For Quick Alerts
ALLOW NOTIFICATIONS  
For Daily Alerts

ಮಹಿಳೆಯರಿಗೆ ಕಾಡುವ 'ಯೋನಿ ಶುಷ್ಕತೆಯ' ಸಮಸ್ಯೆ- ಇದರ ಲಕ್ಷಣಗಳೇನು?

|

ಹೆಣ್ಣು ಅಬಲೆ ಎಂದೇ ಇತಿಹಾಸದುದ್ದಕ್ಕೂ ಸಾರುತ್ತಾ ಬರಲಾಗಿದೆ. ಪುರುಷನಿಗಿಂತಲೂ ಮಹಿಳೆ ಅಶಕ್ತಳು, ಕೋಮಲ ಎಂದೇ ಹೆಚ್ಚು ಪ್ರಚಲಿತವಾಗಿದೆ. ಆರೋಗ್ಯ ಹಾಗೂ ದೈಹಿಕ ಸಾಮರ್ಥ್ಯವನ್ನು ಪರಿಗಣಿಸಿದರೆ ಈ ಸಂಗತಿ ವಾಸ್ತವವೇ ಹೌದು. ಕುಟುಂಬದ ಪಾಲನೆ ಪೋಷಣೆಗಾಗಿ ತನ್ನ ಆರೋಗ್ಯವನ್ನೇ ಕಡೆಗಣಿಸುವ ಮಹಿಳೆಯರು ಪುರುಷರಿಗೆ ಇಲ್ಲವಾದ ಹಲವಾರು ದೈಹಿಕ ಬದಲಾವಣೆಗಳಿಗೆ, ಅಗತ್ಯತೆಗಳಿಗೆ ಒಳಗಾಗುತ್ತಾರೆ. ಇದು ಮಹಿಳೆಯರ ಕೋಮಲ ಶರೀರಕ್ಕೆ ಹೆಚ್ಚಿನ ತ್ರಾಸು ನೀಡುತ್ತದಾದರೂ ಈ ಬಗ್ಗೆ ಮಹಿಳೆಯರು ಯಾವುದೇ ದೂರು ನೀಡದೇ ಕುಟುಂಬವನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ.

ಯೋನಿಯ ದುರ್ವಾಸನೆ ಸಮಸ್ಯೆ! ಸಂಕೋಚ ಪಟ್ಟರೆ ಇನ್ನಷ್ಟು ಸಂಕಷ್ಟ!

ಮಹಿಳೆಯರು ತಮ್ಮ ಹಲವಾರು ತೊಂದರೆಗಳ ಬಗ್ಗೆ ಮಾತನಾಡದೇ ಇರಲು ಅವರಿಗೆ ತಮ್ಮದೇ ಆದ ಕಾರಣಗಳಿವೆ. ಇಂದಿನ, ಈ ಇಪ್ಪತ್ತೊಂದನೆಯ ಶತಮಾನದಲ್ಲಿ, ಮಹಿಳೆಯರು ಎಲ್ಲಾ ರಂಗಗಳಲ್ಲಿ ಪುರುಷರಿಗೆ ಸರಿಸಾಟಿಯಾಗಿರುವಾಗ ದೈಹಿಕ ತೊಂದರೆಗಳನ್ನು ಮೌನವಾಗಿ ಸಹಿಸಿಕೊಂಡಿರುವುದು ಸರಿಯಲ್ಲ. ಇಂದಿನ ಲೇಖನದಲ್ಲಿ, ಮಹಿಳೆಯರಿಗೆ ಸಾಮಾನ್ಯವಾಗಿ ಕಾಡುವ, ಅತ್ಯಂತ ಗೋಪ್ಯ ಹಾಗೂ ನೈಮರ್ಲ್ಯಕ್ಕೆ ಸಂಬಂಧಿಸಿದ ಒಣ ಜನನಾಂಗದ ಬಗ್ಗೆ ಇಂದಿನ ಲೇಖನದಲ್ಲಿ ಚರ್ಚಿಸೋಣ. ಒಂದು ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಪ್ರತಿ ಮೂವರಲ್ಲಿ ಓರ್ವ ಮಹಿಳೆ ಈ ತೊಂದರೆ ಅನುಭವಿಸುತ್ತಾರೆ ಹಾಗೂ ಈ ಬಗ್ಗೆ ಕನಿಷ್ಟ ಚರ್ಚೆಗಳಾಗಿವೆ. ಈ ಕೊರತೆಯನ್ನು ಇಂದಿನ ಲೇಖನದಲ್ಲಿ ನೀಗಿಸಲು ಯತ್ನಿಸಲಾಗಿದ್ದು ಈ ಒಣಗುವಿಕೆಗೆ ಕಾರಣಗಳು, ಇದನ್ನು ಎದುರಿಸುವುದು ಹೇಗೆ, ತಡೆಗಟ್ಟುವುದು ಹೇಗೆ ಮೊದಲಾದ ಬಗ್ಗೆ ಅಮೂಲ್ಯ ಮಾಹಿತಿಗಳನ್ನು ಚರ್ಚಿಸೋಣ.

