For Quick Alerts
ALLOW NOTIFICATIONS  
For Daily Alerts

ಮಲಗುವ ಸಮಯದಲ್ಲಿ, ಪುರುಷರು-ಮಹಿಳೆಯರು ಅಂಡರ್ ವೇರ್ ಹಾಕಲೇಬಾರದಂತೆ!

|

ನಿದ್ರಿಸುವಾಗ ಸುಖವಾದ ನಿದ್ರೆ ಬಂದು ದೇಹಕ್ಕೆ ಆರಾಮ ಸಿಗಬೇಕೆಂದು ಪ್ರತಿಯೊಬ್ಬರು ಬಯಸುವರು. ನಿದ್ರೆ ಸರಿಯಾಗಿ ಬರದೆ ಇರಲು ಹಲವಾರು ರೀತಿಯ ಕಾರಣಗಳು ಇರಬಹುದು. ನಮ್ಮ ದೇಹದ ಮೇಲಿನ ಒತ್ತಡ ಹಾಗೂ ಮನಸ್ಸಿಗೆ ಆಗುತ್ತಿರುವ ಒತ್ತಡವು ಇದಕ್ಕೆ ಕಾರಣವಾಗಿದೆ. ಇಂತಹ ಸಮಯದಲ್ಲಿ ಒಳಉಡುಪನ್ನು ಧರಿಸಿ ಮಲಗಬೇಕೇ ಅಥವಾ ಬೇಡವೇ ಎನ್ನುವ ಪ್ರಶ್ನೆಗಳು ಹೆಚ್ಚಿನವರನ್ನು ಕಾಡುವುದು. ಇದರ ಬಗ್ಗೆ ಈ ಲೇಖನದಲ್ಲಿ ಸವಿವರವಾಗಿ ನಿಮಗೆ ತಿಳಿಸಿಕೊಡಲಿದ್ದೇವೆ... ಮುಂದೆ ಓದಿ

ಮಲಗುವಾಗ ಮಹಿಳೆಯರು ಒಳ ಉಡುಪು ಹಾಕದಿರುವುದೇ ಒಳ್ಳೆಯದು

ಮಲಗುವಾಗ ಮಹಿಳೆಯರು ಒಳ ಉಡುಪು ಹಾಕದಿರುವುದೇ ಒಳ್ಳೆಯದು

ಕೆಲವು ಕ್ರಿಮಿಗಳಿಗೆ ಕೊಂಚವೇ ತೇವಾಂಶವಿದ್ದರೂ ಸಾಕು, ಅಲ್ಲಿಯೇ ಬೀಡು ಬಿಟ್ಟು ಮನೆ ಮಾಡಿ ಸಂತಾನ ಅಭಿವೃದ್ಧಿಗೆ ತೊಡಗಿಯೇ ಬಿಡುತ್ತವೆ. ಅಲ್ಪಕಾಲದಲ್ಲಿಯೇ ಬಹಳವಾಗಿ ವೃದ್ಧಿಸಿ ಚರ್ಮಕ್ಕೆ ಸೋಂಕು ಉಂಟುಮಾಡುತ್ತವೆ. ಬೆವರನ್ನು ಹೀರಿರುವ ಒಳ ಉಡುಪು ಈ ಕ್ರಿಮಿಗಳಿಗೆ ಅತ್ಯಂತ ಸಮರ್ಪಕ ತಾಣವಾಗಿದೆ. ಇದನ್ನು ತೊಟ್ಟೇ ಇಡಿಯ ದಿನ ಇದ್ದರೆ ಈ ಕ್ರಿಮಿಗಳು ಸೋಂಕು ಹರಡಿ ಹಬ್ಬ ಹುಡಿ ಹಾರಿಸುತ್ತವೆ. ಈ ಕ್ರಿಮಿಗಳಿಗೆ ಸೋಲುವ ಬದಲು ಒಳ ಉಡುಪು ತೆಗೆದಿಡುವುದು ಜಾಣತನದ ಕ್ರಮ. ಕೆಲವರಲ್ಲಿ ಒಂದೇ ಒಳ ಉಡುಪನ್ನು ಒಂದಕ್ಕಿಂತ ಹೆಚ್ಚು ದಿನ ಧರಿಸುವ ಅಭ್ಯಾಸವಿರುತ್ತದೆ. ಇವರಿಗೆ ಸೋಂಕು ಹರಡುವ ಸಾಧ್ಯತೆ ಅತ್ಯಂತ ಹೆಚ್ಚು.

