For Quick Alerts
ALLOW NOTIFICATIONS  
For Daily Alerts

ಪ್ರೋಟೀನ್ ಶೇಕ್ ನಿಂದ ದೇಹಕ್ಕೆ ಆಗುವ ಹಾನಿಗಳು

|

ದೇಹದಾರ್ಢ್ಯ ಪಟುಗಳು ಹೆಚ್ಚಾಗಿ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಅಥವಾ ಸ್ಪರ್ಧೆಗಳಲ್ಲಿ ಭಾಗಿಯಾಗಲು ಹೆಚ್ಚಾಗಿ ಪ್ರೋಟೀನ್ ಪಾನೀಯ ಸೇವನೆ ಮಾಡುವರು. ಆದರೆ ಪ್ರೋಟೀನ್ ಪಾನೀಯವನ್ನು ಮೊಟ್ಟೆ, ಹಾಲು ಮತ್ತು ಸೋಯಾದಿಂದ ತಯಾರಿಸಲಾಗುತ್ತದೆ. ಆದರೆ ಹೆಚ್ಚಿನವರಿಗೆ ಇದರಿಂದ ಆಗುವಂತಹ ಆರೋಗ್ಯ ಹಾನಿಯ ಬಗ್ಗೆ ತಿಳಿದಿಲ್ಲ. ಯಾಕೆಂದರೆ ಮಾರುಕಟ್ಟೆಯಲ್ಲಿ ಸಿಗುವಂತಹ ಪ್ರೋಟೀನ್ ಪಾನೀಯದಲ್ಲಿ ಸಂಸ್ಕರಿತ ಪ್ರೋಟೀನ್ ಸೇರಿಸಲಾಗುತ್ತದೆ. ಇದರಲ್ಲಿ ಕೆಲವೊಂದು ವಿಷಕಾರಿ ಅಂಶಗಳಾದ ಸೀಸ, ಆರ್ಸೆನಿಕ್ ಮತ್ತು ಪಾದರಸದ ಅಂಶವಿರುವುದು.

ನೀವು ಪ್ರೋಟೀನ್ ಪಾನೀಯ ಸೇವನೆ ಮಾಡುವುದಾದರೆ ಯಾವುದೇ ರೀತಿಯ ವಿಷಕಾರಿ ಅಂಶಗಳು ಇಲ್ಲದೆ ಇರುವಂತಹ ಪ್ರೋಟೀನ್ ಪಾನೀಯ ಸೇವನೆ ಮಾಡಿ. ಪ್ರೋಟೀನ್ ನಲ್ಲಿರುವಂತಹ ಕೆಲವೊಂದು ವಿಷಕಾರಿ ಅಂಶಗಳು ದೇಹಕ್ಕೆ ಹಾನಿಯುಂಟು ಮಾಡುವುದು ಖಚಿತ. ಇದಕ್ಕಿಂತ ನೈಸರ್ಗಿಕವಾಗಿ ಪ್ರೋಟೀನ್ ಪಾನೀಯ ಸೇವನೆ ಮಾಡಿದರೆ ಅದು ದೇಹಕ್ಕೆ ತುಂಬಾ ಒಳ್ಳೆಯದು. ಪ್ರೋಟೀನ್ ಪಾನೀಯದಿಂದ ಆರೋಗ್ಯಕ್ಕೆ ಆಗುವ ಹಾನಿಗಳ ಬಗ್ಗೆ ಬೋಲ್ಡ್ ಸ್ಕೈ ಇಂದಿನ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದೆ.

ಅಲರ್ಜಿ

ಅಲರ್ಜಿ

ಸೋಯಾ, ಹಾಲು ಮತ್ತು ಮೊಟ್ಟೆಯ ಪ್ರೋಟೀನ್ ಶೇಕ್ ನಿಂದಾಗಿ ಕೆಲವು ಜನರಲ್ಲಿ ಅಲರ್ಜಿ ಉಂಟಾಗುವುದು ಕಂಡುಬಂದಿದೆ. ಇದರಿಂದಾಗಿ ಭೇದಿ, ವಾಂತಿ ಮತ್ತು ನಿರ್ಜಲೀಕರಣ ಉಂಟಾಗಬಹುದು. ಇದು ಪ್ರೋಟೀನ್ ಪಾನೀಯದ ದೊಡ್ಡ ಅಪಾಯ.

