನ್ ಇ
•9.1 ಎಂಸಿಜಿ ವಿಟಮಿನ್ ಕೆ

ಕಡಲೆಹಿಟ್ಟಿನ ಆರೋಗ್ಯ ಲಾಭಗಳು

ಮಧುಮೇಹ ನಿಯಂತ್ರಿಸುವುದು

ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ನ್ನು ಹೊಂದಿರುವಂತಹ ಕಡಲೆ ಹಿಟ್ಟು ಮಧುಮೇಹಿಗಳಿಗೆ ಒಳ್ಳೆಯ ಆಹಾರವಾಗಿದೆ. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವಂತಹ ಆಹಾರವು ನಿಧಾನವಾಗಿ ಜೀರ್ಣವಾಗುವುದು ಮತ್ತು ರಕ್ತದಲ್ಲಿ ಬೇಗನೆ ಸಕ್ಕರೆ ಮಟ್ಟವನ್ನು ಹೆಚ್ಚಿಸದು. ಇನ್ಸುಲಿನ್ ಸೂಕ್ಷ್ಮತೆಯನ್ನು ಇದು ಸುಧಾರಿಸುವುದು. ಚಪಾತಿ ಅಥವಾ ಪರಾಟ ಮಾಡುವ ವೇಳೆ ಕಡಲೆಹಿಟ್ಟು ಬಳಸಿ.

ತೂಕ ಕಳೆದುಕೊಳ್ಳಲು ಸಹಕಾರಿ

ಕಡಲೆಹಿಟ್ಟಿನಲ್ಲಿ ಇರುವಂತಹ ನಾರಿನಾಂಶ ಮತ್ತು ಪ್ರೋಟೀನ್ ಅಂಶವು ದೀರ್ಘಕಾಲದ ತನಕ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಅಧಿಕ ಪ್ರೋಟೀನ್ ಇರುವಂತಹ ಆಹಾರವು ದೀರ್ಘಕಾಲ ಹೊಟ್ಟೆ ತುಂಬಿದಂತೆ ಮಾಡುವುದು ಮತ್ತು ಈ ಆಹಾರವನ್ನು ಕರಗಿಸಲು ಹೆಚ್ಚಿನ ಕ್ಯಾಲರಿ ಕೂಡ ದಹಿಸಬೇಕಾಗುತ್ತದೆ. ಇದರಿಂದ ತೂಕ ನಿರ್ವಹಣೆಯಲ್ಲಿ ಇದು ಪ್ರಮುಖ ಪಾತ್ರ ನಿರ್ವಹಿಸುವುದು.
ಡೊಕ್ಲಾ ಮತ್ತು ಚಿಲಾ ಮುಂತಾದ ಆಹಾರವನ್ನು ನೀವು ಸೇವಿಸಿ. ಕಡಲೆ ಸಲಾಡ್, ಕಡಲೆ ಸೂಪ್ ಅಥವಾ ಕಡಲೆ ಚಾಟ್ ಮಾಡಿಕೊಂಡು ಸೇವಿಸಿ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಕಡಲೆಹಿಟ್ಟಿನಲ್ಲಿ ಉನ್ನತ ಮಟ್ಟದ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಹಾಗೂ ನಾರಿನಾಂಶಗಳು ಇವೆ. ಹೃದಯದ ಆರೋಗ್ಯಕ್ಕೆ ಇದು ತುಂಬಾ ಲಾಭಕಾರಿ. ಅಧ್ಯಯನಗಳ ಪ್ರಕಾರ ಕಡಲೆ ಹಿಟ್ಟು ಕೊಲೆಸ್ಟ್ರಾಲ್ ಮಟ್ಟವನ್ನು 3.9 ಶೇ. ಮತ್ತು ಕೆಟ್ಟ ಕೊಲೆಸ್ಟ್ರಾಲ್ ನ್ನು 4.6 ಶೇ. ಕಡಿಮೆ ಮಾಡುವುದು. ಇದು ಅಧಿಕ ರಕ್ತದೊತ್ತಡ ಕಡಿಮೆ ಮಾಡುವುದು. ಇದರಿಂದಾಗಿ ಹೃದಯದ ವೈಫಲ್ಯ, ಹೃದಯಾಘಾತ ಮತ್ತು ಹಠಾತ್ ಹೃದಯಾಘಾತದ ಸಮಸ್ಯೆ ನಿವಾರಣೆ ಆಗುವುದು.

