For Quick Alerts
ALLOW NOTIFICATIONS  
For Daily Alerts

ನಿಮ್ಮ ಬೆಳಗ್ಗಿನ ಉಪಹಾರಕ್ಕೆ ಈ ಆಹಾರಗಳನ್ನು ಸೇವಿಸಲೇಬೇಡಿ!

By
|

ಆರೋಗ್ಯವೇ ಮಹಾಭಾಗ್ಯ ಎಂಬುದು ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವ ತತ್ವವಾಗಿದೆ. ಆರೋಗ್ಯವಿಲ್ಲದಿದ್ದರೆ ನೆಮ್ಮದಿ ಇರುವುದಿಲ್ಲ. ನೆಮ್ಮದಿ ಇಲ್ಲದಿದ್ದರೆ ಮಾಡುವ ಯಾವುದೇ ಕಾರ್ಯಗಳಲ್ಲಿ ಆಸಕ್ತಿ ಇರುವುದಿಲ್ಲ ಅಂತೆಯೇ ಮಾನಸಿಕ ಅಸ್ವಸ್ಥತೆ ಖಿನ್ನತೆಗೆ ಇದು ಕಾರಣವಾಗುತ್ತದೆ. ಇಂದಿನ ದಿನಗಳಲ್ಲಿ ಆರೋಗ್ಯ ಎಂಬುದು ಮರೀಚಿಕೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ನಾವು ಆಹಾರದ ವಿಷಯದಲ್ಲಿ ಮಾಡುತ್ತಿರುವ ತಪ್ಪು ಆಯ್ಕೆ. ಹೌದು ಇಂದು ಸಮಯದ ಅಭಾವದಿಂದಾಗಿ ಹೆಚ್ಚಿನವರು ಸಿದ್ಧ ಆಹಾರಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಅಂಗಡಿಗಳಲ್ಲಿ ರೆಡಿಯಾಗಿ ದೊರೆಯುವ ಉಪಹಾರಗಳು ಇಂದು ಹೆಚ್ಚಿನವರ ಹೊಟ್ಟೆ ತುಂಬಿಸುತ್ತಿದೆ.

ಇದರಿಂದ ಮಾಡುವ ಕಷ್ಟ ಕೂಡ ಇರುವುದಿಲ್ಲ ಹಾಗೂ ಸಮಯವನ್ನು ಉಳಿತಾಯ ಮಾಡಿದಂತಾಗುತ್ತದೆ ಎಂಬುದು ಜನಗಳ ನಂಬಿಕೆ. ಆದರೆ ಈ ರೀತಿ ಮಾಡುವುದರಿಂದ ನೀವು ಅನಾರೋಗ್ಯಕ್ಕೆ ಹೆಚ್ಚು ಹತ್ತಿರವಾಗುತ್ತಿದ್ದೀರಿ ಎಂಬುದನ್ನು ಮಾತ್ರ ಮರೆಯಬೇಡಿ. ನಿಮ್ಮ ಬೆಳಗ್ಗಿನ ಉಪಹಾರ ಆರೋಗ್ಯಕರವಾಗಿದ್ದರೆ ದಿನಪೂರ್ತಿ ನೀವು ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ. ಆದರೆ ನೀವು ಆಯ್ಕೆಮಾಡುವ ಆಹಾರ ಆರೋಗ್ಯಕರವಾಗಿರಬೇಕು ಮತ್ತು ಹೆಚ್ಚು ಕೊಬ್ಬಿನಿಂದ ಕೂಡಿರಲೂಬಾರದು ಬದಲಿಗೆ ಇದರಲ್ಲಿ ಪ್ರೊಟೀನ್, ವಿಟಮಿನ್ ಮತ್ತು ನ್ಯೂಟ್ರಿನ್ ಅಂಶಗಳು ಇರಬೇಕು.

