For Quick Alerts
ALLOW NOTIFICATIONS  
For Daily Alerts

ಬಾಯಿಯ ಹುಣ್ಣೇ? ತುಳಸಿ ಎಲೆಗಳನ್ನು ಜಗಿಯಿರಿ-ಕೂಡಲೇ ಕಡಿಮೆ ಆಗುತ್ತದೆ

|

ಹೋಲಿ ಬಾಸಿಲ್ ಎಂಬ ಹೆಸರಿನಿಂದ ಕರೆಯಲ್ಪಡುವ ತುಳಸಿ ಎಲೆಗಳು ಹಲವಾರು ಅದ್ಭುತ ಆರೋಗ್ಯವೃದ್ದಿ ಗುಣಗಳನ್ನು ಹೊಂದಿದ್ದು ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಈ ಗುಣಗಳನ್ನು ಭಾರತದ ಪುರಾತನ ವೈದ್ಯಪದ್ದತಿಯಾದ ಆಯುರ್ವೇದ ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದು ಹಲವಾರು ಅನಾರೋಗ್ಯಗಳಿಗೆ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ.

ಭಾರತದಲ್ಲಿ ತುಳಸಿಗೆ ಕೇವಲ ವೈದ್ಯಕೀಯ ಮೂಲಿಕೆಗಿಂತಲೂ ಧಾರ್ಮಿಕ ಮಹತ್ವವೇ ಹೆಚ್ಚಿದೆ. ಈ ಗಿಡವನ್ನು ಮನೆಯಂಗಳದಲ್ಲಿ ನೆಟ್ಟು ಪೂಜಿಸಲಾಗುತ್ತದೆ. ತುಳಸಿಯಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಫೈಟೋನ್ಯೂಟ್ರಿಯೆಂಟುಗಳು ಹಾಗೂ ಅವಶ್ಯಕ ತೈಲಗಳು ಸಮೃದ್ಧವಾಗಿವೆ ಹಾಗೂ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹವನ್ನು ಫ್ರೀರ್‍ಯಾಡಿಕಲ್ಎಂ ಬ ಹಾನಿಕಾರಕ ಕಣಗಳಿಂದ ರಕ್ಷಣೆ ಒದಗಿಸುತ್ತದೆ.

ತುಳಸಿಯ ಪ್ರಯೋಜನಗಳ ಪಟ್ಟಿ ಅಗಣಿತವಾಗಿದೆ

ತುಳಸಿಯ ಪ್ರಯೋಜನಗಳ ಪಟ್ಟಿ ಅಗಣಿತವಾಗಿದೆ

ತುಳಸಿಯಿಂದ ದೇಹಕ್ಕೆ ಎಷ್ಟು ಬಗೆಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ಪಟ್ಟಿ ಮಾಡಿದರೆ ದೊಡ್ಡ ಪಟ್ಟಿಯೇ ತಯಾರಾಗಬಹುದು. ಅಧಿಕ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುವುದು, ಹೃದಯದ ಆರೋಗ್ಯವನ್ನು ಉತ್ತಮ ಗೊಳಿಸುವುದು, ಕೊಲೆಸ್ಟ್ರಾಲ್ ಮಟ್ಟಗಳನ್ನು ಸರಿಪಡಿಸುವುದು, ಅಧಿಕ ರಕ್ತದೊತ್ತಡವನ್ನು ಕಡಿಮೆ ಗೊಳಿಸುವುದು, ಉಸಿರಾಟದ ತೊಂದರೆಗಳನ್ನು ಸರಿಪಡಿಸುವುದು ಮೊದಲಾದವು ಇವುಗಳಲ್ಲಿ ಪ್ರಮುಖವಾಗಿವೆ. ತುಳಸಿ ಎಲೆ, ಜೇನು ಮತ್ತು ಶುಂಠಿಯನ್ನು ಸೇರಿಸಿ ಕುದಿಸಿದ ನೀರನ್ನು ತಣಿಸಿ ಸೋಸಿ ಕುಡಿಯುವ ಮೂಲಕ ಬ್ರಾಂಖೈಟಿಸ್, ಅಸ್ತಮಾ, ಇನ್ಫ್ಲೂಯೆಂಜಾ, ಕೆಮ್ಮು ಮತ್ತು ಶೀತ ಮೊದಲಾದವುಗಳಿಂದ ಶಮನ ದೊರಕುತ್ತದೆ. ತುಳಸಿ ಎಲೆಗಳನ್ನು ಕೊಂಚ ಲವಂಗ ಮತ್ತು ಉಪ್ಪಿನ ಜೊತೆಗೆ ಕುದಿಸಿ ತಣಿಸಿ ಸೋಸಿ ಕುಡಿಯುವ ಮೂಲಕ ಇನ್ಫ್ಲೂಯೆಂಜಾ ಜ್ವರದಿಂದ ತಕ್ಷಣವೇ ಶಮನ ದೊರಕುತ್ತದೆ. ಅಲ್ಲದೇ ಕರುಳಿನ ಹುಣ್ಣು ಅಥವಾ ಅಲ್ಸರ್ ಅನ್ನು ಗುಣಪಡಿಸಲು ತುಳಸಿ ಎಲೆಗಳು ಅತ್ಯುತ್ತಮವಾಗಿವೆ.

