For Quick Alerts
ALLOW NOTIFICATIONS  
For Daily Alerts

ವೀಕೆಂಡ್ ಪಾರ್ಟಿ- ಬಿಯರ್‌ನಿಂದ ಆದಷ್ಟು ದೂರವಿರಿ!

By Hemanth
|

ಬಿಯರ್ ಅಥವಾ ಯಾವುದೇ ಆಲ್ಕೋಹಾಲ್ ಆಗಿರಲಿ, ಅದನ್ನು ಅತಿಯಾದ ಪ್ರಮಾಣದಲ್ಲಿ ಸೇವನೆ ಮಾಡಿದರೆ ಅದು ಖಂಡಿತವಾಗಿಯೂ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಸಂಶಯವೇ ಇಲ್ಲ. ಆದರೆ ಬಿಯರ್ ನಲ್ಲಿ ಮುಖ್ಯವಾಗಿ ಬ್ರೂವರ್ ಯೀಸ್ಟ್ ನ್ನು ಬಳಸಲಾಗುತ್ತದೆ. ಇದರಲ್ಲಿ ಕೆಲವು ಪೋಷಕಾಂಶಗಳು ಇವೆ. ಎಷ್ಟು ಪ್ರಮಾಣದ ಬಿಯರ್ ಜೀವಕ್ಕೆ ಒಳ್ಳೆಯದು ಮತ್ತು ಜಾಸ್ತಿಯಾದರೆ ಅದರಿಂದ ಆಗುವಂತಹ ಹಾನಿಗಳು ಯಾವುದು? ಮಿತ ಪ್ರಮಾಣದಲ್ಲಿ ಬಿಯರ್ ಸೇವನೆ ಮಾಡಿದರೆ ಆಗ ಅದರಿಂದ ಲಾಭವಿದೆ. ಅತಿಯಾದರೆ ಅಮೃತವು ವಿಷ ಎನ್ನುತ್ತಾರೆ.

ಅದೇ ರೀತಿ ಬಿಯರ್ ಕೂಡ. ಬಿಯರ್ ನ್ನು ಅತಿಯಾಗಿ ಸೇವನೆ ಮಾಡಿದರೆ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು. ವಾರಾಂತ್ಯದಲ್ಲಿ ತಣ್ಣಗಿನ ಬಿಯರ್ ಜತೆಗೆ ಒಂದೆರಡು ತುಂಡು ಕಬಾಬ್ ಅಥವಾ ಬೇರೆ ಏನಾದರೂ ಕರಿದ ತಿಂಡಿ ತಿನ್ನುತ್ತಾ ಇದ್ದರೆ ದಿನ ಕಳೆಯುವುದೇ ಗೊತ್ತಾಗಲ್ಲ. ಕೆಲಸದ ಎಲ್ಲಾ ಒತ್ತಡ ನಿವಾರಣೆ ಮಾಡಲು ಶುಕ್ರವಾರ ರಾತ್ರಿಯಾಗುತ್ತಿದ್ದಂತೆ ಯಾವುದೋ ಪಬ್ ಅಥವಾ ಬಾರ್ ಗೆ ತೆರಳಿ ಅಲ್ಲಿ ಕುಳಿತು ಬಿಯರ್ ಗ್ಲಾಸ್ ಗೆ ತುಟಿಗಳನ್ನಿಡುವುದು ಇಂದಿನ ಯುವ ಜನರ ಅಭ್ಯಾಸ.

ಬಿಯರ್ ಅಥವಾ ಯಾವುದೇ ಆಲ್ಕೋಹಾಲ್ ಆಗಿರಲಿ, ಅದನ್ನು ಅತಿಯಾದ ಪ್ರಮಾಣದಲ್ಲಿ ಸೇವನೆ ಮಾಡಿದರೆ ಅದು ಖಂಡಿತವಾಗಿಯೂ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಸಂಶಯವೇ ಇಲ್ಲ. ಆದರೆ ಬಿಯರ್ ನಲ್ಲಿ ಮುಖ್ಯವಾಗಿ ಬ್ರೂವರ್ ಯೀಸ್ಟ್ ನ್ನು ಬಳಸಲಾಗುತ್ತದೆ. ಇದರಲ್ಲಿ ಕೆಲವು ಪೋಷಕಾಂಶಗಳು ಇವೆ.