ತಜ್ಞರು ಬೆಳಗ್ಗಿನ ಉಪಹಾರಕ್ಕೆ ಬೆರ್ರಿಗಳು, ಓಟ್‌ಮೀಲ್, ಸೊಪ್ಪು, ಮೊಟ್ಟೆ ಆಮ್ಲೆಟ್ ಹಾಗು ಗ್ರೀಕ್ ಯೋಗರ್ಟ್ (ಮೊಸರು) ಅನ್ನು ಶಿಫಾರಸು ಮಾಡುತ್ತಾರೆ. ನೀವು ಆರಿಸಿಕೊಳ್ಳುವ ಖಾದ್ಯದಲ್ಲಿ 25-30 ಗ್ರಾಮ್ ಪ್ರೊಟೀನ್ ಇರಬೇಕು, 3 ಗ್ರಾಮ್ ಫೈಬರ್ ಇರಬೇಕು ಇದೆಲ್ಲಾ ಆರೋಗ್ಯಕರ ಕೊಬ್ಬು ಎಂದು ಪರಿಗಣಿಸಲಾಗಿದೆ. ಆದರೆ ಇದರ ಬದಲಿಗೆ ನೀವು ಪೇಸ್ಟ್ರಿ, ಬಟರ್ ಕೇಕ್ ಮೊದಲಾದವುಗಳನ್ನು ಬೆಳಗ್ಗಿನ ಉಪಹಾರಕ್ಕೆ ಸೇವಿಸಿದಲ್ಲಿ ನಿಮ್ಮ ತೂಕ ಏರಿಕೆಯಾಗುತ್ತದೆ ಮತ್ತು ಇನ್ನಿತರ ಆರೋಗ್ಯ ಸಂಬಂಧಿ ತೊಂದರೆಗಳನ್ನು ನೀವು ಅನುಭವಿಸಬೇಕಾಗುತ್ತದೆ. ಇಂದಿನ ಲೇಖನದಲ್ಲಿ ಇಂತಹ ಆಹಾರಗಳಲ್ಲದೆ ನೀವು ಗೊತ್ತಿದ್ದೋ ಗೊತ್ತಿಲ್ಲದೆಯೋ ಸೇವಿಸುತ್ತಿರುವ ಅನಾರೋಗ್ಯಕರ ಆಹಾರಗಳ ಪಟ್ಟಿಯನ್ನು ನೀಡುತ್ತಿದ್ದು ಇಂತಹ ಆಹಾರಗಳನ್ನು ನೀವು ಸೇವಿಸುತ್ತಿದ್ದರೆ ಅದಕ್ಕೆ ಈಗಲೇ ಪೂರ್ಣವಿರಾಮ ಹಾಕಿ....

ಬ್ರೇಕ್‌ಫಾಸ್ಟ್ ಸಿರಿಯಲ್ಸ್

ಬ್ರೇಕ್‌ಫಾಸ್ಟ್ ಸಿರಿಯಲ್ಸ್

ದೊಡ್ಡವರಿಗೆ ಮತ್ತು ಮಕ್ಕಳಿಗೆ ಬ್ರೇಕ್‌ಫಾಸ್ಟ್ ಸಿರಿಯಲ್‌ಗಳು ಉತ್ತಮ ಆಯ್ಕೆ ಎಂದೇ ಹೆಚ್ಚಿನವರು ಭಾವಿಸುತ್ತಾರೆ. ಸಂಪೂರ್ಣ ಧಾನ್ಯಗಳನ್ನು ಒಳಗೊಂಡಿದೆ ಎಂಬುದಾಗಿ ಈ ಸೀರಿಯಲ್ ಪ್ಯಾಕ್‌ಗಳ ಮೇಲೆ ಬರೆದಿರುತ್ತಾರೆ. ಆದರೆ ನಿಜವಾಗಿ ಹೇಳಬೇಕೆಂದರೆ ಇವುಗಳನ್ನು ಹೆಚ್ಚಿನ ರೀತಿಯಲ್ಲಿ ಪರಿಷ್ಕರಿಸಲಾಗಿರುತ್ತದೆ ಮತ್ತು ಸಣ್ಣ ಪ್ರಮಾಣದಲ್ಲಿ ಮಾತ್ರ ಧಾನ್ಯಗಳನ್ನು ಒಳಗೊಂಡಿರುತ್ತದೆ ಇನ್ನು ಹೆಚ್ಚು ಪ್ರಮಾಣದಲ್ಲಿ ಸಕ್ಕರೆಯನ್ನು ಹೊಂದಿರುತ್ತದೆ. ಇವುಗಳು ಹೆಚ್ಚು ಪ್ರಮಾಣದಲ್ಲಿ ಕಾರ್ಬೊಹೈಡ್ರೇಟ್ ಅನ್ನು ಒಳಗೊಂಡಿರುತ್ತವೆ ಮತ್ತು ಪ್ರೊಟೀನ್ ಅಂಶ ಕಡಿಮೆ ಇರುತ್ತದೆ. ಇದರಿಂದ ನಿಮ್ಮ ಹೊಟ್ಟೆ ತುಂಬುವುದಿಲ್ಲ ಮತ್ತು ಊಟಕ್ಕೂ ಮುನ್ನವೇ ನಿಮಗೆ ಹಸಿವಾಗಲು ಆರಂಭವಾಗುತ್ತದೆ.

