ಮಹಿಳೆಯರು ಕಾಫಿ ಕುಡಿಯುವುದನ್ನು ಕಂಟ್ರೋಲ್ ಮಾಡಬೇಕು! ಯಾಕೆ ಗೊತ್ತೇ?

Posted By: Deepu
Subscribe to Boldsky

ಮುಂಜಾನೆಯ ಒಂದು ಕಪ್ ಕಾಫಿ ನೀಡುವ ತಾಜಾತನಕ್ಕೆ ಮೂಲ ಇದರಲ್ಲಿರುವ ಕೆಫೀನ್ ಎಂಬ ರಾಸಾಯನಿಕ! ಕೆಫೀನ್ ಸೇವನೆಯಿಂದ ನಿದ್ದೆ ಇಲ್ಲವಾಗುತ್ತದೆ ಹಾಗೂ ಎಚ್ಚರದಿಂದಿರಲು ನೆರವಾಗುತ್ತದೆ. ಅಮೇರಿಕಾದ ಆಹಾರ ಮತ್ತು ಔಷಧಿ ನಿರ್ದೇಶನಾಲಯದ ಪ್ರಕಾರ ವಿಶ್ವದ ತೊಂಭತ್ತು ಶೇಖಡಾಕ್ಕೂ ಹೆಚ್ಚಿನ ಜನರು ಒಂದಲ್ಲಾ ಒಂದು ಬಗೆಯಲ್ಲಿ ಕೆಫೀನ್ ಸೇವಿಸಿಯೇ ಇರುತ್ತಾರೆ. ಆದರೆ ಕೆಫೀನ್ ಪರಿಣಾಮ ಮಹಿಳೆಯರಲ್ಲಿಲ್ ಕೊಂಚ ಭಿನ್ನವಾಗಿರುತ್ತದೆ ಹಾಗೂ ಇದರ ಪ್ರಮಾಣ ಹೆಚ್ಚಾದರೆ ಋಣಾತ್ಮಕವೂ ಆಗಬಹುದು! ಮಹಿಳೆಯರಿಗೆ ಇದೊಂದು ಕೆಟ್ಟ ಸುದ್ದಿಯಂತೆ ಅನ್ನಿಸಬಹುದು.

ಅತಿಯಾದ ಕೆಫೀನ್ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಹಾಗೂ ಇದರ ಪರಿಣಾಮವಾಗಿ ಸ್ತನಗಳು ತುಂಬಿಕೊಂಡಂತೆ ಹಾಗೂ ನೋವಿನಿಂದ ಕೂಡಿರುವಂತೆ ಮಾಡುತ್ತದೆ. ಈ ವಿಷಯವನ್ನು ಡ್ಯೂಕ್ ವಿಶ್ವವಿದ್ಯಾಲಯದ ಒಂದು ವರದಿ ತಿಳಿಸಿದೆ. ಈ ಅಧ್ಯಯನಕ್ಕಾಗಿ ಹಲವಾರು ಮಹಿಳೆಯರ ಆರೋಗ್ಯದ ಅಂಕಿ ಅಂಶಗಳನ್ನು ಪರಿಗಣಿಸಲಾಗಿತ್ತು. ಸ್ತನಗಳಲ್ಲಿ ನೋವಿದ್ದ ಮಹಿಳೆಯರು ತಮ್ಮ ಕೆಫೀನ್ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ ಬಳಿಕ ಇವರಲ್ಲಿ 61 ಶೇಖಡಾ ಮಹಿಳೆಯರು ನೋವು ಕಡಿಮೆಯಾದುದನ್ನು ತಿಳಿಸಿದ್ದಾರೆ.

ಕೆಫೀನ್ ಸೇವನೆಯಿಂದ ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಬೇರೆಯೇ ತೆರನಾದ ಪರಿಣಾಮಗಳು ಕಂಡುಬರುತ್ತವೆ. ಏಕೆಂದರೆ ಕೆಫೀನ್ ಮಹಿಳೆಯರ ದೇಹದ ರಸದೂತಗಳ ಪ್ರಭಾವವನ್ನೇ ಬದಲಿಸಿಬಿಡುತ್ತದೆ. ಇವು ಹಲವು ಇತರ ಪರಿಣಾಮಗಳೂ ಎದುರಾಗುತ್ತವೆ. ಉದಾಹರಣೆಗೆ ಎಂಡೋಕ್ರೈನ್ ಅಥವಾ ರಸದೂತಗಳನ್ನು ಸ್ರವಿಸುವ ಗ್ರಂಥಿಗಳು ಹಾಗೂ ನರವ್ಯವಸ್ಥೆಯ ಮೇಲೆ ಪ್ರಭಾವ ಬೀರುವುದು ಮುಖ್ಯವಾಗಿವೆ. ಹಾಗಾಗಿ ಕೆಫೀನ್ ಸೇವಿಸಿದ ಬಳಿಕ ಮಹಿಳೆಯರಿಗೆ ನಡುಕ, ತಲೆ ತಿರುಗುವುದು, ವಾಕರಿಕೆ ಮೊದಲಾದವು ಎದುರಾದರೆ ಅಚ್ಚರಿಯೇನಲ್ಲ!

