For Quick Alerts
ALLOW NOTIFICATIONS  
For Daily Alerts

ಎಚ್ಚರ ಅಪ್ಪಿತಪ್ಪಿಯೂ ಸೆಕ್ಸ್ ವೇಳೆ ಇಂತಹ ಕೆಲವು ಲ್ಯುಬ್ರಿಕೆಂಟ್‌ಗಳನ್ನು ಬಳಸಬೇಡಿ

|

ವೈವಾಹಿಕ ಜೀವನದಲ್ಲಿ ಲೈಂಗಿಕತೆಯು ಅಗತ್ಯವಾಗಿರುವುದು. ಲೈಂಗಿಕ ಜೀವನ ಸರಿಯಾಗಿ ಇರದೆ ಇದ್ದರೆ ಆಗ ಸಂಬಂಧದಲ್ಲಿ ಬಿರುಕು ಮತ್ತು ಇತರ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಲೈಂಗಿಕವಾಗಿ ಸಂತೃಪ್ತರಾಗಿರುವ ದಂಪತಿಯು ಖಂಡಿತವಾಗಿಯೂ ವೈವಾಹಿಕ ಜೀವನದಲ್ಲಿ ತುಂಬಾ ಸುಖವಾಗಿರುವರು. ಆದರೆ ಕೆಲವೊಂದು ಸಲ ಸೆಕ್ಸ್ ವೇಳೆ ಸಮಸ್ಯೆಗಳು ಕಾಣಿಸಿಕೊಳ್ಳುವುದು.

ಇದರ ನಿವಾರಣೆಗೆ ಹಲವಾರು ವಿಧಾನಗಳು ಇವೆ. ಸೆಕ್ಸ್ ವೇಳೆ ದಂಪತಿಯು ಲ್ಯುಬ್ರಿಕೆಂಟ್ ನ್ನು ಬಳಕೆ ಮಾಡುವರು. ಇದರಿಂದ ನೋವು ಕಡಿಮೆಯಾಗುವುದು ಎನ್ನುವ ಮಾತಿದೆ. ಲೈಂಗಿಕ ಜೀವನವನ್ನು ಸುಧಾರಣೆ ಮಾಡುತ್ತಲಿದ್ದರೆ ಆಗ ಅದರಿಂದ ಮತ್ತಷ್ಟು ಶಕ್ತಿಯು ದಂಪತಿಯ ಜೀವನಕ್ಕೆ ಸಿಗುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಕೆಲವು ಮಂದಿ ಲ್ಯುಬ್ರಿಕೆಂಟ್ ಬದಲಿಗೆ ಇನ್ನಿತರ ಕೆಲವು ಸಾಮಗ್ರಿಗಳನ್ನು ಬಳಸಿಕೊಳ್ಳುವರು. ಆದರೆ ಇದು ತುಂಬಾ ಅಪಾಯಕಾರಿ ಆಗಬಹುದು. ಆ ಸಾಮಗ್ರಿಗಳು ಯಾವುದು ಎಂದು ತಿಳಿಯಿರಿ.

ಹಾಲಿನ ಕೆನೆ

ಹಾಲಿನ ಕೆನೆ

ತುಂಬಾ ರುಚಿಕರವಾಗಿರುವಂತಹ ಹಾಲಿನ ಕೆನೆಯನ್ನು ನೀವು ಸೆಕ್ಸ್ ವೇಳೆ ಲ್ಯುಬ್ರಿಕೆಂಟ್ ಆಗಿ ಬಳಕೆ ಮಾಡಿಕೊಳ್ಳಬಹುದು ಮತ್ತು ಇದರಿಂದ ನಿಮಗೆ ಹಾಸಿಗೆಯಲ್ಲಿ ಹೆಚ್ಚಿನ ಖುಷಿ ಕೂಡ ಸಿಗಬಹುದು. ಅದಾಗ್ಯೂ, ಹಾಲಿನ ಕೆನೆಯಂತಹ ಸಾಮಗ್ರಿಯು ಹೆಚ್ಚಿನ ಮಟ್ಟದ ಸಕ್ಕರೆಯಂಶವನ್ನು ಹೊಂದಿದೆ ಮತ್ತು ಇದು ಯೋನಿಯ ನೈಸರ್ಗಿಕ ಪಿಎಚ್ ಮಟ್ಟದ ಮೇಲೆ ಪರಿಣಾಮ ಬೀರಬಹುದು. ಇದು ಸೋಂಕಿಗೂ ಕಾರಣವಾಗಬಹುದು. ಯಾವುದೇ ರೀತಿಯ ಸೀರಪ್ ಅಥವಾ ಸಿಹಿ ಸಾಸ್ ನಿಂದಲೂ ನೀವು ದೂರವಿರಬೇಕು ಎಂದು ಸಲಹೆ ಮಾಡಲಾಗುತ್ತದೆ.

