For Quick Alerts
ALLOW NOTIFICATIONS  
For Daily Alerts

  ಜೇನುತುಪ್ಪ -ಹಸಿ ಬೆಳ್ಳುಳ್ಳಿ ತೂಕ ಇಳಿಸುವವರಿಗೆ ಪರ್ಫೆಕ್ಟ್ ಮನೆಮದ್ದುಗಳು

  By Sushma Charhra
  |

  ಫಿಟ್ ಆಗಿರಲು ಮತ್ತು ಸರಿಯಾದ ದೇಹತೂಕವನ್ನು ಹೊಂದಿರಲು ಪ್ರತಿಯೊಬ್ಬರೂ ಬಯಸುತ್ತಾರೆ. ಇದರಿಂದಾಗಿ ನಾವು ತೆಳು ಇದ್ದೇವೆ ಮತ್ತು ನೋಡಲು ಅಂದವಾಗಿದ್ದೇವೆ ಎಂಬ ಭಾವನೆ ಬರುತ್ತದೆ ಮತ್ತು ಆ ಮೂಲಕ ನಮ್ಮ ಆತ್ಮವಿಶ್ವಾಸ ಹೆಚ್ಚಾಗಲು ಕಾರಣವಾಗುತ್ತದೆ.

  ಆದರೆ, ಚಿಂತಿಸಬೇಕಾಗಿರುವುದು ಅದಲ್ಲ, ನೀವು ದಪ್ಪಗೇ ಇರಿ ಇಲ್ಲವೇ ತೆಳುವೇ ಇರಿ, ನೀವು ಎಷ್ಟು ಆರೋಗ್ಯವಾಗಿದ್ದೀರಿ ಎಂಬುದು ಬಹಳ ಪ್ರಮುಖವಾದ ವಿಚಾರವಾಗಿರುತ್ತದೆ. ಒಂದು ವೇಳೆ ನಿಮ್ಮ ಸ್ನೇಹಿತರೊಬ್ಬರು ಸೈಜ್ ಝೀರೋ ಇದ್ದರೆ ಖಂಡಿತ ನಿಮಗೆ ಹೊಟ್ಟೆಕಿಚ್ಚಾಗುತ್ತದೆ ಮತ್ತು ಒಂದೇ ವಾರದಲ್ಲಿ ಅಥವಾ 10 ದಿನದಲ್ಲಿ ತೂಕ ಇಳಿಸುವ ಡಯಟ್ ಗಳನ್ನು ಮಾಡಲು ಹೆಚ್ಚಿನವರು ಪ್ರಯತ್ನಿಸಿ ಬಿಡುತ್ತಾರೆ.

  how to eat garlic for weight loss in kannada

  ನೀವು ನಿಜಕ್ಕೂ ಈ ರೀತಿ ಆಕರ್ಷಕವಾಗಿ ಹೆಸರಿಟ್ಟಿರುವ ಡಯಟ್ ಗಳು ನಿಮ್ಮನ್ನು ಆರೋಗ್ಯಯುತವಾಗಿ ದೇಹ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ ಎಂದು ಭಾವಿಸಿದ್ದೀರಾ? ಒಂದು ವೇಳೆ ಹೌದು ಎಂಬುದು ನಿಮ್ಮ ಉತ್ತರವಾಗಿದ್ದರೆ, ನೀವು ಬಹಳಷ್ಟು ತಪ್ಪು ತಿಳುವಳಿಕೆ ಹೊಂದಿದ್ದೀರಿ ಮತ್ತು ನಿಮ್ಮ ದೇಹ ಹೇಗೆ ಕೆಲಸ ಮಾಡುತ್ತದೆ ಎಂಬ ವಿಚಾರದ ಪರಿಕಲ್ಪನೆ ನಿಮಗೆ ಇಲ್ಲ ಎಂದೇ ಅರ್ಥ.

