For Quick Alerts
ALLOW NOTIFICATIONS  
For Daily Alerts

ಕಾಫಿ ಕುಡಿಯುವುದರಿಂದ ಆಯುಷ್ಯ ವೃದ್ಧಿಸುವುದೇ?

By Hemanth
|

ನಾವು ಸೇವಿಸುವಂತಹ ಪ್ರತಿಯೊಂದು ಆಹಾರ, ಬಳಸುವ ಪ್ರತಿಯೊಂದು ವಸ್ತುಗಳ ಬಗ್ಗೆ ಕೂಡ ಅಧ್ಯಯನಗಳು ನಡೆಯುತ್ತಲೇ ಇರುವುದು. ಇತ್ತೀಚೆಗೆ ಕಾಫಿ ಮೇಲೆ ನಡೆಸಿರುವ ಅಧ್ಯಯನವೊಂದರ ಪ್ರಕಾರ ಮಿತ ಪ್ರಮಾಣದಲ್ಲಿ ಕಾಫಿ ಸೇವನೆ ಮಾಡಿದರೆ ಅದರಿಂದ ಸಾವಿನ ಪ್ರಮಾಣ ಕಡಿಮೆಯಾಗಿರುವುದು ಕಂಡುಬಂದಿದೆ. ಅರ್ಧ ಮಿಲಿಯನ್ ನಷ್ಟು ಜನರು ಕಾಫಿ ಸೇವನೆಯಿಂದಾಗಿ ಸಾವಿನ ಸಂಖ್ಯೆಯಲ್ಲಿ ಕಡಿಮೆಯಾಗಿರುವುದು ಪತ್ತೆಯಾಗಿದೆ.

Quarantine Days- How To Make Dalgona Coffee | Boldsky Kannada

ದಿನಕ್ಕೆ ಒಂದಕ್ಕಿಂತ 8 ಕಪ್ ಕಾಫಿ ಕುಡಿಯುವ ವ್ಯಕ್ತಿಗಳು ಕೂಡ ಈ ಅಧ್ಯಯನದಲ್ಲಿ ಭಾಗಿಯಾಗಿದ್ದರು. ಆರೋಗ್ಯಕರ ಆಹಾರ ಕ್ರಮದಲ್ಲಿ ಕಾಫಿ ಸೇವನೆಯು ಒಂದು ಭಾಗ ಎಂದು ಅಧ್ಯಯನವು ಕಂಡುಕೊಂಡಿದೆ. ಯಾವುದೇ ರೀತಿಯ ಕಾಫಿ ಕುಡಿದರೂ ನಿಮ್ಮ ಆಯಸ್ಸು ವೃದ್ಧಿಯಾಗುವುದು. ನೀವು ಆರೋಗ್ಯದ ಮೇಲೆ ಬೀರುವ ಪರಿಣಾಮದ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ಯಾಕೆಂದರೆ ಕಾಫಿ ಕುಡಿಯದೇ ಇರುವ ವ್ಯಕ್ತಿಗಳು ಕಾಫಿ ಕುಡಿಯಲು ಆರಂಭಿಸಿದ ಬಳಿಕ ಅವರ ಆಯುಷ್ಯವು ವೃದ್ಧಿಯಾಗಿದೆ ಎಂದು ತಿಳಿದುಬಂದಿದೆ.

ಹೃದಯ ರಕ್ತನಾಳದ ಕಾಯಿಲೆಗಳು, ಕ್ಯಾನ್ಸರ್ ಮತ್ತು ಶ್ವಾಸಕೋಶದ ಸಮಸ್ಯೆಗಳು ಕೂಡ ಕ್ರಮವಾಗಿ ಶೇ.20, ಶೇ.50 ಮತ್ತು ಶೇ.4ರಷ್ಟು ಸಾವು ಕಡಿಮೆಯಾಗಿದೆ ಎಂದು ಅಧ್ಯಯನಗಳು ಕಂಡುಕೊಂಡಿದೆ. ಹೃದಯ ರಕ್ತನಾಳದ ಕಾಯಿಲೆಗಳು ಮತ್ತು ಎಲ್ಲಾ ರೀತಿಯ ಕ್ಯಾನ್ಸರ್ ಗಳಿಗೆ ಕಾಫಿಯು ವಿಲೋಮ ಸಂಬಂಧವಿದೆ ಎಂದು ಅಧ್ಯಯನಗಳು ಹೇಳಿವೆ. ಪಾರ್ಶ್ವವಾಯು, ಕೋಲೋರೆಕ್ಟಲ್ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಇದರಲ್ಲಿ ಒಳಗೊಂಡಿದೆ. ಗ್ರೌಡ್ ಕಾಫಿ, ಇನ್ ಸ್ಟೆಂಟ್ ಕಾಫಿ ಮತ್ತು ಕೆಫಿನ್ ಮುಕ್ತ ಕಾಫಿಯು ಎಲ್ಲಾ ರೀತಿಯ ಸಾವಿಗೆ ಸಂಬಧಿಸಿದೆ. ಅದರಲ್ಲೂ ಗ್ರೌಂಡ್ ಕಾಫಿಗೆ ಪ್ರಬಲ ಸಂಬಂಧವಿದೆ...

