For Quick Alerts
ALLOW NOTIFICATIONS  
For Daily Alerts

ಪೈಲ್ಸ್ ಒಡೆದು ರಕ್ತಸ್ರಾವ ಆದರೆ ಏನು ಮಾಡಬೇಕು? ಇಲ್ಲಿದೆ ನೋಡಿ ಸರಳ ಟಿಪ್ಸ್

By Hemanth
|

ಹೆಮೊರೊಯಿಡ್ಸ್ ಅಥವಾ ಪೈಲ್ಸ್ ಇರುವಂತಹ ವ್ಯಕ್ತಿಯ ಜೀವನವು ಭೂಲೋಕದಲ್ಲಿಯೇ ನರಕವೆಂದರೆ ತಪ್ಪಾಗಲಾರದು. ಪೈಲ್ಸ್ (ಮೂಲವ್ಯಾಧಿ) ಇರುವಂತಹ ವ್ಯಕ್ತಿಗೆ ಸರಿಯಾಗಿ ಕುಳಿತುಕೊಳ್ಳಲು ಆಗದೆ, ಅದರ ನೋವು, ತುರಿಕೆ ಇತ್ಯಾದಿ ತುಂಬಾ ಸಮಸ್ಯೆಯನ್ನು ಉಂಟು ಮಾಡುವುದು. ಕೆಲವೊಂದು ಸಲ ಅತಿಯಾಗಿ ಕಾಣಿಸಿಕೊಳ್ಳುವ ನೋವಿನಿಂದಾಗಿ ದೈನಂದಿನ ಕಾರ್ಯಗಳ ಮೇಲೆ ಪರಿಣಾಮ ಬೀರುವುದು ಇದೆ. ಹೆಮೊರೊಯಿಡ್ಸ್ ಬರಲು ಹಲವಾರು ರೀತಿಯ ಕಾರಣಗಳು ಇವೆ. ಇದರಲ್ಲಿ ಗರ್ಭಧಾರಣೆ ವೇಳೆ ರಕ್ತನಾಳಗಳ ಅತಿಯಾದ ಒತ್ತಡ ಬೀಳುವುದು ಅಥವಾ ಕರುಳಿನ ಕ್ರಿಯೆಗಳ ಮೇಲೆ ಬೀಳುವಂತಹ ಒತ್ತಡ ಇತ್ಯಾದಿಗಳು ಪ್ರಮುಖ ಕಾರಣವಾಗಿದೆ. ಮೂಡುವಂತಹ ಗುಳ್ಳೆಗಳು ತುಂಬಾ ಅಪಾಯಕಾರಿ ಅಲ್ಲದೆ ಇದ್ದರೂ ತೀವ್ರ ನೋವು ಉಂಟು ಮಾಡುವುದು. ಕೆಲವೊಂದು ರೀತಿಯ ಚಿಕಿತ್ಸೆ ಮತ್ತು ಜೀವನಶೈಲಿ ಬದಲಾವಣೆ ಮಾಡಿಕೊಂಡರೆ ಆಗ ಪೈಲ್ಸ್ ನ ಸಮಸ್ಯೆ ಕಡಿಮೆ ಮಾಡಿಕೊಳ್ಳಬಹುದು.

ಹೆಮೊರೊಯಿಡ್ಸ್(ಪೈಲ್ಸ್) ಎಂದರೇನು?

