For Quick Alerts
ALLOW NOTIFICATIONS  
For Daily Alerts

ಸಿಗರೇಟ್ ಸೇದುವುದರಿಂದಾಗಿ ಮೂಗು, ಕಿವಿ ಮತ್ತು ಗಂಟಲು ಸಮಸ್ಯೆ ಬರಬಹುದು!

|

ಧೂಮಪಾನ ಮತ್ತು ಮದ್ಯಪಾನವು ಆರೋಗ್ಯಕ್ಕೆ ತುಂಬಾ ಹಾನಿಕಾರ ಎಂದು ನಮಗೆ ತಿಳಿದಿದ್ದರೂ ಸಹಿತ ಕೆಲವರು ಅದರ ಚಟದಿಂದ ಹೊರಬರಲು ಪ್ರಯತ್ನಿಸುವುದೇ ಇಲ್ಲ. ಧೂಮಪಾನದಿಂದಾಗಿಯೇ ಇಂದು ಹಲವಾರು ಮಂದಿ ಮಾರಕವಾಗಿರುವಂತಹ ಕಾಯಿಲೆಗಳಿಗೆ ತುತ್ತಾಗುತ್ತಲಿದ್ದಾರೆ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆಂಟೇಷನ್(ಸಿಡಿಸಿ) ನೀಡಿರುವಂತಹ ವರದಿಯೊಂದರ ಪ್ರಕಾರ ಅಮೆರಿಕಾದಲ್ಲಿ ಸುಮಾರು 45.3 ಮಿಲಿಯನ್ ವಯಸ್ಕರು ಸಿಗರೇಟ್ ಸೇದುವುದರಿಂದಾಗಿ ಮೂಗು, ಕಿವಿ ಮತ್ತು ಗಂಟಲು(ENT)ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದೆ. 2000-2004ರಿಂದ ಬಂದಿರುವಂತಹ ಅಂಕಿಅಂಶಗಳನ್ನು ನೋಡಿದರೆ ಅದರಲ್ಲಿ ಪ್ರತೀ ವರ್ಷ ಶೇ.20ರಷ್ಟು ಜನರು ತಂಬಾಕು ಸಂಬಂಧಿ ಕಾಯಿಲೆಗಳಿಂದಾಗಿ ಮೃತಪಟ್ಟಿದ್ದಾರೆ. ಅಂದರೆ ಪ್ರತೀ ವರ್ಷ 440,000 ಸಾವು ಸಂಭವಿಸಿದೆ. ಸಾವಿನ ಹೊರತಾಗಿ ಸುಮಾರು 8.5 ಮಿಲಿಯನ್ ಜನರು ಧೂಮಪಾನದಿಂದಾಗಿ ದೀರ್ಘಕಾಲದ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಇದರ ಪರಿಣಾಮವಾಗಿ ಅಮೆರಿಕಾದಲ್ಲಿ ವರ್ಷಕ್ಕೆ ಸುಮಾರು 193 ಡಾಲರ್ ನ್ನು ಆರೋಗ್ಯ ಸಂಬಂಧಿ ವಿಚಾರಗಳಿಗೆ ಖರ್ಚು ಮಾಡಬೇಕಾಗುತ್ತದೆ ಎಂದು ಸಮೀಕ್ಷೆಯು ತಿಳಿಸಿದೆ. ಈ ಖರ್ಚು ವ್ಯಕ್ತಿಯೊಬ್ಬನ ಹಾನಿಕಾರಕವಾದ ಚಟಗಳಿಂದಾಗಿ ಬಂದಿದೆ. ಅದಾಗ್ಯೂ, ಬೇರೆಯವರು ಸೇವಿಸಿಬಿಟ್ಟು ಹೊಗೆಯಿಂದಾಗಿ ಸುಮಾರು 10 ಡಾಲರ್ ವರ್ಷಕ್ಕೆ ಖರ್ಚಾಗುತ್ತದೆ ಎಂದು ಕೂಡ ಹೇಳಲಾಗಿದೆ.

