For Quick Alerts
ALLOW NOTIFICATIONS  
For Daily Alerts

ಶೌಚದ ಬಳಿಕ ಚೆನ್ನಾಗಿ ತೊಳೆದುಕೊಳ್ಳಿ, ಒರೆಸಿಕೊಳ್ಳಬೇಡಿ!

|

ದೇಹವನ್ನು ಸ್ವಚ್ಛಗೊಳಿಸಲು ಹಲವಾರು ವಿಧಾನಗಳು ಇವೆ. ಅದರಲ್ಲೂ ಭಾರತೀಯರು ಪ್ರತಿಯೊಂದಕ್ಕೂ ನೀರನ್ನು ಬಳಕೆ ಮಾಡುವರು. ಅದು ಶೌಚಾಲಯವಾಗಿರಲಿ ಅಥವಾ ಸ್ನಾನಗೃಹವೇ ಆಗಿರಲಿ ನೀರು ಬೇಕೇ ಬೇಕು. ಆದರೆ ವಿದೇಶಿಯವರು ಹಾಗಲ್ಲ. ಅವರು ಶೌಚಾಲಯಕ್ಕೆ ಹೋದರೂ ಟಾಯ್ಲೆಟ್ ಪೇಪರ್ ನಲ್ಲಿ ಒರೆಸಿಕೊಂಡು ಬರುವರು. ಆದರೆ ಇದು ಭಾರತೀಯರಾಗಿರುವ ನಮಗೆ ಖಂಡಿತವಾಗಿಯೂ ಸಾಧ್ಯವಿಲ್ಲ.

you should wash, not wipe after pooping

ವೈದ್ಯರ ಪ್ರಕಾರ ಒರೆಸಿಕೊಳ್ಳುವುದು ತುಂಬಾ ಅಸಂಬದ್ಧ ವಿಧಾನವೆಂದು ಹೇಳಲಾಗಿದೆ. ಆದರೆ ಯಾವ ವಿಧಾನವು ಉತ್ತಮ ಎನ್ನುವಂತಹ ಪ್ರಶ್ನೆಯು ಮಾತ್ರ ಹಾಗೆ ಉಳಿದುಕೊಳ್ಳುವುದು. ನೀರಿನಿಂದ ತೊಳೆಯುವುದು ಅಥವಾ ಒರೆಸಿಕೊಳ್ಳುವುದು? ಒರೆಸಿಕೊಳ್ಳುವುದರಿಂದ ಹಲವಾರು ರೀತಿಯ ಸೋಂಕುಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಈ ಲೇಖನದಲ್ಲಿ ನಿಮಗೆ ಈ ಬಗ್ಗೆ ಸರಿಯಾಗಿ ಅರ್ಥ ಮಾಡಿಸಿಕೊಡಲಾಗುವುದು.

ಮಲವು ಹಾಗೆ ಉಳಿಯುವುದು

ಮಲವು ಹಾಗೆ ಉಳಿಯುವುದು

ಒರೆಸಿಕೊಳ್ಳುವುದರಿಂದ ಮಲವು ಹಾಗೆ ಉಳಿದುಕೊಳ್ಳುವ ಸಾಧ್ಯತೆಯಿದೆ. ಇದರಿಂದ ಸೋಂಕು ಉಂಟಾಗಿ ಹಲವಾರು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರಿಂದ ಯುಟಿಐನಂತಹ ಸೋಂಕು ಬರಬಹುದು.

ಅತಿಯಾಗಿ ಬಳಸಿದರೆ ಆರೋಗ್ಯಕ್ಕೆ ಹಾನಿಕರ

ಅತಿಯಾಗಿ ಬಳಸಿದರೆ ಆರೋಗ್ಯಕ್ಕೆ ಹಾನಿಕರ

ಟಾಯ್ಲೆಟ್ ಪೇಪರ್ ನ್ನು ಅತಿಯಾಗಿ ಬಳಕೆ ಮಾಡಿಕೊಂಡರೆ ಆಗ ಪೃಷ್ಠದ ಸುತ್ತಲಿನ ಸೂಕ್ಷ್ಮ ಚರ್ಮದ ಮೇಲೆ ಹಾನಿಯಾಗಬಹುದು. ಈ ಕ್ರಮದಿಂದಾಗಿ ಆರೋಗ್ಯ ಸಮಸ್ಯೆಗಳಾಗಿರುವ ಗುದದ ಫಿಶರ್ ಅಥವಾ ಮೂತ್ರ ನಾಳದ ಸೋಂಕು ಬರಬಹುದು. ಇದರಿಂದ ತೊಳೆಯುವುದು ತುಂಬಾ ಆರೋಗ್ಯಕಾರಿ ವಿಧಾನ