ಯೋನಿಯಲ್ಲಿ ಸಮಸ್ಯೆ ಕಾಡಬಹುದು!

ಯೋನಿಯಲ್ಲಿ ಸಮಸ್ಯೆ ಕಾಡಬಹುದು!

ಐಷಾರಾಮಿ ಒಳಉಡುಪಿನ ಬ್ರಾಂಡ್ ಗಳು ಕೆಲವೊಂದು ಆಕರ್ಷಕ ವಿನ್ಯಾಸ ಹಾಗೂ ಬಣ್ಣವನ್ನು ಹೊಂದಿರುವುದು. ಆದರೆ ಇದು ಸರಿಯಾದ ಇರಲ್ಲ. ನಿಮ್ಮ ಒಳ ಉಡುಪು ಸ್ಯಾಟಿನ್, ಸಿಲ್ಕ್ ಮತ್ತು ಸಿಂಥೆಟಿಕ್ಸ್ ಬಟ್ಟೆಯಿಂದ ಮಾಡಿದ್ದರೆ, ಆಗ ನೀವು ರಾತ್ರಿ ವೇಳೆ ಇದಕ್ಕೆ ವಿದಾಯ ಹೇಳಬೇಕು. ಯಾಕೆಂದರೆ ಇದು ಮಾಯಿಶ್ಚರೈಸ್ ಉಳಿಯುವಂತೆ ಮಾಡುವುದು ಮತ್ತು ಗಾಳಿ ಬರದಂತೆ ತಡೆಯುವುದು. ಒಳ ಉಡುಪು ಒಳ್ಳೆಯ ಹತ್ತಿ ಮತ್ತು ಗಾಳಿಯಾಡುತ್ತಲಿದ್ದರೆ ಆಗ ನೀವು ಅದನ್ನು ಬಳಸಬಹುದು.

Most Read: ಸೆಕ್ಸ್ ವೇಳೆ ಪುರುಷರಲ್ಲಿ ನೋವಿಗೆ ಕಾರಣಗಳು ಹಾಗೂ ಸರಳ ಸಲಹೆಗಳು

ಸೋಂಕು ತಗುಲಬಹುದು

ಸೋಂಕು ತಗುಲಬಹುದು

ಸೊಂಟದ ಭಾಗವನ್ನು ಸ್ಯಾಟಿನ್ ಭಾಗದಿಂದ ಮುಚ್ಚಿಕೊಂಡಿದ್ದರೆ ಆಗ ಮೊಶ್ಚಿರೈಸರ್ ಅಲ್ಲಿ ನಿಲ್ಲುವುದು. ಇದರಿಂದ ಆ ಭಾಗದಲ್ಲಿ ಬ್ಯಾಕ್ಟೀರಿಯಾವು ನಿರ್ಮಾಣವಾಗುವುದು. ಇದು ಯೀಸ್ಟ್ ಸೋಂಕು ಅಥವಾ ಮೂತ್ರನಾಳದ ಸೋಂಕಿಗೆ ಕಾರಣವಾಗಬಹುದು. ನೀವು ಥೊಂಗ್ ಧರಿಸುತ್ತಿದ್ದರೆ ಆಗ ರಾತ್ರಿ ಸಮಯದಲ್ಲಿ ಯೋನಿಯ ಸುತ್ತಲು ಬ್ಯಾಕ್ಟೀರಿಯಾವು ಉತ್ಪತ್ತಿಯಾಗದಂತೆ ತಡೆಯಲು ನೀವು ಸಾಮಾನ್ಯ ಬಿಕಿನಿ ಧರಿಸಿ.

