For Quick Alerts
ALLOW NOTIFICATIONS  
For Daily Alerts

ಹೊಸ ಬಟ್ಟೆಗಳನ್ನು ಧರಿಸುವ ಮುನ್ನ, ಯಾವತ್ತೂ ಒಗೆಯದೇ ಧರಿಸಬೇಡಿ

|

ನಿಜ ಹೇಳಬೇಕೆಂದರೆ ನಮ್ಮಲ್ಲಿ ಬಹುತೇಕರು ಹೊಸ ಬಟ್ಟೆಗಳನ್ನು ಒಗೆಯದೆ ಅಥವಾ ತೊಳೆಯದೇ (ವಾಶ್ ಮಾಡದೆ) ಧರಿಸುವವರೇ ಆಗಿದ್ದೇವೆ. ಅಂಗಡಿಯಿಂದ ತಂದ ಬಟ್ಟೆಯನ್ನು ನೇರವಾಗಿ ಧರಿಸಿಕೊಂಡು ಸಂಭ್ರಮಿಸುವುದರಲ್ಲಿ ಇರುವ ಮಜಾನೇ ಬೇರೆ ಅಲ್ಲವೆ?

ಇಷ್ಟಕ್ಕೂ ಬಟ್ಟೆ ಹೊಸದಿರುವಾಗ ಮತ್ತೆ ವಾಶ್ ಮಾಡುವ ಅವಶ್ಯಕತೆಯಾದರೂ ಏನು ಎನಿಸುವುದು ಸಹಜ. ಜೊತೆಗೆ ಸೋಮಾರಿತನ ಬೇರೆ ಜೊತೆಯಾಗಿ ಯಾರಪ್ಪಾ ಹೊಸ ಬಟ್ಟೆ ಒಗೆಯುವುದು, ಮೊದಲು ಹಾಕಿಕೊಂಡರಾಯ್ತು ಅನಿಸುತ್ತದೆ. ಶಾಪ್‌ನಲ್ಲಿ ಯಾರೋ ಒಂದಿಬ್ಬರು ಈ ಬಟ್ಟೆಯನ್ನು ಟ್ರೈ ಮಾಡಿದ್ದರೂ ಏನಾಯ್ತು? ಎಲ್ಲೂ ಗಲೀಜು ಆಗಿಲ್ಲ. ಹಾಗಿರುವಾಗ ಸುಮ್ಮನೆ ಹೊಸ ಬಟ್ಟೆ ವಾಶ್ ಮಾಡುವುದ್ಯಾಕೆ ಅಂತ ಹೊಸ ಬಟ್ಟೆ ಹಾಕಿಕೊಂಡು ಹೊರಡುವವರೇ ಜಾಸ್ತಿ.

Why You Should Always Wash New Clothes Before Wearing Them

ಆದರೆ ಹೊಸ ಬಟ್ಟೆಗಳನ್ನು ವಾಶ್ ಮಾಡದೆ ಧರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ನಿಮಗೆ ಗೊತ್ತಿರಲಿ. ಹೊಸ ಬಟ್ಟೆ ವಾಶ್ ಮಾಡೋದಾ ಅಂದುಕೊಳ್ಳಬೇಡಿ. ಹೊಸ ಬಟ್ಟೆಗಳನ್ನು ವಾಶ್ ಮಾಡಿಯೇ ಧರಿಸಬೇಕೆಂಬುದಕ್ಕೆ ಕಾರಣಗಳೇನು ಎಂಬುದನ್ನು ಇಲ್ಲಿ ತಿಳಿಸಿದ್ದೇವೆ ನೋಡಿ.