• ಈಸ್ಟ್ರೋಜೆನ್ ಪ್ರಮಾಣದಲ್ಲಿ ಇಳಿಕೆ

• ಈಸ್ಟ್ರೋಜೆನ್ ಪ್ರಮಾಣದಲ್ಲಿ ಇಳಿಕೆ

ಮಹಿಳೆಯರ ಲೈಂಗಿಕ ಆರೋಗ್ಯಕ್ಕೆ ಈ ರಸದೂತ ಪ್ರಮುಖವಾಗಿದ್ದು ವಿಶೇಷವಾಗಿ ಜನನಾಂಗದ ಒಳಭಾಗದಲ್ಲಿ ಸಾಕಷ್ಟು ದ್ರವ್ಯತೆ ಇರಲು ಕಾರಣವಾಗಿದೆ. ಒಂದು ವೇಳೆ ಈ ರಸದೂತದ ಪ್ರಮಾಣದಲ್ಲಿ ಇಳಿಕೆಯಾದರೆ ಇದು ಜನನಾಂಗದೊಳಗಣ ದ್ರವ್ಯತೆ ಅಗತ್ಯವಿರುಷ್ಟು ಪ್ರಮಾಣದಲ್ಲಿರಿಸಲು ವಿಫಲವಾಗುತ್ತದೆ. ಕೆಲವೊಮ್ಮೆ, ಇತರ ಅನಾರೋಗ್ಯಗಳಿಗಾಗಿ ಸೇವಿಸುವ ಔಷಧಿಗಳ ಅಡ್ಡಪರಿಣಾಮದಿಂದಲೂ ಈಸ್ಟ್ರೋಜೆನ್ ರಸದೂತದ ಪ್ರಮಾಣ ಕಡಿಮೆಯಾಗಬಹುದು. ಹಾಗಾಗಿ, ಒಂದು ವೇಳೆ ನೀವು ಯಾವುದಾದರೂ ಔಷಧಿಯನ್ನು ಸೇವಿಸುತ್ತಿದ್ದರೆ ಹಾಗೂ ಜನನಾಂಗದ ಒಣಗುವಿಕೆಯನ್ನು ಅನುಭವಿಸುತ್ತಿದ್ದರೆ, ನಿಮ್ಮ ವೈದ್ಯರಿಗೆ ಈ ಬಗ್ಗೆ ತಕ್ಷಣವೇ ವಿವರಗಳನ್ನು ಒದಗಿಸುವುದು ಅಗತ್ಯ. ಗರ್ಭಾಶಯಕ್ಕೆ ಸಂಬಂಧಿಸಿದ ಕಾಯಿಲೆಯಾದ endometriosis ಹಾಗೂ ಗರ್ಭಾಶಯದ ಒಳಗೆ ಬೆಳೆದಿರುವ ಗಂಟುಗಳ ಚಿಕಿತ್ಸೆಗಾಗಿ ಈ ಔಷಧಿಗಳನ್ನು ನೀಡಲಾಗುತ್ತದೆ.

