For Quick Alerts
ALLOW NOTIFICATIONS  
For Daily Alerts

ಮುಟ್ಟಿನ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚು ಹಸಿವು ಏಕೆ ಆಗುತ್ತದೆ?

|

ಮಹಿಳೆಯರಿಗೆ ನಿಸರ್ಗದ ನಿಯಮದ ರೂಪದಲ್ಲಿ ಆಗಮಿಸುವ ಮಾಸಿಕ ದಿನಗಳ ಅವಧಿಯಲ್ಲಿ ಹೊಟ್ಟೆಯುಬ್ಬರಿಕೆ ಹಾಗೂ ಹಸಿವು ಸಹಾ ನಿಯಮದಂತೆಯೇ ಆಗಮಿಸುತ್ತದೆ. ಈ ದಿನಗಳಲ್ಲಿ ಮಹಿಳೆಯರ ಮನೋಭಾವದಲ್ಲಿ ಏರುಪೇರು, ಖಿನ್ನತೆ, ಚಡಪಡಿಕೆ ಹಾಗೂ ಮುಖ್ಯವಾಗಿ ಭಾರೀ ಹಸಿವು ಸಹಾ ಎದುರಾಗುತ್ತದೆ.

ಮುಖ್ಯವಾಗಿ ಮಾಸಿಕ ದಿನಗಳಿಗೂ ಮುನ್ನಾ ಅವಧಿಯಲ್ಲಿ ಹಸಿವು ಹೆಚ್ಚಾಗಿ ಬಾಧಿಸುತ್ತದೆ. ಹೆಚ್ಚಿನ ಮಹಿಳೆಯರಿಗೆ ಹೊಟ್ಟೆಯುಬ್ಬರಿಕೆ ಸಾಮಾನ್ಯವಾಗಿದೆ. ಆದರೆ ಇನ್ನುಳಿದವರರೂ ಹಸಿವು ಹಾಗೂ ಆಹಾರಸೇವನೆಯ ಪ್ರಮಾಣದಲ್ಲಿ ಬದಲಾವಣೆಯನ್ನು ಪ್ರಕಟಿಸುತ್ತಾರೆ. ಆದರೆ ಈ ದಿನಗಳಲ್ಲಿಯೇ ಹಸಿವೆಯೇಕೆ ಹೆಚ್ಚಬೇಕು? ಇದಕ್ಕೆ ಪ್ರಮುಖ ಕಾರಣ ಈ ಅವಧಿಯಲ್ಲಿ ಹೆಚ್ಚಾಗಿ ಸ್ರವಿಸಲ್ಪಡುವ ಈಸ್ಟ್ರೋಜೆನ್ ಹಾಗೂ ಪ್ರೊಜೆಸ್ಟರಾನ್ ಎಂಬ ರಸದೂತಗಳೇ ಆಗಿವೆ. ಮಾಸಿಕ ದಿನಕ್ಕೂ ಮುನ್ನ ಇವುಗಳ ಸ್ರಾವದ ಪ್ರಮಾಣ ಹೆಚ್ಚುತ್ತದೆ ಹಾಗೂ ಮಾಸಿಕ ದಿನಗಳ ಬಳಿಕ ಕಡಿಮೆಯಾಗುತ್ತದೆ. ಪರಿಣಾಮವಾಗಿ ಹಸಿವು ಸಹಾ ಇದೇ ಪ್ರಮಾಣದಲ್ಲಿ ಹೆಚ್ಚುತ್ತದೆ.