 ಕಾಫಿ ನಿಮಗೆ ಒಳ್ಳೆಯದೇ?

ಕಾಫಿ ನಿಮಗೆ ಒಳ್ಳೆಯದೇ?

ಕಾಫಿ ಕುಡಿಯುವುದರಿಂದ ತಾತ್ಕಾಲಿಕವಾಗಿ ಜಾಗೃತವಾಗಲು ನೆರವಾಗುವುದು. ಆದರೆ ಇದರ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು. ರಾಷ್ಟ್ರೀಯ ಆರೋಗ್ಯ ಸೇವೆ(ಎನ್ ಎಚ್ ಎಸ್) ಪ್ರಕಾರ ಕಾಫಿ ಸೇವನೆ ಕಡಿಮೆ ಮಾಡಬೇಕು ಮತ್ತು ಗರ್ಭಿಣಿ ಮಹಿಳೆಯರು ದಿನಕ್ಕೆ 200 ಮಿ.ಗ್ರಾಂಗಿಂತ ಹೆಚ್ಚು ಕೆಫಿನ್ ಸೇವನೆ ಮಾಡಬಾರದು. ಆದರೆ ಕಾಫಿಯಿಂದ ಆಗುವಂತಹ ಬೇರೆ ಆರೋಗ್ಯ ಲಾಭಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.

1. ಕಾಫಿಯಲ್ಲಿ ಪ್ರಮುಖ ಪೋಷಕಾಂಶಗಳು ಇವೆ

1. ಕಾಫಿಯಲ್ಲಿ ಪ್ರಮುಖ ಪೋಷಕಾಂಶಗಳು ಇವೆ

ಕಾಫಿಯಲ್ಲಿ ಶೇ.11ರಷ್ಟು ವಿಟಮಿನ್ ಬಿ2, ಶೇ.6ರಷ್ಟು ವಿಟಮಿನ್ ಬಿ5, ಶೇ.2ರಷ್ಟು ವಿಟಮಿನ್ ಬಿ1, ಶೇ. 2ರಷ್ಟು ವಿಟಮಿನ್ ಬಿ3, ಶೇ.1ರಷ್ಟು ಫಾಲಟೆ, ಶೇ.3ರಷ್ಟು ಮ್ಯಾಂಗನೀಸ್, ಶೇ. 3ರಷ್ಟು ಪೊಟಾಶಿಯಂ, ಶೇ.2ರಷ್ಟು ಮ್ಯಾಂಗನೀಸ್ ಮತ್ತು ಶೇ.1ರಷ್ಟು ಫೋಸ್ಪರಸ್ ಇದೆ.

2. ಕಾಫಿ ಮೆದುಳಿನ ಚಟುವಟಿಕೆ ವೃದ್ಧಿಸುವುದು ಮತ್ತು ಚಯಾಪಚಾಯ ಹೆಚ್ಚಿಸುವುದು

2. ಕಾಫಿ ಮೆದುಳಿನ ಚಟುವಟಿಕೆ ವೃದ್ಧಿಸುವುದು ಮತ್ತು ಚಯಾಪಚಾಯ ಹೆಚ್ಚಿಸುವುದು

ಒಂದು ಕಪ್ ಕಾಫಿಯಲ್ಲಿ 30ರಿಂದ 300 ಮಿ.ಗ್ರಾಂನಷ್ಟು ಕೆಫಿನ್ ಇರುವುದು. ಆದರೆ ಸರಾಸರಿ ಕಪ್ ನಲ್ಲಿ 90ರಿಂದ 100 ಮಿ.ಗ್ರಾಂ ಇರುವುದು. ಮೆದುಳಿನ ಹಾರ್ಮೋನು ಆಗಿರುವ ಅಡಿನೊಸಿನ್ ಗೆ ತಡೆಯಾಗುವಂತಹ ನರಗಳ ಕಾರ್ಯವನ್ನು ಕೆಫಿನ್ ಉತ್ತೇಜಿಸುವುದು. ಈ ಹಾರ್ಮೋನ್ ನ್ನು ತಡೆಯುವ ಕಾರಣದಿಂದ ಮೆದುಳಿನ ಚಟುವಟಿಕೆ ಹೆಚ್ಚಾಗುವುದು ಮತ್ತು ಡೊಪಮೈನ್ ಮತ್ತು ನೊರ್ಪೈನ್ಫ್ರಿನ್ ನಂತಹ ನರಸಂವಾಹಕಗಳು ಬಿಡುಗಡೆಯಾಗುವುದು. ಇದರಿಂದಾಗಿ ನೀವು ಹೆಚ್ಚು ಜಾಗೃತವಾಗಿ, ಆಯಾಸ ದೂರ ಮಾಡಬಹುದು.ಕೆಫಿನ್ ಚಯಾಪಚಾಯ ಕ್ರಿಯೆಯನ್ನು ಶೇ.3ರಿಂದ ಶೇ.11ರಷ್ಟು ಹೆಚ್ಚಿಸುವುದು.