ಯೋನಿಯು ಸ್ವಸ್ವಚ್ಛ ಗುಣ ಹೊಂದಿದೆ ಆದರೂ ನೀವು ಕೂಡ ಆರೈಕೆ ಮಾಡಿ

ಯೋನಿಯು ಸ್ವಸ್ವಚ್ಛ ಗುಣ ಹೊಂದಿದೆ ಆದರೂ ನೀವು ಕೂಡ ಆರೈಕೆ ಮಾಡಿ

ಯೋನಿಯು ಸ್ವತಃ ಸ್ವಚ್ಛವಾಗುವಂತಹ ಗುಣವನ್ನು ಹೊಂದಿದೆ ಮತ್ತು ನಮ್ಮಿಂದ ಹೆಚ್ಚಿನ ಶ್ರಮ ಬೇಕಿಲ್ಲವೆಂದು ಹೆಚ್ಚಿನವರು ವಾದಿಸುವರು. ಅದು ಸ್ವತಃ ಸ್ವಚ್ಛಗೊಳಿಸುವ ಗುಣ ಹೊಂದಿದೆ. ಆದರೆ ನೀವು ಕೂಡ ಕೆಲವು ಮೂಲ ಕ್ರಮಗಳನ್ನು ಪಾಲಿಸಬೇಕು. ನೀವು ಹೆಚ್ಚಿನ ಆರೈಕೆ ಮಾಡುತ್ತಲಿದ್ದರೆ ಒಳ್ಳೆಯದು. ಇಲ್ಲವೆಂದಾದರೆ ಕನಿಷ್ಠ ಪಕ್ಷ ಒಳ ಉಡುಪಿನ ಕಡೆ ಗಮನಹರಿಸಿ.

 ಗುಪ್ತಾಂಗಗಳಲ್ಲಿ ತುರಿಕೆ

ಗುಪ್ತಾಂಗಗಳಲ್ಲಿ ತುರಿಕೆ

ಒಳ ಉಡುಪುಗಳನ್ನು ತೊಡದೇ ಮಲಗುವುದರಿಂದ ಲಭಿಸುವ ಅತ್ಯುತ್ತಮ ಪ್ರಯೋಜನವೆಂದರೆ ತುರಿಕೆ ಇಲ್ಲವಾಗುವುದು. ಸಾಮಾನ್ಯವಾಗಿ ಈ ಭಾಗಗಳಲ್ಲಿ ಬ್ಯಾಕ್ಟೀರಿಯಾಗಳು ಸೋಂಕು ಉಂಟುಮಾಡುವ ಮೂಲಕ ತುರಿಕೆ ಎದುರಾಗುತ್ತದೆ. ನಾಲ್ಕು ಜನರ ಎದುರು ಈ ಭಾಗವನ್ನು ತುರಿಸಲು ಸಾಧ್ಯವಾಗದೇ ಮುಜುಗರ ಎದುರಿಸಬೇಕಾಗುತ್ತದೆ. ಆದ್ದರಿಂದ ರಾತ್ರಿ ಮಲಗುವ ಮುನ್ನ ತೆಳುವಾದ ಸಡಿಲ ಬಟ್ಟೆಗಳನ್ನು ಒಳ ಉಡುಪುರಹಿತವಾಗಿ ತೊಟ್ಟು ಮಲಗುವುದೇ ಆರೋಗ್ಯಕರವಾಗಿದೆ.

Most Read: ಸಕ್ಸ್ ವಿಚಾರದಲ್ಲಿರುವ ಕಟ್ಟುಕಥೆಗಳು! ಈ ಸುಳ್ಳುಗಳನ್ನು ಎಂದೂ ನಂಬದಿರಿ!

ಮೂತ್ರನಾಳದಲ್ಲಿ ಸೋಂಕು ಉಂಟಾಗಬಹುದು!

ಮೂತ್ರನಾಳದಲ್ಲಿ ಸೋಂಕು ಉಂಟಾಗಬಹುದು!

