For Quick Alerts
ALLOW NOTIFICATIONS  
For Daily Alerts

ವೈದ್ಯರೇ ಹೇಳುತ್ತಾರೆ ಹಸ್ತಮೈಥುನ ಮಾಡಿಕೊಳ್ಳುವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ನಿಯಂತ್ರಿಸಬಹುದಂತೆ!

|

ಹಸ್ತಮೈಥುನ ಅಥವಾ ಸ್ವರತಿ ಎಂದರೆ ಅತಿ ಗೌಪ್ಯವಾಗಿ ನಡೆಸಬೇಕಾದ ಕಾರ್ಯ ಎಂದೇ ಪರಿಗಣಿಸಲ್ಪಟ್ಟಿದೆ. ವಿಶೇಷವಾಗಿ ಮಹಿಳೆಯರು ಈ ಬಗ್ಗೆ ಹೆಚ್ಚಿನ ಗೌಪ್ಯತೆ ಕಾಪಾಡಿಕೊಳ್ಳುತ್ತಾರೆ. ಏಕೆಂದರೆ ಸ್ವರತಿ ಪಡೆದುಕೊಳ್ಳುವ ಬಗ್ಗೆ ಇತರರು ಅರಿತರೆ ಆಕೆಯ ಬಗ್ಗೆ ಇರುವ ಭಾವನೆಯನ್ನು ಬದಲಿಸಿಕೊಳ್ಳಬಹುದು.

ಆದರೆ ಇದು ಅತಿ ನೈಸರ್ಗಿಕ ದೈಹಿಕ ಅಗತ್ಯವಾಗಿದ್ದು ಸ್ವರತಿಯಿಂದ ಸುಖಪಡೆದುಕೊಂಡರೆ ತಪ್ಪೇನು? ವಾಸ್ತವವಾಗಿ ಇದೊಂದು ನೈಸರ್ಗಿಕ ಅಗತ್ಯತೆಯಾಗಿದ್ದು ಇದನ್ನು ಪೂರೈಸಿಕೊಳ್ಳಬೇಕಾದುದು ನಿಸರ್ಗನಿಯಮವೇ ಆಗಿದ್ದು ಇದನ್ನು ತಡೆಹಿಡಿದರೆ ನಿಸರ್ಗಕ್ಕೆ ವಿರುದ್ಧವಾಗಿ ಹೋದಂತಾಗುತ್ತದೆ. ವೈದ್ಯಕೀಯವಾಗಿಯೂ ಇದು ಸರಿ ಎಂದು ಸಾಬೀತುಪಟ್ಟಿದೆ. ಇದೇ ಕಾರಣಕ್ಕೆ, ವೈದ್ಯರೇ ಸ್ವರತಿ ನಿರ್ವಹಿಸಿಕೊಳ್ಳುವಂತೆ ಸಲಹೆ ಮಾಡುತ್ತಾರೆ. ಏಕೆಂದರೆ ಇದು ಅತ್ಯಂತ ಆರೋಗ್ಯಕರವಾಗಿದ್ದು ಪ್ರಾಸ್ಟೇಟ್ ಕ್ಯಾನ್ಸರ್ ನಿಯಂತ್ರಿಸುವುದರ ಜೊತೆಗೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಬನ್ನಿ, ಇವು ಯಾವುದು ಎಂಬುದನ್ನು ನೋಡೋಣ.

ಪ್ರಾಸ್ಟೇಟ್ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ

ಪ್ರಾಸ್ಟೇಟ್ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ

ಹೌದು, ಇದು ನಿಜ. ಆಸ್ಟ್ರೇಲಿಯಾದಲ್ಲಿ ಈ ಬಗ್ಗೆ ನಡೆಸಿದ ಸಂಶೋಧನೆಯ ಮೂಲಕ ವಾರದಲ್ಲಿ ಐದು ಬಾರಿಯಾದರೂ ಸ್ಖಲಿಸಿಕೊಳ್ಳುವ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಎದುರಾಗುವ ಸಾಧ್ಯತೆ ಉಳಿದವರಿಗಿಂತ ಮೂರು ಪಟ್ಟು ಕಡಿಮೆ ಎಂದು ಕಂಡುಕೊಳ್ಳಲಾಗಿದೆ. ಏಕೆಂದರೆ ಆಗಾಗ ಸ್ಖಲಿಸಿಕೊಳ್ಳುವ ಮೂಲಕ ದೇಹದಲ್ಲಿ ಸಂಗ್ರಹಗೊಂಡಿದ್ದ ವಿಷಕಾರಿ ಅಂಶವೂ ನಿವಾರಣೆಯಾಗುತ್ತದೆ.