ಧೂಮಪಾನವು ಎಷ್ಟರ ಮಟ್ಟಿಗೆ ಹಾನಿಕಾರವಾಗಿದೆ ಎಂದರೆ ಫುಡ್ ಆ್ಯಂಡ್ ಡ್ರಗ್ ಎಡ್ಮಿಸ್ಟ್ರೇಷನ್(ಎಫ್ ಡಿಎ) 2011ರಲ್ಲಿ ಒಂದು ಸುತ್ತೋಲೆಯನ್ನು ಹೊರಗೆ ತಂದಿದೆ. ಇದರ ಪ್ರಕಾರ 2012ರ ಬಳಿಕ ಎಲ್ಲಾ ಸಿಗರೇಟ್ ಪ್ಯಾಕೇಟ್ ಗಳಲ್ಲಿ ಎಚ್ಚರಿಕೆ ಬಗ್ಗೆ ತುಂಬಾ ದೊಡ್ಡದಾಗಿ ಬರೆದಿರಬೇಕು ಮತ್ತು ಅದರೊಂದಿಗೆ ಚಿತ್ರವನ್ನು ಕೂಡ ಹಾಕಬೇಕು ಎಂದು ಹೇಳಿದೆ. ಸಿಗರೇಟ್ ಕಂಪೆನಿಗಳು ಎಫ್ ಡಿಎ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದರೂ ಅಮೆರಿಕಾ ಇತರ ಕೆಲವೊಂದು ರಾಷ್ಟ್ರಗಳಾಗಿರುವಂತಹ ಕೆನಡಾ ಮತ್ತು ಬ್ರೆಜಿಲ್ ನೊಂದಿಗೆ ಸೇರಿಕೊಂಡು ಧೂಮಪಾನ ವಿರೋಧಿ ಎಚ್ಚರಿಕೆಯನ್ನು ತುಂಬಾ ಕಠಿಣಗೊಳಿಸಿದೆ. ಧೂಮಪಾನದಿಂದ ಉಂಟಾಗುವಂತಹ ಕೆಲವೊಂದು ಆರೋಗ್ಯದ ಅಪಾಯಗಳ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳುವ.

ಧೂಮಪಾನದಿಂದ ಉಂಟಾಗುವಂತಹ ಕೆಲವೊಂದು ಆರೋಗ್ಯದ ಅಪಾಯಗಳು

ಧೂಮಪಾನದಿಂದ ಉಂಟಾಗುವಂತಹ ಕೆಲವೊಂದು ಆರೋಗ್ಯದ ಅಪಾಯಗಳು

*ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್

*ಶ್ವಾಸಕೋಶದ ಕ್ಯಾನ್ಸರ್

*ಇತರ ವಿಧದ ಕ್ಯಾನ್ಸರ್

*ಪಾರ್ಶ್ವವಾಯು

*ಹೃದಯಾಘಾತ

*ದೀರ್ಘಕಾಲದ ಬ್ರಾಂಕೈಟಿಸ್

*ಎಂಫಿಸೆಮಾ

*ಹಠಾತ್ ಹಸುಗೂಸು ಸಾಯುವ ಸಿಂಡ್ರೋಮ್(ಎಸ್ಐಡಿಎಸ್)