ವಿಶೇಷವಾಗಿ ಮೂತ್ರವಿಸರ್ಜಿಸುವ ಸ್ಥಳದಲ್ಲಿ ಗಾಳಿಯಾಡದೇ ಆರ್ದ್ರತೆಯನ್ನು ಅಲ್ಲಿಯೇ ಉಳಿಸುವ ಮೂಲಕ ಈ ಸ್ಥಳ ಕೆಟ್ಟ ಬ್ಯಾಕ್ಟೀರಿಯಾಗಳಿಗೆ ಅತ್ಯುತ್ತಮವಾದ ಆಶ್ರಯತಾಣವಾಗಿ ಮಾರ್ಪಡುತ್ತದೆ. ಇದು ಮುಂದುವರೆದು ಶಿಲೀಂಧ್ರದ ಸೋಂಕು ಅಥವಾ ಮೂತ್ರನಾಳದ ಒಳಗೆ ಪ್ರವೇಶಿಸಿ ಮೂತ್ರನಾಳ ಅಥವಾ ಮೂತ್ರಕೋಶದಲ್ಲಿ ಸೋಂಕು ಉಂಟಾಗಬಹುದು.

ಕೆಳಹೊಟ್ಟೆಯಲ್ಲಿ ನೋವು

ಕೆಳಹೊಟ್ಟೆಯಲ್ಲಿ ನೋವು

ಒಳ ಉಡುಪು ಧರಿಸದೇ ಮಲಗುವ ಮೂಲಕ ರಾತ್ರಿ ನಡೆಯುವ ಅನೈಚ್ಛಿಕ ಕಾರ್ಯಗಳು ಸುಸೂತ್ರವಾಗಿ ನೆರವೇರುತ್ತವೆ. ವಿಶೇಶವಾಗಿ ಕೆಳಹೊಟ್ಟೆಯಲ್ಲಿ ಪೂರ್ಣ ಪ್ರಮಾಣದ ರಕ್ತಪರಿಚಲನೆ ಜರುತ್ತದೆ ಹಾಗೂ ಜೀರ್ಣಕ್ರಿಯೆಯೂ ಸರಾಗವಾಗಿ ನಡೆಯುತ್ತದೆ. ಈ ಮೂಲಕ ಎದುರಾಗಬಹುದಾಗಿದ್ದ ಅತಿಸಾರ, ಮಲಬದ್ದತೆ, ಬೆನ್ನುನೋವು ಮೊದಲಾದ ತೊಂದರೆಗಳು ಎದುರಾಗುವುದಿಲ್ಲ. ಒಳ ಉಡುಪುಗಳನ್ನು ತೊಡದೇ ಮಲಗುವ ಅತ್ಯುತ್ತಮ ಪ್ರಯೋಜನ ಇದಾಗಿದೆ.

ಒಳಉಡುಪು ಇಲ್ಲದೆ ಮಲಗಲು ಅಸಹಜವೆನಿಸುತ್ತಿದೆಯಾ? ಹಾಗಾದರೆ ಹೀಗೆ ಮಾಡಿ.

ಒಳಉಡುಪು ಇಲ್ಲದೆ ಮಲಗಲು ಅಸಹಜವೆನಿಸುತ್ತಿದೆಯಾ? ಹಾಗಾದರೆ ಹೀಗೆ ಮಾಡಿ.

ಮಲಗುವಾಗ ಒಳಉಡುಪು ಧರಿಸದರೆ ಇರುವುದು ನಿಮಗೆ ಇಷ್ಟವಾಗಿಲ್ಲವೆಂದಾದರೆ ನೀವು ಈ ಕ್ರಮಗಳನ್ನು ತೆಗೆದುಕೊಳ್ಳಬಹುದು. ಪ್ಯಾಂಟಿ ಧರಿಸುವುದನ್ನು ಬಿಡಿ ಮತ್ತು ಯಾವುದಾದರೂ ದೊಡ್ಡ ಗಾತ್ರದ ಒಳ ಉಡುಪು ಧರಿಸಿ. ಇದರಿಂದ ಗಾಳಿಯು ಒಳಹೊರಗೆ ಹೋಗುವುದು. ಶೇ. ನೂರರಷ್ಟು ಹತ್ತಿಯಿಂದ ಮಾಡಿರುವಂತಹ ಗ್ರ್ಯಾನಿ ಪ್ಯಾಂಟಿಗಳನ್ನು ನೀವು ಧರಿಸಬಹುದು. ಇದರಿಂದ ತಾಜಾ ಗಾಳಿ ಒಳಹೋಗುವುದು.