ಕರುಳಿನ ಕ್ಯಾನ್ಸರ್ ತಡೆಯುವುದು

ಕಡಲೆಹಿಟ್ಟಿನಲ್ಲಿ ಕರುಳಿನ ಕ್ಯಾನ್ಸರ್ ನ್ನು ತಡೆಯುವ ಗುಣಗಳು ಇವೆ. ಯಾಕೆಂದರೆ ಇದರಲ್ಲಿ ಬ್ಯುಟೈರೇಟ್ ಎನ್ನುವ ಅಂಶವಿದೆ. ಇದು ಕರುಳಿನಲ್ಲಿ ಇರುವಂತಹ ಕ್ಯಾನ್ಸರ್ ನ ಕೋಶಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕಡಲೆಹಿಟ್ಟಿನಲ್ಲಿ ಪೋನಿನ್ ಗಳು ಮತ್ತು ಲಿಗ್ನಾನ್ ಗಳು ಎನ್ನುವ ಅಂಶವಿದ್ದು, ಕರುಳಿನ ಕ್ಯಾನ್ಸರ್ ನ್ನು ಇದು ತಡೆಯುವುದು ಎಂದು ಅಮೆರಿಕನ್ ಇನ್ ಸ್ಟಿಟ್ಯೂಟ್ ಫಾರ್ ಕ್ಯಾನ್ಸರ್ ರಿಸರ್ಚ್ ಹೇಳಿದೆ.

ಮೂಳೆಗಳನ್ನು ಬಲಪಡಿಸುವುದು

ಕಡಲೆಹಿಟ್ಟಿನಲ್ಲಿ ಇರುವಂತಹ ಕ್ಯಾಲ್ಸಿಯಂ ಮತ್ತು ಫೋಸ್ಪರಸ್ ಜತೆಯಾಗಿ ಕೆಲಸ ಮಾಡುವುದು ಮತ್ತು ಮೂಳೆಗಳನ್ನು ನಿರ್ಮಿಸಲು ಇದು ನೆರವಾಗುವುದು. ಮೂಳೆಗಳನ್ನು ಬಲಪಡಿಸಲು ನಿಮ್ಮಆಹಾರ ಕ್ರಮದಲ್ಲಿ ಕಡಲೆ ಹಿಟ್ಟನ್ನು ಹೆಚ್ಚಾಗಿ ಬಳಸಿ.

ರಕ್ತಹೀನತೆ ತಡೆಯುವುದು

ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆ ಆದರೆ ಆಗ ಕಬ್ಬಿನಾಂಶದ ಕೊರತೆಯಿಂದಾಗಿ ರಕ್ತಹೀನತೆ ಉಂಟಾಗುವುದು. ಕಡಲೆಹಿಟ್ಟಿನಲ್ಲಿ ಉನ್ನತ ಮಟ್ಟದ ಕಬ್ಬಿನಾಂಶವಿದ್ದು, ಇದು ದೇಹದಲ್ಲಿ ರಕ್ತಹೀನತೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಮನಸ್ಥಿತಿ ನಿಯಂತ್ರಿಸುವುದು

ಕಡಲೆಹಿಟ್ಟಿನಲ್ಲಿ ಉನ್ನತ ಮಟ್ಟದ ವಿಟಮಿನ್ ಬಿ6 ಇದ್ದು, ಮನಸ್ಥಿತಿಯನ್ನು ಸುಧಾರಣೆ ಮಾಡುವಂತಹ ಹಾರ್ಮೋನು ಆಗಿರುವಂತಹ ಸೆರೋಟೊನಿನ್ ನ ಸಂಯೋಜಕಕ್ಕೆ ಇದು ನೆರವಾಗುವುದು.