  ಕ್ರ್ಯಾಷ್ ಡಯಟ್ ಗಳು ವೇಗದ ಫಲಿತಾಂಶಗಳನ್ನು ನೀಡುತ್ತದೆ ನಿಜ. ಆದರೆ ನಿಮ್ಮ ದೇಹದ ಕೆಲವು ಪ್ರಮುಖ ಶಕ್ತಿಯನ್ನು ಇವು ಕುಂದಿಸಿ ಬಿಡುತ್ತದೆ. ಮತ್ತು ಈ ಕ್ರ್ಯಾಷ್ ಡಯಟ್ ಗಳು ಕೇವಲ ಕೇಲವೇ ದಿನಗಳಿಗಾಗಿ ಸಿಗುವ ಫಲಿತಾಂಶವಾಗಿರುತ್ತದೆ. ಅದು ಶಾಶ್ವತವಲ್ಲ. ನೀವು ಅದನ್ನು ನಿಲ್ಲಿಸಿದ ಕೂಡಲೇ, ಮತ್ತೆ ನೀವು ನಿಮ್ಮ ತೂಕವನ್ನು ಕಳೆದುಕೊಂಡಿದ್ದಕ್ಕಿಂತ ದುಪ್ಪಟ್ಟು ಹೆಚ್ಚಿಸಿಕೊಳ್ಳುವ ಸಾಧ್ಯತೆಗಳಿರುತ್ತದೆ.

  ಹಾಗಾದ್ರೆ ಅಷ್ಟೆಲ್ಲ ಕಷ್ಟಪಟ್ಟು ಯಾಕೆ ಡಯಟ್ ಮಾಡಬೇಕು. ತುಂಬಾ ಸುಲಭದ ಮತ್ತು ಆರೋಗ್ಯಕಾರಿಯಾದ ಕೆಲವು ಮಾರ್ಗಗಳಿರುವಾಗ ಸುಮ್ಮನೆ ಯಾಕೆ ತಪ್ಪು ಕಲ್ಪನೆಯುಳ್ಳ ತೂಕ ಇಳಿಸುವ ಸೂತ್ರಗಳನ್ನು ಅನುಸರಿಸುತ್ತೀರಿ?

  ಅಧ್ಯಯನದಿಂದ ಸಾಬೀತಾಗಿರುವ ಮತ್ತು ಶಾಶ್ವತ ಫಲಿತಾಂಶಗಳನ್ನು ನಿಧಾನವಾಗಿ ಕರುಣಿಸುವ ಸೂತ್ರವೊಂದಿದೆ.ಇದೊಂದು ಆರೋಗ್ಯಕಾರಿಯಾದ ತೂಕ ಇಳಿಸುವ ಸೂತ್ರವಾಗಿದೆ.ಸುಮಾರು ಶತಮಾನಗಳಿಂದ ಬಳಕೆಯಲ್ಲಿರುವ ವಿಧಾನವೂ ಹೌದು. ಅದುವೇ ಬಿಸಿ ನೀರಿನಲ್ಲಿ ಹಸಿಬೆಳ್ಳುಳ್ಳಿ ಮತ್ತು ಜೇನುತುಪ್ಪ ಬೆರೆಸಿ ಸೇವಿಸುವುದು.

  ಬಿಸಿ ನೀರಿನೊಂದಿಗೆ ಜೇನುತುಪ್ಪ

  ದೇಹವನ್ನು ನೀರಿನಂಶದಿಂದ ಕೂಡಿರುವಂತೆ ಮಾಡುವ ಉದ್ದೇಶದಿಂದಾಗಿ ಪ್ರತಿದಿನ ದೇಹಕ್ಕೆ ಅಗತ್ಯವಿರುವಷ್ಟು ನೀರಿನ ಸೇವನೆ ಮಾಡುವುದು ಬಹಳ ಮುಖ್ಯ, ಅಷ್ಟೇ ಅಲ್ಲ ಇದು ನಿಮ್ಮ ದೇಹದ ಚಯಾಪಚಯ ಕ್ರಿಯೆ ಮತ್ತು ದೇಹದ ಎಲ್ಲಾ ಪ್ರಕ್ರಿಯೆಗಳು ಸರಾಗವಾಗಿ ನಡೆಯುವಂತೆ ಮಾಡಲು ಕೂಡ ಸಹಕಾರಿಯಾಗಿರುತ್ತದೆ. ಪ್ರತಿದಿನ 8 ಲೋಟ ನೀರನ್ನು ಕುಡಿಯುವುದು ಪ್ರತಿಯೊಬ್ಬರಿಗೂ ಬಹಳ ಮುಖ್ಯ. ನೀರನ್ನು ಕುಡಿಯುವುದು ದೇಹದ ಕಾರ್ಯಚಟುವಟಿಕೆಗಳಿಗೆ ಮಾತ್ರವಲ್ಲ, ದೇಹದ ಅನಗತ್ಯ ಕೊಬ್ಬಿನಾಂಶವನ್ನು ನಿವಾರಿಸಿ ತೂಕ ಇಳಿಸಲೂ ಕೂಡ ನೆರವಿಗೆ ಬರುತ್ತದೆ.