Most Reach: ಎಚ್ಚರ! ಚೀನಾದಿಂದ ಬರುತ್ತಿದೆ ವಿಷಕಾರಿ ಬೆಳ್ಳುಳ್ಳಿ! ನೋಡಿ ಈ ರೀತಿಯಾಗಿ ಪತ್ತೆಹಚ್ಚಿ

ಒರಟಾಗಿ ಒರೆಸಿಕೊಳ್ಳುವುದು

ಒರಟಾಗಿ ಒರೆಸಿಕೊಳ್ಳುವುದು

ಪೃಷ್ಠದ ಸೂಕ್ಷ್ಮ ಚರ್ಮದ ಮೇಲೆ ಪರಿಣಾಮ ಬೀರುವಂತಹ ಮತ್ತೊಂದು ವಿಧಾನವೆಂದರೆ ತುಂಬಾ ಗಡುಸಾಗಿ ಒರೆಸಿಕೊಳ್ಳುವುದು. ಇದರಿಂದ ಗಾಯವಾಗಬಹುದು ಮತ್ತು ಇದು ಒಣಗಲು ತುಂಬಾ ದೀರ್ಘ ಸಮಯ ಬೇಕಾಗಬಹುದು.

ಸ್ವಚ್ಛತೆ ಮುಖ್ಯ

ಸ್ವಚ್ಛತೆ ಮುಖ್ಯ

ಒರೆಸಿಕೊಂಡರೆ ಖಂಡಿತವಾಗಿಯೂ ಸ್ವಚ್ಛತೆ ಇರದು. ಇದರಿಂದ ಕೈಗಳು ಕೊಳಕಾಗುವುದು. ಒರೆಸಿಕೊಂಡ ಬಳಿಕ ಕೈಗಳನ್ನು ತೊಳೆಯಬೇಕು. ಇಲ್ಲವಾದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಬಹುದು.

ಒರೆಸುವ ಕಾಗದದಲ್ಲಿ ಬ್ಲೀಚ್ ಇರುವುದು

ಒರೆಸುವ ಕಾಗದದಲ್ಲಿ ಬ್ಲೀಚ್ ಇರುವುದು

ನೀವು ಬಳಸುವಂತಹ ಬಿಳಿಯಾಗಿರುವ ಟಾಯ್ಲೆಟ್ ಪೇಪರ್ ನಲ್ಲಿ ಬ್ಲೀಚ್ ಇರಬಹುದು. ಚ್ಲೊರಿನೆ ಬ್ಲೀಚ್ ನಲ್ಲಿ ವಿಷಕಾರಿ ಅಂಶವಿರಬಹುದು ಮತ್ತು ಇದು ದೇಹದಲ್ಲಿ ಒಗ್ಗಿಕೊಂಡರೆ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಬಹುದು.

Most Read: ಕಾಮ ಪ್ರಚೋದಕ ತಾಂತ್ರಿಕ ಮಸಾಜ್‌ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ ಇದರ ಪ್ರಯೋಜನಗಳು

ಒರೆಸಿಕೊಳ್ಳುವುದು ಮುಖ್ಯ

ಒರೆಸಿಕೊಳ್ಳುವುದು ಮುಖ್ಯ

ಕೇಲವ ತೊಳೆಯುವುದು ಮಾತ್ರ ಪರಿಪೂರ್ಣವಲ್ಲ. ತೊಳೆದ ಬಳಿಕ ಈ ಭಾಗವನ್ನು ನೀವು ಒಣಗಿಸಬೇಕು. ಇದರಿಂದ ಯಾವುದೇ ರೀತಿಯ ಮಲವು ಉಳಿಯಬದಂತೆ ನೋಡಬೇಕು. ತೊಳೆದ ಬಳಿಕ ಒರೆಸಿಕೊಳ್ಳುವುದು ಅತ್ಯುತ್ತಮವಾಗಿರುವ ವಿಧಾನ.

