For Quick Alerts
ALLOW NOTIFICATIONS  
For Daily Alerts

ಮಾನವನ ದೇಹದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಹದಿನೈದು ಸಂಗತಿಗಳು

|

ನಿಸರ್ಗ ಪ್ರತಿ ಜೀವಿಯಲ್ಲಿಯೂ ಹಲವಾರು ವೈಶಿಷ್ಟ್ಯಗಳನ್ನು ಇರಿಸಿದ್ದು ಇದರಲ್ಲಿ ಮಾನವರಿಗೆ ನೀಡಿರುವ ಬುದ್ದಿಶಕ್ತಿ ಹಾಗೂ ಇತರ ದೇಹದ ಸಾಮರ್ಥ್ಯಗಳು ಅಪ್ರತಿಮವಾಗಿವೆ. ನಮ್ಮ ದೇಹ ಸ್ಪಂದಿಸುವ ಅಥವಾ ಬದಲಾವಣೆ ಪಡೆಯುವ ಪರಿಯಂತೂ ಒಂದು ವಿಸ್ಮಯವೇ ಹೌದು. ನಮ್ಮ ದೇಹದ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸುವ ಮೆದುಳು ಶೇಖಡಾ ಎಂಭತ್ತರಷ್ಟು ನೀರಿನಿಂದ ಕೂಡಿದೆ! ಮೆದುಳಿನಲ್ಲಿ ನಡೆಯುವ ಸಂವಹನ ವ್ಯವಸ್ಥೆ ಸ್ಥಿರ ವಿದ್ಯುತ್ ಅನ್ನು ಆಧರಿಸಿದ್ದು ಈ ಶಕ್ತಿ ಒಂದು ಹತ್ತು ವ್ಯಾಟ್ ನ ಬಲ್ಬ್ ಒಂದನ್ನು ಬೆಳಗಿಸುವಷ್ಟು ಪ್ರಬಲವಾಗಿದೆ.

facts about human body you cannot miss

ನಮ್ಮ ಹೊಟ್ಟೆಯ ಒಳಭಾಗದಲ್ಲಿರುವ ಆಮ್ಲ ಒಳಪದರವನ್ನೇ ಸುಡುವುದಿರಿಂದ (ಇದನ್ನೇ ಹಸಿವು ಎನ್ನುತ್ತೇವೆ) ಅನಿವಾರ್ಯವಾಗಿ ಪ್ರತಿ ಮೂರರಿಂದ ನಾಲ್ಕು ದಿನಗಳಿಗೊಮ್ಮೆ ಈ ಪದರವನ್ನು ಬದಲಿಸಬೇಕಾಗುತ್ತದೆ. ನಮ್ಮ ದೇಹದ ಇನ್ನೂ ಹಲವಾರು ಅಚ್ಚರಿಗಳ ಬಗ್ಗೆ ನಾವೆಲ್ಲರೂ ಅರಿತುಕೊಂಡಿರುವುದು ಅಗತ್ಯವಾಗಿದೆ. ಬನ್ನಿ, ಇವುಗಳಲ್ಲಿ ಪ್ರಮುಖವಾದುದನ್ನು ನೋಡೋಣ...

