ತುಟಿಯಲ್ಲಾಗುವ ಬದಲಾವಣೆ ಆರೋಗ್ಯದ ಸಮಸ್ಯೆಯ ಪ್ರತೀಕ!

Posted By: Divya pandit Pandit
Subscribe to Boldsky

ದೇಹದಲ್ಲಿ ಕೆಲವು ಭಾಗಗಳು ನಮ್ಮ ಆರೋಗ್ಯದ ಸ್ಥಿತಿಯನ್ನು ತೆರೆದಿಡುತ್ತದೆ. ಅವುಗಳೆಂದರೆ ಕೂದಲು, ಉಗುರು, ಚರ್ಮ ಮತ್ತು ತುಟಿಗಳಲ್ಲಿ ಉಂಟಾಗುವ ಬದಲಾವಣೆಯನ್ನು ವ್ಯಕ್ತಪಡಿಸುತ್ತವೆ. ದೇಹದಲ್ಲಿ ಉಂಟಾಗುವ ಪ್ರೋಟೀನ್ ಮತ್ತು ಪೋಷಕಾಂಶದ ಕೊರತೆಯನ್ನು ಸೂಕ್ಷ್ಮತೆಯನ್ನು ಹೊಂದಿರುವ ತುಟಿಯು ವ್ಯಕ್ತಪಡಿಸುತ್ತದೆ. ಹಾಗಾಗಿಯೇ ಆರೋಗ್ಯ ಭವಿಷ್ಯವಾಣಿ ತುಟಿ ಎಂದು ಸಹ ಹೇಳಲಾಗುತ್ತದೆ. ತುಟಿಗಳು ಮುಖದ ಆಕರ್ಷಣೆ ಹಾಗೂ ಸೌಂದರ್ಯದ ಪ್ರತೀಕವೂ ಹೌದು. ಇದರ ಅನಾರೋಗ್ಯ ಅಥವಾ ಅಸ್ವಸ್ಥತೆಯು ಪ್ರಮುಖ ಪರಿಣಾಮವನ್ನು ಬೀರುವುದು.

lips care

ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ತುಟಿಗಳು ಶುಷ್ಕತೆಯಿಂದ ಒಡೆಯುವುದು. ಅದೇ ರೀತಿ ರಕ್ತದ ಕೊರತೆ ಉಂಟಾದರೆ ತುಟಿಯು ಬಣ್ಣವನ್ನು ಕಳೆದುಕೊಂಡು ಬಿಳುಚಾಗಿ ಕಾಣಿಸಿಕೊಳ್ಳುತ್ತದೆ. ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾದಾಗ ಅವು ತುಟಿಗಳ ಮೂಲಕ ವ್ಯಕ್ತವಾಗುತ್ತದೆ. ಹೌದು, ದೇಹದ ವಿಶೇಷ ಅಂಗಗಳಲ್ಲಿ ಒಂದಾದ ತುಟಿಯು ನಮ್ಮ ಆರೋಗ್ಯದಲ್ಲಾಗುವ ಬದಲಾವಣೆಯನ್ನು ಹೇಗೆ ತೆರೆದಿಡುತ್ತದೆ? ಅದರ ಆರೈಕೆಯ ಬಗೆ ಹೇಗೆ? ಎನ್ನುವುದನ್ನು ಬೋಲ್ಡ್ ಸ್ಕೈ ಲೇಖನದ ಮುಂದಿನ ಭಾಗದಲ್ಲಿ ವಿವರಿಸಿದೆ.

lips care

ತುಟಿಗಳು

ತುಟಿಗಳ ಮೇಲೆ ಚಿಕ್ಕದಾದ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಇವು ಅತ್ಯಂತ ನೋವಿನಿಂದ ಕೂಡಿದ್ದು, ತುಟಿ ಒಡೆಯುವ ಮೂಲಕ ಅಧಿಕ ರಕ್ತಸ್ರಾವ ಉಂಟಾಗುವ ಸಾಧ್ಯತೆಗಳಿರುತ್ತವೆ. ಈ ಸಮಸ್ಯೆಯು ಹರ್ಪಿಸ್ ವೈರಸ್‍ನಿಂದ ಉಂಟಾಗುವುದು. ಈ ರೋಗವು ಸಾಂಕ್ರಾಮಿಕ ರೋಗ. ಇಂತಹ ವ್ಯಕ್ತಿಗಳು ಬಳಸಿದ ತುಟಿ ಉತ್ಪನ್ನಗಳನ್ನು ಬಳಸಬಾರದು.