*ನಿಮಿರು ದೌರ್ಬಲ್ಯ

Most Read: ನೀವು ಪ್ರತಿ ದಿನ ಯೋಗ ಮಾಡಲೇಬೇಕು ಯಾಕೆ ಗೊತ್ತೇ? ಇಲ್ಲಿದೆ 8 ಕಾರಣಗಳು

ಇದರಿಂದ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ

ಇದರಿಂದ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ

ಧೂಮಪಾನ ಸಂಬಂಧಿ ಅನಾರೋಗ್ಯವನ್ನು ಹೊರತುಪಡಿಸಿದರೆ, ಅಮೆರಿಕಾದಲ್ಲಿ ಧೂಮಪಾನದಿಂದ ಉಂಟಾಗುವಂತಹ ತಡೆ ಹಿಡಿಯಬಹುದಾದ ಸಾವುಗಳು ಹೆಚ್ಚಾಗುತ್ತಲಿದೆ. ಕೆಲವೊಂದು ಕಂಪೆನಿಗಳಲ್ಲಿ ಧೂಮಪಾನ ಹೆಚ್ಚು ಮಾಡುವಂತಹ ಉದ್ಯೋಗಿಗಳಿಗೆ ಅವರು ಕಟ್ಟುವಂತಹ ವಿಮೆಯ ಮೊತ್ತವನ್ನು ಹೆಚ್ಚು ಮಾಡಲಾಗುತ್ತದೆ. ಧೂಮಪಾನದಿಂದ ಬರುವಂತಹ ಮೊದಲ ದೊಡ್ಡ ಕಾಯಿಲೆ ಎಂದರೆ ಅದು ಕ್ಯಾನ್ಸರ್. ಧೂಮಪಾನದಿಂದ ಬರುವಂತಹ ಕ್ಯಾನ್ಸರ್ ಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಮಾತ್ರ ಒಳಗೊಂಡಿಲ್ಲ. ಉದಾಹರಣೆಗೆ, ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್ ಕೂಡ ಧೂಮಪಾನದಿಂದ ಬರಬಹುದು. ಅದೇ ರೀತಿಯಾಗಿ ಬಾಯಿಯ ಕ್ಯಾನ್ಸರ್, ಕಿಡ್ನಿ, ಅನ್ನನಾಳದ ಮತ್ತು ದನಿ ಪೆಟ್ಟಿಗೆಯ ಕ್ಯಾನ್ಸರ್ ಕೂಡ ಧೂಮಪಾನದಿಂದಾಗಿ ಬರಬಹುದು.

ಧೂಮಪಾನದಿಂದಾಗಿ ಕ್ಯಾನ್ಸರ್ ಬರಲು ಕಾರಣವೇನು?

ಧೂಮಪಾನದಿಂದಾಗಿ ಕ್ಯಾನ್ಸರ್ ಬರಲು ಕಾರಣವೇನು?

ಧೂಮಪಾನದಿಂದ ಕ್ಯಾನ್ಸರ್ ಬರಲು ಪ್ರಮುಖ ಕಾರಣವೆಂದರೆ, ಅದರಲ್ಲಿ ಇರುವಂತಹ ತಂಬಾಕಿನ ಹೊಗೆಯಿಂದಾಗಿ. ತಂಬಾಕಿನ ಹೊಗೆಯಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚಿನ ರಾಸಾಯನಿಕಗಳನ್ನು ಪತ್ತೆ ಮಾಡಲಾಗಿದೆ. ಇದರಲ್ಲಿ ಸುಮಾರು 250 ರಾಸಾಯನಿಕಗಳಾಗಿರುವಂತಹ (ಅಮೋನಿಯಾ, ಕಾರ್ಬನ್ ಮೊನಾಕ್ಸೈಡ್, ಸೈನೆಡ್ ಮತ್ತು ಹೈಡ್ರೋಜನ್) ತುಂಬಾ ಅಪಾಯಕಾರಿಯಾಗಿದೆ. ಇದರಲ್ಲಿ ಸುಮಾರು 69 ರಾಸಾಯನಿಕಗಳು ಕ್ಯಾನ್ಸರ್ ಕಾರಕವಾಗಿದೆ. ಕ್ಯಾನ್ಸರ್ ಕಾರಕಗಳಿಗೆ ದೇಹವು ಒಗ್ಗಲ್ಪಟ್ಟರೆ ಆಗ ಕ್ಯಾನ್ಸರ್ ಬರುವಂತಹ ಸಾಧ್ಯತೆಯು ಹೆಚ್ಚಾಗಿ ಇರುವುದು. ಧೂಮಪಾನದಿಂದ ಬರುವಂತಹ ಆರೋಗ್ಯ ಸಮಸ್ಯೆಗಳು ಇಲ್ಲಿಗೆ ನಿಲ್ಲುವುದಿಲ್ಲ. ಯಾಕೆಂದರೆ ಧೂಮಪಾನವು ಕೇವಲ ಕ್ಯಾನ್ಸರ್ ನ್ನು ಮಾತ್ರ ಉಂಟು ಮಾಡುವುದಿಲ್ಲ. ಇದರಿಂದ ಇನ್ನು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುವುದು.