ಗುದನಾಳ ಅಥವಾ ಗುದದ್ವಾರದ ಸಮೀಪದ ರಕ್ತನಾಳಗಳು ಊದಿಕೊಳ್ಳುವುದೇ ಹೆಮೊರೊಯಿಡ್ಸ್. ಇದು ಗುದದ್ವಾರದ ಒಳಗಡೆ ಇರಬಹುದು ಅಥವಾ ಗುದದ್ವಾರದ ಸುತ್ತಲಿನ ಚರ್ಮದಲ್ಲಿ(ಹೊರಭಾಗ) ಕಾಣಿಸಬಹುದು. ಪೈಲ್ಸ್ ಎನ್ನುವುದು ಸಾಮಾನ್ಯವಾಗಿದ್ದು, ಆರೋಗ್ಯಕರ ಆಹಾರ ಕ್ರಮ ಪಾಲಿಸದೆ ಇರುವುದು, ನಾರಿನಾಂಶ ಮತ್ತು ನೀರು ಸರಿಯಾಗಿ ಸೇವನೆ ಮಾಡುವುದು ಹೆಮೊರೊಯಿಡ್ಸ್ ಗೆ ಕಾರಣವಾಗಿದೆ.
ಬೊಜ್ಜು ದೇಹ ಹೊಂದಿರುವವರಲ್ಲಿ, ದೀರ್ಘಕಾಲ ಕುಳಿತುಕೊಂಡೇ ಕೆಲಸ ಮಾಡುವಂತಹ ವ್ಯಕ್ತಿಗಳಲ್ಲಿ ಪೈಲ್ಸ್ ಕಾಣಿಸಿಕೊಳ್ಳಬಹುದು. ಕೆಲವರಲ್ಲಿ ಹೆಮೊರೊಯಿಡ್ಸ್ ನ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೆ ಇರಬಹುದು. ಆದರೆ ಇನ್ನು ಕೆಲವರಲ್ಲಿ ತುರಿಕೆ, ರಕ್ತಸ್ರಾವ ಮತ್ತು ಉರಿ ಉಂಟಾಗಬಹುದು. ಇದರಿಂದ ಕುಳಿತುಕೊಳ್ಳುವುದು ಕೂಡ ತುಂಬಾ ಸಮಸ್ಯೆಯಾಗಬಹುದು.

ಬರೀ ಒಂದೆರಡು ದಿನಗಳಲ್ಲಿಯೇ ಮೂಲವ್ಯಾಧಿ ರೋಗಕ್ಕೆ ಪರಿಹಾರ...

ಹೆಮೊರೊಯಿಡ್ಸ್ ಒಡೆದು ಹೋಗುವುದೇ?

ಹೆಮೊರೊಯಿಡ್ಸ್ ಒಡೆದು ಹೋಗುವುದೇ?

ರಕ್ತನಾಳಗಳಲ್ಲಿ ರಕ್ತವು ಹೆಪ್ಪಗಟ್ಟಿದಾಗ ಥ್ರಂಬೋಸ್ಡ್ ಹೆಮೊರೊಯಿಡ್ಸ್ ಉಂಟಾಗುವುದು. ಇದು ರಕ್ತದಿಂದ ತುಂಬಿದಾಗ ಆಗ ಸಿಡಿಯುವುದು. ಇದರಿಂದ ಕೆಲವು ಸಮಯ ರಕ್ತಸ್ರಾವ ಆಗಬಹುದು. ಥ್ರಂಬೋಸ್ಡ್ ಹೆಮೊರೊಯಿಡ್ಸ್ ಒಡೆದುಹೋಗುವ ಮೊದಲು ತುಂಬಾ ನೋವುಂಟು ಮಾಡುವುದು. ಆದರೆ ಇದು ಒಡೆದ ಬಳಿಕ ರಕ್ತ ಉಂಟು ಮಾಡಿದ್ದ ಒತ್ತಡವು ಕಡಿಮೆಯಾಗಿ ಅಲ್ಪ ಪ್ರಮಾಣದಲ್ಲಿ ಆರಾಮ ನೀಡುವುದು. ದೀರ್ಘಕಾಲದ ತನಕ ನಿಮಗೆ ರಕ್ತಸ್ರಾವದೊಂದಿಗೆ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಆಗ ನಿಮಗೆ ರಕ್ತಸ್ರಾವದ ಹೆಮೊರೊಯಿಡ್ಸ್ ಇದೆ ಎನ್ನಬಹುದು.

ಒಡೆಯುವ ಹೆಮೊರೊಯಿಡ್ಸ್ನ ಲಕ್ಷಣಗಳು ಏನು?

