ಕೇಶದ ಸೌಂದರ್ಯ ಆರೋಗ್ಯಕ್ಕೆ ಕನ್ನಡಿ ಹಿಡಿಯುವುದು

Posted By: Deepu
Subscribe to Boldsky

ಕೇಶರಾಶಿಯು ಸೌಂದರ್ಯವನ್ನು ಪ್ರತಿಬಿಂಬಿಸುವಲ್ಲಿ ಅತ್ಯುತ್ತಮ ಪಾತ್ರ ವಹಿಸುತ್ತದೆ. ಕೇಶರಾಶಿಯು ನೋಡಲು ನಮ್ಮ ದೇಹದಿಂದ ಪ್ರತ್ಯೇಕತೆಯನ್ನು ಪಡೆದುಕೊಂಡಿರಬಹುದು. ಆದರೆ ಸೌಂದರ್ಯವನ್ನು ಅತ್ಯುತ್ತಮ ರೀತಿಯಲ್ಲಿ ಪ್ರತಿನಿಧಿಸುತ್ತದೆ. ಅಂತೆಯೇ ನಮ್ಮ ಆರೋಗ್ಯದ ಸ್ಥಿತಿ ಹೇಗಿದೆ ಎನ್ನುವುದನ್ನು ಸಹ ತಿಳಿಸುವುದು. ದೇಹದಲ್ಲಿ ಉಂಟಾಗುವ ಕೆಲವು ಪೋಷಕಾಂಶಗಳ ಕೊರತೆಯು ನೇರವಾಗಿ ಕೇಶರಾಶಿಯ ಮೇಲೆ ಪ್ರಭಾವ ಬೀರುವುದು. ಕೆಲವೊಮ್ಮೆ ಕೇಶರಾಶಿಯ ಸಮಸ್ಯೆ ಏನು ಎನ್ನುವುದನ್ನು ಅರಿಯದೆ ಮನಸಿಗೆ ತೋಚಿದ ಅಥವಾ ಇನ್ಯಾರೋ ಸಲಹೆ ನೀಡಿರುವ ಆರೈಕೆಗಳನ್ನು ಮಾಡಲು ಮುಂದಾಗುತ್ತೇವೆ. ಈ ರೀತಿ ಮಾಡುವುದರಿಂದ ಆ ಆರೈಕೆಗಳು ನಮಗೆ ಒಗ್ಗದೆ, ಇನ್ನಷ್ಟು ಸಮಸ್ಯೆಗಳು ಉದ್ಭವ ಆಗುವ ಸಾಧ್ಯತೆಗಳು ಇರುತ್ತವೆ.

Hair care

ಈ ಹಿನ್ನೆಲೆಯಲ್ಲಿಯೇ ಕೇಶರಾಶಿಯು ಅಕಾಲಿಕವಾಗಿ ಉದುರುವುದು, ಬಣ್ಣವನ್ನು ಕಳೆದುಕೊಳ್ಳುವುದು, ಒರಟಾಗುವುದು ಸೇರಿದಂತೆ ಇನ್ನಿತರ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅನಿರೀಕ್ಷಿತವಾಗಿ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದಾದರೆ ಅದು ಕೇವಲ ಕೇಶರಾಶಿಯ ಸಮಸ್ಯೆ ಆಗಿರುವುದಿಲ್ಲ. ಅದು ನಿಮ್ಮ ದೇಹದಲ್ಲಿ ಯಾವುದೋ ತೊಂದರೆ ಅಥವಾ ಪೋಷಕಾಂಶದ ಕೊರತೆ ಇದೆ ಎನ್ನುವುದನ್ನು ತಿಳಿಸುತ್ತದೆ.

ನೀವು ಸೂಕ್ಷ್ಮವಾಗಿ ಕೇಶರಾಶಿಯನ್ನು ಗಮನಿಸಿದರೆ ಸಮಸ್ಯೆ ಏನು ಎನ್ನುವುದು ತಿಳಿಯುತ್ತದೆ. ಸದಾ ಹೊಳಪಿನಿಂದ ಕೂಡಿರುತ್ತಿದ್ದ ಕೇಶರಾಶಿಯು ಹೊಳಪನ್ನು ಕಳೆದುಕೊಳ್ಳುತ್ತಿದೆ ಎಂದರೆ ಮೊದಲು ವೈದ್ಯರನ್ನು ಭೇಟಿಯಾಗಬೇಕು. ನಿಮ್ಮ ದೇಹದಲ್ಲಿ ಯಾವ ಬಗೆಯ ಪೋಷಕಾಂಶ ಕಡಿಮೆಯಾಗಿದೆ ಎನ್ನುವುದನ್ನು ಪರೀಕ್ಷಿಸಬೇಕು. ಹೀಗೆ ಸಾಮಾನ್ಯವಾಗಿ ಯಾವೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುವುದು ಅದಕ್ಕೆ ಕಾರಣ ಏನಿರಬಹುದು ಎನ್ನುವ ವಿವರಣೆಯನ್ನು ಈ ಮುಂದೆ ನೀಡಲಾಗಿದೆ...