ತುಟಿಯ ಮೂಲೆಯಲ್ಲಿ ಸೀಳುವಿಕೆ

ತುಟಿಯ ಮೂಲೆಗಳು ಸೀಳುವಿಕೆಯಿಂದ ನೋವನ್ನು ಅನುಭವಿಸುತ್ತಿದ್ದೀರಿ ಎಂದಾದರೆ ದೇಹದಲ್ಲಿ ಜೀವಸತ್ವದ ಕೊರತೆ ಉಂಟಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಇದು ಕೆಲವೊಮ್ಮೆ ಶಿಲೀಂದ್ರಗಳ ಸೊಂಕು ಎನ್ನುವುದನ್ನು ಸಹ ಸೂಚಿಸುತ್ತದೆ. ಒತ್ತಡ ಮತ್ತು ಆತಂಕಗಳು ಹೆಚ್ಚಾದಾಗ ಈ ಸಮಸ್ಯೆ ಉಂಟಾಗುತ್ತದೆ ಎಂದು ಸಹ ಹೇಳಲಾಗುತ್ತದೆ.

lips care

ಒಣಗಿದ ತುಟಿಗಳು

ನಿಮ್ಮ ತುಟಿಗಳು ಆಗಾಗ ಒಣಗಿದಂತೆ ಆಗಿರುತ್ತದೆ ಎಂದಾಗ ಲಿಪ್ ಬಾಮ್ ಹಚ್ಚುವುದರ ಮೂಲಕ ಸಮಸ್ಯೆಯನ್ನು ಮರೆಮಾಚಲು ಪ್ರಯತ್ನಿಸದಿರಿ. ಇದು ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಎನ್ನುವುದನ್ನು ತೋರಿಸಿಕೊಡುತ್ತದೆ. ಹಾಗಾಗಿ ಅಂತಹ ಕುರುಹು ಕಂಡುಬಂದರೆ ಮೊದಲು ಆದಷ್ಟು ನೀರನ್ನು ಸೇವಿಸುವುದರ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು.

ಹೀಗೆ ಮಾಡಿ-

ಸೌತೆಕಾಯಿಯನ್ನು ಅರ್ಧ ಭಾಗವಾಗಿ ಕತ್ತರಿಸಿ. ಸೌತೆಕಾಯಿಯ ಸಿಪ್ಪೆಯನ್ನು ತೆಗೆದು, ಅದನ್ನು ತಣ್ಣೀರಿನಲ್ಲಿ ಇಡಿ. 15 ನಿಮಿಷದ ನಂತರ ಇದನ್ನು ತೆಗೆದುಕೊಂಡು ಒಡೆದ ತುಟಿಗಳ ಮೇಲೆ ಮಸಾಜ್ ಮಾಡಿ. ಇದು ತುಟಿಗಳಿಗೆ ತೇವಾಂಶವನ್ನು ಒದಗಿಸಲು ಇರುವ ಅತ್ಯಂತ ಶೀಘ್ರ ಪರಿಹಾರವಾಗಿದೆ.

lips care

ಕಂದು ಬಣ್ಣದ ತುಟಿ

ಕೆಲವೊಮ್ಮೆ ನಮ್ಮ ತುಟಿಗಳು ಕಂದು ಬಣ್ಣಕ್ಕೆ ತಿರುಗಬಹುದು ಅಥವಾ ಗಾಢವಾದ ಬಣ್ಣಕ್ಕೆ ತಿರುಗಬಹುದು. ಇದು ಅತಿಯಾಗಿ ಧೂಮಪಾನ ಮಾಡುವುದರಿಂದಲೂ ಉಂಟಾಗುತ್ತದೆ. ಕೆಲವೊಮ್ಮೆ ಯಕೃತ್ತಿನ ಸಮಸ್ಯೆ ಉಂಟಾದರೆ ತುಟಿಗಳು ಗಾಢವಾದ ಬಣ್ಣಕ್ಕೆ ತಿರುಗುತ್ತವೆ. ಇದ್ದಕ್ಕಿದ್ದಂತೆ ತುಟಿಯ ಬಣ್ಣ ಗಾಢ ಅಥವಾ ಕಂದು ಬಣ್ಣಕ್ಕೆ ತಿರುಗಿದರೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದು ಉತ್ತಮ.