ನಿಶ್ಯಕ್ತಿ ವಿರುದ್ಧ ಹೋರಾಡುವುದು

ಆಹಾರ ಕ್ರಮದಲ್ಲಿ ಕಡಲೆಹಿಟ್ಟನ್ನು ಬಳಸಿಕೊಂಡರೆ ಆಗ ದೇಹಕ್ಕೆ ಶಕ್ತಿ ಸಿಗುವುದು. ಇದರಲ್ಲಿ ಉನ್ನತ ಮಟ್ಟದ ವಿಟಮಿನ್ ಥೈಮೆನ್ ಎನ್ನುವ ಅಂಶವಿದ್ದು, ಇದು ದೇಹದಲ್ಲಿ ಶಕ್ತಿ ಉತ್ಪತ್ತಿ ಮಾಡಲು ನೆರವಾಗುವುದು. ಇದರಿಂದ ನಿಶ್ಯಕ್ತಿ ಹೋಗಲಾಡಿಸಬಹುದು.

ಆರೋಗ್ಯಕರ ಜೀರ್ಣಕ್ರಿಯೆಗೆ ನೆರವಾಗುವುದು

ಅನಿಯಮಿತ ಕರುಳಿನ ಕ್ರಿಯೆ ಮತ್ತು ಮಲಬದ್ಧತೆ ಇದ್ದರೆ ನಿಯಮಿತವಾಗಿ ಕಡಲೆ ಹಿಟ್ಟು ಸೇವನೆ ಮಾಡಿದರೆ ಆಗ ಸಮಸ್ಯೆ ನಿವಾರಣೆ ಮಾಡಬಹುದು. ಕಡಲೆಹಿಟ್ಟಿನಲ್ಲಿ ಇರುವಂತಹ ನಾರಿನಾಂಶವು ಮಲವನ್ನು ಮೃಧುವಾಗಿಸುವುದು ಮತ್ತು ಮಲವು ಸರಿಯಾಗಿ ಹೊರಬರಲು ನೆರವಾಗುವುದು. ಆರೋಗ್ಯಕಾರಿ ಬ್ಯಾಕ್ಟೀರಿಯಾಗೆ ಇದು ನೆರವಾಗುವುದು ಮತ್ತು ಹೊಟ್ಟೆಯ ಆರೋಗ್ಯವನ್ನು ಕಾಪಾಡುವುದು.

ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡುವುದು

ಕಡಲೆಹಿಟ್ಟಿನ ಪ್ಯಾಕ್ ಮಾಡಿಕೊಂಡು ಬಳಸಿದರೆ ಆಗ ಒಣ, ಎದ್ದುಬರುವ ಚರ್ಮ, ಮೊಡವೆ ಕಲೆಗಳು, ಎಣ್ಣೆಯುಕ್ತ ಚರ್ಮ ಮತ್ತು ಕಲೆಗಳನ್ನು ನಿವಾರಣೆ ಮಾಡಬಹುದು. ಕಡಲೆಹಿಟ್ಟನ್ನು ಬಳಸಿಕೊಂಡರೆ ಕೂದಲಿನ ಬೆಳವಣಿಗೆಗೆ ಉತ್ತೇಜನ ಸಿಗುವುದು, ತಲೆಹೊಟ್ಟು ನಿವಾರಿಸುವುದು, ಒಣ ಕೂದಲಿಗೆ ಪೋಷಣೆ ನೀಡುವುದು ಮತ್ತು ಕೂದಲಿನ ಕಾಂತಿ ವೃದ್ಧಿಸುವುದು.

