For Quick Alerts
ALLOW NOTIFICATIONS  
For Daily Alerts

ಕೋಳಿ ಮಾಂಸ ಸೇವಿಸಿದ ನಂತರ ಹಾಲು ಕುಡಿದರೆ ಏನಾಗುವುದು?

|

ಮನುಷ್ಯನ ಅತಿ ದೊಡ್ಡ ಆಸ್ತಿ ಎಂದರೆ ಅವನ ಆರೋಗ್ಯ. ಆರೋಗ್ಯ ಸರಿಯಿಲ್ಲದೆ ಸಾಕಷ್ಟು ಆಸ್ತಿ ಹೊಂದಿದ್ದರೂ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಉತ್ತಮ ಆರೋಗ್ಯವನ್ನು ಹೊಂದಿದ್ದರೆ ಮನುಷ್ಯ ಏನನ್ನಾದರೂ ಸಾಧಿಸಬಹುದು. ತನ್ನ ಗುರಿಗಾಗಿ ಅನೇಕ ಯೋಜನೆಯನ್ನು ಹೊಂದಬಹುದು. ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿತವೆನಿಸುವಂತಹ ಆರೋಗ್ಯವಿಲ್ಲ ಎಂದಾದರೆ ಜೀವನದಲ್ಲಿ ಖುಷಿಯನ್ನು ಹೊಂದಲು ಸಾಧ್ಯವಿಲ್ಲ. ಆ ಕಾರಣಕ್ಕಾಗಿಯೇ ನಾವು ಸೇವಿಸುವ ಆಹಾರ ಸೂಕ್ತ ರೀತಿಯಲ್ಲಿ ಇರಬೇಕು.

Chicken

ಉತ್ತಮ ಆರೋಗ್ಯಕ್ಕೆ ಸಹಾಯಮಾಡುವ ಸೂಕ್ತ ಬಗೆಯ ಆಹಾರ ಸೇವನೆಯ ಪದ್ಧತಿಯ ಅರಿವು ನಮಗಿರಬೇಕು. ಇಂದಿನ ಗಡಿಬಿಡಿ ಜೀವನ ಕ್ರಮದಲ್ಲಿ ತಾವು ಸೇವಿಸುವ ಆಹಾರ ಪದ್ಧತಿ ಹಾಗೂ ಸಂಯೋಜನೆಯ ಬಗ್ಗೆ ಯಾವುದೇ ಕಾಳಜಿ ವಹಿಸದೆ ಇರುವುದನ್ನು ಕಾಣಬಹುದು. ಅಂತಹ ಅನುಚಿತ ಆಹಾರ ಸೇವನೆ ಪದ್ಧತಿಯಲ್ಲಿ ಚಿಕನ್ ಮತ್ತು ಹಾಲು ಸೇವನೆಯ ಸಂಯೋಜನೆಯೂ ಒಂದು. ಚಿಕನ್ ತಿಂದ ಬಳಿಕೆ ಹಾಲನ್ನು ಕುಡಿಯಬಾರದು ಎಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ.

ಅನುಚಿತ ರೀತಿಯ ಆಹಾರ ಸೇವನೆಯಿಂದ ಪ್ರಾಥಮಿಕ ತೊಂದರೆಗಳಾದ ವಾತಾ, ಪಿತ್ತ, ಕಫಾ ಹೆಚ್ಚಾಗುವುದು. ಇವು ದೈಹಿಕವಾಗಿ ಅನೇಕ ಆರೋಗ್ಯ ಸಮಸ್ಯೆಗಳ ಸೃಷ್ಟಿಗೆ ಸಹಕರಿಸುವುದು. ಜೊತೆಗೆ ಆರೋಗ್ಯ ಸಮಸ್ಯೆಯು ಉಲ್ಭಣವಾಗುವುದರಿಂದ ಗುಣಪಡಿಸಲು ಸಾಧ್ಯವಾಗದ ಸಮಸ್ಯೆಗಳು ಸಹ ತಲೆದೂರವಾಗಬಹುದು. ಚಿಕನ್ ಮತ್ತು ಹಾಲು ಸೇವನೆಯಿಂದಲೂ ಇದೇ ಬಗೆಯೇ ಸಮಸ್ಯೆಗಳು ತಲೆದೂರುವುದು.