4. ಯಕೃತ್ ಕಾಯಿಲೆ ಅಪಾಯ ಕಡಿಮೆಯಾಗುವುದು

4. ಯಕೃತ್ ಕಾಯಿಲೆ ಅಪಾಯ ಕಡಿಮೆಯಾಗುವುದು

ಯಕೃತ್ ನಮ್ಮ ದೇಹಕ್ಕೆ ಅತೀ ಅಗತ್ಯ ಮತ್ತು ಇದು ತುಂಬಾ ಸೂಕ್ಷ್ಮ ಮತ್ತು ಅತಿಯಾಗಿ ಆಲ್ಕೋಹಾಲ್ ಮತ್ತು ಫ್ರಕ್ಟೋಸ್ ನಿಂದ ಯಕೃತ್ ಮೇಲೆ ಪರಿಣಾಮ ಬೀರುವುದು. ಕಾಫಿ ಸೇವನೆ ಮಾಡುವವರಲ್ಲಿ ಯಕೃತ್ ಸಮಸ್ಯೆ ಬರುವುದು ಶೇ.84ರಷ್ಟು ಕಡಿಮೆಯಿದೆ. ವಿಶ್ವದಾದ್ಯಂತ ಯಕೃತ್ ಕ್ಯಾನ್ಸರ್ ನಿಂದ ಸಾಯುವವರ ಸಂಖ್ಯೆ ಎರಡನೇ ಸ್ಥಾನದಲ್ಲಿದೆ ಮತ್ತು ಕಾಫಿ ಸೇವನೆ ಇದನ್ನು ಶೇ. 40ರಷ್ಟು ಕಡಿಮೆ ಮಾಡುವುದು.

5. ಬುದ್ಧಿಮಾಂದ್ಯತೆ ಸಮಸ್ಯೆ ತಗ್ಗುವುದು

5. ಬುದ್ಧಿಮಾಂದ್ಯತೆ ಸಮಸ್ಯೆ ತಗ್ಗುವುದು

ಅಲ್ಝೈಮರ್ ಕಾಯಿಲೆಯು ಬುದ್ಧಿಮಾಂದ್ಯತೆಗೆ ಪ್ರಮುಖ ಕಾರಣವಾಗಿದೆ ಮತ್ತು ಕಾಫಿ ಕುಡಿಯುವುದರಿಂದ ಅಲ್ಝೈಮರ್ ಕಾಯಿಲೆಯನ್ನು ಶೇ.65ರಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ಹೇಳಿವೆ. ಪರ್ಕಿಸನ್ ಕಾಯಿಲೆ ಬರುವ ಸಾಧ್ಯತೆಯನ್ನು ಕಾಫಿ ಕುಡಿಯುವುದರಿಂದ ಶೇ.32ರಿಂದ ಶೇ.60ರಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ಹೇಳಿವೆ.

ಮಧುಮೇಹದ ನಿಯಂತ್ರಣ

ಮಧುಮೇಹದ ನಿಯಂತ್ರಣ

ಮಧುಮೇಹದ ಸಾಧ್ಯತೆ ಕಡಿಮೆ ಮಾಡುತ್ತದೆ ಕಾಫಿಯಲ್ಲಿರುವ ಕೆಫೀನ್ ವಿಶೇಷವಾಗಿ ಟೈಪ್ 2 ಮಧುಮೇಹವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಈ ಬಗೆಯ ಮಧುಮೇಹಿಗಳ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯಾದರೂ ಇದನ್ನು ಬಳಸಿಕೊಳ್ಳಲು ದೇಹ ವಿಫಲವಾಗುತ್ತದೆ. ಇದಕ್ಕೆ insulin sensitivity ಎಂದು ಕರೆಯುತ್ತಾರೆ. ಕೆಫೀನ್ ಈ ಇನ್ಸುಲಿನ್ ಬಳಕೆಯಾಗಲು ನೆರವಾಗುವ ಮೂಲಕ ದೇಹ ಗ್ಲುಕೋಸ್ ಅನ್ನು ಸ್ವೀಕರಿಸಲು ಹೆಚ್ಚು ಸಮರ್ಥವಾಗುತ್ತದೆ (glucose tolerance).ಇದು ಟೈಪ್ 2ಮಧುಮೇಹ ಆವರಿಸುವ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ. ನಿಮಗೆ ಈ ಲೇಖನವು ಇಷ್ಟವಾಗಿದ್ದರೆ ಶೇರ್ ಮಾಡಿ.