hungry before period starts

ಮಾಸಿಕ ದಿನಗಳಿಗೂ ಸುಮಾರು ಹನ್ನೆರಡರಿಂದ ಹದಿನಾರು ದಿನಗಳ ಮುನ್ನ ಗರ್ಭಾಶಯದಲ್ಲಿ ಅಂಡಾಣು ಬಿಡುಗಡೆಯಗುತ್ತದೆ ಹಾಗೂ ವೀರ್ಯಾಣುವಿಗಾಗಿ ಕಾಯುತ್ತದೆ. ಒಂದು ವೇಳೆ ಗರ್ಭ ಧರಿಸುವ ಸಂಭವವಿದ್ದರೆ ಇದಕ್ಕಾಗಿ ದೇಹ ತಯಾರಿರಬೇಕೆಂದು ಸಕಲ ಸಿದ್ದತೆಗಳನ್ನು ಮಾಡುತ್ತದೆ. ಮಾಸಿಕ ದಿನಗಳಲ್ಲಿ ಈ ಅಂಡಾಣುವನ್ನು ವಿಸರ್ಜಿಸಿ ಹೊಸ ಅಂಡಾಣುವನ್ನು ಬಿಡುಗಡೆ ಮಾಡಲು ಈಸ್ಟ್ರೋಜೆನ್ ಹಾಗೂ ಪ್ರೊಜೆಸ್ಟರಾನ್ ರಸದೂತಗಳನ್ನು ಹೆಚ್ಚಾಗಿ ಬಿಡುಗಡೆ ಮಾಡುತ್ತದೆ. ಇದು ಹಸಿವಿಗೆ ಪ್ರಚೋದನೆ ನೀಡುತ್ತದೆ.

ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?

ಹಾಗೂ, ಮಾಸಿಕ ದಿನಗಳಿಗೂ ಕೊಂಚ ದಿನಗಳ ಮುನ್ನ, ದೇಹ ಸುಮಾರು ಹದಿನೈದು ಶೇಖಡಾದಷ್ಟು ಕ್ಯಾಲೋರಿಗಳು ದಹಿಸಲ್ಪಡುತ್ತವೆ ಹಾಗೂ ಈ ಕೊರತೆಯನ್ನು ಮರುದುಂಬಿಸಲೂ ಹಸಿವಿನ ಸಂಕೇತಗಳನ್ನು ಮೆದುಳು ನೀಡುತ್ತದೆ. ಮಾಸಿಕ ದಿನಗಳು ಪ್ರಾರಂಭವಾದ ಬಳಿಕ ದೇಹದಲ್ಲಿ ಹೆಚ್ಚಿನ ಚಟುವಟಿಕೆಗಳು ನಡೆಯುತ್ತವೆ ಹಾಗೂ ಇದಕ್ಕಾಗಿ ಹೆಚ್ಚಿನ ಕ್ಯಾಲೋರಿಗಳನ್ನು ದಹಿಸಬೇಕಾಗಿ ಬರುತ್ತದೆ. ತನ್ಮೂಲಕ BMR (Basal Metabolic Rate) ಅಥವಾ ದೇಹ ವಿಶ್ರಾಂತ ಸ್ಥಿತಿಯಲ್ಲಿರುವಾಗ ಚಟುವಟಿಕೆಗಳ ಗತಿಯೂ ಹೆಚ್ಚುತ್ತದೆ. ಹೀಗೆ ಕಳೆದುಕೊಳ್ಳುವ ಕ್ಯಾಲೋರಿಗಳನ್ನು ಮರುದುಂಬಿಸಿಕೊಳ್ಳಲು ಮೆದುಳು ಹಸಿವಿನ ಸೂಚನೆ ನೀಡುತ್ತದೆ.

ಮಾಸಿಕ ದಿನಗಳ ಅವಧಿಯಲ್ಲಿಯೇ ಏಕೆ ಹೆಚ್ಚು ಹಸಿವಾಗುತ್ತದೆ?