ಬಾಯಿಯ ಹುಣ್ಣುಗಳನ್ನು ಗುಣಪಡಿಸಲು ತುಳಸಿಯ ಬಳಕೆ

ಬಾಯಿಯ ಹುಣ್ಣುಗಳನ್ನು ಗುಣಪಡಿಸಲು ತುಳಸಿಯ ಬಳಕೆ

ಈ ಬಗ್ಗೆ ಹಲವಾರು ಸಂಶೋಧನೆಗಳನ್ನು ನಡೆಸಲಾಗಿದೆ ಹಾಗೂ ಕರುಳಿನ ಹುಣ್ಣುಗಳನ್ನು ಗುಣಪಡಿಸಲು ತುಳಸಿ ಎಲೆಗಳು ಅತ್ಯುತ್ತಮ ಪರಿಹಾರ ಎಂದು ಕಂಡುಕೊಳ್ಳಲಾಗಿದೆ. ಕೇವಲ ಕರುಳಿನ ಹುಣ್ಣು ಮಾತ್ರವಲ್ಲ, ಬಾಯಿಯಲ್ಲಿ ಕಂಡುಬರುವ ಹುಣ್ಣುಗಳನ್ನೂ ಗುಣಪಡಿಸಲು ತುಳಸಿ ಸಮರ್ಥವಾಗಿದೆ. ಬಾಯಿಯಲ್ಲಿ ಹುಣ್ಣುಗಳಾಗಲು ಕಾರಣವೆಂದರೆ ಮಾನಸಿಕ ಒತ್ತಡ, ಆಮ್ಲೀಯ ಮತ್ತು ಮಸಾಲೆಯುಕ್ತ ಆಹಾರಗಳ ಸೇವನೆ, ಬಾಯಿಯ ಒಳಗೆ ಸತತವಾಗಿ ಗಾಯಗಳಾಗುತ್ತಿರುವುದು (inner buccal epithelium), ಬಾಯಿಯ ಸ್ವಚ್ಛತೆಯ ಕಾಳಜಿಯ ಕೊರತೆ ಅಥವಾ ಹಲ್ಲು-ಒಸಡುಗಳನ್ನು ರಭಸದಲ್ಲಿ ಸ್ವಚ್ಛಗೊಳಿಸುವುದು ಮೊದಲಾದವು.

Most Read: ಬಾಯಿಹುಣ್ಣಿಗೆ ಸರಳ ಮನೆಮದ್ದುಗಳು-ಒಂದೇ ದಿನದಲ್ಲಿ ಪರಿಹಾರ

ಬಾಯಿಯ ಹುಣ್ಣುಗಳನ್ನು ಗುಣಪಡಿಸಲು ತುಳಸಿಯ ಬಳಕೆ

ಬಾಯಿಯ ಹುಣ್ಣುಗಳನ್ನು ಗುಣಪಡಿಸಲು ತುಳಸಿಯ ಬಳಕೆ

ತುಳಸಿ adaptogen ಅಥವಾ ಮಾನಸಿಕ ಒತ್ತಡಕ್ಕೆ ದೇಹ ಒಗ್ಗಿಕೊಳ್ಳುವಂತೆ ನೆರವಾಗುವ ಔಷಧಿಯಾಗಿದೆ. ಈ ಗುಣ ಹುಣ್ಣುಗಳನ್ನು ಗುಣಪಡಿಸಲು ನೆರವಾಗುತ್ತದೆ. ತುಳಸಿಯಲ್ಲಿರುವ ಬ್ಯಾಕ್ಟೀರಿಯಾನಿವಾರಕ ಗುಣ ಇದನ್ನೊಂದು ಅತ್ಯುತ್ತಮ ಕ್ರಿಮಿನಾಶಕವಾಗುವಂತೆ ಮಾಡುತ್ತದೆ ಹಾಗೂ ಬಾಯಿಯಲ್ಲಿರುವ ಶೇಖಡಾ 99ರಷ್ಟು ಬ್ಯಾಕ್ಟೀರಿಯಾಗಳನ್ನು ಕೊಂದು ಹುಣ್ಣುಗಳ ತೊಂದರೆಯಿಂದ ಶಮನ ಒದಗಿಸುತದೆ. ಅಲ್ಲದೇ ಬಾಯಿಯ ದುರ್ವಾಸನೆ. ಹಲ್ಲುಗಳ ನಡುವೆ ಉತ್ಪತ್ತಿಯಾದ ಕೂಳೆ ಮೊದಲಾದವುಗಳನ್ನು ನಿವಾರಿಸಿ ಬಾಯಿಯ ಸ್ವಚ್ಛತೆಯನ್ನು ಕಾಪಾಡುತ್ತದೆ. ಅಲ್ಲದೇ ಹಲ್ಲುಗಳನ್ನು ಸ್ವಚ್ಛಗೊಳಿಸಿ ಕುಳಿಗಳಾಗದಂತೆ ರಕ್ಷಿಸುತ್ತದೆ.

