ನಿಮ್ಮ ಆಹಾರದಲ್ಲಿ ಸಾರಿನ ಪುಡಿಯನ್ನು ಏಕೆ ಸೇರಿಸಬೇಕು?

Posted By: Deepu
Subscribe to Boldsky

ಸಾರಿನ ಪುಡಿ ಅಥವಾ ಕರಿ ಪೌಡರ್ ಎಂದು ಸಿದ್ಧರೂಪದಲ್ಲಿ ಸಿಗುವ ಮಸಾಲೆ ಪೊಟ್ಟಣದಲ್ಲಿ ಪ್ರಮುಖವಾಗಿ ಧನಿಯ ಪುಡಿ, ಜೀರಿಗೆ, ಅರಿಶಿನ, ಮೆಣಸಿನ ಪುಡಿ ಹಾಗೂ ಮೆಂತೆಗಳಿವೆ. ಈ ಎಲ್ಲಾ ಮಸಾಲೆ ಪದಾರ್ಥಗಳು ಒಂದು ನಿಗದಿತ ಪ್ರಮಾಣದಲ್ಲಿ ಮಿಶ್ರಣಗೊಂಡಿರುತ್ತವೆ. ಈ ಪುಡಿ ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಿದ್ದು ಪ್ರತಿ ಮಸಾಲೆಯ ಗುಣವೂ ಇನ್ನೊಂದಕ್ಕೆ ಪೂರಕವಾಗಿದ್ದು ಇವುಗಳ ಪ್ರಯೋಜನವೂ ಗರಿಷ್ಟಪ್ರಮಾಣದಲ್ಲಿ ದೊರಕುತ್ತದೆ. ಈ ಪುಡಿಯ ಸೇವನೆಯಿಂದ ಆರೋಗ್ಯವೂ ವೃದ್ದಿಯಾಗುತ್ತದೆ ಹಾಗೂ ಆಯಸ್ಸು ವೃದ್ದಿಗೊಳ್ಳುತ್ತದೆ. ಈ ಪುಡಿಗಳಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿದ್ದು ದೇಹದ ಉರಿಯೂತವನ್ನು ಕಡಿಮೆಗೊಳಿಸುತ್ತದೆ ಹಾಗೂ ಈ ಮೂಲಕ ತೂಕ ಇಳಿಸಲೂ ನೆರವಾಗುತ್ತದೆ.

ನಮ್ಮ ದೇಹದಲ್ಲಿ ಕಲ್ಮಶಗಳು ಮತ್ತು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳು ಸದಾ ಸಂಗ್ರಹವಾಗುತ್ತಲೇ ಇರುತ್ತವೆ. ಕಾಲಕಾಲಕ್ಕೆ ಇವುಗಳನ್ನು ದೇಹದಿಂದ ವಿಸರ್ಜಿಸುತ್ತಾ ಇರಬೇಕು ಹಾಗೂ ಇವುಗಳ ಸಂಗ್ರಹ ಹೆಚ್ಚಲು ಬಿಡಬಾರದು. ಇದರ ಸಂಗ್ರಹ ಹಲವಾರು ರೋಗಗಳಿಗೆ ಕಾರಣವಾಗಬಹುದು. ಆಹಾರದಲ್ಲಿ ಸಾರಿನ ಪುಡಿಯನ್ನು ಬೆರೆಸುವ ಮೂಲಕ ಕಲ್ಮಶಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ ಹಾಗೂ ಇವುಗಳ ಸಂಗ್ರಹ ಹೆಚ್ಚದಂತೆ ತಡೆಯಲೂ ಸಾಧ್ಯವಾಗುತ್ತದೆ.

ಕಲ್ಮಶಗಳ ನಿವಾರಣೆಯ ಹೊರತಾಗಿ ನಾರಿನ ಪುಡಿಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಇಂದಿನ ಲೇಖನದಲ್ಲಿ ಸಾರಿನ ಪುಡಿಯ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಲಾಗಿದೆ. ಈ ಮಾಹಿತಿ ನಿಮ್ಮ ಮುಂದಿನ ಖಾದ್ಯದಲ್ಲಿ ಸಾರಿನ ಪುಡಿಯನ್ನು ಬೆರೆಸಲು ಖಂಡಿತವಾಗಿಯೂ ಪ್ರೇರಣೆ ನೀಡಲಿದೆ....

ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ ಹಾಗೂ ಹೊಟ್ಟೆನೋವನ್ನು ನಿವಾರಿಸುತ್ತದೆ

ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ ಹಾಗೂ ಹೊಟ್ಟೆನೋವನ್ನು ನಿವಾರಿಸುತ್ತದೆ

ಸಾರಿನ ಪುಡಿಯನ್ನು ನಿಮ್ಮ ನೆಚ್ಚಿನ ಸಾಂಬಾರ್ ನಲ್ಲಿ ಬೆರೆಸಿ ಸೇವಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ವಾಯುಪ್ರಕೋಪ ಇಲ್ಲವಾಗುತ್ತದೆ. ಅಲ್ಲದೇ ಹೊಟ್ಟೆಯಲ್ಲಿ ಕೆಲವು ಜೀರ್ಣರಸಗಳನ್ನೂ ಹೆಚ್ಚಿಸಿ ಅಜೀರ್ಣತೆಯನ್ನು ನಿವಾರಿಸುತ್ತದೆ. ಈ ಗುಣ ಅಜೀರ್ಣತೆಯಿಂದ ಬಳಲುವ ವ್ಯಕ್ತಿಗಳಿಗೆ ಹೆಚ್ಚು ನೆರವಾಗುತ್ತದೆ. ಅಲ್ಲದೇ ಅತಿಸಾರ, ಹೊಟ್ಟೆನೋವು, ವಾಂತಿ ಮೊದಲಾದವುಗಳನ್ನು ನಿವಾರಿಸಲು ನೆರವಾಗುತ್ತದೆ.

ದೇಹದ ಉರಿಯೂತ ನಿವಾರಿಸುತ್ತದೆ

ದೇಹದ ಉರಿಯೂತ ನಿವಾರಿಸುತ್ತದೆ

ದೇಹಕ್ಕೆ ಎದುರಾಗುವ ಹಲವಾರು ಉರಿಯೂತಗಳನ್ನು ಕಡಿಮೆ ಮಾಡಲು ಸಾರಿನ ಪುಡಿ ನೆರವಾಗುತ್ತದೆ. ತನ್ಮೂಲಕ ತೂಕ ಇಳಿಕೆ ಸುಲಭವಾಗುತ್ತದೆ. ಅಲ್ಲದೇ ವಿಶೇಷವಾಗಿ ಮೇದೋಜೀರಕ ಗ್ರಂಥಿ, ಜಠರಗರುಳು, ಮೂಳೆಗಳ ಗಂಟುಗಳಲ್ಲಿ ಎದುರಾಗುವ ಉರಿಯೂತವನ್ನು ನಿವಾರಿಸಿ ಈ ಭಾಗದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ.

ಯಕೃತ್ ಅನ್ನು ರಕ್ಷಿಸುತ್ತದೆ

ಯಕೃತ್ ಅನ್ನು ರಕ್ಷಿಸುತ್ತದೆ

ಸಾರಿನ ಪುಡಿ ಬೆರೆಸಿದ ಆಹಾರಗಳ ಸೇವನೆಯಿಂದ ಯಕೃತ್ ಗೆ ಎದುರಾಗುವ ಹಲವಾರು ಕಾಯಿಲೆಗಳಿಂದ ರಕ್ಷಣೆ ದೊರಕುತ್ತದೆ. ಯಕೃತ್ ನಲ್ಲಿ ಕಲ್ಮಶಗಳು ಸಂಗ್ರಹವಾಗದಂತೆ ತಡೆಯುವ ಮೂಲಕ ಉರಿಯೂತಕ್ಕೆ ಒಳಗಾಗುವ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ ಹಾಗೂ ಯಕೃತ್ ನ ಕೊಬ್ಬು ಉತ್ಪತ್ತಿಯಾಗುವ ಸಾಧ್ಯತೆಯನ್ನೂ ನಿವಾರಿಸುತ್ತದೆ. ಈ ಕಾರಣಕ್ಕಾದರೂ ಸಾರಿನ ಪುಡಿಯನ್ನು ಆಗಾಗ ಆಹಾರದೊಡನೆ ಸೇವಿಸುತ್ತಿರಬೇಕು.

ಬ್ಯಾಕ್ಟೀರಿಯಾಗಳ ಸೋಂಕು ನಿವಾರಿಸುತ್ತದೆ

ಬ್ಯಾಕ್ಟೀರಿಯಾಗಳ ಸೋಂಕು ನಿವಾರಿಸುತ್ತದೆ

ಸಾರಿನ ಪುಡಿಯಲ್ಲಿ ಆರೋಗ್ಯವನ್ನು ಕೆಡಿಸುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಇದೆ. ಈ ಮೂಲಕ ಸಾರಿನ ಪುಡಿ ಬ್ಯಾಕ್ಟೀರಿಯಾಗಳ ಸೋಂಕಿನಿಂದ ರಕ್ಷಣೆ ಒದಗಿಸುತ್ತದೆ. ವಿಶೇಷವಾಗಿ ಕರುಳು, ಜಠರಗಳಲ್ಲಿ ಎದುರಾಗುವ ಬ್ಯಾಕ್ಟೀರಿಯಾಗಳ ಸೋಂಕಿನಿಂದ ರಕ್ಷಿಸುವ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅಲ್ಲದೇ ಹೊಟ್ಟೆ ಮತ್ತು ಜಠರಗಳಲ್ಲಿ ಎದುರಾಗುವ ವ್ರಣಗಳಿಂದಲೂ ರಕ್ಷಣೆ ಒದಗಿಸುತ್ತದೆ.