  ಬಿಸಿ ನೀರನ್ನು ಸೇವಿಸುವುದರಿಂದ ತೂಕ ಇಳಿಸುವ ಪ್ರಕ್ರಿಯೆ ಮತ್ತಷ್ಟು ವೇಗ ಪಡೆಯುತ್ತದೆ. ಬಿಸಿ ನೀರಿಗೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ದೇಹದಲ್ಲಿ ಸೇರಿಕೊಂಡಿರುವ ಫ್ಯಾಟ್ ಅಂಶವನ್ನು ತೆಗೆಯಲು ಇದು ನೆರವು ನೀಡುತ್ತದೆ. ಇದು ಕೊಬ್ಬನ್ನು ಕರಗಿಸಿ ಚಯಾಪಚಯವನ್ನು ವೃದ್ಧಿಸಿ ದೇಹಕ್ಕೆ ಶಕ್ತಿಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

  ಇದೊಂದು ಕ್ಯಾಲೋರಿ ಬರ್ನ್ ಮಾಡಲು ಇರುವ ಸಹಜ ಕ್ರಿಯೆಯಾಗಿದೆ. ಇದೊಂದು ಅಲ್ಕಲೈನ್ ಕಾನ್ಕೋಕ್ಷನ್ ಆಗಿದೆ. ಅಂದರೆ ದೇಹದಲ್ಲಿರುವ ಕೆಟ್ಟ ಟಾಕ್ಸಿನ್ಸ್ ಗಳನ್ನು ದೇಹದಿಂದ ಹೊರಹಾಕಲು ಇದು ನೆರವಾಗುತ್ತದೆ. ಇದನ್ನು ನೀವು ಖಾಲಿ ಹೊಟ್ಟೆಗೆ ಬೆಳಿಗ್ಗೆ ಎದ್ದ ಕೂಡಲೇ ಸೇವಿಸುವುದರಿಂದ ಮಾತ್ರ ಪರಿಣಾಮ ಪಡೆಯಲು ಸಾಧ್ಯವಾಗುತ್ತದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ.

  ಆದರೆ, ಕೇವಲ ಒಂದು ವಾರವೋ ಇಲ್ಲ ಒಂದೆರಡು ದಿನವೋ ಸೇವನೆ ಮಾಡುವುದರಿಂದಾಗಿ ಯಾವುದೇ ಪರಿಣಾಮವನ್ನೂ ನೀವು ಗುರುತಿಸಲು ಅಸಾಧ್ಯವಾಗಬಹುದು. ಇದನ್ನು ಬಹಳ ದೀರ್ಘಕಾಲದ ವರೆಗೆ ನಿಯಮಿತವಾಗಿ ಸೇವನೆ ಮಾಡಬೇಕಾಗುತ್ತದೆ ಮತ್ತು ಇದರ ಜೊತೆಗೆ ಸಮತೋಲಿತ, ಪೋಷಕಾಂಶಭರಿತ, ಮತ್ತು ನಿಗ್ರಹಿಸಲ್ಪಟ್ಟ ಆಹಾರ ಸೇವನೆ ಅಥವಾ ಪಥ್ಯದ ಅಗತ್ಯತೆ ಕೂಡ ಇದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ. ಜೇನುತುಪ್ಪದ ಜೊತೆಗೆ ಬಿಸಿನೀರು ಒಂದು ಅದ್ಭುತ ಪಾನೀಯವೆನಿಸಲಿದ್ದು ಇದು ಸಕ್ಕರೆಯನ್ನು ನೇರವಾಗಿ ನಿಮ್ಮ ದೇಹಕ್ಕೆ ಸೇರುವುದನ್ನು ತಡೆಯುತ್ತದೆ ಮತ್ತು ಸಕ್ಕರೆಯು ಬದಲಾಗಿ ಇಲ್ಲಿ ಜೇನುತುಪ್ಪ ನಿಮ್ಮ ರುಚಿಗೆ ನೆರವು ನೀಡುತ್ತದೆ.