ಹೊಟ್ಟೆಯ ತಳಮಳ

ಹೊಟ್ಟೆಯ ತಳಮಳ

ಪ್ರೋಟೀನ್ ಶೇಕ್ ಸುರಕ್ಷಿತವೇ ಎನ್ನುವ ಪ್ರಶ್ನೆ ಬರುವುದು. ಹಾಲಿನಿಂದ ಮಾಡಲ್ಪಡುವ ಪ್ರೋಟೀನ್ ಶೇಕ್ ನಲ್ಲಿ ಹಾಲಿನ ಸಕ್ಕರೆ ಲ್ಯಾಕ್ಟೋಸ್ ಇರುವುದು. ಇದು ಹೊಟ್ಟೆಯ ತಳಮಳಕ್ಕೆ ಕಾರಣವಾಗಬಹುದು. ಲ್ಯಾಕ್ಟೋಸ್ ಸೂಕ್ಷ್ಮತೆ ಇರುವವರಲ್ಲಿ ಇದು ಕಂಡುಬರಬಹುದು. ಇದರಿಂದಾಗಿ ಗ್ಯಾಸ್, ಹೊಟ್ಟೆ ಉಬ್ಬರ, ಭೇದಿ, ಹೊಟ್ಟೆ ಭಾರ ಅಥವಾ ಸೆಳೆತ ಕಂಡುಬರಬಹುದು.

ಅಂಗಾಂಗಗಳಿಗೆ ಹಾನಿ

ಅಂಗಾಂಗಗಳಿಗೆ ಹಾನಿ

ಪ್ರೋಟೀನ್ ಪಾನೀಯವು ಕಿಡ್ನಿ ಮತ್ತು ಯಕೃತ್ ಗೆ ಹಾನಿಯುಂಟು ಮಾಡುವುದೇ? ಪ್ರೋಟೀನ್ ಪಾನೀಯವನ್ನು ಶೇಕ್ ಗಳ ಮೂಲಕ ಸೇವಿಸುವುದರಿಂದ ಹೆಚ್ಚು ಸೇವಿಸಬೇಕಾಗುತ್ತದೆ. ಅತಿಯಾದ ಪ್ರೋಟೀನ್ ನಿಂದಾಗಿ ಕಿಡ್ನಿ ಮತ್ತು ಯಕೃತ್ ಮೇಲೆ ಪರಿಣಾಮ ಬೀರಬಹುದು. ಈಗಾಗಲೇ ಕಿಡ್ನಿ ಅಥವಾ ಯಕೃತ್ ಸಮಸ್ಯೆ ಇರುವವರಿಗೆ ಇದು ಮಾರಕ. ಇದು ಪ್ರೋಟೀನ್ ಪೌಡರ್ ನ ಹಾನಿಕಾರಕ ಪರಿಣಾಮ.

ವಿಷಕಾರಿ ಅಂಶಗಳು

ವಿಷಕಾರಿ ಅಂಶಗಳು

ಪ್ರೋಟೀನ್ ಪೌಡರ್ ನಲ್ಲಿ ಹಾನಿಕಾರವಾಗಿರುವಂತಹ ವಿಷಕಾರಿ ಅಂಶಗಳಾದ ಸೀಸ, ಅರ್ಸೆನಿಕ್ ಮತ್ತು ಪಾದರಸವಿರುವುದು. ಈ ಅಂಶಗಳ ಬಗ್ಗೆ ಪ್ರೋಟೀನ್ ಪೌಡರ್ ಗಳ ಲೇಬಲ್ ನಲ್ಲಿ ಹಾಕಿರುವುದಿಲ್ಲ. ಪ್ರಯೋಗಾಲಯಗಳಲ್ಲಿ ಇದರಲ್ಲಿ ವಿಷವಿರುವುದು ಪತ್ತೆಯಾಗಿದೆ. ಇದರಿಂದ ಹೊಟ್ಟೆಯಲ್ಲಿ ವಿಷಕಾರಿ ಅಂಶಗಳು ಸೇರಿಕೊಳ್ಳಬಹುದು.

ತೂಕ ಹೆಚ್ಚಳ

ತೂಕ ಹೆಚ್ಚಳ

ದೇಹದಲ್ಲಿ ಅತಿಯಾಗಿ ಪ್ರೋಟೀನ್ ಜಮೆಯಾದರೆ ಅದರಿಂದ ಕೊಬ್ಬಿನಿಂದ ಕೂಡಿದ ದೇಹದ ತೂಕ ಹೆಚ್ಚಳವಾಗುವುದು. ನಿಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರೋಟೀನ್ ಸೇವನೆ ಮಾಡಿದರೆ ತೂಕ ಹೆಚ್ಚಳವಾಗುವುದು. ಇದು ಪ್ರೋಟೀನ್ ಪಾನೀಯದ ಬಹುದೊಡ್ಡ ಅಪಾಯ.