ಧೂಮಪಾನದಿಂದ ಬರುವಂತಹ ಕ್ಯಾನ್ಸರ್ ಅಲ್ಲದೆ ಇರುವಂತಹ ENT ಕಾಯಿಲೆಗಳು

ಧೂಮಪಾನದಿಂದ ಬರುವಂತಹ ಕ್ಯಾನ್ಸರ್ ಅಲ್ಲದೆ ಇರುವಂತಹ ENT ಕಾಯಿಲೆಗಳು

ಧೂಮಪನಾದಿಂದಾಗಿ ಹಲವಾರು ರೀತಿಯ ENT ಕಾಯಿಲೆಗಳು ಬರಬಹುದು. ಇದರಲ್ಲಿ ಕೆಲವೊಂದು ಆರೋಗ್ಯಕ್ಕೆ ಅಪಾಯ ಉಂಟು ಮಾಡುವುದಕ್ಕಿಂತಲೂ ಹೆಚ್ಚಾಗಿ ತುಂಬಾ ಕಿರಿಕಿರಿ ಉಂಟು ಮಾಡುವುದು. ಇದರಿಂದಾಗಿ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುವುದು. ನೀವು ಧೂಮಪಾನಿಯಲ್ಲದೆ ಇದ್ದರೂ ಸೆಕೆಂಡ್ ಹ್ಯಾಂಡ್ ಸ್ಮೋಕ್ ಅಂದರೆ ಬೇರೆಯವರು ಧೂಮಪಾನ ಮಾಡಿದ ಹೊಗೆಯಿಂದಾಗಿ ನಿಮಗೆ ಸಮಸ್ಯೆಯು ಬರಬಹುದು. ಮನೆಯಲ್ಲಿ ಪೋಷಕರು ಅಥವಾ ಇನ್ನಿತರ ಯಾರೇ ಆಗಿದ್ದರೂ ಧೂಮಪಾನ ಮಾಡುತ್ತಲಿದ್ದರೆ ಅಲ್ಲಿರುವಂತಹ ಮಕ್ಕಳ ಮೇಲೆ ಅದರ ಹೊಗೆಯ ಪರಿಣಾಮವು ಆಗುವುದು. ಮನೆಯ ಒಳಗಡೆಯೇ ಧೂಮಪಾನ ಮಾಡುವಂತಹ ಜನರಿಂದಾಗಿ ಇಂತಹ ಸಮಸ್ಯೆಗಳು ಹೆಚ್ಚಾಗಿ ಆಗುವುದು.

Most Read: ಡ್ಯೂರಿಯನ್ ಹಣ್ಣಿನ ಅನೇಕ ಆರೋಗ್ಯಕರ ಉಪಯೋಗಗಳು

ನಾನು ಒಬ್ಬ ಧೂಮಪಾನಿ ಮತ್ತು ಇದನ್ನು ಬಿಡಲು ತುಂಬಾ ವಿಳಂಬವಾಯಿತೇ?

ನಾನು ಒಬ್ಬ ಧೂಮಪಾನಿ ಮತ್ತು ಇದನ್ನು ಬಿಡಲು ತುಂಬಾ ವಿಳಂಬವಾಯಿತೇ?