ತುಟಿಗಳ ಊತ

ತುಟಿಯಲ್ಲಿ ಊತ ಕಾಣಿಸಿಕೊಳ್ಳುತ್ತಿದೆ ಎಂದರೆ ಆಂತರಿಕ ಅಲರ್ಜಿ ಕಾರಣವಾಗಿರುತ್ತದೆ. ತುಟಿಗೆ ಅನ್ವಯಿಸುವ ಬಣ್ಣ, ಲಿಪ್ ಬಾಮ್, ಔಷಧಿ ಸೇರಿದಂತೆ ಇನ್ನಿತರ ಸೌಂದರ್ಯ ವರ್ಧಕ ಉತ್ಪನ್ನಗಳಿಂದಲೂ ಉಂಟಾಗುವುದು. ಇಂತಹ ಅಲರ್ಜಿ ಮಾರಣಾಂತಿಕ ಕಾಯಿಲೆಯೂ ಆಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಬಹುಬೇಗ ವೈದ್ಯರಲ್ಲಿ ತೋರಿಸಿಕೊಳ್ಳಲು ಮರೆಯದಿರಿ.

ತುಟಿಯಲ್ಲಿ ನೋವು

ತುಟಿಯಲ್ಲಿ ನೋವು ಕಾಣಿಸಿಕೊಂಡರೆ ನಿಮ್ಮ ತುಟಿಗೆ ಅಲರ್ಜಿ ಉಂಟಾಗಿದೆ ಎಂದು ತಿಳಿಸುತ್ತದೆ. ತುಟಿಗೆ ಬಳಸುವ ಸೌಂದರ್ಯ ವರ್ಧಕ ಉತ್ಪನ್ನಗಳು ಮತ್ತು ಟೂತ್‍ಪೇಸ್ಟ್ ಅಲರ್ಜಿಯಿಂದಲೂ ಸಹ ತುಟಿಯಲ್ಲಿ ಅಲರ್ಜಿ ಉಂಟಾಗಬಹುದು. ಸಮಸ್ಯೆಗಳು ಗಮನಕ್ಕೆ ಬಂದಾಗ ಬಹುಬೇಗ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.

lips care

ಕಬ್ಬಿಣಾಂಶದ ಕೊರತೆ

ಚಳಿಗಾಲದಲ್ಲಿ ತುಟಿ ಒಡೆಯುವುದು ಸಾಮಾನ್ಯ, ಆದರೆ ಕಬ್ಬಿಣಾಂಶದ ಕೊರತೆ ಇರುವವರಿಗೆ ತುಟಿಯ ಸಂದುಗಳಲ್ಲಿ ಸೀಳುವಿಕೆ ಕಾಣಿಸಿಕೊಳ್ಳುತ್ತದೆ(ಆಂಗುಲರ್ ಚೆಲಿಟಿಸ್). ಈ ಸ್ಥಿತಿಯು ರೋಗಿಗಳಿಗೆ ಮತನಾಡಲು, ನಗಲು ಅಷ್ಟೆ ಅಲ್ಲ ತಿನ್ನಲು ಕೂಡ ತೊಂದರೆ ಮಾಡುತ್ತದೆ. ಆಂಗುಲರ್ ಚೆಲಿಟಿಸ್ ಬೇರೆ ಅನೇಕ ರೋಗಗಳ ಲಕ್ಷಣ ಕೂಡ ಆಗಿದೆ, ಆದ್ದರಿಂದ ಬೇಗನ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು.

English summary

What Your Lips Say About Your Health

Our body parts can send various warning signs that something is wrong with our health. Our hair, skin, nails, etc, can show some indications that we are not doing well with our health. Similarly, our lips also can be one of the best predictors of our health. If your body is not hydrated enough, this indication is shown by our lips getting dried out. Along with our mouthshowing an indication our lips also do the same in denoting dehydration.
Story first published: Friday, February 23, 2018, 18:10 [IST]