  ಶೇಕಡಾ 60 ರಷ್ಟು ಕ್ಯಾಲೋರಿ ಸೇವಿಸುವ ಪ್ರಮಾಣವನ್ನು ಇದು ಕುಗ್ಗಿಸುತ್ತದೆಯಂತೆ. ಇನ್ನು ಮುಂದೆ ಬೆಳಿಗ್ಗೆ ಎದ್ದ ಕೂಡ ಕಾಫಿ, ಟೀ, ಇತ್ಯಾದಿ ಗಳನ್ನು ಸೇವಿಸುವ ಬದಲು ಬಿಸಿ ನೀರಿನೊಂದಿಗೆ ಹಸಿ ಬೆಳ್ಳುಳ್ಳಿ ಹಾಕಿ ಟಾನಿಕ್ ತಯಾರಿಸಿಕೊಂಡು ಸೇವಿಸುವ ಪರಿಪಾಠವನ್ನು ಬೆಳೆಸಿಕೊಳ್ಳಿ. ಇದು ಬೆಳಗಿನ ಉಪಹಾರದ ಸಮಯಕ್ಕೂ ಮುನ್ನ ಸೇವಿಸಿ. ರುಚಿಗೆ ಬೇಕಿದ್ದರೆ ಸ್ವಲ್ಪ ನಿಂಬೆಯ ರಸವನ್ನೂ ಸೇರಿಸಿಕೊಳ್ಳಿ.

  ಹಸಿ ಬೆಳ್ಳುಳ್ಳಿ ಸೇವನೆ

  ಬೆಳ್ಳುಳ್ಳಿಯನ್ನು ಸುಲಭದಲ್ಲಿ ಬೆಳಿಸಿಕೊಳ್ಳಬಹುದು. ಇದು ಈರುಳ್ಳಿಯ ಕುಟುಂಬಕ್ಕೇ ಸೇರಿದ ಒಂದು ಸಸ್ಯ. ಬೆಳ್ಳಿಳ್ಳಿ ಸಲ್ಫರ್ ನ ಅಂಶಗಳೂ ಕೂಡ ಇರುತ್ತದೆ. ಇದೇ ಕಾರಣಕ್ಕೆ ಬೆಳ್ಳುಳ್ಳಿಯಲ್ಲಿ ಹಲವಾರು ದೇಹಕ್ಕೆ ಅಗತ್ಯವಿರುವ ಗುಣಗಳಿವೆ.

  ಬೆಳ್ಳುಳ್ಳಿ ಬಹಳ ಹಿಂದಿನಿಂದಲೂ ತೂಕ ಇಳಿಸುವ ಅಧ್ಬುತ ಪದಾರ್ಥ ಎಂದು ಪರಿಗಣಿಸಲಾಗಿದೆ. ರಕ್ತದ ಒತ್ತಡದ ಮಟ್ಟವನ್ನು ನಿಯಂತ್ರಣದಲ್ಲಿ ಇಡುವ ತಾಕತ್ತು ಬೆಳ್ಳುಳ್ಳಿಗೆ ಇರುವುದರಿಂದಾಗಿ ಈ ಕಾರ್ಯ ಸಿದ್ಧಿಯಾಗಲು ಸಾಧ್ಯವಾಗುತ್ತದೆ. ರಕ್ತದ ಒತ್ತಡದ ಮಟ್ಟವೇ ನಮ್ಮ ಆಹಾರದ ಬಯಕೆಗಳಿಗೆ ಕಾರಣವಾಗುವುದು ಎಂಬ ವಿಚಾರ ನಿಮಗೆ ತಿಳಿದಿದೆ ಎಂದು ಭಾವಿಸುತ್ತೇವೆ.