ಒಡೆಯುವ ಹೆಮೊರೊಯಿಡ್ಸ್ನ ಲಕ್ಷಣಗಳು ಏನು?

ಹೆಮೊರೊಯಿಡ್ಸ್ ತೀವ್ರ ತುರಿಕೆ, ನೋವು ಮತ್ತು ಉರಿಯನ್ನು ಉಂಟು ಮಾಡುವುದು. ಇದು ಒಡೆದು, ತೆರೆದುಕೊಂಡಾಗ, ಕಡು ಕೆಂಪು ಬಣ್ಣದ ರಕ್ತಸ್ರಾವವು ಕೆಲವು ಸಮಯ ಕಾಲ ಕಾಣಿಸಿಕೊಳ್ಳುವುದು.

ಹೆಚ್ಚಿನ ಸಮಯದಲ್ಲಿ ಒಳಗಿನ ಹೆಮೊರೊಯಿಡ್ಸ್ ಗಮನಕ್ಕೆ ಬರದೇ ಹೋಗುವುದು. ಯಾಕೆಂದರೆ ಯಾವುದೇ ನೋವು ಅಥವಾ ತುರಿಕೆಯು ಅಲ್ಲಿ ಕಾಣಿಸಿಕೊಳ್ಳುವುದು. ಗುದನಾಳದಲ್ಲಿ ನರಗಳು ಕಡಿಮೆ ಇರುವುದೇ ಇದಕ್ಕೆ ಕಾರಣವಾಗಿದೆ. ಗುದನಾಳದಲ್ಲಿ ರಕ್ತಸ್ರಾವವು ಕಾಣಿಸಿಕೊಂಡಾಗ ಒಳಗಿನ ಹೆಮೊರೊಯಿಡ್ಸ್ ಗಮನಕ್ಕೆ ಬರುವುದು.

ರಕ್ತಸ್ರಾವಕ್ಕೆ ಚಿಕಿತ್ಸೆ ಹೇಗೆ?

ರಕ್ತಸ್ರಾವಕ್ಕೆ ಚಿಕಿತ್ಸೆ ಹೇಗೆ?

ಹೆಮೊರೊಯಿಡ್ಸ್ ಚಿಕಿತ್ಸೆಗೆ ಹಲವಾರು ರೀತಿಯ ಕ್ರೀಮ್ ಗಳು ಮತ್ತು ಚಿಕಿತ್ಸೆಗಳು ಲಭ್ಯವಿದೆ. ರಕ್ತಸ್ರಾವ ತಡೆಯಲು ನೀವು ದಿಂಬುಗಳನ್ನು ಕಾಲಿನಡಿ ಬಳಸಿಕೊಂಡು ಹಾಸಿಗೆಯಲ್ಲಿ ಮಲಗಬಹುದು. ಇದು ಹೆಮೊರೊಯಿಡ್ಸ್ ನ ಒತ್ತಡ ಕಡಿಮೆ ಮಾಡುವುದು ಮಾತ್ರವಲ್ಲದೆ ರಕ್ತಸಂಚಾರ ತಗ್ಗಿಸಿ, ರಕ್ತಸ್ರಾವವಾಗದಂತೆ ತಡೆಯುವುದು. ಊತ ಕಡಿಮೆ ಮಾಡಲು ಐಸ್ ಚಿಕಿತ್ಸೆ ನೀಡಬಹುದು. ನೋವು ಮತ್ತು ಉರಿಯೂತಕ್ಕೆ ನೀವು ಔಷಧಿಯನ್ನು ತೆಗೆದುಕೊಳ್ಳಬಹುದು.

ಹೆಮೊರೊಯಿಡ್ಸ್ ನಲ್ಲಿನ ರಕ್ತಸ್ರಾವವು ಕೆಲವು ಸೆಕೆಂಡ್ ಗಳಿಂದ 10 ನಿಮಿಷ ತನಕ ಇರಬಹುದು. ಕರುಳಿನ ಕ್ರಿಯೆ ವೇಳೆ ಈ ಪ್ರದೇಶವು ಆಗಾಗ ರಕ್ತಸ್ರಾವ ಉಂಟು ಮಾಡಬಹುದು.

