For Quick Alerts
ALLOW NOTIFICATIONS  
For Daily Alerts

ಓಟಗಾರರು ದ್ರಾಕ್ಷಿಯನ್ನು ತಿನ್ನುವುದರಿಂದ ಹೆಚ್ಚಿನ ಶಕ್ತಿಯನ್ನು ಪಡೆಯಬಹುದು

|

ನೋಡಲು ಚಿಕ್ಕ ಚಿಕ್ಕ ಹಣ್ಣುಗಳಾದರೂ ರುಚಿಯಲ್ಲಿ ಅದ್ಭುತವನ್ನು ಹೊಂದಿರುವ ಹಣ್ಣು ದ್ರಾಕ್ಷಿ. ಮಕ್ಕಳಿಂದ ಹಿಡಿದು ವೃದ್ಧರಿಗೂ ಇಷ್ಟವಾಗುವ ಹಣ್ಣು ಇದು. ಇದರ ಗಾತ್ರ ಚಿಕ್ಕದಾದರೂ ಸಮೃದ್ಧವಾದ ಪೋಷಕಾಂಶ ಹಾಗೂ ವಿಟಮಿನ್‍ಗಳಿವೆ. ಹಾಗಾಗಿ ಆರೋಗ್ಯದ ದೃಷ್ಟಿಯಿಂದಲೂ ಅತ್ಯಂತ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದರಲ್ಲಿ ವಿಟಮಿನ್ ಎ, ಸಿ ಮತ್ತು ಬಿ6 ಮತ್ತು ಹಲವಾರು ಜೀವಸತ್ವಗಳ ಮೂಲವೂ ಹೌದು. ಇದರಲ್ಲಿ ಪೋಲೇಟ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಫಾಸ್ಪರಸ್, ಸೆಲೆನಿಯಮ್ ಮತ್ತು ಮಗ್ನೀಸಿಯಮ್ ಗಳಂತಹ ಖನಿಜಗಳನ್ನು ಸಹ ಹೊಂದಿರುವುದರಿಂದ ಕ್ರೀಡಾಪಟುಗಳಿಗೆ ಹಾಗೂ ಓಟಗಾರರಿಗೆ ಅತ್ಯುತ್ತಮ ಬಲವನ್ನು ನೀಡುವುದು.

ಕಡಿಮೆ ಶಕ್ತಿ ಸಾಂದ್ರತೆಯನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ದೇಹದ ತೂಕವನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳಬಹುದು. ಹೆಚ್ಚಿನ ಶಕ್ತಿಯ ಸಾಂದ್ರತೆ ಹೊಂದಿರುವ ಆಹಾರವನ್ನು ಸೇವಿಸುವುದಕ್ಕಿಂತ ಕಡಿಮೆ ಕ್ಯಾಲೋರಿಗಳಲ್ಲಿ ಹೊಟ್ಟೆಯನ್ನು ತುಂಬಿಸಿಕೊಳ್ಳಬಹುದು. ಅಸ್ತಮಾ, ಹೃದಯ ರೋಗಗಳು, ರಕ್ತದಲ್ಲಿ ಕೊಲೆಸ್ಟ್ರಾಲ್, ಮೈಗ್ರೇನ್, ಸ್ತನ ಕ್ಯಾನ್ಸರ್, ದಂತ ಸಮಸ್ಯೆ, ಮಧುಮೇಹ, ಮಲಬದ್ಧತೆ ಅಜೀರ್ಣ, ಮೂತ್ರಪಿಂಡದ ಕಾಯಿಲೆ, ಕಣ್ಣಿನ ಪೊರೆ, ಅಲ್ಝೈಮರ್ ಕಾಯಿಲೆ ಸೇರಿದಂತೆ ಅನೇಕ ಬಗೆಯ ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳನ್ನು ದ್ರಾಕ್ಷಿ ನಿಯಂತ್ರಿಸುತ್ತದೆ.

ರೋಗನಿರೋಧಕ ಶಕ್ತಿಯನ್ನು ಒಳಗೊಂಡಿರುವ ದ್ರಾಕ್ಷಿಯು ದೈಹಿಕವಾಗಿ ಹೆಚ್ಚು ಶ್ರಮಪಡುವವರಿಗೆ ಹಾಗೂ ಓಟಗಾರರಿಗೆ ಅತ್ಯುತ್ತಮವಾದ ಹಣ್ಣು ಎಂದು ಹೇಳಬಹುದು. ಈ ಹಣ್ಣನ್ನು ಸೇವಿಸುವುದರಿಂದ ಓಟಗಾರರಿಗೆ ಯಾವೆಲ್ಲಾ ಬಗೆಯ ಉಪಯೋಗಗಳು ಉಂಟಾಗುವುದು ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ....