ಅಪೌಷ್ಠಿಕತೆ

ಅಪೌಷ್ಠಿಕತೆ

ನೀವು ಯಾವಾಗಲೂ ಮಾರುಕಟ್ಟೆಯಲ್ಲಿ ಸಿಗುವಂತಹ ಪ್ರೋಟೀನ್ ಪೌಡರ್ ಸೇವನೆ ಮಾಡಿ, ನೈಸರ್ಗಿಕ ಪ್ರೋಟೀನ್ ಸೇವನೆ ಮಾಡದೆ ಇದ್ದರೆ ಆಗ ಅಪೌಷ್ಠಿಕತೆ ಕಂಡುಬರುವುದು. ನೈಸರ್ಗಿಕವಾಗಿ ಸಿಗುವಂತಹ ಪ್ರೋಟೀನ್ ನಲ್ಲಿ ಕ್ಯಾಲ್ಸಿಯಂ, ಕಬ್ಬಿಣನಾಂಶ, ವಿಟಮಿನ್ ಮತ್ತು ಖನಿಜಾಂಶಗಳಿರುವುದು.

ಕೊಲೆಸ್ಟ್ರಾಲ್ ಮತ್ತು ಹೃದಯದ ಸಮಸ್ಯೆಗೆ

ಕೊಲೆಸ್ಟ್ರಾಲ್ ಮತ್ತು ಹೃದಯದ ಸಮಸ್ಯೆಗೆ

ಪ್ರೋಟೀನ್ ಪೌಡರ್ ನಲ್ಲಿ ಹೆಚ್ಚಿನ ಮಟ್ಟದ ಕೆಟ್ಟ ಕೊಬ್ಬಿನಾಂಶವಿರುವ ಕಾರಣದಿಂದಾಗಿ ಪ್ರೋಟೀನ್ ಶೇಕ್ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುವುದು. ಇದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಕಾಣಿಸಬಹುದು.

ಥೈರಾಯ್ಡ್ ಸಮಸ್ಯೆ

ಥೈರಾಯ್ಡ್ ಸಮಸ್ಯೆ

ಪ್ರೋಟೀನ್ ಶೇಕ್ ನಲ್ಲಿ ಇರುವಂತಹ ಸೋಯಾವು ಥೈರಾಯ್ಡ್ ಗ್ರಂಥಿ ಮತ್ತು ಗಂಟಲುವಾಳವನ್ನು ಹಿಗ್ಗಿಸುವುದು. ಥೈರಾಯ್ಡ್ ಗ್ರಂಥಿಗಳಲ್ಲಿ ಐಯೋಡಿನ್ ಬಳಕೆಯನ್ನು ತಡೆದು ಥೈರಾಯ್ಡ್ ಗ್ರಂಥಿಗಳ ಪ್ರಭಾವ ಕುಗ್ಗಿಸುವುದು. ಇದು ಪ್ರೋಟೀನ್ ಪೌಡರ್ ಗಳಿಂದ ಥೈರಾಯ್ಡ್ ಗ್ರಂಥಿಗಳಿಗೆ ಆಗುವ ಹಾನಿ.

ಕಳಪೆ ಪೋಷಕಾಂಶಗಳು

ಕಳಪೆ ಪೋಷಕಾಂಶಗಳು

ಪ್ರೋಟೀನ್ ಪೌಡರ್ ನ್ನೇ ಪ್ರೋಟೀನ್ ಮೂಲವಾಗಿ ಸೇವಿಸುವ ಕಾರಣದಿಂದ ಆಹಾರದಲ್ಲಿ ಸಿಗುವಂತಹ ಕೆಲವು ಪೋಷಕಾಂಶಗಳ ಕೊರತೆ ದೇಹಕ್ಕೆ ಕಾಡುವುದು. ಪ್ರೋಟೀನ್ ಪೌಡರ್ ನಲ್ಲಿ ಉನ್ನತ ಮಟ್ಟದ ಸಂಸ್ಕರಿತ ಸಕ್ಕರೆ ಮತ್ತು ಕೃತಕ ಅಂಶಗಳಿರುವುದು. ಇದು ಹಾನಿಕಾರಕ.

English summary

The Dangers Health Risks of Protein Shakes

Protein shakes are mostly made of milk, eggs and soy. They supply high quality protein to the body. Many body builders make frequent of it without knowing it's health hazards if consumed in excess. There are many health risks of protein drinks or protein powders that we will discuss with you today. Protein shakes can cause toxicity leading to health problems. These commercial protein powders are processed form of proteins.
Story first published: Saturday, February 3, 2018, 18:47 [IST]
X
Desktop Bottom Promotion