 ಕೆಫೀನ್ ನ ವಿಷಕಾರಿ ಪ್ರಭಾವ

ಕೆಫೀನ್ ನ ವಿಷಕಾರಿ ಪ್ರಭಾವ

ಒಂದು ವೇಳೆ ಕೆಫೀನ್ ಪ್ರಮಾಣ ಹೆಚ್ಚಾದರೆ ಇದರ ಪರಿಣಾಮವಾಗಿ ಹೆದರಿಕೆ, ಚಂಚಲತೆ, ನಿದ್ದೆ ಇಲ್ಲದೇ ಇರುವುದು, ವಾಕರಿಕೆ, ಉದ್ವೇಗ, ವಾಂತಿ ಮೊದಲಾದ ತೊಂದರೆಗಳು ಎದುರಾಗಬಹುದು. ಕೆಲವೊಮ್ಮೆ ಗಂಭೀರ ಪರಿಣಾಮಗಳೂ ಎದುರಾಗಬಹುದು. ಕೆಫೀನ್ ನ ವಿಷಕಾರಿ ಪ್ರಭಾವದಿಂದ ಹೃದಯದ ಬಡಿತ ಏರುವುದು, ಉಬ್ಬರವಿಳಿತ, ಅಧಿಕ ರಕ್ತದೊತ್ತಡ, ತಲೆ ಸುತ್ತುವುದು, ಕಣ್ಣು ಕತ್ತಲೆ ಬರುವುದು ಮೊದಲಾದವೂ ಕಾಣಿಸಿಕೊಳ್ಳಬಹುದು.

ಸ್ತನಗಳ ಕಾಯಿಲೆ

ಸ್ತನಗಳ ಕಾಯಿಲೆ

ಅಮೇರಿಕನ್ ಮೆಡಿಕಲ್ ಅಸೋಸಿಯೇಶನ್ ನ ವೈಜ್ಞಾನಿಕ ವ್ಯವಹಾರ ಹಾಗೂ ರಾಷ್ಟ್ರೀಯ ಕ್ಯಾನ್ಸರ್ ವಿದ್ಯಾಲಯ ಪ್ರಸ್ತುತಪಡಿಸಿದ ವರದಿಯ ಪ್ರಕಾರ ಕೆಫೀನ್ ಸೇವನೆಗೂ ಸ್ತನದಲ್ಲಿ ಗಡ್ಡೆಗಳಾಗುವುದಕ್ಕೂ (Fibrocystic breast disease) ಯಾವುದೇ ಸಂಬಂಧವಿಲ್ಲ. ಈ ಕಾಯಿಲೆಗೂ ಸ್ತನ ಕ್ಯಾನ್ಸರ್ ಗೂ ಯಾವುದೇ ಸಂಬಂಧವಿಲ್ಲ. ಆದರೆ ಈ ಗಡ್ಡೆಗಳು ನೀರು ತುಂಬಿಕೊಂಡಂತಿರುತ್ತವೆ ಹಾಗೂ ತ್ವಚೆಯ ಮೇಲೆ ಗಾಯಗಳಂತಹ ಗುರುತುಗಳೂ ಆಗುತ್ತವೆ. ಪರಿಣಾಮವಾಗಿ ಸ್ತನಗಳು ಮುದ್ದೆ ಮುದ್ದೆಯಾದಂತಾಗುತ್ತವೆ. ಈ ಸ್ಥಿತಿ ಇರುವ ಮಹಿಳೆಯರು ಯಾವಾಗ ಕೆಫೀನ್ ಸೇವನೆಯನ್ನು ನಿಲ್ಲಿಸಿದರೋ ಆಗ ಈ ಸ್ಥಿತಿ ನಿಧಾನವಾಗಿ ಸುಧಾರಣೆಯಾಗುತ್ತಾ ಬಂದಿದೆ ಎಂದು ತಿಳಿಸಿದ್ದಾರೆ.