ನಿಮ್ಮ ಚರ್ಮವೂ ಕಳಚುತ್ತದೆ

ನಿಮ್ಮ ಚರ್ಮವೂ ಕಳಚುತ್ತದೆ

ಹಾವು ಚರ್ಮವನ್ನು ಕಳಚಿ (ಇದನ್ನೇ ಪೊರೆ ಕಳಚುವುದು ಎನ್ನುತ್ತೇವೆ) ಹೊಸ ಚರ್ಮ ಪಡೆಯುತ್ತದೆ. ಸಸ್ತನಿಗಳ ಚರ್ಮವೂ ಕಳಚುತ್ತದೆ, ಆದರೆ ಪದರದ ರೂಪದಲ್ಲಲ್ಲ, ನುಣ್ಣಗಿನ ಪುಡಿಯ ರೂಪದಲ್ಲಿ! ಮಾನವರ ಚರ್ಮದಿಂದ ಪ್ರತಿ ಘಂಟೆಗೆ ಸುಮಾರು ಆರು ಲಕ್ಷ ಜೀವಕೋಶಗಳು ಒಣಗಿ ಪುಡಿಯರೂಪದಲ್ಲಿ ಹೊರಪದರಕ್ಕೆ ಅಂಟಿಕೊಂಡಿರುತ್ತವೆ. (ಇದನ್ನು ನಿವಾರಿಸುವುದನ್ನೇ exfoliation ಎಂದು ಸೌಂದರ್ಯ ತಜ್ಞರು ವಿವರಿಸುತ್ತಾರೆ). ಈ ಮೂಲಕ ಚರ್ಮದ ಜೀವಕೋಶಗಳಷ್ಟೂ ಹೊಸದಾಗಿ ಹುಟ್ಟುತ್ತಲೇ ಇರುತ್ತವೆ ಹಾಗೂ ಹಳೆಯವು ಒಣಗಿ ಪುಡಿಯ ರೂಪದಲ್ಲಿ ವಿಸರ್ಜಿಲ್ಪಡುತ್ತಲೇ ಇರುತ್ತವೆ.

ನಮಗೂ ಘ್ರಾಣಶಕ್ತಿ ಇದೆ

ನಮಗೂ ಘ್ರಾಣಶಕ್ತಿ ಇದೆ

ನಾಯಿಗಳು ಅತಿ ಹೆಚ್ಚು ಘ್ರಾಣಶಕ್ತಿ ಹೊಂದಿವೆ. ಅಂದರೆ ನಮಗೆ ಬರದ ಅತಿ ಸೂಕ್ಷ್ಮವಾದ ವಾಸನೆಯನ್ನೂ ಇವು ಗ್ರಹಿಸಬಲ್ಲವು. ಆದರೆ ನಾಯಿಗಳಷ್ಟಲ್ಲದಿದ್ದರೂ, ಸರಿ, ಮಾನವರ ಮೂಗೇನೂ ಸಾಮರ್ಥರಹಿತವಲ್ಲ. ನಮ್ಮ ಮೂಗುಗಳು ಸುಮಾರು ಐವತ್ತು ಸಾವಿರ ಬಗೆಯ ಪರಿಮಳಗಳನ್ನು ಗ್ರಹಿಸಿ ನೆನಪಿಟ್ಟುಕೊಳ್ಳುವಷ್ಟು ಸಮರ್ಥವಾಗಿವೆ.

MOst Read: ವಯಸ್ಸು ನಲವತ್ತು ದಾಟಿದ ಪುರುಷರು ಆರೋಗ್ಯವಾಗಿರಲು ಕಡ್ಡಾಯವಾಗಿ ಸೇವಿಸಬೇಕಾದ ಆಹಾರಗಳು

ನಮ್ಮ ತ್ವಚೆ ಕೀಟಾಣುರಹಿತವೇ?

ನಮ್ಮ ತ್ವಚೆ ಕೀಟಾಣುರಹಿತವೇ?