  ಬೆಳ್ಳುಳ್ಳಿ ನಿಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಕಡಿಮೆಗೊಳಿಸುವ ತಾಕತ್ತು ಕೂಡ ಇದ್ದು ಇದೊಂದು ಅಧ್ಬುತ ಡೀಟಾಕ್ಸಿಫೈಯರ್ ಕೂಡ ಆಗಿದೆ.

  ಜೇನುತುಪ್ಪ ಮತ್ತು ಹಸಿ ಬೆಳ್ಳುಳ್ಳಿಯನ್ನು ಬಿಸಿನೀರಿನೊಂದಿಗೆ ಸೇವಿಸುವ ಮಾರ್ಗಗಳು

  ತೂಕ ಇಳಿಸಿಕೊಳ್ಳಲು ಹಲವಾರು ವಿಧಾನಗಳಿವೆ. ಅದರಲ್ಲೂ ಹಸಿ ಬೆಳ್ಳುಳ್ಳಿಯನ್ನು ಬಳಸಿ ತಯಾರಿಸುವ ವಿಧಾನಗಳೇ ಹಲವಾರು ಇದೆ. ನೀವು ಇದನ್ನು ಬಿಸಿ ನೀರಿನೊಂದಿಗೆ ಸೇವಿಸಬಹುದು ಅದಕ್ಕೆ ನೀವು ಜೇನುತುಪ್ಪ, ಅಲವೀರಾ, ನಿಂಬೆ ರಸ ಅಥವಾ ಆಪಲ್ ಸಿಡರ್ ವಿನೆಗರ್ ನ್ನು ಕೂಡ ಸೇರಿಸಿಕೊಳ್ಳಬಹುದು.

  ಹರ್ಬಲ್ ಟೀ ಗಳು ಕೂಡ ಬಹಳ ಪ್ರಮುಖ ಪದಾರ್ಥಗಳನ್ನು ಒಳಗೊಂಡಿದ್ದು ಅದು ನಿಮ್ಮ ದೇಹದ ತೂಕ ಇಳಿಕೆಗೆ ಬಹಳವಾಗಿ ನೆರವಿಗೆ ಬರುತ್ತದೆ. ಹಸಿ ಬೆಳ್ಳುಳ್ಳಿಯನ್ನು ಮುಂಜಾವಿನ ಸಮಯದಲ್ಲಿ ಖಾಲಿ ಹೊಟ್ಟೆಗೆ ಸೇವಿಸುವುದು ಬಹಳ ಅತ್ಯುತ್ತಮ ವಿಧಾನವಾಗಿದೆ.

  ಆದರೆ, ಅತಿಯಾಗಿ ಇದನ್ನು ಬಳಸುವುದು ಸರಿಯಲ್ಲ. ಹಾಗೆ ಮಾಡಿದರೆ ಒಂದೆರಡು ದಿನದಲ್ಲೇ ದೇಹ ತೂಕ ವೇಗವಾಗಿ ಇಳಿದು ಬಿಡುತ್ತದೆ ಎಂದು ಭಾವಿಸಿ ಬಿಡಬೇಡಿ. ಅತಿಯಾಗಿ ಇದನ್ನು ಸೇವನೆ ಮಾಡುವುದರಿಂದಾಗಿ ತೂಕ ಇಳಿಯುವುದರ ಬದಲಾಗಿ ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು.

  ಅತಿಯಾಗಿ ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದಾಗಿ ಎದೆಯುರಿಯಂತ ಸಮಸ್ಯೆಗಳು ಆರಂಭವಾಗಿ ಅಡ್ಡಪರಿಣಾಮಗಳು ಉಂಟಾಗುತ್ತದೆ ಎಂಬುದು ಕೂಡ ನೆನಪಿರಲಿ. ಹೆಚ್ಚಿನ ತೂಕವನ್ನು ಕರಗಿಸಲು ಒಂದರಿಂದ ಎರಡು ಬೆಳ್ಳುಳ್ಳಿ ಎಸಳನ್ನು ಪ್ರತಿದಿನ ಬೆಳಿಗ್ಗೆ ನಿಯಮಿತವಾಗಿ ಸೇವಿಸಿ.