ಸರಿಯಾದ ಕ್ರಮ

ಸರಿಯಾದ ಕ್ರಮ

ಮಲ ವಿಸರ್ಜನೆ ಮಾಡಿದ ಬಳಿಕ ಗುದ ತೊಳೆದುಕೊಳ್ಳಿ. ಇದರ ಬಳಿಕ ಟಾಯ್ಲೆಟ್ ಪೇಪರ್ ತೆಗೆದುಕೊಂಡು ಒರೆಸಿಕೊಳ್ಳಿ. ಇದರಿಂದ ಬ್ಯಾಕ್ಟೀರಿಯ ಕೊಲ್ಲಲ್ಪಡುವುದು ಮತ್ತು ಯಾವುದೇ ರೀತಿಯ ಸೋಂಕು ಬರುವುದಿಲ್ಲ. ಗುದವು ಒದ್ದೆಯಾಗಿದ್ದರೆ ಆಗ ಇದು ಬ್ಯಾಕ್ಟೀರಿಯಾಗಳು ಬೆಳೆಯಲು ನೆರವಾಗುವುದು. ಇದರಿಂದ ತೊಳೆದ ಬಳಿಕ ಒರೆಸಿಕೊಳ್ಳುವುದು ಅತೀ ಅಗತ್ಯ. ಮೂತ್ರ ವಿಸರ್ಜನೆ ಬಳಿಕ ಕೂಡ ತೊಳೆದುಕೊಂಡು ಬಳಿಕ ಒರೆಸಿಕೊಳ್ಳಿ. ಸಾಮಾನ್ಯವಾಗಿ ನಾವು ವಿದೇಶಿ ಶೌಚಾಲಯಗಳಲ್ಲಿ ಅದರ ಸೀಟ್ ಮೇಲೆ ಕುಳಿತುಕೊಳ್ಳುವ ಮೊದಲು ಅದರಲ್ಲಿನ ನೀರು ತಾಗದಿರಲೆಂದು ಟಾಯ್ಲೆಟ್ ಪೇಪರ್‌ ಅನ್ನು ಸೀಟ್ ಮೇಲೆ ಹಾಕಿಕೊಳ್ಳುತ್ತೇವೆ. ಸೀಟ್ ನಲ್ಲಿ ಇರುವ ಬ್ಯಾಕ್ಟೀರಿಯಾಗಳು ಚರ್ಮದ ಸಂಪರ್ಕಕ್ಕೆ ಬರದಿರಲೆಂದು ಕೆಲವರು ಈ ರೀತಿ ಮಾಡುತ್ತಾರೆ. ಆದರೆ ಇದು ಸರಿಯಲ್ಲವೆನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಹೀಗೆ ಮಾಡುವುದರಿಂದ ಮತ್ತಷ್ಟು ಬ್ಯಾಕ್ಟೀರಿಯಾಗಳು ಚರ್ಮದ ಸಂಪರ್ಕಕ್ಕೆ ಬರಬಹುದು ಎಂದು ತಜ್ಞರು ಹೇಳುತ್ತಾರೆ. ಮುಂದೆ ಓದಿ

ಹೆಚ್ಚಿನ ಬ್ಯಾಕ್ಟೀರಿಯಾಗಳು ತುಂಬಿರುತ್ತದೆ

ಹೆಚ್ಚಿನ ಬ್ಯಾಕ್ಟೀರಿಯಾಗಳು ತುಂಬಿರುತ್ತದೆ

ಶೌಚಾಲಯದಲ್ಲಿ ಹೆಚ್ಚಿನ ಬ್ಯಾಕ್ಟೀರಿಯಾಗಳು ತುಂಬಿರುತ್ತದೆ ಎಂದು ನಾವೆಲ್ಲರೂ ನಂಬಿದ್ದೇವೆ. ಆದರೆ ಇದು ನಿಜ ಕೂಡ. ಆದರೆ ಟಾಯ್ಲೆಟ್ ಸೀಟ್‌ಗಳನ್ನು ಯಾವುದೇ ರೀತಿಯ ಬ್ಯಾಕ್ಟೀರಿಯಾ ಬಾರದಂತೆ ನಿರ್ಮಿಸಲಾಗಿದೆ. ಟಾಯ್ಲೆಟ್ ಸೀಟ್‌ನ ನಯವಾದ ಮೇಲ್ಮೈ ಮತ್ತು ಅದರ ಸುತ್ತಳತೆಯನ್ನು ನೋಡಬಹುದು. ಸೀಟ್ನಿಂದ ಬ್ಯಾಕ್ಟೀರಿಯಾಗಳು ದೂರವಿರುವಂತೆ ಅವುಗಳನ್ನು ನಿರ್ಮಿಸಲಾಗಿದೆ.

ಟಾಯ್ಲೆಟ್‌ನಲ್ಲಿ ಇರುವಂತಹ ಕೀಟಾಣುಗಳು

ಟಾಯ್ಲೆಟ್‌ನಲ್ಲಿ ಇರುವಂತಹ ಕೀಟಾಣುಗಳು

ಟಾಯ್ಲೆಟ್‌ನಲ್ಲಿ ಇರುವಂತಹ ಹೆಚ್ಚಿನ ಕೀಟಾಣುಗಳು ಚರ್ಮದಲ್ಲಿ ಸೇರಿಕೊಂಡರೆ ಅದು ಸಂತಾನ ಬೆಳೆಸಲು ಅಥವಾ ದ್ವಿಗುಣಗೊಳ್ಳುವ ಸಾಮರ್ಥ್ಯವನ್ನು ಹೊಂದಿಲ್ಲ.