ಚಿಕನ್ ಮತ್ತು ಹಾಲು
ನಿತ್ಯ ಸೇವಿಸುವ ಆಹಾರಗಳಲ್ಲಿ ಒಂದಾದ ಹಾಲು ವಿವಿಧ ಪೋಷಕಾಂಶಗಳನ್ನು ಒಳಗೊಂಡಿದೆ. ಸಮೃದ್ಧವಾದ ಖನಿಜ ಮತ್ತು ಪ್ರೋಟೀನ್‍ಗಳನ್ನು ಒಳಗೊಂಡಿರುವ ಇದು ಸಂಪೂರ್ಣವಾದ ಆಹಾರಗಳಲ್ಲಿ ಒಂದು. ಚಿಕನ್ ಅಥವಾ ಯಾವುದೇ ಮಾಂಸಹಾರಿ ಆಹಾರ ಪದಾರ್ಥಗಳ ಜೊತೆ ಇದರ ಸಂಯೋಜನೆ ಉತ್ತಮವಾದುದ್ದಲ್ಲ. ಏಕೆಂದರೆ ಹಾಲಿನ ಜೀರ್ಣಕ್ರಿಯೆಯ ಪ್ರಕ್ರಿಯೆಯು ಪ್ರೋಟೀನ್ ಗಳೊಂದಿಗಿನ ಚಿಕನ್ ಜೀರ್ಣಕ್ರಿಯೆಯು ಭಿನ್ನವಾಗಿರುತ್ತದೆ.

ಜೀರ್ಣ ಕ್ರಿಯೆಯಲ್ಲಿ ಸಮಸ್ಯೆ
ಚಿಕನ್ ಅಲ್ಲಿ ಕಾಸೀನ್ ಎಂಬ ಪ್ರೋಟೀನ್ ಉಪಸ್ಥಿತಿ ಇರುವುದರಿಂದ ಹಾಲು ಜೀರ್ಣವಾಗಲು ಅಧಿಕ ಸಮಯ ಬೇಕಾಗುವುದು. ಒಟ್ಟಾರೆಯಾಗಿ ಎರಡು ಆಹಾರ ಪದಾರ್ಥಗಳು ಜೀರ್ಣವಾಗಲು ಅಡ್ಡಿಯನ್ನುಂಟುಮಾಡುವುದು. ಒಂದು ಪ್ರಕ್ರಿಯೆಯ ಕ್ರಮದಂತೆ ಹೇಳುವುದಾದರೆ ಹೊಟ್ಟೆಯ ಬದಲಾಗಿ ಡ್ಯುಮೋಡ್‍ಗಳಿಂದ ಹಾಲಿನ ಜೀರ್ಣಕ್ರಿಯೆ ನಡೆಯುತ್ತದೆ. ಇದರಿಂದಾಗಿ ಸಾಮಾನ್ಯ ಪ್ರಕ್ರಿಯೆಯಲ್ಲಿ ನಡೆಯುವ ಜೀರ್ಣಕ್ರಿಯೆಯು ಸಂಭವಿಸುವುದಿಲ್ಲ.