ಎಷ್ಟು ಪ್ರಮಾಣದ ಬಿಯರ್ ಜೀವಕ್ಕೆ ಒಳ್ಳೆಯದು ಮತ್ತು ಜಾಸ್ತಿಯಾದರೆ ಅದರಿಂದ ಆಗುವಂತಹ ಹಾನಿಗಳು ಯಾವುದು? ಮಿತ ಪ್ರಮಾಣದಲ್ಲಿ ಬಿಯರ್ ಸೇವನೆ ಮಾಡಿದರೆ ಆಗ ಅದರಿಂದ ಲಾಭವಿದೆ. ಅತಿಯಾದರೆ ಅಮೃತವು ವಿಷ ಎನ್ನುತ್ತಾರೆ. ಅದೇ ರೀತಿ ಬಿಯರ್ ಕೂಡ. ಬಿಯರ್ ನ್ನು ಅತಿಯಾಗಿ ಸೇವನೆ ಮಾಡಿದರೆ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಬಿಯರ್ ನ ಅಡ್ಡಪರಿಣಾಮಗಳ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ...

ರಕ್ತದ ಸಕ್ಕರೆ ಮಟ್ಟಕ್ಕೆ ಅಡ್ಡಿಯಾಗುವುದು

ರಕ್ತದ ಸಕ್ಕರೆ ಮಟ್ಟಕ್ಕೆ ಅಡ್ಡಿಯಾಗುವುದು

ಅತಿಯಾಗಿ ಬಿಯರ್ ಸೇವನೆ ಮಾಡಿದರೆ ಅದು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುವುದು. ಲಿವರ್(ಯಕೃತ್) ಗ್ಲೈಕೊಜೆನ್ ನ್ನು ಗ್ಲೂಕೋಸ್ ಆಗಿ ಪರಿವರ್ತನೆ ಮಾಡಿಕೊಂಡು ಅದನ್ನು ರಕ್ತನಾಳಗಳಿಗೆ ಬಿಡುವುದು. ಈ ಪ್ರಕ್ರಿಯೆ ಮೇಲೆ ಬಿಯರ್ ನಲ್ಲಿರುವ ಆಲ್ಕೋಹಾಲ್ ಪರಿಣಾಮ ಬಿರುವುದು. ಇದರಿಂದಾಗಿ ನಿಮಗೆ ಪದೇ ಪದೇ ಹಸಿವಾಗಬಹುದು ಮತ್ತು ಅತಿಯಾಗಿ ತಿನ್ನಬಹುದು. ಇದು ತೂಕ ಹೆಚ್ಚಳ ಮಾಡುವುದು. ಬಿಯರ್ ಸೇವನೆಗೆ ಮೊದಲು ಸರಿಯಾಗಿ ಆಹಾರ ಸೇವಿಸಿದರೆ ಇದನ್ನು ತಡೆಯಬಹುದು.

ಕ್ಯಾಲರಿ ಅಧಿಕ

ಕ್ಯಾಲರಿ ಅಧಿಕ

ವಾಣಿಜ್ಯ ಬಿಯರ್ ಬ್ರಾಂಡ್ ಗಳಲ್ಲಿ ಪೋಷಕಾಂಶವು ಕಡಿಮೆ ಇರುವುದು ಮತ್ತು ಕ್ಯಾಲರಿ ಅತಿಯಾಗಿರುವುದು. ತೂಕ ಇಳಿಸಬೇಕೆಂದು ಪ್ರಯತ್ನಿಸುತ್ತಾ ಇರುವವರಿಗೆ ಇದು ಒಳ್ಳೆಯದಲ್ಲ. ಇದರಿಂದ ದೇಹವು ಸಾಮಾನ್ಯಕ್ಕಿಂತ ಕಡಿಮೆ ಕ್ಯಾಲರಿ ದಹಿಸುವುದು. ಬಿಯರ್ ನಲ್ಲಿರುವ ಆಲ್ಕೋಹಾಲ್ ನ್ನು ಯಕೃತ್ ಅಸಿಟೇಟ್ ಆಗಿ ಪರಿವರ್ತನೆ ಮಾಡುವುದು. ಇದರ ಬಳಿಕ ದೇಹವು ಶಕ್ತಿಗಾಗಿ ಅಸಿಟೇಟ್ ನ್ನು ದಹಿಸುವುದು ಮತ್ತು ಅತಿಯಾದ ಕೊಬ್ಬು ಸೊಂಟ ಹಾಗೂ ಹೊಟ್ಟೆಯ ಭಾಗದಲ್ಲಿ ಶೇಖರಣೆಯಾಗುವುದು.

