ಖಾಲಿ ಹೊಟ್ಟೆಯಲ್ಲಿ ಟೀ ಕುಡಿತೀರಾ? ಹಾಗಾದರೆ ಇಂದೇ ನಿಲ್ಲಿಸಿ!!

Posted By: Arshad Hussain
Subscribe to Boldsky

ಬೆಳಿಗ್ಗೆದ್ದ ತಕ್ಷಣ ಟೀ ಕುಡಿಯುವ ಅಭ್ಯಾಸವಿದೆಯೇ? ಅದೂ ಖಾಲಿಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ? ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು ಭಾರತದ ಹಲವು ಕಡೆಗಳಲ್ಲಿ ಒಂದು ಸಂಪ್ರದಾಯವೇ ಆಗಿದೆ. ಹಿಂದೆ ಬ್ರಿಟಿಷರು ಭಾರತದಲ್ಲಿದ್ದಾಗ ಬೆಡ್ ಟೀ ಎಂದು ಟೀ ಹೀರುತ್ತಿದ್ದರು. ಇದನ್ನು ಅನುಸರಿಸಲು ಪ್ರಾರಂಭಿಸಿದ ನಮ್ಮ ಹಿರಿಯರಿಂದ ಈ ಬೆಳವಣಿಗೆ ಭಾರತದಲ್ಲಿಯೂ ಆಯಿತು ಎಂದು ಕೆಲವು ಮಾಹಿತಿಗಳಿಂದ ತಿಳಿದುಬರುತ್ತದೆ.

ಟೀ ಸೇವನೆಯೂ ಒಂದು ವ್ಯಸನವಾಗಿದ್ದು ಹೀಗೇ ಮುಂಜಾನೆಯ ಪ್ರಥಮ ಆಹಾರವಾಗಿ ಟೀ ಸೇವಿಸುವ ಅಭ್ಯಾಸವಿರುವವರಿಗೆ ಇದು ವ್ಯಸನವೇ ಆಗಿ ಹೋಗಿರುತ್ತದೆ. ಇವರಿಗೆ ಟೀ ಕುಡಿಯದೇ ದಿನ ಸಾಗುವುದೇ ಇಲ್ಲ. ಇನ್ನೂ ಕೆಲವರಿಗೆ ಬೆಳಗ್ಗಿನ ಬಹಿರ್ದೆಸೆಯೂ ಟೀ ಕುಡಿದ ಬಳಿಕವೇ ಆಗುತ್ತದೆ. ಟೀ ಇಲ್ಲದಿದ್ದರೆ ಅಂದು ಅವರಿಗೆ ಮಲಬದ್ಧತೆ!

ಟೀ ಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಟ್ಯಾನಿನ್ ಎಂಬ ಪೋಷಕಾಂಶಗಳು ಅಥವಾ ಕ್ಯಾಟೆಚಿನ್ ಎಂಬ ಕಣಗಳು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತವೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆದರೆ ಟೀಯನ್ನು ಖಾಲಿಹೊಟ್ಟೆಯಲ್ಲಿ, ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಿದರೆ ಕೆಲವು ಆರೋಗ್ಯದ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ಅಚ್ಚರಿಯಾಯಿತೇ?

ಆರೋಗ್ಯ ಟಿಪ್ಸ್: ಕೊಬ್ಬು ಕರಗಿಸುವ ನೈಸರ್ಗಿಕ 'ಚಹಾ'

ಹೌದು, ಬೆಡ್ ಟೀ ಎಂಬ ಹೆಸರಿನಲ್ಲಿ ಖಾಲಿಹೊಟ್ಟೆಯಲ್ಲಿ ಟೀ ಸೇವಿಸುವುದರಿಂದ ಹಲವು ರೀತಿಯಲ್ಲಿ ಆರೋಗ್ಯವನ್ನು ಬಾಧಿಸುತ್ತದೆ. ಮೊದಲಿಗೆ ಇದರಲ್ಲಿರುವ ಕೆಫೀನ್ ಜಠರ ರಸವನ್ನು ಹೆಚ್ಚಾಗಿ ಸ್ರವಿಸಲು ಪ್ರಚೋದಿಸುತ್ತದೆ ಹಾಗೂ ಇದು ಜೀರ್ಣಕ್ರಿಯೆಯನ್ನು ಏರುಪೇರುಗೊಳಿಸುತ್ತದೆ. ಟೀ ಸೇವನೆಯಿಂದ ಮನೋಭಾವ ಉಲ್ಲಸಿತಗೊಂಡರೂ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕಾರಣ ಈ ಅಭ್ಯಾಸವನ್ನು ಬಿಡುವುದೇ ಒಳ್ಳೆಯದು. ಬನ್ನಿ, ಈ ಬಗ್ಗೆ ಹತ್ತು ಪ್ರಮುಖ ಮಾಹಿತಿಗಳನ್ನು ನೋಡೋಣ...