ಒಡೆದ ಹೆಮೊರೊಯಿಡ್ಸ್ ಗೆ ಯಾವುದೇ ವಿಶೇಷ ಅಥವಾ ದೀರ್ಘ ಚಿಕಿತ್ಸೆಯ ಅಗತ್ಯವಿಲ್ಲ. ರಕ್ತಸ್ರಾವವು ಕೆಲವು ಸಮಯದ ಬಳಿಕ ಕಡಿಮೆಯಾಗುವುದು. ಆದರೆ ಇದು ಒಣಗುವ ತನಕ ಆ ಪ್ರದೇಶವನ್ನು ತುಂಬಾ ಸ್ವಚ್ಛವಾಗಿಟ್ಟುಕೊಳ್ಳಿ. ಕುಳಿತುಕೊಂಡು ಸ್ನಾನ ಮಾಡಿದರೆ ರಕ್ತಸಂಚಾರವು ಹೆಚ್ಚಾಗಿ ಬೇಗನೆ ಒಣಗುವುದು.

ಪಾಲಿಸಬೇಕಾಗಿರುವ ಕೆಲವೊಂದು ಕ್ರಮಗಳು

ಪಾಲಿಸಬೇಕಾಗಿರುವ ಕೆಲವೊಂದು ಕ್ರಮಗಳು

• ಬಾತ್ ಟಬ್ ಗೆ 4 ಇಂಚಿನಷ್ಟು ಬಿಸಿ ನೀರು ಹಾಕಿ. ಬಿಸಿ ನೀರು ನಿಮಗೆ ಸಹಿಸಲು ಸಾಧ್ಯವಾಗುವಷ್ಟು ಬಿಸಿಯಾಗಿರಲಿ ಮತ್ತು ಅತಿಯಾಗಿ ಬಿಸಿಯಾಗಿರುವುದು ಬೇಡ.

• ಹೆಮೊರೊಯಿಡ್ಸ್ ಭಾಗವನ್ನು ಇದರಲ್ಲಿ ಮುಳುಗಿಸಿ ಮತ್ತು 20 ನಿಮಿಷ ಕಾಲ ಬಿಸಿ ನೀರಿನಲ್ಲಿ ಕುಳಿತುಕೊಳ್ಳಿ.

• ಬಿಸಿ ನೀರಿನಲ್ಲಿ ಆ ಭಾಗವು ಸಂಪೂರ್ಣವಾಗಿ ಮುಳಗಡೆಯಾಗಿರುವುದನ್ನು ಖಾತರಿಪಡಿಸಿಕೊಳ್ಳಿ. ಮೊಣಕಾಲನ್ನು ಬಗ್ಗಿಸಬಹುದು ಅಥವಾ ಬಾತ್ ಟಬ್ ನ ಬದಿಗೆ ನಿಮ್ಮ ಕಾಲುಗಳನ್ನು ಇಡಬಹುದು.

• ಟವೆಲ್ ನಿಂದ ಈ ಭಾಗವನ್ನು ಶುಚಿಗೊಳಿಸಿ ಮತ್ತು ಉಜ್ಜಬೇಡಿ.

• ಈ ಭಾಗವು ಒಣಗಿರಲಿ ಮತ್ತು ಶುಚಿಯಾಗಿರಲಿ. ಅಗತ್ಯಬಿದ್ದರೆ ದಿನಾ ಹೀಗೆ ಮಾಡಿ.

ಸಮಸ್ಯೆಗಳು ಏನು?

ಸಮಸ್ಯೆಗಳು ಏನು?

ಹೆಚ್ಚಾಗಿ ಊತ ಮತ್ತು ನೋವು ಕೆಲವು ವಾರಗಳಲ್ಲಿ ಕಡಿಮೆಯಾಗುವುದು. ಅದಾಗ್ಯೂ, ದೀರ್ಘಕಾಲದ ಗುದನಾಳದ ರಕ್ತಸ್ರಾವಾಗುತ್ತಲಿದ್ದರೆ ಆಗ ವೈದ್ಯರ ಬಳಿ ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳಿ. ಇದು ಬೇರೆ ಯಾವುದೇ ರೋಗದ ಲಕ್ಷಣವು ಆಗಿರಬಹುದು.