ಈ ಜಗತ್ತಿನಲ್ಲಿ ಕೀಟಾಣುರಹಿತ ಜೀವಿ ಎಂದರೆ ಈಗತಾನೇ ಹುಟ್ಟಿದ ಶಿಶು ಮಾತ್ರ. ಆ ಕ್ಷಣದಿಂದ ನಮ್ಮ ದೇಹದಲ್ಲಿ ಆಶ್ರಯ ಪಡೆಯುವ ಮಿಲಿಯಾಂತರ ಬ್ಯಾಕ್ಟೀರಿಯಾಗಳಲ್ಲಿ ಕೆಲವು ಆರೋಗ್ಯಸ್ನೇಹಿಯೂ ಹೌದು. ನಮ್ಮ ಮುಖವನ್ನೆಷ್ಟು ಬಾರಿ ತೊಳೆದುಕೊಂಡರೂ ಸರಿ, ಚರ್ಮದ ಅಡಿಯಲ್ಲಿ ಸದಾ ಸುಮಾರು ಮೂರು ಕೋಟಿ ಇಪ್ಪತ್ತು ಲಕ್ಷ ಬ್ಯಾಕ್ಟೀರಿಯಾಗಳಿರುತ್ತವೆ. ಅಷ್ಟೇ ಅಲ್ಲ, ಹೊಟ್ಟೆಯೊಳಗೆ, ಜನನಾಂಗಗಳ ಒಳಗೆ, ಕರುಳುಗಳಲ್ಲಿ ಸಹಾ ಆರೋಗ್ಯ ಸ್ನೇಹಿ ಬ್ಯಾಕ್ಟೀರಿಯಾಗಳಿವೆ.

ನಿಮ್ಮ ದೇಹದಲ್ಲೆಷ್ಟು ಮೂಳೆಗಳಿವೆ?

ನಿಮ್ಮ ದೇಹದಲ್ಲೆಷ್ಟು ಮೂಳೆಗಳಿವೆ?

ನವಜಾತ ಶಿಶುವಿನ ದೇಹದಲ್ಲಿ ಮುನ್ನೂರೈವತ್ತು ಬಿಡಿ ಮೂಳೆಗಳಿರುತ್ತವೆ. ಮಗು ಬೆಳೆಯುತ್ತಾ ಹೋದಂತೆ ಕೆಲವು ಮೂಳೆಗಳು ಜೊತೆಗೂಡಿ ಒಂದಾಗುತ್ತವೆ. ಬೆಳವಣಿಗೆ ಪೂರ್ಣವಾಗುವ ಹಂತದಲ್ಲಿ ಮಾನವ ದೇಹದಲ್ಲಿ ಒಟ್ಟು 206 ಬಿಡಿ ಮೂಳೆಗಳಿರುತ್ತವೆ.

ಮಲಗುವುದು ಅತಿ ಅಗತ್ಯ.

ಮಲಗುವುದು ಅತಿ ಅಗತ್ಯ.

ನಮ್ಮ ದೇಹ ಆಹಾರವಿಲ್ಲದೇ ಸುಮಾರು ಒಂದು ವಾರದಷ್ಟು ಕಾಲ ಜೀವಂತ ಇರಬಹುದು. ಆದರೆ ನಿದ್ದೆಯಿಲ್ಲದೇ ಗರಿಷ್ಟ ನಲವತ್ತೆಂಟು ಘಂಟೆ ಇರಲು ಸಾಧ್ಯ. ದಿನಕ್ಕೆ ಕನಿಷ್ಟ ಆರು ಘಂಟೆಗಳ ಕಾಲ ನಿದ್ದೆಯ ಅಗತ್ಯವಿದ್ದೇ ಇದೆ. ಉತ್ತಮ ಆರೋಗ್ಯಕ್ಕೆ ಎಂಟು ಘಂಟೆಗಳ ನಿದ್ದೆಯಾದರೂ ಬೇಕೇ ಬೇಕು. ಆ ಲೆಕ್ಕದಲ್ಲಿ ತಿಂಗಳಿಗೆ ಸುಮಾರು ಹನ್ನೊಂದು ದಿನ ನಾವು ನಿದ್ದೆಯಲ್ಲಿ ಕಳೆಯಬೇಕಾಗುತ್ತದೆ. ಮುಂದಿನ ಬಾರಿ ಯಾರಾದರೂ 'ನಿದ್ದೆ ಸಿಗದೇ ಇದ್ದರೆ ಸತ್ತೇ ಹೋಗುತ್ತೇನೆ' ಎಂದು ಉತ್ಪ್ರೇಕ್ಷಿಸಿದರೆ ಈ ಮಾತನ್ನು ಉಪೇಕ್ಷಿಸುವುದು ಸಲ್ಲದು, ಇವರು ನಿಜವನ್ನೇ ಹೇಳುತ್ತಿದ್ದಾರೆ ಎಂಬುದು ಖಚಿತ.