Most Read: ಟೆಸ್ಟೋಸ್ಟೆರಾನ್- ವೀರ್ಯದ ಗುಣಮಟ್ಟ ಹೆಚ್ಚಿಸುವ ಶಿಶ್ನ ಸ್ನೇಹಿಯಾಗಿರುವ ಆಹಾರಗಳು

ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ.

ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ.

ಸ್ಖಲನಗೊಂಡಾಗ ದೇಹದಲ್ಲಿ ಬಿಡುಗಡೆಯಾಗುವ ಹಲವಾರು ರಸದೂತಗಳಲ್ಲಿ ಕಾರ್ಟಿಸೋಲ್ ಎಂಬ ರಸದೂತ ಪ್ರಮುಖವಾಗಿದ್ದು ಮೆದುಳಿಗೆ ಮುದ ನೀಡಲು ಕಾರಣವಾಗಿದೆ. ಅಂತೆಯೇ ಇಡಿಯ ದೇಹದಲ್ಲಿ ಪಸರಿಸುವ ಈ ರಸದೂತ ರೋಗ ನಿರೋಧಕ ಶಕ್ತಿಯನ್ನು ಬಲಪಡುತ್ತದೆ ಹಾಗೂ ಮಾನಸಿಕ ಒತ್ತಡವನ್ನೂ ಕಡಿಮೆ ಮಾಡಿ ನಿರಾಳ ಭಾವನೆಯನ್ನು ಪಡೆಯಲು ಸಾಧ್ಯವಾಗುತ್ತದೆ.

ಮನೋಭಾವ ಉತ್ತಮಗೊಳ್ಳುತ್ತದೆ:

ಮನೋಭಾವ ಉತ್ತಮಗೊಳ್ಳುತ್ತದೆ:

ಸ್ಖಲನದ ಸಮಯದಲ್ಲಿ ದೇಹದಲ್ಲಿ ಬಿಡುಗಡೆಯಾಗುವ ಕೆಲವಾರು ರಸದೂತಗಳು ಮನಸ್ಸಿಗೆ ಮುದನೀಡುವ ನ್ಯೂರೋಕೆಮಿಕಲ್ಸ್ ಎಂಬ ರಸದೂತಗಳಾಗಿವೆ. ಇವುಗಳಲ್ಲಿ ಪ್ರಮುಖವಾದವು ಎಂದರೆ ಡೋಪಮೈನ್ ಮತ್ತು ಆಕ್ಸಿಟೋಸಿನ್. ಈ ಎರಡು ರಸದೂತಗಳು ರಕ್ತಕ್ಕೆ ಬಿಡುಗಡೆಯಾಗಿ ಮೆದುಳಿಗೆ ತಲುಪಿದಾಗ ಅತ್ಯಂತ ಅಪ್ಯಾಯಮಾನವಾದ ಭಾವನೆ ಲಭಿಸುತ್ತದೆ. ಈ ಭಾವನೆಯನ್ನೇ ಕೆಲವು ಮಾದಕ ಪದಾರ್ಥಗಳು ನೀಡುತ್ತವೆಯಾದರೂ ಇವು ಅತ್ಯಂತ ಅಪಾಯಕಾರಿಯಾಗಿವೆ. ಹಾಗಾಗಿ ಡೋಪಮೈನ್ ಅನ್ನು ಪಡೆದುಕೊಳ್ಳಲು ನಿಸರ್ಗ ಒದಗಿಸಿದ ಅತ್ಯಂತ ಸುರಕ್ಷಿತ ವಿಧಾನವೆಂದರೆ ಕಾಮಪರಾಕಾಷ್ಠೆ! ಇದನ್ನು ಸಂಗಾತಿಯ ಸಾನಿಧ್ಯದ ಹೊರತಾಗಿಯೂ ಪಡೆದುಕೊಳ್ಳಲು ಸ್ವರತಿಯೇ ಸೈ!

