For Quick Alerts
ALLOW NOTIFICATIONS  
For Daily Alerts

ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ನಾಲ್ಕು ಸಾಂಬಾರ ಪದಾರ್ಥಗಳು

|

ಭಾರತೀಯರು ಹಿಂದಿನಿಂದಲೂ ಸಾಂಬಾರ ಪದಾರ್ಥಗಳನ್ನು ತಮ್ಮ ದೈನಂದಿನ ಆಹಾರ ಕ್ರಮದಲ್ಲಿ ಬಳಸಿಕೊಂಡು ಬಂದಿದ್ದಾರೆ. ಸಾಂಬಾರ ಪದಾರ್ಥಗಳಲ್ಲಿ ಇರುವಂತಹ ಕೆಲವೊಂದು ಅಂಶಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಣ್ಣಪುಟ್ಟ ಕಾಯಿಲೆಗಳಿಂದ ಹಿಡಿದು ದೊಡ್ಡ ಮಟ್ಟದ ರೋಗವನ್ನು ಇದು ತಡೆಯುವ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿ ಉತ್ತರದಿಂದ ಹಿಡಿದು ದಕ್ಷಿಣದ ತನಕ ಪ್ರತಿಯೊಂದು ಮನೆಯಲ್ಲೂ ಸಾಂಬಾರ ಪದಾರ್ಥಗಳನ್ನು ಬಳಸಲಾಗುತ್ತದೆ. ಸ್ವತಂತ್ರ ಪೂರ್ವದಲ್ಲಿ ವಿದೇಶಿಗರು ಭಾರತಕ್ಕೆ ಬಂದು ಇಲ್ಲಿ ಸಾಂಬಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಇದರಿಂದ ಭಾರತದ ಸಾಂಬಾರ ಪದಾರ್ಥಗಳು ವಿದೇಶದಲ್ಲಿ ಮನೆಮಾತಾಗಿದೆ.

Four Spices that are good for your brain

ಸಾಂಬಾರ ಪದಾರ್ಥಗಳು ನಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸಲು ಸಾಂಬಾರ ಪದಾರ್ಥಗಳನ್ನು ಬಳಸಿಕೊಳ್ಳಬಹುದು. ನೀವು ಏನು ತಿನ್ನುತ್ತೀರಿ ಎನ್ನುವುದು ಕೂಡ ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುವುದು ಮತ್ತು ಅಡುಗೆಗೆ ಬಳಸುವಂತಹ ಸಾಂಬಾರ ಪದಾರ್ಥಗಳು ನೆನಪಿನ ಶಕ್ತಿ ಹಾಗೂ ಮೆದುಳಿನ ಸಾಮರ್ಥ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಅರಿಶಿನ

ಅರಿಶಿನ

ಮೆದುಳನ್ನು ತೀಕ್ಷ್ಣವಾಗಿಸಬೇಕಿದ್ದರೆ ಆಗ ನೀವು ಅಡುಗೆಗೆ ಅರಶಿನ ಬಳಸಿಕೊಳ್ಳಿ. ಅರಶಿನದಲ್ಲಿ ಇರುವಂತಹ ಕರ್ಕ್ಯುಮಿನ್ ಎನ್ನುವ ಅಂಶವು ಮೆದುಳಿನಲ್ಲಿ ಪದರ ತಗ್ಗಿಸುವುದು. ಈ ಪದರಗಳು ಅಲ್ಝೈಮರ್ ಕಾಯಿಲೆಗೆ ಕಾರಣವಾಗಿದೆ. ಅರಿಶಿನದಲ್ಲಿ ಇರುವಂತಹ ಪ್ರಮುಖ ಆ್ಯಂಟಿಆಕ್ಸಿಡೆಂಟ್ ಗುಣದಿಂದಾಗಿ ಇದು ಅಲ್ಝೈಮರ್ ಕಾಯಿಲೆಯು ಪ್ರಗತಿ ಹೊಂದದಂತೆ ತಡೆಯುವುದು. ಇದರಿಂದಾಗಿ ವಯಸ್ಸಾಗುವ ವೇಳೆ ಕಾಡುವಂತಹ ನೆನಪಿನ ಶಕ್ತಿ ಕಡಿಮೆಯಾಗುವುದನ್ನು ತಪ್ಪಿಸಬಹುದು.