ಮೂತ್ರವರ್ಧಕವಾಗಿ ಕೆಲಸ ಮಾಡುವುದು

ಮೂತ್ರವರ್ಧಕವಾಗಿ ಕೆಲಸ ಮಾಡುವುದು

ಬಿಸಿಲಿನಿಂದ ಬಂದು ಒಂದು ಗ್ಲಾಸ್ ತಣ್ಣಗಿನ ಬಿಯರ್ ಕುಡಿದರೆ ದೇಹವು ತಂಪಾಗುವುದು. ನೈಸರ್ಗಿಕ ಆಂಟಿಡಿಯುರೆಟಿಕ್ ಹಾರ್ಮೋನುಗಳು ದೇಹದಲ್ಲಿ ದ್ರವ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಬಿಯರ್ ಈ ಹಾರ್ಮೋನು ಬಿಡುಗಡೆಯನ್ನು ನಿಧಾನವಾಗಿಸುವುದು. ಇದರ ಪರಿಣಾಮವಾಗಿ ನಿಮಗೆ ಕೆಲವು ಗ್ಲಾಸ್ ಬಿಯರ್ ಕುಡಿದಾಗ ಅತಿಯಾಗಿ ಮೂತ್ರವಿಸರ್ಜನೆಯಾಗುವುದು. ನೀವು ಕ್ರೀಡಾಳುವಾಗಿದ್ದರೆ ಆಗ ಇದು ತುಂಬಾ ಹಾನಿಕಾರಕ. ಯಾಕೆಂದರೆ ಮೂತ್ರ ಹಾಗೂ ಬೆವರಿನಿಂದ ದೇಹದ ದ್ರವವು ಹೊರಹೋಗುವುದು.

ಗ್ಲುಟೆನ್ ಸೂಕ್ಷ್ಮತೆ

ಗ್ಲುಟೆನ್ ಸೂಕ್ಷ್ಮತೆ

ಮಾರುಕಟ್ಟೆಯಲ್ಲಿ ಇರುವಂತಹ ಹೆಚ್ಚಿನ ಬಿಯರ್ ಗಳಲ್ಲಿ ಬಾರ್ಲಿಯಿರುವುದು. ಬಾರ್ಲಿಯಲ್ಲಿ ಗ್ಲುಟೆನ್ ಎನ್ನುವ ಪ್ರೋಟೀನ್ ಇದೆ. ಕೆಲವರಿಗೆ ಗ್ಲುಟೆನ್ ಸೂಕ್ಷ್ಮತೆಯಿರುವುದು. ಹೀಗಿದ್ದರೆ ನೀವು ಗ್ಲುಟೆನ್ ಇಲ್ಲದೆ ಇರುವಂತಹ ಬಿಯರ್ ಸೇವನೆ ಮಾಡಿ.

ಎದೆಯುರಿಗೆ ಕಾರಣವಾಗಬಹುದು

ಎದೆಯುರಿಗೆ ಕಾರಣವಾಗಬಹುದು

ಬಿಯರ್ ನಲ್ಲಿರುವಂತಹ ಕೆಲವು ಉತ್ತೇಜಕಗಳು ಗ್ಯಾಸ್ಟ್ರಿಕ್ ಆಮ್ಲದೊಂದಿಗೆ ಬೆರೆಯುವುದು. ಇದರಿಂದಾಗಿ ಗ್ಯಾಸ್ಟ್ರೊ ಅನ್ನನಾಳದ ಹಿಮ್ಮುಖ ಹರಿವು ಉಂಟಾಗಬಹುದು ಮತ್ತು ಇದು ಎದೆಯುರಿಗೆ ಕಾರಣವಾಗುವುದು.