Most Read: ನಿಮ್ಮ ಆರೋಗ್ಯದ ಬಗ್ಗೆ ವೀರ್ಯ ಬಣ್ಣವು ಏನು ಹೇಳುತ್ತದೆ?

ಟಾಯ್ಲೆಟ್ ಪೇಪರ್ ಬ್ಯಾಕ್ಟೀರಿಯಾ ತಡೆಯುವುದಿಲ್ಲ

ಟಾಯ್ಲೆಟ್ ಪೇಪರ್ ಬ್ಯಾಕ್ಟೀರಿಯಾ ತಡೆಯುವುದಿಲ್ಲ

ಸ್ವಚ್ಛ ಶೌಚಾಲಯ ಬಳಸದೆ ಇರುವುದರಿಂದ ಮಾತ್ರ ಮನುಷ್ಯರು ಕಾಯಿಲೆ ಬೀಳುವುದಿಲ್ಲ. ಅದರಲ್ಲೂ ಸಾರ್ವಜನಿಕ ಶೌಚಾಲಯಗಳು ತುಂಬಾ ಕೊಳಕಾಗಿರುತ್ತದೆ. ಇದನ್ನು ಬಳಸುವುದನ್ನು ಕಡಿಮೆ ಮಾಡಿ. ಟಾಯ್ಲೆಟ್ ಪೇಪರ್ ಬ್ಯಾಕ್ಟೀರಿಯಾ ತಡೆಯುವುದಿಲ್ಲ. ಅದು ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ.

 ಟಾಯ್ಲೆಟ್ ನಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳು

ಟಾಯ್ಲೆಟ್ ನಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳು

ದೇಹದ ಒಳಗಿನ ಭಾಗ ಹಾಗೂ ಹೊರ ಜಗತ್ತಿನ ಮಧ್ಯೆ ಚರ್ಮವು ಒಂದು ಅಡ್ಡಗೋಡೆಯಾಗಿ ಕೆಲಸ ಮಾಡುತ್ತದೆ. ಚರ್ಮವು ಹಲವಾರು ರೀತಿಯ ಚರ್ಮಗಳಿಗೆ ಒಳಗೆ ಪ್ರವೇಶ ಮಾಡಲು ಬಿಡುವುದಿಲ್ಲ. ಟಾಯ್ಲೆಟ್ ನಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳು ಮನುಷ್ಯರ ದೇಹದಲ್ಲೂ ಇರುತ್ತದೆ.

ಅಡುಗೆ ಮನೆಯ ಸಿಂಕ್ ಕೂಡ ಡೇಂಜರ್!!

ಅಡುಗೆ ಮನೆಯ ಸಿಂಕ್ ಕೂಡ ಡೇಂಜರ್!!

ಟಾಯ್ಲೆಟ್ ಮಾತ್ರ ಬ್ಯಾಕ್ಟೀರಿಯಾಗಳ ವಾಸಸ್ಥಾನವೆಂದು ನಾವು ಭಾವಿಸುತ್ತೇವೆ. ಆದರೆ ಅಡುಗೆ ಮನೆಯ ಸಿಂಕ್ ಮತ್ತು ಸ್ಪಂಜ್ ಕೂಡ ಹಲವಾರು ರೀತಿಯ ಬ್ಯಾಕ್ಟೀರಿಯಾಗಳನ್ನು ಹೊಂದಿದೆ.

Most Read: ಮೊದಲ ರಾತ್ರಿ ನವ-ದಂಪತಿಗಳಿಗೆ ಹಾಲು ನೀಡುತ್ತಾರಲ್ಲ! ಯಾಕೆ ಗೊತ್ತೇ?