• ಅಲರ್ಜಿ ನಿವಾರಣಾ ಔಷಧಿಗಳು

• ಅಲರ್ಜಿ ನಿವಾರಣಾ ಔಷಧಿಗಳು

ಶೀತ, ಅಸ್ತಮಾ ಹಾಗೂ ಹೆಚ್ಚಿನ ಬಗೆಯ ಅಲರ್ಜಿಗಳ ಚಿಕಿತ್ಸೆಗಾಗಿ ಆಂಟಿ ಹಿಸ್ಟಮೈನ್ ಎಂಬ ಅಂಶವೇ ಹೆಚ್ಚಾಗಿರುವ ಔಷಧಿಗಳನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಈ ಔಷಧಿ ದೇಹದ ತೇವವಿರುವ ಭಾಗಗಳನ್ನೆಲ್ಲಾ ಒಣಗಿಸುವ ಗುಣ ಹೊಂದಿದೆ. ಉದಾಹರಣೆಗೆ ಮೂಗು, ಗಂಟಲು ಇತ್ಯಾದಿ. ಇದರ ಜೊತೆಗೇ, ಮಹಿಳೆಯರಲ್ಲಿ ಜನನಾಂಗದ ದ್ರವ್ಯತೆಯನ್ನೂ ಒಣಗಿಸಲು ಕಾರಣವಾಗುತ್ತದೆ. ಇದೇ ಪ್ರಕಾರ, ಖಿನ್ನತೆಯನ್ನು ನಿವಾರಿಸಲು ನೀಡಲಾಗುವ antidepressant ಮಾತ್ರೆಗಳಲ್ಲಿಯೂ ಈ ಬಗೆಯ ಅಡ್ಡಪರಿಣಾಮವನ್ನು ಕಾಣಬಹುದು.

• ಕ್ಯಾನ್ಸರ್ ನ ಚಿಕಿತ್ಸೆ

• ಕ್ಯಾನ್ಸರ್ ನ ಚಿಕಿತ್ಸೆ

ಮನುಕುಲವನ್ನು ಕಾಡಿರುವ ಹಾಗೂ ಇದುವರೆಗೆ ಸಮರ್ಥವಾದ ಚಿಕಿತ್ಸೆಯನ್ನು ಕಂಡುಹಿಡಿಯಲಾಗದ ಕಾಯಿಲೆ ಎಂದರೆ ಕ್ಯಾನ್ಸರ್. ಈ ಕಾಯಿಲೆಗೆ ಔಷಧಿಯನ್ನು ಕಂಡುಹಿಡಿಯಲು ವಿಶ್ವದಾದ್ಯಂತ ಪ್ರಯತ್ನಗಳು ನಡೆಯುತ್ತಿದ್ದರೂ ಇದುವರೆಗೆ ಇದಕ್ಕೆ ಸೂಕ್ತ ಚಿಕಿತ್ಸೆ ಇಲ್ಲ. ಆದರೆ ಇದರ ಪರಿಣಾಮಗಳನ್ನು ತಗ್ಗಿಸಿ ಆಯಸ್ಸನ್ನು ಹೆಚ್ಚಿಸುವ ರೇಡಿಯೇಶನ್ ಮತ್ತು ಖೀಮೋಥೆರಪಿಯಂತಹ ಚಿಕಿತ್ಸೆಗಳು ಮಾತ್ರವೇ ಲಭ್ಯವಿವೆ. ಇವೆರಡೂ ಬಗೆಯ ಚಿಕಿತ್ಸೆಗಳಲ್ಲಿ ಕೆಲವಾರು ಅಡ್ಡಪರಿಣಾಮಗಳಿವೆ. ತಲೆಯ ಕೂದಲು ಬೋಳಾಗುವುದು ಹಾಗೂ ಜನನಾಂಗ ಒಣಗುವುದು ಸಾಮಾನ್ಯವಾಗಿ ಕಂಡುಬರುತ್ತದೆ.