Most Read: ಡ್ಯೂರಿಯನ್ ಹಣ್ಣಿನ ಅನೇಕ ಆರೋಗ್ಯಕರ ಉಪಯೋಗಗಳು

ಥೈಮ್

ಥೈಮ್

ಥೈಮೆದಲ್ಲಿ ಇರುವಂತಹ ಎಣ್ಣೆಯಂಶವು ಒಮೆಗಾ-3 ಕೊಬ್ಬಿನಾಮ್ಲದ ಮಟ್ಟವನ್ನು ಹೆಚ್ಚು ಮಾಡುವುದು, ಅದರಲ್ಲೂ ಮುಖ್ಯವಾಗಿ ಡೋಕೋಸಾಹೆಕ್ಸಾಯೊನಿಕ್ ಆಮ್ಲ(ಡಿಎಚ್ಎ) ಮತ್ತು ಮೆದುಳಿನ ಚಟುವಟಿಕೆ ಉತ್ತಮಪಡಿಸುವುದು. ಒಮೆಗಾ-3 ಕೊಬ್ಬಿನಾಮ್ಲವು ವಯಸ್ಸಾಗುವ ವೇಳೆ ಕಾಡುವಂತಹ ಜ್ಞಾಪಕ ಶಕ್ತಿ ಕುಂದುವ ಸಮಸ್ಯೆ ಕಡಿಮೆ ಮಾಡಿ, ನೆನಪಿನ ಶಕ್ತಿ ಹೆಚ್ಚಿಸುವುದು. ಥೈಮೆಯಲ್ಲಿ ಫ್ಲಾಮನಾಯ್ಡ್ ಗಳು ಇದ್ದು, ಆ್ಯಂಟಿಆಕ್ಸಿಡೆಂಟ್ ನ ಸಾಮಾರ್ಥ್ಯವನ್ನು ಹೆಚ್ಚಿಸುವುದು.

ಕಾಳುಮೆಣಸು

ಕಾಳುಮೆಣಸು

ಕಾಳುಮೆಣಸಿನ ಪೈಪರಿನ್ ಎನ್ನುವ ಕಟುವಾದ ಸಂಯುಕ್ತವು ಒಳಗೊಂಡಿದೆ. ಇದು ಮೆದುಳಿನಲ್ಲಿ ಬೆಟಾ-ಎಂಡ್ರೊಫಿನ್ಸ್ ನ್ನು ಹೆಚ್ಚು ಮಾಡುವುದು ಮತ್ತು ಮೆದುಳಿನಲ್ಲಿ ನರಗಳ ಚಟುವಟಿಕೆ ಉತ್ತಮಪಡಿಸುವುದು, ಮನಸ್ಥಿತಿ ಸುಧಾರಿಸುವುದು ಮತ್ತು ಆರಾಮದ ಭಾವನೆಯನ್ನು ಉಂಟು ಮಾಡುವುದು. ಕಾಳುಮೆಣಸಿನಿಂದಾಗಿ ಪರ್ಕಿಸನ್ ಕಾಯಿಲೆಯನ್ನು ತಡೆಯಬಹುದು ಅಥವಾ ಪರಿಹಾರ ಮಾಡಬಹುದು ಎಂದು ಸಂಶೋಧನೆಗಳು ಹೇಳಿವೆ. ಯಾಕೆಂದರೆ ಪೈಪರಿನ್ ಡೊಪಮೈನ್ ನ್ನು ಕುಗ್ಗಿಸುವಂತಹ ಕಿಣ್ವವನ್ನು ಪ್ರತಿಬಂಧಿಸುವುದು.

Most Read: ಒಂದೇ ವಾರದಲ್ಲಿ ದಂತಕುಳಿ ಸಮಸ್ಯೆ ಕಡಿಮೆ ಮಾಡುವ ಪವರ್‌ಫುಲ್ ಮನೆಮದ್ದುಗಳು

ದಾಲ್ಚಿನ್ನಿ

ದಾಲ್ಚಿನ್ನಿ

ಜರ್ನಲ್ ಆಫ್ ಅಲ್ಝೈಮರ್ ಡಿಸೀಸ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯ ಪ್ರಕಾರ ದಾಲ್ಚಿನಿಯಲ್ಇ ಇರುವಂತಹ ಅಂಶವು ಮೆದುಳಿನ ಅಂಗಾಂಶಗಳು ಊದಿಕೊಳ್ಳದಂತೆ ತಡೆಯುವುದು ಮತ್ತು ವಯಸ್ಸಾಗುವ ವೇಳೆ ಕಾಡುವಂತಹ ಹಲವಾರು ರೀತಿಯ ನರಸಮಸ್ಯೆಗಳನ್ನು ಇದು ತಡೆಯುವುದು. ನೀವು ದಾಲ್ಚಿನಿಯ ಸುವಾಸನೆ ಪಡೆದರೂ ಅದರಿಂದ ನರಗಳ ಚಟುವಟಿಕೆಯು ಸುಧಾರಣೆ ಆಗುವುದು.

English summary

Four Spices that are good for your brain

Other than mindful meditation, mind games and visualizations, spices can be quite helpful when it comes to harness your brain’s potential. What you eat influences your cognitive functioning, and spices on your kitchen shelf has the ability to enhance your memory and brainpower.
X
Desktop Bottom Promotion