ಕಡಲೆಹಿಟ್ಟು vs ಗೋಧಿ ಹಿಟ್ಟು

ಗೋಧಿ ಹಿಟ್ಟಿಗಿಂತ ಹೆಚ್ಚಾಗಿ ಕಡಲೆ ಹಿಟ್ಟಿನಲ್ಲಿ ಪೋಷಕಾಂಶಗಳು ಇವೆ. ಇದರಲ್ಲಿ ಗೋಧಿ ಹಿಟ್ಟಿಗಿಂತ ಎರಡು ಪಟ್ಟು ಹೆಚ್ಚು ಫಾಲಟೆ ಅಂಶವಿದೆ. ಕಡಲೆ ಹಿಟ್ಟು ಉದರದ ಕಾಯಿಲೆ, ಗ್ಲುಟೆನ್ ಅಸಹಿಷ್ಣುತೆ ಅಥವಾ ಗೋಧಿ ಅಲರ್ಜಿ ಇರುವವರಿಗೆ ಒಳ್ಳೆಯದು.

ಮನೆಯಲ್ಲೇ ಕಡಲೆ ಹಿಟ್ಟು ತಯಾರಿಸಿಕೊಳ್ಳುವುದು ಹೇಗೆ?

•ಕಡಲೆಕಾಳುಗಳನ್ನು ಹುಡಿಯಾಗಿರುವ ತನಕ ಸರಿಯಾಗಿ ರುಬ್ಬಿಕೊಳ್ಳಿ.
•ಈಗ ದೊಡ್ಡ ತುಂಡುಗಳು ಇದ್ದರೆ ಅದನ್ನು ಆರಿಸಿಕೊಂಡು ತೆಗೆಯಿರಿ. ಮತ್ತೊಮ್ಮೆ ರುಬ್ಬಿ.
•ಇದನ್ನು ಒಂದು ಬಾಯಿಮುಚ್ಚಿದ ಡಬ್ಬದಲ್ಲಿ ಹಾಕಿಟ್ಟುಕೊಳ್ಳಿ ಮತ್ತು 6-8 ವಾರಗಳ ತನಕ ಇದನ್ನು ಬಳಸಬಹುದು.
•ಹುರಿದ ಕಡಲೆಕಾಳುಗಳ ಹುಡಿ ಬೇಕಿದ್ದರೆ ಆಗ ನೀವು ಇದನ್ನು ಮೊದಲು ಹತ್ತು ನಿಮಿಷಗಳ ಕಾಲ 175 ಡಿಗ್ರಿ ಸೆಲ್ಸಿಯಸ್ ನಲ್ಲಿ ಓವನ್ ನಲ್ಲಿಟ್ಟು ಹುರಿಯಿರಿ. ಇದರ ಬಳಿಕ ನೀವು ಇದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ ಮತ್ತು ಇದೇ ಪ್ರಕ್ರಿಯೆ ಮುಂದುವರಿಸಿ.
ಆಹಾರ ಕ್ರಮದಲ್ಲಿ ಕಡಲೆಹಿಟ್ಟನ್ನು ಹೇಗೆ ಬಳಸಿಕೊಳ್ಳುವುದು
•ಕೇಕ್, ಮಫೀನ್ಸ್ ಮತ್ತು ಇತರ ಬೇಕ್ ಮಾಡಿದ ತಿಂಡಿಗಳನ್ನು ಮಾಡಲು ನೀವು ಗೋಧಿ ಹಿಟ್ಟಿನ ಬದಲಿಗೆ ಕಡಲೆ ಹಿಟ್ಟು ಬಳಸಿ.
•ಸೂಪ್ ಮತ್ತು ಸಾರನ್ನು ದಪ್ಪ ಮಾಡಲು ಕಡಲೆಹಿಟ್ಟು ಬಳಸಿ.
•ಪ್ಯಾನ್ ಕೇಕ್ ಮಾಡಲು ಕಡಲೆಹಿಟ್ಟನ್ನು ಬಳಸಿಕೊಳ್ಳಿ.

English summary

Gram Flour (Besan): Nutritional Health Benefits

Gram flour is high in oleic acid, linoleic acid, unsaturated fatty acids and other vitamins and minerals. The flour is free of gluten and rich in fibre and protein. The health benefits of gram flour include controlling diabetes, promoting heart health, preventing cancer, helping in weight loss, enhancing skin and hair health, etc.
X
Desktop Bottom Promotion