ವಿಷ ಉಂಟಾಗುವುದು
ಹಾಲು ಮತ್ತು ಚಿಕನ್ ಹೊಂದುವುದರಿಂದ ದೇಹದಲ್ಲಿ ಜೀವಾಣುಗಳು ವಿಷವನ್ನುಂಟುಮಾಡುವುದು ಅಥವಾ ಸಂಗ್ರಹಿಸಬಹುದು. ಕೋಳಿ ಮಾಂಸ ಕೆಲವರಿಗೆ ಜೀರ್ಣವಾಗಲು ಅಧಿಕ ಸಮಯವನ್ನು ತೆಗೆದುಕೊಳ್ಳುವುದು. ಹೊಟ್ಟೆಯ ಆಮ್ಲಗಳ ಬಿಡುಗಡೆಯು ಜೀರ್ಣಕ್ರಿಯೆಯ ಮೇಲೆ ತೀವ್ರವಾದ ಭಾರವನ್ನು ಉಂಟುಮಾಡುವುದು.

ವಿವಿಧ ಸಮಸ್ಯೆಗಳಿಗೆ ಕಾರಣ
ಹಾಲು ಮತ್ತು ಕೋಳಿ ಮಾಂಸದ ಸಂಯೋಜನೆಯನ್ನು ಪದೇ ಪದೇ ಸೇವಿಸುವುದರಿಂದ ದೀರ್ಘಾವಧಿಯಲ್ಲಿ ಪ್ರತಿಕೂಲದ ಸಮಸ್ಯೆ ಉಂಟಾಗಬಹುದು. ಈ ಪರಿಣಾಮವಾಗಿ ಹೊಟ್ಟೆ ನೋವು, ವಾಕರಿಕೆ, ಅಜೀರ್ಣ, ಅನಿಲ, ಹೊಟ್ಟೆ ಉಬ್ಬರ, ಹುಣ್ಣುಗಳು, ಕೆಟ್ಟ ವಾಸನೆ, ಮಲಬದ್ಧತೆ, ಆಮ್ಲ ಹಿಮ್ಮುಖವಾದಂತಹವು ಸೇರಿದಂತೆ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಇದು ವೈಜ್ಞಾನಿಕವಾಗಿಯೂ ಅನೇಕ ಸಮಸ್ಯೆಗಳು ಉದ್ಭವಿಸುವುದು ಎಂದು ಸಾಭೀತು ಪಡಿಸಲಾಗಿದೆ.

ಚರ್ಮದ ಸಮಸ್ಯೆ
ಹಾಲು ಮತ್ತು ಕೋಳಿಯ ಸಂಯೋಜನೆಯ ಆಹಾರ ಸೇವನೆಯಿಂದ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಉದ್ಭವಿಸುವುದು. ವಿಟಲಿಗೋ ಎನ್ನುವ ಸಮಸ್ಯೆಯು ಕಾಡುವುದು. ಇದು ಚರ್ಮದ ವರ್ಣದ್ರವ್ಯದ ಮೇಲೆ ಸಮಸ್ಯೆಯನ್ನು ಉಂಟುಮಾಡುವುದು. ಇದರಿಂದಾಗಿ ಚರ್ಮದ ಮೇಲೆ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುವುದು.

ಜೀರ್ಣಕ್ರಿಯೆಗೆ ಯೋಗ್ಯವಲ್ಲ
ಹಾಲು ಮತ್ತು ಕೋಳಿ ಮಾಂಸ ವಿವಿಧ ಬಗೆಯನ್ನು ಹೊಂದಿದೆ. ಕೋಳಿ ಮಾಂಸದಲ್ಲಿ ಕಂಡುಬರುವ ಪ್ರೋಟೀನ್‍ಗಳು ಹಾಲಿನಲ್ಲಿರುವ ಪ್ರೋಟೀನ್‍ಗಳಿಗಿಂತ ಹೆಚ್ಚು ಸಂಕೀರ್ಣವಾಗಿದೆ. ಲ್ಯಾಕ್ಟೋಸ್ ಸಹಿಷ್ಣುತೆಯನ್ನು ಹೊಂದಿರುವವರಿಗೆ ಜೀರ್ಣಕ್ರಿಯೆಯಲ್ಲಿ ಈ ಎರಡು ವಿಧಗಳ ಪ್ರೋಟೀನ್ ಮಿಶ್ರಣವು ಸೂಕ್ತವಲ್ಲ ಎಂದು ಹೇಳಲಾಗುವುದು.

