Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಆರೋಗ್ಯದ ಬಗ್ಗೆ ವೀರ್ಯ ಬಣ್ಣವು ಏನು ಹೇಳುತ್ತದೆ?
ವೀರ್ಯದ ಬಣ್ಣ ಯಾವ ರೀತಿಯಾಗಿದೆ ಎಂಬುದರ ಮೇಲೆ ವೀರ್ಯದ ಆರೋಗ್ಯವನ್ನು ತಿಳಿಯಬಹುದು ಎಂಬ ವಿಷಯ ನಿಮಗೆ ಗೊತ್ತೆ? ವೈದ್ಯರು ಹೇಳುವ ಪ್ರಕಾರ ನಿಮ್ಮ ವೀರ್ಯದ ಬಣ್ಣವು ನಿಮ್ಮ ಆರೋಗ್ಯದ ಬಗ್ಗೆ ನಿಮಗೇ ತಿಳಿಯಲಾರದ ಹಲವಾರು ಸಂಗತಿಗಳನ್ನು ಬಿಚ್ಚಿಡುತ್ತದೆ. ಅನೇಕ ಬಾರಿ ಸ್ಖಲನದ ನಂತರ ಯಾಕೋ ಇದು ವೀರ್‍ಯದ ರೀತಿ ಕಾಣುತ್ತಿಲ್ಲವಲ್ಲ ಎಂದು ನೀವು ಗಾಬರಿಯಾಗಿರಲೂಬಹುದು. ಹೌದು.. ವೀರ್ಯದ ಬಣ್ಣ ಬದಲಾದಾಗ ಹೀಗೆ ಅನ್ನಿಸುವುದು ಸಹಜವಾಗಿದೆ.

ವೀರ್ಯದ ಬಣ್ಣವನ್ನು ಪರೀಕ್ಷಿಸಿ ನಿಮ್ಮ ಸಂಪೂರ್ಣ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬಹುದು ಎಂಬುದು ಸಾಬೀತಾಗಿದೆ. ಸಾಮಾನ್ಯವಾಗಿ ಆರೋಗ್ಯವಂತ ವೀರ್‍ಯವು ಮೋಡ ಬಿಳಿ ಬಣ್ಣದ್ದಾಗಿರುತ್ತದೆ. ಆದರೆ ಹಲವಾರು ಕಾರಣಗಳಿಂದ ನಿಮ್ಮ ವೀರ್ಯದ ಬಣ್ಣ ಬದಲಾಗಿರುವ ಸಾಧ್ಯತೆಗಳಿವೆ. ವೀರ್‍ಯದ ಬಣ್ಣವು ನಿಮ್ಮ ಆರೋಗ್ಯದ ಬಗ್ಗೆ ಯಾವೆಲ್ಲ ಅಂಶಗಳನ್ನು ತಿಳಿಸುತ್ತದೆ ಎಂಬುದನ್ನು ಅರಿಯಲು ಈ ಲೇಖನ ಓದಿ.