ನೋವನ್ನು ಮರೆಮಾಚುತ್ತದೆ

ನೋವನ್ನು ಮರೆಮಾಚುತ್ತದೆ

ಹೌದು, ಇದು ನಿಜ. ಆಗಾಗ ಕಾಡುವ ತಲೆನೋವು, ಮಾಸಿಕ ದಿನಗಳಲ್ಲಿ ಎದುರಾಗುವ ಸೆಡೆತ ಮೊದಲಾದ ಸಮಯದಲ್ಲಿ ಸ್ವರತಿ ನಡೆಸಿಕೊಳ್ಳುವ ಮೂಲಕ ಪಡೆಯಬಹುದಾದ ಮಾನಸಿಕ ಮುದ ಈ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ವೈದ್ಯಕೀಯ ಪದಗಳಲ್ಲಿ ಹೇಳಬೇಕೆಂದರೆ, ವಿಶೇಷವಾಗಿ ಮಹಿಳೆಯರು ಸ್ವರತಿಯಿಂದ ಭಾವಪರಾಕಾಷ್ಠೆಯನ್ನು ಪಡೆದ ಸಮಯದಲ್ಲಿ ಗರ್ಭಾಶಯ ಸಂಕುಚನಗೊಳ್ಳುತ್ತದೆ. ಈ ಸಂಕುಚನ ಮಾಸಿಕ ದಿನಗಳ ನೋವನ್ನು ಶಮನಗೊಳಿಸುತ್ತದೆ. ಆದರೆ ಈ ಬಗ್ಗೆ ನಡೆದ ಸಂಶೋಧನೆಗಳು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದರೂ, ನೋವನ್ನು ಮರೆಮಾಚಲು ಈ ನೈಸರ್ಗಿಕ ವಿಧಾನವಿರಬೇಕಾದರೆ ಅಪಾಯಕಾರಿ ಮಾತ್ರೆಗಳಿಗೆ ಏಕೆ ಶರಣಾಗಬೇಕು?

​ದೇಹದ ಇತರ ತೊಂದರೆಗಳು ನಿವಾರಣೆಯಾಗಲು ನೆರವಾಗುತ್ತದೆ

​ದೇಹದ ಇತರ ತೊಂದರೆಗಳು ನಿವಾರಣೆಯಾಗಲು ನೆರವಾಗುತ್ತದೆ

ಸ್ವರತಿಯ ಸಮಯದಲ್ಲಿ ದೇಹದ ಎಲ್ಲಾ ಭಾಗಗಳು ತಮ್ಮ ಪಾಲಿನ ಕೆಲಸವನ್ನು ಹೆಚ್ಚು ಕ್ಷಮತೆಯಿಂದ ನಿರ್ವಹಿಸುವ ಕಾರಣ ದೇಹದ ಯಾವುದೋ ಭಾಗದಲ್ಲಿ ತೊಂದರೆ ಇದ್ದರೆ ಆ ತೊಂದರೆ ಈ ಸಮಯದಲ್ಲಿ ಸ್ಪಷ್ಟವಾಗುತ್ತದೆ. ತೊಂದರೆ ಎಲ್ಲಿ ಇದೆ ಎಂದು ಗೊತ್ತಾದರೆ ಅರ್ಧ ಸಮಸ್ಯೆ ಪರಿಹಾರವಾದಂತೆ. ಈ ತೊಂದರೆಯನ್ನು ಆದಷ್ಟೂ ಬೇಗನೇ ಗುರುತಿಸಿ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಇದನ್ನು ಉಲ್ಬಣಗೊಳ್ಳದಂತೆ ತಡೆಯಬಹುದು ಹಾಗೂ ಆತ್ಯುತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Most Read: ದಿನಾಲೂ ವೀರ್ಯ ಹೊರಗಡೆ ಹಾಕಿದರೆ ಆರೋಗ್ಯಕ್ಕೆ ಸಮಸ್ಯೆ ಏನಿಲ್ಲ, ಲಾಭವೇ ಜಾಸ್ತಿ!