ಹೊಸ ಬಟ್ಟೆಗಳನ್ನು ವಾಶ್ ಮಾಡಿಯೇ ಧರಿಸಬೇಕೆಂಬುದಕ್ಕೆ ಇಲ್ಲಿದೆ ನೋಡಿ ಪ್ರಮುಖ ಕಾರಣಗಳಿವೆ. ಅದರಲ್ಲೂ ಅಂಡರವೇರ್, ಟಿ ಶರ್ಟಗಳು ಹಾಗೂ ಇನ್ನಿತರ ಒಳಉಡುಪುಗಳನ್ನು ಒಗೆದ ನಂತರವೇ ಧರಿಸುವುದು ಆರೋಗ್ಯಕ್ಕೆ ಒಳ್ಳೆಯದು. ಹೊಸ ಬಟ್ಟೆಗಳನ್ನು ವಾಶ್ ಮಾಡಿಯೇ ಧರಿಸಬೇಕು ಯಾಕೆ? ಕಾರಣಗಳು ಇಲ್ಲಿವೆ ನೋಡಿ;

ಅತಿಯಾದ ಬಣ್ಣದ ಅಂಶ ನಿವಾರಿಸಲು

ಅತಿಯಾದ ಬಣ್ಣದ ಅಂಶ ನಿವಾರಿಸಲು

ಹೊಸ ಬಟ್ಟೆಗಳಲ್ಲಿನ ಹೆಚ್ಚುವರಿ ಪ್ರಮಾಣದ ಡೈ (ಬಣ್ಣ) ಅನ್ನು ತೆಗೆದು ಹಾಕಲು ಬಟ್ಟೆಗಳನ್ನು ಒಗೆದು ಸ್ವಚ್ಛಗೊಳಿಸಬೇಕಾಗುತ್ತದೆ. ಈ ಬಣ್ಣಗಳಿಂದ ನಮ್ಮ ಚರ್ಮಕ್ಕೆ ಅಪಾಯವಾಗುವ ಸಾಧ್ಯತೆಗಳಿರುವುದರಿಂದ ಹೆಚ್ಚುವರಿ ಬಣ್ಣವನ್ನು ತೊಳೆಯಬೇಕಾಗುತ್ತದೆ. ಅಷ್ಟೇ ಅಲ್ಲದೆ ಎಲ್ಲ ಬಟ್ಟೆಗಳ ಜೊತೆ ಹೊಸ ಬಟ್ಟೆಗಳನ್ನೂ ಒಗೆಯಲು ನೆನೆಸಿದರೆ ಅದರಲ್ಲಿನ ಹೆಚ್ಚುವರಿ ಡೈ ಇತರ ಎಲ್ಲ ಬಟ್ಟೆಗಳಿಗೂ ತಗುಲಿ ಅವು ಅಂದಗೆಡುವ ಸಾಧ್ಯತೆಯೂ ಇರುತ್ತದೆ. ಬಹುತೇಕ ಬಟ್ಟೆಗಳನ್ನು ಸಿಂಥೆಟಿಕ್ ಫೈಬರಗಳಿಂದ (ಪಾಲಿಯೆಸ್ಟರ, ಆಕ್ರಿಲಿಕ್) ತಯಾರಿಸಲಾಗುತ್ತಿದ್ದು, ಇವುಗಳಿಗೆ ಎಝೊ-ಅನಿಲಿನ್ ಎಂಬ ಡೈ ಗಳಿಂದ ಬಣ್ಣ ಬರಿಸಲಾಗುತ್ತದೆ. ಇಂಥ ಬಣ್ಣಗಳು ಚಿಕ್ಕ ಮಕ್ಕಳಲ್ಲಿ ಚರ್ಮದ ಅಲರ್ಜಿ ಉಂಟು ಮಾಡುತ್ತವೆ. ಕೆಲವು ಬಾರಿ ಈ ಅಲರ್ಜಿ ತೀರಾ ಹೆಚ್ಚಾಗಿ ಮೈಮೇಲೆ ಗುಳ್ಳೆಗಳಾಗಿ ನೋವು ತರಿಸಬಹುದು. ಇನ್ನು ಕೆಲ ಬಾರಿ ಡ್ರೈ ಸ್ಕಿನ್, ಚರ್ಮದಲ್ಲಿ ತುರಿಕೆ ಮುಂತಾದುವುಗಳಿಗೆ ಈ ಡೈಗಳು ಕಾರಣವಾಗಬಹುದು.