ಬ್ರೇಕ್‌ಫಾಸ್ಟ್ ಸ್ಯಾಂಡ್‌ವಿಚ್

ಬ್ರೇಕ್‌ಫಾಸ್ಟ್ ಸ್ಯಾಂಡ್‌ವಿಚ್

ಮೊಟ್ಟೆ ಮತ್ತು ಚೀಸ್ ಬೆರೆತ ಬೆಳಗ್ಗಿನ ಉಪಹಾರ ನಿಮ್ಮ ದೇಹಕ್ಕೆ ಒಳ್ಳೆಯದು ಎಂದು ನಿಮಗೆ ಅನಿಸಿರಬಹುದು. ಆದರೆ ಈ ಸಿದ್ಧ ಸ್ಯಾಂಡ್‌ವಿಚ್‌ಗಳು ಸೋಡಿಯಮ್, ಸಿದ್ಧ ಪರಿಕರಗಳು ಮತ್ತು ಅನಾರೋಗ್ಯಕರ ಕೊಬ್ಬಿನಿಂದ ಕೂಡಿದೆ. ಇಂತಹ ಸ್ಯಾಂಡ್‌ ವಿಚ್‌ಗಳಲ್ಲಿ ಚೀಸ್ ಉತ್ಪನ್ನಗಳು ಹೆಚ್ಚಿರುತ್ತವೆ ಮತ್ತು ಸಂಸ್ಕರಿಸಿದ ಮಾಂಸ, ಕರಿದ ಉತ್ಪನ್ನಗಳು ಹೇರಳವಾಗಿರುತ್ತವೆ.

ಪೂರ್ವ ಮಿಶ್ರಿತ ಓಟ್‌ಮೀಲ್

ಪೂರ್ವ ಮಿಶ್ರಿತ ಓಟ್‌ಮೀಲ್

ಓಟ್‌ಮೀಲ್‌ಗಳು ನಿಮ್ಮ ಬೆಳಗ್ಗಿನ ಉಪಹಾರಕ್ಕೆ ತಕ್ಕದಾದುದು ಎಂದು ನೀವು ಅಂದುಕೊಂಡಿದ್ದಲ್ಲಿ ಸುಳ್ಳು. ಇಂತಹ ಮಿಶ್ರಿತ ಆಹಾರಗಳಿಂದ ನಿಮ್ಮ ಹೊಟ್ಟೆ ಕೆಡುವುದರ ಜೊತೆಗೆ ನಿಮ್ಮ ಆರೋಗ್ಯ ಕೂಡ ಹದಗೆಡುವುದು ಖಂಡಿತ. ಇವುಗಳಲ್ಲಿ ಹೆಚ್ಚು ಪ್ರಮಾಣದ ಸಕ್ಕರೆ ಇರುತ್ತದೆ. ಇಂತಹ ಆಹಾರವನ್ನು ತ್ವರಿತ ಓಟ್‌ಮೀಲ್‌ನಿಂದ ಮಾಡಿರುತ್ತಾರೆ. ಕಡಿಮೆ ಫೈಬರ್ ಇದರಲ್ಲಿರುತ್ತದೆ.