ಈ ಅವಧಿಯಲ್ಲಿ ಹಸಿವನ್ನು ಹೇಗೆ ನಿಗ್ರಹಿಸುವುದು? ಇದಕ್ಕೆ ಉತ್ತರ ನಿಸರ್ಗವೇ ನೀಡುತ್ತದೆ. ಈ ಅವಧಿಯಲ್ಲಿ ನಿಮ್ಮ ದೇಹ ಏನು ಹೇಳುತ್ತದೆಯೋ ಅದನ್ನೇ ಮಾಡಿ. ಚಾಕಲೇಟು, ಐಸ್ ಕ್ರೀಂ ಅಥವಾ ಇನ್ನೇನಾದರೂ ತಿನ್ನಬೇಕೆಂದು ಅನ್ನಿಸಿದರೆ ಇದರಿಂದ ಕೇವಲ ಮಾನಸಿಕ ತೃಪ್ತಿ ಸಿಗಬಹುದೇ ವಿನಃ ದೇಹಕ್ಕೆ ಅನಗತ್ಯ ಕೊಬ್ಬನ್ನೇ ಒದಗಿಸಬಹುದು. ಹಾಗಾಗಿ ಈ ಅವಧಿಯಲ್ಲಿ ಹೆಚ್ಚಿನ ಕೊಬ್ಬಿನಾಂಶವಿರುವ ಬರ್ಗರ್ ಮೊದಲಾದವುಗಳನ್ನು ತಿನ್ನುವ ಇಚ್ಚೆಯುಂಟಾದರೆ ಇದನ್ನು ಒತ್ತಾಯಪೂರ್ವಕವಾಗಿ ಅದುಮಿಟ್ಟುಕೊಳ್ಳಬೇಕು. ಒಂದು ವೇಳೆ ಇದು ಸಾಧ್ಯವಾಗದೇ ಹೋದರೆ ಚಿಕ್ಕ ಪ್ರಮಾಣಕ್ಕೆ ತೃಪ್ತಿಪಟ್ಟುಕೊಳ್ಳಿ.

ಅನುವಂಶಿಕ ಕಾರಣಗಳಿಂದ ಆಗುವ ಏರುಪೇರುಗಳ ಸಾಧ್ಯತೆ ಇರುವ ಮಹಿಳೆಯರು ಮಾಸಿಕ ದಿನಗಳಲ್ಲಿ ಹೆಚ್ಚೇ ಮನೋಭಾವದಲ್ಲಿ ಏರುಪೇರು ಹಾಗೂ ಏನಾದರೂ ತಿನ್ನಬೇಕೆಂಬ ಹಪಾಹಪಿಗೆ ಒಳಗಾಗುತ್ತಾರೆ. ಇದರೊಂದಿಗೆ, ಈ ರಸದೂತದ ಸ್ರಾವ ಮಾಸಿಕ ದಿನಗಳ ಮುನ್ನಾ ಸಮಯದಲ್ಲಿ ಎದುರಾಗುವ ಉದ್ವೇಗಕ್ಕೂ ಹೆಚ್ಚಿನ ಬೆಂಬಲ ನೀಡುತ್ತದೆ. ಅದರಲ್ಲೂ ಪ್ರೊಜೆಸ್ಟರಾನ್ ರಸದೂತದ ಸ್ರಾವ ಹೆಚ್ಚಿನ ಅತೃಪ್ತಿ ಹಾಗೂ ಅತಿಯಾದ ಹಸಿವನ್ನುಂಟು ಮಾಡುತ್ತದೆ. ಈ ಸ್ಥಿತಿಯಲ್ಲಿ ಮಹಿಳೆಯರು ತಮಗೆ ಹೆಚ್ಚಿನ ಆದ್ಯತೆ ಸಿಗಬೇಕೆಂದು ಬಯಸುತ್ತಾರೆ. ಒಂದು ವೇಳೆ ಮಾಸಿಕ ದಿನಗಳ ಅವಧಿಯಲ್ಲಿ ಹೆಚ್ಚಿನ ಹಸಿವು ನಿಮಗೆ ಎದುರಾಗುತ್ತಿದ್ದರೆ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ:

1. ನಿಮಗೆ ನೀವೇ ಸಹಾನುಭೂತಿ ವ್ಯಕ್ತಪಡಿಸಿಕೊಳ್ಳಿ

ಒಂದು ವೇಳೆ ಹಸಿವು ಅತಿಯಾಗಿಯೇ ಆಗುತ್ತಿದ್ದರೆ, ಮನೋಭಾವ ಕುಂದಿದ್ದರೆ ನಿಮ್ಮನ್ನು ನೀವೇ ಈ ಬಯಕೆಯಿಂದ ತಡೆಗಟ್ಟದಿರಿ, ಬದಲಿಗೆ ಕೊಂಚ ಪ್ರಮಾಣದಲ್ಲಿ ನಿಮಗೆ ತಿನ್ನಬೇಕೆಂದು ಅನ್ನಿಸಿದ ಆಹಾರವನ್ನು ಸೇವಿಸಿ ತೃಪ್ತಿಪಟ್ಟುಕೊಳ್ಳಿ.

