Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
ನೆನಪಿಡಿ ಹಾಲು ಮತ್ತು ಮೊಸರನ್ನು ಯಾವತ್ತೂ ಒಟ್ಟಿಗೆ ಸೇವಿಸಬೇಡಿ!
ಆಹಾರ ಸಂಯೋಜನೆಯು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಅದರಲ್ಲೂ ಹೊಟ್ಟೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಳ್ಳೆಯ ಜೀರ್ಣ ಶಕ್ತಿ ಬೇಕಾಗುವುದು. ಅಡುಗೆ ಮನೆಯಲ್ಲಿ ಕೆಲವೊಂದು ಪ್ರಯೋಗಗಳನ್ನು ಮಾಡುತ್ತಲಿದ್ದರೆ, ಆಗ ಕೆಲವೊಂದು ಆಹಾರಗಳ ಸಂಯೋಜನೆಯನ್ನು ಕಡೆಗಣಿಸಬೇಕು. ಯಾಕೆಂದರೆ ಇದರಿಂದ ಹೊಟ್ಟೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಎರಡು ಆರೋಗ್ಯಕರವಾಗಿರುವ ಆಹಾರವನ್ನು ಸಂಯೋಜನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.
ಆದರೆ ಹೊಂದಾಣಿಕೆ ಆಗದೆ ಇರುವಂತಹ ಎರಡು ಆಹಾರವನ್ನು ಜತೆಯಾಗಿ ಸೇರಿಸಿದರೆ ಆಗ ಅದರಿಂದ ಹೊಟ್ಟೆಯಲ್ಲಿ ಕೆಲವೊಂದು ಸಮಸ್ಯೆಗಳು ಕಾಣಿಸಬಹುದು. ಇದರಲ್ಲಿ ಮುಖ್ಯವಾಗಿ ಹಾಲು ಮತ್ತು ಮೊಸರು. ಸ್ಮೂಥಿ ಮತ್ತು ಲಸ್ಸಿ ಸೇವನೆ ಮಾಡುವವರು ಇದನ್ನು ಮುಖ್ಯವಾಗಿ ಗಮನದಲ್ಲಿರಿಸಬೇಕು.

ಆಯುರ್ವೇದವು ಹೇಳುವ ಪ್ರಕಾರ
ಆಯುರ್ವೇದವು ಹೇಳುವ ಪ್ರಕಾರ ಕೆಲವೊಂದು ಆಹಾರಗಳ ಸಂಯೋಜನೆಯಿಂದಾಗಿ ಗ್ಯಾಸ್ಟ್ರಿಕ್ ಬೆಂಕಿಯ ಸಾಮಾನ್ಯ ಕಾರ್ಯದ ಮೇಲೆ ಪರಿಣಾಮ ಬೀರುವುದು ಮತ್ತು ಇದರಿಂದ ದೋಷಗಳ ಸಮತೋಲನವು ತಪ್ಪುವುದು. ಆಯುರ್ವೇದದಲ್ಲಿ ಮುಖ್ಯವಾಗಿ ಮೂರು ದೋಷಗಳು ಇವೆ. ಅವುಗಳೆಂದರೆ ವಾತ, ಪಿತ್ತ ಮತ್ತು ಕಫ. ಈ ಮೂರು ದೋಷಗಳು ಸರಿಯಾದ ಸಮತೋಲನದಲ್ಲಿ ಇದ್ದರೆ ಆಗ ಒಳ್ಳೆಯ ಆರೋಗ್ಯವಿದೆ ಎಂದು ಹೇಳಬಹುದು. ಆಹಾರಗಳ ಸಂಯೋಜನೆಯು ಸರಿಯಾಗಿ ಇರದೆ ಇದ್ದರೆ ಆಗ ಅಜೀರ್ಣ, ವಾಯುಗುಣ ಮತ್ತು ಗ್ಯಾಸ್ ತುಂಬಬಹುದು.