ಪೈಲ್ಸ್ ನ ಗುಳ್ಳೆಯು ಒಡೆದ ಬಳಿಕ ಹತ್ತು ನಿಮಿಷಕ್ಕಿಂತ ಹೆಚ್ಚಿನ ಕಾಲ ರಕ್ತಸ್ರಾವವಾಗುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಲೇಬೇಕು. ಇದು ಪೈಲ್ಸ್ ಗಿಂತ ಹೊರತಾದ ಸಮಸ್ಯೆಯಾಗಿರಬಹುದು. ಇದು ಗುದನಾಳದ ಕ್ಯಾನ್ಸರ್ ಅಥವಾ ಕೊಲೊರೆಕ್ಟಲ್ ಕ್ಯಾನ್ಸರ್ ನ ಲಕ್ಷಣವಾಗಿರಲೂಬಹುದು.

ರಕ್ತಸ್ರಾವಕ್ಕೆ ಹೊರತಾಗಿ ನಿಮ್ಮಲ್ಲಿ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಂಡರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆಯಿರಿ.

• ವಾಕರಿಕೆ ಅಥವಾ ವಾಂತಿ

• ಆಯಾಸ

• ಜ್ವರ

• ಹೊಟ್ಟೆನೋವು

• ಮಲದ ಪ್ರಮಾಣ ಮತ್ತು ಬಣ್ಣದಲ್ಲಿ ಬದಲಾವಣೆ.

• ಗುದನಾಳ ನೋವು

• ತೂಕ ಕಳೆದುಕೊಳ್ಳುವುದು

• ಹೊಟ್ಟೆ ಚಲನೆಯ ಅಭ್ಯಾಸದಲ್ಲಿ ಬದಲಾವಣೆ.

• ಲಘು ತಲೆನೊವು.

ಒಡೆದುಹೋಗುವ ಹೆಮೊರೊಯಿಡ್ಸ್ ಸಮಸ್ಯೆಯು ಕೆಲವೊಂದು ಸಂದರ್ಭದಲ್ಲಿ ದೀರ್ಘಕಾಲ ತನಕ ಇರಬಹುದು. ಆದರೆ ಇದು ಹೆಚ್ಚಿನ ಜನರಲ್ಲಿ ಬೇಗನೆ ಒಣಗುವುದು.

ಹೆಮೊರೊಯಿಡ್ಸ್ ತೀವ್ರವಾಗಿದ್ದರೆ ಆಗ ವೈದ್ಯರು ಚಿಕಿತ್ಸೆ ನೀಡುವರು. ಅದಾಗ್ಯೂ, ನೋವು ಮತ್ತು ಊತ ಕಡಿಮೆಯಿದ್ದರೆ ಮನೆಮದ್ದು ಬಳಸಬಹುದು. ಉರಿಯೂತದ ಹೆಮೊರೊಯಿಡ್ಸ್ ನಿಂದ ಹೀಗೆ ಆಗಬಹುದು.

ಮೂಲವ್ಯಾಧಿ ಸಮಸ್ಯೆಯೇ..? ಮೂಲಂಗಿಯೇ ಸಮರ್ಥ ಮದ್ದು

English summary

What To Do If A Haemorrhoid Bursts?

Haemorrhoids, or as otherwise referred to as piles, can give you some troublesome and painful moments. There could be a variety of causes for this ailment such as increased pressure on veins during pregnancy or due to strained bowel movements. Sometimes a clot can form into a haemorrhoid. Although not dangerous, they are highly painful. Certain treatments and lifestyle changes can help in eliminating troubles associated with piles.
Story first published: Friday, September 7, 2018, 18:09 [IST]
X
Desktop Bottom Promotion