For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಪೈಲ್ಸ್‌ ಸಮಸ್ಯೆಗೆ ಆಯುರ್ವೇದ ಚಿಕಿತ್ಸೆಗಳು

|

ಪೈಲ್ಸ್ ಎನ್ನುವುದು ಜೀವ ಹಿಂಡಿ ಹಾಕುವಂತಹ ಒಂದು ಆರೋಗ್ಯ ಸಮಸ್ಯೆಯಾಗಿದೆ. ಇದು ಇಂದಿನ ಒತ್ತಡದ ಜೀವನ, ಆಹಾರ ಕ್ರಮ ಮತ್ತು ಜೀವನ ಶೈಲಿಯಿಂದಾಗಿ ಹೆಚ್ಚಿನವರನ್ನು ಕಾಡುವುದು. ಪೈಲ್ಸ್ ಸಮಸ್ಯೆ ಬಂದರೆ ಆಗ ಅದು ಇನ್ನಿಲ್ಲದಂತೆ ಇತರ ಕೆಲವೊಂದು ಸಮಸ್ಯೆಗಳನ್ನು ಉಂಟು ಮಾಡುವುದು. ಪೈಲ್ಸ್ ಸಮಸ್ಯೆ ನಿವಾರಣೆಗೆ ಹಲವಾರು ವಿಧಾನಗಳು ಇವೆ. ಆದರೆ ಆಯುರ್ವೇದವು ತುಂಬಾ ಪರಿಣಾಕಾರಿ ಹಾಗೂ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಇರುವಂತಹ ವಿಧಾನವೆಂದು ಪರಿಗಣಿಸಲಾಗಿದೆ. ಗುದನಾಳ ಮತ್ತು ಗುದದ್ವಾರದಲ್ಲಿ ಭಾರೀ ನೋವು, ಊತ ಮತ್ತು ಉರಿಯೂತ ಕಂಡುಬರುವಂತಹ ಸಮಸ್ಯೆಯೇ ಪೈಲ್ಸ್. ಆಯುರ್ವೇದ ಚಿಕಿತ್ಸೆಯ ಮೂಲಕವಾಗಿ ಪೈಲ್ಸ್ ನ್ನು ನಿವಾರಣೆ ಮಾಡುವುದು ಹೇಗೆ ಎಂದು ನಾವು ಈ ಲೇಖನದ ಮೂಲಕ ತಿಳಿಯುವ.

Piles

ಪೈಲ್ಸ್ ಬರಲು ಕಾರಣವೇನು?

ಪೈಲ್ಸ್ ಬರಲು ಹಲವಾರು ರೀತಿಯ ಕಾರಣಗಳು ಇವೆ. ಇದರಲ್ಲಿ ಸಾಮಾನ್ಯವಾಗಿರುವ ಕಾರಣವೆಂದರೆ ಅನುವಂಶೀಯ ಪ್ರವೃತ್ತಿ(ದುರ್ಬಲ ಗುದನಾಳಗಳು ಮತ್ತು ಗೋಡೆಗಳು) ಮತ್ತು ಗುದನಾಳದ ಸುತ್ತಲು ಇರುವಂತಹ ದುರ್ಬಲ ಸ್ನಾಯುಗಳಿಂದ, ಮಲಬದ್ಧತೆ(ಗಟ್ಟಿಯಾದ ಮಲ)ಯಿಂದ ಬರುವುದು. ಪೈಲ್ಸ್ ಬರಲು ಇತರ ಕೆಲವು ಕಾರಣಗಳೆಂದರೆ ಬೊಜ್ಜು, ಚಟುವಟಿಕೆ ಇಲ್ಲದ ಮತ್ತು ಜಡ ಜೀವನಶೈಲಿ, ದೀರ್ಘಕಾಲದ ಕೆಮ್ಮು, ಗರ್ಭಧಾರಣೆ, ಅತಿಯಾಗಿ ವಿರೇಚಕ ಅಥವಾ ಎನಿಮಾ ಬಳಕೆ, ದಿನನಿತ್ಯವು ಭಾರ ಎತ್ತುವಿಕೆ. ಪೈಲ್ಸ್ ನ ವಿಧಕ್ಕೆ ಅನುಗುಣವಾಗಿ ಆಯುರ್ವೇದ ಚಿಕಿತ್ಸೆಯು ನೀಡಲಾಗುತ್ತದೆ. ಬಾಹ್ಯವಾದ (ಗುದದ್ವಾರದ ಹೊರಗಡೆ ಇರುವುದು ಮತ್ತು ಆಂತರಿಕ(ಗುದದ್ವಾರದ ಒಳಗಡೆ ಇರುವುದು).