ಜೀವರಾಸಾಯನಿಕ ಚಟುವಟಿಕೆಯನ್ನು ಏರುಪೇರುಗೊಳಿಸುತ್ತದೆ

ಜೀವರಾಸಾಯನಿಕ ಚಟುವಟಿಕೆಯನ್ನು ಏರುಪೇರುಗೊಳಿಸುತ್ತದೆ

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಟೀ ಸೇವಿಸುವುದರಿಂದ ಜೀವರಾಸಾಯನಿಕ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗುತ್ತದೆ. ಜಠರರಸದ ಆಮ್ಲೀಯತೆ-ಕ್ಷಾರೀಯತೆಯ ಸಮತೋಲನ ತಪ್ಪುವುದೇ ಇದಕ್ಕೆ ಕಾರಣ. ಇದರಿಂದ ಸರಾಗವಾಗಿ ಜರುಗುತ್ತಿರುವ ಜೀವರಾಸಾಯನಿಕ ಕ್ರಿಯೆ ಏರುಪೇರಾಗುತ್ತದೆ ಹಾಗೂ ಈ ಮೂಲಕ ದೇಹದಲ್ಲಿ ಕೆಲವಾರು ತೊಂದರೆಗಳು ಎದುರಾಗಬಹುದು.

ಹಲ್ಲುಗಳು ಹೆಚ್ಚು ಸವೆಯುತ್ತವೆ

ಹಲ್ಲುಗಳು ಹೆಚ್ಚು ಸವೆಯುತ್ತವೆ

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಟೀ ಸೇವಿಸುವುದರಿಂದ ಹಲ್ಲುಗಳ ಹೊರಕವಚ ಶೀಘ್ರವಾಗಿ ಸವೆಯುತ್ತದೆ. ಏಕೆಂದರೆ ರಾತ್ರಿಯ ಸಮಯದಲ್ಲಿ ಬಾಯಿಯಲ್ಲಿ ಹೆಚ್ಚೇ ಬ್ಯಾಕ್ಟೀರಿಯಾಗಳು ಸಂಗ್ರಹವಾಗಿದ್ದು ಸಕ್ಕರೆಯನ್ನು ಒಡೆದು ಚಿಕ್ಕದಾಗಿಸಿರುತ್ತವೆ. ಪರಿಣಾಮವಾಗಿ ಬಾಯಿಯ ಆಮ್ಲೀಯತೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ಬಿಸಿ ಟೀ ಕುಡಿಯುವುದರಿಂದ ಆಮ್ಲೀಯತೆಯಿಂದ ಸಡಿಲವಾಗಿದ್ದ ಹಲ್ಲುಗಳ ಹೊರಪದರದ ಕಣಗಳು ಸುಲಭವಾಗಿ ತೊಳೆದುಹೋಗುತ್ತವೆ. ಇದು ಹಲ್ಲುಗಳ ಸವೆಯುವಿಕೆಗೆ ಕಾರಣವಾಗುತ್ತದೆ.

ದೇಹದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ

ದೇಹದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ

ಟೀ ಉತ್ತಮ ಮೂತ್ರವರ್ಧಕವಾಗಿದೆ ಹಾಗೂ ಈ ಮೂಲಕ ದೇಹದಿಂದ ನೀರನ್ನು ಹೆಚ್ಚೇ ಹೊರಹಾಕುತ್ತದೆ. ಸುಮಾರು ಎಂಟು ಘಂಟೆಗಳ ಕಾಲ ಮಲಗಿದ್ದ ಸಮಯದಲ್ಲಿ ನೀರು ಲಭಿಸದೇ ಮುಂಜಾನೆ ಎದ್ದಾಗ ನಮ್ಮ ದೇಹದಿಂದ ಹೆಚ್ಚಿನ ನೀರು ಖಾಲಿಯಾಗಿರುತ್ತದೆ. ಈಗ ಖಾಲಿ ಹೊಟ್ಟೆಯಲ್ಲಿ ಟೀ ಸೇವಿಸುವುದರಿಂದ ದೇಹದಿಂದ ಹೆಚ್ಚು ನೀರು ಹೊರಹೋಗಲು ಪ್ರೇರಣೆ ದೊರಕುತ್ತದೆ ಹಾಗೂ ನೀರಿನ ಕೊರತೆಯಿಂದ ಸ್ನಾಯುಗಳಲ್ಲಿ ಸೆಡೆತವುಂಟಾಗುತ್ತದೆ.

ಹೊಟ್ಟೆಯುಬ್ಬರಿಕೆ ಉಂಟಾಗುತ್ತದೆ

ಹೊಟ್ಟೆಯುಬ್ಬರಿಕೆ ಉಂಟಾಗುತ್ತದೆ

ಒಂದು ವೇಳೆ ಖಾಲಿಹೊಟ್ಟೆಯಲ್ಲಿ ಹಾಲಿರುವ ಟೀ ಕುಡಿದಾಗ ಹೊಟ್ಟೆಯುಬ್ಬರಿಕೆಯುಂಟಾಗುತ್ತದೆ. ಏಕೆಂದರೆ ಹಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಲ್ಯಾಕ್ಟೋಸ್ ಖಾಲಿಹೊಟ್ಟೆಯಲ್ಲಿ ಜೀರ್ಣರಸಗಳೊಂದಿಗೆ ಪ್ರತಿಕ್ರಿಯೆಗೆ ಒಳಗಾದಾದ ವಾಯು ಉತ್ಪತ್ತಿಯಾಗುತ್ತದೆ. ಇದು ಹೊಟ್ಟೆಯುಬ್ಬರಿಕೆ, ವಾಯುಪ್ರಕೋಪ ಹಾಗೂ ಮಲಬದ್ಧತೆಗೆ ಕಾರಣವಾಗುತ್ತದೆ.

ಇದು ವಾಕರಿಕೆಗೆ ಕಾರಣವಾಗಬಹುದು

ಇದು ವಾಕರಿಕೆಗೆ ಕಾರಣವಾಗಬಹುದು

ರಾತ್ರಿ ಮತ್ತು ಬೆಳಗ್ಗಿನ ನಡುವಣ ಅವಧಿಯಲ್ಲಿ ನಮ್ಮ ಹೊಟ್ಟೆ ಬರಿದಾಗಿರುತ್ತದೆ. ಈ ಸಮಯದಲ್ಲಿ ಟೀ ಕುಡಿಯುವುದೆಂದರೆ ಪಿತ್ತರಸದ ಕ್ರಿಯೆಗಳೆಲ್ಲವೂ ಮೇಲೆಕೆಳಗಾಗುತ್ತವೆ. ಇದು ವಾಕರಿಕೆ ಹಾಗೂ ನರೋದ್ರೇಕಕ್ಕೆ ಕಾರಣವಾಗಬಹುದು.

ಹಾಲು ಬೆರೆಸಿದ ಟೀ ಒಳ್ಳೆಯದಲ್ಲ!

ಹಾಲು ಬೆರೆಸಿದ ಟೀ ಒಳ್ಳೆಯದಲ್ಲ!

ಬೆಳಗ್ಗಿನ ಬಿಸಿಬಿಸಿ ಟೀ ಎಲ್ಲರಿಗೂ ಮೆಚ್ಚು. ಆದರೆ ಟೀಯನ್ನು ಮುಂಜಾನೆಯ ಟೀ ಸೇವನೆಯಿಂದ ಆಯಾಸ ಕಾಣಿಸಿಕೊಳ್ಳಬಹುದು. ಏಕೆಂದರೆ ಟೀಯಲ್ಲಿರುವ ಹಾಲಿನ ಕಾರಣದಿಂದ ಚಡಪಡಿಕೆ ಹಾಗೂ ಪೀಡೆ ಎದುರಾಗುತ್ತದೆ.