  ಬಿಸಿ ನೀರಿನೊಂದಿಗೆ ಹಸಿ ಬೆಳ್ಳುಳ್ಳಿ ಮತ್ತು ಜೇನುತುಪ್ಪ ಸೇರಿಸಿ ಬಿಟ್ಟರೆ ಎಲ್ಲವೂ ಮುಗಿಯಿತು ತೂಕ ಇಳಿದು ಬಿಡುತ್ತದೆ ಎಂದು ಭಾವಿಸಿ ಬಿಡಬೇಡಿ. ಇದರ ಜೊತೆಗೆ ಆರೋಗ್ಯ ಪೂರ್ಣವಾದ ಮತ್ತು ಪೋಷಕಾಂಶ ಭರಿತ ಡಯಟ್ ನ ಅಗತ್ಯವೂ ಕೂಡ ಇರುತ್ತದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ. ಇದು ನಿಮಗೆ ಆರೋಗ್ಯಕಾರಿಯಾಗಿ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ಸರಿಯಾದ ಪ್ರಮಾಣದ ದೇಹದ ವ್ಯಾಯಾಮ ಕೂಡ ಈ ನಿಟ್ಟಿನಲ್ಲಿ ನಿಮಗೆ ಸಹಾಯ ಮಾಡುತ್ತೆ ಎಂಬ ವಿಚಾರ ನಿಮ್ಮ ಗಮನದಲ್ಲಿ ಇರಲಿ. ಆಗ ಮಾತ್ರ ತೂಕ ಇಳಿಸುವ ಗುರಿಯನ್ನು ನೀವು ಯಶಸ್ವಿಯಾಗಿ ತಲುಪಲು ಸಾಧ್ಯವಾಗುತ್ತದೆ.

  ಹಸಿ ಬೆಳ್ಳುಳ್ಳಿ ಜೊತೆಗೆ ಜೇನುತುಪ್ಪ

  ಕೆಲವು ಅಧ್ಯಯನಗಳ ಪ್ರಕಾರ, ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಕೆಲವು ಹಸಿ ಬೆಳ್ಳುಳ್ಳಿಯನ್ನು ಜೇನುತುಪ್ಪದ ಜೊತೆ ಸೇವನೆ ಮಾಡುವುದರಿಂದಾಗಿ ತೂಕ ಇಳಿಸಿಕೊಳ್ಳಬಹುದು..ಇದು ದೇಹದ ಹೆಚ್ಚಿನ ಫ್ಯಾಟ್ ಗಳನ್ನು ಬರ್ನ್ ಮಾಡಲು ಬಹಳವಾಗಿ ಕೆಲಸ ಮಾಡುತ್ತದೆ ಪ್ರಮುಖವಾಗಿ ಹೊಟ್ಟೆಯ ಭಾಗದಲ್ಲಿ ಶೇಖರಣೆಗೊಳ್ಳುವ ಫ್ಯಾಟ್ ನ್ನು ಕರಗಿಸಲು ಈ ಔಷಧಿ ನಿಮ್ಮ ನೆರವಿಗೆ ಬರುತ್ತದೆ.