ಮೂಳೆಗಳನ್ನು ಆರೋಗ್ಯದಲ್ಲಿರಿಸುತ್ತದೆ

ಮೂಳೆಗಳನ್ನು ಆರೋಗ್ಯದಲ್ಲಿರಿಸುತ್ತದೆ

ದುರ್ಬಲ ಮೂಳೆಗಳನ್ನು ಹೊಂದಿರುವ ವ್ಯಕ್ತಿಗಳು ಮುಂದಿನ ಆಹಾರದಿಂದಲೇ ಸಾರಿನ ಪುಡಿಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಏಕೆಂದರೆ ಈ ಪುಡಿಯ ಸೇವನೆಯಿಂದ ಮೂಳೆಗಳ ಸಾಂದ್ರತೆ ಹೆಚ್ಚುತ್ತದೆ ಹಾಗೂ ಮೂಳೆ ಮತ್ತು ಹಲ್ಲುಗಳು ದೃಢವಾಗಲು ಸಾಧ್ಯವಾಗುತ್ತದೆ. ಅಲ್ಲದೇ ಮೂಳೆಸಂಧುಗಳೂ ಆರೋಗ್ಯಕರವಾಗಿರುವ ಮೂಲಕ ವಯಸ್ಸಾಗುತ್ತಾ ಹೋದಂತೆ ಎದುರಾಗುವ ಸಂಧಿವಾತದ ತೊಂದರೆಯಿಂದಲೂ ರಕ್ಷಣೆ ಒದಗಿಸುತ್ತದೆ.

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಸಾರಿನ ಪುಡಿಯನ್ನು ಬೆರೆಸಿದ ಆಹಾರಗಳ ಸೇವನೆಯಿಂದ ಅಧಿಕ ರಕ್ತದೊತ್ತಡದ ಮಟ್ಟ ಸಾಮಾನ್ಯ ಸ್ಥಿತಿಗೆ ಇಳಿಯಲು ನೆರವಾಗುತ್ತದೆ ಹಾಗೂ ದೇಹದಿಂದ ಕೆಟ್ಟ ಕೊಬ್ಬುಗಳ ನಿವಾರಣೆಯೂ ಸಾಧ್ಯವಾಗುತ್ತದೆ. ಹೃದಯಕ್ಕೆ ಹರಿಯುವ ರಕ್ತದ ಪ್ರಮಾಣ ಹೆಚ್ಚುತ್ತದೆ ಹಾಗೂ ಹೃದಯಸ್ತಂಭನದ ಸಾಧ್ಯತೆಯೂ ಕಡಿಮೆಯಾಗುತ್ತದೆ. ಅಲ್ಲದೇ ಮೆದುಳಿಗೆ ಹರಿಯುವ ರಕ್ತದ ಪ್ರಮಾಣ ಹೆಚ್ಚುತ್ತದೆ. ತನ್ಮೂಲಕ ಪಾರ್ಶ್ವವಾಯು ಆವರಿಸುವ ಸಾಧ್ಯತೆಯೂ ಅಪಾರವಾಗಿ ಕಡಿಮೆಯಾಗುತ್ತದೆ.

ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ

ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ

ಸಾರಿನ ಪುಡಿಯಲ್ಲಿ ಅಧಿಕ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಿಂದ ಕಲ್ಮಶಗಳು ಹಾಗೂ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿವಾರಿಸಲು ನೆರವಾಗುತ್ತವೆ. ಈ ಕಣಗಳು ದೇಹದಲ್ಲಿ ಕೆಲವಾರು ಕ್ಯಾನ್ಸರ್ ಎದುರಾಗಲು ಕಾರಣವಾಗಿವೆ. ವಿಶೇಷವಾಗಿ ಸ್ತನ, ಕರುಳು, ಪ್ರಾಸ್ಟೇಟ್ ಹಾಗೂ ಯಕೃತ್ ಮೊದಲಾದ ಪ್ರಮುಖ ಅಂಗಗಳಿಗೆ ಕ್ಯಾನ್ಸರ್ ಆವರಿಸುವುದರಿಂದ ರಕ್ಷಣೆ ಒದಗಿಸುತ್ತದೆ.

English summary

Why You Must Add Curry Powder To Your Food

Curry powder is a mixture of spices that mainly contains coriander, cumin, turmeric, chili peppers and fenugreek. These spices, when combined together, prove to be very beneficial for the health, as the qualities of each spice are combined, wherein one spice compliments the property of the other. Curry powder can act as a healthy bomb spice for the body and can increase your life expectancy. It is rich in many antioxidants that reduce body inflammation, and thus aid in weight loss.
Story first published: Sunday, March 4, 2018, 8:01 [IST]