ಹಾಗೆಂದು ಹಾಲಿಲ್ಲದ ಟೀ ಸಹಾ ಒಳ್ಳೆಯದಲ್ಲ

ಹಾಗೆಂದು ಹಾಲಿಲ್ಲದ ಟೀ ಸಹಾ ಒಳ್ಳೆಯದಲ್ಲ

ಹಾಲಿನ ಟೀ ಕುಡಿಯುವುದರಿಂದ ಹೊಟ್ಟೆಯಲ್ಲಿ ತೊಂದರೆಯುಂಟಾಗುತ್ತದೆಯಾದರೆ ಹಾಲಿಲ್ಲದ ಟೀ ಸೇವಿಸಬಹುದಲ್ಲ! ಆದರೆ ಈ ಎಣಿಕೆ ಸಹಾ ತಪ್ಪು. ಕಪ್ಪು ಟೀ ಸಹಾ ಅಷ್ಟೇ ಕೆಡುಕುಂಟು ಮಾಡಬಹುದು. ಇದರಿಂದಲೂ ಹೊಟ್ಟೆಯುಬ್ಬರಿಕೆ ಎದುರಾಗಬಹುದು ಹಾಗೂ ಹಸಿವನ್ನು ಕುಂಠಿತಗೊಳಿಸಬಹುದು.

ಕೆಫೀನ್ ಪರಿಣಾಮ ವ್ಯತಿರಿಕ್ತವಾಗಬಹುದು

ಕೆಫೀನ್ ಪರಿಣಾಮ ವ್ಯತಿರಿಕ್ತವಾಗಬಹುದು

ಟೀಯಲ್ಲಿರುವ ಕೆಫೀನ್ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಟೀಯನ್ನು ಮುಂಜಾನೆಯ ಖಾಲಿಹೊಟ್ಟೆಯಲ್ಲಿ ಸೇವಿಸಿದಾಗ ಹಲವು ಅಡ್ಡಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ವಾಕರಿಕೆ, ತಲೆ ತಿರುಗುವುದು ಮತ್ತು ಅಹಿತಕರ ಸಂವೇದನೆಯೂ ಎದುರಾಗುತ್ತದೆ.

ಉದ್ವೇಗ

ಉದ್ವೇಗ

ಖಾಲಿಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ದೇಹದ ಮೇಲೆ ಎದುರಾಗುವ ವ್ಯತಿರಿಕ್ತ ಪರಿಣಾಮಗಳಿಂದಾಗಿ ಉದ್ವೇಗ ಮತ್ತು ಇತರ ನಿದ್ದೆಗೆ ಸಂಬಂಧಿತ ತೊಂದರೆಗಳು ಎದುರಾಗಬಹುದು. ಹಾಗಾಗಿ ಟೀ ಕುಡಿಯುವುದು ನಿಮಗೆ ಅಭ್ಯಾಸವಾಗಿಹೋಗಿದ್ದರೆ ಇದನ್ನು ಉಪಾಹಾರದ ಬಳಿಕ ಸೇವಿಸುವುದು ಉತ್ತಮ.

ಕಬ್ಬಿಣ ಹೀರಿಕೊಳ್ಳುವುದನ್ನು ಕಡಿಮೆಮಾಡುತ್ತದೆ

ಕಬ್ಬಿಣ ಹೀರಿಕೊಳ್ಳುವುದನ್ನು ಕಡಿಮೆಮಾಡುತ್ತದೆ

ಹಸಿರು ಟೀ ಸೇವನೆಯಿಂದ ದೇಹ ಕಬ್ಬಿಣವನ್ನು ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಹಾಗಾಗಿ ರಕ್ತಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಖಾಲಿಹೊಟ್ಟೆಯಲ್ಲಿ ಟೀ ಕುಡಿಯಲೇಬಾರದು. ಇದರಿಂದ ದೇಹ ಇತರ ಆಹಾರಗಳಿಂದ ಲಭಿಸಿದ್ದ ಕಬ್ಬಿಣವನ್ನು ಹೀರಿಕೊಳ್ಳದೇ ಹೋಗುತ್ತದೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

things-that-happen-when-you-drink-tea-on-an-empty-stomach

because it contains caffeine that can trigger stomach acids and wreck your digestion if had on an empty stomach. There are reasons why you shouldn't drink tea on an empty stomach.