ಪುರುಷರು ಕೂಡ ರಾತ್ರಿ ವೇಳೆ ಒಳಉಡುಪು ಯಾಕೆ ಧರಿಸಬಾರದೇ?

ಪುರುಷರು ಕೂಡ ರಾತ್ರಿ ವೇಳೆ ಒಳಉಡುಪು ಯಾಕೆ ಧರಿಸಬಾರದೇ?

ಬಿಗಿಯಾದ ಒಳ ಉಡುಪು ಧರಿಸಿದರೆ ಅದರಿಂದ ಪುರುಷರ ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಸೆಖೆಯ ಸಮಯದಲ್ಲಿ ಜನನಾಂಗಗಳಿಗೆ ಹೆಚ್ಚಿನ ಗಾಳಿ ಮತ್ತು ತಂಪು ಬೇಕಾಗುತ್ತದೆ. ವಾಸ್ತವವಾಗಿ ವೀರ್ಯದ ಉತ್ಪಾದನೆಗೆ ಶರೀರಕ್ಕಿಂತ ಕೊಂಚ ಕಡಿಮೆ ತಾಪಮಾನದ ಅಗತ್ಯವಿದ್ದು ಇದೇ ಕಾರಣಕ್ಕೆ ವೃಷಣಗಳು ದೇಹದಿಂದ ಹೊರಗೆ ಚಾಚಿಕೊಂಡಿವೆ. ಆದ್ದರಿಂದ ದಿನದ ಇಪ್ಪತ್ತನಾಲ್ಕೂ ಗಂಟೆ, ವರ್ಷಪೂರ್ತಿ ಒಳ ಉಡುಪನ್ನು ತೊಟ್ಟೇ ಇರುವುದು ಮಾತ್ರ ಸರ್ವಥಾ ಆರೋಗ್ಯಕರವಲ್ಲ, ಇದು ವೃಷಣಗಳ ತಾಪಮಾನವನ್ನು ಹೆಚ್ಚಿಸಿ ಪೌರುಷ ಮತ್ತು ವೀರ್ಯಾಣುಗಳ ಸಂಖ್ಯೆ, ಗುಣಮಟ್ಟವನ್ನು ಕುಂದಿಸುತ್ತದೆ. ಒಳ ಉಡುಪು ಇಲ್ಲದಿದ್ದಾಗ ರಕ್ತಸಂಚಾರ ಉತ್ತಮಗೊಂಡು ಜನನಾಂಗಗಳ ಕ್ಷಮತೆ ಉತ್ತಮವಾಗಿರುತ್ತದೆ.

ಟೈಟಾದ ಒಳ ಚಡ್ಡಿ ಹಾಕಿದರೆ, ಇಂತಹ ಸಮಸ್ಯೆ ಕಾಡಬಹುದು!

ಟೈಟಾದ ಒಳ ಚಡ್ಡಿ ಹಾಕಿದರೆ, ಇಂತಹ ಸಮಸ್ಯೆ ಕಾಡಬಹುದು!

