For Quick Alerts
ALLOW NOTIFICATIONS  
For Daily Alerts

ಇದೆಲ್ಲಾ ದೇಹದಲ್ಲಿ ಬೊಜ್ಜು ಕಾಣಿಸಿಕೊಳ್ಳುವ ಲಕ್ಷಣಗಳು! ನಿರ್ಲಕ್ಷಿಸಬೇಡಿ..

By Hemanth
|

ನಮ್ಮ ದೇಹವು ಫಿಟ್ ಆಗಿದ್ದರೆ ಅದು ನೋಡುಗರಿಗೂ ಚಂದ ಮತ್ತು ಆರೋಗ್ಯಕ್ಕೂ ಒಳ್ಳೆಯದು. ತುಂಬಾ ಸಪೂರವೂ ಇರಬಾರದು ಹಾಗೂ ಹೆಚ್ಚು ಬೊಜ್ಜಿನಿಂದಲೂ ಕೂಡಿರಬಾರದು ಇವೆರಡ ಮಧ್ಯಮದಲ್ಲಿದ್ದರೆ ಒಳ್ಳೆಯದು. ಇಂದಿನ ಜೀವನ ಕ್ರಮದಲ್ಲಿ ಹೆಚ್ಚಿನ ಜನರಲ್ಲಿ ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುವುದು. ಆದರೆ ಬೊಜ್ಜಿನಿಂದಾಗಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಹೃದಯ ಕಾಯಿಲೆ, ರಕ್ತದೊತ್ತಡ ಇತ್ಯಾದಿಗಳು. ಅದರಲ್ಲೂ ಪುರುಷರಲ್ಲಿ ಇದು ಹೆಚ್ಚಾಗಿ ಕಂಡುಬರುವುದು.

ಅದೇ ಬೊಜ್ಜು ದೇಹ ಹೊಂದಿರುವಂತಹ ಮಹಿಳೆಯರಲ್ಲಿ ಫಲವತ್ತತೆ ಸಮಸ್ಯೆ ಬರುವುದು. ವಯಸ್ಸಾಗುತ್ತಾ ಬಂದಂತೆ ಬೊಜ್ಜು ದೇಹವಿದ್ದರೆ ಆಗ ರಕ್ತದೊತ್ತಡ, ಗಂಟು ನೋವು, ಅಸ್ಥಿರಂಧ್ರತೆ, ಬೆನ್ನು ನೋವು ಮತ್ತು ಇತರ ಹಲವಾರು ಕಾಯಿಲೆಗಳು ಬರಬಹುದು. ಇದೆಲ್ಲಕ್ಕೂ ಪರಿಹಾರವೆಂದರೆ ಬೊಜ್ಜು ಕಡಿಮೆ ಮಾಡಿಕೊಳ್ಳುವುದು. ಈ ಲೇಖನದಲ್ಲಿ ಬೊಜ್ಜು ಬರುವ ಲಕ್ಷಣಗಳು ಯಾವುದು ಎಂದು ನಿಮಗೆ ಹೇಳಲಿದ್ದೇವೆ. ಇದನ್ನು ಓದುತ್ತಾ ತಿಳಿಯಿರಿ.

Obesity

ಉಸಿರಾಟದ ತೊಂದರೆ

ಯಾವುದೇ ಕೆಲಸ ಮಾಡಲು ಆಚೀಚೆ ಹೋಗಲು ನಿಮಗೆ ಕಷ್ಟವಾಗುತ್ತಿದ್ದರೆ ಇದು ಬೊಜ್ಜಿನ ಲಕ್ಷಣವಾಗಿರಬಹುದು. ಬೊಜ್ಜಿರುವ ಜನರಲ್ಲಿ ಕುತ್ತಿಗೆ ಸಮೀಪ ಕೊಬ್ಬು ಜಮೆಯಾಗಿರುವುದು. ಇದರಿಂದ ಶ್ವಾಸಕೋಶಕ್ಕೆ ಸರಿಯಾಗಿ ಗಾಳಿ ಹೋಗಿ ಬರಲು ತುಂಬಾ ಕಷ್ಟವಾಗುವುದು. ಇದು ತುಂಬಾ ಗಂಭೀರ ಸಮಸ್ಯೆಯಾಗಿದೆ ಮತ್ತು ಹಲವಾರು ಸಮಸ್ಯೆಗಳ ಲಕ್ಷಣವಾಗಬಹುದು. ಈ ಕಾರಣದಿಂದಾಗಿ ನಿಮಗೆ ದೈನಂದಿನ ಕೆಲಸಗಳನ್ನು ಮಾಡಲು ಕಷ್ಟವಾಗಬಹುದು. ಇದರಿಂದ ನೀವು ವೈದ್ಯರನ್ನು ಸಂಪರ್ಕಿಸಿ, ಅವರಿಗೆ ಪರಿಸ್ಥಿತಿ ಬಗ್ಗೆ ಹೇಳಿ. ಇದರ ಬಳಿಕ ನೀವು ಸೂಕ್ತ ಕ್ರಮ ತೆಗೆದುಕೊಳ್ಳಿ.