ಲಕ್ಷಣಗಳು

ಪೈಲ್ಸ್ ಎಲ್ಲಿ ಕಾಣಿಸಿಕೊಂಡಿದೆ ಎನ್ನುವುದರ ಮೇಲೆ ಅದರ ಲಕ್ಷಣಗಳು ಅಲವಂಬಿಸಿದೆ. ಲಕ್ಷಣಗಳ ಅವಧಿ ಮತ್ತು ನಿಮ್ಮ ಸಂಪೂರ್ಣ ಆರೋಗ್ಯವು ಇಲ್ಲಿ ಮುಖ್ಯವಾಗಿರುವುದು. ಬಾಹ್ಯ ಪೈಲ್ಸ್ ಗುದದ್ವಾರದ ಹೊರಗಡೆ ಊತ, ಕಿರಿಕಿರಿ ಮತ್ತು ತುರಿಕೆ ಉಂಟು ಮಾಡುವುದು. ಇನ್ನು ಕೆಲವು ಜನರಲ್ಲಿ ಇದು ತುಂಬಾ ನೋವು ನೀಡುವುದು. ಆದರೆ ಇಲ್ಲಿ ರಕ್ತಸ್ರಾವ ಉಂಟಾಗುವುದಿಲ್ಲ. ಆಂತರಿಕ ಪೈಲ್ಸ್ ನ ವೇಳೆ ಕಠಿಣ ಮಲವು ಹೊರಗೆ ಬರುವಾಗ ರಕ್ತಸ್ರಾವ ಉಂಟಾಗುವುದು. ಆದರೆ ಇಲ್ಲಿ ನೋವು ಇರುವುದಿಲ್ಲ. ಈ ವೇಳೆ ಪೈಲ್ಸ್ ನಿಂದ ಸ್ವಲ್ಪ ಕೀವು ಹೊರಗೆ ಬರುವುದು. ಪೈಲ್ಸ್ ನ ತೀವ್ರತೆಗೆ ಅನುಗುಣವಾಗಿ ಇದನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. ಮಲ ವಿಸರ್ಜನೆ ವೇಳೆ ರಕ್ತಸ್ರಾವವು ಆಗುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ ಅವರಿಂದ ಸಲಹೆ ಪಡೆಯಿರಿ. ಪೈಲ್ಸ್ ನ ಸಮಸ್ಯೆಗೆ ಕೆಲವೇ ದಿನಗಳ ಚಿಕಿತ್ಸೆಯು ಪರಿಣಾಮಕಾರಿಯಾಗುವುದು.

Most Read: ಮೂಲವ್ಯಾಧಿ ಸಮಸ್ಯೆಯೇ..? ಮೂಲಂಗಿಯೇ ಸಮರ್ಥ ಮದ್ದು

ಪೈಲ್ಸ್ ಗೆ ಆಯುರ್ವೇದ ಚಿಕಿತ್ಸೆ

ಪೈಲ್ಸ್ ಗೆ ಪ್ರಮುಖವಾಗಿ ಕಾರಣವಾಗುವಂತಹ ಮಲಬದ್ಧತೆಯನ್ನು ನಿವಾರಣೆ ಮಾಡುವುದು ಪೈಲ್ಸ್ ಗೆ ಆಯುರ್ವೇದದ ಚಿಕಿತ್ಸೆಯ ಮೊದಲ ಗುರಿ ಮತ್ತು ಇದು ಅದಕ್ಕೆ ಸಂಬಂಧಿಸಿದ ನೋವು ಕಡಿಮೆ ಮಾಡುವುದು. ಹೆಚ್ಚಿನ ಸಮಯದಲ್ಲಿ ಪೈಲ್ಸ್ ಗೆ ಚಿಕಿತ್ಸೆ ಎಂದರೆ ಜೀವನಶೈಲಿ ಬದಲಾವಣೆ ಮತ್ತು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಆಗಿರುವುದು.

ಆಯುರ್ವೇದ ಔಷಧಿ ತೆಗೆದುಕೊಂಡರೆ ಆಗ ಮಲಬದ್ಧತೆಯು ನಿವಾರಣೆಯಾಗಿ ಪೈಲ್ಸ್ ನಿವಾರಣೆಗೆ ಇದು ತುಂಬಾ ನೆರವಾಗುವುದು. ಪೈಲ್ಸ್ ಗೆ ಇರುವಂತಹ ಕೆಲವೊಂದು ಸಾಮಾನ್ಯ ಗಿಡಮೂಲಿಕೆಗಳು ಮತ್ತು ಔಷಧಿಗಳು ಎಂದರೆ ಇಂಗು, ಜೀರಿಗೆ, ತುಪ್ಪ, ಮಜ್ಜಿಗೆ ಮತ್ತು ಹಸಿರೆಲೆ ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಆಗ ಮಲಬದ್ಧತೆ ನಿವಾರಣೆ ಆಗುವುದು.