ನಮ್ಮ ಹೊಟ್ಟೆಯ ಒಳಪದರ ತಾನೇ ಬದಲಾಯಿಸಿಕೊಳ್ಳುತ್ತದೆ.

ನಮ್ಮ ಹೊಟ್ಟೆಯ ಒಳಪದರ ತಾನೇ ಬದಲಾಯಿಸಿಕೊಳ್ಳುತ್ತದೆ.

ಪ್ರತಿ ಮೂರು ಅಥವಾ ನಾಲ್ಕು ದಿನಗಳಿಗೊಮ್ಮೆ ನಮ್ಮ ಹೊಟ್ಟೆಯ ಒಳಭಾಗದ ಪದರ ಹೊಸದಾಗಿ ನಿರ್ಮಿಸಲ್ಪಡುತ್ತದೆ. ಏಕೆಂದರೆ ಜಠರದ ದ್ರವ ಅಥವಾ ಜಠರಾಮ್ಲ ಪ್ರಬಲವಾಗಿದ್ದು ಲೋಹವನ್ನೂ ಕರಗಿಸಿಕೊಳ್ಳಬಹುದಾಗಿರುತ್ತದೆ. ಇದು ಚರ್ಮದ ಒಳಪದರವನ್ನು ಸತತ ಸುಡುತ್ತಾ ಇರುವ ಕಾರಣ ಪ್ರದೇ ಪದೇ ಹೊಸ ಪದರವನ್ನು ಹೊಟ್ಟೆಗೆ ನಿರ್ಮಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ.

Most Read: ಈ ಮೂರು ರಾಶಿಚಕ್ರದವರಿಗೆ ಹೊಸ ವರ್ಷವು ಊಹೆಗೂ ಮಿಗಿಲಾದ ಹೊಸ ಬದಲಾವಣೆಯನ್ನು ತಂದುಕೊಡುವುದು

ಪಾದಗಳ ದುರ್ವಾಸನೆ ಸಹಿಸಿಕೊಳ್ಳಲಾಗುತ್ತಿಲ್ಲವೇ?

ಪಾದಗಳ ದುರ್ವಾಸನೆ ಸಹಿಸಿಕೊಳ್ಳಲಾಗುತ್ತಿಲ್ಲವೇ?

ನಮ್ಮ ಪಾದದ ಚರ್ಮ ಅತಿ ದಪ್ಪನಾಗಿದ್ದು ಇಲ್ಲಿ ಐವತ್ತು ಸಾವಿರಕ್ಕೂ ಹೆಚ್ಚಿನ ಬೆವರುಗ್ರಂಥಿಗಳಿರುವ ಕಾರಣ ಅತಿ ಹೆಚ್ಚು ಬೆವರುವ ಸ್ಥಳವಾಗಿದ್ದು ತೇವವೂ ಹೆಚ್ಚೇ ಇರುವ ಕಾರಣ ಬ್ಯಾಕ್ಟೀರಿಯಾಗಳು ಇಲ್ಲಿ ಸುಲಭವಾಗಿ ಆಶ್ರಯ ಪಡೆಯುತ್ತವೆ. ಇದೇ ಪಾದಗಳ ವಾಸನೆಗೆ ಕಾರಣ.