ಬೆನ್ನುನೋವು

ಇದು ಬೊಜ್ಜು ದೇಹದ ಮೊದಲ ಲಕ್ಷಣಗಳಲ್ಲಿ ಒಂದಾಗಿದೆ. ಮನುಷ್ಯನ ಬೆನ್ನು ಮೂಳೆಯ ನಿರ್ಮಾಣವು ಒಂದು ಹಂತದ ತೂಕವನ್ನು ಸಹಿಸಿಕೊಳ್ಳಬಲ್ಲದು. ಅತಿಯಾದ ಒತ್ತಡ ಬಿದ್ದಾಗ ಅದರಿಂದ ನೋವು ಕಾಣಿಸಿಕೊಳ್ಳುವುದು. ಇಂತಹ ಸಮಯದಲ್ಲಿ ನೀವು ಆದಷ್ಟು ಬೇಗ ಮೂಳೆ ತಜ್ಞರ ಸಲಹೆ ಪಡೆದುಕೊಳ್ಳಿ. ಇದಕ್ಕೆ ಸರಿಯಾದ ಆರೈಕೆ ಮಾಡದೇ ಇದ್ದಲ್ಲಿ ನೀವು ಇನ್ನಷ್ಟು ಸಮಸ್ಯೆಗೆ ಒಳಗಾಗಬಹುದು ಇದರಿಂದ ಸ್ಪೊಂಡಿಲೊಸಿಸ್ ನಂತಹ ಸಮಸ್ಯೆ ಬರಬಹುದು ಮತ್ತು ಮುರಿತ ಕೂಡ ಕಂಡುಬರಬಹುದು. ಹೀಗೆ ಆದರೆ ಆಗ ನೀವು ಜೀವನಪೂರ್ತಿ ತುಂಬಾ ಕಠಿಣ ಸಮಸ್ಯೆ ಎದುರಿಸಬೇಕಾಗುತ್ತದೆ.

ಬೆನ್ನು ನೋವಿಗೆ ಸರಳ ಮನೆಮದ್ದು

ಶುಂಠಿ ರಸ 3-4 ಚಮಚ

*ತುಳಸಿ 10 ಎಲೆಗಳು

ಹೇಳಿದಷ್ಟು ಪ್ರಮಾಣದ ತುಳಸಿ ಎಲೆಗಳನ್ನು ಸರಿಯಾಗಿ ಜಜ್ಜಿಕೊಂಡು ಅದನ್ನು ಶುಂಠಿ ರಸಕ್ಕೆ ಹಾಕಿ. ಬೆನ್ನಿನ ಭಾಗಕ್ಕೆ ಈ ಮಿಶ್ರಣವನ್ನು ಹಚ್ಚಿಕೊಂಡು ಸುಮಾರು 25 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಸ್ನಾನ ಮಾಡಿಕೊಳ್ಳಿ. *ಇನ್ನು ಈ ಮಿಶ್ರಣವನ್ನು ದಿನಾಲೂ ಬೆಳಿಗ್ಗೆ ಉಪಹಾರಕ್ಕೆ ಮೊದಲು ಸೇವಿಸಬಹುದು.