• ಲೈಂಗಿಕ ನಿರಾಸಕ್ತಿ

• ಲೈಂಗಿಕ ನಿರಾಸಕ್ತಿ

ಅತ್ಯಂತ ಗೋಪ್ಯವಾದ ಈ ವಿಷಯವೂ ಜನನಾಂಗ ಒಣಗಲು ಪರೋಕ್ಷವಾಗಿ ಕಾರಣವಾಗುತ್ತದೆ. ಲೈಂಗಿಕ ನಿರಾಸಕ್ತಿಗೆ ಕೆಲವಾರು ಕಾರಣಗಳಿವೆ. ಎಷ್ಟೋ ಬಾರಿ ಜನನಾಂಗ ಒಣಗಿರುವುದೇ ಲೈಂಗಿಕ ನಿರಾಸಕ್ತಿಗೆ ಕಾರಣವಾಗಿದ್ದು ಈ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಈ ಸ್ಥಿತಿಯ ಬಗ್ಗೆ ತಕ್ಷಣ ವೈದ್ಯರ ಗಮನ ಸೆಳೆಯುವುದು ಅವಶ್ಯವಾಗಿದ್ದು ಹೆಚ್ಚಿನ ಮಹಿಳೆಯರು ಹೇಳದೇ ಇರುವುದರಿಂದ ಈ ಸ್ಥಿತಿ ಹದಗೆಡುತ್ತಾ ಹೋಗುತ್ತದೆ. ಅಲ್ಲದೇ ಈ ಸ್ಥಿತಿಯಲ್ಲಿ ಮಿಲನ ಸುಲಭಸಾಧ್ಯವಲ್ಲದಿರುವುದರಿಂದ ಇವರ ಲೈಂಗಿಕ ಕ್ರಿಯೆಯೂ ಪರಿಪೂರ್ಣವಾಗಿರುವುದಿಲ್ಲ. ಈ ತೊಂದರೆಯಿಂದ ಪಾರಾಗಬೇಕಾದರೆ ಮಹಿಳೆಯರು ತಮ್ಮ ಸಂಗಾತಿಯೊಂದಿಗಿನ ಮುನ್ನಲಿವಿನಲ್ಲಿ ಹೆಚ್ಚು ಹೊತ್ತು ತೊಡಗಿರುವುದು ಅಗತ್ಯ. ಇದು ಅಪ್ಯಾಯಮಾನ ಮಾತ್ರವಲ್ಲ, ಲೈಂಗಿಕ ಆರೋಗ್ಯವೂ ವೃದ್ದಿಸುತ್ತದೆ.

• ಶಸ್ತ್ರಕ್ರಿಯೆಯ ಮೂಲಕ ಗರ್ಭಾಶಯ ನಿವಾರಿಸಿರುವುದು

• ಶಸ್ತ್ರಕ್ರಿಯೆಯ ಮೂಲಕ ಗರ್ಭಾಶಯ ನಿವಾರಿಸಿರುವುದು

ಕೆಲವು ಮಹಿಳೆಯರ ಆರೋಗ್ಯ ಕಾರಣಗಳಿಂದಾಗಿ ಅನಿವಾರ್ಯವಾಗಿ ವೈದ್ಯರು ಗರ್ಭಕೋಶವನ್ನು ನಿವಾರಿಸಿರುತ್ತಾರೆ. ಈ ಸ್ಥಿತಿಯೂ ಜನನಾಂಗ ಒಣಗಲು ನೇರವಾಗಿ ಕಾರಣವಾಗಿದೆ. ಇದು ಕೆಲವು ಮಹಿಳೆಯರಲ್ಲಿ ಶಸ್ತ್ರಕ್ರಿಯೆಯ ತಕ್ಷಣವೇ ಕಂಡುಬಂದರೆ ಕೆಲವು ಮಹಿಳೆಯರಲ್ಲಿ ದಶಕಗಳ ಬಳಿಕವೂ ಕಂಡುಬರಬಹುದು.