Most Read: ಜೀವನದಲ್ಲಿ ಶಾಂತಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಿಸಲು, ದೇವರ ಕೋಣೆಯ ಎದುರು ತೆಂಗಿನಕಾಯಿ ಇಟ್ಟು ಪೂಜೆ ಮಾಡಿ!

ಕೀಟಾಣುಗಳ ಹರಡುವಿಕೆ

ಕೀಟಾಣುಗಳ ಹರಡುವಿಕೆ

ಶಾಪಿಂಗ್ ಮಾಲ್‌ಗಳಲ್ಲಿ ಬಟ್ಟೆಗಳನ್ನು ಟ್ರೈ ಮಾಡಲು ಪ್ರತ್ಯೇಕ ಕೋಣೆಗಳಿರುವುದನ್ನು ನೀವು ನೋಡಿಯೇ ಇರುತ್ತೀರಿ. ನೀವು ಸಹ ಅನೇಕ ಬಾರಿ ಬಟ್ಟೆಗಳನ್ನು ಟ್ರೈ ಮಾಡಿ ನಂತರ ಖರೀದಿಸಿರಬಹುದು. ಆದರೆ ಈ ರೀತಿ ಹಲವಾರು ಜನ ಬಟ್ಟೆಗಳನ್ನು ಧರಿಸಿ ನೋಡುತ್ತಾರೆ. ಇಷ್ಟವಾಗದ್ದನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಹೀಗೆ ಟ್ರೈ ಮಾಡಿದಾಗ ಯಾವುದೇ ವ್ಯಕ್ತಿಯ ತಲೆಯಲ್ಲಿನ ಹೇನು, ಮೈಮೇಲಿನ ಬ್ಯಾಕ್ಟೀರಿಯಾ, ಕಜ್ಜಿ, ಫಂಗಸ್ ಮುಂತಾದುವು ಬಟ್ಟೆಯೊಳಗೆ ಸೇರಿ ಬಿಡುತ್ತವೆ. ಅಂಥ ಬಟ್ಟೆಯನ್ನು ಕೊಂಡು ತಂದು ಹೊಸ ಬಟ್ಟೆ ಅಂತ ಹಾಗೆಯೇ ಧರಿಸಿದರೆ ಈ ಎಲ್ಲ ಕೀಟಾಣುಗಳು ನಮ್ಮ ದೇಹ ಪ್ರವೇಶಿಸುವ ಅಪಾಯವಿರುತ್ತದೆ. ಹೀಗಾಗಬಾರದು ಅಂದರೆ ಧರಿಸುವ ಮುನ್ನ ಹೊಸ ಬಟ್ಟೆಗಳನ್ನು ವಾಶ್ ಮಾಡಲೇಬೇಕು.

ಕೆಮಿಕಲ್‌ಗಳ ನಿವಾರಣೆಗೆ

ಕೆಮಿಕಲ್‌ಗಳ ನಿವಾರಣೆಗೆ

ಬಟ್ಟೆಗಳಿಗೆ ಹೊಳಪು ನೀಡುವ ಸಲುವಾಗಿ ಯೂರಿಯಾ ಫಾರ್ಮಾಲ್ಡಿಹೈಡ್ ನಂತಹ ಕೆಮಿಕಲ್‌ಗಳನ್ನು ಬಟ್ಟೆಗೆ ಹಾಕಲಾಗಿರುತ್ತದೆ. ಈ ಕೆಮಿಕಲ್‌ಗಳು ಎಲ್ಲರಿಗೂ ಅಪಾಯ ಉಂಟು ಮಾಡುವುದಿಲ್ಲವಾದರೂ ಸೂಕ್ಷ್ಮ ಸಂವೇದನೆಯ ಚರ್ಮವನ್ನು ಹೊಂದಿದವರಿಗೆ ಮಾತ್ರ ಸಮಸ್ಯೆ ಉಂಟಾಗುತ್ತದೆ. ಕಂಕುಳ, ಕಾಲರ್, ಮುಂಗೈ, ಸೊಂಟ, ತೊಡೆ ಮುಂತಾದ ಕಡೆಗಳಲ್ಲಿ ಗುಳ್ಳೆಗಳು (ದದ್ದು) ಉಂಟಾಗಬಹುದು. ಹೀಗಾಗಿ ಕೆಮಿಕಲ್‌ಗಳನ್ನು ತೆಗೆದು ಹಾಕಲು ವಾಶ್ ಮಾಡುವುದೇ ಉತ್ತಮ ಉಪಾಯ.