hair loss

ಕೇಶರಾಶಿ ಉದುರುವುದು

ನೀವು ಸುಂದರವಾದ ದಪ್ಪ ಹಾಗೂ ದಟ್ಟವಾದ ಕೇಶ ರಾಶಿಯನ್ನು ಹೊಂದಿದ್ದೀರಿ. ಇದೀಗ ಇದ್ದಕ್ಕಿದ್ದ ಹಾಗೆ ಅತಿಯಾಗಿ ಕೂದಲುದುರುವ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದಾದರೆ ನಿಮ್ಮ ಆರೋಗ್ಯದಲ್ಲಿ ಏರು ಪೇರು ಉಂಟಾಗುತ್ತಿದೆ ಎನ್ನುವುದನ್ನು ಗುರುತಿಸಬೇಕು. ನಿಮ್ಮ ಹಾರ್ಮೋನ್ ಮಟ್ಟದಲ್ಲಿ ಏರುಪೇರು, ಪಿಸಿಓಎಸ್ ಸಮಸ್ಯೆ ಅಥವಾ ಹೈಪೋಥೈರಾಯ್ಡ್ ಸಮಸ್ಯೆಗಳಿಂದ ಕೂದಲುದುರುವಿಕೆ ಕಾಣಿಸಿಕೊಳ್ಳಬಹುದು. ನಿತ್ಯವು ಸುಮಾರು 40-60 ಕೂದಲು ಉದುರುವುದು ಸಾಮಾನ್ಯವಾದ ಚಿಹ್ನೆ. ಆ ಕುರಿತು ಚಿಂತಿಸಬೇಕಿಲ್ಲ. ಅದಕ್ಕೂ ಮಿಗಿಲಾಗಿ ಕೂದಲು ಉದುರುತ್ತದೆ ಎಂದರೆ ಆರೋಗ್ಯದ ಕಡೆಗೆ ಹಾಗೂ ಕೇಶ ಆರೈಕೆಗೆ ಚಿಂತನೆ ನಡೆಸಬೇಕಾಗುವುದು.

ತಲೆ ಹೊಟ್ಟು ಕಾಣಿಸುವುದು

ಕೆಲವರಿಗೆ ತಲೆ ಹೊಟ್ಟು ಸಾಮಾನ್ಯವಾಗಿರುತ್ತದೆ. ರಕ್ತದಲ್ಲಿ ನಂಜಿನಂಶ ಹೆಚ್ಚಾದಾಗ ಅಥವಾ ಇನ್ಯಾವುದೋ ತೊಂದರೆಗೆ ಒಳಗಾದಾಗ, ಚರ್ಮದ ಮೇಲೆ ಬಹುಬೇಗ ಕುರುಹುಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಸೋರಿಯಾಸಿಸ್, ಕ್ರೋಮ್ಸ್ ಗಳಂತಹ ಸಮಸ್ಯೆಗಳು ಉಂಟಾದಾಗ ತಲೆಯಲ್ಲಿ ಹೊಟ್ಟು ಕಾಣಿಸಿಕೊಳ್ಳುವುದು. ಇದರ ಕುರಿತು ನಿಷ್ಕಾಳಜಿ ತೋರದೆ, ಆದಷ್ಟು ಬೇಗ ಆರೈಕೆ ಮಾಡಿಕೊಳ್ಳುವುದು ಸೂಕ್ತ.