• ರಜೋನಿವೃತ್ತಿಯ ಪೂರ್ವಸಮಯ

• ರಜೋನಿವೃತ್ತಿಯ ಪೂರ್ವಸಮಯ

ಮಹಿಳೆಯ ಒಡಲಲ್ಲಿ ಪ್ರತಿತಿಂಗಳೂ ಬಿಡುಗಡೆಯಾಗುವ ಅಂಡಾಣುಗಳ ಸಂಖ್ಯೆ ಸೀಮಿತವಾಗಿದ್ದು ಇದು ಬರಿದಾದ ಬಳಿಕ ಮಾಸಿಕ ಸ್ರಾವ ನಿಂತುಹೋಗುತ್ತದೆ. ಇದನ್ನೇ ರಜೋನಿವೃತ್ತಿ ಎಂದು ಕರೆಯುತ್ತಾರೆ. ಇದೊಂದು ನೈಸರ್ಗಿಕವಾಗಿ ಜರುಗುವ ವಿದ್ಯಮಾನವಾಗಿದ್ದು ಪ್ರತಿ ಮಹಿಳೆಗೂ ನಡುವಯಸ್ಸು ದಾಟಿದ ಬಳಿಕ ಈ ಕ್ರಿಯೆಗೆ ತಲೆಬಾಗಲೇ ಬೇಕಾಗುತ್ತದೆ. ಕಡೆಯ ಅಂಡಾಣುಗಳು ಬಿಡುಗಡೆಯಾಗುವ ಸಮಯ, ಅಂದರೆ ರಜೋನಿವೃತ್ತಿ ಆವರಿಸುವ ಪೂರ್ವಸಮಯದಲ್ಲಿ ಜನನಾಂಗ ಒಣಗಲು ತೊಡಗುತ್ತದೆ. ವಾಸ್ತವವಾಗಿ ರಜೋನಿವೃತ್ತಿ ಆವರಿಸುವ ಸಮಯ ಬಂದಿದೆ ಎಂದು ನೀಡುವ ಸೂಚನೆಯೂ ಹೌದು. ಸಾಮಾನ್ಯವಾಗಿ ರಜೋನಿವೃತ್ತಿ ಐವತ್ತರ ಆಸುಪಾಸಿನ ವಯಸ್ಸಿನಲ್ಲಿ ಕಂಡುಬರುತ್ತದೆ ಹಾಗೂ ಈ ವಯಸ್ಸಿನಲ್ಲಿ ಏಕಾಏಕಿ ಜನನಾಂಗ ಒಣಗುವುದು ಕಂಡುಬಂದರೆ ರಜೋನಿವೃತ್ತಿಯ ಸಮಯ ಹತ್ತಿರಾಗುತ್ತಿದೆ ಎಂದು ತಿಳಿಯಬಹುದು. ಗರ್ಭಾವಸ್ಥೆಯಂತೆಯೇ ರಜೋನಿವೃತ್ತಿಯೂ ನಿಸರ್ಗದ ಸಹಜ ನಿಯಮಗಳಾಗಿದ್ದು ಈ ಅವಧಿಗಳಲ್ಲಿ ಮಹಿಳೆಯ ದೇಹ ಹಲವಾರು ಬದಲಾವಣೆಗೆ ಒಳಪಡುತ್ತದೆ.