ವೀರ್ಯ ಹಾಗೂ ಅದರಲ್ಲಿನ ಅಂಶಗಳು
ವೃಷಣ, ವೃಷಣನಾಳ, ಪ್ರಾಸ್ಟೇಟ್ ಗ್ರಂಥಿ, ಸೆಮಿನಲ್ ವೆಸಿಕಲ್ಸ್ ಮತ್ತು ಬುಲ್ಬೊರೆಥ್ರಲ್ ಗ್ರಂಥಿಗಳು ವೀರ್‍ಯವನ್ನು ಉತ್ಪಾದಿಸುವ ಕೆಲಸ ಮಾಡುತ್ತವೆ. ಸೆಮಿನಲ್ ವೆಸಿಕಲ್ಸ್ ಉತ್ಪಾದಿಸುವ ಹಳದಿ ಬಣ್ಣದ ಸ್ನಿಗ್ಧ ದ್ರಾವಣವು ಹೆಚ್ಚು ಪ್ರಮಾಣದಲ್ಲಿ ಫ್ರುಕ್ಟೋಸ್ ಹಾಗೂ ಇತರ ಅಂಶಗಳನ್ನು ಒಳಗೊಂಡಿರುತ್ತದೆ ಹಾಗೂ ವೀರ್‍ಯದಲ್ಲಿನ ಶೇ.೭೦ ರಷ್ಟು ಭಾಗ ಇವನ್ನೇ ಒಳಗೊಂಡಿರುತ್ತದೆ. ಪ್ರಾಸ್ಟೇಟ್ ಗ್ರಂಥಿ ಸ್ರವಿಸುವ ದ್ರವವು ಬಿಳಿಯಾಗಿದ್ದು, ಡೈಹೈಡ್ರೊಟೆಸ್ಟೊಸ್ಟಿರಾನ್ ಎಂಬ ಹಾರ್ಮೋನ್ ಇದಕ್ಕೆ ಕಾರಣವಾಗಿರುತ್ತದೆ. ಈ ತೆಳುವಾದ ದ್ರಾವಣವು ಪ್ರೊಟಿಯೊಲಿಟಿಕ್ ಎಂಜೈಮ್‌ಗಳನ್ನು ಹಾಗೂ ಲಿಪಿಡ್ಸ್, ಸಿಟ್ರಿಕ್ ಆಸಿಡ್, ಗ್ಯಾಲಾಕ್ಟೋಸ್ ಮತ್ತು ಆಸಿಡ್ ಫಾಸ್ಫಾಟೇಸ್‌ಗಳನ್ನು ಒಳಗೊಂಡಿರುತ್ತದೆ.

ಆರೋಗ್ಯವಂತ ವೀರ್ಯದ ಬಣ್ಣ
ಆರೋಗ್ಯವಂತ ವ್ಯಕ್ತಿಯು ಸ್ರವಿಸುವ ವೀರ್‍ಯದ ಬಣ್ಣವು ಬಿಳಿ ಮಿಶ್ರಿತ ಬೂದು ಬಣ್ಣದ್ದಾಗಿರುತ್ತದೆ. ಸ್ರವಿಸಿದ ಸಂದರ್ಭದಲ್ಲಿ ಅದು ಗಟ್ಟಿ ಹಾಗೂ ಜಿಗುಟಾಗಿರುತ್ತದೆ. ನಂತರದ 30 ನಿಮಿಷಗಳ ಅವಧಿಯಲ್ಲಿ ಅದು ಸಂಪೂರ್ಣ ದ್ರವರೂಪಕ್ಕೆ ತಿರುಗುತ್ತದೆ. ನಿಮ್ಮ ಮೂತ್ರವು ಕ್ಲೋರೀನ್ ರೀತಿ ವಾಸನೆ ಬರುತ್ತಿದ್ದರೆ ಅದು ಸಂಪೂರ್ಣ ಸಹಜವಾಗಿದೆ. ಮೂತ್ರದಲ್ಲಿನ ಹೆಚ್ಚುವರಿ ಫ್ರುಕ್ಟೋಸ್ ಪ್ರಮಾಣದಿಂದ ಮೂತ್ರವು ಸಿಹಿಯಾಗಿರಬಹುದು.