ನಮ್ಮ ಆರೋಗ್ಯದ ರಕ್ಷಣೆಯ ವಿಚಾರದಲ್ಲಿ ನಾವು ಧರಿಸುವ ಒಳ ಉಡುಪು ಸಹ ವಿಶೇಷ ಸಂಗತಿಯಾಗಿರುತ್ತದೆ. ದೇಹದ ಸೂಕ್ಷ್ಮ ಭಾಗಗಳಲ್ಲಿ ಶುಚಿಯಾದ ಹಾಗೂ ಸಡಿಲವಾಗಿರುವಂತಹ ಬಟ್ಟೆಯನ್ನು ಧರಿಸಬೇಕು. ಇಲ್ಲವಾದರೆ ಅನೇಕ ಬಗೆಯ ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುವುದು. ಕೆಲವರಿಗೆ ಬಿಗಿಯಾದ ಒಳ ಉಡುಪನ್ನು ಧರಿಸುವ ಹವ್ಯಾಸಗಳಿರುತ್ತವೆ. ಇದರಿಂದ ಸೂಕ್ತ ರೀತಿಯಲ್ಲಿ ರಕ್ತ ಸಂಚಾರ ಉಂಟಾಗದೆ ಇರಬಹುದು. ಶುಚಿಯಾಗಿರದೆ ಇರುವುದು ಅಥವಾ ಬಿಗಿದಂತಿರುವ ಒಳ ಉಡುಪಿನಿಂದ ಸೋಂಕುಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ ಅಲ್ಲದೆ ಕ್ಯಾನ್ಸರ್ ನಂತಹ ಸಮಸ್ಯೆ ತಲೆದೂರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಕೆಲವು ಅಧ್ಯಯನಗಳು ದೃಢಪಡಿಸಿವೆ. ವೈದ್ಯಕೀಯ ಹೇಳಿಕೆಯ ಪ್ರಕಾರ ಬಿದಂತಿರುವ ಒಳ ಉಡುಪು ಧರಿಸುವುದರಿಂದ ಪುರುಷರಲ್ಲಿ ಸಂತಾನೋತ್ಪತ್ತಿಯ ಸಮಸ್ಯೆ ಉಂಟಾಗಬಹುದು.

ವೀರ್ಯಾಣುಗಳ ಸಮಸ್ಯೆ

ವೀರ್ಯಾಣುಗಳ ಸಮಸ್ಯೆ

ಬಿಗಿಯಾದ ಒಳ ಉಡುಪು ಧರಿಸುವುದರಿಂದ ಅತ್ಯಂತ ಅಪಾಯಕಾರಿ ಆರೋಗ್ಯ ಸಮಸ್ಯೆಗಳಲ್ಲಿ ವೀರ್ಯಾಣುಗಳ ಸಮಸ್ಯೆಯು ಒಂದು. ಬಿಗಿಯಾದ ಒಳ ಉಡುಪುಗಳು ತೊಡೆ ಸಂಧಿಯಲ್ಲಿ ಸಂಕೋಚನವನ್ನು ಕಡಿಮೆ ಮಾಡುತ್ತದೆ. ವೀರ್ಯಾಣು ಉತ್ಪಾದನೆ ಮಾಡುವ ಸ್ಕ್ರೋಟಮ್ ಸುತ್ತಲೂ ತಾಪಮಾನ ಹೆಚ್ಚಾಗುತ್ತದೆ.

ರಕ್ತ ಪರಿಚಲನೆಯ ತೊಂದರೆ

ರಕ್ತ ಪರಿಚಲನೆಯ ತೊಂದರೆ

ದೀರ್ಘಕಾಲದ ವರೆಗೆ ಬಿಗಿಯಾದ ಒಳ ಉಡುಪು ಧರಿಸುವುದರಿಂದ ಸೂಕ್ತ ರೀತಿಯಲ್ಲಿ ರಕ್ತ ಪರಿಚಲನೆ ಉಂಟಾಗದು. ಬಿಗಿದಂತಾದ ಪ್ರದೇಶದಲ್ಲಿ ನರಗಳು ನಿಶ್ಚೇತನಗೊಳ್ಳುವುದು. ಸಾಕಷ್ಟು ಪ್ರಮಾಣದಲ್ಲಿ ರಕ್ತ ಪರಿಚಲನೆ ಉಂಟಾಗದಿದ್ದಾಗ ಅಂಗಾಂಶಗಳ ಕಾರ್ಯ ಸ್ಥಗಿತಗೊಳ್ಳಬಹುದು.