• ವಾತಾವರಣ - ಹಾಗೂ ಖಿನ್ನತೆಗೆ ಸಂಬಂಧಿಸಿದ ಅಂಶಗಳು

• ವಾತಾವರಣ - ಹಾಗೂ ಖಿನ್ನತೆಗೆ ಸಂಬಂಧಿಸಿದ ಅಂಶಗಳು

ಇಂದಿನ ದಿನಗಳಲ್ಲಿ ಸೌಲಭ್ಯಗಳು ಹೆಚ್ಚಿದ್ದರೂ ಮಾನಸಿಕ ಒತ್ತಡ ಮತ್ತು ಖಿನ್ನತೆಯೂ ಹೆಚ್ಚಿರುವುದು ಸುಳ್ಳಲ್ಲ. ಇದರೊಂದಿಗೆ ಪ್ರದೂಶಿತಗೊಂಡಿರುವ ಗಾಳಿ ಹಾಗೂ ಪರ್ಯಾವರಣವೂ ಇದಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಈ ಸ್ಥಿತಿಯಲ್ಲಿ ಎಲ್ಲಾ ಅಂಶಗಳು ಜೊತೆಗೂಡಿ ಮನೆಯಿಂದ ಹೆಚ್ಚು ಹೊತ್ತು ಕಾಲ ಕಳೆಯುವ ಮಹಿಳೆಯರಿಗೆ ಮಾನಸಿಕ ಹಾಗೂ ದೈಹಿಕವಾಗಿ ಬಾಧಿಸುತ್ತದೆ ಹಾಗೂ ಜನನಾಂಗದ ಒಣಗುವಿಕೆಗೂ ಕಾರಣವಾಗುತ್ತದೆ.

• ಹೆರಿಗೆ ಹಾಗೂ ಸ್ತನ್ಯಪಾನ

• ಹೆರಿಗೆ ಹಾಗೂ ಸ್ತನ್ಯಪಾನ

ಗರ್ಭಾವಸ್ಥೆಯ ಒಂಭತ್ತೂ ತಿಂಗಳು ಗರ್ಭವತಿಯ ದೇಹ ಹಲವಾರು ಬದಲಾವಣೆಗೆ ಒಳಪಡುತ್ತದೆ ಹಾಗೂ ಹೆರಿಗೆಯ ಬಳಿಕವೂ ಹಿಂದಿನ ಸ್ಥಿತಿಗೆ ಬರುವ ಬದಲಾವಣೆಗೆ ಒಳಪಡುತ್ತದೆ. ಸ್ತನ್ಯಪಾನದ ಈ ಅವಧಿಯಲ್ಲಿಯೂ ಹೆಚ್ಚಾಗಿ ಜನನಾಂಗ ಒಣಗುವುದು ಕಂಡುಬರುತ್ತದೆ. ಬಾಣಂತನದ ಅವಧಿ ಮುಗಿಯುತ್ತಾ ಬಂದಂತೆ ಸಹಜವಾಗಿ ಈ ಒಣಗುವಿಕೆಯೂ ಮುಗಿಯುತ್ತದೆ. ಕೆಲವರಲ್ಲಿ ಸ್ತನಪಾನ ನಿಲ್ಲಿಸಿದ ಬಳಿಕವೇ ಈ ಒಣಗುವಿಕೆಯೂ ನಿಂತು ಸಹಜ ದ್ರವ್ಯತೆ ಕಂಡುಬರುತ್ತದೆ.