ಸೀನುವಾಗ ಎಚ಼್ಚರವಿರಲಿ

ಸೀನುವಾಗ ಎಚ಼್ಚರವಿರಲಿ

ನಾವು ಸೀನುವಾಗ ಮೂಗಿನಿಂದ ಸಿಡಿಯುವ ದ್ರವ ಸುಮಾರು ನೂರು ಕಿಮಿ ಪ್ರತಿ ಘಂಟೆಯ ವೇಗದಲ್ಲಿ ಸಾಗುತ್ತದೆ ಎಂದು ನಿಮಗೆ ಗೊತ್ತೇ? ಇದೇ ಕಾರಣಕ್ಕೆ ಸೀನುವಾಗ ನಮ್ಮ ಕಣ್ಣುಗಳು ಅಪ್ರಯತ್ನವಾಗಿ ಮುಚ್ಚಿಕೊಳ್ಳುತ್ತವೆ. ಮುಚ್ಚುಕೊಳ್ಳಲೇಬೇಕು, ಇಲ್ಲದಿದ್ದರೆ ಸೀನುವ ಒತ್ತಡಕ್ಕೆ ಕಣ್ಣುಗುಡ್ಡೆಗಳು ತಲೆಬುರುಡೆಯಿಂದ ಹೊರಕಳಚಿಕೊಳ್ಳುತ್ತದೆ.

ಜೀವು ಜೀವಮಾನದಲ್ಲಿ ಐವತ್ತಮೂರು ಸ್ನಾನದ ತೊಟ್ಟಿ ತುಂಬುವಷ್ಟು ಜೊಲ್ಲು ಸುರಿಸುತ್ತೀರಿ

ಜೀವು ಜೀವಮಾನದಲ್ಲಿ ಐವತ್ತಮೂರು ಸ್ನಾನದ ತೊಟ್ಟಿ ತುಂಬುವಷ್ಟು ಜೊಲ್ಲು ಸುರಿಸುತ್ತೀರಿ

ನೀವು ಸರಿಯಾಗಿಯೇ ಓದಿದಿರಿ, ನಮ್ಮ ಬಾಯಿಯಲ್ಲಿ ಜೊಲ್ಲು ಅಥವಾ ಲಾಲಾರಸ ಸತತವಾಗಿ ಉತ್ಪನ್ನವಾಗುತ್ತಲೇ ಇರುತ್ತದೆ. ಜೀವಮಾನದಲ್ಲಿ ಸುಮಾರು ಇಪ್ಪತ್ತು ಸಾವಿರ ಲೀಟರ್ ಅಂದರೆ ಒಂದೆರಡು ಈಜುಕೊಳ ತುಂಬಿಸಲಿಕ್ಕೆ ಸಾಕು.

ಕಿರುಬೆರಳಿನ ಸಾಮರ್ಥ ಎಷ್ಟು?

ಕಿರುಬೆರಳಿನ ಸಾಮರ್ಥ ಎಷ್ಟು?

ನೋಡಲಿಕ್ಕೆ ಕಿರಿದಾಗಿದ್ದರೂ, ನಮ್ಮ ಒಂದು ಕೈಗೆ ಇರುವ ಸಾಮರ್ಥ್ಯದ ಅರ್ಧದಷ್ಟು ಸಾಮರ್ಥ್ಯವನ್ನು ಕಿರುಬೆರಳು ಹೊಂದಿದೆ.

ನಮ್ಮ ಮೆದುಳಿನ ಗಾತ್ರವೆಷ್ಟು?

ನಮ್ಮ ಮೆದುಳಿನ ಗಾತ್ರವೆಷ್ಟು?

ಈಗತಾನೇ ಹುಟ್ಟಿದ ಮಗುವಿನ ತಲೆಯ ಗಾತ್ರ ಮಗುವಿನ ದೇಹದ ಒಟ್ಟು ಎತ್ತರದ ಕಾಲು ಭಾಗದಷ್ಟಿರುತ್ತದೆ. ಬೆಳವಣಿಗೆ ಪಡೆಯುತ್ತಾ ಹೋದಂತೆ ದೇಹದ ಕೆಳಭಾಗ ಹೆಚ್ಚು ವೇಗವಾಗಿ ಬೆಳೆಯುತ್ತವೆ. ಈ ಕಾರಣದಿಂದ ವಯಸ್ಕರಾದಾಗ ತಲೆಯ ಗಾತ್ರ ದೇಹದ ಒಟ್ಟು ಎತ್ತರದ ಎಂಟನೆಯ ಒಂದು ಭಾಗದಷ್ಟಿರುತ್ತದೆ.