ಪೈಲ್ಸ್ ಗೆ ಸಾಮಾನ್ಯವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸುವ ಗಿಡಮೂಲಿಕೆಗಳು

ಕ್ಯಾರೆಟ್ ಪೈಲ್ಸ್ ನಿಂದ ಉಂಟಾಗುವಂತಹ ರಕ್ತಸ್ರಾವವನ್ನು ಇದು ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು. ಇದನ್ನು ಹಸಿ ಅಥವಾ ಬೇಯಿಸಿ ಸೇವಿಸಬಹುದು.

ಬೆಳ್ಳುಳ್ಳಿ

ಪೈಲ್ಸ್ ನಿಂದ ಉಂಟಾಗುವಂತಹ ರಕ್ತಸ್ರಾವ ಕಡಿಮೆ ಮಾಡಲು ಇದು ತುಂಬಾ ಪರಿಣಾಮಕಾರಿ. ರಕ್ತಸ್ರಾವವಾಗುವ ಪೈಲ್ಸ್ ನ ಬೆಳವಣಿಗೆಯನ್ನು ನಿವಾರಣೆ ಮಾಡಲು ಇದು ತುಂಬಾ ನೆರವಾಗುವುದು. ಪೈಲ್ಸ್ ನಿವಾರಣೆ ಮಾಡಲು ಇರುವಂತಹ ಇತರ ಕೆಲವು ಗಿಡಮೂಲಿಕೆಗಳೆಂದರೆ ಮಿಮೋಸಾ ಪುಡಿಕಾ, ಅಲೈಂತಸ್ ಎಕ್ಸೆಲಾ, ಬ್ಲೂಮಿಯ ಬಲ್ಸಾಮಿಫೆರಾ ಮತ್ತು ಸೆಮಕಾರ್ಪಸ್ ಅನಾಕಾರ್ಡಿಯಮ್ . ಆಯುರ್ವೇದ ಚಿಕಿತ್ಸೆ ಮೂಲಕ ಪೈಲ್ಸ್ ಗೆ ಸಂಬಂಧಿಸಿದ ನೋವು ಮತ್ತು ತೊಂದರೆ ಕಡಿಮೆ ಮಾಡಿಕೊಳ್ಳಬಹುದು. ಅದಾಗ್ಯೂ, ನೀವು ಈಗಾಗಲೇ ಪೈಲ್ಸ್ ಗೆ ಮನೆಮದ್ದು ಮತ್ತು ಸ್ವಚಿಕಿತ್ಸೆ ಮಾಡಿದ್ದರೆ ಅದು ಯಾವುದೇ ಪರಿಣಾಮ ಬೀರದೆ ಇದ್ದರೆ ಆಗ ನೀವು ಆಯುರ್ವೇದ ವೈದ್ಯರು ಅಥವಾ ಅಲೋಪತಿ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.

ಪೈಲ್ಸ್ ಚಿಕಿತ್ಸೆಗೆ ಇರುವಂತಹ ಇತರ ಕೆಲವೊಂದು ಪ್ರಮುಖ ಅಂಶಗಳು ಹೀಗಿವೆ...

ಮನೆಮದ್ದು ಮತ್ತು ಔಷಧಿಯೊಂದಿಗೆ ನೀವು ಇತರ ಕೆಲವೊಂದು ವಿಚಾರಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು. ಪೈಲ್ಸ್ ನಿಂದ ಆಗುವಂತಹ ತೊಂದರೆ ಮತ್ತು ನೋವನ್ನು ನಿವಾರಿಸಲು ಇದು ನೆರವಾಗುವುದು. ಕೆಲವು ಅಂಶಗಳನ್ನು ತಿಳಿದುಕೊಂಡರೆ ಅದರಿಂದ ಸ್ವಲ್ಪ ಮಟ್ಟದ ನೋವು, ಊತ ಮತ್ತು ಉರಿಯೂತ ತಡೆಯಬಹುದು. ಇದರೊಂದಿಗೆ ನೀವು ಆಯುರ್ವೇದ ಔಷಧಿಯನ್ನು ಕೂಡ ತೆಗೆದುಕೊಳ್ಳುತ್ತಿರಬೇಕು. ನಿಯಮಿತವಾಗಿ ನೀವು ಬಿಸಿನೀರಿನಲ್ಲಿ ಸುಮಾರು 10ರಿಂದ 15 ನಿಮಿಷ ತನಕ ಗುದದ್ವಾರವನ್ನು ಮುಳುಗಿಸಿ ಇಡಿ. ದಿನದಲ್ಲಿ ಎರಡು ಅಥವಾ ಮೂರು ಸಲ ನೀವು ಹೀಗೆ ಮಾಡಿ. ಗುದದ ಭಾಗವನ್ನು ಸ್ವಚ್ಛವಾಗಿಡಿ, ಬಿಸಿ ನೀರಿನಿಂದ ಗುದದ್ವಾರದ ಸುತ್ತಲಿನ ಚರ್ಮವನ್ನು ಸ್ವಚ್ಛಗೊಳಿಸಿ, ಸೋಪ್ ಬಳಸಬೇಡಿ. ಇದರಿಂದ ಸಮಸ್ಯೆ ಹೆಚ್ಚಾಗಬಹುದು.