ತುಳಸಿಯನ್ನು ಬಳಸುವ ವಿಧಾನ

ತುಳಸಿಯನ್ನು ಬಳಸುವ ವಿಧಾನ

ಕೆಲವಾರು ತುಳಸಿ ಎಲೆಗಳನ್ನು ಹಸಿಯಾಗಿದ್ದಂತೆಯೇ ಬಾಯಿಯಲ್ಲಿಯೇ ಐದಾರು ನಿಮಿಷಗಳವರೆಗೆ ಸತತವಾಗಿ ಜಗಿಯುತ್ತಿರಬೇಕು. ಬಳಿಕ ಕೊಂಚ ನೀರಿನೊಂದಿಗೆ ನುಂಗಬೇಕು. ಈ ವಿಧಾನವನ್ನು ದಿನಕ್ಕೆ ಮೂರು ಬಾರಿ ಪುನರಾವರ್ತಿಸಿ. ಈ ವಿಧಾನದಿಂದ ಬಾಯಿಯಲ್ಲಿರುವ ಹುಣ್ಣುಗಳು ಶೀಘ್ರವೇ ಗುಣವಾಗುತ್ತವೆ ಹಾಗೂ ಮತ್ತೆ ಬರದಂತೆ ರಕ್ಷಣೆ ಪಡೆಯಬಹುದು. ಇತ್ತೀಚಿನ ಸಂಶೋಧನೆಗಳ ಮೂಲಕ ತುಳಸಿ ಎಲೆಗಳನ್ನು ಜಗಿದವರ ಬಾಯಿಯ ಆಮ್ಲೀಯ ಕ್ಷಾರೀಯ ಮಟ್ಟ ಅಥವಾ ಪಿ ಎಚ್ ಮಟ್ಟ ತಕ್ಷಣವೇ ಹೆಚ್ಚಿರುವುದನ್ನು ಕಂಡುಕೊಳ್ಳಲಾಗಿದೆ. ತುಳಸಿ ಎಳೆಗಳನ್ನು ಹಸಿಯಾಗಿ ಜಗಿಯುವ ಮೂಲಕ ಬಾಯಿಯಲ್ಲಿರುವ ಆಮ್ಲೀಯ ವಾತಾವರಣ ಕಡಿಇಎಯಾಗುತ್ತದೆ ಹಾಗೂ ಬಾಯಿಯ ಜೊಲ್ಲು ಸೂಕ್ತ ಮಟ್ಟದ ಪಿ ಎಚ್ ಮಟ್ಟವನ್ನು ಪಡೆಯಲು ನೆರವಾಗುತ್ತದೆ. ಈ ಮೂಲಕ ಆಮ್ಲೀಯತೆಯಿಂದ ಎದುರಾಗುವ ಹುಣ್ಣುಗಳು ಹಾಗೂ ಇತರ ಬಗೆಯ ಘಾಸಿಯಾಗುವುದನ್ನು ತಪ್ಪಿಸಬಹುದು ಮತ್ತು ಹುಣ್ಣುಗಳಾಗಿದ್ದರೆ ಇವನ್ನು ನೈಸರ್ಗಿಕ ವಿಧಾನದಲ್ಲಿಯೇ ಗುಣಪಡಿಸಬಹುದು.

English summary

Chew On Tulsi Leaves To Cure Ulcers

Tulsi, also known as Holy Basil, is full of benefits and health-promoting properties. The ancient medicine system, of India called Ayurveda, considers it as a tonic for better health and fitness. In India, Tulsi is more than just a plant. People worship the plant for its mythological references and importance for healthy well-being. Tulsi is abundant in vitamin C, vitamin A, phytonu trients and essential oils, which makes it an excellent anti-oxidant and helps to protect the body from nearly all the damages caused by free radicals
X