ಖನಿಜಗಳು ಹಾಗೂ ಪೋಷಕಾಂಶಗಳ ಆಗರ

ಖನಿಜಗಳು ಹಾಗೂ ಪೋಷಕಾಂಶಗಳ ಆಗರ

ಕಾಫಿಯಲ್ಲಿ ವಿವಿಧ ಖನಿಜಗಳು ಮತ್ತು ಪೋಷಕಾಂಶಗಳಿವೆ, ಇದರಲ್ಲಿ ಪೊಟ್ಯಾಶಿಯಂ, ಮ್ಯಾಂಗನೀಸ್, ಪ್ಯಾಂಟೋಥೆನಿಕ್ ಆಮ್ಲ, ನಿಯಾಸಿನ್, ಮೆಗ್ನೀಶಿಯಂ ಮತ್ತು ರೈಬೋಫ್ಲೇವಿನ್ ಮೊದಲಾದ ಪೋಷಕಾಂಶಗಳು ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸಲು ನೆರವಾಗುತ್ತವೆ.

ಕಾಫಿಯ ಅಡ್ಡ ಪರಿಣಾಮಗಳು

ಕಾಫಿಯ ಅಡ್ಡ ಪರಿಣಾಮಗಳು

ಕಾಫಿಯಿಂದ ಕೆಲವೊಂದು ಅಡ್ಡಪರಿಣಾಮಗಳು ಕೂಡ ಇದೆ.

1. ಆತಂಕ ಉಂಟು ಮಾಡಬಹುದು

ನಿದ್ರೆಯ ಗುಣಮಟ್ಟ ಕಡಿಮೆ ಮಾಡುವ ಮೂಲಕ ಕಾಫಿಯು ನಿದ್ರೆಗೆ ತೊಂದರೆ ಉಂಟು ಮಾಡಬಹುದು. ಅತಿಯಾಗಿ ಕೆಫಿನ್ ಸೇವನೆ ಮಾಡಿದರೆ ಅದರಿಂದ ಆತಂಕ, ಹೃದಯಾಘಾತ, ಭೀತಿ ಉಂಟಾಗಬಹುದು. ಆದರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು.

2. ಚಟವಾಗಬಹುದು!

2. ಚಟವಾಗಬಹುದು!

ಅತಿಯಾಗಿ ಕಾಫಿ ಸೇವನೆ ಮಾಡಿದರೆ ನಿಮಗೆ ಕೆಫಿನ್ ಚಟವಾಗಬಹುದು. ಇದರಿಂದ ನೀವು ದೂರವಿದ್ದಾಗ ತಲೆನೋವು, ಆಯಾಸ, ಕಿರಿಕಿರಿ ಮತ್ತು ಮಂಕ ಕವಿದಂತೆ ಆಗಬಹುದು. ಇದು ಕೆಲವು ದಿನಗಳ ಕಾಲ ಇರಬಹುದು.

 ಕಾಫಿ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳುವುದು ಹೇಗೆ?

ಕಾಫಿ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳುವುದು ಹೇಗೆ?

ಸಕ್ಕರೆ, ಕೃತಕ ಸಿಹಿತಿ ಅಥವಾ ಕ್ರೀಮ್ ಇಲ್ಲದೆ ಇರುವ ಆರೋಗ್ಯಕರ ಕಾಫಿ ಕುಡಿಯಿರಿ. ಸಕ್ಕರೆಯು ಬೊಜ್ಜು ಮತ್ತು ಇತರ ಕೆಲವು ಕಾಯಿಲೆಗಳಿಗೆ ಕಾರಣವಾಗುವುದು.

English summary

Want To Live Longer? Drink Coffee

A new recent finding came to light saying that moderate coffee consumption has been associated with decreased mortality rate. This study that included of half a million people found that coffee drinking is linked with decreased mortality, including participants who drink 1 or up to 8 cups more per day. This study also provides further evidence which says that drinking coffee can be a part of a healthy diet. And this can be any coffee - ground coffee, instant coffee as well as decaffeinated coffee.
X
Desktop Bottom Promotion