 ತಕ್ಷಣದ ಶಕ್ತಿ

ತಕ್ಷಣದ ಶಕ್ತಿ

ದ್ರಾಕ್ಷಿ ನೈಸರ್ಗಿಕವಾಗಿ ಮತ್ತು ಸರಳವಾದ ಕಾರ್ಬೋಹೈಡ್ರೇಟ್‍ಗಳನ್ನು ಒಳಗೊಂಡಿದೆ. ಇದನ್ನು ಓಟಗಾರರು ಸೇವಿಸಿದಾಗ ದ್ರಾಕ್ಷಿಯು ತ್ವರಿತವಾದ ಶಕ್ತಿಯನ್ನು ನೀಡುತ್ತದೆ. ಓಟಕ್ಕೆ ಹೋಗುವ ಮೊದಲು ಒಂದಿಷ್ಟು ದ್ರಾಕ್ಷಿಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ತಕ್ಷಣದಲ್ಲಿಯೇ ನೀಡುತ್ತದೆ. ಹಾಗಾಗಿ ಓಟಗಾರರಿಗೆ ಇದೊಂದು ಲಾಭದಾಯಕ ಹಣ್ಣು ಎನ್ನಬಹುದು.

ನೀರಿನಂಶ

ನೀರಿನಂಶ

ಓಟಗಾರರಾಗಿ ಅಥವಾ ಮ್ಯಾರಥಾನ್‍ಗಳಲ್ಲಿ ಓಡುವಾಗ ದೇಹದಲ್ಲಿ ನೀರಿನಂಶವು ಬೆವರಿನ ರೂಪದಲ್ಲಿ ನಷ್ಟವಾಗುತ್ತದೆ. ಆ ಸಂದರ್ಭದಲ್ಲಿ ದೇಹದಲ್ಲಿ ನಿರ್ಜಲೀಕರಣ ಉಂಟಾಗುವ ಸಾಧ್ಯತೆಗಳಿರುತ್ತವೆ. ಓಟಕ್ಕೆ ಸಿದ್ಧರಾಗುವ ಮೊದಲು ಒಂದಿಷ್ಟು ದ್ರಾಕ್ಷಿ ಸೇವಿಸುವುದರಿಂದ ಅದು ಶಕ್ತಿಯೊಂದಿಗೆ ದೇಹಕ್ಕೆ ನೀರಿನಂಶವನ್ನು ಒದಗಿಸುತ್ತದೆ.

ಆಯಾಸವನ್ನು ನಿಯಂತ್ರಿಸುವುದು

ಆಯಾಸವನ್ನು ನಿಯಂತ್ರಿಸುವುದು

ದ್ರಾಕ್ಷಿ ರಸದಲ್ಲಿ ಕಬ್ಬಿಣಂಶವು ಹೇರಳವಾಗಿರುವುದರಿಂದ ದೇಹಕ್ಕೆ ಉಂಟಾಗುವ ಆಯಾಸವನ್ನು ನಿಯಂತ್ರಿಸುತ್ತದೆ. ಕಬ್ಬಿಣಾಂಶದ ಕೊರತೆ ಉಂಟಾದಾಗ ದೇಹದಲ್ಲಿ ಆಯಾಸವನ್ನು ತಡೆಯುತ್ತದೆ. ಕಪ್ಪು ಮತ್ತು ಬಿಳಿ ದ್ರಾಕ್ಷಿಯ ರಸವು ಅಧಿಕ ಪ್ರಮಾಣದಲ್ಲಿ ಕಬ್ಬಿಣದ ಪೂರಕವನ್ನು ಒದಗಿಸುತ್ತದೆ. ಓಟಗಾರರು ತಮ್ಮ ಆಯಾಸದಿಂದ ದೂರ ಉಳಿಯಲು ದ್ರಾಕ್ಷಿ ಹಣ್ಣನ್ನು ಸೇವಿಸುವುದು ಉತ್ತಮ.