ಟಾಯ್ಲೆಟ್ ನ ಪೇಪರ್ ನಲ್ಲಿ ಬ್ಯಾಕ್ಟೀರಿಯಾಗಳು ನೆಲೆನಿಲ್ಲುತ್ತದೆ

ಟಾಯ್ಲೆಟ್ ನ ಪೇಪರ್ ನಲ್ಲಿ ಬ್ಯಾಕ್ಟೀರಿಯಾಗಳು ನೆಲೆನಿಲ್ಲುತ್ತದೆ

ಹೌದು, ಟಾಯ್ಲೆಟ್ ನ ಪೇಪರ್ ನಲ್ಲಿ ಬ್ಯಾಕ್ಟೀರಿಯಾಗಳು ನೆಲೆನಿಲ್ಲುತ್ತದೆ. ಇದರಿಂದ ಟಾಯ್ಲೆಟ್ ಪೇಪರ್ ನ್ನು ಮುಖ, ಮೂಗು ಅಥವಾ ದೇಹದ ಬೇರೆ ಭಾಗವನ್ನು ಒರೆಸಲು ಬಳಸಿಕೊಳ್ಳಬಾರದು. ಹೀಗೆ ಮಾಡಿದರೆ ಬ್ಯಾಕ್ಟೀರಿಯಾಗಳು ದೇಹದೊಳಗೆ ಪ್ರವೇಶಿಸಬಹುದು. ಹಾಗಾಗಿ ಬ್ಯಾಕ್ಟೀರಿಯಾವನ್ನು ತಡೆಯಲು ಕೈಯನ್ನು ಬಿಸಿ ನೀರು ಮತ್ತು ಸಾಬೂನಿನಿಂದ ತೊಳೆಯಿರಿ. ಸಾಬೂನು ಹಾಕಿ ಎರಡು ಅಂಗೈಗಳನ್ನು ಸರಿಯಾಗಿ ಉಜ್ಜಿಕೊಳ್ಳಿ.

ಸಾರ್ವಜನಿಕ ಶೌಚಾಲಯಗಳಿಗೆ ಹೋದಾಗ

ಸಾರ್ವಜನಿಕ ಶೌಚಾಲಯಗಳಿಗೆ ಹೋದಾಗ

ಸಾರ್ವಜನಿಕ ಶೌಚಾಲಯಗಳಿಗೆ ಹೋದಾಗ ನಿಮ್ಮದೇ ಆದ ನ್ಯಾಪ್ಕಿನ್ ತೆಗೆದುಕೊಂಡು ಹೋಗಿ. ಹ್ಯಾಂಡ್ ಡ್ರೈಯರ್ ಬಳಸಬೇಡಿ. ಬಾಗಿಲ ಚಿಲಕಗಳನ್ನು ಮುಟ್ಟಬೇಡಿ. ಬಾಗಿಲನ್ನು ಕಾಲಿನಿಂದ ತೆಗೆಯಿರಿ. ಇನ್ನು ಕೈಗಳನ್ನು ಒಣಗಿಸುವ ಯಂತ್ರವನ್ನು ಬಳಸದಿರಿ ಕೈ ತೊಳೆದಾದ ಬಳಿಕ ಕೈಗಳನ್ನು ಒಣಗಿಸಲು ವಿವಿಧ ಯಂತ್ರಗಳು ಇಂದು ಲಭ್ಯವಿವೆ. ಇವುಗಳಿಂದ ಬಿಸಿಗಾಳಿ ಒತ್ತಡದಲ್ಲಿ ಚಿಮ್ಮುತ್ತಿರುವಾಗ ಕೈಗಳನ್ನು ಅಡ್ಡ ಹಿಡಿದರೆ ಶೀಘ್ರದಲ್ಲಿಯೇ ಕೈಗಳು ಒಣಗುತ್ತವೆ. ಆದರೆ ಚಿಮ್ಮುತ್ತಿರುವ ಗಾಳಿಯೇ ಕೈಗಳಲ್ಲಿರುವ ಕ್ರಿಮಿಗಳನ್ನು ಊದಿ ಇಡಿಯ ಕೋಣೆಯ ತುಂಬಾ ಹರಡುತ್ತದೆ. ಶೌಚಾಲಯಕ್ಕೆ ಬರುವ ಎಲ್ಲರೂ ಕೈಗಳನ್ನು ಸ್ವಚ್ಛವಾಗಿಟ್ಟುಕೊಂಡಿರುತ್ತಾರೆ ಎಂದು ಹೇಳಲಾಗದು. ಈ ಯಂತ್ರದ ಬಳಿ ಬಂದಾಗ ಅನೈಚ್ಛಿಕವಾಗಿ ಕ್ರಿಮಿಗಳ ಧಾಳಿಗೆ ತುತ್ತಾಗಬಹುದು.

English summary

You Should Wash, Not Wipe After Pooping

We consider water a basic necessity, for bathing and cleaning ourselves. But when it comes to cleaning our derrieres, we often wonder which is a better choice. While most doctors feel wiping is absolutely absurd, we Indians are gradually moving away from the habit of washing our bottoms, steering towards cleaning with tissues.
X
Desktop Bottom Promotion