2. ನಿಮ್ಮನ್ನು ಇತರ ಮಹಿಳೆಯರೊಂದಿಗೆ ಹೋಲಿಸಿಕೊಳ್ಳದಿರಿ

ಮಾಸಿಕ ದಿನಗಳ ಬಗ್ಗೆ ತಮ್ಮ ಆರೋಗ್ಯವನ್ನು ಇತರ ಮಹಿಳೆಯರ ಆರೋಗ್ಯದೊಂದಿಗೆ ಹೋಲಿಸಿಕೊಳ್ಳುವುದು ನೀವು ಮಾಡಬಹುದಾದ ಅತ್ಯಂತ ಘೋರ ಕ್ರಮವಾಗಿದೆ. ತೂಕದಲ್ಲಿ ಏರಿಕೆ, ಹೆಚ್ಚಿದ ನೋವು, ಸೆಡೆತ ಮೊದಲಾದವೆಲ್ಲಾ ಪ್ರತಿ ಮಹಿಳೆಯ ಆರೋಗ್ಯಕ್ಕೂ ಕೊಂಚ ಭಿನ್ನವಾಗಿರುತ್ತದೆ. ಈ ಸಮಯದಲ್ಲಿ ಎದುರಾಗುವ ಹಸಿವು ಹಾಗೂ ತಿನ್ನಬೇಕೆನ್ನಿಸುವ ಆಹಾರ ಪ್ರತಿ ಮಹಿಳೆಗೂ ಬೇರೆಬೇರೆಯಾಗಿರುತ್ತದೆ.

3. ಲಘು ವ್ಯಾಯಾಮ ಮಾಡಿ ಹಾಗೂ ಸೂಕ್ತ ಆಹಾರ ಸೇವಿಸಿ

ಮಾಸಿಕ ದಿನಗಳಲ್ಲಿ ಸುಸ್ತು ಹಾಗೂ ಸೆಡೆತದ ಅನುಭವವಾಗುತ್ತಿದ್ದರೆ ಲಘು ವ್ಯಾಯಾಮಗಳಾದ ನಡಿಗೆ ಹಾಗೂ ಸುಲಭ ಯೋಗಾಸನಗಳನ್ನು ಅನುಸರಿಸಿ. ಇದರೊಂದಿಗೇ ಪೌಷ್ಟಿಕವಾದ ಆಹಾರ ಸೇವನೆಯೂ ನಿಮ್ಮ ಮನೋಭಾವನ್ನು ಉತ್ತಮಗೊಳಿಸಬಹುದು. ಕರಗುವ ನಾರು ಹೆಚ್ಚಿರುವ ಆಹಾರಗಳಾದ ಅಕ್ರೋಟು, ಖರ್ಜೂರ ಹಾಗೂ ನಾರಿನಂಶ ಹೆಚ್ಚಿರುವ ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ವಿಶೇಷವಾಗಿ ಕಪ್ಪು ಚಾಕಲೇಟಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಉರಿಯೂತ ನಿವಾರಕ ಗುಣ ಈ ಸಮಯದಲ್ಲಿ ಸೇವನೆಗೆ ಸೂಕ್ತವಾಗಿದೆ.

ಮಹಿಳೆಯರೇ ತಿಂಗಳ ಆ ರಜಾ ದಿನಗಳಲ್ಲಿ ಈ ಆಹಾರಗಳಿಗೂ ರಜಾ ನೀಡಿ!