ಯಾವತ್ತೂ ಧೂಮಪಾನ ಮಾಡದೆ ಇದ್ದ ಕಾರಣದಿಂದಾಗಿ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು. ಆದರೆ ಈಗ ಧೂಮಪಾನ ಬಿಡುವುದರಿಂದ ಪ್ರಸಕ್ತ ಆರೋಗ್ಯ ಸಮಸ್ಯೆಯು ಉತ್ತಮವಾಗಬಹುದು ಮತ್ತು ಧೂಮಪಾನ ಸಂಬಂಧಿಯಾಗಿ ಉಂಟಾಗುವಂತಹ ENTಸಮಸ್ಯೆಗಳನ್ನು ಇದು ಕಡಿಮೆ ಮಾಡಬಹುದು. ಧೂಮಪಾನ ಬಿಡುವುದರಿಂದ ನಿಮಗೆ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ನೀವು ಧೂಮಪಾನ ಬಿಟ್ಟರೆ ಆಗ ಅದರಿಂದ ನಿಮ್ಮ ಆರೋಗ್ಯವು ತುಂಬಾ ಸುಧಾರಣೆ ಆಗುವುದು ಮತ್ತು ಅನಾರೋಗ್ಯಕ್ಕೆ ಒಳಗಾಗುವಂತಹ ಸಾಧ್ಯತೆಗಳು ತುಂಬಾ ಕಡಿಮೆ ಆಗುವುದು. ಧೂಮಪಾನ ಬಿಡುವುದಕ್ಕೆ ಯಾವತ್ತೂ ವಿಳಂಬವೆನ್ನುವುದು ಇಲ್ಲ. ತಂಬಾಕಿನ ಹೊಗೆಗೆ ಯಾವುದೇ ರೀತಿಯ ಸುರಕ್ಷಿತ ಮಾನದಂಡ ಎನ್ನುವುದು ಇಲ್ಲ ಎಂದು ನೀವು ಅರ್ಥ ಮಾಡಿಕೊಳ್ಳಬೇಕು. ಅನುವಂಶೀಯತೆ ಮತ್ತು ಇತರ ಕೆಲವೊಂದು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಆಗ ಕೆಲವರಿಗೆ ಸ್ವಲ್ಪ ಸಮಯ ಧೂಮಪಾನ ಮಾಡಿದರೆ ಅದರಿಂದ ಆರೋಗ್ಯ ಸಮಸ್ಯೆಗಳು ಬೇಗನೆ ಕಾಣಿಸಿಕೊಳ್ಳುವುದು.

ಆದಷ್ಟು ತಾಜ ಹಣ್ಣಿನ ರಸಗಳು

ಆದಷ್ಟು ತಾಜ ಹಣ್ಣಿನ ರಸಗಳು

ಪ್ರಾಕೃತಿಕವಾದ ತಾಜ ಹಣ್ಣಿನ ರಸಗಳು ನಿಮ್ಮ ದೇಹವನ್ನು ಟಾಕ್ಸಿನ್‍ಗಳಿಂದ ಮುಕ್ತಗೊಳಿಸಲು ಬೇಕಾದ ಮೂಲಭೂತ ಅಂಶ ಇದಾಗಿದೆ. ಸಾಧ್ಯವಾದಷ್ಟು ತಾಜಾ ಹಣ್ಣಿನ ರಸಗಳನ್ನು ಸೇವಿಸಿ. ಯಾವಾಗ ನೀವು ಸಿಗರೇಟ್ ಸೇವಿಸಬೇಕೆಂದು ಬಯಸುತ್ತೀರೋ, ಆಗ ಮನಸ್ಸನ್ನು ಅದರಿಂದ ವಿಮುಖಗೊಳಿಸಿ. ಕಾರ್ಬೋನೇಟ್ ಮಾಡಲಾದ ಪಾನೀಯಗಳನ್ನು ಸೇವಿಸಬೇಡಿ. ಏಕೆಂದರೆ ಇವುಗಳು ನಿಮ್ಮ ದೇಹಕ್ಕೆ ಮತ್ತಷ್ಟು ಟಾಕ್ಸಿನ್‍ಗಳನ್ನು ಸೇರ್ಪಡೆಗೊಳಿಸಬಹುದು. ಇದರ ಜೊತೆಗೆ ನಿರಂತರ ವ್ಯಾಯಾಮವು ಸಹ ನಿಮ್ಮ ಧೂಮಪಾನ ಬಿಡುವ ನಿರ್ಧಾರಕ್ಕೆ ಸಹಾಯ ಮಾಡಬಲ್ಲವು.