ಲೋಷನ್

ಲೋಷನ್

ಲೋಷನ್ ಮತ್ತು ಕ್ರೀಮ್ ನ್ನು ಕೆಲವೊಂದು ಸಲ ಲ್ಯುಬ್ರಿಕೆಂಟ್‌ಗೆ ಪರ್ಯಾಯವಾಗಿ ಬಳಕೆ ಮಾಡಲಾಗುತ್ತದೆ. ಆದರೆ ಇದನ್ನು ಪ್ರಯತ್ನಿಸುವ ಮೊದಲು ತುಂಬಾನೇ ಎಚ್ಚರಿಕೆ ವಹಿಸಬೇಕು. ಪ್ರತಿನಿತ್ಯ ಬಳಕೆ ಮಾಡುವಂತಹ ಲೋಷನ್ ನಲ್ಲಿ ಪ್ರಬಲವಾದ ಬಣ್ಣ ಮತ್ತು ಸುಗಂಧವು ಇರುವುದು. ಇದು ಗುಪ್ತಾಂಗದ ಸುತ್ತಲಿನ ಸೂಕ್ಷ್ಮವಾದ ಚರ್ಮಕ್ಕೆ ಹೊಂದಿಕೊಳ್ಳದೆ ಇರಬಹುದು. ಇದರಲ್ಲಿ ಇರುವಂತಹ ಪರಬೆನ್ಸ್ ಎನ್ನುವ ಅಂಶವಿದೆ. ಇದು ಹಾರ್ಮೋನು ಅಸಮತೋಲನ ಉಂಟು ಮಾಡಬಹುದು.

ಆಲಿವ್ ತೈಲ

ಆಲಿವ್ ತೈಲ

ನೀವು ಮನೆಯಲ್ಲಿ ಒಂದು ಬಾಟಲಿ ಆಲಿವ್ ತೈಲವನ್ನು ಇಟ್ಟುಕೊಳ್ಳಿ. ಇದು ಒಳ್ಳೆಯ ಕ್ರಮ. ಆದರೆ ಇದನ್ನು ನೀವು ಮಲಗುವ ಕೋಣೆಗೆ ತೆಗೆದುಕೊಂಡು ಹೋಗಬೇಡಿ. ಆಲಿವ್ ತೈಲವು ಚರ್ಮಕ್ಕೆ ಕಾಂತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಆದರೆ ಈ ಎಣ್ಣೆಯಲ್ಲಿ ಉನ್ನತ ಮಟ್ಟದ ಲ್ಯೂಬ್ರಿಕೆಂಟ್ ಇದ್ದು, ಇದು ಕಾಂಡೋಮ್ ನಲ್ಲಿ ಇರುವಂತಹ ಲಾಟೆಕ್ಸ್ ನ್ನು ವಿಘಟಿಸಬಹುದು.

ಪೆಟ್ರೋಲಿಯಂ ಜೆಲ್

ಪೆಟ್ರೋಲಿಯಂ ಜೆಲ್

ಪೆಟ್ರೋಲಿಯಂ ಜೆಲ್ ವಿವಿಧ ರೀತಿಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತದೆ. ಆದರೆ ಇದನ್ನು ನೀವು ಜನನೇಂದ್ರೀಯದ ಭಾಗಕ್ಕೆ ಬಳಸಿಕೊಂಡರೆ ಆಗ ಇದು ಬ್ಯಾಕ್ಟೀರಿಯಾ ನೆಲೆ ನಿಲ್ಲಲು ದಾರಿ ಮಾಡಿಕೊಡುವುದು ಮತ್ತು ಇತರ ಕೀಟಾಣುಗಳು ಕೂಡ ನೆಲೆ ನಿಲ್ಲುವುದು. ಇದನ್ನು ತೊಳೆಯಲು ತುಂಬಾ ಕಷ್ಟವಾಗಬಹುದು.

ಮಗುವಿನ ಎಣ್ಣೆ

ಮಗುವಿನ ಎಣ್ಣೆ

ಇತರ ತೈಲಗಳಿಗೆ ಹೋಲಿಕೆ ಮಾಡಿದರೆ ಮಕ್ಕಳ ಎಣ್ಣೆಯು ತುಂಬಾ ಲಘುವಾಗಿರುವುದು ಮತ್ತು ಇದನ್ನು ಲ್ಯುಬ್ರಿಕೆಂಟ್ ಆಗಿ ಬಳಕೆ ಮಾಡುವುದು ಒಳ್ಳೆಯ ಆಯ್ಕೆಯಲ್ಲ. ಯೋನಿಗೆ ನೀವು ಮಗುವಿನ ಎಣ್ಣೆಯನ್ನು ಬಳಕೆ ಮಾಡಿದರೆ ಆಗ ಅಲ್ಲಿ ಶಿಲೀಂಧ್ರ ಸೋಂಕು ಉಂಟಾಗುವಂತಹ ಸಾಧ್ಯತೆಯು ಹೆಚ್ಚಾಗುವುದು.