Most Read: ಮನೆಯಲ್ಲಿನ ಇಂತಹ ಉಪಕರಣಗಳನ್ನು ಸರಿಯಾಗಿ ಬಳಸಿ

ಕೂದಲ ಬೆಳವಣಿಗೆ

ಕೂದಲ ಬೆಳವಣಿಗೆ

ನಮ್ಮ ಮುಖದ ಮೇಲಿನ ಅನಗತ್ಯ ಕೂದಲು ನಮ್ಮ ದೇಹದ ಬೇರಾವುದೇ ಭಾಗದ ಕೂದಲು ಬೆಳೆಯುವುದಕ್ಕಿಂತ ವೇಗವಾಗಿ ಬೆಳೆಯುತ್ತದೆ. ವಿಷಾದವೆಂದರೆ, ಅನಗತ್ಯ ಕೂದಲುಗಳು ಮುಖದ ಮೇಲೆ ಸ್ಪಷ್ಟವಾಗಿ ಗೋಚರಿಸುವ ಮಹಿಳೆಯರಿಗೆ ಇದರಿಂದ ಗರಿಷ್ಟ ತೊಂದರೆಯಾಗುತ್ತದೆ.

ನಮ್ಮ ಮೆದುಳಿನ ಎಂಭತ್ತು ಭಾಗ ನೀರು

ನಮ್ಮ ಮೆದುಳಿನ ಎಂಭತ್ತು ಭಾಗ ನೀರು

ನಮ್ಮ ಮೆದುಳು ನಸು ಗುಲಾಬಿ ಬಣ್ಣ ಹೊಂದಿದ್ದು ಮೃದುವಾದ ಜೆಲ್ಲಿಯಂತಹ ಅಂಗವಾಗಿದೆ. ಇದಕ್ಕೆ ಏನು ಕಾರಣವೆಂದರೆ ನಮ್ಮ ಮೆದುಳಿನ ಬಹುಭಾಗ ಅಪ್ಪಟ ನೀರು ಹೊಂದಿದೆ. ಸುಮಾರು ಎಂಭತ್ತು ಭಾಗದಷ್ಟು! ಹಾಗಾಗಿ ಮೆದುಳಿನ ಕ್ಷಮತೆ ಉತ್ತಮವಾಗಿರಬೇಕೆಂದರೆ ಸಾಕಷ್ಟು ನೀರು ಕುಡಿಯುತ್ತ ನಿರ್ಜಲೀಕರಣಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು.

ನಮ್ಮ ಕಣ್ಣಿನ ಬಣ್ಣ

ನಮ್ಮ ಕಣ್ಣಿನ ಬಣ್ಣ

ಹುಟ್ಟಿದಾಗ ನಮ್ಮೆಲ್ಲರ ಕಣ್ಣಿನ ಬಣ್ಣವೂ ನೀಲಿಬಣ್ಣದ್ದೇ ಆಗಿರುತ್ತದೆ. ಕ್ರಮೇಣ, ಬೆಳವಣಿಗೆ ಪಡೆಯುತ್ತಾ ಹೋದಂತೆ ನಮ್ಮ ಚರ್ಮದ ವರ್ಣಕ್ಕೆ ಕಾರಣವಾದ ಮೆಲನಿನ್ ಕಣ್ಣುಗಳ ಪಾಪೆಗಳ ಒಳಗಿನ ಭಾಗಕ್ಕೂ ಆವರಿಸಿ ನಿಜವಾದ ಬಣ್ಣವನ್ನು ನೀಡುತ್ತವೆ.

English summary

facts about human body you cannot miss

The way human body reacts or change is undoubtedly a mystical phenomenon. Eighty per cent of your brain consists of water and has the ability to light a 10-watt bulb. Your stomach gets a new inner lining every three to four days. Here we bring some unusual and interesting facts about the human body that will leave you amazed
X
Desktop Bottom Promotion