ಹಳದಿ ಬಣ್ಣದ ವೀರ್ಯ
ವೀರ್ಯದ ಬಣ್ಣ ಹಳದಿ ಆಗಿರುವುದು ಸಹ ಸಾಮಾನ್ಯವಾಗಿದ್ದು, ಎಲ್ಲ ಸಂದರ್ಭಗಳಲ್ಲಿ ಇದು ಅನಾರೋಗ್ಯವನ್ನು ಸೂಚಿಸುವುದಿಲ್ಲ. ವ್ಯಕ್ತಿಗೆ ವಯಸ್ಸಾದಂತೆ ವೀರ್ಯದ ಬಣ್ಣವೂ ಬದಲಾಗುತ್ತದೆ. ಬಹಳ ಸಮಯದಿಂದ ಸ್ಖಲನ ಆಗಿರದಿದ್ದರೆ ಅಂಥ ಸಂದರ್ಭಗಳಲ್ಲಿ ವೀರ್‍ಯ ಕೊಂಚ ಹಳದಿ ಕಾಣಬಹುದು. ಶಿಶ್ನವು ನಿಮಿರಿದ ಸಮಯದಲ್ಲಿ ಮೂತ್ರ ಸ್ರವಿಸುವ ಮಾರ್ಗವು ಮುಚ್ಚಲ್ಪಡುತ್ತದೆ ಹಾಗೂ ವೀರ್‍ಯ ಮಾತ್ರ ಈ ದಾರಿಯಲ್ಲಿ ಸಾಗಬಹುದಾಗಿದೆ. ಆದಾಗ್ಯೂ ಕೆಲ ಸಂದರ್ಭಗಳಲ್ಲಿ ವೀರ್‍ಯದೊಂದಿಗೆ ಸೇರಿಕೊಳ್ಳುವ ಮೂತ್ರದ ಅಂಶದಿಂದ ಸ್ಖಲನವಾಗುವ ವೀರ್ಯ ಹಳದಿಯಾಗಿ ಕಾಣಿಸಬಹುದು. ವೈದ್ಯ ಶಾಸ್ತ್ರದ ಪ್ರಕಾರ, ಲ್ಯೂಕೊಸೈಟೊಸ್ಪರ್ಮಿಯಾ (ಹೆಚ್ಚು ಪ್ರಮಾಣದ ಬಿಳಿ ರಕ್ತ ಕಣಗಳು ಇರುವ ಸ್ಥಿತಿ) ಪರಿಸ್ಥಿತಿ ಹಾಗೂ ಕಾಮಾಲೆ ರೋಗವಿದ್ದಲ್ಲಿ ವೀರ್‍ಯ ಹಳದಿಯಾಗಿರಬಹುದು.

ಕಂದು ಬಣ್ಣದ ವೀರ್‍ಯ
ಗುಲಾಬಿ ಅಥವಾ ಬೂದು ಬಣ್ಣದ ವೀರ್‍ಯವು ರಕ್ತಸ್ರಾವ ಆಗುತ್ತಿರುವ ಸೂಚನೆಯಾಗಿದೆ. ಬಹುತೇಕ ಸಂದರ್ಭಗಳಲ್ಲಿ ಪ್ರಾಸ್ಟೇಟ್ ಗ್ರಂಥಿಯ ಉರಿಯೂತದಿಂದ ಈ ರೀತಿ ಆಗುತ್ತದೆ.

ಹಸಿರು ಬಣ್ಣದ ವೀರ್ಯ
ವೀರ್ಯದ ಬಣ್ಣ ಹಸಿರಾಗುತ್ತಿದೆ ಎಂದರೆ ಅದು ಪ್ರಾಸ್ಟೇಟ್ ಗ್ರಂಥಿಗೆ ಸೋಂಕು ತಗುಲಿರುವ ಲಕ್ಷಣವಾಗಿದೆ. ಸಾಮಾನ್ಯವಾಗಿ ಆಂಟಿಬಯಾಟಿಕ್ ಔಷಧಿಗಳ ಮೂಲಕ ಇದನ್ನು ಗುಣಪಡಿಸಲಾಗುತ್ತದೆ. ಆದಾಗ್ಯೂ ಔಷಧ ಹಾಗೂ ವಿಟಾಮಿನ್‌ಗಳ ಅಂಶಗಳಿಂದ ಸಹ ಕೆಲ ಬಾರಿ ವೀರ್‍ಯ ಹಸಿರಾಗಿ ಕಾಣಬಹುದು.