ಖಿನ್ನತೆ ಮತ್ತು ಉದ್ವೇಗದ ವಿರುದ್ಧ ಹೋರಾಡಲು ಸಹಕರಿಸುತ್ತದೆ

ಖಿನ್ನತೆ ಮತ್ತು ಉದ್ವೇಗದ ವಿರುದ್ಧ ಹೋರಾಡಲು ಸಹಕರಿಸುತ್ತದೆ

ಖಿನ್ನತೆ ಮತ್ತು ಉದ್ವೇಗದ ವಿರುದ್ಧ ಹೋರಾಡಲು ಹಸ್ತಮೈಥುನವು ಒಂದು ಪ್ರಬಲವಾದ ನೈಸರ್ಗಿಕ ಪರಿಹಾರಗಳಲ್ಲೊಂದಾಗಿದೆ. ಹಸ್ತಮೈಥುನವನ್ನು ಕೈಗೊಂಡಾಗ, ಖಿನ್ನತೆ ಮತ್ತು ಉದ್ವೇಗದ ವಿರುದ್ಧ ಹೋರಾಡಲು ನಮಗೆ ನೆರವಾಗುವ ಆಕ್ಸಿಟೋಸಿನ್ ಎಂಬ ನೈಸರ್ಗಿಕವಾದ ರಾಸಾಯನಿಕವೊಂದು ನಮ್ಮ ಶರೀರದಲ್ಲಿ ಬಿಡುಗಡೆ ಹೊಂದುತ್ತದೆ.

ನೆನಪಿಡಿ

ನೆನಪಿಡಿ

ಯಾವುದೇ ಅಂಗವನ್ನು ಅದರ ಕ್ಷಮತೆಗೂ ಮೀರಿ ಬಳಸಿದರೆ ಏನಾಗುತ್ತದೆ? ಇದು ತನ್ನ ಕ್ಷಮತೆಯನ್ನೇ ಕಳೆದುಕೊಳ್ಳುತ್ತದೆ. ನಮ್ಮ ದೇಹದ ಅತಿ ಸೂಕ್ಷ್ಮ ಅಂಗಗಳಾದ ಗುಪ್ತಾಂಗಗಳೂ ಅಷ್ಟೇ. ಇದರ ಕ್ಷಮತೆ ಮೀರಿ ಈ ಕ್ರಿಯೆ ನಡೆಸುವ ಮೂಲಕ ನಿಮಿರು ದೌರ್ಬಲ್ಯ, ಪೂರ್ಣ ನಿಮಿರುತನ ಪಡೆಯಲು ಅಸಮರ್ಥತೆ ಅಥವಾ ಸಂಗಾತಿಯೊಂದಿಗೆ ಮಿಲನಗೊಳ್ಳುವ ಸಮಯದಲ್ಲಿ ಎದುರಾಗುವ ವೈಫಲ್ಯ ಮೊದಲಾದ ತೊಂದರೆಗಳು ಎದುರಾಗುತ್ತವೆ. ವ್ಯಸನದ ಪರಿಣಾಮವಾಗಿ ತೊಡೆಸಂಧುಗಳ ಸ್ನಾಯುಗಳು ಶಿಥಿಲಗೊಳ್ಳುತ್ತವೆ ಹಾಗೂ ಲೈಂಗಿಕ ಕ್ರಿಯೆಗೆ ಅಗತ್ಯವಾದ ಶಕ್ತಿಯನ್ನು ಹೊಂದಲು ಸಾಧ್ಯವಾಗದೇ ಲೈಂಗಿಕ ಚಟುವಟಿಕೆಯೇ ಸಾಧ್ಯವಾಗದೇ ಹೋಗಬಹುದು. ಕೆಲವು ಸಂದರ್ಭಗಳಲ್ಲಿ ಈ ವ್ಯಕ್ತಿಗಳು ಸಂಗಾತಿಯೊಂದಿಗಿನ ಮಿಲನಕ್ಕಿಂತಲೂ ಹಸ್ತಮೈಥುನದಲ್ಲಿಯೇ ತಮ್ಮ ಮನಸ್ಸಿಗೆ ಹೆಚ್ಚಿನ ತೃಪ್ತಿಯನ್ನು ಕಂಡುಕೊಂಡಿದ್ದು ಇದು ದಾಂಪತ್ಯ ಜೀವನವೇ ಬಾಧೆಗೊಳಗಾಗಬಹುದು.

English summary

Advice of the doctor-masturbate control Prostate Cancer!

Masturbation is a taboo, especially when it comes to women. If a woman dare say she masturbates, heads turn and the way people look at her changes. But what is there to shy away from when it's your own body you are pleasuring? In fact, if we go strict medical, masturbation is a yes-yes. Trust us when we say, doctors want you to masturbate. This is because masturbation is healthy and has at least five benefits, which we are listing down for you.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more