ಏಕಾಂಗಿತನ

ಭಾರತೀಯರು ಹೆಚ್ಚಾಗಿ ಬೊಜ್ಜು ದೇಹದವರ ಬಗ್ಗೆ ತಮಾಷೆ ಮಾಡುವರು ಮತ್ತು ಇದರಿಂದಾಗಿ ಬೊಜ್ಜು ದೇಹ ಹೊಂದಿರುವವರು ತಮ್ಮ ದೇಹದ ಬಗ್ಗೆ ಅಸಹ್ಯ ಪಡುವಂತೆ ಆಗುವುದು. ಇದರಿಂದಾಗಿ ಅವರು ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗದೆ, ಏಕಾಂಗಿಯಾಗಿ ಉಳಿಯಲು ಬಯಸಬಹುದು. ಇಂತಹ ಜನರು ಆತಂಕ ಮತ್ತು ಖಿನ್ನತೆಗೆ ಒಳಗಾಗಬಹುದು. ಇದು ಬೊಜ್ಜಿನ ಪ್ರಮುಖ ಲಕ್ಷಣಗಳಲ್ಲಿ ಒಂದು. ನಿಮ್ಮನ್ನು ಬೊಜ್ಜು ದೇಹದವರು ಎಂದು ಕರೆದರೆ ಆಗ ನೀವು ದೇಹವನ್ನು ಸರಿಪಡಿಸಲು ಪ್ರಯತ್ನಿಸಿ, ವೈದ್ಯರನ್ನು ಕೂಡ ಭೇಟಿಯಾಗಿ.

ಉಬ್ಬಿರುವ ರಕ್ತನಾಳಗಳು

ರಕ್ತನಾಳಗಳ ಗೋಡೆಯು ದುರ್ಬಲಗೊಂಡಾಗ ರಕ್ತನಾಳಗಳು ಅದಾಗಿಯೇ ಉಬ್ಬಿಕೊಳ್ಳುವುದು. ಇದು ತುಂಬಾ ಅನಾರೋಗ್ಯಕಾರಿ ಮತ್ತು ದೇಹದ ಸಂಪೂರ್ಣ ಶಕ್ತಿ ಮೇಲೆ ಪರಿಣಾಮ ಬೀರುವುದು. ಗುಲಾಬಿ ಅಥವಾ ನೀಲಿ ಬಣ್ಣದ ಉಬ್ಬಿರುವ ರಕ್ತನಾಳಗಳು ಕಾಣಿಸಿಕೊಳ್ಳುವುದು. ಒಳಗೆ ಇದು ತುಂಬಾ ನೋವು ನೀಡುವುದು ಮತ್ತು ನಡೆದಾಡುವುದು ಕೂಡ ತುಂಬಾ ತ್ರಾಸದಾಯಕವಾಗಿಸುವುದು. ಉಬ್ಬಿರುವ ರಕ್ತನಾಳಗಳು ಕಂಡುಬಂದರೆ ಆಗ ನೀವು ತೂಕ ಇಳಿಸಿಕೊಳ್ಳುವ ಬಗ್ಗೆ ಚಿಂತಿಸಿ.

ಎದೆಯುರಿ

ಪದೇ ಪದೇ ನಿಮಗೆ ಎದೆಯುರಿ ಸಮಸ್ಯೆಯು ಕಾಣಿಸಿಕೊಳ್ಳುತ್ತಿದ್ದರೆ ಆಗ ಇದು ಬೊಜ್ಜಿನ ಲಕ್ಷಣವಾಗಿದೆ. ಅತಿಯಾಗಿರುವ ಕೊಬ್ಬು ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಅತಿಯಾದ ಒತ್ತಡ ಹಾಕುವುದು. ಗಂಟಲಿನ ಭಾಗದಲ್ಲಿ ಕೊಬ್ಬು ಜಮೆಯಾದಾಗ ಇದು ನಿಜವೆನಿಸುವುದು. ಅತಿಯಾದ ಒತ್ತಡದಿಂದಾಗಿ ಆಹಾರವು ಹೊಟ್ಟೆಯಲ್ಲಿ ಅನ್ನನಾಳದತ್ತ ನೂಕಲ್ಪಡುವುದು. ಇದರಿಂದ ಆಮ್ಲೀಯ ಹಿಮ್ಮುಖ ಹರಿವು ಉಂಟಾಗಿ ಎದೆಯುರಿ, ಗ್ಯಾಸ್, ವಾಯುಗುಣ ಮತ್ತು ಇತರ ಕೆಲವೊಂದು ಸಮಸ್ಯೆಗಳು ಕಾಣಿಸಬಹುದು. ಒಮ್ಮೊಮ್ಮೆ ಇದು ಆದರೆ ಯಾವುದೇ ಚಿಂತೆಯಿಲ್ಲ. ಆದರೆ ಪದೇ ಪದೇ ಇದು ಆದರೆ ಆಗ ನೀವು ಆಹಾರ ಕ್ರಮ ಸುಧಾರಿಸಿಕೊಳ್ಳಿ. ಕರಿದ ತಿಂಡಿಗಳನ್ನು ನೀವು ಕಡೆಗಣಿಸಬೇಕು. ಇದರಿಂದ ನಿಮ್ಮ ಎದೆಯುರಿ ಮತ್ತು ತೂಕದ ಸಮಸ್ಯೆಯು ಕಡಿಮೆಯಾಗುವುದು.