4. ಆರೋಗ್ಯಕರ ಆಹಾರವನ್ನು ಜಾಣ್ಮೆಯಿಂದ ಆಯ್ದುಕೊಳ್ಳಿ

ಒಂದು ವೇಳೆ ಉಪ್ಪಿನಂಶವಿರುವ ಆಹಾರ ಸೇವನೆಯ ಮನಸ್ಸಾದರೆ ಆಲುಗಡ್ಡೆ ಚಿಪ್ಸ್ ಅಥವಾ ಇತರ ಅತಿ ಕ್ಷಾರೀಯ ಆಹಾರಗಳಿಗೆ ಮನ ಸೋಲದಿರಿ, ಏಕೆಂದರೆ ಇವುಗಳಲ್ಲಿ ಅತಿ ಹೆಚ್ಚಿನ ಸೋಡಿಯಂ ಇದ್ದು ಹೊಟ್ಟೆಯುಬ್ಬರಿಕೆಗೆ ಕಾರಣವಾಗುತ್ತದೆ. ಬದಲಿಗೆ ಒಣಫಲಗಳಾದ ಬಾದಾಮಿ, ಗೋಡಂಬಿಗಳಿಗೆ ತುಸುವೇ ಉಪ್ಪನ್ನು ಸಿಂಪಡಿಸಿ ಸೇವಿಸಿ. ಇದರೊಂದಿಗೆ ಚ್ಯೂಯಿಂಗ್ ಗಮ್ ಅಗಿಯುವುದು ಅಥವಾ ಲಿಂಬೆ-ತಾಜಾಫಲಗಳ ರಸವನ್ನು ಬೆರೆಸಿದ ನೀರನ್ನು ಕುಡಿಯಿರಿ. ಆದ್ದರಿಂದ, ಈ ಲೇಖನವನ್ನು ಓದುತ್ತಿರುವ ಮಹಿಳೆಯರೇ, ನಿಮ್ಮ ಮಾಸಿಕ ದಿನಗಳಲ್ಲಿ ಎದುರಾಗುವ ಹಸಿವಿನ ಬಯಕೆಯನ್ನು ಸೂಕ್ತವಾದ ಆಹಾರವನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸುವ ಮೂಲಕ ಪೂರೈಸಿಕೊಳ್ಳಿ. ಒಂದು ವೇಳೆ ಈ ಹೊತ್ತಿನಲ್ಲಿ ಖಿನ್ನತೆ ಅಥವಾ ಬೇಸರದ ಮನೋಭಾವ ಆವರಿಸಿದ್ದರೆ ನಿಮ್ಮ ಮನೋಭಾವವನ್ನು ಉತ್ತಮಗೊಳಿಸುವ ಕ್ರಮವನ್ನು ಅಥವಾ ನಿಮಗೆ ಸಂತೋಷ ನೀಡುವ ಸರಳ ಕಾರ್ಯಗಳನ್ನು ಕೈಗೊಳ್ಳಿ. ನೆನಪಿರಲಿ, ಈ ಅವಧಿಯಲ್ಲಿ ಲೈಂಗಿಕ ರಸದೂತಗಳು ಮತ್ತು ಮಾಸಿಕ ದಿನಗಳ ಅನಿವಾರ್ಯ ಬದಲಾವಣೆಯಿಂದ ಹಸಿವು ಮತ್ತು ಮನೋಭಾವದಲ್ಲಿ ಬದಲಾವಣೆ ಎದುರಾಗುವುದು ಸ್ವಾಭಾವಿಕವಾಗಿದ್ದು ಇದನ್ನು ದಿಟ್ಟತನದಿಂದ ಎದುರಿಸಿ.

English summary

Why Women Feel Hungrier Around Their Period

Cravings, bloating and hunger come every month without fail. Yes, you are thinking right! We are talking about periods. Women who are on their periods start to feel moody, low and irritable and also notice a big increase in hunger. So, why are we hungrier before periods. Let's find out here. For most women, bloating is a common experience during periods. But, there are many other women who also feel hungry and changes in appetite is usual. But, really why do they feel hungry before and during their period?
X
Desktop Bottom Promotion