ಕೆಂಪು ಬಣ್ಣದ ವೀರ್‍ಯ
ವೀರ್‍ಯದಲ್ಲಿ ರಕ್ತ ಸೇರಿಕೊಂಡಿದ್ದರೆ ಅದರ ಬಣ್ಣ ಕೆಂಪಾಗಿರುತ್ತದೆ. ವೈದ್ಯಕೀಯ ಶಾಸ್ತ್ರದಲ್ಲಿ ಇದನ್ನು 'ಹೆಮಾಟೊಸ್ಪರ್ಮಿಯಾ' ಎಂದು ಕರೆಯಲಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಇದು ನಿರಪಾಯಕಾರಿಗಿದ್ದರೂ, ಕೆಲವೊಮ್ಮೆ ಇದು ಲೈಂಗಿಕ ಸಂಬಂಧಗಳಿಂದ ಹರಡುವ ರೋಗ ಅಥವಾ ಪ್ರಾಸ್ಟೇಟ್ ಗ್ರಂಥಿಯಲ್ಲಿನ ಸಮಸ್ಯೆಯನ್ನು ಸೂಚಿಸುತ್ತದೆ. ಶಿಶ್ನಕ್ಕೆ ಸಂಬಂಧಿಸಿದ ನಾಳ, ಮಾರ್ಗ ಅಥವಾ ಗ್ರಂಥಿಗಳ ಉರಿಯೂತದಿಂದ ರಕ್ತ ವೀರ್‍ಯದಲ್ಲಿ ಸೇರಿಕೊಳ್ಳುತ್ತದೆ.

ಯಾವ ಸಂದರ್ಭಗಳಲ್ಲಿ ವೈದ್ಯರನ್ನು ಕಾಣಬೇಕು?
ಬಹುತೇಕ ಸಂದರ್ಭಗಳಲ್ಲಿ ವೀರ್‍ಯದ ಬಣ್ಣ ಅಥವಾ ವಿನ್ಯಾಸ ಬದಲಾಗುವುದು ತಾತ್ಕಾಲಿಕವಾಗಿರುತ್ತದೆ. ಇಂಥ ಸಮಸ್ಯೆಗಳು ಅಲ್ಪ ಸಮಯದಲ್ಲಿ ತಾನಾಗಿಯೇ ಗುಣವಾಗುವ ಸಾಧ್ಯತೆಗಳಿರುತ್ತವೆ. ಆದರೆ ವೀರ್‍ಯದ ಬಣ್ಣ ಬದಲಾಗಿರುವುದು ಒಂದು ವಾರ ಅಥವಾ ಅದಕ್ಕೂ ಹೆಚ್ಚು ಕಾಲ ಮುಂದುವರಿದರೆ ನೀವು ವೈದ್ಯರನ್ನು ಭೇಟಿಯಾಗುವುದು ಸೂಕ್ತ. ಮೂತ್ರದಲ್ಲಿ ರಕ್ತ, ಕೆರೆತ, ನೋವು, ಲೈಂಗಿಕ ದುರ್ಬಲತೆ, ಜ್ವರ ಮುಂತಾದ ಸಂದರ್ಭಗಳಲ್ಲಿಯೂ ವೀರ್‍ಯದ ಬಣ್ಣ ಬದಲಾಗುತ್ತದೆ. ಇಂಥ ಎಲ್ಲ ಪರಿಸ್ಥಿತಿಗಳಲ್ಲಿ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ.