ಕೆಲವೊಂದು ಆಹಾರಗಳೊಂದಿಗೆ ಮೊಸರನ್ನು ಬೆರೆಸಬಾರದು
ಇದರೊಂದಿಗೆ ನಾವು ದಿನಿನಿತ್ಯವು ಸೇವಿಸುವಂತಹ ಕೆಲವೊಂದು ಆಹಾರಗಳೊಂದಿಗೆ ಮೊಸರನ್ನು ಬೆರೆಸಬಾರದು ಎಂದು ಅವರು ಮಾಹಿತಿ ನೀಡಿದ್ದಾರೆ. ಇವುಗಳು ಯಾವುದೆಂದರೆ ಹುಳಿಯಾಗಿರುವ ಹಣ್ಣುಗಳು, ಮೀನು, ಮಾವಿನಹಣ್ಣು, ಪಿಷ್ಠ, ಚೀಸ್ ಮತ್ತು ಬಾಳೆಹಣ್ಣು. ಹೊಂದಾಣಿಕೆ ಆಗದ ಆಹಾರ ಸಂಯೋಜನೆಯ ಬಗ್ಗೆ ನಾವು ಹೇಳುವಾಗ ಹಾಲು ಮತ್ತು ಮೊಸರನ್ನು ತುಂಬಾ ಹಿಂದಿನ ಕಾಲದಿಂದಲೂ ಬಳಸಿಕೊಂಡು ಬರಲಾಗುತ್ತಾ ಇದೆ. ಅದರಲ್ಲೂ ಹೆಚ್ಚಾಗಿ ಲಸ್ಸಿ ಮತ್ತು ಸ್ಮೂಥಿಯನ್ನು ಕುಡಿಯುವವರು ಇದನ್ನು ಮಿಶ್ರಣ ಮಾಡಿಕೊಳ್ಳುವರು. ಇದರಲ್ಲಿ ಇರುವಂತಹ ಪೋಷಕಾಂಶಗಳು ದೇಹಕ್ಕೆ ಸಿಗುವುದು ಎನ್ನುವ ಕಾರಣಕ್ಕಾಗಿ ಇದನ್ನು ಕುಡಿಯುತ್ತಾ ಬರಲಾಗಿದೆ.

ಆಯುರ್ವೇದದ ತಜ್ಞರು ವಿವರಿಸಿರುವ ಪ್ರಕಾರ
ಆಯುರ್ವೇದದ ತಜ್ಞರು ವಿವರಿಸಿರುವ ಪ್ರಕಾರ, ಮೊಸರು ಹುಳಿ, ಭಾರ ಮತ್ತು ದೇಹದಲ್ಲಿ ಇರುವಂತಹ ಗ್ರಂಥಿಗಳಲ್ಲಿ ಸ್ರವಿಸುವಿಕೆಯನ್ನು ಅದು ಹೆಚ್ಚು ಮಾಡುವುದು. ಮೊಸರಿನಲ್ಲಿ ಇರುವಂತಹ ಈ ಗುಣಗಳು ಹಾಲಿನಲ್ಲಿ ಇರುವಂತಹ ಗುಣಗಳಿಗೆ ತುಂಬಾ ತದ್ವಿರುದ್ಧ ಆಗಿರುವುದು. ಇದರಿಂದಾಗಿ ಎರಡನ್ನು ಜತೆಯಾಗಿ ಸೇವನೆ ಮಾಡಬಾರದು ಎಂದು ಆಯುರ್ವೇದವು ಹೇಳುತ್ತದೆ. ಹುದುಗು ಬರುವಂತಹ ಯಾವುದೇ ಆಹಾರವನ್ನು ಹಾಲಿನೊಂದಿಗೆ ಸೇವನೆ ಮಾಡಬಾರದು ಎಂದು ಅವರು ತಿಳಿಸಿದ್ದಾರೆ. ಯಾಕೆಂದರೆ ಇದರಿಂದ ಇದು ದೇಹದಲ್ಲಿ ಕೋಶಗಳನ್ನು ಬ್ಲಾಕ್ ಮಾಡುವ ಮೂಲಕವಾಗಿ ಸೋಂಕು, ಹೊಟ್ಟೆಯ ಸಮಸ್ಯೆ ಮತ್ತು ಅನಾರೋಗ್ಯಕ್ಕೆ ಕಾರಣವಾಗಬಹುದು.

ಸ್ನಾಯು ಸೆಳೆತ, ಹೊಟ್ಟೆ ಉಬ್ಬರ ಅಥವಾ ಇತರ ಹೊಟ್ಟೆಯ ಸಮಸ್ಯೆಗಳು ಬರಬಹುದು
ಹಣ್ಣಿನ ಸ್ಮೂಥಿ ಅಥವಾ ಬೇರೆ ಯಾವುದೇ ರೀತಿಯ ಪಾನೀಯದಲ್ಲಿ ಮೊಸರನ್ನು ನೀವು ಸೇರಿಸಿಕೊಳ್ಳುತ್ತಾ ಇದ್ದರೆ ಆಗ ನೀವು ಯಾವ ರೀತಿಯ ಭಾವನೆ ಪಡೆಯುತ್ತಿದ್ದೀರಿ ಎಂದು ನಿಮಗೆ ಬಳಿಕ ತಿಳಿದುಬರುವುದು. ಸ್ನಾಯು ಸೆಳೆತ, ಹೊಟ್ಟೆ ಉಬ್ಬರ ಅಥವಾ ಇತರ ಹೊಟ್ಟೆಯ ಸಮಸ್ಯೆಗಳು ಕಾಣಿಸಿಕೊಂಡರೆ ಆಗ ಇದು ಆಹಾರ ಸಂಯೋಜನೆಯ ಕೆಲವು ಕಾರಣಗಳು ಆಗಿರಬಹುದು. ಇದರಿಂದ ನೀವು ಇದನ್ನು ಕಡೆಗಣಿಸುವುದು ತುಂಬಾ ಒಳ್ಳೆಯದು.



Click it and Unblock the Notifications