ಎಲ್ಲರಿಗೂ ಅನ್ವಯಿಸುವುದಿಲ್ಲ
ಈ ಎರಡು ಸಂಯೋಜನೆಯಲ್ಲಿ ಆಹಾರ ಸೇವಿಸುವುದು ಪ್ರಬಲ ಜೀರ್ಣಕಾರಿ ವ್ಯವಸ್ಥೆ ಹೊಂದಿದವರಿಗೆ ತೊಂದರೆ ಉಂಟುಮಾಡದು. ಸೂಕ್ಷ್ಮ ಜೀರ್ಣಕ್ರಿಯೆ ಹೊಂದಿದವರಿಗೆ ಇವೆರಡರ ಸಂಯೋಜನೆ ಸೂಕ್ತವಲ್ಲ.

ಪ್ರತ್ಯೇಕ ಸೇವನೆ
ಎರಡು ಆಹಾರ ಪದಾರ್ಥಗಳನ್ನು 1 ಅಥವಾ 2 ಗಂಟೆಗಳ ಅಂತರದಲ್ಲಿ ಸೇವಿಸಬೇಕು. ಆಗ ಜೀರ್ಣಕ್ರಿಯೆಯ ಮೇಲೆ ಅನಗತ್ಯವಾದ ಭಾರ ಉಂಟಾಗದು. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು ಎಂದು ಹೇಳಲಾಗುವುದು. ಕೋಳಿ ಮಾಂಸವನ್ನು ಹೊಂದಿದ ನಂತರ ನಿಂಬೆ ರಸವನ್ನು ಸೇವಿಸಬಹುದು. ಇದು ತ್ತಮ ಜೀರ್ಣಕ್ರಿಯೆಗೆ ಪ್ರೋತ್ಸಾಹ ನೀಡುವುದು. ಹಾಲಿನೊಂದಿಗೆ ಸೇವಿಸಿದ ಕೋಳಿ ಮಾಸ ಸುಲಭವಾಗಿ ಕರಗುವುದಿಲ್ಲ. ಬದಲಿಗೆ ಮಾಂಸ ಸೇವನೆಯ ನಂತರ ನಿಂಬೆ ರಸವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಸಾಗುವುದು.

ನೆನಪಿಡಿ
ಹಾಲು ಮತ್ತು ಚಿಕನ್ ಸಂಯೋಜನೆಯ ಆಹಾರ ಸೇವನೆ ದೇಹಕ್ಕೆ ಅನುಚಿತವಾದದ್ದು. ಇಂತಹ ಅನುಚಿತ ಆಹಾರ ಕ್ರಮದಿಂದ ದೂವಿದ್ದರೆ ಅನೇಕ ಆರೋಗ್ಯ ಸಮಸ್ಯೆಯಿಂದ ದೂರ ಉಳಿಯಬಹುದು. ಜೊತೆಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಉತ್ತಮ ಆರೋಗ್ಯವನ್ನು ಹೊಂದಬಹುದು. ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದರೆ ಆರೋಗ್ಯಕರವಾದ ಕರುಳಿನ ಅಗತ್ಯವಿದೆ.

English summary

What Happens When We Drink Milk After Eating Chicken

It is a popular belief that the combination of certain foods and drinks, due to their properties, are not recommended for human consumption. Even the principle of Ayurveda states - 'Foods requiring different digestive environments need to be consumed in isolation. Therefore, it is mandatory to eat the right kind of combination at the right time or interval to avoid ruining one's health. The primary reason for this, as per Ayurveda, is the misbalance of the three doshas, namely Kapha, Vata & Pitta, that may wreak havoc on one's health and well-being.
X
Desktop Bottom Promotion