ಯೋನಿ ಸೋಂಕು

ಯೋನಿ ಸೋಂಕು

ತುಂಬಾ ಬಿಗಿದ ಒಳ ಉಡುಪು ಧರಿಸುವುದರಿಂದ ರಕ್ತ ಪರಿಚಲನೆ ಉಂಟಾಗದೆ ನಿಕಟ ಪ್ರದೇಶಕ್ಕೆ ಕಿರಿಕಿರಿ ಉಂಟಾಗುವುದು ಜೊತೆಗೆ ಉರಿಯೂತವು ಉಂಟಾಗುವುದು. ಕೆಲವೊಮ್ಮೆ ಮರಗಟ್ಟಿರುವಂತಹ ಸಂವೇದನೆ ಅಥವಾ ಜುಮ್ಮೆನುವ ಸಂವೇದನೆಯನ್ನು ಅನುಭವಿಸಬಹುದು. ಬಿಗಿದ ಒಳ ಉಡುಪನ್ನು ಧರಿಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಬಹುದು.

ಎದೆಯುರಿ

ಎದೆಯುರಿ

ಬಿಗಿದ ಒಳ ಉಡುಪು ಧರಿಸುವುದರಿಂದ ಎದೆ ಉರಿಯೂ ಉಂಟಾಗುವುದು. ಒಟ್ಟೆ ಭಾಗ ಹಾಗೂ ಸೊಂಟದ ಭಾಗದಲ್ಲಿ ಬಿಗಿದ ಒಳ ಉಡುಪು ಧರಿಸುವುದರಿಂದ ಹೊಟ್ಟೆಯನ್ನು ಕಠಿಣ ಸ್ಥಿತಿಗೆ ತಳ್ಳಿದಂತಾಗುವುದು. ಅನ್ನನಾಳದಲ್ಲಿ ಆಮ್ಲದ ಗುಣವು ಹೆಚ್ಚಾಗುವುದು. ಇದರಿಂದ ಎದೆ ಉರಿಯು ಸಂಭವಿಸುವುದು.

ಮೂತ್ರದಲ್ಲಿ ಸೊಂಕು

ಮೂತ್ರದಲ್ಲಿ ಸೊಂಕು

ಬಿಗಿದ ಒಳ ಉಡುಪು ಧರಿಸುವುದರಿಂದ ಯೋನಿಗೆ ಉಸಿರಾಟ ಸೂಕ್ತ ರೀತಿಯಲ್ಲಿ ಉಂಟಾಗದು. ಹಾಗಾಗಿ ಬಹುಬೇಗ ಯೀಸ್ಟ್ ಸೋಂಕು ಆವರಿಸುವುದು. ಮೂತ್ರದಲ್ಲಿ ಸೋಂಕು ಉಂಟಾಗುವುದರಿಂದ ವಿಪರೀತ ನೋವನ್ನು ಅನುಭವಿಸಬೇಕಾಗುವುದು.

ಚರ್ಮದ ಸೋಂಕು

ಚರ್ಮದ ಸೋಂಕು

ಬಿಗಿದ ಒಳ ಉಡುಪು ಧರಿಸುವುದರಿಂದ ತೊಡೆ ಸಂಧು ಹಾಗೂ ಸೊಂಟದ ಸುತ್ತಲು ಕೆಂಪು ಕಲೆಗಳು ಉಂಟಾಗುತ್ತವೆ. ಇದು ಚರ್ಮದ ಮೇಲೆ ಗಂಭೀರ ಪರಿಣಾಮ ಉಂಟಾಗುವುದು. ಕಪ್ಪು ಕಲೆ ಹಾಗೂ ಇನ್ನಿತರ ಸಮಸ್ಯೆಗಳು ತಲೆದೂರುವುದು. ಹಾಗಾಗಿ ಯಾವಾಗಲೂ ಶುಚಿಯಾದ ಹಾಗೂ ಸಡಿಲವಿರುವ ಒಳ ಉಡುಪನ್ನು ಧರಿಸುವುದನ್ನು ರೂಢಿಸಿಕೊಳ್ಳಬೇಕು. ಆಗ ಅನೇಕ ಸಮಸ್ಯೆಗಳಿಂದ ದೂರ ಉಳಿಯಬಹುದು.

English summary

Why you should take off your underwear before sleeping

Most of us hit the bed in our most comfortable boxers and tees which are of breathable fabric and at least two sizes bigger than what we usually wear. The boyfriend boxers are all too good but do you still wear your undie beneath it? If yes, you are doing yourself a wrong. Here’s why.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more