Most Read: ಮೂಲವ್ಯಾಧಿ ಬಂದರೆ ಆತಂಕ ಬೇಡ! ಇಲ್ಲಿದೆ ನೋಡಿ ಮನೆಮದ್ದುಗಳು

ಪೈಲ್ಸ್ ಚಿಕಿತ್ಸೆಗೆ ಇರುವಂತಹ ಇತರ ಕೆಲವೊಂದು ಪ್ರಮುಖ ಅಂಶಗಳು ಹೀಗಿವೆ...

ವೈಪ್ಸ್ ಬಳಸುತ್ತಿದ್ದರೆ ಆಗ ನೀವು ಆಲ್ಕೋಹಾಲ್ ಇರುವಂತಹ ವೈಪ್ ಅಥವಾ ಸುಗಂಧಿತ ವೈಪ್ ಬಳಸಬೇಡಿ. ಸ್ನಾನ ಮಾಡಿದ ಬಳಿಕ ನೀವು ಹೇರ್ ಡ್ರೈಯರ ಬಳಸಿಕೊಂಡು ಈ ಭಾಗವನ್ನು ಒಣಗಿಸಿ. ನೀವು ಈ ಪರಿಸ್ಥಿತಿಯಲ್ಲಿ ಟಾಯ್ಲೆಟ್ ಪೇಪರ್ ನ್ನು ಬಳಸಲೇಬಾರದು. ಅದಾಗ್ಯೂ, ಆಲ್ಕೋಹಾಲ್ ಅಥವಾ ಸುಗಂಧವು ಇಲ್ಲದೆ ಇರುವಂತಹ ಟಾಯ್ಲೆಟ್ ಪೇಪರ್ ನ್ನು ನೀವು ಬಳಸಬಹುದು. ಊತ ಕಡಿಮೆ ಮಾಡಿಕೊಳ್ಳು ಐಸ್ ಪ್ಯಾಕ್ ಅಥವಾ ತಣ್ಣಗಿನ ಒತ್ತಡ ಹಾಕಿ. ನಿಮಗೆ ತುಂಬಾ ತೊಂದರೆಯಾಗುತ್ತಲಿದ್ದರೆ ಆಗ ನೀವು ನೋವು ನಿವಾರಕ ಬಳಸಿಕೊಳ್ಳಬಹುದು. ಆಯುರ್ವೇದವು ಪೈಲ್ಸ್ ಗೆ ಕೆಲವು ವಾರಗಳಲ್ಲಿ ಪರಿಹಾರ ನೀಡುವುದು. ಸಮಯ ಕಳೆದಂತೆ ಪೈಲ್ಸ್ ಲಕ್ಷಣಗಳು ಹೋಗುವುದು. ಮೂರು ವಾರಗಳಲ್ಲಿ ನಿಮಗೆ ಯಾವುದೇ ಪರಿಹಾರ ಸಿಗದೆ ಇದ್ದರೆ ಆಗ ಸಮಸ್ಯೆಯು ತುಂಬಾ ತೀವ್ರವಾಗಿದೆ ಎಂದು ತಿಳಿದುಕೊಳ್ಳಬೇಕು. ಈ ಹಂತದಲ್ಲಿ ನೀವು ವೈದ್ಯರನ್ನು ಭೇಟಿಯಾಗಿ.

English summary

Effective Ayurvedic Treatment for Piles

Piles also known as haemorrhoids are caused due to swelling and inflammation of the veins present in the rectum and anus. Piles treatment through Ayurveda has been quite effective. The ayurveda treatment is a holistic method with no or a very few side-effects.
Story first published: Saturday, March 2, 2019, 16:37 [IST]
X
Desktop Bottom Promotion