ಶುಷ್ಕವಾದ ಕೇಶ ರಾಶಿ

ಬಹುಕಾಲದ ವರಗೆ ಕ್ಲೋರಿನ್ ಮಿಶ್ರಿತ ನೀರಿನಲ್ಲಿ ಈಜುವುದು ಅಥವಾ ನೀವು ಕೇಶರಾಶಿಗೆ ಬಣ್ಣವನ್ನು ಬಳಿಯುತ್ತೀರಿ ಎಂದಾದರೆ ನಿಮ್ಮ ಕೇಶರಾಶಿಯು ಒರಟಾಗುವುದು ಅಥವಾ ಶುಷ್ಕವಾಗಿರುವಂತೆ ತೋರುವುದು ಸಹಜ. ಇದ್ಯಾವ ಕಾರ್ಯವನ್ನೂ ಎಸಗದಿದ್ದರೂ ನಿಮ್ಮ ಕೇಶರಾಶಿ ಶುಷ್ಕತೆಯಿಂದ ಕೂಡಿರುತ್ತದೆ ಎಂದರೆ ಅದು ಹೈಪೋಥೈರಾಯ್ಡ್ ಸಮಸ್ಯೆ ಆಗಿರುವ ಸಾಧ್ಯತೆಗಳಿರುತ್ತವೆ. ಹೈಪೋಥೈರಾಯ್ಡ್ ಉಂಟಾದಾಗ ದೇಹದಲ್ಲಿ ತೂಕ ಹೆಚ್ಚುವುದು, ಶೀತ, ಕೂದಲ ಸಮಸ್ಯೆ ಉಂಟಾಗುತ್ತದೆ. ಈ ಕಾರಣದ ಹಿನ್ನೆಲೆ ಹೊಂದಿರುವುದಾದರೆ ಮೊದಲು ಆರೋಗ್ಯ ಸುಧಾರಣೆ ಮಾಡಿಕೊಳ್ಳುವುದರ ಕುರಿತು ಚಿಂತಿಸಿ.

hair loss

ಕೂದಲು ತುಂಡಾಗುವುದು

ನಿಮ್ಮ ದೇಹದಲ್ಲಿ ಪ್ರೋಟಿನ್ ಕೊರತೆ ಇದೆ ಎಂದಾದರೆ ಕೂದಲು ಸತತಾಗಿ ತುಂಡಾಗುತ್ತಲೇ ಇರುತ್ತದೆ. ನೀವು ಸೇವಿಸುವ ಆಹಾರದಲ್ಲಿ ಪ್ರೋಟೀನ್ ಕೊರತೆ ಉಂಟಾದರೆ ದೇಹಕ್ಕೆ ಅಗತ್ಯ ಪ್ರಮಾಣದ ಪ್ರೋಟೀನ್ ಲಭಿಸದು. ಆಗ ಕೇಶರಾಶಿ ಹಾಗೂ ತ್ವಚೆಯು ಸಹ ಆರೋಗ್ಯವನ್ನು ಕಳೆದುಕೊಳ್ಳುವುದು. ಇದು ಥೈರಾಯ್ಡ್ ಸಮಸ್ಯೆ ಇರುವಾಗಲೂ ಕೂದಲು ತುಂಡಾಗುವ ಸಾಧ್ಯತೆಗಳಿರುತ್ತವೆ. ಈ ಕುರಿತು ಸೂಕ್ತ ಪರೀಕ್ಷೆ ಮತ್ತು ಉತ್ತಮ ಚಿಕಿತ್ಸೆಗೆ ಒಳಗಾಗುವುದು ಸೂಕ್ತ.

haircare

ಬಣ್ಣದ ಬದಲಾವಣೆ

ಕೂದಲು ಮೊದಲಿನ ಬಣ್ಣದಿಂದ ಬೂದು ಬಣ್ಣಕ್ಕೆ ತಿರುಗುತ್ತಿದೆ ಎಂದಾದರೆ ಅದಕ್ಕಾಗಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಆರೋಗ್ಯದಲ್ಲಿ ಯಾವುದೋ ಸಮಸ್ಯೆ ಉಂಟಾಗುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ. ಮಾನಸಿಕವಾಗಿ ನೀವು ಅಧಿಕ ಒತ್ತಡಕ್ಕೆ ಒಳಗಾಗುತ್ತಿದ್ದೀರಿ ಎಂದಾರೆ ಕೂದಲು ಬಣ್ಣವನ್ನು ಕಳೆದುಕೊಳ್ಳುವುದು. ಅಂದರೆ ನಿಮ್ಮ ಒತ್ತಡದಿಂದಾಗಿ ಹಾರ್ಮೊನ್ ವ್ಯವಸ್ಥೆಯಲ್ಲಿ ಏರು ಪೇರು ಉಂಟಾಗುವುದು. ಇದು ಕೂದಲನ್ನು ಬೂದು ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ. ಹಾಗಾಗಿ ಆದಷ್ಟು ಎಚ್ಚರಿಕೆ ಹಾಗೂ ಕಾಳಜಿಯನ್ನು ವಹಿಸಿ. ಒತ್ತಡದಿಂದ ದೂರವಾಗಿ.

English summary

Things Your Hair Says About Your Health

A perfect beauty is defined through the beauty of hair and nails and like nails, hair is an extension of our body. Some people consider hair as a separate part of the body, but in real it is not! There is hardly anyone who doesn't want a beautiful hair and hair care is an essential part of the beauty regime. However, hair is also an indicator of your health like nails. Your hair can tell you about your health. Hair and health are interrelated and there are a few signs your hair can tell you about your health.
Story first published: Thursday, January 25, 2018, 23:32 [IST]