ಪ್ಯಾನ್‌ಕೇಕ್ ಮತ್ತು ವೇಫಲ್ಸ್

ಪ್ಯಾನ್‌ಕೇಕ್ ಮತ್ತು ವೇಫಲ್ಸ್

ಪ್ಯಾನ್‌ಕೇಕ್ ಮತ್ತು ವೇಫಲ್‌ಗಳು ಬೆಳಗ್ಗಿನ ಉಪಹಾರಕ್ಕೆ ಅತ್ಯುತ್ತಮವಾದುದು. ಹಿಟ್ಟು, ಸಕ್ಕರೆ, ಮೊಟ್ಟೆ ಮತ್ತು ಹಾಲಿನಿಂದ ಇದನ್ನು ಸಿದ್ಧಪಡಿಸುತ್ತಾರೆ ಆದರೆ ಈ ಆಹಾರಗಳು ನಿಮ್ಮ ಬೆಳಗ್ಗಿನ ಉಪಹಾರಕ್ಕೆ ಶತ್ರುವಿದ್ದಂತೆ. ಪ್ಯಾನ್‌ಕೇಕ್ ಸಿರಪ್ ಅನ್ನು ಇವುಗಳು ಒಳಗೊಂಡಿರುತ್ತವೆ ಮತ್ತು ಇವುಗಳನ್ನು ಸೇವಿಸುವುದರಿಂದ ಟೈಪ್ - 2 ಡಯಾಬಿಟೀಸ್ ಬರುತ್ತದೆ.

ಹಣ್ಣಿನೊಂದಿಗೆ ಮೊಸರು ಅನ್ನು ಸೇವಿಸಬೇಡಿ

ಹಣ್ಣಿನೊಂದಿಗೆ ಮೊಸರು ಅನ್ನು ಸೇವಿಸಬೇಡಿ

ಹಣ್ಣಿನೊಂದಿಗೆ ಮೊಸರು ಅನ್ನು ಸೇವಿಸುವುದು ಹೊರಗಿನಿಂದ ಆರೋಗ್ಯಕರ ಎಂದೆನಿಸಿದರೂ ಇದು ಅನಾರೋಗ್ಯಕ್ಕೆ ಮೂಲವಾಗಿದೆ. ಈ ಸರಳ ಬ್ರೇಕ್‌ಫಾಸ್ಟ್ ಸರಳ ಸಕ್ಕರೆಯನ್ನು ಒಳಗೊಂಡಿದ್ದು ನಿಮ್ಮ ಶಕ್ತಿಯನ್ನು ಬೇಗನೇ ಕಡಿಮೆ ಮಾಡಿಬಿಡುತ್ತದೆ ಆದರೆ ಮೊಸರಿನಲ್ಲಿರುವ ಕೊಬ್ಬು ನಿಮ್ಮನ್ನು ಇನ್ನಷ್ಟು ಹಸಿವಿನಿಂದ ಕೂಡಿರುವಂತೆ ಮಾಡುತ್ತದೆ. ಆಹಾರ ತಜ್ಞರು ಬೆರ್ರಿಯ ಟಾಪಿಂಗ್ ಇರುವ ಗ್ರೀಕ್ ಮೊಸರು ಸೇವನೆಯನ್ನು ಮಾಡಲು ಹೇಳುತ್ತಾರೆ. ಹೆಚ್ಚಿನ ಫೈಬರ್‌ಗಾಗಿ ಓಟ್ಸ್ ಮತ್ತು ವಾಲ್‌ನಟ್‌ಗಳನ್ನು ನೀವು ಸೇರಿಸಿಕೊಳ್ಳಬಹುದು.

ಪೇಸ್ಟ್ರಿ

ಪೇಸ್ಟ್ರಿ

ಪೇಸ್ಟ್ರಿಗಳಲ್ಲಿ ಫೈಬರ್ ಅಂಶ ಇರುವುದಿಲ್ಲ. ಹೆಚ್ಚಿನ ಕ್ಯಾಲೊರಿ ಮತ್ತು ಸಕ್ಕರೆಯನ್ನು ಇದು ಒಳಗೊಂಡಿರುತ್ತದೆ. ಇದಕ್ಕೆ ಬದಲಾಗಿ ಮೊಟ್ಟೆ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ. ಇದರಿಂದ ನಿಮಗೆ ಪ್ರೊಟೀನ್ ಕೂಡ ದೊರೆಯುತ್ತದೆ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಸಿದ್ಧ ಸ್ಮೂಥಿ