ಮಾನಸಿಕ ಕಾಯಿಲೆ

ಮಾನಸಿಕ ಕಾಯಿಲೆ

ಒಂದು ವೇಳೆ ಮಹಿಳೆ ಸೇವಿಸಿದ ಕೆಫೀನ್ ಪ್ರಮಾಣ ತೀರಾ ಹೆಚ್ಚಾದರೆ ಇದರ ಅಡ್ಡ ಪರಿಣಾಮಗಳು ಮನಸ್ಸಿನ ಮೇಲೂ ಆಗುತ್ತವೆ. ಇದರಿಂದ ಕೊಂಚ ಗೊಂದಲದಲ್ಲಿರುವುದು, ಅತಿ ಹೆಚ್ಚಿನ ಗೊಂದಲ ಹಾಗೂ ಮಾನಸಿಕ ಕ್ಷಮತೆ ಉಡುಗುವುದೂ ಎದುರಾಗುತ್ತದೆ. ಅಲ್ಲದೇ ಕೆಫೀನ್ ಪ್ರಮಾಣ ದೇಹದಲ್ಲಿ ಹೆಚ್ಚಾದರೆ ಇದು ಆತಂಕ, ಭಯ ಮೊದಲಾದ ಭಾವನೆಗಳನ್ನೂ ಉಂಟುಮಾಡುತ್ತದೆ. ಅಚ್ಚರಿಯಾಯಿತಲ್ಲವೇ?

ಕೆಫೀನ್ ಮತ್ತು ಮೂಳೆಗಳ ಸವೆತ

ಕೆಫೀನ್ ಮತ್ತು ಮೂಳೆಗಳ ಸವೆತ

ಒಂದು ಸಂಶೋಧನೆಯ ಪ್ರಕಾರ ರಜೋನಿವೃತ್ತಿ ಪಡೆದಿರುವ ಮಹಿಳೆಯರ ಕೆಫೀನ್ ಸೇವನೆಯಿಂದ ಮೂಳೆಗಳಲ್ಲಿರುವ ಕ್ಯಾಲ್ಸಿಯಂ ನಷ್ಟವಾಗುತ್ತವೆ ಹಾಗೂ ಮೂಳೆಗಳು ಶಿಥಿಲಗೊಳ್ಳುತ್ತವೆ. ಅದರಲ್ಲೂ ಕ್ಯಾಲ್ಸಿಯಂ ಸೇವನೆ ಕಡಿಮೆಗೊಳಿಸಿ ಕೆಫೀನ್ ಸೇವನೆ ಹೆಚ್ಚುಗೊಳಿಸಿದರೆ ಇದರ ಪರಿಣಾಮವಾಗಿ ತೀವ್ರವಾದ ಮೂಳೆಗಳ ಸವೆತ ಎದುರಾಗುತ್ತದೆ. ಆದರೆ ಕೆಫೀನ್ ಸೇವನೆಯ ಜೊತೆಗೇ ಸಾಕಷ್ಟು ಕ್ಯಾಲ್ಸಿಯಂ ಇರುವ ಆಹಾರಗಳನ್ನು ಸೇವಿಸಿದಾಗ ಮೂಳೆಗಳ ಸವೆತ ಕಂಡುಬಂದರೂ ಕ್ಯಾಲ್ಸಿಯಂ ಸೇವಿಸದ ಮಹಿಳೆಯರಿಗಿಂತ ಕಡಿಮೆ ಇತ್ತು. ಹೆಚ್ಚೋ, ಕಡಿಮೆಯೋ, ಕೆಫೀನ್ ಸೇವನೆಯಿಂದ ಮೂಳೆಗಳ ಸವೆತವಂತೂ ಖಾತರಿಯಾಗಿದೆ.