  ನಿಮಗಿದು ಕೆಟ್ಟ ಕಾಂಬಿನೇಷನ್ ಎಂದು ಅನ್ನಿಸಬಹುದು. ಆದರೆ ಇವೆರಡನ್ನೂ ಒಟ್ಟಿಗೆ ಸೇರಿಸಿ ಸೇವಿಸುವುದರಿಂದಾಗಿ ಅಧ್ಬುತವಾಗಿ ಕೆಲಸ ಮಾಡುತ್ತದೆ ಮತ್ತು ನಿಮ್ಮ ದೇಹದ ತೂಕ ದಿನದಿಂದ ದಿನಕ್ಕೆ ಪರಿಣಾಮಕಾರಿಯಾಗಿ ಇಳಿಯುತ್ತಾ ಸಾಗುತ್ತದೆ. ಜೇನುತುಪ್ಪ ಮತ್ತು ಹಸಿ ಬೆಳ್ಳುಳ್ಳಿಯನ್ನು ಸೇರಿಸಿ ತಯಾರಿಸಿದ ಟಾನಿಕ್ ಗಳನ್ನು ಮನೆಯಲ್ಲೇ ನೀವು ತಯಾರಿಸಿಕೊಳ್ಳಬಹುದು ಮತ್ತು ಅದನ್ನು ಖಾಲಿ ಹೊಟ್ಟೆಗೆ ಸೇವಿಸಬಹುದು. ಮನೆಯಲ್ಲೇ ತಯಾರಿಸುವ ಈ ಟಾನಿಕ್ ನಿಮ್ಮ ಚಯಾಪಚಯ ಕ್ರಿಯೆಯನ್ನು ವೃದ್ಧಿಗೊಳಿಸಿ ನಿಮ್ಮ ದೇಹದೊಳಗೆ ಸೇರಿಕೊಂಡಿರುವ ನಿಮಗೆ ಇಷ್ಟವಿಲ್ಲದ ಫ್ಯಾಟ್ ಅಂಶವನ್ನು ಹೊರ ಹಾಕಲು ಸಹಾಯ ಮಾಡುತ್ತೆ.

  ಜೇನುತುಪ್ಪ ಮತ್ತು ಬೆಳ್ಳುಳ್ಳಿಯ ತೂಕ ಇಳಿಸುವ ಸೂತ್ರ

  ಈ ಎರಡೂ ಸೂಪರ್ ಆಹಾರಗಳಿಂದ ನೀವು ಆರೋಗ್ಯ ಲಾಭಗಳನ್ನು ಪಡೆಯಬೇಕು ಎಂದಾದರೆ ಈ ಕೆಳಗಿನ ವಿಧಾನವನ್ನು ಅನುಸರಿಸಿ ತಯಾರಿಕೆಯನ್ನು ಮಾಡಿಕೊಳ್ಳಿ

  • 2 ರಿಂದ 3 ಎಸಳು ಹಸಿ ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ ಮತ್ತು ಅದನ್ನು ಹೆಚ್ಚಿ ಜಜ್ಜಿಕೊಳ್ಳಿ.

  • ಒಂದು ಟೇಬಲ್ ಸ್ಪೂನ್ ಶುದ್ಧ ಜೇನುತುಪ್ಪವನ್ನು ತೆಗೆದುಕೊಳ್ಳಿ

  ಇವೆರಡನ್ನೂ ಮಿಕ್ಸ್ ಮಾಡಿ ಮತ್ತು ಈ ಮಿಶ್ರಣವನ್ನು ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಿ. ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತದೆ ಅಷ್ಟೇ ಅಲ್ಲ ನಿಮ್ಮ ದೇಹವನ್ನು ಬಲಿಷ್ಟವಾಗಿ ಮತ್ತು ಆರೋಗ್ಯವಾಗಿ ಇಡಲು ಸಹಕಾರಿಯಾಗಿದೆ. ನೀವು ಇವೆರಡರ ಮಿಶ್ರಣವನ್ನು ತಯಾರಿಸಿ ಒಂದು ಗಾಳಿನುಗ್ಗದ ಡಬ್ಬದೊಳಗೆ ಶೇಖರಣೆ ಮಾಡಿಯೂ ಇಡಬಹುದು. ಇದನ್ನು ಫ್ರಿಡ್ಜ್ ನಲ್ಲಿಯೂ ಇಡಬಹುದು ಅಥವಾ ರೂಮಿನ ಸಹಜ ವಾತಾವರಣದಲ್ಲೂ ಕೂಡ ಇಟ್ಟಿರಬಹುದು.