ಲೈಕೋರೈಸ್

ಲೈಕೋರೈಸ್

ಧೂಮಪಾನವನ್ನು ತೊರೆಯಲು ಸಹಾಯ ಮಾಡುವ ಅತ್ಯಂತ ಪ್ರಸಿದ್ಧ ನೈಸರ್ಗಿಕ ಮನೆ ಪರಿಹಾರಗಳಲ್ಲಿ ಲೈಕೋರೈಸ್ ಸಹ ಒಂದು. ಧೂಮಪಾನ ಮಾಡಬೇಕೆನಿಸದಾಗ ಸಣ್ಣ ತುಂಡು ಲೈಕೋರೈಸ್ ತಿಂದರೆ ಸಿಗರೇಟ್ ಸೇದುವ ಬಯಕೆಯು ಹೋಗುತ್ತದೆ. ಜೊತೆಗೆ ಜೀರ್ಣಾಂಗ ವ್ಯವಸ್ಥೆಗೆ ಸಹಕರಿಸುತ್ತದೆ.

ಜಿನ್ಸೆಂಗ್

ಜಿನ್ಸೆಂಗ್

ಒಂದು ವರದಿಯ ಪ್ರಕಾರ ಜಿನ್ಸೆಂಗ್ ಎಂಬ ಶುಂಠಿಯಂತಹ ಗಡ್ಡೆಯ ರಸದ ಸೇವನೆಯಿಂದ ಡೋಪಮೈನ್ ಎಂಬ ನರಪ್ರಚೋದಕ ಹಾರ್ಮೋನೊಂದು ಬಿಡುಗಡೆಯಾಗುತ್ತದೆ. ಇದು ಸಿಗರೇಟು ಸೇದಿದಾಗ ಸಿಗುವಂತಹ ಪರಿಣಾಮವನ್ನೇ ನೀಡುವ ಕಾರಣ ಸಿಗರೇಟು ಸೇದುವ ಬಯಕೆಯುಂಟಾಗುವುದಿಲ್ಲ. ಇದು ಧೂಮಪಾನ ತ್ಯಜಿಸುವವರಿಗೆ ವರದಾನವಾಗಿದೆ. ನಿಯಮಿತವಾದ ಸೇವನೆಯಿಂದ ದಿನವೂ ಕೊಂಚಕೊಂಚವಾಗಿ ಸಿಗರೇಟಿನ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬಂದು ಕೊನೆಗೊಂದು ದಿನ ನೀವು ನಿಜವಾಗಿಯೂ ಸಿಗರೇಟಿಲ್ಲದೇ ದಿನವನ್ನು ಯಶಸ್ವಿಯಾಗಿ ಕಳೆಯಲು ಸಿದ್ಧರಿರುತ್ತೀರಿ. ಈ ದಿನ ಶೀಘ್ರವೇ ಬರಲು ಜಿನ್ಸೆಂಗ್ ನೆರವಾಗುತ್ತದೆ.

English summary

Ear, Nose, and Throat Problems Caused by Smoking

According to the Centers for Disease Control and Prevention (CDC), approximately 45.3 million adults within the United States smoke cigarettes. Statistics from 2000-2004 show that about 20% of deaths each year are related to tobacco use. That is about 440,000 deaths each year. Aside from deaths, there are an additional 8.5 million people that suffer from smoking-related chronic illnesses. As a result, the annual healthcare-related costs approximate $193 billion dollars in the United States alone.
Story first published: Wednesday, February 27, 2019, 16:46 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X