ಆಡ್ರಿನಲ್ ಗ್ರಂಥಿಯ ಅಸಮತೋಲನ

ಆಡ್ರಿನಲ್ ಗ್ರಂಥಿಯ ಅಸಮತೋಲನ

ಹೆಚ್ಚು ಕೆಫೀನ್ ಸೇವಿಸುವ ಮಹಿಳೆಯರು ಅತಿ ಕಡಿಮೆ ನಿದ್ರಿಸುತ್ತಾರೆ. ಅಧಿಕ ಕೆಫೀನ್ ಸೇವನೆಯಿಂದ ಮಹಿಳೆಯರ ದೇಹದಲ್ಲಿ ಆಗುವ ಬದಲಾವಣೆಗಳ ಪರಿಣಾಮದಿಂದ ಅಡ್ರಿನಲ್ ಗ್ರಂಥಿಗಳು ಹೆಚ್ಚು ಸ್ರವಿಸುತ್ತವೆ ಹಾಗೂ ಇದರ ಪರಿಣಾಮವಾಗಿ ಲೈಂಗಿಕ ರಸದೂತಗಳ ಮಟ್ಟಗಳನ್ನು ಉತ್ತಮ ಮಟ್ಟದಲ್ಲಿರಿಸಿಕೊಳ್ಳಲು ವಿಫಲವಾಗುತ್ತದೆ ಹಾಗೂ ರಜೋನಿವೃತ್ತಿ ವಯಸ್ಸಿಗೂ ಶೀಘ್ರವೇ ಆಗಮಿಸುತ್ತದೆ.

ಮಾನಸಿಕ ಕ್ಷಮತೆ ಕುಗ್ಗುತ್ತದೆ

ಮಾನಸಿಕ ಕ್ಷಮತೆ ಕುಗ್ಗುತ್ತದೆ

ಒಂದು ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ದಿನಕ್ಕೆ ಮೂರು ಅಥವಾ ಅದಕ್ಕೂ ಹೆಚ್ಚಿನ ಪ್ರಮಾಣದ ಕೆಫೀನ್ ನನ್ನು ಸೇವಿಸುವ ಸಾವಿರಾರು ಮಹಿಳೆಯರಲ್ಲಿ ಮಾನಸಿಕ ಕ್ಷಮತೆ ಕುಗ್ಗಿರುತ್ತದೆ. ಟೀ ಅಥವಾ ಕಾಫಿಯಲ್ಲಿರುವ ಕೆಫೀನ್ ಸಹಾ ಮಹಿಳೆಯರಲ್ಲಿ ಚಿಂತನಾ ಸಾಮರ್ಥ್ಯವನ್ನು ಕುಗ್ಗಿಸಿರುವುದನ್ನು ಗಮನಿಸಲಾಗಿದೆ.

ಗರ್ಭಾವಸ್ಥೆಯಲ್ಲಿ ಮಿತಪ್ರಮಾಣದ ಕೆಫೀನ್ ಸೇವನೆ ಸುರಕ್ಷಿತ

ಗರ್ಭಾವಸ್ಥೆಯಲ್ಲಿ ಮಿತಪ್ರಮಾಣದ ಕೆಫೀನ್ ಸೇವನೆ ಸುರಕ್ಷಿತ

ಗರ್ಭಾವಸ್ಥೆಯಲ್ಲಿದ್ದಾಗ ದಿನಕ್ಕೆ ಎರಡು ಅಥವಾ ಮೂರು ಕಪ್ ಗಳಷ್ಟು ಕಾಫಿಯನ್ನು ಕುಡಿಯುವುದರಿಂದ ಗರ್ಭಿಣಿಗೆ ಏನೂ ತೊಂದರೆಯಾಗದು. ಒಂದು ವೇಳೆ ಮೂರಕ್ಕೂ ಹೆಚ್ಚು ಕಪ್ ಕುಡಿದರೆ ಗರ್ಭಾಪಾತವಾಗುವ ಸಾಧ್ಯತೆ ಮಾತ್ರ ಇಮ್ಮಡಿಯಾಗುತ್ತದೆ. ಆದ್ದರಿಂದ ಗರ್ಭಿಣಿಯರು ತಾವು ಸೇವಿಸುವ ಟೀ ಕಾಫಿಗಳ ಬಗ್ಗೆ ತಮ್ಮ ವೈದ್ಯರು ಅಥವಾ ಸ್ತ್ರೀರೋಗ ತಜ್ಞರನ್ನು ವಿಚಾರಿಸಿ, ಅವರು ಸೂಚಿಸುವ ಮಿತಿಗಳ ಒಳಗೇ ಸೇವಿಸಬೇಕು.ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

What Are The Effects Of Caffeine In Women

Women's responses and reactions to caffeine consumption may differ from a man's, especially in the way caffeine interacts with the hormones. It may also differ in other body functions as well. These are the side effects of coffee in females which include affecting the endocrine and nervous systems of a woman. So, if you may experience nervousness, dizziness, nausea after consuming caffeine, don't be surprised.