  ಅನಗತ್ಯವಾಗಿ ನಿಮ್ಮ ದೇಹದಲ್ಲಿ ಸೇರಿಕೊಂಡಿರುವ ಕಿಲೋಗ್ರಾಂಗಳನ್ನು ಸುಲಭದಲ್ಲಿ ಕರಗಿಸಿಕೊಳ್ಳಲು ಇರುವ ಅತ್ಯದ್ಭುತವಾದ ಸೂತ್ರಗಳಲ್ಲಿ ಜೇನುತುಪ್ಪ ಮತ್ತು ಬೆಳ್ಳುಳ್ಳಿಯ ಸೇವನೆ ಕೂಡ ಒಂದಾಗಿದೆ.ಈ ಎರಡೂ ಪದಾರ್ಥಗಳು ಪ್ರತಿಯೊಬ್ಬರ ಮನೆಯಲ್ಲೂ ಲಭ್ಯವಿರುತ್ತದೆ ಮತ್ತು ನೀವು ಇದನ್ನು ಪ್ರತಿದಿನ ಸುಲಭದಲ್ಲಿ ಖಾಲಿ ಹೊಟ್ಟೆಗೆ ಸೇವಿಸಿ ನಿಮ್ಮ ದಿನಚರಿಯನ್ನು ಆರಂಭಿಸಬಹುದು ಮತ್ತು ಕೆಲವೇ ವಾರಗಳಲ್ಲಿ ನಿಮ್ಮ ತೂಕದಲ್ಲಿ ಗಣನೀಯ ಬದಲಾವಣೆ ಆಗುವುದನ್ನು ನೀವು ಗಮನಿಸಿಕೊಳ್ಳಬಹುದು.

  ಬಿಸಿನೀರಿನಲ್ಲಿ ಜೇನುತುಪ್ಪ ಮತ್ತು ಹಸಿ ಬೆಳ್ಳುಳ್ಳಿ ಸೇವನೆ ಅಂದರೆ ಅದು ನಿಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ವೃದ್ಧಿಸಿ, ದೇಹ ತೂಕವನ್ನು ಕಡಿಮೆ ಮಾಡಿ, ನಿಮಗೆ ಅದೂ ಇದೂ ತಿನ್ನುತ್ತಲೇ ಇರಬೇಕು ಎಂದು ಅನ್ನಿಸುವ ಬಾಯಿ ಚಪಲವನ್ನು ನಿಗ್ರಹಿಸಿ, ನಿಮ್ಮನ್ನು ಶ್ರೀಮಂತ ಆಹಾರಗಳಿಂದ, ಕ್ಯಾಲೋರಿಗಳಿಂದ ಆರೋಗ್ಯವಾಗಿಡುವ ಒಂದು ಅಧ್ಬುತ ಪ್ರಯೋಗ ಎಂದು ಹೇಳಬಹುದು.

  ನಿಮ್ಮ ದೇಹ ತೂಕವನ್ನು ಇಳಿಸಿಕೊಳ್ಳಲು ಶಾರ್ಟ್ ಕಟ್ ವಿಧಾನಗಳನ್ನು ಬಳಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕರವಾಗಿರುವ ವಿಚಾರವಾಗಿದೆ. ಸಣ್ಣ ಹೆಜ್ಜೆಯೊಂದನ್ನು ಇಡಲು ಪ್ರಯತ್ನಿಸಿ ಮತ್ತು ನಿಮ್ಮ ಗುರಿಯನ್ನು ನೀವು ಶೀಘ್ರದಲ್ಲೇ ತಲುಪಲಿದ್ದೀರಿ. ಮೇಲಿನ ವಿಧಾನವನ್ನು ಬಳಕೆ ಮಾಡುವುದರಿಂದಾಗಿ ನೀವು ನಿಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸಿಕೊಳ್ಳಲಿದ್ದೀರಿ ಮತ್ತು ಆಕರ್ಷಣೀಯವಾಗಿ ಕೂಡ ಕಾಣಿಸಿಕೊಳ್ಳುವಲ್ಲಿ ಇದು ನಿಮ್ಮ ನೆರವಿಗೆ ಬರುತ್ತಿದೆ.

  English summary

  Have Honey With Hot Water & Raw Garlic for weight loss!

  One of the healthiest forms of losing weight, which has been in use for hundreds of years, is the consumption of warm water with honey and raw garlic! consuming ample amount of water is of prime importance to keep our body well hydrated and also to keep our body's functions and metabolism running perfectly. Drinking at least 8 glasses of water daily is a must. Water, not just helps with the body's functionalities, but drinking enough water also aids in weight loss.
  Story first published: Sunday, July 1, 2018, 7:00 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more