ಬಿಯರ್ ಹೊಟ್ಟೆ ಬರಬಹುದು

ಬಿಯರ್ ಹೊಟ್ಟೆ ಬರಬಹುದು

ನಿಮಗೆ ಡೊಳ್ಳು ಹೊಟ್ಟೆ ಬೇಕಿಲ್ಲವೆಂದಾದರೆ ಆಗ ನೀವು ಬಿಯರ್ ಸೇವನೆ ಕಡಿಮೆ ಮಾಡಬೇಕು ಅಥವಾ ತ್ಯಜಿಸಬೇಕು. ಅತಿಯಾಗಿ ಬಿಯರ್ ಕುಡಿದರೆ ಆಗ ಹೊಟ್ಟೆ ಡೊಳ್ಳಾಗುವುದು. ಬಿಯರ್ ನಿಂದ ಬಂದ ಹೊಟ್ಟೆಯನ್ನು ಮತ್ತೆ ಸಣ್ಣದು ಮಾಡುವುದು ತುಂಬಾ ಕಠಿಣ.

ಅಮಲು ಮತ್ತು ಜಡತ್ವ ಬರಬಹುದು

ಅಮಲು ಮತ್ತು ಜಡತ್ವ ಬರಬಹುದು

ಎಲ್ಲಾ ರೀತಿಯ ಆಲ್ಕೋಹಾಲ್ ನಂತೆ ಅತಿಯಾಗಿ ಬಿಯರ್ ಸೇವನೆ ಮಾಡಿದರೆ ಅದು ನರಗಳು ಮತ್ತು ಚಾಲನೆಯ ಮೇಲೆ ಪರಿಣಾಮ ಬೀರುವುದು. ಇದರಿಂದ ಅಪಘಾತ ಸಂಭವಿಸಬಹುದು. ಬಿಯರ್ ಕುಡಿದ ಬಳಿಕ ನಿಮಗೆ ಬೆಳಗ್ಗ ಜಡತ್ವ ಆವರಿಸಿಕೊಳ್ಳಬಹುದು.

ಕೆಲವು ಔಷಧಿಗಳೊಂದಿಗೆ ಸಂವಹನ

ಕೆಲವು ಔಷಧಿಗಳೊಂದಿಗೆ ಸಂವಹನ

ನಿದ್ರಾಜನಕ ಮತ್ತು ಎರಿಥ್ರೋಮೈಸಿನ್ ಬಿಯರ್ ಜೊತೆ ಕೂಡಿಕೊಳ್ಳಬಹುದು ಮತ್ತು ಇದು ನಿಮ್ಮ ಆರೋಗ್ಯಕ್ಕೆ ಕೆಟ್ಟದಾಗಿರಬಹುದು. ಕೆಲವೊಂದು ಆ್ಯಂಟಿಬಯೋಟಿಕ್ ಗಳು ಬಿಯರ್ ಜತಗೆ ಸೇರಿಕೊಂಡು ತಲೆನೋವು ಮತ್ತು ವಾಂತಿಯಂತಹ ಅಡ್ಡಪರಿಣಾಮ ಬೀರಬಹುದು. ಅದೇ ರೀತಿ ಕೆಲವು ನೋವು ನಿವಾರಕ ಔಷಧಿಗಳು ಕೂಡ. ಬಿರುಬೇಸಿಗೆಯಲ್ಲಿ ಅಥವಾ ಸ್ನೇಹಿತನ ಪಾರ್ಟಿಯಲ್ಲಿ ಒಂದೆರಡು ಗ್ಲಾಸ್ ಬಿಯರ್ ನಿಂದ ಹೆಚ್ಚು ಹಾನಿಯಾಗಲ್ಲ. ಪ್ರತಿನಿತ್ಯವು ನೀವು ಬಿಯರ್ ಸೇವನೆ ಮಾಡಿದರೆ ಆಗ ಅದರಿಂದ ಕೆಲವೊಂದು ಅಡ್ಡಪರಿಣಾಮಗಳು ಉಂಟಾಗಬಹುದು. ಇದರಿಂದ ಮಿತಿಯಲ್ಲಿ ಬಿಯರ್ ಸೇವನೆ ಮಾಡಿ ಮತ್ತು ಆರೋಗ್ಯವಾಗಿರಿ.

English summary

Top Side Effects Of Drinking Beer

Come Friday and you can’t wait to hear those clinking sounds of the ice glasses. The weekend is the time for celebration for most of us. What can be better than to sit down with a mug of beer and friends to share a few laughs after a long, tiring week? But we all know that an excess of anything can turn the story ugly, don’t we? The effects of drinking any type of alcohol depend on the patterns and amount in most instances. This is true of beer as well. It is a form of liquor that has been in use for a long time now. A number of health benefits have been covered by studies in the recent past and that has added to its current popularity.
X
Desktop Bottom Promotion