ಸಿದ್ಧ ಸ್ಮೂಥಿ

ಬೆಳಗ್ಗಿನ ಸಮಯದಲ್ಲಿ ಅಂಗಡಿಯಲ್ಲಿ ದೊರೆಯುವ ಸ್ಮೂತಿಯನ್ನು ನಿಮ್ಮದಾಗಿಸಿಕೊಳ್ಳಬೇಡಿ. ನೀವು ಹೀಗೆ ಮಾಡುತ್ತಿದ್ದೀರಿ ಎಂದಾದಲ್ಲಿ ಅದನ್ನು ಈಗಲೇ ಬಿಡಿ. ಇವುಗಳಲ್ಲಿ ಸೇರಿಸಲಾದ ಸಕ್ಕರೆ ಇರುತ್ತದೆ ಇದರಿಂದ ಇದು ಸಿಹಿಯಿಂದ ಕೂಡಿರುತ್ತದೆ. ಕೊಬ್ಬಿನಿಂದ ಕೂಡಿರುವ ಹಾಲು, ಐಸ್‌ಕ್ರೀಮ್ ಅನ್ನು ಈ ಸ್ಮೂತಿಗಳು ಒಳಗೊಂಡಿರುತ್ತವೆ. ಇದಕ್ಕೆ ಬದಲು ಗ್ರೀಕ್ ಮೊಸರಿನಿಂದ ಮಾಡಿದ ಮನೆಯಲ್ಲೇ ತಯಾರಿಸುವ ಹಣ್ಣಿನ ಸ್ಮೂತಿಗಳನ್ನು ಸೇವಿಸಿ.

ಮಫಿನ್ಸ್

ಮಫಿನ್ಸ್

ಸಣ್ಣ ಕೇಕಿನ ಆಕಾರದಲ್ಲಿರುವ ಮಫಿನ್‌ಗಳನ್ನು ಬೆಳಗ್ಗಿನ ಉಪಹಾರಕ್ಕೆ ಸೇವಿಸಲೇಬೇಡಿ. ವೆಜಿಟೇಬಲ್ ಆಯಿಲ್, ಮೊಟ್ಟೆ, ಸಕ್ಕರೆ ಮತ್ತು ಹಿಟ್ಟಿನಿಂದ ಈ ಮಫಿನ್‌ಗಳನ್ನು ತಯಾರಿಸುತ್ತಾರೆ. ಈ ಸಹಿ ತಿನಿಸು ನಿಮ್ಮ ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸುತ್ತವೆ ಮತ್ತು ನಿಮ್ಮನ್ನು ದಢೂತಿಯನ್ನಾಗಿಸಬಹುದು.

ಗ್ರನೋಲಾ ಬಾರ್ಸ್

ಗ್ರನೋಲಾ ಬಾರ್ಸ್

ಇವುಗಳಲ್ಲಿ ಕೂಡ ಹೆಚ್ಚು ಪ್ರಮಾಣದ ಸಕ್ಕರೆ ಇರುತ್ತದೆ. ಸಕ್ಕರೆ, ಜೇನು ಮತ್ತು ಕಾರ್ನ್ ಸಿರಪ್‌ಗಳನ್ನು ಇವು ಒಳಗೊಂಡಿರುತ್ತವೆ. ಇದು ನಿಮ್ಮ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಹಾಗೂ ರಕ್ತದ ಸಕ್ಕರೆ ಪ್ರಮಾಣವನ್ನು ವೃದ್ಧಿಗೊಳಿಸಲಿದೆ.

English summary

worst foods not to eat in the early morning

Health experts recommend these foods for breakfast: berries, oatmeal, spinach and egg omelette and Greek yogurt. A meal with 25 to 30 grams of protein, 3 grams of fibre and healthy fats like those found in nuts and avocado should be aimed for. But most choose these wrong foods for breakfast like breakfast cereals, pastries, store-bought sandwiches
X
Desktop Bottom Promotion