ಚಿಕಿತ್ಸೆಯ ವಿಧಾನಗಳು
ಹಳದಿ ವೀರ್‍ಯವು ಕಾಮಾಲೆ ರೋಗದ ಲಕ್ಷಣವಿರಬಹುದಾಗಿದ್ದು, ವೈದ್ಯರು ಇದಕ್ಕೆ ಸೂಕ್ತ ಚಿಕಿತ್ಸೆ ನೀಡುತ್ತಾರೆ. ಒಂದೊಮ್ಮೆ ಸೋಂಕಿನಿಂದ ಹಳದಿ ವೀರ್‍ಯ ಸ್ಖಲನವಾಗುತ್ತಿದ್ದಲ್ಲಿ ಅದಕ್ಕಾಗಿ ಆಂಟಿವೈರಲ್ ಅಥವಾ ಆಂಟಿಬಯಾಟಿಕ್ಸ್ ಔಷಧಿಗಳನ್ನು ವೈದ್ಯರು ಸೂಚಿಸಬಹುದು. ಒಂದು ವೇಳೆ ಸೋಂಕು ಹೆಚ್ಚಾಗಿದ್ದಲ್ಲಿ ನಿಮ್ಮ ಸಂಗಾತಿಯೊಂದಿಗೆ ಮಿಲನ ಕ್ರಿಯೆ ನಡೆಸದಂತೆ ವೈದ್ಯರು ಸೂಚಿಸಬಹುದು. ಸೋಂಕು ಹೆಚ್ಚಾಗಿದ್ದಾಗ ಮಿಲನ ಕ್ರಿಯೆ ನಡೆಸಿದಲ್ಲಿ ಸಂಗಾತಿಗೂ ಸೋಂಕು ತಗುಲುವ ಅಪಾಯವಿರುತ್ತದೆ. ಹೆಚ್ಚು ಪ್ರಮಾಣದ ನೀರು ಕುಡಿಯುವ ಮೂಲಕ ಈ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗೆ ಪರಿಹಾರ ಕಾಣಬಹುದು.

ಹೆಮಾಟೊಸ್ಪರ್ಮಿಯಾ ಲಕ್ಷಣ
ಹಸಿರು ವೀರ್ಯವು ಪ್ರಾಸ್ಟೇಟ್ ಗ್ರಂಥಿ ಹಾಗೂ ಅದರ ಸುತ್ತಲಿನ ಭಾಗಗಳಲ್ಲಿ ಸೋಂಕು ಹರಡಿರುವ ಲಕ್ಷಣವಾಗಿದ್ದು, ವೈದ್ಯರು ಇದಕ್ಕೆ ಸೂಕ್ತ ಚಿಕಿತ್ಸೆ ನೀಡಬಲ್ಲರು. ವೀರ್‍ಯದಲ್ಲಿ ರಕ್ತ ಸೇರಿದ್ದು ಅದು ಕೆಂಪಾಗಿರುವುದು 'ಹೆಮಾಟೊಸ್ಪರ್ಮಿಯಾ' ಲಕ್ಷಣವಾಗಿದೆ. ಈ ಒಂದು ಪರಿಸ್ಥಿತಿ ತೀರಾ ಅಸಹಜವೇನಲ್ಲ. ತೀರಾ ವಿರಳ ಸಂದರ್ಭಗಳಲ್ಲಿ ಇದು ಗಂಭೀರ ಅನಾರೋಗ್ಯದ ಲಕ್ಷಣವಾಗಿರಬಹುದು. ಸಾಮಾನ್ಯವಾಗಿ ಎರಡು ವಾರಗಳ ಕಾಲ ಆಂಟಿ ಬಯಾಟಿಕ್ಸ್ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆಂಟಿಬಯಾಟಿಕ್‌ಗಳು (ಡಾಕ್ಸಿಸೈಕ್ಲಿನ್, ಟ್ರೈಮೆಥಾಪ್ರಿಮ್, ಸಲ್ಫಾಮಿಥೊಕ್ಸಾಝೋಲ್, ಫ್ಲೊರೊಕ್ವಿನೊಲೋನ್ಸ್ ಮುಂತಾದ ಆಂಟಿಬಯಾಟಿಕ್ ಔಷಧಿಗಳು) ಪ್ರಾಸ್ಟೇಟ್ ಗ್ರಂಥಿಯ ರಕ್ತ ಪರಿಚಲನೆಯ ಅಡ್ಡಿಯನ್ನು ಭೇದಿಸುತ್ತವೆ ಹಾಗೂ ಸಾಮಾನ್ಯವಾಗಿ ಇಂಥ ಪರಿಸ್ಥಿತಿಗಳಲ್ಲಿ ಆಂಟಿಬಯಾಟಿಕ್‌ಗಳನ್ನೇ ಬಳಸಲಾಗುತ್ತದೆ.



Click it and Unblock the Notifications