Most Read: ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ಸೇವಿಸಿ- ಆರೋಗ್ಯಕ್ಕೆ ಬಹಳ ಒಳ್ಳೆಯದು

ಮುಂದಿನ ಬಾರಿ ಹೊಸ ಬಟ್ಟೆಯನ್ನು ವಾಶ್ ಮಾಡಿಯೇ ಧರಿಸಿ

ಮುಂದಿನ ಬಾರಿ ಹೊಸ ಬಟ್ಟೆಯನ್ನು ವಾಶ್ ಮಾಡಿಯೇ ಧರಿಸಿ

ಆನ್‌ಲೈನ್ ಮೂಲಕ ಅಥವಾ ಶಾಪಿಂಗ್ ಮಾಲ್‌ನಲ್ಲಿ ಹೀಗೆ ಎಲ್ಲಿಂದಲೇ ಬಟ್ಟೆ ಖರೀದಿಸಿದರೂ ಮೊದಲು ವಾಶಿಂಗ್ ಅಥವಾ ಡ್ರೈ ಕ್ಲೀನಿಂಗ್ ನಂತರವೇ ಆ ಬಟ್ಟೆಗಳನ್ನು ಧರಿಸಬೇಕು. ಮಾರಾಟಕ್ಕೂ ಮುನ್ನ ಫ್ಯಾಕ್ಟರಿಯಲ್ಲಿ ಇವನ್ನು ವಾಶ್ ಮಾಡಲಾಗಿದೆ ಎಂದುಕೊಂಡರೂ ಇನ್ನೊಮ್ಮೆ ವಾಶ್ ಮಾಡುವುದೇ ಸೂಕ್ತ.

ಶಿಶುಗಳಿಗೆ ಮಾತ್ರ ಹೊಸ ಬಟ್ಟೆಗಳನ್ನು ವಾಶ್ ಮಾಡದೆ ಯಾವತ್ತೂ ಹಾಕಬಾರದು

ಶಿಶುಗಳಿಗೆ ಮಾತ್ರ ಹೊಸ ಬಟ್ಟೆಗಳನ್ನು ವಾಶ್ ಮಾಡದೆ ಯಾವತ್ತೂ ಹಾಕಬಾರದು

ಅದರಲ್ಲೂ ಶಿಶುಗಳಿಗೆ ಮಾತ್ರ ಹೊಸ ಬಟ್ಟೆಗಳನ್ನು ವಾಶ್ ಮಾಡದೆ ಯಾವತ್ತೂ ಹಾಕಬಾರದು. ಕೆಮಿಕಲ್‌ಗಳು ಹಾಗೂ ಇನ್ನಿತರ ಬ್ಯಾಕ್ಟೀರಿಯಾಗಳು ಶಿಶುಗಳ ದೇಹ ಪ್ರವೇಶ ಮಾಡದಂತೆ ಹೊಸ ಬಟ್ಟೆಗಳನ್ನು ಸ್ವಚ್ಛವಾಗಿ ಒಗೆದ ನಂತರವೇ ಬಳಸಬೇಕು. ಅಲ್ಲದೆ ಒಮ್ಮೆ ಒಗೆದ ನಂತರ ಬಟ್ಟೆಗಳು ಮೃದುವಾಗುವುದರಿಂದ ಶಿಶುಗಳ ಮೈಗೆ ಹಿತವಾಗಿರುತ್ತವೆ.

English summary

Why You Should Always Wash New Clothes Before Wearing Them

There are three good reasons to wash new clothes, especially pieces like underwear or t-shirts and shorts that are worn in direct contact with your skin, before you wear them.
X
Desktop Bottom Promotion