ತೂಕದ ನಿಯಂತ್ರಣ

ತೂಕದ ನಿಯಂತ್ರಣ

ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಓಟಗಾರರಿಗೆ ಒಂದು ಬಹು ಮುಖ್ಯವಾದ ವಿಚಾರವಾಗಿರುತ್ತದೆ. ದ್ರಾಕ್ಷಿಯಲ್ಲಿ ಕಡಿಮೆ ಶಕ್ತಿ ಸಾಂದ್ರತೆಯ ಲಕ್ಷಣವನ್ನು ಒಳಗೊಂಡಿರುವುದರಿಂದ, ಹೊಟ್ಟೆ ತುಂಬಲು ದ್ರಾಕ್ಷಿಯನ್ನು ಸೇವಿಸಬಹುದು. ಇದರಿಂದ ಅನವಶ್ಯಕವಾದ ಕಾರ್ಬೋಹೈಡ್ರೇಟ್‍ಗಳಿಂದ ದೂರ ಉಳಿಯಬಹುದು. ಜೊತೆಗೆ ತೂಕವನ್ನು ಹೆಚ್ಚಾಗದಂತೆ ನೋಡಿಕೊಳ್ಳಬಹುದು.

ಮೂಳೆಯ ಆರೋಗ್ಯಕ್ಕೆ

ಮೂಳೆಯ ಆರೋಗ್ಯಕ್ಕೆ

ಕ್ರೀಟಾಪಟುಗಳಿಗೆ ಮತ್ತು ಓಟಗಾರರಿಗೆ ಮೂಳೆಯ ಆರೋಗ್ಯವೂ ಒಂದು ಪ್ರಮುಖ ಅಂಶವಾಗಿರುತ್ತದೆ. ದ್ರಾಕ್ಷಿಯಲ್ಲಿ ತಾಮ್ರ, ಕಬ್ಬಿಣ ಮತ್ತು ಮ್ಯಾಂಗನೀಸ್‍ನಂತಹ ಸೂಕ್ಷ್ಮ ಪೋಷಕಾಂಶಗಳ ಅದ್ಭುತ ಮೂಲವಾಗಿದೆ. ಆಸ್ಟಿಯೊಪೊರೋಸಿಸ್ ಅನ್ನು ತಡೆಗಟ್ಟಲು ದ್ರಾಕ್ಷಿಯನ್ನು ನಿಯಮಿತ ಬಳಕೆಗೆ ಸಹಾಯ ಮಾಡಬಹುದು.

ಉರಿಯೂತ ನಿವಾರಿಸುತ್ತದೆ

ಉರಿಯೂತ ನಿವಾರಿಸುತ್ತದೆ

ಒಂದು ದ್ರಾಕ್ಷಿ-ಪುಷ್ಟೀಕರಿಸಿದ ಆಹಾರವು ಓಟಗಾರರಿಗೆ ಉಂಟಾಗುವ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ದೇಹಕ್ಕೆ ಉಂಟಾಗುವ ಉರಿಯೂತವನ್ನು ನಿಯಂತ್ರಿಸಲು ಅನೇಕ ಬಗೆಯ ಔಷಧಗಳಿರುವುದು ನಮಗೆ ತಿಳಿದಿದೆ. ಆದರೆ ದ್ರಾಕ್ಷಿಯು ಉರಿಯೂತ ನಿವಾರಣೆಗೆ ಸಹಾಯ ಮಾಡುವ ನೈಸರ್ಗಿಕ ಪರಿಹಾರ ಎನ್ನಲಾಗುವುದು.

ರೋಗನಿರೋಧಕ ಶಕ್ತಿ

ರೋಗನಿರೋಧಕ ಶಕ್ತಿ

ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೀವಸತ್ವಗಳಿರುವುದರಿಂದ ಆರೋಗ್ಯಕರ ವರ್ಧಕವನ್ನು ನೀಡುತ್ತದೆ. ಒಟ್ಟಾರೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಓಟಗಾರರಿಗೆ ಅಗತ್ಯವಿರುವ ಇಂಧನ ಶಕ್ತಿಯನ್ನು ದ್ರಾಕ್ಷಿ ನೀಡುತ್ತದೆ. ಹಾಗಾಗಿ ಓಟಗಾರರಿಗೆ ದ್ರಾಕ್ಷಿಯೊಂದು ಪರಿಪೂರ್ಣವಾದ ಪೋಷಕಾಂಶ ಭರಿತವಾದ ಹಣ್ಣು ಎನ್ನಬಹುದು.

English summary

Why Grapes Are Good For Runners?

In this article are the discussed grapes health benefits for runners. Athletes and runners cannot consume heavy food, so there is something needed that could fill their stomach and provide instant energy at the same time. They might have to stay away from heavy food for quite long, so they definitely need an appropriate substitute for this. The health benefits of grapes help runners from staying away from fatigue and remain active.
X
Desktop Bottom Promotion