ಬೆಣ್ಣೆ

ಬೆಣ್ಣೆ

ಮಲಗುವ ಕೋಣೆಯಲ್ಲಿ ಬೆಣ್ಣೆಯನ್ನು ಉಪಯೋಗಿಸುವುದು ಆರೋಗ್ಯಕಾರಿ ಬೆಳವಣಿಗೆ ಅಲ್ಲ. ಇದರಲ್ಲಿ ಪ್ರೋಟೀನ್ ಅಂಶವಿದೆ ಮತ್ತು ಅದೇ ರೀತಿಯಾಗಿ ಪ್ರಾಣಿಗಳ ಕೊಬ್ಬು ಇದೆ. ಇದನ್ನು ಬಳಕೆ ಮಾಡುವುದು ಚರ್ಮಕ್ಕೆ ಒಳ್ಳೆಯದಲ್ಲ. ಇದರಿಂದ ಇದು ಸರಿಯಾದ ಆಯ್ಕೆಯಲ್ಲ ಎಂದು ಪರಿಗಣಿಸಲಾಗಿದೆ.

ಲಿಕ್ವಿಡ್ ಸೋಪ್

ಲಿಕ್ವಿಡ್ ಸೋಪ್

ಯಾವುದೇ ರೀತಿಯ ಲಿಕ್ವಿಡ್ ಸೋಪ್, ವಾಶ್, ಸ್ಯಾನಿಟೈಸರ್ ನ್ನು ಲ್ಯುಬ್ರಿಕೆಂಟ್ ಎಂದು ಪರಿಗಣಿಸಲಾಗಿದೆ ಮತ್ತು ಇದನ್ನು ಸ್ವಚ್ಚಗೊಳಿಸುವ ಸಲುವಾಗಿ ಬಳಸಲಾಗುತ್ತದೆ. ಆದರೆ ಇದನ್ನು ನೀವು ಯಾವತ್ತೂ ಜನನೇಂದ್ರೀಯದ ಭಾಗಕ್ಕೆ ಬಳಕೆ ಮಾಡಬೇಡಿ. ಈ ರೀತಿಯ ಉತ್ಪನ್ನಗಳನ್ನು ಬಳಕೆ ಮಾಡುವ ಕಾರಣದಿಂದಾಗಿ ದೇಹದಲ್ಲಿನ ಪಿಎಚ್ ಮಟ್ಟಕ್ಕೆ ಹಾನಿಯಾಗುವುದು ಮತ್ತು ಇದು ಚರ್ಮಕ್ಕೆ ಹಾನಿಯುಂಟು ಮಾಡುವುದು. ಇದು ಯಾವತ್ತೂ ಒಳ್ಳೆಯದಲ್ಲ.

ತಣ್ಣಗಾಗಿಸುವಂತಹ ಲ್ಯುಬ್ರಿಕೆಂಟ್ಸ್

ತಣ್ಣಗಾಗಿಸುವಂತಹ ಲ್ಯುಬ್ರಿಕೆಂಟ್ಸ್

ಲೈಂಗಿಕ ಚಟುವಟಿಕೆ ವೇಳೆ ತಂಪನ್ನು ಉಂಟು ಮಾಡುವಂತಹ ಲ್ಯುಬ್ರಿಕೆಂಟ್‌ಗಳು ಸ್ವಲ್ಪ ಹೆಚ್ಚಿನ ಖುಷಿ ನೀಡುವುದು. ಆದರೆ ಇದರಲ್ಲಿ ಪುದೀನಾ ಮತ್ತು ಕೆಲವೊಂದು ಗಿಡಮೂಲಿಕೆಗಳು ಇವೆ. ಇದು ಸೂಕ್ಷ್ಮ ಚರ್ಮಕ್ಕೆ ತುಂಬಾ ಹಾನಿಯುಂಟು ಮಾಡುವುದು ಮತ್ತು ಇದರ ಪರಿಣಾಮ ನಿಮ್ಮ ಗುಪ್ತಾಂಗದ ಮೇಲೆ ಆಗಬಹುದು. ಇದರಿಂದಾಗಿ ನೀವು ಇಂತಹ ಲ್ಯುಬ್ರಿಕೆಂಟ್ ಗಳನ್ನು ಬಳಕೆ ಮಾಡಲೇ ಬಾರದು. ಇದು ನಿಮ್ಮ ಜನನೇಂದ್ರೀಯ ಗುಪ್ತಾಂಗದ ಮೇಲೆ ಪರಿಣಾಮ ಬೀರಬಹುದು.

English summary

Aware! Never use these things as lube

Healthy and happy sexual life is a key determinant. There is no such thing as good, bad or too much sex but you can always work upon improving your performance inside the bedroom.This heavy duty food item has been used to indulge in your fantasies and add a little excitement in the bedroom. However, items like whipped cream, which contain a lot of sugar in them can disturb the vagina’s natural pH levels, ultimately leading to infections. This also means you stay off any kind of syrup or sweet sauce as well.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more