ಎದೆ ಉರಿಗೆ ಸರಳ ಮನೆಮದ್ದುಗಳು

ಅರ್ಧ ಲಿಂಬೆಯ ರಸ ಅಥವಾ ಒಂದು ದೊಡ್ಡ ಚಮಚ ಲಿಂಬೆಯ ಸಿದ್ಧ ರಸವನ್ನು ಒಂದು ಲೋಟ *ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಇದಕ್ಕೆ ಕೊಂಚ ಜೇನು ಸೇರಿಸಿ ಬೆಳಿಗ್ಗೆದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಕುಡಿದರೆ ರಾತ್ರಿಯ ಊಟದ ಪರಿಣಾಮವಾಗಿ ಉಂಟಾಗಿದ್ದ ಎದೆಯುರಿ ಕಡಿಮೆಯಾಗುತ್ತದೆ.

*ಊಟದ ಬಳಿಕ ಬಾಳೆಹಣ್ಣನ್ನು ತಿನ್ನುವ ಮೂಲಕ ಆಮ್ಲ ಉತ್ಪತ್ತಿಯಾಗದೇ ಇರಲು ಸಾಧ್ಯವಾಗುತ್ತದೆ. ಅಲ್ಲದೇ ಹೊಟ್ಟೆ ತುಂಬಿದಂತೆ ಅನ್ನಿಸುವುದರಿಂದ ಅನಗತ್ಯವಾಗಿ ಹೆಚ್ಚಿನ ಆಹಾರ ಸೇವನೆಯನ್ನು ತಡೆಯುತ್ತದೆ.

ಅನಿಯಮಿತ ಋತುಚಕ್ರ

ಬೊಜ್ಜು ಮಹಿಳೆಯರ ಫಲವತ್ತತೆ ಮೇಲೆ ಪರಿಣಾಮ ಬೀರುವುದು ಮತ್ತು ಅನಿಯಮಿತ ಋತುಚಕ್ರವಾಗುವುದು ಇದರ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ. ದೇಹದಲ್ಲಿ ಕೊಬ್ಬಿನ ಹೆಚ್ಚುವರಿ ಪದರ ನಿರ್ಮಾಣದಿಂದಾಗಿ ಹಾರ್ಮೋನು ಸಮತೋಲನದ ಮೇಲೆ ಪರಿಣಾಮ ಬೀರುವುದು ಮತ್ತು ಇದರಿಂದ ಋತುಚಕ್ರವು ನಿಗದಿತ ಸಮಯಕ್ಕಿಂತ ಬೇಗ ಅಥವಾ ತುಂಬಾ ವಿಳಂಬವಾಗಿ ಆಗಬಹುದು. ಕೆಲವೊಂದು ಸಂದರ್ಭದಲ್ಲಿ ಹತ್ತು ದಿನಗಳ ಕಾಲ ರಕ್ತಸ್ರಾವವಾಗಬಹುದು ಮತ್ತು 2-3 ಮೂರು ತಿಂಗಳು ರಕ್ತಸ್ರಾವವಾಗದೆ ಇರಬಹುದು. ಈ ಸಂದರ್ಭಗಳಲ್ಲಿ ನೀವು ವೈದ್ಯರ ಸಲಹೆ ಪಡೆಯುವುದು ಅತೀ ಅಗತ್ಯ. ವೈದ್ಯರು ನಿಮಗೆ ಸರಿಯಾದ ಸಲಹೆ ಸೂಚನೆಗಳನ್ನು ನೀಡಬಹುದು.

English summary

Warning Signs Of Obesity

As most of us are well aware, obesity results in a number of health ailments. While being a little on the heavier side is nothing bad, the fact is that when things cross a line it becomes a problem. Obese men are at a higher risk of heart diseases, whereas their female counterparts are seen to battle issues pertaining to fertility. With age, obesity also triggers hypertension, knee pain, osteoporosis, back pain and a number of other diseases. Thus, in order to keep away from all of this and more, one needs to tackle obesity.
Story first published: Tuesday, July 24, 2018, 23:28 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more