• ಜನನಾಂಗದ ಸ್ವಚ್ಛತೆ:

• ಜನನಾಂಗದ ಸ್ವಚ್ಛತೆ:

ಮಹಿಳೆಯ ತ್ವಚೆ ಪುರುಷರ ತ್ವಚೆಗಿಂತಲೂ ಭಿನ್ನ, ಕೋಮಲ ಹಾಗೂ ಹೆಚ್ಚು ಸಂವೇದಿಯಾಗಿರುತ್ತದೆ. ಮಹಿಳೆಯರ ದೇಹದ ಎಲ್ಲಾ ಭಾಗದ ಚರ್ಮ ಏಕಪ್ರಕಾರವಾಗಿ ಸಂವೇದಿಯಾಗಿರುವುದಿಲ್ಲ, ಬದಲಿಗೆ ಕೆಲವು ಅಂಗಗಳು ಅತಿ ಹೆಚ್ಚು ಸಂವೇದಿಯಾಗಿರುತ್ತವೆ. ಜನನಾಂಗದ ತ್ವಚೆ ಅತಿ ಹೆಚ್ಚಿನ ಸಂವೇದನೆಯನ್ನು ಹೊಂದಿದ್ದು ಈ ಭಾಗದ ಸ್ವಚ್ಛತೆಯ ಕುರಿತು ಅತಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಈ ಭಾಗದಲ್ಲಿ ಉಪಯೋಗಿಸುವ ಮಾರ್ಜಕ, ಸುಗಂಧ ಅಥವಾ ಇತರ ಪ್ರಸಾದನಗಳೂ ಜನನಾಂಗದ ಒಳಗಣ ದ್ರವದ ಪಿಎಚ್ ಮಟ್ಟ ಅಥವಾ ಆಮ್ಲೀಯ-ಕ್ಷಾರೀಯ ಸಂತುಲತೆಯ ಮಟ್ಟವನ್ನು ಏರುಪೇರುಗೊಳಿಸಬಹುದು. ಪರಿಣಾಮವಾಗಿ ಕೆಲವು ಉತ್ಪನ್ನಗಳ ಬಳಕೆಯಿಂದಲೂ ಜನನಾಂಗ ಒಣಗಬಹುದು.

• ಶೋಗ್ರೆನ್ ಲಕ್ಷಣ (Sjogren's Syndrome)

• ಶೋಗ್ರೆನ್ ಲಕ್ಷಣ (Sjogren's Syndrome)

ಈ ರೋಗ ಅತ್ಯಪರೂಪವಾಗಿದ್ದರೂ ಇದು ಕಂಡುಬರುವ ಮಹಿಳೆಯರಿಗೆ ಇದರ ಪರಿಣಾಮಗಳಿಂದ ಹೊರಬರುವುದು ಭಾರೀ ಕಷ್ಟಕರವಾಗಿರುತ್ತದೆ. ಇದೊಂದು ಸ್ವಯಂನಿರೋಧಕಾ ವ್ಯವಸ್ಥೆಯಾಗಿದ್ದು ಇದರ ಪರಿಣಾಮವಾಗಿ ಕಣ್ಣು, ಬಾಯಿ ಹಾಗೂ ಜನನಾಂಗದ ದ್ರವ ತೀರಾ ಕಡಿಮೆಯಾಗಿ ಒಣಗುತ್ತದೆ. ಈ ಬಗೆಯ ಒಣಗುವಿಕೆಯ ಚಿಕಿತ್ಸೆ ತುಂಬಾ ಕಷ್ಟಕರವಾಗಿದೆ. ಏಕೆಂದರೆ ಈ ರೋಗದ ಪರಿಣಾಮವಾಗಿ ದೇಹದಲ್ಲಿ ಆರ್ದ್ರತೆಯನ್ನು ಒದಗಿಸುವ ಜೀವಕೋಶಗಳೇ ಧಾಳಿಗೊಳಗಾಗಿದ್ದು ತಮ್ಮ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತವೆ.

English summary

Vaginal Dryness Symptoms And Causes

Literature says that women are the weaker sex. People tend to take it for granted that by virtue of her sex a woman is delicate. Now, physically speaking, this is actually a well accepted fact. Often, it is seen that women tend to cater to the needs and wants of the entire family and in turn end up neglecting their bodies the most. There are many discomforts that her delicate body goes through and yet, she does not complain about the same.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more